ನುಡಿಜೇನು ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಹಳೆಯ ಪತ್ರಿಕೆ. ತನ್ನದೇ ಆದ ಓದುಗ ಬಳಗವನ್ನು ಈ ಪತ್ರಿಕೆ ಹೊಂದಿದೆ. ಅಂಕೋಲಾದ ಬಿ.ಹೊನ್ನಪ್ಪ ಅವರ ಸ್ಥಾಪಕ ಹಾಗೂ ಸಂಪಾದಕತ್ವದಲ್ಲಿ ಪತ್ರಿಕೆಯು 1973. ಜಿಲ್ಲೆಯಲ್ಲಿ ನಡೆದ ಅನೇಕ ಹೋರಾಟಗಳಿಗೆ ದನಿಯಾಗಿತ್ತು.[]

ನುಡಿಜೇನು
ವಿಧದೈನಂದಿನ
ಸ್ಥಾಪಕಬಿ.ಹೊನ್ನಪ್ಪ
ಪ್ರಕಾಶಕಲಾವಣ್ಯ ಸಾಗರ್
ಸಂಪಾದಕಲಾವಣ್ಯ ಸಾಗರ್
ಸುದ್ದಿ ಸಂಪಾದಕದೇವರಾಜ ನಾಯ್ಕ
ಭಾಷೆಕನ್ನಡ
ಮರುಪ್ರಾರಂಭ೨೦೧೯ ಅಕ್ಟೋಬರ್‌ ೨೨
ಪ್ರಧಾನ ಕಚೇರಿಕಾರವಾರ
ಅಧಿಕೃತ ಜಾಲತಾಣhttps://nudijenu.in

ಮೊದಲು ದಿನಪತ್ರಿಕೆಯಾಗಿ, ನಂತರ ವಾರಪತ್ರಿಕೆಯಾಗಿ, ಬಳಿಕ ಮಾಸಿಕವಾಗಿ ಪ್ರಕಟಗೊಳ್ಳುತ್ತಿದ್ದ ನುಡಿಜೇನು, ಎ೪ ಅಳತೆಯಲ್ಲಿ ಪ್ರಕಟಗೊಳ್ಳುತ್ತಿತ್ತು. ಐದು ದಶಕಗಳ ಹಿಂದೆ ಸಾಧಕರು, ಪ್ರತಿಭಾವಂತ ವಿದ್ಯಾರ್ಥಿಗಳ ಸುದ್ದಿಗಳನ್ನು ಈ ಪತ್ರಿಕೆಯಲ್ಲಿ ಪ್ರಕಟಿಸಲು ಹಾತೊರೆಯುತ್ತಿದ್ದರು.

ಇದೀಗ ೨೦೧೯ರ ಅಕ್ಟೋಬರ್ ೨೨ರಿಂದ ನವಶೈಲಿಯಲ್ಲಿ ಪ್ರಕಟಗೊಳ್ಳುತ್ತಿದೆ. ಮಹಿಳಾ ಸಂಪಾದಕತ್ವದಲ್ಲಿ ನಡೆಯುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಏಕೈಕ ದಿನಪತ್ರಿಕೆ ಇದಾಗಿದೆ. ಇದರ ಸಂಪಾದಕರಾಗಿ ಲಾವಣ್ಯ ಸಾಗರ್‌, ಕಾರ್ಯನಿರ್ವಾಹಕ ಸಂಪಾದಕರಾಗಿ ಸಂದೀಪ್‌ ಸಾಗರ್‌ ಹಾಗೂ ಉಪ ಸಂಪಾದಕರಾಗಿ ದೇವರಾಜ ನಾಯ್ಕ ಕಾರ್ಯನಿರ್ವಹಿಸುತ್ತಿದ್ದಾರೆ.[]

ಪತ್ರಿಕೆಯು ಜಿಲ್ಲೆಯ ೧೨ ತಾಲೂಕುಗಳಲ್ಲಿ ವರದಿಗಾರರನ್ನು ಹೊಂದಿದೆ. ಭಟ್ಕಳದಲ್ಲಿ ಪ್ರಸನ್ನ ಭಟ್, ಹೊನ್ನಾವರದಲ್ಲಿ ವಿಶ್ವನಾಥ ಸಾಲ್ಕೋಡ, ಕುಮಟಾದಲ್ಲಿ ಚರಣರಾಜ್‌ ನಾಯ್ಕ, ಅಂಕೋಲಾದಲ್ಲಿ ಅಕ್ಷಯ ನಾಯ್ಕ, ಕಾರವಾರದಲ್ಲಿ ಎಸ್‌.ಎಸ್.ಸಂದೀಪ್‌ ಸಾಗರ್‌, ಶಿರಸಿಯಲ್ಲಿ ವಿಶ್ವನಾಥ, ಸಿದ್ದಾಪುರದಲ್ಲಿ ನಾಗರಾಜ ಮಾಳ್ಕೋಡ, ಹಳಿಯಾಳದಲ್ಲಿ ಸಂಜಯ್‌ ಪಾಟೀಲ, ಜೊಯಿಡಾದಲ್ಲಿ ಸಂದೇಶ್‌, ದಾಂಡೇಲಿಯಲ್ಲಿ ಸಂದೇಶ್‌ ಜೈನ್‌, ಯಲ್ಲಾಪುರದಲ್ಲಿ ಅಚ್ಯುತ್‌ಕುಮಾರ್‌ ಹಾಗೂ ಮುಂಡಗೋಡದಲ್ಲಿ ಬಸವರಾಜ್‌ ಲಮಾಣಿ ಕಾರ್ಯನಿರ್ವಹಿಸುತ್ತಿದ್ದಾರೆ.[]

೨೦೨೫ರ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಯು ಈ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಸಂದೀಪ್‌ ಸಾಗರ್‌ ಅವರಿಗೆ ದೊರೆತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮಾಧ್ಯಮ ಪಟ್ಟಿಯಲ್ಲಿರುವ ಈ ಪತ್ರಿಕೆ, ಯಾವುದೇ ಒಂದು ಪಕ್ಷ ಅಥವಾ ವೈಯಕ್ತಿಕ ವಿಚಾರಗಳಿಗೆ ಕಟ್ಟುಬೀಳದೆ, ತಟಸ್ಥವಾಗಿ ಕಾರ್ಯನಿರ್ವಹಿಸುತ್ತಿದೆ.[]

  1. "RNI" (PDF). Archived from the original on 2024-11-15. Retrieved 2025-02-08.{{cite news}}: CS1 maint: bot: original URL status unknown (link)
  2. "enwiki".{{cite web}}: CS1 maint: url-status (link)
  3. "Nudijenu Facebook".{{cite news}}: CS1 maint: url-status (link)
  4. "Suddibindu".{{cite news}}: CS1 maint: url-status (link)