ಪ್ರೊ|| ಜಿ ವೆಂಕಟಸುಬ್ಬಯ್ಯ ಕನ್ನಡದ ಏಳಿಗೆಗಾಗಿ ದುಡಿದವರು, ದುಡಿಯುತ್ತಿರುವವರು. ಬೆಂಗಳೂರಿನ ಇವರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಇವರ 'ಇಗೋ ಕನ್ನಡ' ಎಂಬ ಪ್ರಜಾವಾಣಿ ಅಂಕಣ ಸಮಸ್ತ ಕನ್ನಡಿಗರಿಗೆ ಪರಿಚಿತವಾಗಿದೆ. ೧೯೯೧ ರಿಂದ ವೆಂಕಟಸುಬ್ಬಯ್ಯನವರು ಈ ಅಂಕಣದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರ ಭಾಷಾ ಸಾಹಿತ್ಯ ಸಾಧನೆಗೆ ೨೦೦೫ರಲ್ಲಿ, ಹಂಪೆ ವಿಶ್ವವಿದ್ಯಾಲಯವು ಇವರಿಗೆ ಪ್ರತಿಷ್ಠಿತ ನಾಡೋಜ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಇವರು ಬೆಂಗಳೂರಿನಲ್ಲಿ ನಡೆದ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. (ಫೆಬ್ರವರಿ ೪- ಫೆಬ್ರವರಿ ೬).

ಪ್ರೊ.ಜಿ.ವೆಂಕಟಸುಬ್ಬಯ್ಯ
ಪ್ರೊ ಜಿ.ವೆಂಕಟಸುಬ್ಬಯ್ಯ
ಜನನ೨೩-೦೮-೧೯೧೩
ಮೈಸೂರು
ವೃತ್ತಿಭಾಷಾತಜ್ಞ, ಬರಹಗಾರ, ಸಂಶೋಧಕ, ಶಿಕ್ಷಕ
ರಾಷ್ಟ್ರೀಯತೆಭಾರತೀಯ
ಕಾಲ20ನೇ ಶತಮಾನ
ವಿಷಯಕನ್ನಡ ಸಾಹಿತ್ಯ
ಪ್ರಮುಖ ಕೆಲಸ(ಗಳು)ಇಗೋ ಕನ್ನಡ
ಪ್ರಮುಖ ಪ್ರಶಸ್ತಿ(ಗಳು)ಪದ್ಮಶ್ರೀ (೨೦೧೭), ಭಾಷಾ ಸಮ್ಮಾನ್‌(೨೦೧೮)
ಬಾಳ ಸಂಗಾತಿಲಕ್ಷ್ಮಿ
ಮಕ್ಕಳುಅನಂತಸ್ವಾಮಿ, ಅರುಣ್, ಪ್ರಭಾ, ರೋಹಿಣಿ

ಜೀವನಸಂಪಾದಿಸಿ

೧೯೧೩ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರು, ಮೈಸೂರಿನಲ್ಲಿಯೆ ಬೆಳೆದವರು. ಇವರ ತಂದೆ ಗಂಜಾಂ ತಿಮ್ಮಣ್ಣಯ್ಯನವರು ಸಂಸ್ಕೃತ ಹಾಗು ಕನ್ನಡದ ವಿದ್ವಾಂಸರಾಗಿದ್ದರು. ೧೯೩೭ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿಯನ್ನು ಪಡೆದ ಇವರಿಗೆ ಪ್ರಥಮ ಸ್ಥಾನ ಪಡೆದದ್ದಕ್ಕಾಗಿ ಸುವರ್ಣಪದಕವನ್ನು ಬಹುಮಾನವಾಗಿ ಕೊಡಲಾಯಿತು. ಮುಂದೆ ಇವರು ಬಿ.ಟಿ. ಪದವಿಯನ್ನೂ ಕೂಡ ಪಡೆದರು. ೧೯೩೯ ರಿಂದ ಪ್ರಾರಂಭಿಸಿ ಸುಮಾರು ೪೦ ವರ್ಷಗಳ ಕಾಲ ಇವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವರು.[೧]

ಇಗೋ ಕನ್ನಡಸಂಪಾದಿಸಿ

'ಇಗೋ ಕನ್ನಡ' - ೧೨-೫-೯೧ ರಿಂದ ಕನ್ನಡದ ಜನಪ್ರಿಯ ಪತ್ರಿಕೆಯಾದ ಪ್ರಜಾವಾಣಿಯಲ್ಲಿ ಪುಟ್ಟ ಅಂಕಣವಾಗಿ ಪ್ರಾರಂಭವಾಯಿತು. ಕನ್ನಡದ ಶಿಷ್ಟ ಬರವಣಿಗೆಯನ್ನು ಸಾರ್ವಜನಿಕರಿಗೆ ತಿಳಿಯ ಪಡಿಸಲು ಆರಂಭಿಸಿದ ಈ ಅಂಕಣವು ಕೆಲವೇ ದಿನಗಳಲ್ಲಿ ಹಲವರ ಗಮನವನ್ನೂ, ಉತ್ಸಾಹವನ್ನೂ ತನ್ನತ್ತ ಸೆಳೆಯಿತು. ಕನ್ನಡವನ್ನು ಅಭ್ಯಾಸ ಮಾಡಿದವರಿಂದಲೂ, ಶ್ರೀಸಾಮಾನ್ಯರಿಂದಲೂ ಬಂದ ವೈವಿಧ್ಯಮಯ ಪ್ರಶ್ನೆಗಳಿಗೆ ಉತ್ತರ ನೀಡುವುದರಲ್ಲಿ ತೊಡಗಿಸಿಕೊಂಡ ಈ ಅಂಕಣ, ಹಲವರ ಭಾಷೆಗೆ ಸಂಬಂಧಿಸಿದ ಸಂದೇಹಗಳನ್ನು ನಿವಾರಣೆ ಮಾಡಿತು. ಇಂತಹ ಭಾಷೆಗೆ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ಒಟ್ಟುಗೂಡಿಸಿ ವೆಂಕಟಸುಬ್ಬಯ್ಯನವರು ಇಗೋ ಕನ್ನಡ ಎಂಬ ಹೆಸರಲ್ಲೇ ಒಂದು ಸಾಮಾಜಿಕ ನಿಘಂಟನ್ನು ಹೊರತಂದದ್ದುಂಟು.[೨]

