ತೋಟಾ (ಸಿಡಿಮದ್ದು) ಉತ್ಕ್ಷೇಪಕ (ಗುಂಡು, ಸಿಡಿಗುಂಡು), ನೋದಕ ವಸ್ತು (ಸಾಮಾನ್ಯವಾಗಿ ಧೂಮರಹಿತ ಪುಡಿ ಅಥವಾ ಕಪ್ಪುಪುಡಿ) ಮತ್ತು ದಹ್ಯ ಸಾಧನವನ್ನು ಲೋಹದ, ಕಾಗದದ ಅಥವಾ ಪ್ಲಾಸ್ಟಿಕ್ ಕವಚದ ಒಳಗೆ ಹೊಂದಿರುವ ಒಂದು ಬಗೆಯ ಪೂರ್ವಜೋಡಣೆಯಾದ ಆಗ್ನೆಯಾಸ್ತ್ರ ಸ್ಫೋಟಕ. ಅನುಕೂಲಕರ ಸಾಗಣೆ ಮತ್ತು ಬಂದೂಕುಗಾರಿಕೆಯ ಅವಧಿಯಲ್ಲಿ ನಿರ್ವಹಣೆಯ ಕಾರ್ಯರೂಪಿ ಉದ್ದೇಶಕ್ಕಾಗಿ, ಇದು ಹಿಂಭಾಗದಿಂದ ತುಂಬುವಂಥ ಬಂದೂಕಿನ ನಳಿಗೆಯ ಕೋಶದ ಒಳಗಡೆ ನಿಖರವಾಗಿ ಹಿಡಿಸುವಂತೆ ಮಾಡಲಾಗಿರುತ್ತದೆ.[೧] ಜನಪ್ರಿಯ ಬಳಕೆಯಲ್ಲಿ "ಗುಂಡು" ಪದವನ್ನು ಹಲವುವೇಳೆ ಸಂಪೂರ್ಣ ತೊಟಾವನ್ನು ಸೂಚಿಸಲು ಬಳಸಲಾಗುತ್ತದಾದರೂ, ಸರಿಯಾಗಿ ಇದನ್ನು ಕೇವಲ ಉತ್ಕ್ಷೇಪಕವನ್ನು ಸೂಚಿಸಲು ಬಳಸಲಾಗುತ್ತದೆ.

ಆಧುನಿಕ ತೋಟಾದ ಭಾಗಗಳು:

1. ಗುಂಡು;

2. ಕವಚ;

3. ನೋದಕ;

4. ಏಣು;

5. ಪ್ರೈಮರ್.

ಉಲ್ಲೇಖಗಳುಸಂಪಾದಿಸಿ

  1. Sparano, Vin T. (2000). "Cartridges". The Complete Outdoors Encyclopedia. Macmillan. p. 37. ISBN 978-0-312-26722-3.
"https://kn.wikipedia.org/w/index.php?title=ತೋಟಾ&oldid=1002566" ಇಂದ ಪಡೆಯಲ್ಪಟ್ಟಿದೆ