ದ್ವಾರಕಾ
ದ್ವಾರಕಾ pronunciation (ಸಹಾಯ·ಮಾಹಿತಿ) (ಹಿಂದಿ:द्वारका), ಇದನ್ನು ದ್ವಾರ್ಕಾ , ದ್ವಾರಕ , ಹಾಗೂ ದ್ವಾರಕಾ ಎಂದು ಕೂಡಾ ಹೇಳಲಾಗುತ್ತದೆ, ಇದು ಒಂದು ನಗರ ಹಾಗೂ ಭಾರತದ ಗುಜರಾತ್ ರಾಜ್ಯದ ಜಾಮ್‌ನಗರ ಜಿಲ್ಲೆಯ ಒಂದು ಮುನಿಸಿಪಾಲಿಟಿ. ದ್ವಾರಕಾ (ಸಂಸ್ಕೃತದಲ್ಲಿ ದ್ವಾರಕಾ - ಐತಿಹಾಸಿಕ ಸಂದರ್ಭದಲ್ಲಿ ಬರುವ ಒಂದು ನಗರವಾಗಿ ಈ ಲೇಖನದಲ್ಲಿ ಬಳಸಲಾಗಿದೆ), ಇದನ್ನು ದ್ವಾರಾವತಿಯೆಂದು ಸಂಸ್ಕೃತ ಇತಿಹಾಸದಲ್ಲಿ ದೇಶದ ಹತ್ತು ಅತಿ ಪುರಾತನ ನಗರಗಳಲ್ಲಿ ಒಂದು ಎಂದು ಹೇಳಲಾಗಿದೆ. ದಂತಕಥೆಯಾಗಿರುವ ಈ ದ್ವಾರಕಾ ನಗರವು ಭಗವಾನ್ ಕೃಷ್ಣನು ವಾಸಿಸುತ್ತಿದ್ದ ಸ್ಥಳವಾಗಿದೆ. ಸಮುದ್ರದಿಂದ ಈ ನಗರವು ಆರು ಬಾರಿ ಮುಳುಗಿಹೋಗಿದ್ದು ಹೆಚ್ಚಿನ ಹಾನಿ ಮತ್ತು ನಾಶಕ್ಕೊಳಗಾಗಿದೆ ಎಂದು ನಂಬಲಾಗಿದೆ ಹಾಗೂ ಆಧುನಿಕ ದ್ವಾರಕಾವು ಏಳನೆಯ ಬಾರಿ ಅದೇ ಪ್ರದೇಶದ ನಿರ್ಮಿಸಲಾದ ನಗರ ಎನ್ನಲಾಗಿದೆ.
ದ್ವಾರಕಾ
Dwarka | |
---|---|
city | |
Population (2001) | |
• Total | ೩೩,೬೧೪ |
ಭೂಗೋಳ
ಬದಲಾಯಿಸಿಈಗಿನ ದ್ವಾರಕಾ ನಗರವುಗುಜರಾತ್ನ ಜಾಮ್‌ನಗರ್ ಜಿಲ್ಲೆಯಲ್ಲಿ ಇದೆ. ಈ ಪ್ರದೇಶವು ಗೋಮತಿ ನದಿಯು ಕಚ್ ಕೊಲ್ಲಿಯಲ್ಲಿ ಸೇರುವ ಪ್ರದೇಶಕ್ಕೆ ಅತಿ ಹತ್ತಿರದಲ್ಲಿದೆ. ಭಾರತದ ಅತ್ಯಂತ ಪೂರ್ವದ ಭಾಗದಲ್ಲಿ ಈ ನಗರವು ಇದೆ.ದ್ವಾರಕಾ ನಗರವು ಇರುವುದು ಭೌಗೋಳಿಕ ಪ್ರದೇಶವಾದ 22°14′N 68°58′E / 22.23°N 68.97°E.[೧] ಇದು ಸಮುದ್ರ ಮಟ್ಟಕ್ಕೆ ಒಂದು ಸಮಾನಾಂತರ ಪ್ರದೇಶವಾಗಿದೆ, ಸರಾಸರಿ 0 ಮೀಟರ್‌ಗಳಷ್ಟು ಉನ್ನತ ಸ್ಥಾನದಲ್ಲಿದೆ (0 ಅಡಿ).
ಜನಸಂಖ್ಯಾಶಾಸ್ತ್ರ
ಬದಲಾಯಿಸಿ2001ರ ಭಾರತೀಯ ಜನಗಣತಿಯ ಪ್ರಕಾರ,[೨] ದ್ವಾರಕಾವು 33,614ರಷ್ಟು ಜನಸಂಖೆಯನ್ನು ಹೊಂದಿತ್ತು. ಅದರಲ್ಲಿ ಪುರುಷರ ಜನಸಂಖ್ಯೆ 53% ಹಾಗೂ ಮಹಿಳೆಯರು 47%. ದ್ವಾರಕಾವು ಸರಾಸರಿ 64% ಸಾಕ್ಷರತೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಸಾಕ್ಷರತೆ 59.5%ಗಿಂತಲೂ ಹೆಚ್ಚಾಗಿದು; ಇದರಲ್ಲಿ ಪುರುಷರ ಸಾಕ್ಷರತೆಯು 72%, ಹಾಗೂ ಮಹಿಳೆಯರ ಸಾಕ್ಷರತೆಯು 55% ಇದೆ. ದ್ವಾರಕಾದಲ್ಲಿ ಬಹಳಷ್ಟು ಕುಟುಂಬಗಳು ಚಿಕ್ಕ ಮಕ್ಕಳನ್ನು ಹೊಂದಿವೆ, ಒಟ್ಟು ಜನಸಂಖ್ಯೆಯ 13% ನಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
ದ್ವಾರಕಾಧೀಶ ದೇವಸ್ಥಾನ
ಬದಲಾಯಿಸಿ- ಈ ದೇವಾಲಯವು ಐದು ಮಹಡಿಗಳ ಗೋಪುರವನ್ನು ಹೊಂದಿದೆ, ಇದನ್ನು ಭಗವಾನ್ ಶ್ರೀ ಕೃಷ್ಣನ ಮೊಮ್ಮಗ ಸಾಂಬಾನು ಕಟ್ಟಿಸಿದ್ದಾನೆ. ಹಿಂದೂ ಧರ್ಮದಲ್ಲಿ ಸ್ವರ್ಗದ ವಾಸ್ತುಶಿಲ್ಪಿಯಾದ ವಿಶ್ವಕರ್ಮನಿಂದ ನಿರ್ಮಿತವಾದುದೆಂಬ ಈ ನಗರವು ನಂಬಿಕೆ ಇದೆ. ಈ ದೇವಸ್ಥಾನವು ಸುಣ್ಣದಕಲ್ಲು ಮತ್ತು ಮರಳಿನಿಂದ ನಿರ್ಮಾಣವಾಗಿದೆ. ಪ್ರತಿದಿನವೂ ದೇವಸ್ಥಾನದ ಗೋಪುರದ ಮೇಲೆ ದ್ವಜವನ್ನು ಐದು ಬಾರಿ ಹಾರಿಸಲಾಗುತ್ತದೆ, ಇದು ತನ್ನ ಸುಂದರವಾದ ಅಲೆಗಳಿಂದ ಯಾತ್ರಿಗಳನ್ನು ಸ್ವಾಗತಿಸುತ್ತದೆ.
