ಕೇರಳದ ವಾಸ್ತುಶೈಲಿ

ಕೇರಳದ ವಾಸ್ತುಶೈಲಿಯು ಒಂದು ರೀತಿಯ ವಾಸ್ತುಶಿಲ್ಪ ಶೈಲಿಯಾಗಿದ್ದು, ಇದು ಹೆಚ್ಚಾಗಿ ಭಾರತದ ಕೇರಳ ರಾಜ್ಯದಲ್ಲಿ ಕಂಡುಬರುತ್ತದೆ. ಕೇರಳದ ವಾಸ್ತುಶೈಲಿಯು ವಿಶಿಷ್ಟವಾದ ಹಿಂದೂ ದೇವಾಲಯದ ವಾಸ್ತುಶೈಲಿಯಾಗಿದ್ದು, ಇದು ಭಾರತದ ನೈಋತ್ಯ ಭಾಗದಲ್ಲಿ ಇದೆ. ಇದು ಸಾಮಾನ್ಯವಾಗಿ ದಕ್ಷಿಣ ಭಾರತದ ಇತರ ಭಾಗಗಳಲ್ಲಿ ಕಂಡು ಬರುವ ದ್ರಾವಿಡ ವಾಸ್ತುಶಿಲ್ಪಕ್ಕೆ ವ್ಯತಿರಿಕ್ತವಾಗಿದೆ. ಕೇರಳದ ವಾಸ್ತುಶೈಲಿಯನ್ನು ಭಾರತೀಯ ವೈದಿಕ ವಾಸ್ತುಶಿಲ್ಪ ವಿಜ್ಞಾನ (ವಾಸ್ತು ಶಾಸ್ತ್ರ) ಮತ್ತು ದ್ರಾವಿಡ ವಾಸ್ತುಶಿಲ್ಪದ ಒಂದು ಭಾಗದ ಪ್ರಕಾರ ನಿರ್ವಹಿಸಲಾಗಿದೆ/ಅನುಸರಿಸಲಾಗಿದೆ. ಇದು ವಾಸ್ತು ಶಾಸ್ತ್ರದ ಪ್ರಾಚೀನ ಪುಸ್ತಕಗಳಲ್ಲಿ ಉಲ್ಲೇಖಿಸಲಾದ ಮೂರು ಶೈಲಿಯ ದೇವಾಲಯಗಳಲ್ಲಿ ಒಂದಾಗಿದೆ. ತಂತ್ರಸಮುಚ್ಚಯ, ತಚ್ಚು-ಶಾಸ್ತ್ರ, ಮನುಷ್ಯಾಲಯ -ಚಂದ್ರಿಕಾ ಮತ್ತು ಶಿಲ್ಪರತ್ನಗಳು ಪ್ರಮುಖ ವಾಸ್ತುಶಿಲ್ಪ ವಿಜ್ಞಾನಗಳಾಗಿವೆ. ಅವು ಕೇರಳದ ವಾಸ್ತುಶಿಲ್ಪ ಶೈಲಿಯ ಮೇಲೆ ಗಾಢವಾದ ಪ್ರಭಾವ ಬೀರಿವೆ. ಮನುಷ್ಯಾಲಯ-ಚಂದ್ರಿಕಾ ಎಂಬ, ದೇಶೀಯ ವಾಸ್ತುಶಿಲ್ಪಕ್ಕೆ ಮೀಸಲಾದ ಪ್ರಾಕಾರವು ಕೇರಳದಲ್ಲಿ ತನ್ನ ಬಲವಾದ ಬೇರುಗಳನ್ನು ಹೊಂದಿರುವ ಅಂತಹ ಒಂದು ವಿಜ್ಞಾನವಾಗಿದೆ.

೧೯೨೧ ರಲ್ಲಿ ಶ್ರೀ ಈಚರಾ ವಾರಿಯರ್‌ರಿಂದ ಮರುವಿನ್ಯಾಸಗೊಳಿಸಲಾದ ತ್ರಿಪುಣಿತೂರದ ಪೂರ್ಣತ್ರಯೀಸ ದೇವಾಲಯದ ಪ್ರವೇಶದ್ವಾರ
ತ್ರಿಪುನಿತುರಾ ಬೆಟ್ಟದ ಅರಮನೆ, ಇದು ಕೊಚ್ಚಿನ್ ರಾಜರ ಆಡಳಿತ ಕಚೇರಿಯಾಗಿತ್ತು

ಮೂಲಗಳು

ಬದಲಾಯಿಸಿ

ಕೇರಳದ ವಾಸ್ತುಶಿಲ್ಪದ ವೈಶಿಷ್ಟ್ಯ, ಅಲ್ಲಿನ ಭೌಗೋಳಿಕ, ಹವಾಮಾನ, ಐತಿಹಾಸಿಕ ಮತ್ತು ಪ್ರಾದೇಶಿಕ ಅಂಶಗಳನ್ನು ಅಭಿವ್ಯಕ್ತಪಡಿಸುತ್ತದೆ. ಭೌಗೋಳಿಕವಾಗಿ ಕೇರಳವು ಭಾರತ ಪರ್ಯಾಯ ದ್ವೀಪದ ಸಮುದ್ರ ತೀರದ ನಡುವೆ ಇರುವ ಕಿರಿದಾದ ಭೂಪ್ರದೇಶವಾಗಿದೆ ಮತ್ತು ಅದರ ಪೂರ್ವದಲ್ಲಿ ಎತ್ತರದ ಪಶ್ಚಿಮ ಘಟ್ಟಗಳು ಮತ್ತು ಅದರ ಪಶ್ಚಿಮದಲ್ಲಿ ವಿಶಾಲವಾದ ಅರೇಬಿಯನ್ ಸಮುದ್ರದ ನಡುವೆ ಸೀಮಿತವಾಗಿದೆ. ಮುಂಗಾರಿನ ಸಮೃದ್ಧವಾದ ಮಳೆ ಮತ್ತು ಪ್ರಕಾಶಮಾನವಾದ ಬಿಸಿಲನ್ನು ಪಡೆಯುವ ಈ ಭೂಮಿ ಹಸಿರು ಸಸ್ಯವರ್ಗದ ಮತ್ತು ಪ್ರಾಣಿಗಳಿಂದ ಸಮೃದ್ಧವಾಗಿದೆ. ಈ ಅಸಮತಟ್ಟಾದ ಭೂಪ್ರದೇಶದಲ್ಲಿನ, ಫಲವತ್ತಾದ ತಗ್ಗು ಪ್ರದೇಶಗಳಲ್ಲಿ ಮಾನವ ವಸತಿ ದಟ್ಟವಾಗಿ ಹರಡಿದೆ ಮತ್ತು ಮಾನವ ವಾಸಕ್ಕೆ ಯೋಗ್ಯವಲ್ಲದ ಎತ್ತರದ ಪ್ರದೇಶಗಳ ಕಡೆಗೆ ವಿರಳವಾಗಿ ಹರಡಿದೆ. ಭಾರೀ ಮಳೆಯಿಂದಾಗಿ ಸರೋವರಗಳು, ನದಿಗಳು, ಹಿನ್ನೀರುಗಳು ಮತ್ತು ಕೊಳ್ಳಗಳ ರೂಪದಲ್ಲಿ ದೊಡ್ಡ ಜಲಮೂಲಗಳ ಉಗಮವಾಗಿದೆ. ಭಾರೀ ಆರ್ದ್ರತೆ ಮತ್ತು ಕಠಿಣವಾದ ಉಷ್ಣವಲಯದ ಬೇಸಿಗೆಗಳೊಂದಿಗೆ ಆರ್ದ್ರ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ಬೇಕಾದ ಹವಾಮಾನದ ಅಂಶಗಳು ವಾಸ್ತುಶೈಲಿಯನ್ನು ಅಭಿವೃದ್ಧಿಪಡಿಸುವಲ್ಲಿ ತನ್ನ ಮಹತ್ವದ ಕೊಡುಗೆಯನ್ನು ನೀಡಿವೆ.

ಕೇರಳದ ವಾಸ್ತುಶಿಲ್ಪಕ್ಕೆ ಇತಿಹಾಸವು ಕೂಡಾ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಅದರ ಪೂರ್ವದಲ್ಲಿವ ಎತ್ತರದ ಪಶ್ಚಿಮ ಘಟ್ಟಗಳು, ಹಿಂದಿನಿಂದಲೂ ಕೇರಳದ ಮೇಲೆ ನೆರೆಯ ತಮಿಳು ದೇಶಗಳ ಪ್ರಭಾವವನ್ನು ಯಶಸ್ವಿಯಾಗಿ ತಡೆಗಟ್ಟಿದೆ. ಪಶ್ಚಿಮ ಘಟ್ಟಗಳು ಕೇರಳವನ್ನು ಭಾರತೀಯ ಸಾಮ್ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರತ್ಯೇಕಿಸಿದರೆ, ಅದರ ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರದ ಇರುವಿಕೆಯು, ಕೇರಳದ ಪ್ರಾಚೀನ ಜನರ ನಡುವೆ ಈಜಿಪ್ಟಿನವರು, ರೋಮನ್ನರು, ಅರಬ್ಬರು ಮುಂತಾದ ಪ್ರಮುಖ ಸಮುದ್ರ ನಾಗರಿಕತೆಗಳೊಂದಿಗೆ ನಿಕಟ ಸಂಪರ್ಕವನ್ನು ತಂದಿತು. ಕೇರಳದ ಶ್ರೀಮಂತ ಮಸಾಲೆ ಕೃಷಿಗಳು ಆಧುನಿಕ ಕಾಲದವರೆಗೂ ಕೇರಳವನ್ನು ಜಾಗತಿಕ ಕಡಲ ವ್ಯಾಪಾರದ ಕೇಂದ್ರವನ್ನಾಗಿ ಮಾಡಿದವು. ಇದು ಹಲವಾರು ಅಂತರರಾಷ್ಟ್ರೀಯ ವರ್ತಕರು ಕೇರಳದೊಂದಿಗೆ ವ್ಯಾಪಾರ ಪಾಲುದಾರರಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡಿತು. ಇದರಿಂದಾಗಿ ಅವರ ನಾಗರೀಕತೆಗಳ ಪ್ರಭಾವವವು ಕೇರಳದ ವಾಸ್ತುಶಿಲ್ಪದ ಮೇಲೆ ಆಯಿತು.[]

ಇತಿಹಾಸ

ಬದಲಾಯಿಸಿ

ಇತಿಹಾಸಪೂರ್ವ ಯುಗ

ಬದಲಾಯಿಸಿ

ಕೇರಳದ ಪ್ರಾದೇಶಿಕ ವೈಶಿಷ್ಟ್ಯವು ಸಾಮಾಜಿಕ ಅಭಿವೃದ್ಧಿ ಮತ್ತು ಪರೋಕ್ಷವಾಗಿ ನಿರ್ಮಾಣ ಶೈಲಿಯ ಮೇಲೆ ಪ್ರಭಾವ ಬೀರಿದೆ. ಪ್ರಾಚೀನ ಕಾಲದಲ್ಲಿ ಅರಬ್ಬೀ ಸಮುದ್ರ ಮತ್ತು ಪಶ್ಚಿಮ ಘಟ್ಟಗಳು ಹರಪ್ಪಾ ನಾಗರೀಕತೆಯ ಸಮಕಾಲೀನವಾದ, ಮೂಲ-ದ್ರಾವಿಡರ ಪ್ರತ್ಯೇಕ ಸಂಸ್ಕೃತಿಯ ವಿಕಸನಕ್ಕೆ ಸಹಾಯ ಮಾಡುವ ಅಭೇದ್ಯವಾದ ತಡೆಗೊಡೆಗಳಂತೆ ವರ್ತಿಸಿದವು. ಕೇರಳದಲ್ಲಿ ನಿರ್ಮಾಣಗಳ ಆರಂಭಿಕ ಕುರುಹುಗಳು ಕ್ರಿ. ಪೂ. ೩೦೦೦ ಮತ್ತು ಕ್ರಿ. ಪೂ. ೩೦೦ ನಡುವಿನ ಅವಧಿಗೆ ಸೇರಿವೆ.  ಅವುಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು - ಸಮಾಧಿ ಕೋಶಗಳು ಮತ್ತು ಬೃಹತ್ ಶಿಲೆಗಳು. ಕಲ್ಲಿನಿಂದ ಕೆತ್ತಿದ ಸಮಾಧಿ ಕೋಶಗಳು ಸಾಮಾನ್ಯವಾಗಿ ಮಧ್ಯ ಕೇರಳದ ಕೆಂಪು ಕಲ್ಲಿನ ವಲಯಗಳಲ್ಲಿ ನೆಲೆಗೊಂಡಿವೆ, ಉದಾಹರಣೆಗೆ ತ್ರಿಶೂರ್ ಜಿಲ್ಲೆಯ ಪೊರ್ಕಲಂನಲ್ಲಿ. ಸಮಾಧಿಗಳು ಸ್ಥೂಲವಾಗಿ ಆಯತಾಕಾರದ ಅಡಿಪಾಯದಲ್ಲಿ ಏಕ ಅಥವಾ ಬಹು ಹಾಸಿಗೆ ಕೋಣೆಗಳೊಂದಿಗೆ ಪೂರ್ವದಲ್ಲಿ ಆಯತಾಕಾರದ ಸಭಾಂಗಣವನ್ನು ಹೊಂದಿದ್ದು ಅಲ್ಲಿಂದ ಮೆಟ್ಟಿಲುಗಳು ನೆಲದ ಮಟ್ಟಕ್ಕೆ ಏರುತ್ತವೆ. ಮತ್ತೊಂದು ವಿಧದ ಸಮಾಧಿ ಕೋಣೆಯನ್ನು ಅಂಚುಗಳ ಮೇಲೆ ಇರಿಸಲಾಗಿರುವ ನಾಲ್ಕು ಚಪ್ಪಡಿಗಳಿಂದ ಮಾಡಲ್ಪಟ್ಟಿದೆ ಮತ್ತು ಐದನೆಯದು ಅವುಗಳನ್ನು ಟೊಪ್ಪಿಯಾಕರದಲ್ಲಿ ಮುಚ್ಚುತ್ತದೆ. ಅಂತಹ ಒಂದು ಅಥವಾ ಹೆಚ್ಚಿನ ಹಾಸುಬಂಡೆಗಳನ್ನು ಕಲ್ಲಿನ ವೃತ್ತದಿಂದ ಗುರುತಿಸಲಾಗಿದೆ. ಬ್ರಹತ್ ಶಿಲೆಗಳಲ್ಲಿ ಛತ್ರಿಯಾಕಾರದ ಕಲ್ಲುಗಳು ("ಕುಡಕ್ಕಲ್"), ಸಮಾಧಿ ಚಿತಾಭಸ್ಮಗಳ ಹೊಂಡಗಳನ್ನು ಮುಚ್ಚಲು ಬಳಸುವ ಕೈಗಳಿಲ್ಲದ ತಾಳೆ ಗರಿಯ ಛತ್ರಿಗಳನ್ನು ಹೋಲುತ್ತವೆ. ಆದಾಗ್ಯೂ ಎರಡು ವಿಧದ ಬೃಹತ್ ಶಿಲೆಗಳಾದ, ಟೋಪಿ ಕಲ್ಲುಗಳು ("ತೊಪ್ಪಿಕಲ್") ಮತ್ತು ನಿಡಿದಾದ ಕಲ್ಲುಗಳು ("ಪುಲಚಿಕ್ಕಲ್") ಸಮಾಧಿಯ ಯಾವ ಲಕ್ಶಣಗಳನ್ನು ಹೊಂದಿಲ್ಲ. ಅವು ಸ್ಮಾರಕ ಕಲ್ಲುಗಳಂತೆ ಕಾಣುತ್ತವೆ.

