ನಗುವನಹಳ್ಳಿ ಬದಲಾಯಿಸಿ

ನಗುವನಹಳ್ಳಿ( ಇಂಗ್ಲೀಷ್ - Naguvanahalli) ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿದೆ. ಪಕ್ಷಿ ವೀಕ್ಷಣೆಗೆ ಇದು ಪ್ರಸಿದ್ದಿ ಹೊಂದಿದೆ.

ನಗುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ಪುಟ್ಟಗ್ರಾಮವಾಗಿದೆ. ಶ್ರೀರಂಗಪಟ್ಟಣ ತಾಲ್ಲೂಕು, ಮಂಡ್ಯ ಜಿಲ್ಲೆ , ಬೆಳಗೊಳ ಹೋಬಳಿ ಹಾಗು ಜಿಲ್ಲೆ ಕೇಂದ್ರದಿಂದ ೪೦ ಕಿಲೋ ಮೀಟರ್ , ತಾಲೂಕ್ ಕೇಂದ್ರದಿಂದ ೩ ಕಿಲೋ ಮೀಟರ್ ಹಾಗು ಮೈಸೂರಿನಿಂದ ೧೦ ಕಿಲೋ ಮೀಟರ್ ದೂರದಲ್ಲಿರುತ್ತದೆ (ಮಂಡ್ಯ ಹಾಗು ಮೈಸೂರು ಜಿಲ್ಲೆಯ ಬಾರ್ಡರ್ ಹಳ್ಳಿ ಆಗಿರುತ್ತದೆ)

ಗ್ರಾಮದಲ್ಲಿ ಪ್ರತಿ ಮಂಗಳವಾರ ಇಲ್ಲಿ ಗ್ರಾಮೀಣ ಸಂತೆ ನಡೆಯುತ್ತದೆ. ನಗುವನಹಳ್ಳಿ ಮಾತ್ರವಲ್ಲದೆ, ಚಂದಗಾಲು, ಬ್ರಹ್ಮಪುರ, ನಾಗಯ್ಯನಹುಂಡಿ, ರಾಜೀವ್‌ನಗರ, ಬೆಳವಾಡಿ, ಮೇಳಾಪುರ ಹಾಗೂ ಇತರ ಗ್ರಾಮಗಳ ಜನರು ಈ ಸಂತೆಗೆ ಬರುತ್ತಾರೆ

ಪಂಚಾಯಿತಿ ಮುಖ್ಯಕೇಂದ್ರ

ನಗುವನಹಳ್ಳಿ ಪಂಚಾಯಿತಿಗೆ ಇತರ ಹಳ್ಳಿಗಳು, ಬೊಮ್ಮಾರು ಅಗ್ರಹಾರ, ಬ್ರಹ್ಮಪುರ, ಚಂದಗಾಲು, ರಾಜೀವನಗರ , ಕುವೆಂಪು ಬಡಾವಣೆ, ಬೆಳವಾಡಿ. ಪಂಚಾಯಿತಿಯ ಒಟ್ಟು ಜನಸಾಂದ್ರತೆ ಸುಮಾರು ೧೫ ಸಾವಿರ, ನಗುವನಹಳ್ಳಿ ಜನಸಂಖ್ಯೆ ಸುಮಾರು ೭೦೦೦.

ಶಿಕ್ಷಣ ಬದಲಾಯಿಸಿ

ಹಲವಾರು ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿವೆ.

  • ಪಿ. ಯು. ಕಾಲೇಜು
  • ಎಂ. ಐ. ಟಿ. ಇಂಜಿನಿಯರಿಂಗ್ ಕಾಲೇಜು

ಕೃಷಿ ಮತ್ತು ಬೆಳೆಗಳು ಬದಲಾಯಿಸಿ

ನೀರಾವರಿಗೆ ಸೌಲಭ್ಯವಿದ್ಧು, ಭತ್ತ ಮತ್ತು ಕಬ್ಬು ಮುಖ್ಯ ಬೆಳೆಗಳಾಗಿವೆ. ತೋಟಗಾರಿಕೆ, ರಾಗಿ, ತರಕಾರಿ, ಹೂವಿನ ಕೃಷಿಯೂ ಇದೆ.

ದೇವಸ್ಥಾನಗಳು ಬದಲಾಯಿಸಿ

ಶ್ರೀರಾಮ ದೇವಸ್ಥಾನ, ರಾಮಮಂದಿರ , ಕಿರೀಟ ದೇವಸ್ಥಾನ, ಆಂಜುನೇಯ ಸ್ವಾಮಿ ದೇವಸ್ಥಾನ, ಗ್ರಾಮ ದೇವತೆ ಮಾರಮ್ಮನ ದೇವಸ್ಥಾನ, ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ, ಶ್ರೀ ಕಾಲಬೈರವಸ್ವಾಮಿ ದೇವಸ್ಥಾನ,ಶ್ರೀ ಸತ್ಯನಾರಾಯಣಸ್ವಾಮಿ ದೇವಸ್ಥಾನ, ಬೊಮ್ಮರಮ್ಮನ ದೇವಸ್ಥಾನಗಳಿವೆ.

ಬ್ಯಾಂಕ್ ಸೌಲಭ್ಯ ಬದಲಾಯಿಸಿ

ಗ್ರಾಮದಲ್ಲಿ ಎಂ.ಡಿ .ಸಿ .ಸಿ ಬ್ಯಾಂಕ್, ನಗುವನಹಳ್ಳಿ ಸೇವ ಸಹಕಾರ ಸಂಘ , ಎಸ್. ಬಿ. ಐ ಬ್ಯಾಂಕ್ ಸೌಲಭ್ಯವಿದೆ.

ಸಂಪರ್ಕ ಬದಲಾಯಿಸಿ

ರಸ್ತೆಯಮೂಲಕ ಇಲ್ಲಿಗೆ ತಲುಪಬಹುದಾಗಿದೆ.

  • ಮಂಡ್ಯದಿಂದ ೪೦ ಕಿ.ಮೀ
  • ಶ್ರೀರಂಗಪಟ್ಟಣದಿಂದ ೫ ಕಿ.ಮೀ
  • ಮೈಸೂರಿನಿಂದ ೧೦ ಕಿ.ಮೀ

ಕಕ್ಷೆಗಳು: ೧೨°೨೨'೫೧"N ೭೬°೪೧'೧೧"E