- ಈ ದೇವಸ್ಥಾನದ ರಚನೆಯು ಅತ್ಯಂತ ಸಂಕೀರ್ಣವಾಗಿದೆ. ಇಲ್ಲಿ ಪ್ರಮುಖವಾದ ಎರಡು ದ್ವಾರಗಳಿವೆ: ಯಾತ್ರಿಗಳು ದೇವಸ್ಥಾನಕ್ಕೆ ಪ್ರವೇಶಿಸುವ ಸ್ವರ್ಗ ದ್ವಾರ, ಹಾಗೂ ಯಾತ್ರಿಗಳು ನಿರ್ಗಮಿಸುವಂತಹ ಮೋಕ್ಷ ದ್ವಾರ. ಗೋಮತಿನದಿಯು ಸಮುದ್ರದೆಡೆಗೆ ಹರಿದು ಸೇರುವ ಸಂಗಮ(ಕೂಡಿಹರಿಯುವಿಕೆ)ವನ್ನು ಜನರು ಈ ದೇವಸ್ಥಾನದಿಂದ ವೀಕ್ಷಿಸಬಹುದಾಗಿದೆ.
- ದ್ವಾರಕಾದಲ್ಲಿ, ವಸುದೇವ, ದೇವಕಿ, ಬಲರಾಮ ಹಾಗೂ ರೇವತಿ, ಸುಭದ್ರಾ, ರುಕ್ಮಿಣಿ ದೇವಿ, ಜಾಂಬವತಿ ದೇವಿ ಮತ್ತು ಸತ್ಯಭಾಮ ದೇವಿಯವರ ದೇವಾಲಯಗಳೂ ಇವೆ. ಬೆಟ್ ದ್ವಾರಕಾ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ರುಕ್ಮಿಣಿ ದೇವಿಗಾಗಿ ಒಂದು ವಿಶೇಷ ದೇವಾಲಯವೂ ಇದೆ. ಬೆಟ್ ದ್ವಾರಕಾಕ್ಕೆ ದೋಣಿಯಲ್ಲಿ ಹೋಗಬೇಕಾಗುತ್ತದೆ. ಈ ದೇವಸ್ಥಾನವು ಭಗವಾನ್ ಶ್ರೀ ಕೃಷ್ಣನು ಆಡಳಿತ ನಡೆಸಿದ್ದ ಅರಮನೆಯಂತೆಯೇ ಇದೆ.
- ಭಗವಾನ್ ದ್ವಾರಕಾನಾಥನ ತರಹವೇ ಇರುವ ದೇವರ ವಿಗ್ರಹವನ್ನು ಬೆಟ್ ದ್ವಾರಕಾದಲ್ಲಿಯೂ ಇಡಲಾಗಿದೆ. ದೇವಸ್ಥಾನವು ಅರಮನೆಯಂತೆಯೇ ಇದೆ ಮತ್ತು ಇದು ಲಕ್ಷ್ಮಿ ನಾರಾಯಣ, ತ್ರಿವಿಕ್ರಮ, ಜಾಂಬವತಿ ದೇವಿ, ಸತ್ಯಭಾಮ ದೇವಿ ಮತ್ತು ರುಕ್ಮಿಣಿ ದೇವಿಯವರ ದೇವಾಲಯಗಳನ್ನೂ ಹೊಂದಿದೆ.
ಪವಿತ್ರ ನಗರ
ಬದಲಾಯಿಸಿ- ಈ ನಗರದ ಹೆಸರು ದ್ವಾರ ಎಂಬ ಶಬ್ಧದಿಂದ ಉತ್ಪತ್ತಿಯಾಗಿದೆ ಸಂಸ್ಕೃತದಲ್ಲಿ ಇದರ ಅರ್ಥ ಬಾಗಿಲು ಅಥವಾ ದ್ವಾರ ಎಂದಾಗಿದೆ. ದ್ವಾರಕಾವನ್ನುಹಿಂದೂ ಧರ್ಮದ ಪವಿತ್ರ ನಗರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಹಾಗೂ ಬದರಿನಾಥ, ಪುರಿ, ರಾಮೇಶ್ವರಂ ಜೊತೆಯಲ್ಲಿ ಇದೂ ಸಹ 4 ಪ್ರಮುಖ ಧಾಮಗಳಲ್ಲಿ ಸೇರಿದೆ. ವಿಶೇಷವಾಗಿ ಈ ನಗರವು ವೈಷ್ಣವರಿಂದ ಗೌರವಿಸಲ್ಪಟ್ಟಿದೆ. ಕೃಷ್ಣನದೇ ಒಂದು ರೂಪವಾದ ದ್ವಾರಕಾದೀಶ ನನ್ನು ಹೊಂದಿರುವ ಜಗತ್ಮಂದಿರವೂ ದ್ವಾರಕಾ ನಗರದಲ್ಲಿ ನೆಲೆಯಾಗಿದೆ.
- ಭಗವಾನ್ ಶಿವನ 12 ಪವಿತ್ರ ದೇವಾಲಯಗಳಲ್ಲಿ ಒಂದಾದ ನಾಗೇಶ್ವರ ಜ್ಯೋತಿರ್ಲಿಂಗವು ದ್ವಾರಕಾದ ಬಳಿ ಇದೆ.ದ್ವಾರಕಾವು ದ್ವಾರಕಾ ಪೀಠವನ್ನೂ ಸಹ ಹೊಂದಿರುವ ಪ್ರದೇಶವಾಗಿದೆ (ಇದನ್ನು ಶಾರದಾ ಪೀಠ ) ಎಂದು ಕೂಡಾ ಕರೆಯುತ್ತಾರೆ), ಇದು ಆದಿ ಶಂಕರಾಚಾರ್ಯರು ಸ್ಥಾಪಿಸಿದ ಶೃಂಗೇರಿ, ಪುರಿ ಹಾಗೂ ಜ್ಯೋತಿರ್ಮಠವು ಸೇರಿದಂತೆ ನಾಲ್ಕು ಪ್ರಮುಖ ಮಠಗಳಲ್ಲಿ ಇದೂ ಒಂದು.
ಶ್ರೀ ದ್ವಾರಕಾನಾಥ ಮಹಾತ್ಯಂ
ಬದಲಾಯಿಸಿಶ್ರೀ ದ್ವಾರಕಾನಾಥ | |
ಶ್ರೀ ದ್ವಾರಕಾನಾಥ ದೇವಸ್ಥಾನ | |
ದೇವಸ್ಥಾನದ ಹೆಸರು: | ಶ್ರೀ ದ್ವಾರಕಾನಾಥ ದೇವಸ್ಥಾನ |
---|---|
ಅಡ್ಡ ಹೆಸರು: | |
ದೇವರ ಹೆಸರು: | ಕಲ್ಯಾಣ ನಾರಾಯಣನ್ |
ದೇವತೆಯ ಹೆಸರು: | ಕಲ್ಯಾಣ ನಾಚಿಯಾರ್,ರುಕ್ಮಿಣಿ ದೇವಿ |
ಪುಷ್ಕರಣಿ: | ಗೋಮತಿ ಪುಷ್ಕರಣಿ |
ವಿಮಾನಂ: | ಹೇಮಕೂಟ ವಿಮಾನಂ |
ಸ್ಥಳ | ಜಾಮ್‌ನಗರ್ |
ರಾಜ್ಯ ಮತ್ತು ದೇಶ: | ಗುಜರಾತ್, ಭಾರತ |
ಆದಿ ಶಂಕರರು ದ್ವಾರಕಾದೀಶನ ದೇವಾಲಯವನ್ನು ಭೇಟಿ ನೀಡಿದ್ದರು ಹಾಗೂ ದ್ವಾರಕಾ ಪೀಠವನ್ನು ಸ್ಥಾಪಿಸಿದ್ದರು. ಇಲ್ಲಿ ಭಗವಂತನು ಕಲ್ಯಾಣ ಕೋಲಮ್ ವೇಷಧಾರಿಯಾಗಿದ್ದು ವೈಭವಯುಕ್ತ ಮದುವೆ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದಾನೆ. ಭಗವಾನ್ ಶ್ರೀ ಕೃಷ್ಣನು ಸ್ವತಃ ಇಲ್ಲಿ ವಾಸಿಸಿದ್ದು ಆತನ ವಂಶಜರು ಈ ದೇವಾಲಯವನ್ನು ನಿರ್ಮಿಸಿದ್ದರಿಂದ ಇದು ಬಹಳ ಪವಿತ್ರವಾದ ಸ್ಥಳವಾಗಿದೆ. 108 ದಿವ್ಯ ದೇಶಂಗಳಲ್ಲಿ ಇದೂ ಒಂದಾಗಿದೆ.