ಬೃಹತ್ ಶಿಲೆಗಳು ಹೆಚ್ಚು ವಾಸ್ತುಶಿಲ್ಪದ ಪ್ರಾಮುಖ್ಯತೆಯನ್ನು ಹೊಂದಿಲ್ಲ. ಅದು ಅವರು ಶವಾಗಾರದ ವಿಧಿಗಳ ಸ್ಥಳಗಳಲ್ಲಿ ಸ್ಮಾರಕಗಳನ್ನು ನಿರ್ಮಿಸುವ ಪ್ರಾಚೀನ ಬುಡಕಟ್ಟುಗಳ ಪದ್ಧತಿಯ ಬಗ್ಗೆ ತಿಳಿಸುತ್ತವೆ. ಈ ಸ್ಥಳಗಳು ನಂತರ ಬುಡಕಟ್ಟುಗಳ ಜನರ ವಾರ್ಷಿಕ ಸಭೆಯ ಮೈದಾನವಾಯಿತು ಮತ್ತು ಪೂರ್ವಜರ ಆರಾಧನೆಯ ನಿಗೂಢ ದೇವಾಲಯಗಳಿಗೆ ಕಾರಣವಾಯಿತು. ಈ ಸಂದರ್ಭಗಳಲ್ಲಿ ಪಿತೃ ಆರಾಧನೆಯ ಪದ್ಧತಿಯನ್ನು ನೋಡಬಹುದಾದರೂ, ಹಳ್ಳಿಗಳನ್ನು ಸಂರಕ್ಷಿಸುವ ದೇವತೆಗಳು ಯಾವಾಗಲೂ ಸ್ತ್ರೀ ರೂಪದಲ್ಲಿರುತ್ತಿದ್ದರು. ಅವರನ್ನು ತೆರೆದ ತೋಪುಗಳಲ್ಲಿ ("ಕಾವು") ಪೂಜಿಸಲಾಗುತ್ತದೆ. ಈ ಆಕಾಶಕ್ಕೆ ತೆರೆದುಕೊಂಡಿರುವ ದೇವಾಲಯಗಳು ಮರಗಳು, ಮಾತೃ ದೇವತೆಗಳ ಕಲ್ಲಿನ ಚಿಹ್ನೆಗಳು ಅಥವಾ ಇತರ ನೈಸರ್ಗಿಕ ಅಥವಾ ಮಾನವನಿರ್ಮಿತ ಚಿತ್ರಗಳನ್ನು ಪೂಜಾ ವಸ್ತುಗಳಾಗಿ ಹೊಂದಿದ್ದವು. ಈ ಆರಂಭಿಕ ಸಂಸ್ಕೃತಿಯ ನಿರಂತರತೆಯು ಜಾನಪದ ಕಲೆಗಳು, ಆರಾಧನಾ ಆಚರಣೆಗಳು, ಮರಗಳ ಆರಾಧನೆ, ತೋಪುಗಳಲ್ಲಿನ ಸರ್ಪಗಳು ಮತ್ತು ತಾಯಿಯ ಚಿತ್ರಗಳಲ್ಲಿ ಕಂಡುಬರುತ್ತದೆ.

ಹಿಂದೂ/ಕೇರಳ ವಾಸ್ತುಶಿಲ್ಪ, ಬೌದ್ಧಧರ್ಮದಲ್ಲಿನ ವಾಸ್ತುಶಿಲ್ಪ

ಬದಲಾಯಿಸಿ
 
ಚೊಟ್ಟನಿಕ್ಕರ ದೇವಸ್ಥಾನದಲ್ಲಿ ಚುಟ್ಟುಅಂಬಲಂ ಮಂಟಪವನ್ನು ಶಾಸ್ತ್ರೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ

ದ್ರಾವಿಡ ವಾಸ್ತುಶಿಲ್ಪ

ದೂರದ ನೈಋತ್ಯ ಕೇರಳದಲ್ಲಿ ಕಂಡುಬರುವ ದ್ರಾವಿಡ ವಾಸ್ತುಶಿಲ್ಪದ ಆವೃತ್ತಿಯು ಗಮನಾರ್ಹವಾಗಿ ವಿಭಿನ್ನವಾಗಿದೆ. ಬಹಳ ದೊಡ್ಡ ದೇವಾಲಯಗಳು ಅಪರೂಪ, ಮತ್ತು ಇಳಿಜಾರಿನ ಮೇಲ್ಛಾವಣಿಗಳು ಹೊರವಲಯದ ಮೇಲೆ ಬಾಗಿದಂತಿದೆ. ಸಾಮಾನ್ಯವಾಗಿ ಇವುಗಳನ್ನು ಹಲವಾರು ಶ್ರೇಣಿಗಳಲ್ಲಿ ಜೋಡಿಸಲಾಗುತ್ತದೆ. ಬಂಗಾಳದಲ್ಲಿರುವಂತೆ ಇರುವ ಈ ರಚನೆ, ಭಾರೀ ಮುಂಗಾರು ( ಮಾನ್ಸೂನ್) ಮಳೆಗೆ ಹೊಂದಿಕೊಳ್ಳುವಂತೆ ಮಾರ್ಪಡಿಸಲಾಗಿದೆ. ಮರದ ಕೆತ್ತನೆಯ ರಕ್ಶಣೆಗಾಗಿ ಸಾಮಾನ್ಯವಾಗಿ ಕಲ್ಲಿನ ಹೊದಿಕೆ ಇರುತ್ತದೆ.

ಕೇರಳದಲ್ಲಿ ಜೈನ ಸ್ಮಾರಕಗಳು ಹೆಚ್ಚು ಸಂಖ್ಯೆಯಲ್ಲಿವೆ. ಅವುಗಳಲ್ಲಿ ನಾಗರ್‌ಕೋಯಿಲ್ ಬಳಿಯ ಚಿತ್ರಾಲ್ ಜೈನ ಗುಹೆಯಲ್ಲಿರುವ ಕಲ್ಲಿನ ಆಧಾರಸ್ತಂಭಗಳು, ಪೆರುಂಬವೂರ್ ಬಳಿಯ ಕಲ್ಲಿಲ್‌ನಲ್ಲಿರುವ ಕಲ್ಲಿನಿಂದ ಕೊರೆದ ದೇವಾಲಯ ಮತ್ತು ಪಾಲಕ್ಕಾಡ್ ಬಳಿಯ ಅಲತ್ತೂರ್ ಮತ್ತು ಸುಲ್ತಾನ್‌ಬತ್ತೇರಿಯಲ್ಲಿನ ರಚನಾತ್ಮಕ ದೇವಾಲಯಗಳ ಅವಶೇಷಗಳು ಸೇರಿವೆ. ಜೈನಿಮೇಡು ಜೈನ ದೇವಾಲಯವು ೧೫ನೇ ಶತಮಾನದ ದೇವಾಲಯವಾಗಿದೆ. ಜೈನಿಮೇಡು,  ಪಾಲಕ್ಕಾಡ್ ಕೇಂದ್ರದಿಂದ ೩ ಕಿ.ಮೀ ದೂರದಲ್ಲಿದೆ. [] ಮಹಾವೀರ, ಪಾರ್ಶ್ವನಾಥ ಮತ್ತು ಇತರ ತೀರ್ಥಂಕರರ ಶಿಲ್ಪಗಳನ್ನು, ಕೇರಳ ಜೈನ ಮತ್ತು ದ್ರಾವಿಡ ವ್ಯಕ್ತಿಗಳ ಶಿಲ್ಪಗಳನ್ನು ಈ ಸ್ಥಳಗಳಿಂದ ಸಂರಕ್ಶಿಸಲಾಗಿದೆ. ಇದು ಹಿಂದೂ ದೇವಾಲಯವಾಗಿ ಪರಿವರ್ತನೆಯಾಗುವ ಮೊದಲು ಅಂದರೆ, ಕ್ರೀ. ಶ. ೧೫೨೨ ವರೆಗೆ ಜೈನ ದೇವಾಲಯವಾಗಿ ಉಳಿಯಿತು. [] ಸುಲ್ತಾನ್‌ಬತ್ತೇರಿಯು ಜೈನ ಬಸ್ತಿಯ ಅವಶೇಷಗಳನ್ನು ಸಹ ಹೊಂದಿದೆ, ಇದನ್ನು ಗಣಪತಿ ವಟ್ಟಂ ಎಂದು ಕರೆಯಲಾಗುತ್ತದೆ, ಇದು ಸಂಪೂರ್ಣವಾಗಿ ಬೆಣಚು ಕಲ್ಲಿನಿಂದ (ಗ್ರಾನೈಟ್‌ನಿಂದ) ಮುಚ್ಚಿ ನಿರ್ಮಿಸಲಾದ ದೇವಾಲಯದ ಉದಾಹರಣೆಯಾಗಿದೆ.

 
ವಾಜಪಲ್ಲಿಯಲ್ಲಿರುವ ಕೇರಳದ ದೇವಾಲಯಗಳ ಭವ್ಯವಾದ ಗೋಪುರಗಳು

ತೋರಣವು ದೀಪಸ್ತಂಭದ ನಂತರ ಮರದ ಮುಚ್ಚುಗೆಯ ಮೂಲಕ ಹಾದು ಹೋಗುವ ಲಂಬ ಮತ್ತು ಅಡ್ಡ ಆಕ್ರತಿಗಳು ಹೆಬ್ಬಾಗಿಲಿಗೆ ತೆರೆದುಕೊಳ್ಳುವ ರಚನೆಯಾಗಿದೆ. ಅದರ ಅತ್ಯಂತ ಪ್ರಾಚೀನ ರೂಪದಲ್ಲಿ ಈ ನಿರ್ಮಾಣವು ಮರಗಳನ್ನು ಪ್ರತಿಷ್ಠಾಪಿಸುವ ಬಯಲು (ಮೇಲ್ಚಾವಣಿಯಿಲ್ಲದ) ದೇವಾಲಯಗಳಲ್ಲಿ ಕಂಡುಬರುತ್ತದೆ ಮತ್ತು ದೇವಾಲಯಗಳ ಹೊರಗಿನ ಗೋಡೆಗಳ ಮೇಲೆಯೂ ಕಂಡುಬರುತ್ತದೆ. ಹಿಂದೂ ದೇವಾಲಯದ ಶೈಲಿಯ ಬೆಳವಣಿಗೆಯೊಂದಿಗೆ ಈ ರೀತಿಯ ಮರದ ಮೇಲ್ಚಾವಣಿಗಳನ್ನು ದೇವಾಲಯದ ರಚನೆಯಿಂದ (ಶ್ರೀಕೋವಿಲ್) ತೆಗೆದುಹಾಕಲಾಗುತ್ತದೆ ಮತ್ತು ದೇವಾಲಯದ ಹೊರವಲಯದ (ಚುಟ್ಟಂಬಲಂ) ಆಚೆಗೆ ಪ್ರತ್ಯೇಕ ಕಟ್ಟಡವಾಗಿ ತೆಗೆದುಕೊಳ್ಳಲಾಗುತ್ತದೆ.

 
ಕೊಲ್ಲಂನ ಕೊಟ್ಟಾರಕ್ಕರದಲ್ಲಿ ಒಂದೇ ಅಂತಸ್ತಿನ ದೇವಾಲಯ ಸಂಕೀರ್ಣ
 
ತಿರುವನಂತಪುರಂನ ಪದ್ಮನಾಭಸ್ವಾಮಿ ದೇವಸ್ಥಾನದ ದ್ರಾವಿಡ ದೇವಳದ ಅಲಂಕೃತ ಬಹುಮಹಡಿ ಗೋಪುರ

ಹಿಂದೂ ಧರ್ಮವು ಕೇರಳದ ಸ್ಥಳೀಯ ದ್ರಾವಿಡ ಸಾಂಸ್ಕೃತಿಕ ಮತ್ತು ಸಾಮಾಜಿಕ ಆಚರಣೆಗಳೊಂದಿಗೆ ಸಮ್ಮಿಲಿತವಾಗಿದೆ.ಪ್ರಾಚೀನ ತಮಿಳು ಸಂಗಮ್ ಸಾಹಿತ್ಯದ ಪ್ರಕಾರ ಕ್ರಿಸ್ತ ಶಕದ ಮೊದಲನೆಯ ಶತಮಾನದ ಹೊತ್ತಿಗೆ ಚೇರರು ಇಂದಿನ ಕೇರಳ, ತುಳುನಾಡು ಮತ್ತು ಕೊಡಗು ಭಾಗಗಳು ಮತ್ತು ಕೊಂಗು ಪ್ರದೇಶಗಳಲ್ಲಿ (ಈಗಿನ ಸೇಲಂ ಮತ್ತು ಕೊಯಮತ್ತೂರು ಪ್ರದೇಶ) ನೆಲೆಸಿದ್ದರು. ಇವರು ಕುಟುಂಬದ ವಿವಿಧ ವಂಶಾವಳಿಗಳಿಂದ ಏಕಕಾಲದಲ್ಲಿ ಅನೇಕ ರಾಜಧಾನಿಗಳನ್ನು ಹೊಂದಿದ್ದರು. ಕೊಡುಂಗಲ್ಲೂರು ಬಳಿಯ ತಿರುವಂಚಿಕುಲಂ ಪ್ರದೇಶದ ವಂಚಿ ಅವರ ಮುಖ್ಯ ರಾಜಧಾನಿ. ಈ ಸಮಯದಲ್ಲಿ, ಕೇರಳ ಪ್ರದೇಶದ ಎರಡು ವಿಭಿನ್ನ ತುದಿಗಳನ್ನು ಎರಡು ವೆಲಿರ್ ಕುಟುಂಬಗಳು ನಿರ್ವಹಿಸುತ್ತಿದ್ದವು. ದಕ್ಷಿಣದ ಭಾಗವು ತಿರುವನಂತಪುರಂನ ಆಯ್ ಮುಖ್ಯಸ್ಥರಿಂದ ಮತ್ತು ಉತ್ತರದ ಭಾಗಗಳನ್ನು ಎಝಿಲ್ಮಲೈನ ನನ್ನನ್ ರವರಿಂದ ನಿರ್ವಹಿಸಲಾಗುತಿತ್ತು . ನನ್ನನ್ ರೇಖೆಯು ತಿರುವನಂತಪುರಂ ಪ್ರದೇಶದಲ್ಲಿ ಹುಟ್ಟಿಕೊಂಡ ಆಯ್‌ನ ಒಂದು ಶಾಖೆಯಾಗಿದೆ ಮತ್ತು ಇಬ್ಬರೂ ಚೇರರ (ಮತ್ತು ಕೆಲವೊಮ್ಮೆ ಪಾಂಡ್ಯರು ಅಥವಾ ಚೋಳರು ಅಥವಾ ಪಲ್ಲವರು) ಆಳ್ವಿಕೆಯ ಅಡಿಯಲ್ಲಿ ಸಾಮಂತರಾಗಿದ್ದರು.

