ಗೋಬಿ ಮಂಚೂರಿಯನ್ ಭಾರತದಲ್ಲಿ ಜನಪ್ರಿಯವಾಗಿರುವ ಒಂದು ಭಾರತ ಚೀನೀ ಕರಿದ ಹೂಕೋಸು ಆಹಾರ ಪದಾರ್ಥ. ಗೋಬಿ ಮಂಚೂರಿಯನ್ ಭಾರತೀಯ ಅಭಿರುಚಿಗೆ ತಕ್ಕಂತೆ ಚೀನೀ ಅಡಿಗೆ ಮತ್ತು ರುಚಿಕಟ್ಟುವಿಕೆ ತಂತ್ರಗಳ ಅಳವಡಿಕೆಯ ಅದು ಮೂಲತಃ ಒಂದು ಶತಮಾನದಿಂದ ಕೋಲ್ಕಟಾದಲ್ಲಿ ನೆಲೆಸಿದ್ದ ಒಂದು ಚಿಕ್ಕ ಚೀನೀ ಸಮುದಾಯದಿಂದ ಅಭಿವೃದ್ಧಿ ಹೊಂದಿದ್ದು ಎಂದು ನಂಬಲಾಗಿದೆ.

ಮಾಡುವ ವಿಧಾನ ಬದಲಾಯಿಸಿ

ಸಾಮಾನ್ಯವಾಗಿ ಗೋಬಿ ಮಂಚೂರಿಯನ್, ಹಾಗೆ ತುಂಬಾ ವಿಧಾನದ ಮಂಚೂರಿಯನ್ ಗಳನ್ನೂ ತಯಾರಿಸುತ್ತಾರೆ. ಹಾಗೆಯೇ ಇದು ಒಂದು ವಿನೂತನ ಶೈಲಿಯ ಮಂಚೂರಿಯನ್ .ಅಲೂ ಗೋಬಿ ಮಂಚೂರಿಯನ್ ಮಾಡಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಕೆಳಗೆ ವಿವರಿಸಲಾಗಿದೆ. ಮಾಡಿ ನೋಡಿ ಅಭಿಪ್ರಾಯ ತಿಳಿಸಿ.

ಮೊದಲು ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಕಿವುಚಿ ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಕರಿಮೆಣಸಿನ ಪುಡಿ ಸೇರಿಸಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಇಟ್ಟುಕೊಳ್ಳಿ. ನಂತರ ಮೈದಾ, ಕಾರ್ನ್ ಫ್ಲೋರ್, ಕೆಂಪುಮೆಣಸಿನಪುಡಿ,೧ ಚಮಚ ಸೋಯಾಸಾಸ್, ಉಪ್ಪು ಹಾಗೂ ಅಕ್ಕಿ ಹಿಟ್ಟನ್ನು ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಟ್ಟುಕೊಳ್ಳಿ ಹೂಕೋಸು ಚೂರುಗಳನ್ನು ತೆಗೆದುಕೊಳ್ಳಿ ಆಲೂಗಡ್ಡೆ ಉಂಡೆಯ ಒಳಗೆ ಹೂಕೋಸಿನ ಚೂರುಗಳನ್ನು ತುಂಬಿ ಮೈದಾಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿದು ತೆಗೆದಿಟ್ಟುಕೊಳ್ಳಿ. ನಂತರ ಸ್ವಲ್ಪ ಎಣ್ಣೆ ಬಿಸಿ ಮಾಡಿ ಶುಂಟಿ, ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ ಸೇರಿಸಿ ಹುರಿದು ಅದಕ್ಕೆ ಉಳಿದ ಸೋಯಾಸಾಸ್, ಟೊಮೇಟೊ ಸಾಸ್ ಹಾಗೂ ವಿನೆಗರ್ ಸೇರಿಸಿ ಮತ್ತೆ ಹುರಿಯಿರಿ. ಅದಕ್ಕೆ ಕರಿದಿಟ್ಟ ಹೂಕೊಸುಗಳನ್ನು ಸೇರಿಸಿ ಮತ್ತೆ ತೊಳೆಸಿ ಒಂದು ಪಾತ್ರೆಯಲ್ಲಿ ೧ ಚಮಚ ಕಾರ್ನ್ ಫ್ಲೋರ್ ಹಾಗೂ ಸ್ವಲ್ಪ ನೀರು ಸೇರಿಸಿ ಆ ಮಿಶ್ರಣವನ್ನು ಒಗ್ಗರಣೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಈರುಳ್ಳಿ ಹೂವು ಹಾಗೂ ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿ ಫ್ರೈಡ್ ರೈಸ್ ಜೊತೆ ತಿನ್ನಲು ಕೊಡಿ.