ಚಿಂಗಾರಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಚಿಂಗಾರಿ, ಇದು 2012 ರ ಕನ್ನಡ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ದರ್ಶನ್, ಭಾವನಾ ರಾಮಣ್ಣ ಮತ್ತು ದೀಪಿಕಾ ಕಾಮಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎ. ಹರ್ಷ ನಿರ್ದೇಶನದ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಇದನ್ನು ಚಿಂಗಾರಾ ಎಂದು ಹಿಂದಿಗೆ ಡಬ್ ಮಾಡಲಾಗಿದೆ. [] ಬಿ. ಮಹದೇವು ೮.೫ ಕೋಟಿ (ಯುಎಸ್$೧.೮೯ ದಶಲಕ್ಷ) ) ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ [] ಈ ಚಲನಚಿತ್ರವು 2008 ರ ಫ್ರೆಂಚ್ - ಅಮೇರಿಕನ್ ಚಲನಚಿತ್ರ, ಟೇಕನ್ [] ಮತ್ತು 2007 ರ ಅಮೇರಿಕನ್ ಚಲನಚಿತ್ರ ಟ್ರೇಡ್‌ನಿಂದ ಪ್ರೇರಿತವಾಗಿದೆ ಎಂದು ವರದಿಯಾಗಿದೆ. []

ಸಾರಾಂಶ

ಬದಲಾಯಿಸಿ

ಚಿತ್ರವು ಸೂಪರ್ ಕಾಪ್ ಸಿಸಿಬಿ ಅಧಿಕಾರಿ ಧನುಷ್ (ದರ್ಶನ್) ಸುತ್ತ ಸುತ್ತುತ್ತದೆ, ಅವರು ವೇಶ್ಯಾವಾಟಿಕೆಗೆ ಮಾರಾಟವಾಗಲಿರುವ ಸ್ವಿಟ್ಜರ್ಲೆಂಡ್‌ನಲ್ಲಿ ಅಪಹರಣಕ್ಕೊಳಗಾದ ತನ್ನ ಗೆಳತಿಯನ್ನು ರಕ್ಷಿಸಲು ಹೊರಟಾಗ ನಡೆಯುವ ಕಥೆಯಾಗಿದೆ. 

ಪಾತ್ರವರ್ಗ

ಬದಲಾಯಿಸಿ
  • ಧನುಷ್ ಪಾತ್ರದಲ್ಲಿ ದರ್ಶನ್
  • ಗೀತಾ ಪಾತ್ರದಲ್ಲಿ ದೀಪಿಕಾ ಕಾಮಯ್ಯ
  • ಭಾವನಾ
  • ಸೃಜನ್ ಲೋಕೇಶ್
  • ಯಶಸ್ ಸೂರ್ಯ
  • ವೆರಾ ಪ್ರನ್
  • ರಿಚರ್ಡ್ ಕೋಬಿಲ್ (ನಟ) ಜಮ್ಶೆಮ್ ಆಗಿ
  • ವಿನೀಶ್ ಮಲ್ಹೋತ್ರಾ ಪಾತ್ರದಲ್ಲಿ ಮಧು ಗುರುಸ್ವಾಮಿ

ಬಿಡುಗಡೆ

ಬದಲಾಯಿಸಿ

ಚಲನಚಿತ್ರವು 3 ಫೆಬ್ರವರಿ 2012 ರಂದು 180+ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. [] ಚಿಂಗಾರಿ ತನ್ನ ಮೊದಲ ದಿನದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಒಟ್ಟು ಮೊತ್ತವನ್ನು ಸಂಗ್ರಹಿಸಿತು, [] ಚಿಂಗಾರಿಯು ಕನ್ನಡೇತರ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತಿದ್ದ ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಗಳಿಸಿತು.

ಧ್ವನಿಮುದ್ರಿಕೆ

ಬದಲಾಯಿಸಿ

2 ಜನವರಿ 2012 ರಂದು ನಡೆದ ಚಿಂಗಾರಿ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವನ್ನೂ ಎ. ಹರ್ಷ ನಿರ್ದೇಶನ ಮಾಡಿದರು, ಸುದೀಪ್ ಅವರು ಆಡಿಯೋ ಬಿಡುಗಡೆ ಮಾಡಿದರು. ಕವಿರಾಜ್, ಯೋಗರಾಜ ಭಟ್ ಮತ್ತು ಜಯಂತ ಕಾಯ್ಕಿಣಿ [] ಅವರ ಸಾಹಿತ್ಯಕ್ಕೆ ವಿ.ಹರಿಕೃಷ್ಣ ಅವರು 5 ಹಾಡುಗಳನ್ನು ಸಂಯೋಜಿಸಿದ್ದಾರೆ.

ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಬಾರೆ ಬಾರೆ"ಕವಿರಾಜ್ಕೈಲಾಶ್ ಖೇರ್ 
2."ಗಮನವ"ಜಯಂತ ಕಾಯ್ಕಿಣಿಜಾವೇದ್ ಅಲಿ, ಶ್ರೇಯಾ ಘೋಷಾಲ್ 
3."ಕೈ ಕೈಯ"ಯೋಗರಾಜ ಭಟ್ವಿ.ಹರಿಕೃಷ್ಣ 
4."ನೀ ಮಿಡಿಯುವೆ"ಕವಿರಾಜ್ ಸೌಮ್ಯ ಮಹಾದೇವನ್ 
5."ಚಿಂಗಾರಿ ಥೀಮ್" ವಾದ್ಯಸಂಗೀತ 

ವಿಮರ್ಶೆ

ಬದಲಾಯಿಸಿ

ರೆಡಿಫ್ ಚಿತ್ರಕ್ಕೆ 3 ಸ್ಟಾರ್‌ಗಳನ್ನು ನೀಡಿತು ಮತ್ತು ವೇಣು ಅವರ ಕ್ಯಾಮೆರಾವರ್ಕ್ ಅನ್ನು ಹೊಗಳಿ ದರ್ಶನ್ ಮತ್ತು ದೀಪಿಕಾ ಕಾಮಯ್ಯ ಅವರ ಅಭಿನಯವನ್ನು ಮೆಚ್ಚಿತು. CNN IBN ಅದಕ್ಕೆ 3 ಸ್ಟಾರ್‌ಗಳನ್ನು ನೀಡಿ ಹೇಳೀತು "ದರ್ಶನ್ ಅವರ ಸೊಗಸಾದ ನೋಟ, ಹಾಸ್ಯಮಯ ನಟನೆಗಳು ಮತ್ತು ಉಸಿರು ಬಿಗಿಹಿಡಿಸುವ ಆಕ್ಷನ್ ಸೀಕ್ವೆನ್ಸ್‌ಗಳಿಂದ ಪ್ರಭಾವ ಬೀರುತ್ತಾರೆ. ಅವರು ತಮ್ಮ ಅತ್ಯುತ್ತಮ ಪರದೆಯ ಮೇಲಿನ ಹಾಜರಿಯಿಂದ ಇಡೀ ಚಲನಚಿತ್ರವನ್ನು ಆಕ್ರಮಿಸಿಕೊಳ್ಳುತ್ತಾರೆ."

ಬಾಕ್ಸ್ ಆಫೀಸ್ ಗಳಿಕೆ

ಬದಲಾಯಿಸಿ

ವಿತರಕ ಪ್ರಸಾದ್ ಪ್ರಕಾರ ಇದರ ಮೊದಲ ವಾರದ ಒಟ್ಟು ಕಲೆಕ್ಷನ್ 6 ಕೋಟಿ ರೂಪಾಯಿ ದಾಟಿದೆ . ಬಿಡುಗಡೆಯಾದ ಮೊದಲ ವಾರದಲ್ಲಿ ವಿತರಕರ ಪಾಲು ಸುಮಾರು 5 ಕೋಟಿ ರೂಪಾಯಿ ಆಗಿರುತ್ತದೆ. 10 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿತು. []

ಉಲ್ಲೇಖಗಳು

ಬದಲಾಯಿಸಿ
  1. "Chingaari Release on January 27". chitraloka.com. 20 November 2011. Archived from the original on 2 March 2012. Retrieved 8 February 2013.
  2. "'CHINGARI' RS.8 CRORE FILM 2 CRORE TV RIGHTS AUDIO ON JAN 2". Chitratara.com. Retrieved 8 February 2013.
  3. "Kannada Review: 'Chingari' is interesting". News18.
  4. "Bypassing copycats, Sandalwood style". Bangalore Mirror.
  5. "Chingaari Darshan's Biggest Multiplex Release". chitraloka.com. 3 February 2012. Archived from the original on 22 March 2012. Retrieved 8 February 2013.
  6. "Chingaari Collected Two Crores on Day One". chitraloka.com. Archived from the original on 4 ಮಾರ್ಚ್ 2016. Retrieved 8 February 2013.
  7. "Chingaari Audio Released". chitraloka.com. 3 January 2012. Archived from the original on 8 January 2012. Retrieved 8 February 2013.
  8. "Samarth Ventures Happy about Chingaari". chitraloka.com. 10 February 2012. Archived from the original on 18 March 2012. Retrieved 8 February 2013.

ಬಾಹ್ಯ ಕೊಂಡಿಗಳು

ಬದಲಾಯಿಸಿ