ತಾವೇ ಸ್ವಯಂ ದೇವತೆಗಳು
ತಾವೇ ಸ್ವಯಂ ದೇವತೆಗಳು (The Gods Themselves) ಎಂಬುದು ಐಸಾಕ್ ಅಸಿಮೋವ್ ೧೯೭೨ರಲ್ಲಿ ರಚಿಸಿದ ಹ್ಯೂಗೋ (೧೯೭೩) ಮತ್ತು ನೆಬ್ಯುಲ (೧೯೭೨) ಪುರಸ್ಕೃತ ಇಂಗ್ಲಿಷ್ ವೈಜ್ಞಾನಿಕ ಕಾದಂಬರಿ. ಈ ಪುಸ್ತಕವು ಮೂರು ಭಾಗಗಳಲ್ಲಿ ವಿಂಗಡಿತವಾಗಿದೆ, ವಾಸ್ತವವಾಗಿ, ಇವು ನಿಯತಕಾಲಿಕೆಯಲ್ಲಿ ಮೂರು ಸಣ್ಣ ಕಥೆಗಳಾಗಿ ಪ್ರಕಟಗೊಂಡಿದ್ದವು. ಅಸಿಮೋವ್ ರವರು ತಮ್ಮ ಆತ್ಮಕಥೆಯಲ್ಲಿ ಈ ಕಾದಂಬರಿಯು (ಅದರಲ್ಲಿಯೂ ಎರಡನೆಯ ಭಾಗವು) 'ತಾವು ಚಿಂತಿಸಿದ ಊರ್ಧ್ವಶಿರ ಚಿಂತನೆಗಳಲ್ಲಿಯೇ ಅತಿ ದೊಡ್ಡದು ಮತ್ತು ಪರಿಣಾಮಕಾರಿಯಾದುದು' ಎಂದು ಹೇಳಿಕೊಂಡಿದ್ದಾರೆ.
ಲೇಖಕರು | ಐಸಾಕ್ ಅಸಿಮೋವ್ |
---|---|
ದೇಶ | ಅಮೆರಿಕ ಸಂ. ಸಂ. |
ಭಾಷೆ | ಇಂಗ್ಲಿಷ್ |
ಪ್ರಕಾರ | ವೈಜ್ಞಾನಿಕ ಕಥಾಸಾಹಿತ್ಯ ಕಾದಂಬರಿ |
ಪ್ರಕಾಶಕರು | ಡಬಲ್ ಡೇ |
ಪ್ರಕಟವಾದ ದಿನಾಂಕ | ೧೯೭೨ |
ಮಾಧ್ಯಮ ಪ್ರಕಾರ | ಅಚ್ಚು (ಗಟ್ಟಿ ಹೊದಿಕೆ & ಕಾಗದ ಹೊದಿಕೆ) |
ಪುಟಗಳು | ೨೮೮ ಅಚ್ಚಾದ ಪುಟಗಳು |
ಐಎಸ್‍ಬಿಎನ್ | ISBN 0-385-02701-X |
ಕಥಾ ಸಾರಾಂಶ
ಬದಲಾಯಿಸಿಮುಖ್ಯ ಕಥಾ ಪಥವು ನಮ್ಮ ಪ್ರಸ್ತುತ ವಿಶ್ವದ ಮಾನವರ ಹಾಗೂ ಮತ್ತೊಂದು ಸಮಕಾಲಿಕ ವಿಶ್ವದ ಜೀವಿಗಳೊಡನಿನ ಪರಸ್ಪರ ವಿನಿಮಯವನ್ನು ಅನುಸರಿಸುತ್ತದೆ. ಪರಜೀವಿಗಳ ವಿಶ್ವವು ನಮ್ಮ ವಿಶ್ವಕ್ಕಿಂತ ಭಿನ್ನವಾದ ಭೌತಿಕ ನಿಯಮಗಳಿಂದ ಮಾರ್ಪಾಟಾಗಿದ್ದು, ಆ ಜೀವಿಗಳು ಈ ವಿಶ್ವದಲ್ಲಿನ ಪೃಥ್ವಿಯೊಡನೆ ಪದಾರ್ಥ ವಿನಿಮಯ ಮಾಡಲಾಗಿ ತಮ್ಮ ಅವಶ್ವಕತೆಗಳಿಗೆ ಅನುಕೂಲಕರವಾದ ಶಕ್ತಿಮೂಲವೊಂದನ್ನು ನಿರ್ಮಿಸಿಕೊಳ್ಳುತ್ತಾರೆ. ಈ ವಿನಿಮಯದಿಂದ ಪೃಥ್ವಿಯ ಮಾನವರೂ ಕೂಡ ಶಕ್ತಿಮೂಲವೊಂದನ್ನು ಪಡೆದು ಕೊಳ್ಳುತ್ತಾರೆ - ಈ ಮೂಲವು ಎಲ್ಲ ತೋರ್ಕೆಗಳಿಗೆ ಅಕ್ಷಯವೂ ಶುದ್ಧವೂ ಎಂದು ಕಂಡು ಬಂದರೂ, ಅದು ಈ ಪ್ರಸ್ತುತ ವಿಶ್ವವನ್ನು ಕ್ರಮೇಣ ವಿನಾಶದತ್ತ ಕೊಂಡೊಯ್ಯುತ್ತಿತ್ತು. ಇದು