ವಿಭಿನ್ನ ಸಂಸ್ಕೃತಿಗಳು ಮತ್ತು ಧಾರ್ಮಿಕ ತತ್ತ್ವಚಿಂತನೆಗಳ ಸಮ್ಮಿಲನವು ಕೇರಳದ ದೇವಾಲಯಗಳ ವಾಸ್ತುಶಿಲ್ಪದ ಶೈಲಿಗಳನ್ನು ವಿಕಸನಗೊಳಿಸಲು ಸಹಾಯ ಮಾಡಿತು. ಇದು ಹೆಚ್ಚಿನ ಸಂಖ್ಯೆಯ ದೇವಾಲಯಗಳ ವಾಸ್ತುಶಿಲ್ಪದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಹೆಚ್ಚು ಅನುಕೂಲಕರವಾಗಿತ್ತು. ಚೇರರ ಅವನತಿಯ ನಂತರ ಕೇರಳದಾದ್ಯಂತ ಹಲವಾರು ಸಣ್ಣ ಸಂಸ್ಥಾನಗಳು ಅಭಿವೃದ್ಧಿಗೊಂಡವು. ಹದಿನೈದನೆಯ ಶತಮಾನದ ವೇಳೆಗೆ, ವಿಶಾಲ ಕೇರಳವು ನಾಲ್ಕು ಪ್ರಮುಖ ಮುಖ್ಯಸ್ಥರ ಆಳ್ವಿಕೆಯಿಕೆಗೊಳಪಟ್ಟಿತ್ತು.- ದಕ್ಷಿಣದಲ್ಲಿ ವೇನಾಡ್ ಆಡಳಿತಗಾರರು, ಮಧ್ಯದಲ್ಲಿ ಕೊಚ್ಚಿ ಮಹಾರಾಜರು, ಉತ್ತರದಲ್ಲಿ ಕೋಝಿಕ್ಕೋಡ್‌ನ ಝಮೋರಿನ್‌ಗಳು ಮತ್ತು ಉತ್ತರದ ಅಂಚಿನಲ್ಲಿ ಕೋಲತಿರಿ ರಾಜರು ಆಳಿದರು. ಅವರು ವಾಸ್ತುಶಿಲ್ಪದ ಚಟುವಟಿಕೆಗಳನ್ನು ಪೋಷಿಸುವ ಆಡಳಿತಗಾರರಾಗಿದ್ದರು. ಈ ಅವಧಿಯಲ್ಲಿ ಕೇರಳದ ವಾಸ್ತುಶಿಲ್ಪವು ತನ್ನದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಲು ಪ್ರಾರಂಭಿಸಿತು. ಕೇರಳದಲ್ಲಿ ವಾಸ್ತುಶಿಲ್ಪದ ಶೈಲಿಗಳು, ದ್ರಾವಿಡ ಕರಕುಶಲ ಕೌಶಲ್ಯಗಳು, ಬೌದ್ಧ ಕಟ್ಟಡಗಳ ವಿಶಿಷ್ಟ ರೂಪಗಳು, ವೈದಿಕ ಕಾಲದ ವಿನ್ಯಾಸ ಪರಿಕಲ್ಪನೆಗಳು ಮತ್ತು ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳಲ್ಲಿ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ಹಿಂದೂ ಅಗಮ ಶಾಸ್ತ್ರದ ಆಚರಣೆಗಳ ಅಂಗೀಕೃತ ಸಿದ್ಧಾಂತಗಳನ್ನು ಒಳಗೊಂಡು, ನಿರ್ಮಾಣದಲ್ಲಿ ಪ್ರಾದೇಶಿಕ ಅಂಶಗಳು ಸೇರಿಕೊಂಡು ವಿಕಸನಗೊಂಡವು. ಈ ಅವಧಿಯಲ್ಲಿ ವಾಸ್ತುಶಿಲ್ಪದ ನಿರ್ಮಾಣದ ಸಿದ್ಧಾಂತ ಮತ್ತು ಅಭ್ಯಾಸವನ್ನು ಕೂಡ ಸಂಗ್ರಹಿಸಲಾಗಿದೆ.

ಅವರ ಸಂಗ್ರಹಗಳು ಇಂದಿಗೂ ಜೀವಂತ ಸಂಪ್ರದಾಯದ ಶಾಸ್ತ್ರೀಯ ಪಠ್ಯಗಳಾಗಿ ಉಳಿದಿವೆ. ಈ ಪ್ರದೇಶದಲ್ಲಿ ನಾಲ್ಕು ಪ್ರಮುಖ ಪುಸ್ತಕಗಳು;

  • ತಂತ್ರಸಮುಚಯಂ (ಚೆನ್ನಸ್ ನಾರಾಯಣನ್ ನಂಬೂದಿರಿ) ಮತ್ತು ಸಿಲ್ಪಿರತ್ನಂ (ಶ್ರೀಕುಮಾರ), ದೇವಾಲಯದ ವಾಸ್ತುಶಿಲ್ಪವನ್ನು ಒಳಗೊಂಡಿದೆ
  • ವಾಸ್ತುವಿದ್ಯಾ (ಅನೋನ್.) ಮತ್ತು ಮನುಷ್ಯಾಲಯ ಚಂದ್ರಿಕಾ (ತಿರುಮಂಗಲತು ಶ್ರೀ ನೀಲಕಂದನ್), ದೇಶೀಯ ವಾಸ್ತುಶಿಲ್ಪದೊಂದಿಗೆ ಹೊಂದಿಕೊಳ್ಳುತ್ತದೆ. ಕೇರಳದಲ್ಲಿ ಮೇಲಿನ ಪಠ್ಯಗಳ ಆಧಾರದ ಮೇಲೆ, ಸಂಸ್ಕೃತ, ಮಣಿಪ್ರವಾಳಂ ಮತ್ತು ಸಂಸ್ಕರಿಸಿದ ಮಲಯಾಳಂನಲ್ಲಿನ ಹಲವಾರು ಸಣ್ಣ ಕೃತಿಗಳು, ಈ ವಿಷಯಕ್ಕೆ ಸಂಬಂಧಿಸಿದ ಕುಶಲಕರ್ಮಿಗಳು ಮತ್ತು ವೃತ್ತಿಪರರಿಂದ ಜನಪ್ರಿಯತೆಯನ್ನು ಗಳಿಸಿವೆ.

ಕೇರಳವನ್ನು ಮೌರ್ಯ ಸಾಮ್ರಾಜ್ಯದ ಗಡಿ ಸಾಮ್ರಾಜ್ಯಗಳಲ್ಲಿ ಒಂದು ಎಂದು ಕರೆಯಲಾಗುತ್ತದೆ. ಬೌದ್ಧರು ಮತ್ತು ಜೈನರು ಕೇರಳದ ಗಡಿಯನ್ನು ದಾಟಿ ತಮ್ಮ ಮಠಗಳನ್ನು ಸ್ಥಾಪಿಸಿದ ಮೊದಲ ಉತ್ತರ ಭಾರತದ ಗುಂಪುಗಳಾಗಿರಬಹುದು. ಈ ಧಾರ್ಮಿಕ ಗುಂಪುಗಳು ತಮ್ಮ ಧರ್ಮವನ್ನು ಅಭ್ಯಾಸ ಮಾಡಲು ಸಾಧ್ಯವಾಯಿತು ಮತ್ತು ದೇವಾಲಯಗಳು ಮತ್ತು ವಿಹಾರಗಳನ್ನು ನಿರ್ಮಿಸಲು ಸ್ಥಳೀಯ ರಾಜರಿಂದ ಪ್ರೋತ್ಸಾಹವನ್ನು ಪಡೆದರು. ಸುಮಾರು ಎಂಟು ಶತಮಾನಗಳ ಕಾಲ ಬೌದ್ಧಧರ್ಮ ಮತ್ತು ಜೈನಧರ್ಮವು ಕೇರಳದಲ್ಲಿ ಒಂದು ಪ್ರಮುಖ ಧರ್ಮವಾಗಿ ಜೊತೆಯಾಗಿ ಅಸ್ತಿತ್ವದಲ್ಲಿದ್ದು, ಪ್ರದೇಶದ ಸಾಮಾಜಿಕ ಮತ್ತು ವಾಸ್ತುಶಿಲ್ಪದ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದೆ.

ಸಂಯೋಜನೆ ಮತ್ತು ರಚನೆ

ಬದಲಾಯಿಸಿ
 
ತಿರುವನಂತಪುರಂನಲ್ಲಿರುವ ಕನಕಕ್ಕುನ್ನು ಅರಮನೆಯ ವಿಹಂಗಮ ನೋಟ
 
ಬಹುಅಂತಸ್ತಿನ ಮೇಲ್ಛಾವಣಿ ಮತ್ತು ಚಾವಣಿಯ ಕೆಲಸಗಳು ಕೇರಳದ ವಾಸ್ತುಶಿಲ್ಪ ಶೈಲಿಯ ಪ್ರಮುಖ ಲಕ್ಷಣಗಳಾಗಿವೆ.
 
ತ್ರಿಶೂರ್ ನ್ ವಡಕುಂನಾಥ ದೇವಸ್ಥಾನ, ಕೇರಳ ಶೈಲಿಯ ದ್ರಾವಿಡ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.

ಕೇರಳದ ವಾಸ್ತುಶೈಲಿಯನ್ನು ಅವುಗಳ ಕ್ರಿಯಾತ್ಮಕತೆಯ ಆಧಾರದ ಮೇಲೆ ಪ್ರಮುಖವಾಗಿ ಎರಡು ವಿಶಿಷ್ಟ ಪ್ರದೇಶಗಳಾಗಿ ವಿಂಗಡಿಸಬಹುದು, ಪ್ರತಿಯೊಂದೂ ವಿಭಿನ್ನ ತತ್ವಗಳಿಂದ ನಿರ್ದೇಶಿಸಲ್ಪಡುತ್ತದೆ:

  • ಧಾರ್ಮಿಕ ವಾಸ್ತುಶಿಲ್ಪ, ಪ್ರಾಥಮಿಕವಾಗಿ ಕೇರಳದ ದೇವಾಲಯಗಳು ಮತ್ತು ಹಲವಾರು ಹಳೆಯ ಚರ್ಚುಗಳು, ಮಸೀದಿಗಳು ಇತ್ಯಾದಿಗಳಿಂದ ಪೊಷಿಸಲ್ಪಟ್ಟಿದೆ.
  • ದೇಶೀಯ ವಾಸ್ತುಶಿಲ್ಪ, ಪ್ರಾಥಮಿಕವಾಗಿ ಹೆಚ್ಚಿನ ಮನೆಗಳಲ್ಲಿ ಕಂಡುಬರುತ್ತದೆ. ಈ ಪ್ರದೇಶದಲ್ಲಿ ವಿಶಿಷ್ಟವಾದ ಶೈಲಿಗಳಿವೆ, ಏಕೆಂದರೆ ಅರಮನೆಗಳು ಮತ್ತು ಊಳಿಗಮಾನ್ಯ ಅಧಿಪತಿಗಳ ದೊಡ್ಡ ಮಹಲುಗಳು ಸಾಮಾನ್ಯರ ಮನೆಗಳಿಗಿಂತ ಭಿನ್ನವಾಗಿವೆ ಮತ್ತು ಧಾರ್ಮಿಕ ಸಮುದಾಯಗಳ ನಡುವೆ ಗಮನಾರ್ಹ ವ್ಯತ್ಯಾಸವಿದೆ.

ಸಂಯೋಜನೆ

ಬದಲಾಯಿಸಿ

ಎಲ್ಲಾ ರಚನೆಗಳ ಪ್ರಾಥಮಿಕ ಅಂಶಗಳು ಒಂದೇ ಆಗಿರುತ್ತವೆ. ಮೂಲ ಮಾದರಿಯು ಸಾಮಾನ್ಯವಾಗಿ ವೃತ್ತಾಕಾರದ, ಚದರ ಅಥವಾ ಆಯತಾಕಾರದ ಸರಳ ಆಕಾರಗಳನ್ನು ಹೊಂದಿದ್ದು, ಅಗತ್ಯನುಸಾರ ವಿಕಸನಗೊಂಡ ಆಧಾರಧ ಮೇಲ್ಛಾವಣಿಯನ್ನು ಹೊಂದಿದೆ. ಕೇರಳದ ವಾಸ್ತುಶೈಲಿಯ ಅತ್ಯಂತ ವಿಶಿಷ್ಟವಾದ ದೃಶ್ಯ ರೂಪವೆಂದರೆ ಮನೆಯ ಗೋಡೆಗಳನ್ನು ರಕ್ಷಿಸಲು ಮತ್ತು ಭಾರೀ ಮಳೆಗಾಲವನ್ನು ತಡೆದುಕೊಳ್ಳಲು ನಿರ್ಮಿಸಲಾದ ಉದ್ದವಾದ, ಕಡಿದಾದ ಇಳಿಜಾರಾದ ಮೇಲ್ಛಾವಣಿ, ಸಾಮಾನ್ಯವಾಗಿ ಹಂಚು ಅಥವಾ ತಾಳೆ ಗರಿಗಳ ಮತ್ತು ಹುಲ್ಲಿನ ಹೊದಿಕೆಯಿಂದ ಮಾಡಲಾಗುತ್ತದೆ. ಇದನ್ನು ಗಟ್ಟಿಯಾದ ಮರ ಮತ್ತು ಮರದಿಂದ ಮಾಡಿದ ಛಾವಣಿಯ ಚೌಕಟ್ಟಿನ ಮೇಲೆ ರಚಿಸಲಾಗುತ್ತದೆ. ರಚನಾತ್ಮಕವಾಗಿ ಛಾವಣಿಯ ಚೌಕಟ್ಟನ್ನು ಉಷ್ಣವಲಯದ ಹವಾಮಾನದಲ್ಲಿ ತೇವಾಂಶ ಮತ್ತು ಕೀಟಗಳ ವಿರುದ್ಧ ರಕ್ಷಣೆಗಾಗಿ ನೆಲದಿಂದ ಎತ್ತರಿಸಿದ ಸ್ತಂಭದ ಮೇಲೆ ನಿರ್ಮಿಸಲಾದ ಗೋಡೆಗಳ ಮೇಲಿನ ಕಂಬಗಳ ಮೇಲೆ ನಿರ್ಮಿಸಲಾಗುತ್ತದೆ. ಹೆಚ್ಚಾಗಿ ಗೋಡೆಗಳು ಕೇರಳದಲ್ಲಿ ಹೇರಳವಾಗಿ ದೊರೆಯುವ ಮರಗಳಿಂದ ಕೂಡಿದ್ದವು. ಕೋಣೆಗೆ ಗಾಳಿ ಮತ್ತು ಬೆಳಕು ಯಥೇಚ್ಚವಾಗಿ ಬರುವಂತೆ ವಿಶಿಷ್ಟ ರೀತಿಯ ಕಿಟಕಿಗಳನ್ನು ಛಾವಣಿಯ ಎರಡು ಬದಿಗಳಲ್ಲಿ ವಿಕಸನಗೊಳಿಸಲಾಯಿತು.

 
ಕೇರಳದ ಹೆಚ್ಚಿನ ಕಟ್ಟಡಗಳು ಕಡಿಮೆ ಎತ್ತರದಂತೆ ಕಾಣಲು, ಮೇಲ್ಛಾವಣಿಗಳ ಅತಿಯಾದ ಇಳಿಜಾರು ಕಾರಣವಾಗಿದ್ದು ಮಳೆ ಮತ್ತು ನೇರ ಸೂರ್ಯನ ಬೆಳಕಿನಿಂದ ಗೋಡೆಗಳನ್ನು ರಕ್ಷಿಸುವ ಉದ್ದೇಶಿಸದಿಂದ ಮಾಡಲಾಗಿದೆ.

ವಾಸ್ತು ಶೈಲಿಗಳನ್ನು ಅಭಿವೃದ್ಧಿಪಡಿಸುವಲ್ಲಿ ವಾಸ್ತುವಿನ ನಂಬಿಕೆ ವ್ಯವಸ್ಥೆಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮೂಲ ಆಧಾರವಾಗಿರುವ ನಂಬಿಕೆಯೆಂದರೆ, ಭೂಮಿಯ ಮೇಲೆ ನಿರ್ಮಿಸಲಾದ ಪ್ರತಿಯೊಂದು ರಚನೆಯು ತನ್ನದೇ ಆದ ಜೀವಾತ್ಮವನ್ನು ಹೊಂದಿದೆ. ಅದು ಅದರ ಸುತ್ತಮುತ್ತಲಿನ ಪ್ರಕ್ರತಿಯ ಮೂಲಕ ರೂಪುಗೊಂಡ ಆತ್ಮ ಮತ್ತು ವ್ಯಕ್ತಿತ್ವ. ಕೇರಳವು ಸಂಪೂರ್ಣವಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪ್ರಮುಖ ವಿಜ್ಞಾನವೆಂದರೆ ತಚ್ಚು-ಶಾಸ್ತ್ರ (ಬಟ್ಟೆಗಾರಿಕೆಯ ವಿಜ್ಞಾನ). ಇದು ಮರದ ಸುಲಭವಾಗಿ ಲಭ್ಯತೆ ಮತ್ತು ಭಾರೀ ಬಳಕೆಯಾಗಿದೆ. ಥಾಚು ಪರಿಕಲ್ಪನೆಯು ಮರವನ್ನು ಜೀವಂತ ರೂಪದಿಂದ ಪಡೆಯಲಾಗಿದೆ ಎಂದು ಒತ್ತಿಹೇಳುತ್ತದೆ. ಮರವನ್ನು ನಿರ್ಮಾಣಕ್ಕಾಗಿ ಬಳಸಿದಾಗ, ಅದರ ಸ್ವಂತ ಜೀವನವನ್ನು ಅದರ ಸುತ್ತಮುತ್ತಲಿನ ಮತ್ತು ಅದರೊಳಗೆ ವಾಸಿಸುವ ಜನರೊಂದಿಗೆ ಸಾಮರಸ್ಯದಿಂದ ಸಂಯೋಜಿಸಲ್ಪಡಬೇಕು. ಅದು ಕೊಚ್ಚಿ ನಿರ್ಮಾಣದ ಕಥೆ.

ಸಾಮಗ್ರಿಗಳು

ಬದಲಾಯಿಸಿ

ಕೇರಳದಲ್ಲಿ ನಿರ್ಮಾಣಕ್ಕೆ ಲಭ್ಯವಿರುವ ನೈಸರ್ಗಿಕ ಕಟ್ಟಡ ಸಾಮಗ್ರಿಗಳೆಂದರೆ ಕಲ್ಲುಗಳು, ಮರ, ಮಣ್ಣು ಮತ್ತು ತಾಳೆ ಗರಿಗಳು. ಗ್ರಾನೈಟ್ ಬಲವಾದ ಮತ್ತು ಬಾಳಿಕೆ ಬರುವ ಕಟ್ಟಡ ಕಲ್ಲು. ಆದಾಗ್ಯೂ ಅದರ ಲಭ್ಯತೆಯು ಬಹುತೇಕ ಎತ್ತರದ ಪ್ರದೇಶಗಳಿಗೆ ಮತ್ತು ಇತರ ವಲಯಗಳಿಗೆ ಮಾತ್ರ ಸೀಮಿತವಾಗಿದೆ. ಈ ಕಾರಣದಿಂದಾಗಿ, ಕಲ್ಲುಗಣಿಗಾರಿಕೆ, ಕುಸುರಿ ಮತ್ತು ಕಲ್ಲಿನ ಶಿಲ್ಪಕಲೆಗಳಲ್ಲಿ ಕೌಶಲ್ಯವು ಕೇರಳದಲ್ಲಿ ವಿರಳವಾಗಿದೆ. ಮತ್ತೊಂದೆಡೆ ಕೆಂಪು ಕಲ್ಲು (ಲ್ಯಾಟರೈಟ್ ) ಹೆಚ್ಚಿನ ವಲಯಗಳಲ್ಲಿ ಹೊರಬೆಳೆಯಾಗಿ ಕಂಡುಬರುವ ಅತ್ಯಂತ ಹೇರಳವಾಗಿರುವ ಕಲ್ಲು. ಆಳವಿಲ್ಲದ ಆಳದಲ್ಲಿ ಲಭ್ಯವಿರುವ ಮೃದುವಾದ ಲ್ಯಾಟರೈಟ್ ಅನ್ನು ಸುಲಭವಾಗಿ ಕತ್ತರಿಸಬಹುದು, ಧರಿಸಬಹುದು ಮತ್ತು ಇಟ್ಟಿಗೆಗಳಾಗಿ ಬಳಸಬಹುದು. ಇದು ಅಪರೂಪದ ಸ್ಥಳೀಯ ಕಲ್ಲು, ಇದು ವಾತಾವರಣದ ಗಾಳಿಗೆ ಒಡ್ಡಿಕೊಳ್ಳುವುದರೊಂದಿಗೆ ಬಲಗೊಂಡು ಬಾಳಿಕೆ ಬರುತ್ತದೆ. ಲ್ಯಾಟರೈಟ್ ಇಟ್ಟಿಗೆಗಳನ್ನು ಸೀಮೆಸುಣ್ಣದ ಗಾರೆಗಳಲ್ಲಿ ಬಂಧಿಸಿ ಗೋಡೆಗಳನ್ನು ಕಟ್ಟಬಹುದು. ಇದು ಸಾಂಪ್ರದಾಯಿಕ ಕಟ್ಟಡಗಳಲ್ಲಿ ಬಳಸಲಾಗುವ ಶ್ರೇಷ್ಠ ಬಂಧಕ ವಸ್ತುವಾಗಿದೆ. ತರಕಾರಿ ರಸಗಳ ಮಿಶ್ರಣಗಳಿಂದ ನಿಂಬೆ ಗಾರೆ ಶಕ್ತಿ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಛಿಸಬಹುದು. ಅಂತಹ ಉನ್ನತೀಕರಿಸಿದ ಗಾರೆಗಳನ್ನು ಗೋಡೆಸಾರಣೆ ಮಾಡಲು ಅಥವಾ ಉಬ್ಬುಚಿತ್ರಗಳನ್ನು ಮತ್ತು ಇತರ ಕಟ್ಟಡ ರಚನೆ ಕಾರ್ಯಗಳಲ್ಲಿ ಬಳಸಲಾಗುತ್ತಿತ್ತು. ಬಿದಿರಿನಿಂದ ತೇಗದವರೆಗೆ - ಹೇರಳವಾಗಿ ಲಭ್ಯವಿರುವ ಅನೇಕ ಮರಗಳನ್ನು ಪ್ರಧಾನ ರಚನಾತ್ಮಕ ವಸ್ತುವಾಗಿ ಬಳಸಲಾಗಿದೆ. ಬಹುಶಃ ಮರದ ಕೌಶಲದ ಆಯ್ಕೆ, ನಿಖರವಾದ ಜೋಡಣೆ, ಕಲಾತ್ಮಕ ಜೋಡಣೆ ಮತ್ತು ಕಂಬಗಳು, ಗೋಡೆಗಳು ಮತ್ತು ಛಾವಣಿಯ ಚೌಕಟ್ಟುಗಳಿಗೆ ಮರದ ಕೆಲಸದ ಸೂಕ್ಷ್ಮ ಕೆತ್ತನೆಗಳು ಕೇರಳದ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳಾಗಿವೆ. ಜೇಡಿಮಣ್ಣನ್ನು ಅನೇಕ ರೂಪಗಳಲ್ಲಿ ಬಳಸಲಾಗುತ್ತಿತ್ತು - ಗೋಡೆಗೆ, ಮರದ ಮಹಡಿಗಳನ್ನು ತುಂಬಲು ಮತ್ತು ಮಿಶ್ರಣಗಳೊಂದಿಗೆ ಬಳಸಲು ಮತ್ತು ಹದಗೊಳಿಸಿದ ನಂತರ ಇಟ್ಟಿಗೆಗಳು ಮತ್ತು ಅಂಚುಗಳನ್ನು ತಯಾರಿಸಲು ಇದರ ಬಳಕೆಯಾಗುತಿತ್ತು. ತಾಳೆ ಗರಿಗಳನ್ನು ಛಾವಣಿಗಳನ್ನು ಹುಲ್ಲಿನ ಮಾಡಲು ಮತ್ತು ವಿಭಜನಾ ಗೋಡೆಗಳನ್ನು ಮಾಡಲು ಪರಿಣಾಮಕಾರಿಯಾಗಿ ಬಳಸಲಾಗುತ್ತಿತ್ತು.

 
ಶ್ರೀ ಪದ್ಮನಾಭಪುರಂ ಅರಮನೆಯ ಚಾವಣಿಯ ಮೇಲೆ ಮಾಡಲಾದ ವಿಶಿಷ್ಟವಾದ ಮರದ ಕೆತ್ತನೆಗಳು

ವಸ್ತುಗಳ ಮಿತಿಗಳಿಂದಾಗಿ ಕೇರಳದ ವಾಸ್ತುಶೈಲಿಯ ನಿರ್ಮಾಣದಲ್ಲಿ ಒಂದು ಮಿಶ್ರ ವಿಧಾನವನ್ನು ವಿಕಸನಗೊಳಿಸಲಾಯಿತು. ದೇವಾಲಯಗಳಂತಹ ಪ್ರಮುಖ ಕಟ್ಟಡಗಳಲ್ಲಿಯೂ ಕಲ್ಲಿನ ಕೆಲಸವು ಸ್ತಂಭಕ್ಕೆ ಸೀಮಿತವಾಗಿತ್ತು. ಕೆಂಪು ಕಲ್ಲುಗಳನ್ನು (ಲ್ಯಾಟರೈಟ್) ಗೋಡೆಗಳಿಗೆ ಬಳಸಲಾಗುತ್ತಿತ್ತು. ಮರದ ಮೇಲ್ಛಾವಣಿಯ ರಚನೆಯು ಹೆಚ್ಚಿನ ಕಟ್ಟಡಗಳಿಗೆ ತಾಳೆ ಗರಿಯಿಂದ ಮುಚ್ಚಲ್ಪಟ್ಟಿದೆ ಮತ್ತು ಅಪರೂಪವಾಗಿ ಅರಮನೆಗಳು ಅಥವಾ ದೇವಾಲಯಗಳಿಗೆ ಹಂಚುಗಳಿಂದ ಮುಚ್ಚಲ್ಪಟ್ಟಿದೆ. ಲ್ಯಾಟರೈಟ್ ಗೋಡೆಗಳ ಹೊರಭಾಗವನ್ನು ಹಾಗೆಯೇ ಬಿಡಲಾಗಿದೆ ಅಥವಾ ಗೋಡೆಯ ಚಿತ್ರಗಳಿಗೆ ಆಧಾರವಾಗಿ ಕಾರ್ಯನಿರ್ವಹಿಸಲು ಸುಣ್ಣದ ಗಾರೆಯಿಂದ ಸಾರಣೆ ಮಾಡಲಾಗಿದೆ. ಕಲ್ಲಿನ ಶಿಲ್ಪವು ಮುಖ್ಯವಾಗಿ ಸ್ತಂಭದ ಭಾಗದಲ್ಲಿ (ಅಧಿಸ್ತಾನಗಳು) ಸಮತಲವಾದ ಭಾಗದಲ್ಲಿ ಅಚ್ಚು ಮಾಡಲ್ಪಟ್ಟಿದೆ. ಆದರೆ ಮರದ ಕೆತ್ತನೆಯು ಎಲ್ಲಾ ಅಂಶಗಳನ್ನು _ ಕಂಬಗಳು, ಆಧಾರಗಳು, ಮೇಲ್ಚಾವಣಿಗಳು, ಅಡ್ಡಕಂಬಗಳು, ಮತ್ತು ಮುಖ್ಯ ಆಧಾರದ ಆವರಣಗಳು ಒಳಗೊಂಡಿದೆ. ಕೇರಳದ ಭಿತ್ತಿಚಿತ್ರಗಳು ಕಂದುಬಣ್ಣದ ಛಾಯೆಗಳಲ್ಲಿ ಒದ್ದೆಯಾದ ಗೋಡೆಗಳ ಮೇಲೆ ತರಕಾರಿ ಬಣ್ಣಗಳನ್ನು ಹೊಂದಿರುವ ವರ್ಣಚಿತ್ರಗಳಾಗಿವೆ. ಸ್ಥಳೀಯವಾಗಿ ಲಭ್ಯವಿರುವ ಕಚ್ಚಾ ವಸ್ತುಗಳ ಅಳವಡಿಕೆ ಮತ್ತು ವಾಸ್ತುಶಿಲ್ಪದ ಅಭಿವ್ಯಕ್ತಿ ಮಾಧ್ಯಮವಾಗಿ ಅವುಗಳ ನಿರಂತರ ರೂಪಾಂತರವು ಕೇರಳ ಶೈಲಿಯ ಪ್ರಮುಖ ಲಕ್ಷಣವಾಗಿದೆ.

ಧಾರ್ಮಿಕ ವಾಸ್ತುಶಿಲ್ಪ

ಬದಲಾಯಿಸಿ

ದೇವಾಲಯದ ವಾಸ್ತುಶಿಲ್ಪ

ಬದಲಾಯಿಸಿ
 
ಮಧೂರು ದೇವಸ್ಥಾನ, ಕಾಸರಗೋಡು, ಕೇರಳ

ಕೇರಳ ರಾಜ್ಯದಲ್ಲಿ ೨೦೦೦ ಕ್ಕೂ ಹೆಚ್ಚು ಸಂಖ್ಯೆಯ ದೇವಾಲಯಗಳು ಭಾರತದ ಯಾವುದೇ ಪ್ರದೇಶಗಳಿಗೆ ಹೊಂದಿಕೆಯಾಗುವುದಿಲ್ಲ. ಕೇರಳದ ದೇವಾಲಯಗಳು ತಂತ್ರ-ಸಮುಚಯಂ ಮತ್ತು ಶಿಲ್ಪರತ್ನಂ ಎಂಬ ಎರಡು ದೇವಾಲಯ ನಿರ್ಮಾಣ ಪ್ರಬಂಧಗಳ ಕಟ್ಟುನಿಟ್ಟಿನ ಅನುಸಾರವಾಗಿ ಹೆಚ್ಚು ಅಭಿವೃದ್ಧಿ ಹೊಂದಿದವು. ಮೊದಲನೆಯದು ಶಕ್ತಿಯ ಹರಿವನ್ನು ನಿಯಂತ್ರಿಸುವ ರಚನೆಗಳನ್ನು ಅಭಿವೃದ್ಧಿಪಡಿಸುವಲ್ಲಿ ವ್ಯವಹರಿಸುತ್ತದೆ, ಇದರಿಂದಾಗಿ ಧನಾತ್ಮಕ ಶಕ್ತಿಯು ಹರಿಯುತ್ತದೆ, ಆದರೆ ಋಣಾತ್ಮಕ ಶಕ್ತಿಯು ರಚನೆಯೊಳಗೆ ಹಿಂದುಳಿದಂತೆ ಮಾಡುವುದಿಲ್ಲ; ಆದರೆ ಎರಡನೆಯದು ಕಲ್ಲು ಮತ್ತು ಮರದ ವಾಸ್ತುಶಿಲ್ಪವನ್ನು ಅಭಿವೃದ್ಧಿಪಡಿಸುವಲ್ಲಿ ವ್ಯವಹರಿಸುತ್ತದೆ, ಪ್ರತಿ ಕೆತ್ತಿದ ರಚನೆಯು ತನ್ನದೇ ಆದ ಜೀವ ಮತ್ತು ವ್ಯಕ್ತಿತ್ವವನ್ನು ಹೀರಿಕೊಳ್ಳುತ್ತದೆ. []


ಕೇರಳ ದೇವಾಲಯದ ಅಂಶಗಳು ಮತ್ತು ವೈಶಿಷ್ಟ್ಯಗಳು
ಬದಲಾಯಿಸಿ
  • ಶ್ರೀ-ಕೋವಿಲ್

ಒಳಗಿನ ಗರ್ಭಗುಡಿಯಲ್ಲಿ ಪ್ರಧಾನ ದೇವರ ವಿಗ್ರಹವನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಇದು ಸ್ವತಂತ್ರ ರಚನೆಯಾಗಿರಬೇಕು, ಯಾವುದೇ ಸಂಪರ್ಕಗಳಿಲ್ಲದ ಇತರ ಕಟ್ಟಡಗಳಿಂದ ಬೇರ್ಪಟ್ಟಿರುತ್ತದೆ ಮತ್ತು ಅದರ ಸ್ವಂತ ಛಾವಣಿಯನ್ನು ಇತರ ಕಟ್ಟಡ ಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಶ್ರೀ-ಕೋವಿಲ್ ಯಾವುದೇ ಕಿಟಕಿಗಳನ್ನು ಹೊಂದಿಲ್ಲ ಮತ್ತು ಹೆಚ್ಚಾಗಿ ಪೂರ್ವಕ್ಕೆ ತೆರೆಯುವ (ಕೆಲವೊಮ್ಮೆ ಇದು ಪಶ್ಚಿಮಕ್ಕೆ ಸಂಭವಿಸುತ್ತದೆ, ಆದರೆ ಕೆಲವು ದೇವಾಲಯಗಳು ಉತ್ತರಾಭಿಮುಖವಾದ ಬಾಗಿಲನ್ನು ಅದರ ವಿಶೇಷತೆಯಾಗಿ ಹೊಂದಿವೆ, ಆದರೆ ಯಾವುದೇ ದೇವಾಲಯಗಳು ದಕ್ಷಿಣವನ್ನು ಹೊಂದಿರುವುದಿಲ್ಲ- ಎದುರಿಸುತ್ತಿರುವ ಬಾಗಿಲು) ಕೇವಲ ಒಂದು ದೊಡ್ಡ ಬಾಗಿಲನ್ನು ಹೊಂದಿವೆ.

ಶ್ರೀಕೋವಿಲ್ ಅನ್ನು ವಿವಿಧ ಯೋಜನಾ ಆಕಾರಗಳಲ್ಲಿ ನಿರ್ಮಿಸಬಹುದು - ಚದರ, ಆಯತಾಕಾರದ, ವೃತ್ತಾಕಾರ, ಅಥವಾ ಅಷ್ತಭುಜಾಕ್ರಿತಿ. ಇವುಗಳಲ್ಲಿ, ಚೌಕದ ರಚನೆಯು ಕೇರಳದಾದ್ಯಂತ ಹೆಚ್ಚಿನ ಪ್ರದೆಶದಲ್ಲಿ ಕಂಡುಬರುತ್ತದೆ. ಚದರ ಆಕಾರವು ಮೂಲತಃ ವೈದಿಕ ಅಗ್ನಿ ಬಲಿಪೀಠದ ರೂಪವಾಗಿದೆ ಮತ್ತು ವೈದಿಕ ಕ್ರಮಗಳನ್ನು ಅನ್ನು ಬಲವಾಗಿ ಸೂಚಿಸುತ್ತದೆ. ಇದನ್ನು ವಾಸ್ತುಶಾಸ್ತ್ರದ ಗ್ರಂಥಗಳಲ್ಲಿ ದೇವಾಲಯದ ನಾಗರ ಶೈಲಿ ಎಂದು ವರ್ಗೀಕರಿಸಲಾಗಿದೆ. ಆಯತಾಕಾರದ ರಚನೆಯಲ್ಲಿ ಅನಂತಶಯನ ವಿಷ್ಣು (ಒರಗಿರುವ ಭಂಗಿಯಲ್ಲಿರುವ ಭಗವಾನ್ ವಿಷ್ಣು) ಮತ್ತು ಸಪ್ತ ಮಾತೃಕೆಗಳಿಗೆ (ಏಳು ಮಾತೃದೇವತೆಗಳು) ಅಳವಡಿಸಲಾಗಿದೆ. ವೃತ್ತಾಕಾರದ ರಚನೆ ಮತ್ತು ಅಷ್ತಭುಜಾಕ್ರರತಿ ರಚನೆಯು ಭಾರತದ ಇತರ ಭಾಗಗಳಲ್ಲಿ ಅಪರೂಪ ಮತ್ತು ಕೇರಳದ ಆಧುನಿಕ ವಾಸ್ತುಶಿಲ್ಪದಲ್ಲಿಯೂ ತಿಳಿಸಿಲ್ಲ. ಆದರೆ ಅವು ದೇವಾಲಯಗಳ ಪ್ರಮುಖ ಗುಂಪನ್ನು ರೂಪಿಸುತ್ತವೆ. ವೃತ್ತಾಕಾರದ ರಚನೆಯು ಕೇರಳದ ದಕ್ಷಿಣ ಭಾಗದಲ್ಲಿ ಬೌದ್ಧಧರ್ಮದ ಪ್ರಭಾವಕ್ಕೆ ಒಳಗಾದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆಯನ್ನು ತೋರಿಸುತ್ತದೆ. ಅಷ್ತಭುಜಾಕ್ರಿತಿ ರಚನೆಯು ಅರ್ಧವೃತ್ತ ಮತ್ತು ಚೌಕದ ಸಂಯೋಜನೆಯಾಗಿದೆ ಮತ್ತು ಇದು ಕರಾವಳಿ ಪ್ರದೇಶದಾದ್ಯಂತ ವಿರಳವಾಗಿ ಕಂಡು ಬರುತ್ತದೆ. ವೃತ್ತಾಕಾರದ ದೇವಾಲಯಗಳು ವಾಸರ ವರ್ಗಕ್ಕೆ ಸೇರಿವೆ. ಇದಕ್ಕೆ ಅಪವಾದವಾದವೆಂಬಂತೆ, ವೃತ್ತ-ದೀರ್ಘವೃತ್ತದ ಬದಲಾವಣೆಯು ವೈಕ್ಕಂನಲ್ಲಿರುವ ಶಿವ ದೇವಾಲಯದಲ್ಲಿ ಕಂಡುಬರುತ್ತದೆ. ದ್ರಾವಿಡ ವರ್ಗಕ್ಕೆ ಸೇರಿದ ಬಹುಭುಜಾಕೃತಿಯ ಆಕಾರಗಳನ್ನು ದೇವಾಲಯದ ರಚನೆಗಳಲ್ಲಿ ಅಪರೂಪವಾಗಿ ಅಳವಡಿಸಿಕೊಳ್ಳಲಾಗುತ್ತದೆ ಆದರೆ ಅವು ಶಿಖರದ ವೈಶಿಷ್ಟ್ಯವಾಗಿ ಬಳಸಲ್ಪಡುತ್ತವೆ. ತಂತ್ರಸಮುಚಯಂ ಪ್ರಕಾರ, ಪ್ರತಿ ಶ್ರೀಕೋವಿಲ್ ಅನ್ನು ತಟಸ್ಥವಾಗಿ ಅಥವಾ ಏಕೀಕೃತವಾಗಿ ಅಥವಾ ಸ್ವತಂತ್ರವಾಗಿ ನಿರ್ಮಿಸಬೇಕು.

ಏಕೀಕೃತ ದೇವಾಲಯಗಳಿಗೆ, ಒಟ್ಟಾರೆ ಎತ್ತರವನ್ನು ದೇಗುಲದ ಅಗಲದ ೧ ೩/೭/ ರಿಂದ ೨ ೧/೮ ಎಂದು ತೆಗೆದುಕೊಳ್ಳಲಾಗುತ್ತದೆ ಮತ್ತು ಅವನ್ನು ೫ ವರ್ಗಗಳಾಗಿ ವರ್ಗೀಕರಿಸಲಾಗಿದೆ ಅವುಗಳೆಂದರೆ ; ಶಾಂತಿಕ, ಪೂರ್ಣಿಕಾ, ಯಯಾದ, ಅಚ್ಯುತ, ಮತ್ತು ಸವಕಾಮಿಕ - ದೇವಾಲಯದ ರೂಪದ ಎತ್ತರದೊಂದಿಗೆ. ಒಟ್ಟು ಎತ್ತರವನ್ನು ಮೂಲತಃ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಕೆಳಗಿನ ಅರ್ಧಭಾಗದ ನೆಲಮಾಳಿಗೆ, ಕಂಬ ಅಥವಾ ಗೋಡೆ (ಸ್ತಂಭ ಅಥವಾ ಭಿತ್ತಿ) ಮತ್ತು ಪ್ರಸ್ತಾರ ಗಳು ಎತ್ತರದಲ್ಲಿ ೧:೨:೧ ಅನುಪಾತದಲ್ಲಿವೆ. ಅಂತೆಯೇ, ಮೇಲಿನ ಅರ್ಧಭಾಗದ ಕುತ್ತಿಗೆ (ಗ್ರೀವ), ಛಾವಣಿಯ ಗೋಪುರ (ಶಿಖರ), ಮತ್ತು ಕಲಶಗಳನ್ನು ಒಂದೇ ಅನುಪಾತದಲ್ಲಿ ವಿಂಗಡಿಸಲಾಗಿದೆ. ಆದಿಸ್ಥಾನ ಅಥವಾ ಅಡಿಪಾಯವು ಸಾಮಾನ್ಯವಾಗಿ ಕಪ್ಪುಕಲ್ಲಿ (ಗ್ರಾನೈಟ್‌ನಲ್ಲಿ )ದೆ ಆದರೆ ಮೇಲ್ಬಾಗದ ರಚನೆಯನ್ನು ಕೆಂಪು ಕಲ್ಲಿನಲ್ಲಿ (ಲ್ಯಾಟರೈಟ್‌ನಲ್ಲಿ) ನಿರ್ಮಿಸಲಾಗಿದೆ. ಮೇಲ್ಛಾವಣಿಗಳು ಸಾಮಾನ್ಯವಾಗಿ ಇತರ ದೇವಾಲಯದ ರಚನೆಗಳಿಗಿಂತ ಎತ್ತರವಾಗಿರುತ್ತವೆ. ದೇಗುಲದ ರಚನಾತ್ಮಕ ಮೇಲ್ಛಾವಣಿಯನ್ನು ಕಲ್ಲಿನ ಕಂಬ ಆಧಾರಿತ ಗುಮ್ಮಟವಾಗಿ ನಿರ್ಮಿಸಲಾಗಿದೆ; ಆದಾಗ್ಯೂ ಹವಾಮಾನದ ಬದಲಾವಣೆಗಳಿಂದ ಅದನ್ನು ರಕ್ಷಿಸುವ ಸಲುವಾಗಿ ಹಲಗೆಗಳು, ಹಂಚುಗಳು ಮತ್ತು ಮರದ ಚೌಕಟ್ಟಿನಿಂದ ಮಾಡಲ್ಪಟ್ಟ ಛಾವಣಿಯಿಂದ ಅದನ್ನು ಮುಚ್ಚಲಾಗಿದೆ. ಈ ಇಳಿಜಾರಿನಂತಿರುವ ಮೇಲ್ಛಾವಣಿಯು ಅದರ ಪ್ರಕ್ಷೇಪಿತ ರಚನೆಗಳೊಂದಿಗೆ ಕೇರಳದ ದೇವಾಲಯಕ್ಕೆ ವಿಶಿಷ್ಟ ರೂಪವನ್ನು ನೀಡಿತು. ತಾಮ್ರದಿಂದ ಮಾಡಿದ ಕಲಶವು, ವಿಗ್ರಹವನ್ನು ಸ್ಥಾಪಿಸಿದ ದೇವಾಲಯದ ಕೇಂದ್ರಬಿಂದುವನ್ನು ಸೂಚಿಸುವ ಶಿಖರಕ್ಕೆ ಕಿರೀಟದ ಸದ್ರಶವಾಗಿದೆ.

 
ಕೇರಳದ ಎಲ್ಲಾ ದೇವಾಲಯಗಳಲ್ಲಿ ಧ್ವಜಸ್ತಂಭವು ಸಾಮಾನ್ಯವಾಗಿ ಕಂಡುಬರುತ್ತದೆ

ಸಾಮಾನ್ಯವಾಗಿ ಶ್ರೀಕೋವಿಲ್ನ ಬುಡಭಾಗವು ಎತ್ತರದಲ್ಲಿದೆ ಮತ್ತು ವಿಮಾನ ಅಥವಾ ೩ ಅಥವಾ ೫ ಮೆಟ್ಟಿಲುಗಳನ್ನು ಹೊಂದಿದೆ. ಮೆಟ್ಟಿಲುಗಳನ್ನು ಸೋಪಾನಪಾಡಿ ಎಂದು ಕರೆಯಲಾಗುತ್ತದೆ ಮತ್ತು ಸೋಪಾನಪಾಡಿಯ ಬದಿಗಳಲ್ಲಿ, ದ್ವಾರಪಾಲಕರು (ಬಾಗಿಲಿನ ಕಾವಲುಗಾರರು) ಎಂದು ಕರೆಯಲ್ಪಡುವ ಎರಡು ದೊಡ್ಡ ಪ್ರತಿಮೆಗಳು ದೇವರನ್ನು ಕಾಪಾಡಲು ನಿಂತಿರುತ್ತವೆ. ಕೇರಳದ ವಿಧಿ ವಿಧಾನಗಳ ಪ್ರಕಾರ, ಪ್ರಧಾನ ಅರ್ಚಕ (ತಂತ್ರಿ) ಮತ್ತು ಎರಡನೇ ಅರ್ಚಕ (ಮೇಲ್ಶಾಂತಿ) ಮಾತ್ರ ಶ್ರೀ-ಕೋವಿಲ್‌ಗೆ ಪ್ರವೇಶಿಸಲು ಅವಕಾಶವಿದೆ.

  • ನಮಸ್ಕಾರ ಮಂಟಪ

ನಮಸ್ಕಾರ ಮಂಟಪವು ಎತ್ತರದ ವೇದಿಕೆಯಲ್ಲಿದ್ದು, ಕಂಬಗಳಿಂದ ಅಲಂಕ್ರತವಾದ ಮತ್ತು ಗೋಪುರಾಕರದ ಛಾವಣಿಯ ಚೌಕಾಕಾರದ ಮಂಟಪವಾಗಿದೆ. ಮಂಟಪದ ಗಾತ್ರವನ್ನು ದೇವಾಲಯದ ಅಗಲದಿಂದ ನಿರ್ಧರಿಸಲಾಗುತ್ತದೆ. ಸರಳ ರಚನೆಯ ಮಂಟಪಗಳು ನಾಲ್ಕು ಮೂಲೆಯಲ್ಲಿ ಕಂಬಗಳನ್ನು ಹೊಂದಿದೆ; ಆದರೆ ದೊಡ್ಡ ಮಂಟಪಗಳಿಗೆ ಎರಡು ಜೊತೆ ಕಂಬಗಳನ್ನು ಒದಗಿಸಲಾಗಿದೆ; ಒಳಗೆ ನಾಲ್ಕು ಮತ್ತು ಹೊರಗೆ ಹನ್ನೆರಡು. ವೃತ್ತಾಕಾರದ, ಅಂಡಾಕಾರದ ಮತ್ತು ಬಹುಭುಜಾಕೃತಿಯ ಆಕಾರಗಳ ಮಂಟಪಗಳನ್ನು ಪಠ್ಯಗಳಲ್ಲಿ ಉಲ್ಲೇಖಿಸಲಾಗಿದೆ, ಆದರೆ ಅವು ಕೇರಳದ ದೇವಾಲಯಗಳಲ್ಲಿ ಕಂಡುಬರುವುದಿಲ್ಲ. ಮಂಟಪಗಳನ್ನು ವೈದಿಕ-ತಾಂತ್ರಿಕ ವಿಧಿಗಳನ್ನು ನಡೆಸಲು ಬಳಸಲಾಗುತ್ತದೆ.

