ನಾಣ್ಯ/ಧನಮಾನಕದ ಚಿಹ್ನೆ

ನಾಣ್ಯ/ಧನಮಾನಕದ ಚಿಹ್ನೆ ಯು ಸಾಮಾನ್ಯವಾಗಿ ಧನಮಾನಕದ ಹೆಸರಿನ ಬದಲಿಗೆ ಬಳಸುವ ಶೀಘ್ರಲಿಪಿ ಚಿತ್ರಕ ಚಿಹ್ನೆಯಾಗಿದೆ. ವಿಶೇಷವಾಗಿ ಹಣದ ಪ್ರಮಾಣವನ್ನು ಉಲ್ಲೇಖಿಸುತ್ತದೆ. ಅಂತರರಾಷ್ಟ್ರೀಯವಾಗಿ, ISO 4217 ಸಂಕೇತಗಳನ್ನು ಧನಮಾನಕದ ಚಿಹ್ನೆಗಳ ಬದಲಿಗೆ ಬಳಸಲಾಗುತ್ತದಾದರೂ, ಆಯಾ ರಾಷ್ಟ್ರಗಳಲ್ಲಿ ಧನಮಾನಕ ಚಿಹ್ನೆಯು ಪ್ರಧಾನವಾಗಿ ಬಳಕೆಯಲ್ಲಿರುತ್ತವೆ. ವಿಶ್ವದ ಬಹುತೇಕ ಧನಮಾನಕಗಳು ಯಾವುದೇ ನಿಗದಿತ ಚಿಹ್ನೆಯನ್ನು ಹೊಂದಿಲ್ಲ.

This article contains Unicode currency signs. Without proper rendering support, you may see question marks, boxes, or other symbols instead of currency signs.

ಧನಮಾನಕದ ಚಿಹ್ನೆಯನ್ನು ಹೊಂದುವುದು ಈಗ ಅಂತರರಾಷ್ಟ್ರೀಯ ಧನಮಾನಕಗಳಲ್ಲಿ ಪ್ರತಿಷ್ಠೆಯ ವಿಷಯವಾಗಿದೆ. ಭಾರತವು ತನ್ನ ರೂಪಾಯಿಗೆ ೨೦೧೦ ಇಲ್ಲಿ ಚಿಹ್ನೆಯನ್ನು ಪ್ರಸ್ತುತಪಡಿಸಿದರು. ಐರೋಪ್ಯ ಆಯೋಗವು ಯೂರೋದ ಯಶಸ್ಸಿಗೆ ಯೂರೋ ಚಿಹ್ನೆಯ ಜಾಗತಿಕ ಮನ್ನಣೆಯೂ ಭಾಗಶಃ ಕಾರಣ ಎಂದು ಭಾವಿಸಿದೆ.[೧]

ಬಳಕೆ ಬದಲಾಯಿಸಿ

ಧನಮಾನಕದ ಮೊತ್ತವನ್ನು ಬರೆಯುವಾಗ ಚಿಹ್ನೆಯ ಸ್ಥಳವು ಧನಮಾನಕಗಳ ಮೇರೆಗೆ ವ್ಯತ್ಯಾಸಗೊಳ್ಳುತ್ತದೆ. ಅನೇಕ ಧನಮಾನಕಗಳು, ವಿಶೇಷವಾಗಿ ಲ್ಯಾಟಿನ್‌ ಅಮೇರಿಕಾ ಹಾಗೂ ಆಂಗ್ಲ-ಭಾಷಿಕ ವಿಶ್ವಗಳು, ಅದನ್ನು ಮೊತ್ತಕ್ಕೆ ಮುಂಚೆ ಬಳಸಿದರೆ (e.g., £50.00 ); ಉಳಿದ ಅನೇಕ ರಾಷ್ಟ್ರಗಳು ಅದನ್ನು ಮೊತ್ತದ ನಂತರ ಬಳಸುತ್ತವೆ (e.g., 50.00 S₣ ); ಹಾಗೂ, ಫ್ರೆಂಚರ ಫ್ರಾಂಕ್‌ ಹಾಗೂ ಪೋರ್ಚುಗೀಸರ ಎಸ್ಕುಡೊಗಳನ್ನು ಅವು ನಿಷೇಧಗೊಳ್ಳುವ ಮುಂಚೆ ದಶಮಾಂಶ ಸ್ಥಾನದಲ್ಲಿ ಬಳಸಲಾಗುತ್ತಿತ್ತು (i.e., 50$00 ಅಥವಾ 12₣34 ). ರಾಷ್ಟ್ರೀಯ ಮಾನಕವಿಲ್ಲದಿರುವ ರಾಷ್ಟ್ರಗಳಲ್ಲಿ, (€) ಚಿಹ್ನೆಯನ್ನು ಮೊತ್ತಕ್ಕೆ ಮುಂಚೆ ಬಳಸುವ ವ್ಯವಸ್ಥೆಯಾದ, ಮಾನಕೀಕರಿಸಿದ ಐರೋಪ್ಯ ಪ್ರಮುಖ ಸ್ಥಾನೀಕರಣವನ್ನು ಬಳಸಲಾಗುತ್ತದೆ. ಆದಾಗ್ಯೂ, ಅನೇಕ ಐರೋಪ್ಯ ವಲಯದ ರಾಷ್ಟ್ರಗಳು ಪರ್ಯಾಯ ವಿಧಾನಗಳನ್ನು ರೂಪಿಸಿಕೊಂಡಿವೆ ಅಥವಾ ನಿರ್ವಹಿಸಿಕೊಂಡಿವೆ.

