ಜನತಾ ಕರ್ಫ್ಯೂ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊರೋನಾವೈರಸ್ ಹರಡುವಿಕೆಯ ವಿರುದ್ಧ ಹೋರಾಡಲು ಮಾಡಿದ ಪ್ರಯತ್ನ.[೧] ೧೯ ಮಾರ್ಚ್ ೨೦೨೦ರಂದು ಭಾರತದಲ್ಲಿ ಕೊರೋನಾವೈರಸ್ ಕಾಯಿಲೆಯ ಸಮುದಾಯ ಹರಡುವಿಕೆಯನ್ನು ಕಡಿಮೆ ಮಾಡಲು ಮಾರ್ಚ್ ೨೨ ರಂದು ಬೆಳಿಗ್ಗೆ ೭ ರಿಂದ ರಾತ್ರಿ ೯ ರವರೆಗೆ ಸ್ವಯಂ-ಹೇರಿದ 'ಕರ್ಫ್ಯೂ' ಆಚರಿಸುವಂತೆ ಪ್ರಧಾನ ಮಂತ್ರಿ ಭಾರತದ ಎಲ್ಲಾ ನಾಗರಿಕರನ್ನು ಕೋರಿದರು.[೨] ಮಾರ್ಚ್ ೨೪ ರಂದು ಮುಂದಿನ ೨೧ ದಿನಗಳವರೆಗೆ ಭಾರತವು 'ಒಟ್ಟು ಲಾಕ್-ಡೌನ್'ನಲ್ಲಿ ಇರುತ್ತದೆ ಎಂದು ಪ್ರಧಾನಿ ಘೋಷಿಸಿದ್ದಾರೆ.[೩]

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜನತಾ ಕರ್ಫ್ಯೂ ಸಮಯದಲ್ಲಿ ಖಾಲಿಯಾದ ರಸ್ತೆ

ಕಾರ್ಯ ತಂತ್ರ ಬದಲಾಯಿಸಿ

ಜನತಾ ಕರ್ಫ್ಯೂ ೧೪ (೭-೯) ಗಂಟೆಗಳ ಕರ್ಫ್ಯೂ ಆಗಿದ್ದು ಮಾರ್ಚ್ ೨೨ ರಂದು ಇದನ್ನು ನಿಗದಿಪಡಿಸಲಾಯಿತು.[೪] ಪೊಲೀಸ್, ವೈದ್ಯಕೀಯ ಸೇವೆಗಳು, ಮಾಧ್ಯಮ, ಮತ್ತು ಅಗ್ನಿಶಾಮಕ ದಳದಂತಹ ಅಗತ್ಯ ಸೇವೆಗಳನ್ನು ನೀಡುವ ಜನರನ್ನು ಹೊರತುಪಡಿಸಿ ಎಲ್ಲರೂ ಕರ್ಫ್ಯೂನಲ್ಲಿ ಭಾಗವಹಿಸಬೇಕಾಗಿತ್ತು. ಸಂಜೆ ೫ ಗಂಟೆಗೆ (೨೨ ಮಾರ್ಚ್ ೨೦೨೦), ಎಲ್ಲಾ ನಾಗರಿಕರು ತಮ್ಮ ದ್ವಾರಗಳಲ್ಲಿ, ಬಾಲ್ಕನಿಗಳಲ್ಲಿ ಅಥವಾ ಕಿಟಕಿಗಳಲ್ಲಿ ನಿಂತು, ಈ ಅಗತ್ಯ ಸೇವೆಗಳನ್ನು ನೀಡುವ ಜನರಿಗೆ ಮೆಚ್ಚುಗೆಯಾಗಿ ಕೈ ಚಪ್ಪಾಳೆ ತಟ್ಟಲು ಅಥವಾ ಗಂಟೆ ಬಾರಿಸುವಂತೆ ಕೇಳಲಾಯಿತು.[೫] ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಗೆ ಸೇರಿದ ಜನರು ದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಬೇಕಾಗಿತ್ತು.

ಇತರ ಸಂಸ್ಥೆಗಳು ಅಥವಾ ಸಂಘಗಳ ಬೆಂಬಲ ಬದಲಾಯಿಸಿ

ದೆಹಲಿಯ ಕೆಲವು ಆಟೋ ಮತ್ತು ಟ್ಯಾಕ್ಸಿ ಯೂನಿಯನ್‌ಗಳು ಜನತಾ ಕರ್ಫ್ಯೂ ಸಮಯದಲ್ಲಿ ಸೇವೆ ನೀಡುವುದಿಲ್ಲ ಎಂದು ಹೇಳಿದ್ದಾರೆ.[೬]

ಕರ್ಫ್ಯೂ ಸಮಯದಲ್ಲಿ ರಾಜ್ಯಗಳು ಕೈಗೊಂಡ ಮುನ್ನೆಚ್ಚರಿಕೆಗಳು ಮತ್ತು ಕ್ರಮಗಳು ಬದಲಾಯಿಸಿ

ಕೆಲವು ರಾಜ್ಯಗಳು ಮೆಟ್ರೋ ರೈಲುಗಳು, ಉಪನಗರ ರೈಲುಗಳು, ಬಸ್ಸುಗಳು, ಟ್ರಾಮ್‌ಗಳು ಮತ್ತು ಮೊನೊರೈಲ್ ಸೇವೆಗಳನ್ನು ಸ್ಥಗಿತಗೊಳಿಸುವಂತಹ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿವೆ.[೭][೮] ಜನತಾ ಕರ್ಫ್ಯೂ ಸಮಯದಲ್ಲಿ ಜೈಲುಗಳಿಗೆ ಭೇಟಿ ನೀಡಲು ಮತ್ತು ಮೀನುಗಾರಿಕೆಗೆ ಅವಕಾಶವಿಲ್ಲ ಎಂದು ತಮಿಳುನಾಡು ಸರ್ಕಾರ ಘೋಷಿಸಿದೆ.[೯] ಪ್ರಧಾನ ಮಂತ್ರಿಯವರ ಜನತಾ ಕರ್ಫ್ಯೂ ಕರೆಯನ್ನು ಬೆಂಬಲಿಸಿ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಅಲ್ಲಿನ ಜನರಿಗೆ ಭಾನುವಾರ (೨೨-೦೩-೨೦೨೦) ಬೆಳಿಗ್ಗೆ ೬ ಗಂಟೆಯಿಂದ ೨೪ ಗಂಟೆಗಳ ಕಾಲ ಮನೆಯೊಳಗೆ ಇರಬೇಕೆಂದು ಮನವಿ ಮಾಡಿದರು.[೧೦]

ಉಲ್ಲೇಖಗಳು ಬದಲಾಯಿಸಿ

  1. Bureau, Our. "PM Modi calls for 'Janata curfew' on March 22 from 7 AM-9 PM". @businessline (in ಇಂಗ್ಲಿಷ್). Retrieved 6 April 2020.
  2. "What is Janata Curfew: A curfew of the people, by the people, for the people to fight coronavirus". Retrieved 6 April 2020.
  3. "India's 1.3bn population told to stay at home". BBC News. 25 March 2020. Retrieved 6 April 2020.
  4. "UP Officials Seen With Crowd Amid "Janata Curfew". Then, A Clarification". NDTV.com. Retrieved 6 April 2020.
  5. "PM Modi Speech on Coronavirus Highlights: Janata Curfew on Sunday, Avoid Panic Buying". Retrieved 6 April 2020.
  6. "Autos, Taxis to Remain Off-Road in Delhi During 'Janta Curfew'". Retrieved 6 April 2020.
  7. "'Janta Curfew' and how states are implementing it- All you need to know". Retrieved 6 April 2020.
  8. "Deserted Roads, Sunday Quiet As India Observes "Janata Curfew": 10 Points". NDTV.com. Retrieved 6 April 2020.
  9. Mar 21, M. K. Ananth. "'Janta Curfew': Tamil Nadu imposes various restrictions on fishing, fishing-related activities | Madurai News - Times of India". The Times of India (in ಇಂಗ್ಲಿಷ್). Retrieved 6 April 2020. {{cite news}}: Cite has empty unknown parameter: |1= (help)CS1 maint: numeric names: authors list (link)
  10. Reporter, B. S. (21 March 2020). "Covid-19 scare: Telangana may close borders with Maharastra, says CM Rao". Business Standard India. Retrieved 6 April 2020.