ಟೆಂಪ್ಲೇಟು ಚರ್ಚೆ:ಈ ತಿಂಗಳ ವಿಕಿಪೀಡಿಯ ಸಂಪಾದಕ

Add topic
There are no discussions on this page.

ಈ ತಿಂಗಳ ವಿಕಿಪೀಡಿಯ ಸಂಪಾದಕ - ಇದನ್ನು ಎಲ್ಲಿ ಮತ್ತು ಯಾರು ನಿರ್ಧರಿಸುತ್ತಾರೆ? ಅರಳಿಕಟ್ಟೆಯಲ್ಲಿ ಇದರ ಬಗ್ಗೆ ಪ್ರತಿತಿಂಗಳು ಚರ್ಚೆಯಾಗಿದ್ದು ಕಾಣಲಿಲ್ಲ. ಜೊತೆಗೆ ಲೇಖಕರ ಖಾಸಗಿ ಇ-ಮೇಲ್ ವಿಳಾಸ ನೀಡುವುದು ಸರಿಯಲ್ಲ ಎನಿಸುತ್ತಿದೆ. ಅದನ್ನು ಅವರು ಗೌಪ್ಯವಾಗಿಡಬಯಸಿದ್ದಲ್ಲಿ ಅದನ್ನು ಇಲ್ಲಿ ನೀಡದಿರುವುದೇ ಒಳಿತು. ಲೇಖಕರ ಚರ್ಚಾಪುಟ ಅವರನ್ನು ಭೇಟಿ ಮಾಡಲು ಇದ್ದೇ ಇದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೬:೪೧, ೯ ಆಗಸ್ಟ್ ೨೦೧೬ (UTC)

  1. ಸಂಪಾದಕರು ತಮ್ಮ ಖಾಸಗಿ ಮಿಂಚಂಚೆಯನ್ನು ತಮ್ಮ ಸದಸ್ಯಪುಟದಲ್ಲಿ ನೀಡಿದ ಕಾರಣ ಮಿಂಚಂಚೆ ವಿಳಾಸವನ್ನು ನೀಡಲಾಗಿದೆ. ಗೋಪಾಲಕೃಷ್ಣ ಎ (ಚರ್ಚೆ) ೧೨:೨೮, ೧೦ ಆಗಸ್ಟ್ ೨೦೧೬ (UTC)
ನೀವು ನನ್ನ ಸಂದೇಶವನ್ನು ಪೂರ್ಣವಾಗಿ ಓದಲಿಲ್ಲ ಎನಿಸುತ್ತಿದೆ.ಇಮೇಲ್ ವಿಳಾಸ ಸಂಪಾದಕರ ಖಾಸಗಿ ಮಾಹಿತಿ.ಅದನ್ನು ಗೌಪ್ಯವಾಗಿಡುವ ಆಯ್ಕೆ ಅವರಿಗೆ ಬಿಟ್ಟದ್ದು.~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೩:೩೪, ೧೦ ಆಗಸ್ಟ್ ೨೦೧೬ (UTC)

ನಿಮ್ಮ ಸಂದೇಶವನ್ನು ಪೂರ್ತಿಯಾಗಿ ಓದಿಯೇ, ನಿಮ್ಮ ಸಲಹೆಯ ಮೇರೆಗೆ ಈಗಾಗಲೇ ಅಗತ್ಯವಾದ ಬದಲಾವಣೆಗಳನ್ನು ಮಾಡಲಾಗಿದೆ. ಗೋಪಾಲಕೃಷ್ಣ ಎ (ಚರ್ಚೆ) ೧೫:೦೮, ೧೦ ಆಗಸ್ಟ್ ೨೦೧೬ (UTC)

