ಗೋಮತೀ ನದಿ ಭಾರತಉತ್ತರಪ್ರದೇಶ ರಾಜ್ಯದಲ್ಲಿ ಹರಿಯುವ ಒಂದು ನದಿ, ಗಂಗಾನದಿಯ ಉಪನದಿಗಳಲ್ಲೊಂದು. ಪಿಲಿಬಿತ್‍ನಿಂದ ಪೂರ್ವಕ್ಕೆ 32 ಕಿಮೀ ದೂರದಲ್ಲಿರುವ ಗೋಮತ್ ತಾಲ್‍ನಲ್ಲಿ (ಉ.ಅ.28° 35ದಿ ; ಪು.ರೇ.80° 75ದಿ) ಹುಟ್ಟಿ 19 ಕಿಮೀ ವರೆಗೆ ಝರಿಯಂತೆ ಹರಿಯುತ್ತದೆ. 56 ಕಿಮೀ ಹರಿದ ಅನಂತರ ಜೊಮ್ಕೈ ನದಿ ಇದನ್ನು ಸಂಗಮಿಸುತ್ತದೆ. ಅಲ್ಲಿಂದ ಮುಂದೆ ಶಾಶ್ವತವಾದ ಪ್ರವಾಹ ರೂಪದಲ್ಲಿ ಇದು ಹರಿಯತೊಡಗುತ್ತದೆ. ಸ್ವಲ್ಪ ದೂರದಲ್ಲಿ ಶಹಜಹಾನ್ಪುರ ದಿಂದ ಖೇರೀಗೆ ಹೋಗುವ ಮಾರ್ಗದಲ್ಲಿ ಗೋಮತಿಗೆ 63 ಮೀ ಉದ್ದದ ಸೇತುವೆ ನಿರ್ಮಾಣವಾಗಿದೆ. ಸೇತುವೆಯನ್ನು ದಾಟಿದ ಮೇಲೆ ಮಂದಗತಿಯಿಂದ ಹರಿಯುವ ಈ ನದಿಗೆ ಅನೇಕ ಉಪನದಿಗಳೂ ನಾಲೆಗಳೂ ಬಂದು ಸೇರುತ್ತವೆ. ಮುಹಮ್ಮದೀಯಿಂದ ಲಖನೌ ವರೆಗೆ ನದಿಯ ಪಾತ್ರದ ಅಗಲ 30-36 ಮೀ. ಇಲ್ಲಿ ನದಿಯ ದಡಗಳು ತಕ್ಕಮಟ್ಟಿಗೆ ಎತ್ತರವಾಗಿವೆ. ಸೀತಾಪುರ ಜಿಲ್ಲೆಯಲ್ಲಿ ಗೋಮತಿಯನ್ನು ಬಂದು ಸೇರುವ ನದಿಗಳು ಕಥ್ನಾ ಮತ್ತು ಸರಾಯಾನ. ಲಖನೌ ನಗರದಲ್ಲಿ ಇದಕ್ಕೆ ಅನೇಕ ಸೇತುವೆಗಳಿವೆ. ಲಖನೌದಿಂದ ಮುಂದೆ ಈ ನದಿ ಬಾರಾಬಂಕಿ, ಸುಲ್ತಾನ್ಪುರ ಮತ್ತು ಜೌನ್ಪುರ ಜಿಲ್ಲೆಗಳನ್ನು ದಾಟಿ ಮುಂದುವರೆಯುತ್ತದೆ. ಅಲ್ಲಿ ನದಿಯ ಮಾರ್ಗ ಅಂಕುಡೊಂಕು; ಪಾತ್ರದ ಅಗಲ 60-180 ಮೀ. ಜೌನ್ಪುರದಲ್ಲಿ 16ನೆಯ ಶತಮಾನದಲ್ಲಿ ಕಟ್ಟಿದ 196 ಮೀ ಉದ್ದದ ಶಾಹೀ ಎಂಬ ಕಲ್ಲುಸೇತುವೆ ತುಂಬ ಪ್ರಸಿದ್ಧವಾದುದು. ಮುಂದೆ ಗೋಮತಿಯನ್ನು ಸೇರುವ ನದಿ ಸಯೀ. ವಾರಾಣಸಿಯಿಂದ ಉತ್ತರಕ್ಕೆ 32 ಕಿಮೀ ದೂರದಲ್ಲಿ ಗೋಮತೀ ನದಿ ಘಾಜಿಪುರ ಜಿಲ್ಲೆಯ ಸೈದ್ಪುರ ಎಂಬ ಊರಿನ ಹತ್ತಿರ ಗಂಗಾನದಿಯನ್ನು ಸಂಗಮಿಸುತ್ತದೆ. ನದಿಯ ಒಟ್ಟು ಉದ್ದ ಸು. 940 ಕಿಮೀ.

ಗೋಮತೀ ನದಿ
गोमती
Gumti
Gomati
[[Image:| 256px|none
]]
Kintra ಭಾರತ
Soorce ಗೋಮತಿ ತಾಲ್
Lenth ೯೦೦ km (೫೫೯ mi) approx.
Discharge for ಸೈದಾಪುರ
 - average ೨೩೪ /s (೮,೨೬೪ cu ft/s) []


ಗೋಮತೀ ನದಿ ಮತ್ತು ಅದರ ಉಪನದಿಗಳಿಂದ 30,437 ಚ.ಕಿಮೀ ಪ್ರದೇಶ ಫಲವತ್ತಾಗಿದೆ. ಅತಿವೃಷ್ಟಿಯಿಂದ ಆಗಾಗ್ಗೆ ನದಿಯಲ್ಲಿ ಅತಿಯಾದ ನೆರೆ ಬರುವುದುಂಟು. ಗೋಮತೀ ನದಿಯಲ್ಲಿ ಮುಹಮ್ಮದೀವರೆಗೆ ದೋಣಿ ಸಂಚಾರ ಸಾಧ್ಯ. ಲಖನೌ, ಸೀತಾಪುರ, ಬಾರಾಬಂಕಿ, ರಾಯ್ಬರೇಲಿ, ಸುಲ್ತಾನ್ಪುರ, ಜೌನ್ಪುರ ನಗರಗಳು ಗೋಮತೀ ನದಿಯ ದಂಡೆಯ ಮೇಲಿವೆ.

ಉಲ್ಲೇಖಗಳು

ಬದಲಾಯಿಸಿ
  1. Dutta, Venkatesh; Srivastava, Ravindra; Yunus, M.; et al. (July 2011). "Restoration Plan of Gomti River with Designated Best Use Classification of Surface Water Quality based on River Expedition, Monitoring and Quality Assessment" (PDF). Earth Science India. 4 (3): 80–104. Archived from the original (PDF) on 2015-06-10. Retrieved 2013-11-19. {{cite journal}}: Explicit use of et al. in: |last4= (help)

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: