ದ್ವಿದ್ವಾರ
ವಿದ್ಯುನ್ಮಾನ ಶಾಸ್ತ್ರದಲ್ಲಿ, ದ್ವಿದ್ವಾರ ವನ್ನು ಎರಡು ತುದಿ ಹೊಂದಿರುವ ಸಾಧನವೆನ್ನಬಹುದು. ಇದರ ತುದಿಗಳಿಗೆ ಋಣಾತ್ಮಕ ಮತ್ತು ಧನಾತ್ಮಕ ಎಂದು ಕರೆಯಲಾಗಿದೆ. ಇದರ ಋಣಾತ್ಮಕ ತುದಿಯನ್ನು ಕ್ಯಾಥೊಡ್ ಎಂದು ಮತ್ತು ಇನ್ನೊಂದನ್ನು ಧನಾತ್ಮಕ ತುದಿಯೆಂದು ಕರೆಯಲಾಗುತ್ತದೆ.ಇದನ್ನು ದ್ವಿಮುಖ ವಿದ್ಯುತ್ ನನ್ನು ಎಕಮುಖ ವಿದ್ಯುತ್ ಗೆ ಪರಿವರ್ತಿಸಲು ಬಳಸಲಾಗುತ್ತದೆ.
ದ್ವಿದ್ವಾರವು, ವಿದ್ಯುತ್ ಒಂದೆ ಮಾರ್ಗದಲ್ಲಿ (ಎಕಮುಖ) ಸಂಚರಿಸಲು ಮಾತ್ರ ಅನುವು ಮಾಡಿಕೊಡುತ್ತದೆ. ವಿರುದ್ದ ದಿಕ್ಕಿನಲ್ಲಿ ವಿದ್ಯುತ್ ಪ್ರವಹಿಸಲು ಅವಕಾಶವಿಲ್ಲ. ದ್ವಿದ್ವಾರಗಳಲ್ಲಿ ಅನೇಕ ಬಗೆಯವಿವೆ. ಅವುಗಳಲ್ಲಿ ಪ್ರಮುಖವಾದುವು
೧.ಸಾದಾರಣ ದ್ವಿದ್ವಾರ
೨.ಶಕ್ತಿ ದ್ವಿದ್ವಾರ
೩.ಶಾಟ್ಕಿ ಆವಿಶ್ಕರಿಸಿದ ದ್ವಿದ್ವಾರ ಮುಂತಾದವು