ಪಾಜಕ ಉಡುಪಿಯ ಬಳಿ ಇರುವ ಶ್ರೀ ಮಧ್ವಾಚಾರ್ಯರ ಹುಟ್ಟೂರು. ಇದು ಉಡುಪಿ ಶ್ರೀಕೃಷ್ಣ ಮಠದಿಂದ ಸುಮಾರು ೧೩ ಕಿ.ಮೀ ದೂರದಲ್ಲಿದೆ. ಪಾಜಕ ಕ್ಷೇತ್ರದ ಮಹಿಮೆಯನ್ನು ಮಧ್ವಾಚಾರ್ಯರ ಶಿಷ್ಯರಾದ ಶ್ರೀ.ಹೃಶಿಕೇಶ ರವರು "ಸಂಪ್ರದಾಯ ಪದ್ದತ್ತಿ" ಎಂಬ ತಮ್ಮ ಕೃತಿಯಲ್ಲಿ ರಚಿಸಿದ್ದಾರೆ.ಇವರು ಪಾಲಿಮಾರು ಮಠದ ಮೂಲ ಗುರುಗಳಾಗಿರುತ್ತಾರೆ.

ಪಾಜಕ ಕ್ಷೇತ್ರ
The temple of Sri Madhvacharya where there is an impression of his feet in Pajaka


ಪಾಜಕ ಕ್ಷೇತ್ರದ ಬಳಿ ನೋಡಬಹುದಾದ ಸ್ಥಳ ಇಂತಿವೆ:

೧. ಜಗದ್ಗುರು ಶ್ರೀ.ಮಧ್ವಾಚಾರ್ಯರು ಜನ್ಮತಾಳಿದ ಮನೆ, ಅಕ್ಷರಾಭ್ಯಾಸ ಮಾಡಿದ ಸ್ಥಳ, ಇತ್ಯಾದಿ.

೨. ಮಧ್ವ ಮಂದಿರ - ಎಲ್ಲಾ ರೀತಿಯ ಸೇವೆಗಳನ್ನು, ದೇವ ಕಾರ್ಯಗಳನ್ನು ಮಾಡಿಸುವ ಸ್ಥಳ.

೩. ವಿಧ್ಯಾಪೀಠ - ವೇದ, ಸಂಸ್ಕೃತ, ಪಾಠ, ಪ್ರವಚನ ಇತ್ಯಾದಿ, ಅಭ್ಯಾಸ ಮಾಡುವ ಸ್ಥಳ.

೪. ಕುಂಜರಗಿರಿ ದುರ್ಗ ದೇವಸ್ಥಾನ - ಬೆಟ್ಟದ ಮೇಲೆ ತುಟ್ಟತುದಿಯಲ್ಲಿ ಈ ದೇವಸ್ಥಾನ ಸ್ಥಾಪಿಸಿದೆ. ಈ ಬೆಟ್ಟದ ಮೇಲೆ ನಿಂತು ನೋಡಿದರೆ ಉಡುಪಿಯ ಬಹುದೇಕ ಪ್ರದೇಶವನ್ನು ವೀಕ್ಷಿಸ ಬಹುದು.

೫. ಪರಶುರಾಮ ದೇವಸ್ಥಾನ - ಕುಂಜರಗಿರಿ ದುರ್ಗ ದೇವಸ್ಥಾನ ಬಳಿಯಲ್ಲಿಯೇ ಇದೆ.

ಬಾಹ್ಯ ಸಂಪರ್ಕಗಳುಸಂಪಾದಿಸಿ


"https://kn.wikipedia.org/w/index.php?title=ಪಾಜಕ&oldid=878922" ಇಂದ ಪಡೆಯಲ್ಪಟ್ಟಿದೆ