ಪಿನ್ ಕೋಡ್ - ಇಂಗ್ಲೀಷಿನ ಪೋಸ್ಟಲ್ ಇಂಡೆಕ್ಸ್ ನಂಬರ್ (Postal Index Number) ಎಂಬುದರ ಸಂಕ್ಷಿಪ್ತರೂಪವಾಗಿದೆ. ಅದು ಅಂಚೆ ಕಛೇರಿಗಳಿಗೆ ಭಾರತೀಯ ಅಂಚೆ ಇಲಾಖೆಯ ಆಡಳಿತವು ಬಳಸುವ ಸಂಖ್ಯಾ ವ್ಯವಸ್ಥೆ ಆಗಿದೆ. ಅದು ಆರು ಅಂಕೆಗಳಷ್ಟು ಉದ್ದವಾಗಿದೆ. ಈ ವ್ಯವಸ್ಥೆಯನ್ನು ೧೫ ಆಗಸ್ಟ್ ೧೯೭೨ ರಂದು ಜಾರಿಗೆ ತರಲಾಯಿತು.

ಎಂಟು ಪ್ರಾದೇಶಿಕ ವಲಯಗಳು ಮತ್ತು ಭಾರತೀಯ ಸೇನೆಗಾಗಿಯೇ ಒಂದು ಸಕ್ರಿಯವಾದ ವಲಯ ಸೇರಿದಂತೆ ಭಾರತದಲ್ಲಿ ಒಂಬತ್ತು ಪಿನ್ ಕೋಡ್ ವಲಯಗಳು ಇವೆ. ಪಿನ್ ಕೋಡ್ ಮೊದಲ ಅಂಕಿಯು "ವಲಯ"ವನ್ನೂ, ಎರಡನೇ ಅಂಕಿಯ "ಉಪವಲಯ"ವನ್ನೂ, ಮೂರನೇ ಅಂಕಿಯ ಪ್ರದೇಶದಲ್ಲಿ ಅಂಚೆ-ವಿಂಗಡಣೆಯ "ಜಿಲ್ಲೆ"ಯನ್ನೂ ಸೂಚಿಸುತ್ತವೆ. ಕೊನೆಯ ಮೂರು ಅಂಕೆಗಳ ಗುಂಪು "ಅಂಚೆ ಕಛೇರಿ"ಯನ್ನು ನಿರ್ದೇಶಿಸುತ್ತದೆ.

ಒಂಬತ್ತು ಪಿನ್ ಕೋಡ್ ವಲಯಗಳು ಕೆಳಗಿನಂತೆ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೂಚಿಸುತ್ತವೆ.

ಹೊರಗಿನ ಕೊಂಡಿಗಳು ಸಂಪಾದಿಸಿ