ನ್ಯೂಯಾರ್ಕ್ ಕನ್ನಡ ಕೂಟ

ನ್ಯೂಯಾರ್ಕ್ ಕನ್ನಡ ಕೂಟ,[೧] ಅಮೆರಿಕಾದೇಶದಲ್ಲಿ ಸುಮಾರು ೪ ದಶಕಗಳ ಕನ್ನಡಪರ ಚಟುವಟಿಕೆಗಳನ್ನು ಹಮ್ಮಿಕೊಂಡು ಮುನ್ನುಗ್ಗುತ್ತಿರುವ ಅಮೇರಿಕಾದ ಅತಿಹಳೆಯ ಕನ್ನಡ ಕೂಟಗಳಲ್ಲೊಂದು. ಅಲ್ಲಿನ 'ಮ್ಯಾಡಿಸನ್ ಥಿಯೇಟರ್', 'ಮೊಲ್ಲೂಯ್ ಕಾಲೇಜ್', 'ಲಾಂಗ್ ಐಲೆಂಡ್' ನ್ಯೂಯಾರ್ಕ್,ಗಳಲ್ಲಿ 'ರತ್ನ ಮಹೋತ್ಸವ ಸಮಾರಂಭಗಳು' ಜರುಗಲಿದೆ. ಸನ್.೨೦೧೩ ರ,ಜುಲೈ೧೩ ರಂದು ನಾನಾ ವಿಧವಾದ ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಿಗ್ಯೆ ೯ ಕ್ಕೆ ಶುರುವಾಗಿ, ರಾತ್ರಿ ೧೧ ಕ್ಕೆ ಮುಗಿಯುತ್ತವೆ. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಸಂಗೀತಕಾರ, ರಘುದೀಕ್ಷಿತ್, ಚಿತ್ರನಟಿ ಮಾನ್ಯ, ಮುಂತಾದವರು ಕರ್ನಾಟಕದಿಂದ ಬಂದು ಭಾಗವಹಿಸಲಿದ್ದಾರೆ.

ಸಿದ್ಧತೆಗಳು ಬದಲಾಯಿಸಿ

ಈ ಸಂದರ್ಭದಲ್ಲಿ 'ಜೋಜೋ ಲಾಲಿ' ಮತ್ತು 'ಮದನ್ ಮಲ್ಲು' ಇತ್ತೀಚಿನ ಚಿತ್ರ ಯಾರಿವನು ? ಪ್ರದರ್ಶನಕ್ಕೆ ಸಜ್ಜಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೂಟದ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ. ನ್ಯೂಯಾರ್ಕ್ ಕನ್ನಡ ಕೂಟ, ಕನ್ನಡ ಹಾಗೂ ಕರ್ನಾಟಕದ ಜನರ ಭಾಷೆ ಕಲೆ ಪರಂಪರೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಬದ್ಧವಾಗಿರುವ ಒಂದು ಸಂಸ್ಥೆ ಎನ್ನಿಸಿದೆ. ಅಮೆರಿಕದಲ್ಲಿ ವಾಸವಾಗಿರುವ ಕನ್ನಡಿಗರ ಸಂಬಂಧಗಳನ್ನು ಬೆಸೆಯುವ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಿದೆ. ಇದರ ಸರಳ ಸಂದೇಶ ಹೀಗಿದೆ : 'ಕನ್ನಡ ನಾಡು, ನುಡಿ, ನಡೆ, ಹಾಗು ಸಂಸ್ಕೃತಿಯನ್ನು ಅನುಸರಿಸುವುದು ಮತ್ತು ಕನ್ನಡ ತಾಣವನ್ನು ಬೆಳೆಸುವುದು' ಹೀಗೆ ಈ ಕನ್ನಡ ಕೂಟ ಬೃಹತ್ತಾಗಿ ಬೆಳೆದು, ಕನ್ನಡಿಗರ ಮಹತ್ವಾಕಾಂಕ್ಷೆಗಳಿಗೆ ಜೀವಂತ ಸಾಕ್ಷಿಯಾಗಿದೆ. ೨೦೧೩ ರ ಜುಲೈ ೧೩ ಕೂಟದ ರತ್ನ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲು, 'ಕಾರ್ಯಕಾರಿ ಸಮಿತಿ' ಸನ್ನದ್ಧವಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. 40ರ ನ್ಯೂಯಾರ್ಕ್ ಕನ್ನಡ ಕೂಟದ ರತ್ನ ಮಹೋತ್ಸವ, Tuesday, May 28, 2013ನ್ಯೂಯಾರ್ಕ್ ಕನ್ನಡ ಕೂಟ