ದಶಮಾಂಶ ವಿಯೋಜಕವೂ ಸಹಾ ರಾಷ್ಟ್ರದ ಸ್ಥಳೀಯ ಮಾನಕಗಳ ಮೇಲೆ ಆಧಾರಿತವಾಗಿರುತ್ತದೆ. ಉದಾಹರಣೆಗೆ, ಅನೇಕ ವೇಳೆ ಯುನೈಟೆಡ್‌ ಕಿಂಗ್‌ಡಮ್‌ ಬೆಲೆಪಟ್ಟಿಗಳಲ್ಲಿ ಮಧ್ಯ ಬಿಂದುವನ್ನು ದಶಮಾಂಶ ಚಿಹ್ನೆಯಾಗಿ ಬಳಸುತ್ತದದಾದರೂ (e.g., '£5·52'), ಮುದ್ರಣದಲ್ಲಿ ಬಳಸುವುದಿಲ್ಲ. ಅಲ್ಪವಿರಾಮವನ್ನು (e.g., '5,00 €') ಇತರೆ ರಾಷ್ಟ್ರಗಳಲ್ಲಿ ಪ್ರಧಾನ ವಿಯೋಜಕವಾಗಿ ಬಳಸಲಾಗುತ್ತಿದೆ. ಅಂತರರಾಷ್ಟ್ರೀಯ ಮಾನಕಗಳ ಬಗೆಗಿನ ಮಾಹಿತಿಗಾಗಿ ನೋಡಿ ದಶಮಾಂಶ ವಿಯೋಜಕ.

ವಿನ್ಯಾಸ ಬದಲಾಯಿಸಿ

ಹಳೆಯ ಧನಮಾನಕ ಚಿಹ್ನೆಗಳು ಅನೇಕ ವೇಳೆ ಹಿಂದಿನ ಧನಮಾನಕಗಳ ಮೇಲೆ ಆಧಾರಿತವಾಗಿ ಸಾವಕಾಶವಾಗಿ ವಿಕಾಸಗೊಂಡಿದ್ದವು. ಬಹುಶಃ ಎಂಟರ ವಿಭಾಗವನ್ನು 8 ಸಂಕೇತಿಸುವಂತೆ ಡಾಲರ್‌/ಪೆಸೊ ಚಿಹ್ನೆಯನ್ನು ಸ್ಪಾನಿಷ್‌ ಡಾಲರ್‌ ಮೂಲದ್ದೆಂದು ನಂಬಲಾಗಿದೆಯಾದರೂ, ಪೌಂಡ್‌/ಲಿರಾ ಚಿಹ್ನೆಯು, ತೂಕವನ್ನು ಲ್ಯಾಟಿನ್‌ನಲ್ಲಿ ಕರೆಯುವಂತೆ ಲಿಬ್ರಂ ಅನ್ನು ಸೂಚಿಸುವ Lನಿಂದ ವಿಕಾಸಗೊಂಡಿದೆ. ಹೊಸದಾಗಿ ಅವಿಷ್ಕರಿಸಲಾದ ಧನಮಾನಕಗಳು ಹಾಗೂ ನವೀನ ಚಿಹ್ನೆಗಳನ್ನು ಅಳವಡಿಸಿಕೊಳ್ಳುತ್ತಿರುವ ಧನಮಾನಕಗಳು ತಮ್ಮ ಪರಿಗ್ರಾಹಕರನ್ನು ಸೂಚಿಸುವಂತೆಯೇ ಇವೆ. ಯೂರೋ ಚಿಹ್ನೆಯು ಐರೋಪ್ಯ ನಾಗರೀಕತೆಯನ್ನು, ಯೂರೋಪ್‌ ಹಾಗೂ ಸ್ಥಿರತೆಯನ್ನು ಸಂಕೇತಿಸುತ್ತಿದ್ದರೆ, ಭಾರತವೂ ಕೂಡ ಭಾರತೀಯ ಸಂಸ್ಕೃತಿಯನ್ನು ಸೂಚಿಸುವಂತಹಾ ಚಿಹ್ನೆಯ ಹುಡುಕಾಟದಲ್ಲಿದೆ.[೧]

