ಟಿ.ಕೆ.ರಾಮರಾವ್
ಟಿ.ಕೆ.ರಾಮರಾವ್ [೧]೧೯೩೧ ಅಕ್ಟೋಬರ ೭ರಂದು ಜನಿಸಿದರು. ಇವರ ತಾಯಿ ನಾಗಮ್ಮ;ತಂದೆ ಕೃಷ್ಣಮೂರ್ತಿ.ಇವರು ಕನ್ನಡದ ಪತ್ತೇದಾರಿ ಕಾದಂಬರಿಕಾರರಲ್ಲಿ ಪ್ರಮುಖರಾದವರು. ಪತ್ತೆದಾರಿ ಕಾದಂಬರಿಗಳಲ್ಲದೆ, ಸಾಮಾಜಿಕ ಕಾದಂಬರಿ, ಸಣ್ಣಕತೆಗಳನ್ನೂ ಬರೆದಿದ್ದಾರೆ.[೨]
ಟಿ ಕೆ ರಾಮರಾವ್ | |
---|---|
ಜನನ | ಹೊಸದುರ್ಗ, ಭಾರತ | ೭ ಅಕ್ಟೋಬರ್ ೧೯೨೯
ಮರಣ | 10 ನವೆಂಬರ್ 1988 ಬೆಂಗಳೂರು, ಕರ್ನಾಟಕ, ಭಾರತ |
ವೃತ್ತಿ | ಕಾದಂಬರಿಕಾರ, ನಾಟಕಕಾರರು, ಕಥೆಗಾರರು, ಸಂಪಾದಕರು ಮತ್ತು ವಿಮರ್ಶಕರು |
ರಾಷ್ಟ್ರೀಯತೆ | ಭಾರತ |
ಪ್ರಕಾರ/ಶೈಲಿ | ಕಾದಂಬರಿ, ಪತ್ತೇದಾರಿ. |
ವಿಷಯ | ಕನ್ನಡ |
ಸಾಹಿತ್ಯ ಚಳುವಳಿ | ಕನ್ನಡ ಕಾದಂಬರಿ ಸಾಹಿತ್ಯ |
ಬಾಲ್ಯ ಮತ್ತು ಜೀವನ
ಬದಲಾಯಿಸಿರೋಚಕ ಶೈಲಿ, ತೀಕ್ಷ್ಣವಾದ ಲಯಬದ್ಧವಾದ ವಾಕ್ಯಸರಣಿ, ವಿಸ್ಮಯಕಾರಿ ತಿರುವುಗಳು, ರಹಸ್ಯವನ್ನು ಕೊನೆಯವರೆವಿಗೂ ಕಾಯ್ದಿಟ್ಟು ಓದುಗರನ್ನು ಬೆರಗಾಗುವಂತೆ ಮಾಡುವ ತಂತ್ರಗಾರಿಕೆಯ ಬರಹಗಳಿಂದ ಕನ್ನಡದ ಓದುಗರಿಗೆ ಚಿರಪರಿಚಿತರಾಗಿದ್ದ ಪತ್ತೇದಾರಿ ಕಾದಂಬರಿ ಕರ್ತೃ ಟಿ.ಕೆ. ರಾಮರಾಯರು ಹುಟ್ಟಿದ್ದು ೧೯೩೧ ರ ಅಕ್ಟೋಬರ್ ೭ ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ. ತಂದೆ ಟಿ. ಕೃಷ್ಣಮೂರ್ತಿಯವರು ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದವರು, ತಾಯಿ ನಾಗಮ್ಮ. ಪ್ರಾರಂಭಿಕ ಶಿಕ್ಷಣ ಕಡೂರು, ಅರಸೀಕೆರೆ ಮುಂತಾದೆಡೆ, ಹೈಸ್ಕೂಲಿಗೆ ಸೇರಿದ್ದು ಕೋಲಾರದಲ್ಲಿ. ಹೈಸ್ಕೂಲಿನಲ್ಲಿದ್ದಾಗಲೇ ವಿಪರೀತ ಓದಿನ ಹುಚ್ಚು. ಆಗಲೇ ಬರೆದ ಪತ್ತೇದಾರಿ ಕಾದಂಬರಿ ‘ಭಾಸ್ಕರ ಅಥವಾ ಸೇಡು’. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್ ಷಾ ಮುಂತಾದವರು ಇವರ ಅಚ್ಚುಮೆಚ್ಚಿನ ಲೇಖಕರು. ಬಿ.ಎಸ್‌ಸಿ. ಆನರ್ಸ್ ಪದವಿ ಪಡೆದ ನಂತರ ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿದರೂ ಎರಡು ತಿಂಗಳಲ್ಲೇ ಅದನ್ನು ಬಿಟ್ಟು ಮದರಾಸಿನಲ್ಲಿ ರೈಲ್ವೆಗಾರ್ಡ್ ಕೆಲಸಕ್ಕೆ ಸೇರಿದರು. ರೈಲ್ವೆಯಲ್ಲಿ ಸ್ಟೇಷನ್‌ಮಾಸ್ಟರಾಗಿದ್ದ ತಂದೆಯವರ ಅಕಾಲ ಮರಣದಿಂದ ಮಾನವೀಯ ದೃಷ್ಟಿಯಿಂದ ದೊರೆತ ಉದ್ಯೋಗವಾಗಿತ್ತು. ಆದರೆ ಇದಕ್ಕೆ ಹಿಂದೆಯೇ ಅಣ್ಣನೊಬ್ಬನ ಮರಣದಿಂದ ಸಂಸಾರದ ಹೊಣೆ ಇವರ ಮೇಲೆ ಬಿದ್ದು ತಮ್ಮ – ತಂಗಿ – ತಾಯಿ. ಇವರೆಲ್ಲರ ಜವಾಬ್ದಾರಿ ಹೊರಲು ಮದರಾಸಿನ ಕೆಲಸ ತೊರೆದು ಚನ್ನಪಟ್ಟಣದಲ್ಲಿ ನೆಲೆಸಿ ಟ್ಯೂಟೋರಿಯಲ್ಸ್ ತೆರೆದು ತರಗತಿಗಳನ್ನು ಪ್ರಾರಂಭಿಸಿದರು. ಎಸ್.ಎಸ್.ಎಲ್.ಸಿ., ಪಿ.ಯು., ಪಾಲಿಟೆಕ್ನಿಕ್ ತರಗತಿಯ ವಿದ್ಯಾರ್ಥಿಗಳಿಗೆ ೨೦ ವರ್ಷಗಳ ಕಾಲ ಪಾಠ ಹೇಳಿದರು. ನಂತರ ಪ್ರಾರಂಭಿಸಿದ್ದು ಔಷಧಿ ಅಂಗಡಿ. ಇವರು ಬರೆದ ಮೊಟ್ಟಮೊದಲ ಕಾದಂಬರಿ ‘ದೂರ ಗಗನ’ ಪ್ರಕಟವಾದುದು ೧೯೬೬ರಲ್ಲಿ. ಆಗ ಅವರಿಗೆ ೩೫ರ ಪ್ರಾಯ. ರಂಜನೀಯವಾಗಿ, ಸೊಗಸಾಗಿ ಬರೆದ ಕಾದಂಬರಿ ಓದುಗರ ಗಮನ ಸೆಳೆದ ನಂತರ ಹಲವಾರು ಕಾದಂಬರಿಗಳನ್ನು ಬರೆದರು. ಮೊದಲು ಪ್ರಕಟಿಸಲಾಗದೆಂದು ವಿಷಾದ ಪತ್ರ ಬರೆದ ಸಂಪಾದಕರೆ ಕ್ಯೂನಲ್ಲಿ ಕಾಯ್ದು ಕಾದಂಬರಿ ಬರೆಸಿ ತಮ್ಮ ಪತ್ರಿಕೆಯಲ್ಲಿ ಧಾರಾವಾಹಿಯ ಆಗಿ ಪ್ರಕಟವಾಗಬೇಕೆಂದು ಆಶಿಸಿದರು.
