ಚಮೇಲಿ ಮೆಮ್ಸಾಬ್ (ಇಂಗ್ಲಿಷ್: ಮೇಡಮ್ ಚಮೇಲಿ) ಇದು ಅಬ್ದುಲ್ ಮಜೀದ್ ನಿರ್ದೇಶನದ ೧೯೭೫ ರ ಭಾರತೀಯ ಅಸ್ಸಾಮಿ ಪ್ರಣಯ ನಾಟಕ ಚಲನಚಿತ್ರವಾಗಿದೆ. ಅಸ್ಸಾಂನ ಟೀ ಎಸ್ಟೇಟ್‌ನಲ್ಲಿ ನಡೆಯುವ ಪ್ರೇಮಕಥೆಯೊಂದು, ಬ್ರಿಟಿಷ್ ಟೀ ಎಸ್ಟೇಟ್ ಮಾಲೀಕ ಮತ್ತು ಸ್ಥಳೀಯ ಟೀ ತೋಟದ ಕೆಲಸಗಾರನ ನಡುವೆ ನಡೆಯುತ್ತದೆ.[] ಇದರಲ್ಲಿ ಜಾರ್ಜ್ ಬೇಕರ್ ಮತ್ತು ಬಿನಿತಾ ಬೊರ್ಗೊಹೈನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಪತ್ರಕರ್ತ ಮತ್ತು ಬರಹಗಾರ ನಿರೋಡೆ ಚೌಧರಿ ಅವರ ಸಣ್ಣ ಕಥೆಯನ್ನು ಆಧರಿಸಿದೆ.[]

ಚಮೇಲಿ ಮೆಮ್ಸಾಬ್
ನಿರ್ದೇಶನಅಬ್ದುಲ್ ಮಜೀದ್
ನಿರ್ಮಾಪಕಸ್ಯೂಜ್ ಬೊಲ್ಚಾಬಿ ಸಂತ
ಕಥೆನಿರೋಡ್ ಚೌಧರಿ
ಪಾತ್ರವರ್ಗಜಾರ್ಜ್ ಬೇಕರ್
ಬಿನಿತಾ ಬೋರ್ಗೊಹೈನ್
ಸಂಗೀತಭೂಪೇನ್ ಹಜಾರಿಕಾ
ಬಿಡುಗಡೆಯಾಗಿದ್ದು
  • Error: All values must be integers (help)
ಅವಧಿ೧೪೪ ನಿಮಿಷಗಳು
ದೇಶಭಾರತ
ಭಾಷೆಅಸ್ಸಾಮಿ

ಈ ಚಿತ್ರವು ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿತು.[] ನಾಯಕ ನಟ ಬೇಕರ್ ಮ್ಯಾಟ್ನಿ ವಿಗ್ರಹವಾಗಿ ಮಾರ್ಪಟ್ಟರು. ೧೯೭೫ ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ,[] ಈ ಚಿತ್ರವು ಭೂಪೇನ್ ಹಜಾರಿಕಾ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನ ಮತ್ತು ಅಸ್ಸಾಮಿ ಭಾಷೆಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ೨೦೧೩ ರಲ್ಲಿ, ಗೋವಾದಲ್ಲಿ ನಡೆದ ೪೪ ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರವನ್ನು "ಫೋಕಸ್: ನಾರ್ತ್ ಈಸ್ಟ್" ವಿಭಾಗದ ಭಾಗವಾಗಿ ಪ್ರದರ್ಶಿಸಲಾಯಿತು.[]

ಕಥಾವಸ್ತು

ಬದಲಾಯಿಸಿ

ಈ ಚಿತ್ರವು ಅಸ್ಸಾಂನ ಚಹಾ ತೋಟದಲ್ಲಿ ನಡೆಯುತ್ತದೆ. ಅಲ್ಲಿ ಬರ್ಕ್ಲಿ (ಜಾರ್ಜ್ ಬೇಕರ್) ಬ್ರಿಟಿಷ್ ಮಾಲೀಕ, ಅವನು ಚಹಾ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಸ್ಥಳೀಯ ಹುಡುಗಿ ಚಮೇಲಿ (ಬಿನಿತಾ ಬೊರ್ಗೊಹೈನ್) ಯನ್ನು ಪ್ರೀತಿಸುತ್ತಾನೆ. ತರುವಾಯ, ಅವರು ಮದುವೆಯಾಗುತ್ತಾರೆ. ಆದರೆ, ನಂತರ ಅವಳ ಆತ್ಮಹತ್ಯೆಗೆ ಅವನನ್ನು ದೂಷಿಸಲಾಗುತ್ತದೆ.