  • ನಾಲಂಬಲಂ


ದೇಗುಲ ಮತ್ತು ಮಂಟಪ ಕಟ್ಟಡವನ್ನು ನಾಲಂಬಲಂ ಎಂಬ ಆಯತಾಕಾರದ ರಚನೆಯಲ್ಲಿ ಸುತ್ತುವರಿದಿದೆ. ನಾಲಂಬಲಂನ ಹಿಂಭಾಗ ಮತ್ತು ಪಕ್ಕದ ಸಭಾಂಗಣಗಳು ಧಾರ್ಮಿಕ ಆರಾಧನೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಿಗೆ ಸೇವೆ ಸಲ್ಲಿಸಲು ಬಳಸಲ್ಪಡುತದೆ. ಮುಂಭಾಗದ ಸಭಾಂಗಣವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ. ಈ ಎರಡು ಸಭಾಂಗಣಗಳು; ಬ್ರಾಹ್ಮಣರ ಊಟದ ಉಪಯೋಗಕ್ಕೆ ಹಾಗೂ ಯಾಗಗಳನ್ನು ಮಾಡಲು ಮತ್ತು ಇನ್ನೊಂದು ಭಾಗ (ಕೂತುಅಂಬಲಗಳ)ವನ್ನು ಕೂತು ಮತ್ತು ಭಿತ್ತಿಚಿತ್ರಗಳಂತಹ ದೇವಾಲಯದ ಕಲೆಗಳನ್ನು ಪ್ರದರ್ಶಿಸಲು ಅಗ್ರಸಾಲೆಗಳಾಗಿ ಬಳಸುತ್ತಿದ್ದರು. ಕೆಲವು ಸಂದರ್ಭಗಳಲ್ಲಿ, ಕೂತುಅಂಬಲಗಳು ನಾಲಂಬಲಂ ಹೊರಗೆ ಪ್ರತ್ಯೇಕ ರಚನೆಯಾಗಿರುತ್ತಿದ್ದವು. ಪ್ರತ್ಯೇಕಿಸಲಾಗುತ್ತದೆ.

  • ಬಲಿತಾರ


ನಾಳಂಬಲಂನ ಪ್ರವೇಶದ್ವಾರದಲ್ಲಿ, ಬಲಿತಾರಾ ಎಂದು ಕರೆಯಲ್ಪಡುವ ಚದರ ಆಕಾರದ ಎತ್ತರದ ಕಲ್ಲಿನ ಬಲಿಪೀಠವನ್ನು ಕಾಣಬಹುದು. ಈ ಬಲಿಪೀಠವನ್ನು ದೇವಮಾನವರು ಮತ್ತು ಇತರ ಆತ್ಮಗಳಿಗೆ ಧಾರ್ಮಿಕ ಅರ್ಪಣೆಗಳನ್ನು ಮಾಡಲು ಬಳಸಲಾಗುತ್ತದೆ. ನಾಳಂಬಲದ ಒಳಗೆ, ಬಲಿಕಲ್ಲುಗಳು ಎಂದು ಕರೆಯಲ್ಪಡುವ ಹಲವಾರು ಸಣ್ಣ ಕಲ್ಲುಗಳನ್ನು ಕಾಣಬಹುದು, ಇದನ್ನು ಅದೇ ಉದ್ದೇಶಕ್ಕಾಗಿ ಉದ್ದೇಶಿಸಲಾಗಿದೆ.

  • ಚುಟ್ಟುಅಂಬಲಂ
 
ಗೋಪ್ಪುರಂ ಅಥವಾ ಗೇಟ್‌ಹೌಸ್

ದೇವಾಲಯದ ಗೋಡೆಗಳ ಒಳಗಿನ ಹೊರಗಿನ ರಚನೆಯನ್ನು ಚುಟ್ಟುಅಂಬಲಂ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಚುಟ್ಟುಅಂಬಲವು ಮುಖ-ಮಂಟಪ ಅಥವಾ ತಾಳ-ಮಂಟಪ ಎಂದು ಕರೆಯಲ್ಪಡುವ ಮುಖ್ಯ ಮಂಟಪವನ್ನು ಹೊಂದಿದೆ. ಮುಖ-ಮಂಟಪವನ್ನು ಬೆಂಬಲಿಸುವ ಹಲವಾರು ಕಂಬಗಳನ್ನು ಹೊಂದಿದೆ. ಮತ್ತು ಮಂಟಪದ ಮಧ್ಯದಲ್ಲಿ ದ್ವಜಸ್ತಂಭವನ್ನು (ಪವಿತ್ರ ಧ್ವಜ-ಸ್ತಂಭ) ಹೊಂದಿರುತ್ತದೆ. ದೇವಾಲಯವು ಬೃಹತ್ ಗೋಡೆಯ (ಕ್ಷೇತ್ರ-ಮಡಿಲ್ಲುಕಲ್) ಸಹಾಯದಿಂದ ದ್ವಾರಗಳಿರುವ ಗೋಪುರಗಳಿಂದ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಗೋಪುರವು ಸಾಮಾನ್ಯವಾಗಿ ಎರಡು ಅಂತಸ್ತಿನದ್ದಾಗಿದೆ, ಇದು ಎರಡು ಉದ್ದೇಶಗಳನ್ನು ಪೂರೈಸುತ್ತದೆ. ನೆಲ ಮಹಡಿಯು ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ಕುರತಿ ನೃತ್ಯ ಅಥವಾ ಒಟ್ಟನ್ ತುಳ್ಳಲ್‌ನಂತಹ ದೇವಾಲಯದ ನೃತ್ಯಗಳಿಗೆ ವೇದಿಕೆಯಾಗಿ ಬಳಸಲ್ಪಡುತ್ತದೆ. ಬದಿಗಳನ್ನು ಆವರಿಸಿರುವ ಮರದ ಜಾಡುಗಳನ್ನು ಹೊಂದಿರುವ ಮೇಲಿನ ಮಹಡಿಯು ಕೊತ್ತುಪುರ (ಡೋಲು ಬಾರಿಸುವ ಸಭಾಂಗಣ) ಆಗಿ ಕಾರ್ಯನಿರ್ವಹಿಸುತ್ತಿತ್ತು. ಚುಟ್ಟುಅಂಬಲಂ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಪ್ರವೇಶಕ್ಕೆ ಹೊರಗಿನಿಂದ ೪ ದ್ವಾರಗಳನ್ನು ಹೊಂದಿರುತ್ತದೆ. ದೇವಾಲಯದ ಸುತ್ತಲೂ ಭಕ್ತರು ಸಂಚರಿಸಲು ಅನುವು ಮಾಡಿಕೊಡಲು ಕಲ್ಲಿನ ಸುಸಜ್ಜಿತ ನಡಿಗೆ-ಮಾರ್ಗವು ದೇವಾಲಯದ ಸುತ್ತಲೂ ಕಂಡುಬರುತ್ತದೆ, ಕೆಲವು ದೊಡ್ಡ ದೇವಾಲಯಗಳಿಗೆ ಎರಡೂ ಬದಿಗಳಲ್ಲಿ ಬೃಹತ್ ಕಂಬಗಳಿಂದ ಮೇಲ್ಛಾವಣಿಯಿಂದ ಆವೃತವಾಗಿದೆ. ಚುಟ್ಟುಅಂಬಲವು ದ್ವಜವಿಲ್ಲಕ್ಕು ಅಥವಾ ದೈತ್ಯ ದೀಪಸ್ತಂಭಗಳನ್ನು ಹಲವಾರು ಸ್ಥಳಗಳಲ್ಲಿ ಹೊಂದಿರುತ್ತದೆ. ಹೆಚ್ಚಾಗಿ ಮುಖ-ಮಂಟಪಗಳಲ್ಲಿ ದೀಪಸ್ತಂಭಗಳಿರುತ್ತವೆ.

  • ಅಂಬಾಲ-ಕುಲಂ
 
ಅಂಬಲಪ್ಪುರದ ಶ್ರೀ ಕೃಷ್ಣ ದೇವಾಲಯದಲ್ಲಿರುವ ಕೊಳ ಅಥವಾ ಅಂಬಲಕುಲಂ

ಪ್ರತಿ ದೇವಾಲಯವು ದೇವಾಲಯದ ಸಂಕೀರ್ಣದಲ್ಲಿ ಪವಿತ್ರ ದೇವಾಲಯದ ಕೊಳ ಅಥವಾ ನೀರಿನ ಸರೋವರವನ್ನು ಹೊಂದಿರುತ್ತದೆ. ವಾಸ್ತು-ನಿಯಮಗಳ ಪ್ರಕಾರ, ನೀರನ್ನು ಧನಾತ್ಮಕ ಶಕ್ತಿಯ ಮೂಲ ಮತ್ತು ಎಲ್ಲಾ ಶಕ್ತಿಗಳ ಸಂಶ್ಲೇಷಣೆಯ ಸಮತೋಲನ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದೇವಾಲಯದ ಸಂಕೀರ್ಣದಲ್ಲಿ ದೇವಾಲಯದ ಕೊಳ ಅಥವಾ ಅಂಬಲ ಕುಲಂ ಲಭ್ಯವಾಗುತ್ತದೆ. ದೇವಾಲಯದ ಕೊಳವನ್ನು ಸಾಮಾನ್ಯವಾಗಿ ಪುರೋಹಿತರು ಮಾತ್ರ ಆಚರಣೆಗಳನ್ನು ಪ್ರಾರಂಭಿಸುವ ಮೊದಲು ಪವಿತ್ರ ಸ್ನಾನ ಮತ್ತು ದೇವಾಲಯದೊಳಗಿನ ವಿವಿಧ ಪವಿತ್ರ ಆಚರಣೆಗಳಿಗೆ ಬಳಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ದೇವಾಲಯಕ್ಕೆ ಪ್ರವೇಶಿಸುವ ಮೊದಲು ಭಕ್ತರು ಸ್ನಾನ ಮಾಡಲು ಪ್ರತ್ಯೇಕ ಕೊಳವನ್ನು ನಿರ್ಮಿಸಲಾಗುತ್ತದೆ. ಇಂದು ಹಲವಾರು ದೇವಾಲಯಗಳು ನಾಲಂಬಲಂ ಸಂಕೀರ್ಣದಲ್ಲಿ ಅಭಿಷೇಕದ ಉದ್ದೇಶಗಳಿಗಾಗಿ ಪವಿತ್ರ ನೀರನ್ನು ಪಡೆಯಲು ಮಣಿ-ಕೆನಾರ್ ಅಥವಾ ಪವಿತ್ರ ಬಾವಿಯನ್ನು ಹೊಂದಿವೆ.

  • ತೇವರಾಪುರ
 
ಕೂತುಅಂಬಲಗಳು ದೇವಾಲಯದ ನೃತ್ಯಗಳು ಮತ್ತು ಇತರ ಕಲಾ ಪ್ರಕಾರಗಳನ್ನು ನಡೆಸಲು ಪ್ರಮುಖ ಸ್ಥಳಗಳಾಗಿವೆ. ಕೂತುಅಂಬಲದ ಮೇಲ್ಛಾವಣಿಯ ಎತ್ತರವು ಪಿರಮಿಡ್‌ಗಳನ್ನು ಹೋಲುತ್ತದೆ, ಇದು ಹೆಚ್ಚು ಭವ್ಯವಾಗಿದೆ ಮೆರುಗನ್ನು ನೀಡುತ್ತದೆ.

ಸಾಮಾನ್ಯವಾಗಿ ನಾಲಂಬಲಂನಲ್ಲಿ, ದೇವರಿಗೆ ಬಡಿಸಲು ಮತ್ತು ಭಕ್ತಾದಿಗಳಿಗೆ ಪವಿತ್ರ ಪ್ರಸಾದವಾಗಿ ವಿತರಿಸಲು ಉದ್ದೇಶಿಸಿರುವ ಆಹಾರಗಳನ್ನು ಅಡುಗೆ ಮಾಡಲು ಪ್ರತ್ಯೇಕ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ. ಅಂತಹ ಸಂಕೀರ್ಣಗಳನ್ನು ತೇವರಪುರ ಎಂದು ಕರೆಯಲಾಗುತ್ತದೆ, ಅಲ್ಲಿ ಪವಿತ್ರ ಬೆಂಕಿ ಅಥವಾ ಅಗ್ನಿಯನ್ನು ಆಹ್ವಾನಿಸಲಾಗುತ್ತದೆ.

ವಿಕಾಸದ ಹಂತಗಳು
ಬದಲಾಯಿಸಿ
 
ಪಾಳಿಯಂ ನಲುಕೆಟ್ಟು ಸಂಕೀರ್ಣ
 
ಉತ್ತರ ಕೇರಳದ ಮಡಪ್ಪುರ (ಏಕಾಂಗಿ ಕೋವಿಲ್) ದಲ್ಲಿ ತೆಯ್ಯಂ ಆಚರಣೆಗಳನ್ನು ಕಾಲ ಕಾಲಕ್ಕೆ ನಡೆಸಲಾಗುತ್ತದೆ. ಅದರ ಸ್ವತಂತ್ರ, ಏಕೈಕ, ಹಂಚಿನ ಛಾವಣಿಯ ರಚನೆಗೆ ಹೆಸರುವಾಸಿಯಾಗಿದೆ. ಎಲ್ಲಾ ಮುತ್ತಪ್ಪನ್ ಮಡಪ್ಪುರಗಳು ಒಂದೇ ಶೈಲಿಯಲ್ಲಿ ರಚನೆಗೊಂಡಿವೆ. ಈ ರಚನೆಗಳು ಮುಖ್ಯವಾಗಿ ಕೇರಳದ ಉತ್ತರ ಮಲಬಾರ್ ಪ್ರದೇಶದಲ್ಲಿ ಕಂಡುಬರುತ್ತವೆ.

ಅದರ ಶೈಲಿಯ ಬೆಳವಣಿಗೆಯಲ್ಲಿ, ದೇವಾಲಯದ ವಾಸ್ತುಶಿಲ್ಪವನ್ನು ಮೂರು ಹಂತಗಳಾಗಿ ವಿಂಗಡಿಸಬಹುದು.

ಮೊದಲ ಹಂತವೆಂದರೆ ಬಂಡೆಯಿಂದ ಕತ್ತರಿಸಿದ ದೇವಾಲಯಗಳು. ಈ ಆರಂಭಿಕ ರೂಪವು ಬೌದ್ಧ ಗುಹೆ ದೇವಾಲಯಗಳಿಗೆ ಸಮಕಾಲೀನವಾಗಿದೆ. ಪ್ರಮಖ ವಾಗಿ ಕಲ್ಲಿನಲ್ಲಿ ಕೊರೆದ ದೇವಾಲಯಗಳು ದಕ್ಷಿಣ ಕೇರಳದಲ್ಲಿ ನೆಲೆಗೊಂಡಿವೆ - ತಿರುವನಂತಪುರಂ ಬಳಿಯ ವಿಝಿಂಜಂ ಮತ್ತು ಅಯಿರುರ್ಪಾರಾ, ಕೊಲ್ಲಂ ಬಳಿಯ ಕೊಟ್ಟುಕಲ್ ಮತ್ತು ಆಲಪ್ಪುಳದ ಬಳಿ ಕವಿಯೂರ್. ಇವುಗಳಲ್ಲಿ ಕವಿಯೂರಿನಲ್ಲಿರುವ ದೇವಾಲಯ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಶಿವನಿಗೆ ಸಮರ್ಪಿತವಾಗಿರುವ ಕವಿಯೂರ್ ಗುಹೆ ದೇವಾಲಯವು ದೇವಾಲಯದ ಕೋಣೆ ಮತ್ತು ವಿಶಾಲವಾದ ಅರ್ಧಮಂಟಪವನ್ನು ಪಶ್ಚಿಮಕ್ಕೆ ಮುಖ ಮಾಡಿ ಜೋಡಿಸಲಾಗಿದೆ. ಸ್ತಂಭದ ಮುಂಭಾಗದಲ್ಲಿ ಮತ್ತು ಅರ್ಧಮಂಟಪದ ಒಳಗಿನ ಗೋಡೆಗಳ ಮೇಲೆ ದಾನಿ, ಗಡ್ಡಧಾರಿ ಋಷಿ, ಕುಳಿತಿ ಭಂಗಿಯಲ್ಲಿರುವ ನಾಲ್ಕು ಭುಜಗಳ ಗಣೇಶ ಮತ್ತು ದ್ವಾರಪಾಲಕರ ಉಬ್ಬು ಶಿಲ್ಪಗಳಿವೆ. ಇತರ ಗುಹಾ ದೇವಾಲಯಗಳು ಈ ಸಾಮಾನ್ಯ ಮಾದರಿಯ ದೇವಾಲಯ ಮತ್ತು ಮುಂಭಾಗದ ಕೋಣೆಯನ್ನು ಹೊಂದಿವೆ ಮತ್ತು ಅವು ಶಿವಾರಾಧನೆಯೊಂದಿಗೆ ಸಂಬಂಧ ಹೊಂದಿವೆ. ಶೈವ ಆರಾಧನೆಯ ಕುರುಹು ಆದ ಇದೇ ರೀತಿಯ ಬಂಡೆಯಿಂದ ಕತ್ತರಿಸಿದ ದೇವಾಲಯಗಳನ್ನು ಉತ್ತರದಲ್ಲಿ ತ್ರಿಶೂರ್ ಜಿಲ್ಲೆಯ ತ್ರಿಕ್ಕೂರ್ ಮತ್ತು ಇರುನಿಲಂಕೋಡ್‌ನಲ್ಲಿ ಕಾಣಬಹುದು. ಐತಿಹಾಸಿಕವಾಗಿ ಭಾರತದಲ್ಲಿನ ಗುಹೆ ವಾಸ್ತುಶೈಲಿಯು ಬೌದ್ಧಧರ್ಮದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಕೇರಳದಲ್ಲಿ ಕಲ್ಲಿನಲ್ಲಿ ಕೊರೆದ ವಾಸ್ತುಶಿಲ್ಪದ ತಂತ್ರವು ಪಾಂಡ್ಯರ ಅಡಿಯಲ್ಲಿ ತಮಿಳುನಾಡಿನಲ್ಲಿ ಇದೇ ರೀತಿಯ ಕೆಲಸಗಳ ಮುಂದುವರಿಕೆಯಾಗಿದೆ. ಬಂಡೆಯಿಂದ ಕೆತ್ತಿದ ದೇವಾಲಯಗಳೆಲ್ಲವೂ ಕ್ರಿ.ಶ. ಎಂಟನೆಯ ಶತಮಾನಕ್ಕೂ ಹಿಂದಿನವು.

ಎಂಟರಿಂದ ಹತ್ತನೇ ಶತಮಾನದ ಉತ್ತರಾರ್ಧದಲ್ಲಿ ಕಾಣಿಸಿಕೊಳ್ಳುವ ರಚನಾತ್ಮಕ ದೇವಾಲಯಗಳು ಚೇರ, ಆಯ್ ಮತ್ತು ಮೂಶಿಕ ವ್ಂಶಸ್ಥರಿಂದ ಪೋಷಿತವಾಗಿದೆ. ಪ್ರಾಚೀನ ದೇವಾಲಯಗಳು ಏಕೀಕೃತ ದೇವಾಲಯ ಅಥವಾ ಶ್ರೀಕೋವಿಲ್ ಅನ್ನು ಹೊಂದಿದ್ದವು. ಅಪರೂಪದ ಸಂದರ್ಭಗಳಲ್ಲಿ ಮುಖಮಂಟಪ ಅಥವಾ ಅರ್ಧಮಂಟಪವು ದೇಗುಲಕ್ಕೆ ತಾಗಿಕೊಂಡಿವೆ. ಸಾಮಾನ್ಯವಾಗಿ ಶ್ರೀಕೋವಿಲ್ ಮುಂಭಾಗದಲ್ಲಿ ಪ್ರತ್ಯೇಕವಾದ ನಮಸ್ಕಾರ ಮಂಟಪವನ್ನು ನಿರ್ಮಿಸಲಾಗಿದೆ. ಶ್ರೀಕೋವಿಲ್, ನಮಸ್ಕಾರ ಮಂಟಪ, ಬಳಿಕ್ಕಲ್ (ನೈವೇದ್ಯದ ಕಲ್ಲುಗಳು) ಇತ್ಯಾದಿಗಳನ್ನು ಸುತ್ತುವರಿದ ಒಂದು ಚತುರ್ಭುಜ ಕಟ್ಟಡ ನಾಲಂಬಲಂ ನ ಸಂಯೋಜನೆಗಳು, ಕೇರಳದ ದೇವಾಲಯದ ಮೂಲಭೂತ ರಚನೆಯ ಭಾಗವಾಯಿತು.

ಸಾಂಧಾರ ದೇವಾಲಯದ ಉಗಮವು ದೇವಾಲಯಗಳ ವಿಕಾಸದ ಮಾಧ್ಯಮಿಕ ಹಂತವನ್ನು ನಿರೂಪಿಸುತ್ತದೆ. ಹಿಂದಿನ ಪ್ರಕಾರದ ಏಕೀಕೃತ ದೇಗುಲದಲ್ಲಿ, ನಿರೇಂಧರಾ (ಶ್ರೀಕೋವಿಲ್‌ನ ಏಕ ಮಟ್ಟ), ದೇಗುಲಕ್ಕೆ ಒಂದೇ ದ್ವಾರವನ್ನು ಹೊಂದಿದ ಹಾದಿಯಿದೆ. ಆದರೆ ಸಾಂಧಾರ ದೇಗುಲದಲ್ಲಿ ಈ ಹಾದಿಯ ಇಕ್ಕೆಳಗಳಲ್ಲಿ ಅವಳಿ ಬಾವಿಗಳನ್ನು ಹೊಂದಿದ್ದು ಅವುಗಳ ನಡುವೆ ಒಂದು ಮಾರ್ಗವನ್ನು ಬಿಡುತ್ತದೆ. ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಸಾಮಾನ್ಯವಾಗಿ ನಾಲ್ಕು ಬಾಗಿಲುಗಳು ಇದ್ದು, ಹೊರಗಿನಿಂದ ಬಂದ ಬೆಳಕನ್ನು ಹಾದಿಗೆ ಒದಗಿಸಲು ಕಿಟಕಿಗಳನ್ನು ಜೋಡಿಸಲಾಗಿದೆ. ಕೆಲವೊಮ್ಮೆ ಬದಿಗಳಲ್ಲಿ ಮತ್ತು ಹಿಂಭಾಗದಲ್ಲಿನ ಸಕ್ರಿಯ ಬಾಗಿಲುಗಳನ್ನು ಹುಸಿ ಬಾಗಿಲುಗಳಿಂದ ಬದಲಾಯಿಸಿದಂತೆ ಭಾಸವಾಗುತ್ತದೆ.

ಅಂತಸ್ತಿನ ದೇವಾಲಯದ ಪರಿಕಲ್ಪನೆಯೂ ಈ ಹಂತದಲ್ಲಿ ಕಂಡುಬರುತ್ತದೆ. ದೇಗುಲದ ಗೋಪುರವು ಎರಡನೇ ಮಹಡಿಗೆ ಏರುತ್ತದೆ ಮತ್ತು ಪ್ರತ್ಯೇಕ ಮೇಲ್ಛಾವಣಿಯು ದ್ವಿತಾಳ (ಎರಡು ಅಂತಸ್ತಿನ) ದೇವಾಲಯವನ್ನು ರೂಪಿಸುತ್ತದೆ. ಪೆರುವನಂನಲ್ಲಿರುವ ಶಿವನ ದೇವಾಲಯದಲ್ಲಿ ಎರಡು ಅಂತಸ್ತಿನ ಚೌಕಾಕಾರದ ರಚನೆ ಮತ್ತು ಮೂರನೇ ಅಂತಸ್ತಿನ ಅಷ್ಟಭುಜಾಕೃತಿಯು ತ್ರಿತಾಳ (ಮೂರು ಅಂತಸ್ತಿನ ದೇವಾಲಯ) ಕ್ಕೆ ಒಂದು ವಿಶಿಷ್ಟ ಉದಾಹರಣೆ.

ದೇವಾಲಯದ ವಿನ್ಯಾಸ ಮತ್ತು ವಿವರಗಳ ವಿಸ್ತರಣೆಯಲ್ಲಿ ಹೆಚ್ಚಿನ ಸಂಕೀರ್ಣತೆಯೊಂದಿಗೆ ಶೈಲಿಯ ಬೆಳವಣಿಗೆಯು ಅಂತಿಮದಲ್ಲಿ, (ಕ್ರಿ.ಶ. 1300-1800) ಅದರ ಉತ್ತುಂಗವನ್ನು ತಲುಪಿತು. ವಿಲಕ್ಕುಮಡಂ, ಎಣ್ಣೆ ದೀಪಗಳ ಸಾಲುಗಳಿಂದ ಜೋಡಿಸಲಾದ ಕಮಾನಿನ ರಚನೆಯು ನಾಲಂಬಲಂನ ಆಚೆಗೆ ಹೊರ ಉಂಗುರವಾಗಿ ಸೇರಿಸಲ್ಪಟ್ಟಿದೆ. ಬಲಿಪೀಠದ ಕಲ್ಲು ಕೂಡ ಕಂಬದ ರಚನೆಯಲ್ಲಿದೆ, ಬಲಿಕಲ್ಲು ಮಂಟಪವು ಅಗ್ರಸಾಲೆಯ (ವಲಿಯಂಬಲಂ) ಮುಂಭಾಗದಲ್ಲಿದೆ. ಬಲಿಕಲ್ಲು ಮಂಟಪದ ಮುಂದೆ ದೀಪಸ್ತಂಭ ಮತ್ತು ದ್ವಜಸ್ತಂಭವನ್ನು (ದೀಪ ಕಂಬ ಮತ್ತು ಧ್ವಜಸ್ತಂಭ) ಸೇರಿಸಲಾಗುತ್ತದೆ.

ಪ್ರಾಕಾರದ ಒಳಗೆ ಆದರೆ ದೀಪಸ್ತಂಭದ ಆಚೆಗೆ, ಅವರ ನಿಯೋಜಿತ ಸ್ಥಾನಗಳಲ್ಲಿ ಪರಿವಾರ ದೇವತೆಗಳ (ಉಪ-ದೇವರುಗಳು) ಸಣ್ಣ ದೇವಾಲಯಗಳು ನಿಂತಿವೆ. ಇವುಗಳು ಏಕೀಕೃತ ಕಟ್ಟಡಗಳಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಪ್ರತಿಯೊಂದೂ ಪೂರ್ಣ ಪ್ರಮಾಣದ ದೇಗುಲವಾಗಿ ಮಾರ್ಪಟ್ಟವು. ಕೋಝಿಕ್ಕೋಡ್‌ನ ತಾಲಿಯಲ್ಲಿರುವ ಶಿವನ ದೇವಾಲಯದಲ್ಲಿನ ಕೃಷ್ಣ ದೇವಾಲಯ ಇದಕ್ಕೆ ಒಂದು ಉದಾಹರಣೆ. ಕೊನೆಯ ಹಂತವು ಸಂಯೋಜಿತ ದೇವಾಲಯಗಳ ಪರಿಕಲ್ಪನೆಯಲ್ಲಿ ಉತ್ತುಂಗಕ್ಕೇರಿತು. ಇಲ್ಲಿ ಸಮಾನ ಪ್ರಾಮುಖ್ಯತೆಯ ಎರಡು ಅಥವಾ ಮೂರು ದೇವಾಲಯಗಳು ಸಾಮಾನ್ಯ ನಾಲಂಬಲಂನೊಳಗೆ ಮುಚ್ಚಿಹೋಗಿವೆ. ಇದಕ್ಕೆ ವಿಶಿಷ್ಟ ಉದಾಹರಣೆಯೆಂದರೆ ತ್ರಿಶ್ಶೂರ್‌ನಲ್ಲಿರುವ ವಡಕ್ಕುಂನಾಥ ದೇವಾಲಯ, ಇಲ್ಲಿ ಶಿವ, ರಾಮ ಮತ್ತು ಶಂಕರನಾರಾಯಣನಿಗೆ ಸಮರ್ಪಿತವಾದ ಮೂರು ದೇವಾಲಯಗಳಲ್ಲಿ ನಾಲಂಬಲಂನಲ್ಲಿದೆ. ಪ್ರಾಕಾರವು ದೇವಾಲಯದ ತೊಟ್ಟಿಗಳು, ವೇದಪಾಠಶಾಲೆಗಳು ಮತ್ತು ಊಟದ ಸಭಾಂಗಣ ಗಳನ್ನು ಸಹ ಒಳಗೊಂಡಿರಬಹುದು. ವಿರೋಧಾಭಾಸವೆಂದರೆ ಕೆಲವು ದೇವಾಲಯಗಳು ಒಂದೇ ಒಂದು ದ್ವಿತೀಯ ದೇವಾಲಯವನ್ನು ಹೊಂದಿಲ್ಲ, ವಿಶಿಷ್ಟ ಉದಾಹರಣೆಯೆಂದರೆ ಇರಿಂಜಲಕುಡದಲ್ಲಿರುವ ಭರತ ದೇವಾಲಯ.

ದೊಡ್ಡ ದೇವಾಲಯಗಳ ಸಂಕೀರ್ಣಗಳ ಗಮನಾರ್ಹ ವೈಶಿಷ್ಟ್ಯವೆಂದರೆ ಕೂತಂಬಲಂ ಎಂದು ಕರೆಯಲ್ಪಡುವ ಸಭಾಂಗಣವು ನೃತ್ಯ, ಸಂಗೀತ ಪ್ರದರ್ಶನ ಮತ್ತು ಧಾರ್ಮಿಕ ವಾಚನಗೋಷ್ಠಿಗಳಿಗೆ ಮೀಸಲಾಗಿದೆ. ಇದು ಕೇರಳದ ವಾಸ್ತುಶೈಲಿಯ ವಿಶಿಷ್ಟವಾದ ಕಟ್ಟಡವಾಗಿದೆ, ಈ ಕಾಲದ ಉತ್ತರ ಭಾರತದ ದೇವಾಲಯಗಳಲ್ಲಿ ಕಂಡುಬರುವ ನಾಟ್ಯಸಭಾ ಅಥವಾ ನಾಟ್ಯಮಂದಿರದಿಂದ ಭಿನ್ನವಾಗಿದೆ. ಕೂತಂಬಲಂ ಎತ್ತರದ ಛಾವಣಿಯನ್ನು ಹೊಂದಿರುವ ದೊಡ್ಡ ಕಂಬದ ಸಭಾಂಗಣವಾಗಿದೆ. ಸಭಾಂಗಣದ ಒಳಗೆ ರಂಗಮಂಟಪ ಎಂದು ಕರೆಯಲ್ಪಡುವ ವೇದಿಕೆ ರಚನೆಯಾಗಿದೆ. ವೇದಿಕೆ ಹಾಗೂ ಕಂಬಗಳನ್ನು ಅಲಂಕೃತವಾಗಿ ಅಲಂಕರಿಸಲಾಗಿದೆ. ದೃಶ್ಯ ಮತ್ತು ಶಬ್ದ -ಶ್ರವಣ ಗಳನ್ನು ಪರಿಗಣಿಸಿ ಕಂಬಗಳ ವಿನ್ಯಾಸಗೊಳಿಸಿ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಪ್ರೇಕ್ಷಕರು ಪ್ರದರ್ಶನಗಳನ್ನು ಅಸ್ಪಷ್ಟತೆ ಮತ್ತು ವಿರೂಪವಿಲ್ಲದೆ ಆನಂದಿಸಬಹುದು. ಕೂತಂಬಲಂ ವಿನ್ಯಾಸವು ಭರತ ಮುನಿಯ ನಾಟ್ಯಶಾಸ್ತ್ರದಲ್ಲಿ ನೀಡಲಾದ ನಿಯಮಗಳ ಮೇಲೆ ಆಧಾರಿತವಾಗಿದೆ ಎಂದು ತೋರುತ್ತದೆ.

