ಪ್ರೊ. ರಾಬರ್ಟ್ ಎಡ್ವರ್ಡ್ಸ್
'ಪ್ರನಾಳ ಶಿಶು ತಂತ್ರಜ್ಞಾನ'ದಲ್ಲಿ ಮಹತ್ವದ ಸಾದನೆಮಾಡಿದ ಬ್ರಿಟನ್ ನ ’ಪ್ರೊ. ರಾಬರ್ಟ್ಸ್ ಎಡ್ವರ್ಡ್ಸ್’ ಅವರಿಗೆ ವೈದ್ಯಕೀಯ ಶಾಸ್ತ್ರರಲ್ಲಿ '೨೦೧೦ ರ ನೋಬೆಲ್ ಪ್ರಶಸ್ತಿ'ಯನ್ನು ನೀಡಲಾಗಿದೆ. ಅವರ ಈ ಸಾಧನೆಯು ವಿಶ್ವದಾದ್ಯಂತ ಲಕ್ಷಾಂತರ ಮಂದಿ 'ಕೃತಕ ಗರ್ಭಧಾರಣೆ'ಯಿಂದ ಮಕ್ಕಳನ್ನು ಪಡೆಯಲು ನೆರವಾಗಿದೆ. ’ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ೮೫ ರ ಹರೆಯದ ಪ್ರೊಫೆಸರ್ ರಾಬರ್ಟ್ ಎಡ್ವರ್ಡ್ಸ್' ರವರು, ’ಇನ್ ವಿಟ್ರೊ ಫರ್ಟಿಲೈಸರ್’ ’ಐವಿಎಫ್ ತಂತ್ರಜ್ಞಾನ’ ವನ್ನು ಬಳಸಿ ಯಶಸ್ಸನ್ನು ಹಾಸಿಲ್ ಮಾಡಿದ್ದಾರೆ. 'ಪ್ರೊ. ರಾಬರ್ಟ್ ಎಡ್ವರ್ಡ್ಸ್' ಸ್ವಲ್ಪಕಾಲದಿಂದ ಅಸ್ವಸ್ಥರಾಗಿದ್ದುದರಿಂದ ಅವರಿಗೆ ಮಾಧ್ಯಮದ ಜೊತೆ ಮಾತನಾಡಲು ಸಾಧ್ಯವಾಗಿರಲಿಲ್ಲ.
'ಐವಿಎಫ್ ತಂತ್ರಜ್ಞಾನ' ದ, ಪ್ರಯೋಗವನ್ನು 'ಪ್ರೊ. ಎಡ್ವರ್ಡ್ಸ್' ಮತ್ತು 'ಪ್ಯಾಟ್ರಿಕ್ ಸ್ಟೆಪ್ಟೋ' ೧೯೫೦ ರ ದಶಕದಲ್ಲಿಯೇ ಆರಂಭಿಸಿ, ಈ ತಂತ್ರವನ್ನು 'ಪ್ರಸೂತಿ ತಜ್ಞ'ರಾದ ’ಪ್ಯಾಟ್ರಿಕ್ ಸ್ಟೆಪ್ಟೋ’ ರವರ ಜೊತೆಗೂಡಿ ಕಂಡುಹಿಡಿದಿದ್ದರು. ಆದರೆ 'ಪ್ಯಾಟ್ರಿಕ್ ಸ್ಟೆಪ್ಟೋ' ರವರು, ೧೯೮೮ ರಲ್ಲಿ ನಿಧನ ಹೊಂದಿದ್ದರು. ಇದುವರೆವಿಗೂ, ನೋಬೆಲ್ ಪಾರಿತೋಷಕವನ್ನು ವ್ಯಕ್ತಿಯ ಮರಣಾನಂತರ ಕೊಡುವ ಪದ್ಧತಿಯಿಲ್ಲದಿರುವುದರಿಂದ ಪ್ರೊ ಎಡ್ವರ್ಡ್ಸ್ ರವರಿಗೇ ೨೦೧೦ ರ '೧.೫ ಮಿಲಿಯನ್ ಡಾಲರ್ ಪ್ರಶಸ್ತಿ'ಪೂರ್ತಿಯಾಗಿ ದೊರೆಯಲಿದೆ.