ಪ್ರಸಾದ
ಬದಲಾಯಿಸಿದ್ವಾರಕಾದೀಶ ದೇವಸ್ಥಾನದಲ್ಲಿ ದಿನದಿಂದ ದಿನಕ್ಕೆ ಪ್ರಸಾದಗಳು ಬದಲಾಗುತ್ತಿರುತ್ತವೆ. ಅವುಗಳೆಂದರೆ ಸಕ್ಕರೆ ಮಿಠಾಯಿ, ಖೀರ್, ಒಣ ಹಣ್ಣುಗಳು, ಪಾನ್, ರುಚಿಯಾದ ಮತ್ತು ಪೋಷಕಾಂಶ ಭರಿತ ಆಹಾರ, ಹಣ್ಣುಗಳು, ಊಟ ಮತ್ತು ಕೇಸರಿ ಶರಬತ್.
ದರ್ಶನ, ಸೇವೆಗಳು ಮತ್ತು ಹಬ್ಬಗಳು
ಬದಲಾಯಿಸಿಭಗವಾನ್ ದ್ವಾರಕಾದೀಶನ ಹಲವಾರು ದರ್ಶನಗಳು ಮತ್ತು ಸೇವೆಗಳು ಲಭ್ಯವಿವೆ. ಅದಕ್ಕೆ ಸರಿಯಾಗಿ ವೇಷಭೂಷಣಗಳಾನ್ನು ಬದಲಾಯಿಸಲಾಗುತ್ತದೆ. ದರ್ಶನಗಳು ಹೀಗಿವೆ.
- ಮಂಗಳಾ
- ಶೃಂಗಾರ್
- ಗ್ವಾಲ್
- ರಾಜ್‌ಭೋಜ್
- ಉಥಾಪನ್
- ಭೋಗ್
- ಸಂಧ್ಯಾ ಆರತಿ
- ಶಯನ್
- ಹಿಂದೊಲ
ದ್ವಾರಕಾ ರಾಜ್ಯ
ಬದಲಾಯಿಸಿಮಹಾಭಾರತ, ಹರಿವಂಶ, ಭಾಗವತ ಪುರಾಣ, ಸ್ಕಂದ ಪುರಾಣ, ಹಾಗೂ ವಿಷ್ಣು ಪುರಾಣಗಳಲ್ಲಿ ದ್ವಾರಕಾ ನಗರವನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಹೇಳುವಂತೆ ದ್ವಾರಕಾವು ಈಗಿನ ದ್ವಾರಕಾ ನಗರದ ಬಳಿಯಲ್ಲಿಯೇ ಇದ್ದಿತು. ಆದರೆ ಅದು ಸಮುದ್ರದಲ್ಲಿ ಮುಳುಗಿ ಮರಳಿನಿಂದಾವೃತವಾಗಿದೆ.
ಸ್ಥಾಪನೆ
ಬದಲಾಯಿಸಿ- ಆ ಪ್ರದೇಶದಲ್ಲಿ ವಾಸ ಮಾಡುವ ಜನರ ಹಿತದೃಷ್ಟಿಯಿಂದ ಶ್ರೀ ಕೃಷ್ಣನು ಮಥುರಾ ನಗರದಲ್ಲಿ ಯುದ್ಧವನ್ನು ಪರಿತ್ಯಜಿಸಿದನು (ಇದರಿಂದಾಗಿ ಇದಕ್ಕೆ ರಾಂಚೋದ್ರಾಯ್ ಎಂಬ ಹೆಸರು ಬಂದಿತು)' ಹಾಗೂ ದ್ವಾರಕಾನಗರವನ್ನು ಸೃಷ್ಟಿ ಮಾಡಿದನು. ಶ್ರೀ ಕೃಷ್ಣನು ಈ ಹಿಂದೆ ಕಂಸನನ್ನು ಕೊಂದಿದ್ದನು (ಈತನು ಒಬ್ಬ ಆಕ್ರಮಣಕಾರಿ ರಾಜನಾಗಿದ್ದ, ಹಾಗೂ ಆತನ ತಾಯಿಯ ಕಡೆಯ ಸಂಬಂಧಿ) ಹಾಗೂಉಗ್ರಸೇನನನ್ನು ಮಥುರಾದ ರಾಜನನ್ನಾಗಿ ಮಾಡಿದ್ದನು (ಕಂಸನ ತಂದೆ ಹಾಗೂ ಆತನ ಅಜ್ಜ).
- 'ಕೋಪೋದ್ರಿಕ್ತನಾದ, ಕಂಸನ ಮಾವ ಜರಾಸಂದ (ಮಗಧ ದೇಶದ ರಾಜ) ಅವನ ಸ್ನೇಹಿತ ಕಲಾಯವನ್ ಜೊತೆ ಸೇರಿ ಮಥುರಾದ ಮೇಲೆ 17 ಬಾರಿ ದಂಡೆತ್ತಿ ಬಂದನು. ಜನರ ಸುರಕ್ಷಿತತೆಗಾಗಿ ಕೃಷ್ಣ ಹಾಗೂ ಯಾದವರು ಸೇರಿ ರಾಜಧಾನಿಯನ್ನು ಮಥುರಾದಿಂದ ದ್ವಾರಕಾ ನಗರಕ್ಕೆ ಬದಲಾಯಿಸಲು ತೀರ್ಮಾನಿಸಿದರು.
ನಗರದ ಗುಣಲಕ್ಷಣಗಳು
ಬದಲಾಯಿಸಿ- ಭಗವಾನ್ ಕೃಷ್ಣನ ಆದೇಶದಂತೆ ವಿಶ್ವಕರ್ಮನು ಈ ನಗರವನ್ನು ನಿರ್ಮಿಸಿದನು. ಸೌರಾಷ್ಟ್ರದ ಪಶ್ಚಿಮ ತೀರಗಳ ಹತ್ತಿರದ ಸಮುದ್ರದಿಂದ ಈ ಪ್ರದೇಶವನ್ನು ಮೇಲಕ್ಕೆತ್ತಲಾಗಿದೆ. ಈ ನಗರವನ್ನು ಇಲ್ಲಿ ಸರಿಯಾಗಿ ಯೋಚಿಸಿ ನಿರ್ಮಿಸಲಾಯಿತು. ಗೋಮತಿ ನದಿಯ ದಂಡೆಯ ಮೇಲಿರುವ ದ್ವಾರಕಾನಗರವನ್ನು ಸರಿಯಾಗಿ ನಕ್ಷೆತಯಾರಿಸಿ ನಿರ್ಮಿಸಲಾಗಿದೆ. ಈ ನಗರವನ್ನು ದ್ವಾರಾಮತಿ, ದ್ವಾರಾವತಿ ಮತ್ತು ಕುಶಸ್ಥಲಿ ಎಂದೂ ಕರೆಯಲಾಗುತ್ತದೆ.
