ಗುಂಜಾ ನರಸಿಂಹ ಸ್ವಾಮಿ ದೇವಾಲಯ, ತಿರುಮಕೂಡಲು ನರಸೀಪುರ

ಗುಂಜಾ ನರಸಿಮ ಸ್ವಾಮಿ ದೇವಸ್ಥಾನವು ತಿರುಮಕೂಡಲು ನರಸೀಪುರದಲ್ಲಿರುವ ಹಿಂದೂ ದೇವಾಲಯವಾಗಿದೆ, ಇದು ಮೈಸೂರು ಜಿಲ್ಲೆಯ, ಕರ್ನಾಟಕ ರಾಜ್ಯದ, ಭಾರತದಲ್ಲಿದೆ. ಈ ಪಟ್ಟಣವು ಮೈಸೂರಿನಿಂದ ಆಗ್ನೇಯಕ್ಕೆ ೨೦ ಮೈಲುಗಳಷ್ಟು ದೂರದಲ್ಲಿದೆ. ಈ ದೇವಾಲಯವು ವಿಜಯನಗರ ಸಾಮ್ರಾಜ್ಯದ ಸುಮಾರು ೧೬ ನೇ ಆಳ್ವಿಕೆಗೂ ಹಿಂದಿನದು ಮತ್ತು ಪ್ರವೇಶ ದ್ವಾರದ ಮೇಲೆ (ಮಹಾದ್ವಾರ) ಭವ್ಯವಾದ ಗೋಪುರ ಮತ್ತು ಗರ್ಭಗುಡಿಯ ಮುಂಭಾಗದಲ್ಲಿ ನಾಲ್ಕು ಕಂಬಗಳ ಮಂಟಪವಿದ್ದು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ಕಾವೇರಿ ನದಿ ಮತ್ತು ಕಬಿನಿ ನದಿಯ ಸಂಗಮದಲ್ಲಿದೆ ಮತ್ತು ಇದನ್ನು ಹಿಂದೂಗಳು ಪವಿತ್ರಕ್ಷೇತ್ರವೆಂದು ಪರಿಗಣಿಸುತ್ತಾರೆ. ಮುಖ್ಯ ದ್ವಾರದ ಮುಂಭಾಗದಲ್ಲಿ ಬೆಳೆಯುವ ಗುಂಜಾ (ಗುಲಗಂಜಿ) ಮರದಿಂದಾಗಿ (ಸಸ್ಯ ಶಾಸ್ತ್ರದಲ್ಲಿ ಅಬ್ರಸ್ ಪ್ರಿಕಾಟೋರಿಯಸ್ ) ದೇವಾಲಯವು ಈ ಹೆಸರನ್ನು ಪಡೆದುಕೊಂಡಿದೆ; ಗುಲಗಂಜಿ ಗಿಡದ ತೂಕದಷ್ಟು ವಾರಣಾಸಿ (ಕಾಶಿ) ಗಿಂತ ಈ ದೇವಾಲಯವು ಹೆಚ್ಚು ಪವಿತ್ರವಾಗಿದೆ ಎಂಬುದು ಸ್ಥಳೀಯರು ಹೆಮ್ಮೆಯಿಂದ ಹೇಳಿಕೋಳ್ಳುತ್ತಾರೆ. ದೇವಾಲಯದಲ್ಲಿನ ಶಿಲ್ಪಗಳು ಹಿಂದೂ ದೇವರು ನರಸಿಂಹ (ಗುಂಜಾ ಬೆರ್ರಿ ಮತ್ತು ಕಾಂಡವನ್ನು ಹಿಡಿದಿರುವ) ಮತ್ತು ರಾಕ್ಷಸ ರಾಜ ಹಿರಣ್ಯಕಶಿಪುವನ್ನು ಒಳಗೊಂಡಿವೆ. []

ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನ
ಹಿಂದೂ ದೇವಾಲಯ
ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದ ದ್ರಾವಿಡ ಗೋಪುರ
ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದ ದ್ರಾವಿಡ ಗೋಪುರ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಮೈಸೂರು
Talukasತಿರುಮಕೂಡಲು ನರಸೀಪುರ
Languages
ಸಮಯ ವಲಯಯುಟಿಸಿ+5:30 (IST)

ಬ್ರಿಟಿಷ್ ರಾಜ್ ಇತಿಹಾಸಕಾರ ಮತ್ತು ಶಾಸನಶಾಸ್ತ್ರಜ್ಞ ಬಿ. ಲೆವಿಸ್ ರೈಸ್ ಪ್ರಕಾರ, ಈ ದೇವಾಲಯವು ವಾರ್ಷಿಕ ನಿರ್ವಹಣೆಯೊಂದಿಗೆ ಮೈಸೂರಿನ ("ಊಳಿಗಮಾನ್ಯ ಪ್ರಭು") ಆಶ್ರಯದಲ್ಲಿತ್ತು. ಈ ಸಮಯದಲ್ಲಿ ದೇವಾಲಯವು ದುರಸ್ತಿ ಮತ್ತು ನವೀಕರಣವಾಯಿತು ಎಂದು ದಾಖಲೆಗಳು ಸೂಚಿಸುತ್ತವೆ ಎನ್ನುತ್ತಾನೆ. ಈ ದೇವಾಲಯವು ಭಾರತೀಯ ಪುರಾತತ್ವ ಸಮೀಕ್ಷೆಯ ಕರ್ನಾಟಕ ರಾಜ್ಯ ವಿಭಾಗದ ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದೆ. [] "ಅಗಸ್ತ್ಯೇಶ್ವರ" ದೇವಸ್ಥಾನ ಎಂದು ಕರೆಯಲ್ಪಡುವ ಮತ್ತೊಂದು ದೇವಾಲಯವಿದೆ, ಮತ್ತು ಎರಡೂ ದೇವಾಲಯಗಳು ವಾರ್ಷಿಕವಾಗಿ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆಕರ್ಷಿಸುವ ಧಾರ್ಮಿಕ ಜಾತ್ರೆಯ ( ಜಾತ್ರಾ ) ಸ್ಥಳವಾಗಿದೆ. []

ಗ್ಯಾಲರಿ

ಬದಲಾಯಿಸಿ
  1. ೧.೦ ೧.೧ "Ancient shrine wears a new look". R Krishna Kumar. The Hindu. Retrieved 10 June 2015. ಉಲ್ಲೇಖ ದೋಷ: Invalid <ref> tag; name "hiranya" defined multiple times with different content
  2. "Protected Monuments in Karnataka". Archaeological Survey of India, Government of India. Indira Gandhi National Center for the Arts. Retrieved 2 June 2015.

ಬಾಹ್ಯ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