ಏಕೆಂದರೆ, ಶಕ್ತಿ ವಿನಿಮಯವಾದಂತೆಲ್ಲ, ಈ ಜಗತ್ತಿನ ಪರಮಾಣು ರಚನೆಯು ಆ ಸಮಕಾಲಿಕ ವಿಶ್ವದಂತೆಯೇ ಆಗತೊಡಗಿ, ಸೂರ್ಯನನ್ನು (ಅದರ ಗಾತ್ರದ ಕಾರಣದಿಂದ) ಪರಮ ನವ್ಯತೆಯತ್ತ (ಸೂಪರ್ ನೋವಾ) ಒಯ್ದು ಸ್ಫೋಟ ಕೊಳ್ಳುವಂತೆ ಮಾಡ ಬಹುದು, ಮತ್ತು ಹೀಗೆಯೇ ಈ ನಮ್ಮ ವಿಶ್ವದ ಇತರ ನಕ್ಷತ್ರಗಳೂ ಆಗಬಹುದೆಂದು ಕಥಾನಾಯಕರಿಗೆ ತಿಳಿದು ಬರುತ್ತದೆ. ಆದರೆ, ಪೃಥ್ವಿಯ ಜನತೆ ಹಳೆಯ ಶಕ್ತಿಮೂಲಗಳಿಗೆ ಹೋದಲ್ಲಿ, ವಿಪ್ಲವಗಳಿಗೆ ಎಡೆಮಾಡಿಕೊಡಬಹುದೆನ್ನುವ ಜನರ ವಿರುದ್ಧ ಮತ್ತು ಈ ರೀತಿಯ ಶಕ್ತಿಮೂಲವು ಸಂಪೂರ್ಣವಾಗಿ ಸುರಕ್ಷಿತವೆನ್ನುವ ಇತರರ ಅಭಿಪ್ರಾಯದ ವಿರುದ್ಧ ಕಥಾನಾಯಕರು ಹೆಣಗುತ್ತಾರೆ. ಅಂತ್ಯದಲ್ಲಿ, ಸಮಕಾಲಿಕ ವಿಶ್ವಕ್ಕೆ ಮತ್ತು ನಮ್ಮ ಪ್ರಸ್ತುತ ವಿಶ್ವಕ್ಕೆ ಅನುಕೂಲಕರವಾದ ಒಂದು ಪರಿಹಾರವನ್ನು ಕಥಾನಾಯಕರು ಕಂಡುಕೊಳ್ಳುತ್ತಾರೆ: ಅದೆಂದರೆ, ಪ್ರಸ್ತುತ ಸಮಕಾಲೀನ ವಿಶ್ವದಿಂದ ಪಡೆದುಕೊಂಡ ಅಪಾಯಕಾರಿ ಗುಣಗಳನ್ನು ಮತ್ತೊಂದು ಸಮಕಾಲಿಕ ವಿಶ್ವಕ್ಕೆ ಪೃಥ್ವಿಯಿಂದ ಪ್ರಸಾರ ಮಾಡುವುದು. ಈ ರೀತಿ, ಪೃಥ್ವಿಯು ಈ ಹೊಸ ಶಕ್ತಿಮೂಲವನ್ನು ಉಪಯೋಗಿಸುತ್ತಿದ್ದರೂ, ಅದರಿಂದಾಗ ಬಹುದಾದ ಅಪಾಯಕಾರಿ ಉಪ ಪರಿಣಾಮಗಳನ್ನು ತಪ್ಪಿಸಬಹುದು. ಅಲ್ಲದೆ, ಕಾದಂಬರಿಯ ತರ್ಕದಂತೆ, ಅಪಾಯಕಾರಿ ಗುಣ ಪ್ರಸಾರಕ್ಕಾಗಿ ಚುನಾಯಿಸಲ್ಪಟ್ಟ ಮತ್ತೊಂಡು ವಿಶ್ವವು 'ಮಹತ್ ವಿಸ್ಫೋಟ' (ಬಿಗ್ ಬ್ಯಾಂಗ್)ದ ಮೊದಲು ಇರಬಹುದಾದ 'ಅಂಡ' (ಎಗ್)ವಾಗಿರಬಹುದೆಂದೂ, ಈ ಗುಣಪ್ರಸಾರದಿಂದ ಆಗಬಹುದಾದ ವಿಸ್ಫೋಟವು ಜೀವ ಹಾನಿಯನ್ನು ಉಂಟು ಮಾಡುವ ಬದಲು (ನಮ್ಮ ವಿಶ್ವದಲ್ಲಾದಂತೆ) ಜೀವ ಸೃಷ್ಟಿಯನ್ನು ಪ್ರಾರಂಭ ಮಾಡಬಹುದು.
ಕಾದಂಬರಿಯ ಮತ್ತೊಂದು ಸ್ವಾರಸ್ಯವೆಂದರೆ, ಕಥೆಯ ಘಟನಾ ಕಾಲದಲ್ಲಿ, ಮಾನವರು ಚಂದ್ರಗ್ರಹದಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿ ಅಲ್ಲಿ ನಾಗರೀಕತೆಯನ್ನು ಬೆಳೆಸುತ್ತಿರುವರು.