- ಇದು ಸುವ್ಯವಸ್ಥಿತವಾಗಿ ರಚನೆಯಾದ ಆರು ಕ್ಷೇತ್ರಗಳನ್ನು ಹೊಂದಿದೆ, ವಸತಿ ಪ್ರದೇಶಗಳು, ವಾಣಿಜ್ಯ ವಲಯಗಳು, ಅಗಲವಾದ ರಸ್ತೆಗಳು, ವ್ಯಾಪಾರಿ ಮಳಿಗೆಗಳ ಸಂಕೀರ್ಣಗಳು, ಅರಮನೆಗಳು ಹಾಗೂ ಹಲವಾರು ಸಾರ್ವಜನಿಕರಿಗೆ ಉಪಯೋಗವಾಗುವಂತವುಗಳೂ ಇವೆ. "ಸುಧರ್ಮ ಸಭಾ" ಎಂದು ಕರೆಯಲ್ಪಡುವ ಒಂದು ವಿಶಾಲವಾದ ಕೋಣೆಯನ್ನು ಸಾರ್ವಜನಿಕ ಸಭೆಗಳನ್ನು ನಡೆಸುವುದಕ್ಕಾಗಿ ನಿರ್ಮಿಸಲಾಗಿದೆ. ಒಂದು ಒಳ್ಳೆಯ ಸಮುದ್ರದ ಬಂದರನ್ನು ಹೊಂದಿರುವುದು ಕೂಡಾ ಈ ನಗರದ ಹೆಗ್ಗಳಿಕೆಯಾಗಿದೆ.
- ಈ ನಗರವು ಬಂಗಾರ. ಬೆಳ್ಳಿ ಮತ್ತು ಇತರೆ ಬೆಲೆಬಾಳುವ ಕಲ್ಲುಗಳನ್ನು ಹೊಂದಿದ 700,000 ಅರಮನೆಗಳನ್ನು ಹೊಂದಿದೆ. ಭಗವಾನ್ ಕೃಷ್ಣನ 16108 ಪತ್ನಿಯರೂ ತಮ್ಮದೇ ಅರಮನೆಗಳನ್ನು ಹೊಂದಿದ್ದರು. ಇದಲ್ಲದೆ, ಎಲ್ಲ ಕಾಲದ ಹೂವುಗಳು ಹಾಗೂ ಸುಂದರ ಸರೋವರಗಳನ್ನು ಹೊಂದಿರುವಂತಹ ಮನೋಹರವಾದ ಉದ್ಯಾನಗಳನ್ನು ಈ ನಗರವು ಹೊಂದಿದೆ.
ಸಮುದ್ರದಲ್ಲಿ ಮುಳುಗಿದ್ದು
ಬದಲಾಯಿಸಿ- ಸುಮಾರು 36 ವರ್ಷಗಳ ಕಾಲ ನಡೆದ ಮಹಾಭಾರತ ಯುದ್ಧದ (3138 BC) ನಂತರ ಕೃಷ್ಣನು ಭೂಮಿಯನ್ನು ಬಿಟ್ಟು ವೈಕುಂಠಕ್ಕೆ ತೆರಳಿದನು, ಹಾಗೂ ವಾದವಿವಾದಗಳಿಂದ ಅವರವರ ನಡುವೆಯೇ ಕದನ ನಡೆದು ಪ್ರಮುಖ ಯಾದವ ಮುಖಂಡರು ನಿಧನಹೊಂದಿದರು, ಅರ್ಜುನನು ದ್ವಾರಕಾ ನಗರಕ್ಕೆ ಹೋಗಿ ಕೃಷ್ಣನ ಮೊಮ್ಮಕ್ಕಳು ಹಾಗೂ ಯಾದವರ ಪತ್ನಿಯರನ್ನು ಸುರಕ್ಷಿತತೆಗಾಗಿ ಹಸ್ತಿನಾಪುರಕ್ಕೆ ಕರೆತಂದನು. ಅರ್ಜುನನು ದ್ವಾರಕಾ ನಗರವನ್ನು ಬಿಟ್ಟ ತಕ್ಷಣ ಅದು ಸಮುದ್ರದಲ್ಲಿ ಮುಳುಗಿ ಹೋಯಿತು. ನಂತರದ್ದು ಅರ್ಜುನನಿಂದ ನೀಡಲ್ಪಟ್ಟ ಲೆಕ್ಕಾಚಾರವಾಗಿದೆ, ಅದು ಮಹಾಭಾರತದಲ್ಲಿ ಸಿಗುತ್ತದೆ:
...imposed on it by nature. The sea rushed into the city. It coursed through the streets of the beautiful city. The sea covered up everything in the city. I saw the beautiful buildings becoming submerged one by one. In a matter of a few moments it was all over. The sea had now become as placid as a lake. There was no trace of the city. Dwaraka was just a name; just a memory.
- ವಿಷ್ಣು ಪುರಾಣದಲ್ಲಿ ಸಹ ದ್ವಾರಕಾವು ಮುಳುಗಿದ ಬಗ್ಗೆ ಉಲ್ಲೇಖವಿದೆ,
On the same day that Krishna departed from the earth the powerful dark-bodied Kali Age descended. The oceans rose and submerged the whole of Dwarka.
ಇತ್ತೀಚೆಗಿನ ಪುರಾತತ್ವ ಇಲಾಖೆಯ ಶೋಧನೆಗಳು
ಬದಲಾಯಿಸಿ- ಮೇ 19, 2001ರಲ್ಲಿ, ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಂತ್ರಿ ಮುರಳಿ ಮನೋಹರ್ ಜೋಶಿಯವರು ಖಂಬತ್ ಕೊಲ್ಲಿಯಲ್ಲಿ ಕೆಲವು ಅವಶೇಷಗಳು ಸಿಕ್ಕಿರುವುದಾಗಿ ಘೋಷಿಸಿದರು. ಈ ಅವಶೇಷಗಳು, ಗಲ್ಫ್ ಆಫ್ ಕಲ್ಚರಲ್ ಕಾಂಪ್ಲೆಕ್ಸ್ ಎಂದು ತಿಳಿದು ಬಂದಿವೆ (GKCC). ಇವು ಗುಜರಾತ್ ಪ್ರಾಂತ್ಯದ ತೀರದಲ್ಲಿ ಒಂಭತ್ತು-ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ ಸುಮಾರು 40ಮೀ ಆಳದ ಸಮುದ್ರದ ತಳಭಾಗದಲ್ಲಿ ಇವೆ.
- ಧ್ವನಿಗತಿ ವಿಜ್ಞಾನದ ತಂತ್ರಗಳಿಂದ ಸುಮಾರು ಆರು ತಿಂಗಳ ಸಂಶೋಧನೆಯ ನಂತರ ಡಿಸೆಂಬರ್ 2000ದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT)ಯ ಒಂದು ತಂಡವು ಈ ಪ್ರದೇಶವನ್ನು ಕಂಡುಹಿಡಿಯಿತು. ಆದಾಗ್ಯೂ, NIOT ವಿಜ್ಞಾನಿಗಳ ವ್ಯಾಖ್ಯಾನಗಳನ್ನು ಹಲವಾರು ಸಮುದ್ರದ ಭೂವಿಜ್ಞಾನ ಶಾಸ್ತ್ರಜ್ಞರು ಅಲ್ಲಗಳೆದಿದ್ದಾರೆ.
