ಜಂಬಗಿ(ಹೆಚ್) ಒಂದು ಚಿಕ್ಕ ಹಳ್ಳಿ ಹಾಗೂ ಪುಣ್ಯಕ್ಷೇತ್ರ.ಇದು ಕರ್ನಾಟಕ ರಾಜ್ಯದ ಬಿಜಾಪೂರ ಜಿಲ್ಲೆಬಿಜಾಪೂರ ತಾಲ್ಲೂಕಿನಲ್ಲಿದೆ. ಜಂಬಗಿ(ಹೆಚ್) ಗ್ರಾಮವುಬಬಲೇಶ್ವರ - ಯರಗಟ್ಟಿ ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಾಪೂರದಿಂದ ಸುಮಾರು ೬೦ ಕಿ. ಮಿ. ದೂರ ಇದೆ.

ಜಂಬಗಿ(ಹೆಚ್)
ಜಂಬಗಿ(ಹೆಚ್)
village
Population
 (೨೦೧೨)
 • Total೧೫೦೦

ದೇವಾಲಯಗಳು ಬದಲಾಯಿಸಿ

ಶ್ರೀ ದುರ್ಗಾದೇವಿ ದೇವಾಲಯ, ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಮತ್ತು ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಮಸೀದಿಗಳು ಬದಲಾಯಿಸಿ

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ ಬದಲಾಯಿಸಿ

ಗ್ರಾಮದ ಪ್ರತಿಶತ ೯೦ ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಹಬ್ಬಗಳು ಬದಲಾಯಿಸಿ

ಪ್ರತಿವರ್ಷ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ, ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ ಬದಲಾಯಿಸಿ

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಶಾಲೆಯು ೧೯೫೫ರಲ್ಲಿ ಪ್ರಾರಂಭವಾಗಿ ೧ನೇ ತರಗತಿಯಿಂದ ೮ನೇ ತರಗತಿವರೆಗೆ ೨೦೦ರಕ್ಕೂ ಹೆಚ್ಚು ವಿದ್ಯಾರ್ಥಿಗಳ್ಳಿದ್ದಾರೆ.

ರಾಜಕೀಯ ಬದಲಾಯಿಸಿ

ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಕೈಗಾರಿಕೆಗಳು ಬದಲಾಯಿಸಿ

ಗ್ರಾಮದ ಹತ್ತಿರ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಇದೆ.