ಕ್ರೈಸ್ತರ ವಿವಾಹ ಪದ್ಧತಿ

ಸ್ಟೆಫೆನ್ ಬೆಕಿಂಗುಗಾಮ್$ಮೇರಿಗಳ ವಿವಾಹ

ದ್ಯೆವಶಾಸತ್ರದ ಹಿನ್ನೆಲೆಯಲ್ಲಿ ವಿವಾಹ ಬದಲಾಯಿಸಿ

ಮದುವೆ ಒಂದು ಪ್ರೀತಿಯ ಒಡಂಬಡಿಕೆ (ಹಳೆಯ ಒಡಂಬಡಿಕೆಯಲ್ಲಿ ದೇವರು ಮತ್ತು ಧಮ೯ಸಭೆ ಇಡೀ ವಿಶ್ವಾಸಿಗಳ ಸಮೂದಾಯದ ನಡುವಿನ ಒಡಂಬಡಿಕೆ). ಮದುವೆ ಗಂಡು-ಹೆಣ್ಣು ಒಂದೇ ಶರೀರವಾಗುವ ದೇವರ ಕಲೆ. ಒಂದೆ ಶರೀರವೆಂದರೆ ದ್ಯೆಹಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ, ಬೌದ್ಧಿಕವಾಗಿರುವ ಬಿಡಿಸಲಾಗದ ಬೆಸುಗೆ .

ಅದಿಕಾಂಡದ ಸೃಷ್ಟಿಯ ಕಥನದಲ್ಲಿ ಕಂಡು ಬರುವ ಮೌಲ್ಯಗಳು ಬದಲಾಯಿಸಿ

ಗಂಡು-ಹೆಣ್ಣು ಸಮಾನತೆ ಬದಲಾಯಿಸಿ

ಗಂಡು-ಹೆಣ್ಣು ಗೌರವ ಮತ್ತು ಮೌಲ್ಯ ಉಳ್ಳವರು. ಯಾರು ಮೆಲಲ್ಲ, ಯಾರೂ ಕೀಳಲ್ಲ. ಗಂಡು-ಹೆಣ್ಣು, ಹೆಣ್ಣಿಗೆ-ಗಂಡು ಸೃಷ್ಟಿ ನಿಯಮದ ಅಗತ್ಯತೆ. ಆದಾಮನ ಪಕ್ಕೆಲುಬಿನಿಂದ ಹೆಣ್ಣಿನ ಸೃಷ್ಟಿ -ಗಂಡು ಹೆಣ್ಣುಗಳು ಸಮಾನತೆಯ ಸಂಕೇತ.

ಗಂಡುಹೆಣ್ಣುಗಳ ಪರಸ್ಪರ ಪೂರಕ ಸಂಬಂಧ ಬದಲಾಯಿಸಿ

ಉದಾ;- ಕುಂಟ ಮತ್ತು ಕುರುಡ ಯಾತ್ರೆಗೆ ಹೊರಟ ಹಾಗೆ. ಗಂಡು ಮತ್ತು ಹೆಣ್ಣಿನಲ್ಲಿರುವ ವಿಶಿಷ್ಟ ಶಕ್ತಿಯಾಗಿ ರೂಪುಗೊಳ್ಳುತ್ತದೆ. ಪರಸ್ಪರ ಸಂಬಂಧ ಅನಿವಾರ್ಯ, ಕುಂಟ ಯಾತ್ರೆಗೆ ನಡೆದು ಹೊಗಲಾರ, ಹಾಗೆ ಕುರುಡನಿಗೆ ಹಾದಿಯೆ ಕಾಣದು. ಕುಂಟನ ಶಕ್ತಿ ನಡಿಗೆಗೆ ಕುರುಡನ ಶಕ್ತಿ ದೃಷ್ಟಿ .

ಗಂಡು-ಹೆಣ್ಣು -ಬಾಳಸಂಗಾತಿಗಳು ಬದಲಾಯಿಸಿ

ಆಪ್ತತೆ, ಸಾಂಗತ್ಯ .ಉದಾ:-ಗಂಡು ಹೆಣ್ಣು ಜೀಂಕೆಗಳು ನೀರಿಗಾಗಿ ಹುಡುಕುವುದು .