ಪ್ರಶಸ್ತಿಗಳು/ಗೌರವ ಪುರಸ್ಕಾರಗಳುಸಂಪಾದಿಸಿ

 • ದಿ.7/02/2015 ಬನವಾಸಿಯಲ್ಲಿ ಹುಟ್ಟಲು ಪುಣ್ಯ ಮಾಡಿರಬೇಕು ಎಂಬ ಆದಿಕವಿ ಪಂಪನ ಮಾತನ್ನು ಹೇಳುತ್ತ ಪಂಪ ಪ್ರಶಸ್ತಿಗೆ ಭಾಜನರಾದ 101 ವರ್ಷದ, ಪ್ರೊ. ಜಿ.ವೆಂಕಟಸುಬ್ಬಯ್ಯ ಮಾತು ಆರಂಭಿಸಿ ಪ್ರಶಸ್ತಿ ಸ್ವೀಕರಿಸಲು ವಯೋಮಾನದ ಕಾರಣದಿಂದ ವೈಯಕ್ತಿಕವಾಗಿ ಆಗಮಿಸಲು ಸಾಧ್ಯವಾಗದ ಅವರು, ವೇದಿಕೆಯ ಎದುರಿನ ಬೃಹತ್‌ ಪರದೆಯಲ್ಲಿ ಮಾತಿಗಾರಂಭಿಸಿದರು. ‘ಪ್ರಶಸ್ತಿ ಆಯ್ಕೆಗೆ ರಚನೆ ಮಾಡಿದ್ದ ಸಮಿತಿ ನನ್ನನ್ನು ಆಯ್ಕೆ ಮಾಡಿದೆ. ಶ್ರೇಷ್ಠ ಕವಿ ಪಂಪನ ಸ್ಮರಣೆಯಲ್ಲಿ ನೀಡುವ ಪ್ರಶಸ್ತಿ ನನಗೆ ಸಂದದ್ದು ತುಂಬಾ ಸಂತೋಷ ತಂದಿದೆ. ಪಂಪ ಎರಡು ಮಹತ್ವದ ಕೃತಿಗಳನ್ನು ರಚಿಸಿದ್ದಾನೆ. ಆತನ ಕೃತಿಗಳ ಓದು ನನ್ನ ವ್ಯಕ್ತಿತ್ವ ಬೆಳೆಸಿದೆ’ ಎಂದರು.
 • ಪ್ರಶಸ್ತಿಯು 3 ಲಕ್ಷ ನಗದು ಮತ್ತು ಸನ್ಮಾನ ಫಲಕ ಒಳಗೊಂಡಿದೆ.

.

 • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ
 • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
 • ಪಂಪ ಪ್ರಶಸ್ತಿ (೨೦೧೫)
 • ನಾಡೋಜ ಪ್ರಶಸ್ತಿ (೨೦೦೫)
 • ೧೯೭೪ ರಲ್ಲಿ ಬೀದರನಲ್ಲಿ ನಡೆದ ಪ್ರಥಮ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 • ೨೦೧೧ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ೭೭ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 • ೨೦೧೪ನೇ ಸಾಲಿನ ಪಂಪ ಪ್ರಶಸ್ತಿ; (ದಿ. 7/02/2015 ರಂದು ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಅನುಪಸ್ಥಿತಿಯಲ್ಲಿ ಪ್ರದಾನ)
 • ೨೦೧೭ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ [೩]
 • ೨೦೧೮ರ "ಭಾಷಾ ಸಮ್ಮಾನ್‌" (ಕೇಂದ್ರ ಸಾಹಿತ್ಯ ಅಕಾಡೆಮಿ)[೧]

ಉಲ್ಲೇಖಗಳುಸಂಪಾದಿಸಿ

 1. Teacher par excellence, Deccan Herald, Sep 4, 2012
 2. genius Kannada lexicographer who turns 100 bangalorewaves. August 23, 2012
 3. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ, ಭಾರತ ಸರ್ಕಾರ

ನೋಡಿಸಂಪಾದಿಸಿ

ಸಿರಿಭೂವಲಯಸಾಗರರತ್ನಮಂಜೂಷ‎—ಪ್ರೊ.ಜಿ.ವೆಂಕಟಸುಬ್ಬಯ್ಯನವರ ಪತ್ರ

ಬಾಹ್ಯ ಸಂಪರ್ಕಗಳುಸಂಪಾದಿಸಿ