- ಮಾನವ ನಿರ್ಮಿತ ವಸ್ತುಗಳನ್ನು ಹೊರಗೆತ್ತಿ ಪುನಶ್ಚೇತನಗೊಳಿಸುವುದನ್ನು ಒಳಗೊಂಡಂತೆ ಅದೇ ಇನ್‌ಸ್ಟಿಟ್ಯೂಟ್ ಮತ್ತೆ ನವೆಂಬರ್ 2001ರಲ್ಲಿ ಸಂಶೋಧನಾ ಕಾರ್ಯವನ್ನು ಕೈಗೆತ್ತಿಕೊಂಡಿತು. 2003 ಮತ್ತು 2004ರಲ್ಲಿ NIOT ತಂಡವು ಖಂಬತ್ ಕೊಲ್ಲಿಯಲ್ಲಿ ನೀರಿನ ತಳಭಾಗದಲ್ಲಿ ಒಳಹೊಕ್ಕು ಪರಿಶೋಧನೆ ನಡೆಸಿದರು, ಹಾಗೂ ಮಡಿಕೆಯ ಚೂರುಗಳೆಂದು ಗುರುತಿಸಲಾದ ಮಾದರಿಗಳನ್ನು ಆಕ್ಸ್‌ಫರ್ಡ್, UK, ಮತ್ತು ಹಾನೋವರ್, ಜರ್ಮನಿಯ ಪ್ರಯೋಗಶಾಲೆಗಳಿಗೆ ಹಾಗೂ ಭಾರತದ ಹಲವಾರು ಇನ್‌ಸ್ಟಿಟ್ಯೂಷನ್‌ಗಳಿಗೆ ಕಳುಹಿಸಲಾಯಿತು.
- ಅನಿರ್ಣಾಯಕ ಶೋಧನೆಗಳು ಹೇಗಾದರೂ, ಗಲ್ಫ್ ಖಂಬತ್‌ನಲ್ಲಿ (ಕ್ಯಾಂಬೆ) ದೊರೆತ ಆರ್ಟಿಫ್ಯಾಕ್ಟ್‌ಗಳ ಅತಿ ಪುರಾತನವಾದ ಮಾದರಿಗಳು ಮಾನವ ನಿರ್ಮಿತವಾದ ಆರ್ಟಿಫ್ಯಾಕ್ಟ್ ಅಥವಾ ಮಡಕೆ ಚೂರುಗಳು ಅಲ್ಲ ಎಂದು ಚಚಿಸಲಾಗಿದೆ, ಆದರೆ ಜಿಯೋಫ್ಯಾಕ್ಟ್ ಮತ್ತು ಸಂಬಂಧಿತ ವಸ್ತುಗಳು ಸ್ವಾಭಾವಿಕವಾಗಿ ದೊರೆತವೆಂದು ಹೇಳಲಾಗಿದೆ.
- ಪುರಾತತ್ವ ಶಾಸ್ತ್ರಜ್ಞರ ಪ್ರಕಾರ, "ಅವಶೇಷಗಳು" ಸ್ವಾಭಾವಿಕವಾಗಿ ಬಂಡೆಯ ರಚನೆಗಳು ಮತ್ತು ದೋಷಯುಕ್ತ ರಿಮೋಟ್ ಸೆನ್ಸಿಂಗ್ ಉಪಕರಣಗಳು ಹಾಗೂ ಪುನಃಸ್ವಾಧೀನ ಪಡಿಸಿದ "ಆರ್ಟಿಫ್ಯಾಕ್ಟ್"ಗಳು ಜಿಯೋಫ್ಯಾಕ್ಟ್‌ಗಳು ಅಥವಾ ಇತರೆ ಹೊರಗಿನ ವಸ್ತುಗಳು, ಕ್ಯಾಂಬೆ ಗಲ್ಫ್‌ನ ಭಾರೀ ದೊಡ್ಡ ಅಲೆಗಳು ಪರಿಚಯಿಸಿದ ವಸ್ತುಗಳಾಗಿವೆ. ಕೊಲ್ಲಿಯ ತಳಭಾಗದಲ್ಲಿ ಚಿತ್ರಗಳನ್ನು ತೆಗೆಯಲು ಬಳಸಿದ ಪಾರ್ಶ್ವ ಸ್ಕ್ಯಾನ್ ಜಲಾಂತರ ಶಬ್ದಶೋಧಕ ಸಲಕರಣೆಯು ದೋಷಯುಕ್ತವಾಗಿರಬಹುದು ಮತ್ತು ನೀಡಿದ ಆಧಾರಿತ ಸಾಕ್ಷ್ಯಗಳು ಸಂಪೂರ್ಣವಾಗಿ ಸಾಂದರ್ಭಿಕವಾಗಿರ ಬಹುದು.[೩] . ಕೆಲ ವಸ್ತುಗಳ ಮತ್ತು ಭೂಕಂಪಗಳಿಗೆ ಸಂಬಂಧಿಸಿದ ದತ್ತಾಂಶಗಳ ಬಗ್ಗೆ ಪುರಾತನ ವಸ್ತುಶಾಸ್ತ್ರಜ್ಞರು ಹಾಗು ಕಾರ್ಯ ನಿರತ ವ್ಯಾಖ್ಯಾನಕರ್ತರು ನೀಡುವ ಅರ್ಥ ವಿವರಣೆಗಳು ವಿಭಿನ್ನವಾಗಿವೆ.
ಬೆಟ್ ದ್ವಾರಕ
ಬದಲಾಯಿಸಿ- ಬೆಟ್ ದ್ವಾರಕವು ಭವಾನ್ ಕೃಷ್ಣನಿಗೆ ಅರ್ಪಣೆಯಾಗಿರುವ ಒಂದು ಪ್ರಖ್ಯಾತ ದೇವಸ್ಥಾನ ಮತ್ತು ಪುರಾತನ ಹಿಂದು ಸಂಪ್ರದಾಯದಲ್ಲಿ ಅತಿ ಮಹತ್ವದ ಸ್ಥಾನ ಪಡೆದಿದೆ. ಇದು ಹಾಗೂ ಇತರೆ ಕಡಲ ತೀರಗಳು ಸಾಕಷ್ಟು ಪ್ರಾಚೀನ ಅವಶೇಷಗಳನ್ನು ಹೊಂದಿವೆ, ಮುಖ್ಯವಾಗಿ ಒಡೆದ ಗಡಿಗೆ ಚೂರುಗಳು, ಇದರಿಂದಾಗಿ ಕ್ರಿಶ್ಚಿಯನ್ ಎರಾದಲ್ಲಿ ಮೆಡಿಟರೇನಿಯನ್ ದೇಶಗಳಲ್ಲಿ ಇದ್ದ ಕಡಲ ತೀರದ ವ್ಯಾಪಾರ ಹಾಗೂ ವಾಣಿಜ್ಯಗಳು ತಿಳಿದುಬರುತ್ತವೆ.[೪] ಈ ಆಡಂಬರದ ಬಂದರು ಹಾಗೂ ಧಾರ್ಮಿಕ ರಾಜಧಾನಿಯು ಕೃಷ್ಣನ ಸಾವಿನ ನಂತರ ಸಮುದ್ರದಲ್ಲಿ ಮುಳುಗಿ ಹೋಯಿತೆಂದು ನಂಬಲಾಗಿದೆ.[೪] ನಿಜವಾದ ಸಾಂಸ್ಕೃತಿಕ ಕ್ರಮಗಳನ್ನು ಪತ್ತೆಹಚ್ಚಲು ಪ್ರಯೋಗಾತ್ಮಕವಾಗಿ ಕೆಲವು ಗುಂಡಿಗಳನ್ನು ತೆಗೆದು ಪುರಾತತ್ವ ಶಾಸ್ತ್ರಜ್ಞರ ಒಂದು ತಂಡವು ಸಮುದ್ರತೀರದ ಹಾಗೂ ಆಂತರಿಕ-ಉಬ್ಬರವಿಳಿತದ ಪ್ರದೇಶಗಳಲ್ಲಿ ಸಂಶೋಧನೆ ನಡೆಸಿದೆ. ಬಹಳ ದೊಡ್ಡ ಸಂಖ್ಯೆಯಲ್ಲಿ ಪುರಾತನ ವಸ್ತುಗಳು ದೊರೆತ ಪ್ರಮುಖ ಕ್ಷೇತ್ರಗಳೆಂದರೆ, ಬೆಟ್ ದ್ವಾರಕಾ-I, II, VI, ಮತ್ತು IX.