@Gopala Krishna A: ನೀವು ತಿಂಗಳ ವಿಕಿಪೀಡಿಯ ಸಂಪಾದಕರನ್ನು ಹೊರತರಲು ಪಟ್ಟ ಪರಿಶ್ರಮಕ್ಕೆ ಧನ್ಯವಾದಗಳು. ದಯವಿಟ್ಟು ಓಂಶಿವಪ್ರಕಾಶ್‍ರವರು ಕೇಳಿದ - ಈ ತಿಂಗಳ ವಿಕಿಪೀಡಿಯ ಸಂಪಾದಕ - ಇದನ್ನು ಎಲ್ಲಿ ಮತ್ತು ಯಾರು ನಿರ್ಧರಿಸುತ್ತಾರೆ? ಪ್ರಶ್ನೆಗೆ ವಿಕಿ ಕೊಂಡಿ ಏನಾದರು ಇದ್ದರೆ ನೀಡಿರಿ. -- Csyogi (ಚರ್ಚೆ) ೧೫:೩೩, ೧೪ ಆಗಸ್ಟ್ ೨೦೧೬ (UTC)
@Csyogi: ತಿಂಗಳ ವಿಕಿಪೀಡಿಯ ಸಂಪಾದಕರನ್ನು ಆರಿಸುವ ಬಗ್ಗೆ ಈಗಾಗಲೇ ಅರಳಿಕಟ್ಟೆಯಲ್ಲಿ ಚರ್ಚೆ ನಡೆದಿತ್ತು. ಇದರ ಪ್ರಕಾರವಾಗಿ ನಾನು ಈ ಪ್ರಕ್ರಿಯೆಯನ್ನು ಅನಂತ್ರ ಸಹಾಯ ಪಡೆದು ನಡೆಸಿದ್ದೇನೆ. ಈ ಯೋಜನೆ ಸಂಪಾದಕರನ್ನು ಪ್ರೋತ್ಸಾಹಿಸುವ ಯೋಜನೆ ಆದ್ದರಿಂದ (ಬಹುಮಾನದ ರೀತಿಯಲ್ಲಿ ಆದರೆ ಬಹುಮಾನ ಅಲ್ಲ. ಇದು ಇತರ ಸಂಪಾದಕರನ್ನು ಪ್ರೋತ್ಸಾಹಿಸಲು ಪಟ್ಟ ಶ್ರಮ ಅಷ್ಟೇ.) ಅರಳಿಕಟ್ಟೆಯಲ್ಲಿ ಚರ್ಚೆ ನಡೆಸಿರಲಿಲ್ಲ. ಇದು ಅತೀ ಹೆಚ್ಚು ಸಂಪಾದಿಸಿದವರಿಗೆ ಆಶ್ಚರ್ಯವನ್ನು ಉಂಟು ಮಾಡುತ್ತದೆ ಮತ್ತು ಅವರಿಗೆ ಇನ್ನೂ ಹೆಚ್ಚು ಹೆಚ್ಚು ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂಬುದು ನನ್ನ ಅನಿಸಿಕೆ. --ಗೋಪಾಲಕೃಷ್ಣ ಎ (ಚರ್ಚೆ) ೧೧:೩೯, ೧೬ ಆಗಸ್ಟ್ ೨೦೧೬ (UTC)
ಈ ಚರ್ಚೆ ಪೂರ್ಣಗೊಂಡಿಲ್ಲ. "ಈ ಪಟ್ಟಿಯಲ್ಲಿನ ಕೆಲಸಗಳನ್ನು ಆಧರಿಸಿ ಮಾನದಂಡಗಳನ್ನು ನಿರ್ಧರಿಸಬೇಕು." ಎಂಬ ಮಾತನ್ನು ಬಿಟ್ಟು, ಯೋಜನೆ ಸರಿ ಇದೆ, ಚೆನ್ನಾಗಿದೆ ಎನ್ನುವ ಸಂದೇಶ ಮಾತ್ರ ಇದೆ. ಮಾನದಂಡಗಳ ಪಟ್ಟಿ, ಸದಸ್ಯರನ್ನು ಹೆಸರಿಸುವ ರೀತಿ, ಅದನ್ನು ಸಮುದಾಯ ಸಮ್ಮತಿಸುವ ಬಗ್ಗೆ ಚರ್ಚೆ, ನಿಯಮಗಳ ಅನುಷ್ಠಾನದ ಬಗ್ಗೆ ಚರ್ಚೆ ಇಲ್ಲ. ಇದನ್ನು