ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಪಿನ್ ಕೋಡ್ ಎಂಬುದು ಭಾರತದಲ್ಲಿ ಅಂಚೆ ಇಲಾಖೆಯು ಅಂಚೆ ವಿತರಣೆಗೆ ಸುಲಭವಾಗುವ ಸಲುವಾಗಿ ಮಾಡಿದ ಭೌಗೋಳಿಕ ಪ್ರದೇಶದ ವರ್ಗೀಕರಣ ವ್ಯವಸ್ಥೆ. ಪಿನ್ ಶಬ್ದವು Postal Index Number ಇದರ ಸಂಕ್ಷಿಪ್ತ ರೂಪ. ಪಿನ್ ಕೋಡ್ ಆರು ಅಂಕಿಗಳ ಸಂಖ್ಯೆ. ಭಾರತದಲ್ಲಿ ಎಂಟು ಪಿನ್ ಪ್ರದೇಶಗಳು ಇವೆ. ಮೊದಲನೆ ಅಂಕಿ ಈ ಎಂಟು ಪ್ರದೇಶಗಳಲ್ಲಿ ಒಂದನ್ನು ಸೂಚಿಸುತ್ತದೆ. ಮೊದಲನೆ ಎರಡು ಅಂಕಿಗಳು ಒಟ್ಟಿಗೆ ಒಂದು ಉಪ ಪ್ರದೇಶ ಅಥವಾ ಅಂಚೆಯ ವಲಯವನ್ನು ಸೂಚಿಸುತ್ತವೆ. ಮೊದಲನೆ ಮೂರು ಅಂಕಿಗಳು ಸೂಚಿಸುವದು ವಿಂಗಡಣೆಯ ಅಥವಾ ಕಂದಾಯದ ಒಂದು ಜಿಲ್ಲೆಯನ್ನು. ಪಿನ್ ಕೋಡಿನ ಕೊನೆಯ ಮೂರು ಅಂಕಿಗಳು ಅಂಚೆ ವಿತರಿಸುವ ಅಂಚೆ ಕಚೇರಿಯನ್ನು ಹೇಳುತ್ತವೆ.


ಪಿನ್ ಕೋಡಿನ ಮೊದಲನೆ ಅಂಕಿ ಸೂಚಿಸುವ ಪ್ರದೇಶಗಳು

ಬದಲಾಯಿಸಿ
ಮೊದಲನೆ ಅಂಕಿ ಪಿನ್ ಪ್ರದೇಶ ಪಿನ್ ಪ್ರದೇಶದಲ್ಲಿ ಬರುವ ರಾಜ್ಯಗಳು
ಉತ್ತರ ದೆಹಲಿ, ಹರ್ಯಾಣ, ಪಂಜಾಬ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ
ಉತ್ತರ ಉತ್ತರ ಪ್ರದೇಶ ಮತ್ತು ಉತ್ತರಖಂಡ
ಪಶ್ಚಿಮ ರಾಜಸ್ಥಾನ ಮತ್ತು ಗುಜರಾತ
ಪಶ್ಚಿಮ ಛತ್ತೀಸ್‍ಗಡ, ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ
ದಕ್ಷಿಣ ಆಂಧ್ರ ಪ್ರದೇಶ ಮತ್ತು ಕರ್ನಾಟಕ
ದಕ್ಷಿಣ ಕೇರಳ ಮತ್ತು ತಮಿಳುನಾಡು
ಪೂರ್ವ ಪಶ್ಚಿಮ ಬಂಗಾಳ, ಓರಿಸ್ಸಾ ಮತ್ತು ಈಶಾನ್ಯ ರಾಜ್ಯಗಳು
ಪೂರ್ವ ಬಿಹಾರ ಮತ್ತು ಜಾರ್ಖಂಡ

ಪಿನ್ ಕೋಡಿನ ಮೊದಲ ಎರಡು ಅಂಕಿಗಳು ಸೂಚಿಸುವ ಉಪ ಪ್ರದೇಶಗಳು

ಬದಲಾಯಿಸಿ
ಪಿನ್ ಕೋಡಿನ ಮೊದಲ ಎರಡು ಅಂಕಿಗಳು ಅಂಚೆಯ ವಲಯ
೧೧ ದೆಹಲಿ
೧೨ ಮತ್ತು ೧೩ ಹರ್ಯಾಣ
೧೪ ರಿಂದ ೧೬ ಪಂಜಾಬ
೧೭ ಹಿಮಾಚಲ ಪ್ರದೇಶ
೧೮ ರಿಂದ ೧೯ ಜಮ್ಮು ಮತ್ತು ಕಾಶ್ಮೀರ
೨೦ ರಿಂದ ೨೮ ಉತ್ತರ ಪ್ರದೇಶ
೩೦ ರಿಂದ ೩೪ ರಾಜಸ್ಥಾನ
೩೬ ರಿಂದ ೩೯ ಗುಜರಾತ
೪೦ ರಿಂದ ೪೪ ಮಹಾರಾಷ್ಟ್ರ
೪೫ ರಿಂದ ೪೯ ಮಧ್ಯ ಪ್ರದೇಶ ಮತ್ತು ಛತ್ತೀಸ್‍ಗಡ
೫೦ ರಿಂದ ೫೩ ಆಂಧ್ರ ಪ್ರದೇಶ
೫೬ ರಿಂದ ೫೯ ಕರ್ನಾಟಕ
೬೦ ರಿಂದ ೬೪ ತಮಿಳುನಾಡು
೬೭ ರಿಂದ ೬೯ ಕೇರಳ
೭೦ ರಿಂದ ೭೪ ಪಶ್ಚಿಮ ಬಂಗಾಳ
೭೫ ರಿಂದ ೭೭ ಓರಿಸ್ಸಾ
೭೮ ಆಸ್ಸಾಮ್
೭೯ ಈಶಾನ್ಯ ರಾಜ್ಯಗಳು
೮೦ ರಿಂದ ೮೫ ಬಿಹಾರ ಮತ್ತು ಜಾರ್ಖಂಡ


ಕರ್ನಾಟಕದ ಪ್ರಮುಖ ಪಿನ್ ಕೋಡುಗಳು

ಬದಲಾಯಿಸಿ
೫೬೦‌‌‌‌‌‌‌‌‌xxx ಬೆಂಗಳೂರು
೫೭೦‌‌‌‌‌‌‌‌‌xxx ಮೈಸೂರು
೫೮೦‌‌‌‌‌‌‌‌‌xxx ಧಾರವಾಡ
೫೯೦‌‌‌‌‌‌‌‌‌xxx ಬೆಳಗಾವಿ

ಉಲ್ಲೇಖಗಳು

ಬದಲಾಯಿಸಿ