ಇದರಲ್ಲಿ ವ್ಯಾಪಾರಿ ಸಮುದಾಯದ ಕಾಣ್ಕೆಗಳು (ಯೂರೋ ಸ್ಥಿರತೆಯನ್ನು ಸೂಚಿಸಲು ಎರಡು ಗೆರೆಗಳನ್ನು ಹೊಂದಿದೆ) ಹಾಗೂ ಗಣಕದಲ್ಲಿ ಈ ಚಿಹ್ನೆಯನ್ನು ಹೇಗೆ ಚಿತ್ರಿಸಲಾಗುತ್ತದೆ ಎಂಬುದೂ ಸೇರಿದಂತೆ ಇನ್ನೂ ಅನೇಕ ವಿಚಾರಗಳಿರುತ್ತವೆ. ಹೊಸ ಚಿಹ್ನೆಯೊಂದನ್ನು ಬಳಸಬೇಕೆಂದರೆ, ಅದನ್ನು ಚಿತ್ರಿಸುವ ತಂತ್ರಾಂಶವು ಸುಧಾರಣೆಗೊಳ್ಳಬೇಕಾಗುತ್ತದೆ, ಕೀಲಿಮಣೆಗಳು ಬದಲಾಗಬೇಕಾಗುತ್ತದೆ ಅಥವಾ ಚಿಹ್ನೆಯನ್ನು ಮೂಡಿಸಲು ಶೀಘ್ರಕೀಲಿಗಳನ್ನು ಸೇರಿಸಬೇಕಾಗುತ್ತದೆ. ಯೂರೋ ಚಿಹ್ನೆಯನ್ನು ಹೇಗೆ ಮೂಡಿಸಬಹುದು ಎಂಬುದರ ಬಗ್ಗೆ ಪರಿಗಣಿಸದಿರುವ ಬಗ್ಗೆ EU ಒಕ್ಕೂಟವನ್ನು ಟೀಕಿಸಲಾಗುತ್ತಿದೆ[೧] (ಇದು ಸಾಧಾರಣ ಬಳಕೆಗಿಂತ ಬಹುಮಟ್ಟಿಗೆ ಅಗಲವಾಗಿರುವುದರಿಂದ, ಅದರ ಬಹಳಷ್ಟು ರೂಪಗಳು ಮೊಟಕುಗೊಳಿಸಿದ ಅಗಲದ ಆವೃತ್ತಿಗಳಾಗಿವೆ).

ಉದಾಹರಣೆಗಳು ಬದಲಾಯಿಸಿ

ಹಿಂದೆ ಬಳಸುತ್ತಿದ್ದ ಧನಮಾನಕ ಚಿಹ್ನೆಗಳು ಬದಲಾಯಿಸಿ


ಇವನ್ನೂ ಗಮನಿಸಿ ಬದಲಾಯಿಸಿ

ಆಕರಗಳು ಬದಲಾಯಿಸಿ

  1. ೧.೦ ೧.೧ ೧.೨ ವೆಸ್ಟ್‌ಕಾಟ್‌, K. (2009) ಭಾರತವು ರೂಪಾಯಿಗೆ ಪ್ರತಿಷ್ಠೆಯ ಸಂಕೇತವನ್ನು ಕೋರುತ್ತಿದೆ, BBC 10 ಮಾರ್ಚ್‌ 2009, ಭೇಟಿ ನೀಡಿದ್ದು 1 ಸೆಪ್ಟೆಂಬರ್‌‌ 2009