ಪಾತ್ರವರ್ಗ

ಬದಲಾಯಿಸಿ
  • ಬರ್ಕ್ಲಿ ಪಾತ್ರದಲ್ಲಿ ಜಾರ್ಜ್ ಬೇಕರ್
  • ಚಮೇಲಿ ಪಾತ್ರದಲ್ಲಿ ಬಿನಿತಾ ಬೊರ್ಗೊಹೈನ್
  • ಮೊಂಗ್ಲು ಪಾತ್ರದಲ್ಲಿ ಅಬ್ದುಲ್ ಮಜೀದ್
  • ಅನಿಲ್ ಚಟರ್ಜಿ
  • ತರುಣ್ ಕುಮಾರ್

ಧ್ವನಿಪಥ

ಬದಲಾಯಿಸಿ

ಚಿತ್ರಕ್ಕೆ ಡಾ.ಭೂಪೇನ್ ಹಜಾರಿಕಾ ಸಂಗೀತ ನೀಡಿದ್ದಾರೆ.[]

ಶೀರ್ಷಿಕೆ
ಸಂ.ಹಾಡುಸಾಹಿತ್ಯಗಾಯಕರುಸಮಯ
1."ಅಸೋಮ್ ದೇಶೋರ್ ಬಗಿಸಾರೆ"ಭೂಪೇನ್ ಹಜಾರಿಕಾಉಷಾ ಮಂಗೇಶ್ಕರ್, ಭೂಪೇನ್ ಹಜಾರಿಕಾ 
2."ಹವಾ ನಯಿ ಬತಾಶ್ ನಯಿ"ಭೂಪೇನ್ ಹಜಾರಿಕಾಉಷಾ ಮಂಗೇಶ್ಕರ್ 
3."ಜಿಗಿಜಾ ಗಿಜಾವೊ"ಭೂಪೇನ್ ಹಜಾರಿಕಾಭೂಪೇನ್ ಹಜಾರಿಕಾ, ಉಷಾ ಮಂಗೇಶ್ಕರ್ 
4."ಹೈರೆ ಪ್ರಾನೇರ್ ಬಸಾ ಮೋರ್"ಭೂಪೇನ್ ಹಜಾರಿಕಾಉಷಾ ಮಂಗೇಶ್ಕರ್ 
5."ಓ ಬಿದೇಶಿ ಬಂಧು"ಭೂಪೇನ್ ಹಜಾರಿಕಾಭೂಪೇನ್ ಹಜಾರಿಕಾ 

ರಿಮೇಕ್

ಬದಲಾಯಿಸಿ

ಈ ಚಿತ್ರವನ್ನು ಬಾಂಗ್ಲಾ ಮತ್ತು ಹಿಂದಿ ಭಾಷೆಗಳಲ್ಲಿ ರಿಮೇಕ್ ಮಾಡಲಾಯಿತು. ಇಂದಾರ್ ಸೇನ್ ನಿರ್ದೇಶನದ ಬಾಂಗ್ಲಾ ಆವೃತ್ತಿ 'ಚಮೇಲಿ ಮೆಮ್ಸಾಹೇಬ್' ೧೯೭೮ ರಲ್ಲಿ, ಬಿಡುಗಡೆಯಾಯಿತು.[] ಈ ಚಿತ್ರದ ಎರಡು ಪ್ರಮುಖ ಪಾತ್ರಗಳನ್ನು ಜಾರ್ಜ್ ಬೆಕರ್ ಮತ್ತು ರಾಖಿ ಗುಲ್ಜಾರ್ ನಿರ್ವಹಿಸಿದ್ದಾರೆ. ಮತ್ತೊಂದೆಡೆ, ಅಜಿತ್ ಲಾಹಿರಿ ನಿರ್ದೇಶನದ ಹಿಂದಿ 'ಚಮೇಲಿ ಮೆಮ್ಸಾಬ್' ೧೯೮೧ ರಲ್ಲಿ, ಬಿಡುಗಡೆಯಾಯಿತು. ಮುಖ್ಯ ಪಾತ್ರಗಳನ್ನು ಮಿಥುನ್ ಚಕ್ರವರ್ತಿ ಮತ್ತು ಅಭಾ ಧುಲಿಯಾ ನಿರ್ವಹಿಸಿದರು.[]

ಉಲ್ಲೇಖಗಳು

ಬದಲಾಯಿಸಿ
  1. "'Chameli Memsaab a memorable experience'". The Assam Tribune. 9 ಡಿಸೆಂಬರ್ 2010. Archived from the original on 23 ಏಪ್ರಿಲ್ 2014. Retrieved 21 ಏಪ್ರಿಲ್ 2014.
  2. Asomiya: Handpicked Fictions. Katha. 1 January 2003. p. 196. ISBN 978-81-87649-42-7.
  3. "Chameli's Saab returns to inaugurate film festival: Show organised at George Baker's request". The Telegraph. 5 September 2007. Archived from the original on 22 April 2012. Retrieved 2014-04-21.
  4. "23rd National Film Awards" (PDF). Directorate of Film Festivals. Retrieved 4 October 2011.
  5. "Chameli Memsaab at 44th International Film Festival of India in Goa". India Tea. 10 ನವೆಂಬರ್ 2013. Archived from the original on 23 ಏಪ್ರಿಲ್ 2014. Retrieved 21 ಏಪ್ರಿಲ್ 2014.
  6. "Chameli Memsaheb". Gaana. Retrieved 30 May 2021.
  7. "1978 Bangla Cinema Chameli Memsaheb". Retrieved 1 February 2020.
  8. "1981 Hindi Film Chamelee Memsaab". Retrieved 1 February 2020.


ಬಾಹ್ಯ ಕೊಂಡಿಗಳು

ಬದಲಾಯಿಸಿ