ಅವಿಚ್ಚೇಧನ ಬದಲಾಯಿಸಿ

ದಾಂಪತ್ಯ ಜೀವನ ಸಂಗಾತಿಗಳ ಉಸಿರಿರುವವರೆಗೆ, ನಿರಂತರವಾದದ್ದು." ದೇವರು ಕೂಡಿಸಿದ್ದನ್ನು ಮನುಷ್ಯನು ವಿಚ್ಚೇದಿಸದಿರಲಿ". __ ಆದ ನಾನು ... ಆದ ನಿನ್ನನ್ನು ನನ್ನ ಪತಿ/ಪತ್ನಿಯನ್ನಾಗಿ ಸ್ವಿಕರಿಸುತ್ತೇನೆ. "ಸುಖ-ದು:ಖಗಳಲ್ಲಿ " ನಿನ್ನಲ್ಲೆ ಪ್ರಾಮಾಣಿಕನಾಗಿರುತ್ತೇನೆಂದು ವಾಗ್ಧಾನ ಮಾಡುತ್ತೇನೆ. "ಜೀವನದ ಪ್ರತಿದಿನವೂ" ನಿನ್ನನ್ನು ಪ್ರೀತಿಸಿ ಗೌರವಿಸುತ್ತೇನೆ, ಸುಖ-ದು:ಖ, ಬಡತನ ಮತ್ತು ಶ್ರೀಮಂತಿಕೆ,ಆರೊಗ್ಯ ಮತ್ತು ಅನಾರೋಗ್ಯದಲ್ಲೂ, ಜೀವನದ ಪ್ರತಿದಿನವು ಸಾಯುವವರೆಗೂ ಮರ್ಕ (೧೦:೧:೯)

ದಂಪತಿಗಳು-ಸಹಸೃಷ್ಟಿಕರ್ತರು ಬದಲಾಯಿಸಿ

  • ಜವಾಬ್ದಾರಿಯುತ ಫೊಷಕರಾಗುವುದು- ಹೊಸ ಸೃಷ್ಟಿಗೆ ಕಾರಣಕರ್ತರು.
  • ಲೈಂಗೀಕತೆ - (ಅದಿ:೧:೩೧)
  • ಸಫಲತೆ -ಸಂತಾನ ಬೆಳಸುವ ಶಕ್ತಿಯುಳ್ಳವರು.

ಮದುವೆಯ ಉದ್ದೆಶ ಬದಲಾಯಿಸಿ

  1. ಸಂಗಾತಿಗಳಾಗಿ ಪರಸ್ಪರ ಸಂತಸ ,ನೆಮ್ಮದಿ,ಸಾಂತ್ವನ,ಶಕ್ತಿಯಾಗುವುದು.
  2. ಸಹಸವಷ್ತಿಕರ್ತರಾಗಿ ಸಂತಾನವನ್ನು ಬೆಳಸುವುದು.

ಮದುವೆಯ ಲಕ್ಶಣಗಳು ಬದಲಾಯಿಸಿ

ಕ್ರಿಸ್ತೀಯ ವಿವಾಹ ತನ್ನ ಮೂಲ ಭೂತ ಲಕ್ಶಣಗಳು ದೇವರು ಮತು ವಿಶ್ವಾಸಿಗಳ ಒಡಂಬಡಿಕೆಯ ಮೇಲೆ ಆಧಾರಿತವಾಗಿರುತ್ತದೆ

  1. ಐಕ್ಯತೆ : ಐಕ್ಯತೆಯೆಂದರೆ ಒಂದು ಗಂಡು ಮತ್ತ್ತು ಒಂದು ಹೆಣ್ಣನ ನಡುವಿನ ಅವಿನಾಸಂಬಂದ.ಏಕಪತಿ/ಎಕಪತ್ನಿ ಸಂಬಂದ.(ಅದಿ:೧ನೇ ಅದ್ಯಾಯ,ಮಾರ್ಕ ೧೦:೬-೮೦)
  2. ನಿಷ್ಟೆ : ನಿಷ್ಟೆಯೆಂದರೆ ತನ್ನ ಬಾಳ ಸಂಪೊರ್ಣ ನಿಷ್ತೆಯಿಂದಿರುವುದು.ಇದು ವ್ಯಕ್ತಿಯನ್ನು (ವಿವಾಹವಾದ ವ್ಯಕ್ತಿಯನ್ನು) ಪರ ಪುರುಷ ಅಧವಾ ಮಹಿಳೆಯೊಂದಿಗೆ ಆನೈತಿಕ ಸಂಬಂದವನ್ನು ಬೆಳೆಸುವುತ್ತದೆ. ಇದು ಕೆವಲ ಲೈಂಗಿಕ ಸಂಬಂಧವನ್ನು ಮಾತ್ರ ನಿಬಂಧಿಸುವುದರಲ್ಲಿ ಭಾವನತ್ಮಕ ಸಂಬಂಧವೂ ಸಹ ಹಾದರವೆ.
  3. ಅವಿಚ್ಛೇದನಿಯ : ದಂಪತಿಗಳು ಜೀವಂತ ಅಂದರೆ ಉಸಿರಿರುವವರೆಗೂ ವೈವಾಹಿಕ ಬಂಧನವನ್ನು ಛೇದಿಸುವಂತಿಲ್ಲ. ಅಂದರೆ ವಿಚ್ಚೇದನ ಕ್ರಿಸ್ತನ ವಾಕ್ಯ ಬಹಳ ಸ್ವಷ್ತವಾಗಿ ದೇವರು ಕೂಡಿಸಿದ್ದನ್ನು ಮನುಷ್ಯನು ವಿಚ್ಚೇದಿಸದಿರಲಿ
  4. ಸಂತಾನೊತ್ಪತ್ತಿಗೆ ಮುಕ್ತಮನೋಭಾವ : ಮದುವೆ ದೇವರ ಸಹ ಸೃಷ್ಟಿ ಕಾರ್ಯದಲ್ಲಿ ಭಾಗವಹಿಸುವ ವಿಶಿಷ್ಟ ಪ್ರಕ್ರಿಯೆ, ದೇವರ ಸೃಷ್ಟಿಯ ಮೂಲವಾದ ಪ್ರೀತಿ ಜೀವಪರವಾಗಿರುವುದರಿಂದ ದಂಪತಿಗಳು ಸಂತಾನೋತ್ಪ ತ್ತಿ ಕಾರ್ಯಕ್ಕೆ ತಡೆಯೊಡ್ಡಬಾರದು.