ಪ್ರವಾಸಾನುಭವದ ಕೃತಿ
ಬದಲಾಯಿಸಿ೧೯೬೯ರಲ್ಲಿ ಗ್ರೀಸ್, ಸ್ವಿಜರ್ ಲ್ಯಾಂಡ್, ಫ್ರಾನ್ಸ್, ಇಂಗ್ಲೆಂಡ್, ಅಮೆರಿಕಾ, ಕೆನಡಾ, ಜಪಾನ್, ಹಾಂಕಾಂಗ್, ಥಾಯ್‌ಲ್ಯಾಂಡ್, ಸಿಂಗಾಪೂರ್, ಶ್ರೀಲಂಕಾ ಮುಂತಾದ ದೇಶಗಳನ್ನು ಸುತ್ತಿಬಂದು ರಚಿಸಿದ ಪ್ರವಾಸಾನುಭವದ ಕೃತಿ ‘ಗೋಳದ ಮೇಲೊಂದು ಸುತ್ತು’, ನಾಲ್ಕು ಮುದ್ರಣಗಳನ್ನು ಕಂಡ ಕೃತಿ.
೧೯೮೪ರಲ್ಲಿ ಕರ್ನಾಟಕ ಸರಕಾರವು ರಾಮರಾಯರನ್ನು ಸಾಹಿತ್ಯ ಅಕಾಡಮಿಯ ಸದಸ್ಯರನ್ನಾಗಿ ನೇಮಿಸಿತು. ೧೯೮೫ರಲ್ಲಿ ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯದ ಪ್ರಥಮ ಪತ್ತೇದಾರಿ ಲೇಖಕರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಚಲನಚಿತ್ರ ಮತ್ತು ಅನುವಾದ
ಬದಲಾಯಿಸಿಮರಳು ಸರಪಳಿ, ಮೂರುಜನ್ಮ, ಸೇಡಿನ ಹಕ್ಕಿ, ಸೀಳು ನಕ್ಷತ್ರ, ವರ್ಣ ಚಕ್ರ, ಹಿಮಪಾತ, ಮಣ್ಣಿನ ದೇೂಣಿ ಮುಂತಾದ ಕಾದಂಬರಿಗಳು ಚಲನಚಿತ್ರವಾಗಿ ಅಪಾರ ಯಶಸ್ಸನ್ನು ತಂದುಕೊಟ್ಟಿದ್ದಲ್ಲದೆ ಬಂಗಾರದ ಮನುಷ್ಯ ಕಾದಂಬರಿಯು ಚಲನಚಿತ್ರವಾಗಿ (೧೯೭೨) ೨ ವರ್ಷಗಳ ಕಾಲ ಪ್ರದರ್ಶಿತಗೊಂಡಿತು.ಇದೇ ಕಾದಂಬರಿಯು ತೆಲುಗುಭಾಷೆಯಲ್ಲಿ ‘ದೇವುಡುಲಾಂಟಿ ಮನಿಷಿ’ ಹೆಸರಿನ ಚಲನಚಿತ್ರವಾಗಿ ಆಂಧ್ರದಾದ್ಯಂತ ಪ್ರದರ್ಶಿತವಾಗಿ ಶತದಿನೋತ್ಸವ ಕಂಡರೆ ಕಾದಂಬರಿ ರೂಪದಲ್ಲಿ ‘ಬಂಗಾರು ಮನಿಷಿ’ ಹೆಸರಿನಿಂದ ತೆಲುಗು ಭಾಷೆಗೂ ಅನುವಾದಗೊಂಡಿತು.[೩][೪]
ಕೃತಿಗಳು
ಬದಲಾಯಿಸಿಕಾದಂಬರಿಗಳು
ಬದಲಾಯಿಸಿ- ಬಂಗಾರದ ಮನುಷ್ಯ
- ಜಗದೇವರಾಯ
- ದೂರ ಗಗನ
- ಪಚ್ಚೆ ತೇೂರಣ
- ಆಕಾಶ ದೀಪ
- ಸೇಡಿನ ಹಕ್ಕಿ
- ಮರಳು ಸರಪಣಿ
- ಪಶ್ಚಿಮದ ಬೆಟ್ಟ
- ಲಂಗರು
- ಆಸರೆಯ ಬೊಂಬೆ
- ಮಧುರ ಮಿಲನ
- ತ್ರಿಕೇೂಣದ ಮನೆ
- ಪಯಣದ ಕೊನೆ
- ನಿಗೂಢರು
- ಮೂರನೆಯ ಕೀಲಿ ಕೈ
- ಬಣ್ಣದ ಹುಳು
- ಶಕುನ ಪಕ್ಷಿ
- ಬೆದರು ಬೊಂಬೆ
- ಡೊಂಕು ಮರ
- ಕೋವಿ-ಕುಂಚ