- ಬೆಟ್ ದ್ವಾರಕಾದಲ್ಲಿ ದೊರೆತ ಅವಶೇಷಗಳನ್ನು ಎರಡು ವಿಸ್ತಾರವಾದ ಅವಧಿಗಳಿಗೆ ವಿಭಾಗಿಸಲಾಗಿದೆ: ಮೂರು-ತಲೆಗಳುಳ್ಳ ಮೊಟಿಫ್ ಪ್ರಾಣಿಯ ಕೆತ್ತನೆ ಇರುವ ಒಂದು ಕಾಂಚ್ ಶೆಲ್‌ನ ಚಿಕ್ಕ ಸೀಲ್ ಒಳಗೊಂಡಿರುವ ಮಾನವನಿಗಿಂತ ಮೊದಲಿನ ಇತಿಹಾಸದ ಅವಧಿ[೫],
- ಎರಡು ಕೆತ್ತಿದ ಪದಗಳು, ಒಂದು ತಾಮ್ರದ ಮೀನಿನ ಗಾಳ ಮತ್ತು ಹರಪ್ಪನ್(circa 1700-1400 BC) ಕೊನೆಯ ಭಾಗದ ಮಡಿಕೆಗಳು ಹಾಗೂ ನಾಣ್ಯಗಳು ಮತ್ತು ಮಡಿಕೆಗಳನ್ನು ಒಳಗೊಂಡ ಐತಿಹಾಸಿಕ ಅವಧಿ. ತೀರದಲ್ಲಿನ ಹಾಗೂ ಉಬ್ಬರವಿಳಿತಗಳ ಪ್ರದೇಶಗಳಲ್ಲಿ ನಡೆಸಿದ ಸಂಶೋಧನೆಗಳಿಂದ ಎತ್ತರವಾದ ಅಲೆಗಳು ಅಪ್ಪಳಿಸಿ ಕೆಲ ಸ್ಥಳಗಳು ಮುಳುಗಿದ್ದರಿಂದ ಬೆಟ್ ದ್ವಾರಕಾ ದ್ವೀಪದ ತೀರ ರೇಖೆಯು ಬದಲಾವಣೆ ಹೊಂದಿರುವುದು ಕಂಡು ಬರುತ್ತದೆ.
- ಬೆಟ್ ದ್ವಾರಕಾದ ಸಮೀಪದಲ್ಲಿ ನಡೆಸಿದ ಕಡಲ ತೀರದಾಚೆಗಿನ ಸಂಶೋಧನೆಗಳಿಂದ ತ್ರಿಭುಜಾಕಾರದ, ಕೊಂಡಿಪಾಶಗಳ ಮತ್ತು ಉಂಗುರಾಕಾರಾದ ಕಲ್ಲಿನ ಲಂಗರುಗಳು ಬೆಳಕಿಗೆ ಬಂದಿವೆ. ಅವುಗಳು ಅಲ್ಲಿಯೇ ಲಭ್ಯವಿರುವ ಬಂಡೆಗಳಿಂದ ಮಾಡಲಾಗಿದೆ, ಹಾಗೂ ಅವುಗಳ ಅವಧಿ ಕೂಡಾ ದ್ವಾರಕಾ ಮತ್ತು ಇತರೆ ಪ್ರದೇಶಗಳಲ್ಲಿ ದೊರೆತವುಗಳ ಅವಧಿಯೇ ಆಗಿದೆ. ಇತ್ತೀಚೆಗೆ, ರೋಮನ್ ಪುರಾತನ ವಸ್ತುಗಳಲ್ಲಿ ಪ್ರಾಚೀನ ಜಾಡಿಗಳ ಚೂರುಗಳೂ ಒಳಗೊಂಡಿವೆ ಮತ್ತು ಸೀಸದ ಪಟ್ಟಿ ಮತ್ತು ಸೀಸದ ಲಂಗರುಗಳೂ ಪತ್ತೆಯಾಗಿವೆ.
- ಬೆಟ್ ದ್ವಾರಕಾ ನೀರಿನಲ್ಲಿ ರೋಮನ್ ಅವಧಿಯಲ್ಲಿ ನಾಶವಾದ ವಸ್ತುಗಳಿದ್ದ ಸೂಚನೆಗಳಿವೆ. ಬೆಟ್ ದ್ವಾರಕಾ ದ್ವೀಪದಲ್ಲಿ ಪುರಾತತ್ವ ಪರಿಶೋಧನೆಗಳಿಂದ ಭಾರತವು ಪಶ್ಚಿಮ ದೇಶಗಳೊಡನೆ ಕಡಲಾಚೆಯ ವಾಣಿಜ್ಯ ಹಾಗೂ ವ್ಯಾಪಾರ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಬೆಟ್ ದ್ವಾರಕಾದಲ್ಲಿ ದೊರೆತ ಶೋಧನೆಗಳು ಇಂಡೋ-ರೋಮನ್ ವಾಣಿಜ್ಯಕಾಲವನ್ನು ಸ್ಪಷ್ಟಪಡಿಸುತ್ತವೆ. ಭಾರತವು ನಾಲ್ಕನೆಯ ಶತಮಾನ BCE ಯಿಂದ 4ನೆಯ ಶತಮಾನ CE ವರೆಗೂ ರೋಮ್‌ನ ಜೊತೆಯಲ್ಲಿ ಸಮುದ್ರಮಾರ್ಗದ ವ್ಯಾಪಾರವನ್ನು ಸಕ್ರಿಯವಾಗಿ ಹೊಂದಿತ್ತು. *ಈ ಶೋಧನೆಗಳು ಒಂದನೆಯ ಶತಮಾನ BCE ಯಿಂದ 2ನೆಯ ಶತಮಾನ CEಯವರೆಗಿನ ಅವಧಿಯ ಮೇಲೆ ಕೇಂದ್ರೀಕರಿಸುತ್ತವೆ. ಬೆಟ್ ದ್ವಾರಕಾದಲ್ಲಿನ ಆಂಫೋರಾದ ಶೋಧನೆಯು ಭಾರತದ ಸಮುದ್ರಮಾರ್ಗದ ವ್ಯಾಪಾರದ ಅರ್ಥವತ್ತಾದ ವಿವರಣೆ ನೀಡುತ್ತದೆ. ಅಲ್ಲಿ ಇರುವ ಏಳು ಆಂಫೋರಾಗಳಿಂದ ಕಪ್ಪು ಪದರಗಳು ಕಾಣಿಸುತ್ತವೆ. ಈ ಸರಕುಗಳನ್ನು ಮುಖ್ಯವಾಗಿ ವೈನ್ ಹಾಗೂ ಆಲೀವ್ ಎಣ್ಣೆಗಳನ್ನು ರೋಮನ್ ಸಾಮ್ರಾಜ್ಯದಿಂದ ರಫ್ತುಮಾಡಲು ಬಳಸಲಾಗುತ್ತಿತ್ತು; ಇವು ಬಹುಶಃ ವೈನ್ ಆಂಫೋರಾಗಳಾಗಿದ್ದವು.
