ತಿಗಳಾರಿ ಲಿಪಿ

ತುಳು ಭಾಷೆಯ ಲಿಪಿ

ಉಗಮ ಮತ್ತು ವಿಕಾಸಸಂಪಾದಿಸಿ

ಇತರ ಭಾರತೀಯ ಲಿಪಿಗಳಂತೆ ತುಳು ಲಿಪಿಯು ಕೂಡ ಬ್ರಾಹ್ಮೀ ಲಿಪಿಯಿಂದ ವಿಕಸಿತಗೊಂಡಿದೆ. ಈ ಲಿಪಿಯು ಬ್ರಾಹ್ಮಿಜನ್ಯ ಲಿಪಿಯಾದ ಗ್ರಂಥ ಲಿಪಿಯ ಮೂಲಕ ಸುಮಾರು ೧೧-೧೨ನೇ ಶತಮಾನದಲ್ಲಿ ತಮಿಳುನಾಡು-ಕೇರಳ ಪ್ರದೇಶದಿಂದ ಕರ್ನಾಟಕಕ್ಕೆ ಆಗಮಿಸಿತು. ಕ್ರಮೇಣ ಇಲ್ಲಿಯ ತುಳು ಮತ್ತು ಕನ್ನಡ ಮಾತನಾಡುವ ಕೋಟ,ಹವ್ಯಕ ಬ್ರಾಹ್ಮಣರ ಪ್ರಮುಖ ಲಿಪಿಯಾಯಿತು. ಅತ್ತ ಮಲಯಾಳಂ ಲಿಪಿಯು ಕೇರಳದಲ್ಲಿ ಸಮಕಾಲೀನವಾಗಿ ವಿಕಾಸವಾಯಿತು.

ಮುಖ್ಯ ಸಾಹಿತ್ಯಸಂಪಾದಿಸಿ

ತುಳು ಲಿಪಿಯ ಮುಖ್ಯಭಾಷೆ ಸಂಸ್ಕೃತ . ಬಹುತೇಕ ತಾಳೆಗರಿಗಳು ಧಾರ್ಮಿಕ ವಿಚಾರಕ್ಕೆ ಸಂಬಂಧಪಟ್ಟಿದ್ದಾಗಿವೆ. ವೇದ, ಉಪನಿಷತ್ತುಗಳು, ಪುರಾಣಗಳು, ಮಹಾಭಾರತ, ರಾಮಯಣ, ಕಾವ್ಯ, ಧರ್ಮಶಾಸ್ತ್ರ, ಪೂಜಾಗ್ರಂಥಗಳು ಈ ಲಿಪಿಯಲ್ಲಿ ಲಭಿಸಿವೆ. ಅತಿ ಕಡಿಮೆ ಸಂಖ್ಯೆಯಲ್ಲಿ ಕನ್ನಡ ಮತ್ತು ತುಳು ಹಸ್ತಪ್ರತಿಗಳು ಕಾಣಬರುತ್ತವೆ.

ಉಪಯೋಗಿಸುತ್ತಿದ್ದ ಪ್ರದೇಶಸಂಪಾದಿಸಿ

ಈ ಲಿಪಿ ಕರ್ಣಾಟಕದ ಮಲೆನಾಡು ಹಾಗು ಕರಾವಳಿ ಪ್ರದೇಶದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿತ್ತು. ಅನೇಕ ಹಸ್ತಪ್ರತಿಗಳು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ದೊರಕುತ್ತವೆ.

ಹಸ್ತಪ್ರತಿಗಳು ಸಂರಕ್ಷಿತವಾಗಿರುವ ಸ್ಥಳಗಳುಸಂಪಾದಿಸಿ

ಉಡುಪಿ ಅಷ್ಟಮಠಗಳಲ್ಲಿ, ಧರ್ಮಸ್ಥಳದಲ್ಲಿ, ಕೆಳದಿ ಸಂಗ್ರಹಾಲಯದಲ್ಲಿ, ಪ್ರಾಚ್ಯಶಾಸ್ತ್ರ ಅಧ್ಯಯನ ಕೇಂದ್ರ,ಮೈಸೂರು,ತಂಜವೂರಿನ ಸರಸ್ವತೀ ಮಹಲ್, ಪುದುಚ್ಚೇರಿ,ಮಲೆನಾಡಿನ ಅನೇಕ ದೇವಸ್ಥಾನ.ಮಠ,ಮನೆಯಲ್ಲಿ ಈ ಲಿಪಿಯ ತಾಳೆಗರಿಗಳನ್ನು ಸಂಗ್ರಹ ಮಾಡಲಾಗಿದೆ.

ತುಳು ಲಿಪಿ ಅಕ್ಷರಮಾಲೆಸಂಪಾದಿಸಿ

 

ಉಲ್ಲೇಖಗಳುಸಂಪಾದಿಸಿ