- ಕಪ್ಪು ನಾಯಿ
- ವಜ್ರದ ಕೊಂಬು
- ನೆರಳು
- ಗುಲಾಮ ಹೆಣ್ಣು
- ರಾಣಿ ಜೇನು
- ಸೀಳು ನಕ್ಷತ್ರ
- ಕೆಂಪು ಮಣ್ಣು
- ಸೀಮಾ ರೇಖೆ
- ದಿಬ್ಬದ ಬಂಗಲೆ
- ಜೇೂಡಿ ಛಾಯೆ
- ಮಣ್ಣಿನ ದೋಣಿ
- ಕಹಳೆ ಬಂಡೆ
- ವರ್ಣ ಚಕ್ರ
- ತೋರು ಬೆರಳು
- ತಾಳೆ ಹೂ
- ಆರಿದ ಲಾಂದ್ರ
- ಚಿತ್ರಾವತಿ
- ರಹಸ್ಯ ಪತ್ರ
- ಕಣಿವೆ ಸೇರಿದವಳು
- ಕನಸುಗಾರ
- ಅಲೆಮಾರಿ
- ನಕ್ಷತ್ರ ಮೀನು
- ನದಿ ತಿರುವು
- ಆಷಾಢ ರಾತ್ರಿಗಳು
- ಚುಕ್ಕೆಯ ಪಾರಿವಾಳ
- ಪದ್ಮ ರಾಗ
- ಪಶ್ಚಿಮಮುಖಿ
ಕಥಾ ಸಂಕಲನ
ಬದಲಾಯಿಸಿ- ಉಬ್ಬರವಿಳಿತ
- ನಾಲ್ಕು ರೇಖೆಗಳು
- ಎತ್ತರದ ಮನೆಯವನು
- ಕೊನೆಯ ಸಾಕ್ಷಿ
- ಕೊಲ್ಲಿಯ ಹಣ
- ಹೇಡಿ
- ಕಲ್ಲು ಹಾಸಿಗೆ
- ಬೆಂಕಿ ಗೂಡು
- ಮಧುಚಂದ್ರ
- ಅಪರಾತ್ರಿಯ ಆತ್ಮೀಯ
- ಶಿಲ್ಪ ದೃಶ್ಯಗಳು
- ಊರುಗೋಲು
ಪ್ರವಾಸ ಕಥನ
ಬದಲಾಯಿಸಿ- ಗೋಳದ ಮೇಲೊಂದು ಸುತ್ತು
ಮಕ್ಕಳ ಸಾಹಿತ್ಯ
ಬದಲಾಯಿಸಿ- ಶ್ಯಾಮಪ್ರಸಾದ ಮುಖರ್ಜಿ
- ಲಾಲಾ ಲಜಪತರಾಯ
- ಜೆ.ಎನ್.ತಾತಾ
- ಸ್ವಾಮಿ ವಿವೇಕಾನಂದ
- ಟಿವಿ.ಸುಂದರಂ ಅಯ್ಯಂಗಾರ
ಚಲನಚಿತ್ರೀಕರಣ
ಬದಲಾಯಿಸಿ- ಬಂಗಾರದ ಮನುಷ್ಯ
- ಸೇಡಿನ ಹಕ್ಕಿ
- ಮರಳು ಸರಪಣಿ
- ವರ್ಣ ಚಕ್ರ
- ಮೂರು ಜನ್ಮ
- ಸೀಳು ನಕ್ಷತ್ರ
- ಮಣ್ಣಿನ ದೇೂಣಿ
- ಹಿಮಪಾತ
ನಿಧನ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ 'ಟಿ.ಕೆ.ರಾಮರಾವ್', ಸಂಸ್ಕತಿ ಸಲ್ಲಾಪ
- ↑ "ಟಿ.ಕೆ. ರಾಮರಾವ್". kanaja.in , 12 July 2017.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Bangaru Manishi (1976)". www.imdb.com ,12 July 2017.
- ↑ "T K Rama Rao (1929-1988) is a Kannada Writer known for the movies Bangaarada Manushya(1972),". www.chiloka.com , 12 July 2017.