ಕ್ಯಾಥೋಲಿಕ್ ಸಂಪ್ರದಾಯದಲ್ಲಿ ಮದುವೆ ಒಂದು ಸಂಸ್ದೆ ಬದಲಾಯಿಸಿ

ವಿವಾಹಸಂಸ್ಕಾರವನ್ನು ನೀಡುವವರು ಗಂಡು ಮತು ಹೆಣ್ಣು. ಇವರು ಪರಸ್ಪರ ಸಂಸ್ಕಾರವನ್ನು ನೀಡುವವರಾಗಿದ್ದಾರೆತಯೆ ಹೊರತು ಗುರುಗಳಲ್ಲ. ಈ ರೀತಿಯಾಗಿ ಕ್ರಿಸ್ತನಿಂದ ಧರ್ಮಸಬೆಗೆ ಹರಿದು ಬರುವ ವರಪ್ರಸಾದಗಳು ದಂಪತಿಗಳ ಪರಸ್ಪರ ಪ್ರೀತಿ ಮತ್ತು ಸೆವೆಗೆ ಸಂಪೊರ್ಣವಾಗಿ ಲಬಿಸುವುದು.

ಕ್ಯಾಥೋಲಿಕ್ ವಿವಾಹಕ್ಕೆ ಸಂಬಂಧಿಸಿದ ಕಾನೂನುಗಳು ಬದಲಾಯಿಸಿ

  1. ವಿಘ್ನಗಳೇನೊ ಇರಬಾರದು.
  2. ಸಂಪೂರ್ಣಸಮ್ಮತಿ, ಒಪ್ಪಿಗೆ.
  3. ಧರ್ಮಸಭೆಯ ಕಾನೂನು ಪಾಲಿಸಿರಬೆಕು.
  4. ಒಂದು ವಿವಾಹ ಸಕ್ರಮ ಮತ್ತು ನ್ಯಾಯಸಮ್ಮತವಾಗಿರಬೆಕು.