ಕೈಗೆತ್ತಿಕೊಂಡವರು ಬೇರೆ ಭಾಷಾ ವಿಕಿಗಳಲ್ಲಿ ಈ ಕೆಲಸವನ್ನು ಪಾರದರ್ಶಕವಾಗಿ ಇತರೆ ಸಮುದಾಯಗಳು ಹೇಗೆ ನೆಡೆಸಿಕೊಂಡು ಬಂದಿವೆ ಎನ್ನುವುದನ್ನು ತಿಳಿಯುವ ಕೆಲಸವನ್ನು ಮೊದಲು ಮಾಡಬೇಕಿತ್ತು. ಯೋಜನೆ ಚೆನ್ನಾಗಿದೆ, ಸಮ್ಮತಿ ಇದೆ ಎಂದ ಮಾತ್ರಕ್ಕೆ ಸಮುದಾಯ ಮತ್ತು ವಿಕಿಯ ಹೊರಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳಿತಲ್ಲ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೨೦:೪೧, ೧೬ ಆಗಸ್ಟ್ ೨೦೧೬ (UTC)
ಸರಿ. ತಮ್ಮ ಅನಿಸಿಕೆಯನ್ನು ಗೌರವಿಸುತ್ತೇನೆ. ಗೋಪಾಲಕೃಷ್ಣ ಎ (ಚರ್ಚೆ) ೦೩:೫೧, ೧೭ ಆಗಸ್ಟ್ ೨೦೧೬ (UTC)
ಇದಕ್ಕೆ ಸಂಬಧಿಸಿದ ನೀತಿಗಳ ಪುಟವನ್ನು ಈ ಕೊಂಡಿಯಲ್ಲಿ ರಚಿಸಲಾಗಿದೆ. ಇದರಲ್ಲಿ ಬೇಕಾದ ಬದಲಾವಣೆಗಳನ್ನು ಮಾಡುವಂತೆ ಸಮುದಾಯದವರಲ್ಲಿ ಕೇಳಿಕೊಳ್ಳುತ್ತೇನೆ.--ಅನಂತ್ (ಚರ್ಚೆ) ೦೭:೫೫, ೧೯ ಆಗಸ್ಟ್ ೨೦೧೬ (UTC)
User:Gopala Krishna A, ಸದಸ್ಯ:Ananth subray: ಸೂಕ್ತ ಕೊಂಡಿಗಳನ್ನು ನೀಡಿದ್ದಕ್ಕೆ ಧನ್ಯವಾದಗಳು. ಕಾರ್ಯನೀತಿ ಚರ್ಚಾಪುಟವನ್ನು ನಿಮ್ಮ ಸದಸ್ಯಪುಟದಿಂದ ಸೂಕ್ತ ಪುಟಕ್ಕೆ ಸ್ಥಳಾಂತರಿಸಿ ಅರಳಿಕಟ್ಟೆಯಲ್ಲಿ ಕೊಂಡಿ ನೀಡಿದರೆ ಚರ್ಚಿಸಲು ಅನುಕೂಲವಾಗುವುದು. ಹಾಗೆಯೇ ನೀವು ಹೀಗಾಗಲೇ ನೋಡಿದ್ದರೆ, ಬೇರೆ ಭಾಷಾ ವಿಕಿಗಳಲ್ಲಿ ಈ ಕೆಲಸವನ್ನು ಪಾರದರ್ಶಕವಾಗಿ ಇತರೆ ಸಮುದಾಯಗಳು ಹೇಗೆ ನೆಡೆಸಿಕೊಂಡು ಬಂದಿವೆ/ಒಟ್ಟು ಸಂಪಾದಕರೆಷ್ಟಿದ್ದಾರೆ ಎನ್ನುವುದನ್ನು ಆ ಪುಟದಲ್ಲಿ ತಿಳಿಸಿದರೆ ಒಳ್ಳೆಯದು ಅನಿಸುತ್ತದೆ. -- Csyogi (ಚರ್ಚೆ) ೨೦:೫೨, ೨೪ ಆಗಸ್ಟ್ ೨೦೧೬ (UTC)
Return to "ಈ ತಿಂಗಳ ವಿಕಿಪೀಡಿಯ ಸಂಪಾದಕ" page.