- ಬಹುದೊಡ್ಡ ಮೊತ್ತದ ಆಂಫೋರಾ ಅವಶೇಷಗಳ ಶೋಧನೆಯಿಂದ ಬೆಟ್ ದ್ವಾರಕಾವು ಕ್ರಿಶ್ಚಿಯನ್ ಎರಾದ ಪ್ರಾರಂಭದ ಶತಮಾನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿತ್ತೆಂದು ತಿಳಿದು ಬರುತ್ತದೆ.[೪] ಸಿಕ್ಕ ಅವಶೇಷಗಳು ರೋಮ ನ್ ವ್ಯಾಪರದ ಸಮಯದಲ್ಲಿ ಬಳಸಿದ ವಸ್ತುಗಳೆಂಬ ಸಾಧ್ಯತೆ ಕಂಡುಬರುತ್ತದೆ.[೪] ರೋಮನ್ ಆಂಫೋರಾಗಳು ಇರುವುದು ರೋಮನ್ ಹಡಗುಗಳು ಬೆಟ್ ದ್ವಾರಕಾವನ್ನು ಹಿಂದೆ ಸೂಚಿಸಿದ್ದಕ್ಕಿಂತಲೂ ಬೇಗ ತಲುಪಿದ್ದವು ಎಂದು ತಿಳಿದು ಬರುತ್ತದೆ. *ಲಂಗರುಗಳನ್ನೊಳಗೊಂಡು ಪುರಾತತ್ವ ಇಲಾಖೆಯ ಶೋಧನೆಗಳಿಂದಾಗಿ ಬಂದರುಗಳು, ಬಂದರಿನ ಅಥವಾ ಕೆರೆ ರಕ್ಷಣೆಗಾಗಿ ಸಮುದ್ರದೊಳಕ್ಕೆ ಬಾಚಿಕೊಂಡು ಹೋಗಿರುವ ಬಂದರಿನ ಒಡ್ಡುಗಳು ಮತ್ತು ಲಂಗರಿಳಿಸುವಿಕೆಯ ಸ್ಥಳಗಳು ಹಾಗೂ ಭಾರತೀಯ ಪಶ್ಚಿಮ ತೀರಗಳು ಇದ್ದುದು ಕಂಡು ಬರುತ್ತದೆ. ಬೆಟ್ ದ್ವಾರಕಾದಲ್ಲಿ ಈಗ ಯಾವುದೇ ಪುರಾತನ ಬಂದರಿನ ಅಥವಾ ಕೆರೆ ರಕ್ಷಣೆಗಾಗಿ ಸಮುದ್ರದೊಳಕ್ಕೆ ಬಾಚಿಕೊಂಡು ಹೋಗಿರುವ ಬಂದರಿನ ಒಡ್ಡು ಉಳಿದಿಲ್ಲವಾದರೂ, ಕಲ್ಲಿನ ಲಂಗರುಗಳು ಸಿಕ್ಕಿರುವುದರಿಂದ ದೋಣಿಗಳ ಲಂಗರಿಳಿಸುವಿಕೆಯು ಪರಿಣಾಮಕಾರಿಯಾಗಿ ಉಪಯೋಗಿಸಲ್ಪಡುತ್ತಿತ್ತು ಎಂಬುದು ತಿಳಿದು ಬರುತ್ತದೆ.[೬]
- ಬೆಟ್ ದ್ವಾರಕಾದಲ್ಲಿ ದೊರೆತ ಬಹು ದೊಡ್ಡ ಸಂಖ್ಯೆಯ ಹಾಗೂ ವೈವಿದ್ಯಮಯ ಲಂಗರುಗಳು ಇಲ್ಲಿ ಪುರಾತನ ಕಾಲದಲ್ಲಿ ಪ್ರಮುಖವಾದ ಬಂದರು ಇದ್ದುದನ್ನು ಸೂಚಿಸುತ್ತವೆ. ಬೆಟ್ ದ್ವಾರಕಾ ಪ್ರದೇಶವು ದೊಡ್ಡ ಬಿರುಗಾಳಿಗಳು ಮತ್ತು ಚಂಡಮಾರುತಗಳಿಂದ ರಕ್ಷಿಸಲ್ಪಟ್ಟುದರಿಂದ ಇದು ಲಂಗರಿಳಿಸುವಿಕೆಗೆ ಅತಿ ಅನುಕೂಲವಾದ ಸ್ಥಳವಾಗಿತ್ತು. MAUನಿಂದ ಒಪ್ಪಿಸಲ್ಪಟ್ಟ ದ್ವಾರಕಾ ಮ್ಯೂಸಿಯಂನ ಪ್ರಸ್ತಾಪದಲ್ಲಿ, ಭೇಟಿ ನೀಡುವ ಜನರು ಜಲಾಂತರ ಆಕ್ರಿಲಿಕ್ ಕೊಳವೆಗಳಿಂದಾಗಿ ಗಾಜಿನ ಕಿಟಕಿಗಳ ಮೂಲಕ ನಗರದ ಅವಶೇಷಗಳನ್ನು ನೋಡುವ ಯೋಜನೆಯೂ ಒಳಗೊಂಡಿ ದೆ. ಗುಜರಾತ್ ರಾಜ್ಯ ಸರ್ಕಾರ & ಗುಜರಾತ್ ಪ್ರವಾಸೋದ್ಯಮ ಇಲಾಖೆಯು ಈ ಪ್ರಸ್ತಾಪವನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. (ಸುಮಾರು ಎರಡು ದಶಕಗಳಿಂದ). ಅದು ಪೂರ್ಣಗೊಂಡರೆ, ಸಮುದ್ರದ ಕೆಳಗೆ ನಿರ್ಮಿಸಿದ ಮೊದಲ ವಸ್ತುಸಂಗ್ರಹಾಲಯವಾಗುತ್ತದೆ.
ಸಂಯೋಜನೆಗಳು
ಬದಲಾಯಿಸಿಮೀರಾಬಾಯಿ, ಸೂರ್‌ದಾಸ್ ಇವರುಗಳು ದ್ವಾರಕಾದೀಶನ ಬಗೆಗೆ ಹಲವಾರು ಹಾಡುಗಳನ್ನು ಸಂಯೋಜಿಸಿದ್ದಾರೆ. ಆಳ್ವಾರ್‌ಗಳಾದ ತಿರುಮಲೈಸಾಯಿ ಆಳ್ವಾರ್, ನಮ್ಮಾಳ್ವಾರ್, ಪೆರಿಯಳ್ವಾರ್, ಅಂದಾಲ್, ತೊಂಡರಡಿಪ್ಪೊಡಿ ಆಳ್ವಾರ್, ತಿರುಮಂಗಾಯ್ ಆಳ್ವಾರ್ ಇವರುಗಳು ತಮಿಳಿನಲ್ಲಿ ದ್ವಾರಕಾನಾಥನನ್ನು ಹೊಗಳಿ ಹಾಡುಗಳನ್ನು ಹೇಳಿದ್ದಾರೆ.