ವಿವಾಹಕ್ಕೆ ಸಂಬಂಧಿಸಿದ ವಿಘ್ನಗಳು ಬದಲಾಯಿಸಿ

ಸಮ್ಮತವಾದ ವಯಸು

  • ಹುಡುಗ-೧೬-ಕಾನೂನುಸಮ್ಮತ-೨೧
  • ಹುಡುಗಿ-೧೪-ಕಾನೂನುಸಮ್ಮತ-೧೮
  • ನಪುಂಸಕತೆ, ಬಂಜೆತನವಲ್ಲ
  • ಈ ಹಿಂದೆ ಮದುವೆಯ ಬಂಧನದಲ್ಲಿದ್ಧರೆ:-ವಿವಾಹ ನ್ಯಾಯ ಸಮ್ಮತವಲ್ಲ.
  • ಅಂತರ ಧರ್ಮೀಯ ವಿವಾಹ:-ಕಧೊಲಿಕ ಸಂಪ್ರದಾಯದಲಿ ದೀಕ್ಶೆ ಸ್ವೀಕರಿಸಿದ ವ್ಯಕ್ತಿ ಇತರ ಕ್ರೆಸ್ತ ಸಂಪ್ರದಾಯದ ವ್ಯಕ್ತಿಯೊಂದಿಗೆ ಆಗಲಿ,ಅಧವಾ ಅನ್ಯಧರ್ಮದ ವ್ಯಕ್ತಿಯೊಡನೆ ಅಗುವ ವಿವಾಹ. ಸಮ್ಮತ, ಆದರೆ ಧರ್ಮಸಭೆಯ ಕಾನೊನಿನಂತೆ ಸಮ್ಮತವಲ್ಲ.
  • ಧರ್ಮಸಭೆಯಲ್ಲಿ ದೀಕ್ಷೆ ಸ್ವೀಕರಿಸಿದವರು:-ಜೀವನ ಪರ್ಯಂತ ಸನ್ಯಾಸ ದೀಕ್ಷೆ ಸ್ವೀಕರಿಸಿದವರು.
  • ಬಲಾತ್ಕಾರದ, ಅಪಹರಣ ಮತ್ತು ಸೆರೆಯಲ್ಲಿಟ್ಟು :-ವಿವಾಹಕ್ಕೆ ಒತ್ತಾಯವನ್ನು ಹೇರುವುದು.
  • ರಕ್ತ ಸಂಬಂಧ:-ನರ ರಕ್ತ ಸಂಬಂಧ-ಪರೋಕ್ಷ ಸಂಬಂಧ. ಅಕ್ಕನ ಮಗಳು, ಮಾವನ ಮಗಳು-ಇತ್ಯಾದಿ.
  • ಸಂಬಂಧಗಳಲ್ಲಿ:-ಅತ್ತೆಯನ್ನು ಮದುವೆ ಆಗಂಗಿಲ್ಲ. ಹೆಂಡತಿಯ ತಂಗಿಯನ್ನು ಮದುವೆಯಾಗಬಹುದು.
  • ದತ್ತು ಸ್ವೀಕಾರ:-

ಮೇಲ್ಕಂಡ ಎಲ್ಲಾ ವಿಘ್ನಗಳನ್ನು ಧರ್ಮಸಭೆಯು ಮನ್ನಿಸಬಹುದಾದರು, ನಪುಂಸಕತೆ, ಮೊದಲ ವಿವಾಹ ಬಂಧನ, ರಕ್ತ ಸಂಬಂಧದಲ್ಲಿ ನೇರ ಸಂಬಂಧ ಇತ್ಯಾದಿಗಳನ್ನು ಮನ್ನಿಸಲು ಸಾದ್ಯವಿಲ್ಲ.

ಧರ್ಮಸಭೆಯ ನಿಯಮದ -ಸಂಪ್ರದಾಯದ ರೂಪ ಬದಲಾಯಿಸಿ

ಒಂದು ವಿವಾಹ ನ್ಯಾಯ ಸಮ್ಮತವಾಗ ಬೇಕಾದರೆ, ಧರ್ಮಸಭೆಯ ನಿಯಮವನ್ನು ಪಾಲಿಸಬೇಕು. ಅದೇನೆಂದರೆ, ಗಂಡು ಹೆಣ್ಣ್ನು ಒಬ್ಬ ಗುರುಗಳ ಮುಂದೆ ಅಧವಾ ಗುರುಗಳ ಪ್ರತಿನಿಧಿಯ ಮುಂದೆ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ-(ಸಾಕ್ಷಿಗಳು ರಕ್ತ ಸಂಬಂಧಿಗಳಾಗಿರಬಾರದು)ಬಹಿರಂಗವಾಗಿ ಸಮ್ಮತಿಯನ್ನು ವ್ಯಕ್ತ ಪಡಿಸಬೆಕು

  1. ಯಾವುದೇ ಒಂದು ಮದುವೆ ಗಂಡು ಹೆಣ್ಣುಗಳ ಸಂಪೂರ್ಣ ಸಮ್ಮತಿಯಿಲ್ಲದೆ ಹೋದರೆ ಅಕ್ರಮ ಅನೂರ್ಜಿತವಾಗುತ್ತದೆ.
  2. ಒತ್ತಾಯದ ಮದುವೆ -ಯಾರಾದರು ಒಬ್ಬರು ತಲೆ ನೆಟ್ಟಗಿಲ್ಲದೆ ಹೋದರೆ, ಜ್ಞಾನವನ್ನು ಕಳೆದು ಕೊಂಡಿದ್ದರೆ.
  3. ಮದುವೆಯ ಕರ್ತವ್ಯಗಳನ್ನು ಸ್ವೀಕರಿಸದೆ ಹೋದರೆ? ಉದಾ:ಐಕ್ಯತೆ, ಅವಿಚ್ಚೇದನ,ನಿಷ್ಟೆ, ಸಂತಾನೊತ್ಪತ್ತಿ ಇತ್ಯಾದಿ.
  4. ಯಾರಾದರು ಒಬ್ಬರು ಮದುವೆಯ ಕರ್ತವ್ಯಗಳ ನಿಭಾಯಿಸಲು ಮಾನಸಿಕ ಸಾಮರ್ಥ್ಯವಿಲ್ಲದೆ ಹೋದರೆ.

ಛಾಯಾಚಿತ್ರಶಾಲೆ ಬದಲಾಯಿಸಿ