'ಭ್ರೂಣ ಕೋಶಗಳನ್ನು' ದೇಹದಿಂದ ಹೊರಗೆ 'ಫಲವಂತಿಕೆ'ಗೊಳಿಸುವ ಅನನ್ಯ ವಿಧಾನ
ಬದಲಾಯಿಸಿಈ ವಿಧದಲ್ಲಿ 'ಭ್ರೂಣ ಕೋಶಗಳನ್ನು' ದೇಹದಿಂದ ಹೊರಗೆ 'ಫಲವಂತಿಕೆ' ಗೊಳಿಸಲಾಗುತ್ತದೆ. ಬಳಿಕ ಅವುಗಳನ್ನು ಗರ್ಭದಲ್ಲಿ ಇರಸಲಾಗುತ್ತದೆ. ಜುಲೈ, ೨೫, ೧೯೭೮ ರಲ್ಲಿ 'ಬ್ರಿಟನ್ ನ ಲೂಯಿಸ್ ಬ್ರೌನ್',(Louise Brown), 'ಪ್ರನಾಳ ಶಿಶು ತಂತ್ರಜ್ಞಾನದ ಮೂಲಕ ಜನಿಸಿದ ಮೊದಲ ಮಗುವಾಗಿದ್ದಾರೆ'. ಅವರಿಗೆ ಈಗ ಒಂದು ಮಗು ಹುಟ್ಟಿದೆ. ಆರೋಗ್ಯವಾಗಿದೆ. ಇದು 'ಗರ್ಭಧಾರಣೆಯ ಚಿಕಿತ್ಸೆಯಲ್ಲಿ ಕ್ರಾಂತಿಯನ್ನೇ ಮಾಡಿತು'.
ಮಕ್ಕಳಿಲ್ಲದ ದಂಪತಿಗಳಿಗೆ ಸಂತಸ
ಬದಲಾಯಿಸಿವಿಶ್ವದ ದಂಪತಿಗಳಲ್ಲಿ ಶೇ. ೧೦% ರಷ್ಟು ಇರುವ ಬಂಜೆತನಕ್ಕೆ ಚಿಕಿತ್ಸೆ ನೀಡುವುದನ್ನು 'ಎಡ್ವರ್ಡ್ಸ್' ರವರ ಯಶಸ್ಸು ಸಾಧ್ಯವಾಗಿಸಿದೆ, ಎಂದು 'ನೋಬೆಲ್ ಪ್ರಶಸ್ತಿ ಸಮಿತಿ' ತಿಳಿಸಿದೆ. ಎಡ್ವರ್ಡ್ಸ್ ರವರ ಈ ಪ್ರಯತ್ನಗಳು ಆಧುನಿಕ ವೈದ್ಯಕೀಯ ವಲಯದಲ್ಲಿ ಒಂದು ಮೈಲುಗಲ್ಲೆಂದು ಪರಿಗಣಿಸಲಾಗಿದೆ. ಪ್ರೊ. ಎಡ್ವರ್ಡ್ಸ್ ರವರಿಗೆ ತಮ್ಮ ಕೆಲಸದಲ್ಲಿ ಸಮಾಧಾನ ಹುಟ್ಟಿದೆ ಮತ್ತು ಅವರ ಹಲವು ವರ್ಷಗಳ ಕನಸು ನನಸಾಗಿದೆ. ಒಟ್ಟಿನಲ್ಲಿ ಈ ಹೊಸ 'ತಂತ್ರಜ್ಞಾನ', ವಿಶ್ವದ ಮಕ್ಕಳಿಲ್ಲದ ದಂಪತಿಗಳಿಗೆ ಸಂತಸ ತಂದಿದೆ.