ಪ್ರೇಕ್ಷಣೀಯ ಸ್ಥಳಗಳು
ಬದಲಾಯಿಸಿ- ನಾಗೇಶ್ವರ ದೇವಸ್ಥಾನ, ದ್ವಾರಕ - 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಬಹಳ ಪ್ರಖ್ಯಾತ ಶಿವನ ದೇವಸ್ಥಾನ
- ಶ್ರೀ ಸ್ವಾಮಿನಾರಾಯಣ ದೇವಸ್ಥಾನ - ದ್ವಾರಕಾ
- ರುಕ್ಮಿಣಿ ಹ್ರಿದ್ - 7 ಕೊಳಗಳು ಸೇರಿರುವುದು.
- ಬ್ರಹ್ಮ ಕುಂಡ್.
- ದ್ವಾರಕಾ ಪೀಠ
- ಬೆಟ್ ದ್ವಾರಕಾ, ದ್ವಾರಕಾದ ಬಳಿ ಇರುವ ಒಂದು ಚಿಕ್ಕ ದ್ವೀಪ
- ಸೋಮನಾಥ ದೇವಸ್ಥಾನ ಭಗವಾನ್ ಶಿವನ ಪ್ರಖ್ಯಾತ ದೇವಸ್ಥಾನ
ಆಕರಗಳು
ಬದಲಾಯಿಸಿ- ↑ "Falling Rain Genomics, Inc - Dwarka". Archived from the original on 2008-03-31. Retrieved 2010-04-19.
- ↑ GRIndia
- ↑
- ವಿಟ್ಜೆಲ್, ಮೈಕೇಲ್, 2006, Rama’s realm: Indocentric rewritings of early South Asian archaeology and history in Fagan, G. G., ed., Archaeological Fantasies. ರೂಟ್ಲೆಡ್ಚ್ ಟೇಲರ್, ಮತ್ತು ಫ್ರಾನ್ಸಿನ್ ಗ್ರೂಪ್, ನ್ಯೂಯಾರ್ಕ್ ISBN 0-415-30593-4.
- ↑ ೪.೦ ೪.೧ ೪.೨ ೪.೩ •
- ಗೌರ್, ಎ., ಸುಂದರೇಶ್, ಎಸ್. ತ್ರಿಪಾಠಿ. 2005. Evidence for Indo-Roman trade from Bet Dwarka Waters, west coast of India, International Journal of Nautical Archaeology 35: 117-127.
- ↑ ರಾವ್, ಎಸ್.ಆರ್., (1994). New Frontiers of Archaeology, ಮುಂಬಯಿ: ಪಾಪ್ಯುಲರ್ ಪ್ರಕಾಶನ, ISBN 81-7154-689-7, p.70
- ↑ • ಗೌರ್, ಎ. ಎಸ್., ಕೆ. ಎಚ್. ವೋರಾ. 2007 Ancient technology of jetties and anchoring points along the west coast of India, Current Science 93.7: 986-91.
ಹೆಚ್ಚಿನ ಮಾಹಿತಿಗಾಗಿ
ಬದಲಾಯಿಸಿ- ಎಸ್. ಆರ್. ರಾವ್, The Lost City of Dvaraka ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಶಿಯಾನೊಗ್ರಫಿ (1999) ISBN 81-86471-48-0
- ಎಸ್. ಆರ್. ರಾವ್, Marine Archaeology in India, ದೆಹಲಿ, ಪಬ್ಲಿಕೇಶನ್ಸ್ ವಿಭಾಗ (2001) ISBN 81-230-0785-X.
- ಎ. ಎಸ್. ಗೌರ್, Sundaresh and Sila Tripati, "An ancient harbour at Dwarka: Study based on the recent underwater explorations", Current Science, Indian Academy of Sciences (ಮೇ 10, 2004). On line, .pdf format.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಕಗದ್ ಮಂದಿರದ ಅಧಿಕೃತ ವೆಬ್ಸೈಟ್ , ದ್ವಾರಕಾ
- ಶ್ರೀ ಕೃಷ್ಣನ ದೇವಸ್ಥಾನ, ದ್ವಾರಕಾ Archived 2009-02-19 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಶ್ವಕರ್ಮ, ಕಟ್ಟಡ ನಿರ್ಮಾಣದ ದೇವತೆ & ದ್ವಾರಕಾ ನಗರ Archived 2007-09-28 ವೇಬ್ಯಾಕ್ ಮೆಷಿನ್ ನಲ್ಲಿ.
- ದ್ವಾರಕಾ ನಗರದಲ್ಲಿರುವ ಜಗತ್ ಮಂದಿರದ ಅಧಿಕೃತ ವೆಬ್ಸೈಟ್ (ದ್ವಾರಕಾದೀಶ ದೇವಸ್ಥಾನ)
- ಇಸ್ಕಾನ್ Archived 2007-11-12 ವೇಬ್ಯಾಕ್ ಮೆಷಿನ್ ನಲ್ಲಿ.
- ದ್ವಾರಕಾದ 150 ಫೋಟೋಗಳು , 1280x960
- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಶಿಯಾನೊಗ್ರಫಿ Archived 2009-01-12 ವೇಬ್ಯಾಕ್ ಮೆಷಿನ್ ನಲ್ಲಿ.
- ದ್ವಾರಕಾ ತಲುಪುವುದು ಹೇಗೆ
- 4 ಧಾಮಗಳು, ದ್ವಾರಕಾ ಧಾಮ Archived 2014-02-10 ವೇಬ್ಯಾಕ್ ಮೆಷಿನ್ ನಲ್ಲಿ.
- ಪವಿತ್ರ ತಾಣಗಳು, ದ್ವಾರಕಾ
- ದ್ವಾರಕಾ Archived 2006-08-10 ವೇಬ್ಯಾಕ್ ಮೆಷಿನ್ ನಲ್ಲಿ.
- ಇತಿಹಾಸದಲ್ಲಿದೆ. ದ್ವಾರಕಾವು ಸುನಾಮಿಯಿಂದ ಮುಳುಗಿದೆ!
- ದ್ವಾರಕಾ
- ದ್ವಾರಕಾದ ದಂತಕಥೆ
- ದ್ವಾರಕಾ
- ದ್ವಾರಕಾ ದೇವಸ್ಥಾನ Archived 2010-10-29 ವೇಬ್ಯಾಕ್ ಮೆಷಿನ್ ನಲ್ಲಿ.
- ದ್ವಾರಕಾ
- Submergence of Dwarka, p.22-25 Archived 2006-12-13 ವೇಬ್ಯಾಕ್ ಮೆಷಿನ್ ನಲ್ಲಿ. (PDF)
- Marine Archaeology in the gulf of Khambat Archived 2008-03-28 ವೇಬ್ಯಾಕ್ ಮೆಷಿನ್ ನಲ್ಲಿ.
- S.R. Rao's speech and talk(mp3)about Dwarka experiences on DeshGujarat.Com