ದಕ್ಷಿಣದ ಕೇರಳದಲ್ಲಿ, ದೇವಾಲಯದ ವಾಸ್ತುಶಿಲ್ಪವು ತಮಿಳುನಾಡಿನ ಬೆಳವಣಿಗೆಗಳಿಂದ ಪ್ರಭಾವಿತವಾಗಿದೆ. ಸುಚೀಂದ್ರಂ ಮತ್ತು ತಿರುವನಂತಪುರಂನಲ್ಲಿ ಈ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತದೆ. ಇಲ್ಲಿ ಎತ್ತರದ ಆವರಣಗಳು, ಕೆತ್ತನೆಯ ಆವಾರಗಳು ಮತ್ತು ಬೆಣಚು (ಗ್ರಾನೈಟ್ ) ಕಲ್ಲಿನ ಅಲಂಕೃತ ಮಂಟಪಗಳು ವಿಶಿಷ್ಟವಾದ ಕೇರಳ ಶೈಲಿಯಲ್ಲಿ ಮೂಲ ಮುಖ್ಯ ದೇವಾಲಯದ ನೋಟವನ್ನು ನಿಜವಾಗಿಯೂ ಮರೆಮಾಡುತ್ತವೆ. ಪ್ರವೇಶ ಗೋಪುರ, ಗೋಪುರವು ಇತರೆಡೆ ಕಂಡುಬರುವ ಸುಂದರ ಎರಡು ಅಂತಸ್ತಿನ ರಚನೆಯಿಂದ ಭಿನ್ನವಾದ ಶೈಲಿಯಲ್ಲಿ ಎತ್ತರಕ್ಕೆ ಏರಿದಂತೆ ಕಂಡುಬರುತ್ತದೆ.

ತಾಂತ್ರಿಕವಾಗಿ ಕೇರಳದ ದೇವಾಲಯದ ವಾಸ್ತುಶಿಲ್ಪದ ಪ್ರಮುಖ ಲಕ್ಷಣವೆಂದರೆ ಕರಾರುವಕ್ಕಾದ ಆಯಾಮದ ಅಳತೆಗಳನ್ನು ಬಳಸಿಕೊಂಡ ನಿರ್ಮಾಣ ತಂತ್ರ. ದೇವಾಲಯದ ಯೋಜನೆಯ ಕೇಂದ್ರಸ್ತಾನವು ಗರ್ಭಗೃಹ (ಕೋಣೆ) ಕ್ಕೆ ಹೊಂದಿಕೊಂಡಿದೆ. ಈ ಕೋಣೆಯ ಅಗಲವು ಆಯಾಮದ ವ್ಯವಸ್ಥೆಯ ಮೂಲ ಮಾದರಿಯಗಿದೆ. ಯೋಜನೆಯ ಸಂಯೋಜನೆಯಲ್ಲಿ, ದೇಗುಲದ ಅಗಲ, ಅದರ ಸುತ್ತಲಿನ ತೆರೆದ ಸ್ಥಳ, ಸುತ್ತಮುತ್ತಲಿನ ರಚನೆಗಳ ಸ್ಥಾನ ಮತ್ತು ಗಾತ್ರಗಳು, ಎಲ್ಲಾ ಮೂಲ ಮಾದರಿಯೊಂದಿಗೆ ಸಂಬಂಧಿಸಿವೆ. ಲಂಬ ಸಂಯೋಜನೆಯಲ್ಲಿ, ಈ ಆಯಾಮದ ಸಮನ್ವಯವನ್ನು ಸ್ತಂಭಗಳ ಗಾತ್ರ, ಗೋಡೆಯ ಫಲಕಗಳು, ಆಧಾರಗಳು ಇತ್ಯಾದಿಗಳಂತಹ ಪ್ರತಿಯೊಂದು ನಿರ್ಮಾಣ ವಿವರಗಳವರೆಗೆ ನಡೆಸಲಾಗುತ್ತದೆ. ಅನುಪಾತದ ವ್ಯವಸ್ಥೆಯ ಅಂಗೀಕೃತ ನಿಯಮಗಳನ್ನು ಗ್ರಂಥಗಳಲ್ಲಿ ನೀಡಲಾಗಿದೆ ಮತ್ತು ನುರಿತ ಕುಶಲಕರ್ಮಿಗಳಿಂದ ಸಂರಕ್ಷಿಸಲಾಗಿದೆ. ಈ ಅನುಪಾತದ ವ್ಯವಸ್ಥೆಯು ಭೌಗೋಳಿಕ ವ್ಯತ್ಯಾಸ ಮತ್ತು ಕಟ್ಟಡ ನಿರ್ಮಾಣದ ಪ್ರಮಾಣವನ್ನು ಲೆಕ್ಕಿಸದೆ ವಾಸ್ತುಶಿಲ್ಪ ಶೈಲಿಯಲ್ಲಿ ಏಕರೂಪತೆಯನ್ನು ಖಾತ್ರಿಪಡಿಸಿದೆ.

ದೇವಾಲಯದ ವಾಸ್ತುಶಿಲ್ಪವು ಎಂಜಿನಿಯರಿಂಗ್ ಮತ್ತು ಅಲಂಕಾರಿಕ ಕಲೆಗಳ ಸಂಶ್ಲೇಷಣೆಯಾಗಿದೆ. ಕೇರಳದ ದೇವಾಲಯಗಳ ಅಲಂಕಾರಿಕ ಅಂಶಗಳು ಮೂರು ವಿಧಗಳಾಗಿವೆ - ಅಚ್ಚುಗಳು, ಶಿಲ್ಪಗಳು ಮತ್ತು ಚಿತ್ರಕಲೆ. ಅಚ್ಚೊತ್ತುವಿಕೆಯು ವಿಶಿಷ್ಟವಾಗಿ ಸ್ತಂಭದಲ್ಲಿ ಕಂಡುಬರುತ್ತದೆ, ಅಲ್ಲಿ ವೃತ್ತಾಕಾರದ ಮತ್ತು ಆಯತಾಕಾರದ ಪ್ರಕ್ಷೇಪಗಳ ಸಮತಲಗಳಲ್ಲಿ ಮತ್ತು ವಿಭಿನ್ನ ಆಳ ಪ್ರಮಾಣಗಳು ಆದಿಸ್ಥಾನದ ರೂಪವನ್ನು ತಿಳಿಯಲು ಸಹಾಯ ಮಾಡುತ್ತದೆ. ಸಾಂದರ್ಭಿಕವಾಗಿ ಈ ಸ್ತಂಭವನ್ನು ಇದೇ ರೀತಿಯಲ್ಲಿ ಮಾರ್ಪಾಡುಗೊಳಿಸಿ ದ್ವಿತೀಯ ವೇದಿಕೆಯ ಮೇಲೆ - ಉಪಪೀಡಂ ಮೇಲೆ ಎತ್ತರಿಸಲಾಗುತ್ತದೆ. ಇಂತಹ ಅಚ್ಚುಗಳನ್ನು ಮಂಟಪದಲ್ಲಿ, ಮೆಟ್ಟಿಲುಗಳ ಕೈಹಳಿಗಳಲ್ಲಿ (ಸೋಪಾನಂ) ಮತ್ತು ದೇಗುಲದ ಕೋಣೆಯಲ್ಲಿಯೂ ಕಾಣಬಹುದು.

ಶಿಲ್ಪದ ಕೆತ್ತೆನೆಯ ಕೆಲಸವು ಎರಡು ವಿಧವಾಗಿದೆ. ಒಂದು ವರ್ಗವೆಂದರೆ ದೇಗುಲದ ಹೊರ ಗೋಡೆಗಳ ಮೇಲೆ ಸುಣ್ಣದ ಗಾರೆಯಲ್ಲಿ ಕಲ್ಲುಗಳನ್ನು ಹೊಂದಿಸಿ ಮತ್ತು ಸಾರಣೆ ಮತ್ತು ಬಣ್ಣ ದಿಂದ ಮಾಡಿದ ಶಿಲ್ಪವಾಗಿದೆ. ಎರಡನೆಯದು ಮರದಿಂದ ಮಾಡಿದ ಶಿಲ್ಪಕಲೆಯಾಗಿದೆ - ಆಧಾರದ ತುದಿಗಳು, ಆವರಣಗಳು, ಮರದ ಕಂಬಗಳು ಮತ್ತು ಅವುಗಳ ಪ್ರಮುಖ ಭಾಗಗಳು, ಬಾಗಿಲು ಚೌಕಟ್ಟುಗಳು, ಗೋಡೆಯ ಫಲಕಗಳು ಮತ್ತು ಆಧಾರದ ಸ್ತಂಭಗಳು. ಮಂಟಪಗಳ ಚಾವಣಿಯ ಫಲಕಗಳಲ್ಲಿ ಅಲಂಕಾರಿಕ ಶಿಲ್ಪದ ಕೆಲಸವು ಉತ್ತಮವಾಗಿ ಕಂಡುಬರುತ್ತದೆ. ಮರದ ತಿರುವು ಕಂಬಗಳಿಗೆ ಇಟ್ಟಿಗೆ ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ಸೊಗಸಾದ ಮೆರುಗೆಣ್ಣೆ ಕೆಲಸವನ್ನು ಅಳವಡಿಸಲಾಗಿದೆ. ಲೋಹಗಳ ಕರಕುಶಲತೆಯನ್ನು ವಿಗ್ರಹಗಳ, ವಿನ್ಯಾಸಗಳು, ರಚನೆಗಳು ಮತ್ತು ಮುಖವಾಡ ರಚನೆಯ ಶಿಲ್ಪಕಲೆಗಳಲ್ಲಿ ಬಳಸಲಾಗುತ್ತಿತ್ತು. ಎಲ್ಲಾ ಶಿಲ್ಪಕಲೆಗಳನ್ನು ಪಠ್ಯಗಳಲ್ಲಿ ಸೂಚಿಸಲಾದ.ಕಟ್ಟುನಿಟ್ಟಾಗಿ ಅನುಪಾತದ ನಿಯಮಗಳ ಪ್ರಕಾರ (ಅಷ್ಟತಾಳ, ನವತಾಳ ಮತ್ತು ದಶತಾಲ ವ್ಯವಸ್ಥೆ) ಪುರುಷರು, ದೇವರು ಮತ್ತು ದೇವತೆಗಳ ವಿವಿಧ ವ್ಯಕ್ತಿಗಳಿಗೆ ಅನ್ವಯಿಸುತ್ತದೆ,

ಸಾರಣೆ ಇನ್ನೂ ಒದ್ದೆಯಾಗಿದ್ದಾಗ ಗೋಡೆಗಳ ಮೇಲೆ ಸಾವಯವ ವರ್ಣದ್ರವ್ಯಗಳಲ್ಲಿ ಅಥವಾ ಮೃದುವಾದ ಬಣ್ಣಗಳಲ್ಲಿ ಚಿತ್ರಕಲೆ ಕಾರ್ಯಗತಗೊಳಿಸುವ ಕಲೆಯು ಕೇರಳದ ಭಿತ್ತಿಚಿತ್ರಗಳು ಎಂದು ಗೊತ್ತುಪಡಿಸಿದ ವರ್ಗವಾಗಿ ಬೆಳೆಯಿತು. ಈ ವರ್ಣಚಿತ್ರಗಳ ವಿಷಯವು ಏಕರೂಪವಾಗಿ ಪೌರಾಣಿಕವಾಗಿದೆ ಮತ್ತು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿದಾಗ ಮಹಾಕಾವ್ಯದ ಕಥೆಗಳು ತೆರೆದುಕೊಳ್ಳುತ್ತವೆ. ವಿವಿಧ ಅಂತಸ್ತಿನ ಎತ್ತರಗಳನ್ನು ಮನವರಿಕೆ ಮಾಡಲು ಅಚ್ಚು, ಶಿಲ್ಪಕಲೆ ಮತ್ತು ಚಿತ್ರಕಲೆಗಳನ್ನು ಲಂಬ ಸಂಯೋಜನೆಗಳಲ್ಲಿ ರೂಪಿಸಲಾಗುತ್ತದೆ. ಇಳಿಜಾರಾದ ಛಾವಣಿ ಮತ್ತು ಮಾಡಿನ ಅಂಚನ್ನು ಪ್ರಕ್ಷೇಪಿಸುವ ಬಾಗಿದ ಮಾದರಿಯ ಕಿಟಕಿಗಳನ್ನು ಜೋಡಿಸಲಾಗಿದೆ . ಆದರೆ ಎಲ್ಲಾ ಸಂದರ್ಭಗಳಲ್ಲಿ ಅಲಂಕಾರಕ್ಕಿಂತ ರಚನೆಗೆ ಮಹತ್ವ ನೀಡಲಾಗಿದೆ. ಕೆತ್ತನೆಯ ಗೋಡೆಗಳು ಪ್ರಕ್ಷೇಪಿತ ಬಾಗಿದ ಮಾಡುಗಳಿಂದ ರಕ್ಷಿಸಲ್ಪಟ್ಟಿವೆ. ಇದು ಪ್ರಕಾಶಮಾನವಾದ ಸೂರ್ಯನ ಬೆಳಕಿನಿಂದ ಗೋಡೆಯ ಹೊರಭಾಗದ ಕೆತ್ತನೆಗಳನ್ನು ರಕ್ಷಿಸಿ ನೆರಳಿನಲ್ಲಿ ಇರಿಸುತ್ತದೆ. ಇದು ತೀಕ್ಷ್ಣವಾದ ಆಸಕ್ತಿಯುಳ್ಳ ವೀಕ್ಷಕನಿಗೆ ಮಾತ್ರ ಬೆಳಕು ಮತ್ತು ನೆರಳು ಬಹಿರಂಗಪಡಿಸುವ ವಿವರಗಳ ಒಟ್ಟಾರೆ ಗ್ರಹಿಕೆಯ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ.

ಇಸ್ಲಾಮಿಕ್ ವಾಸ್ತುಶಿಲ್ಪ

ಬದಲಾಯಿಸಿ
 
ಕೋಝಿಕ್ಕೋಡ್‌ನಲ್ಲಿರುವ ಮಿತ್‌ಕಲ್‌ಪಲ್ಲಿ ಕೇರಳದ ಸ್ಥಳೀಯ ಮಸೀದಿ ಶೈಲಿಯ ಅತ್ಯುತ್ತಮ ಉದಾಹರಣೆಯಾಗಿದ್ದು, ಗೇಬಲ್ಡ್ ಛಾವಣಿಗಳು, ಇಳಿಜಾರಾದ ಮರದ ಕಿಟಕಿ ಫಲಕಗಳು ಮತ್ತು ಮಿನಾರ್‌ಗಳಿಲ್ಲ.

ಮಹಮ್ಮದೀಯರ ಕಾಲದವರೆಗೆ ಅಥವಾ ಅದಕ್ಕಿಂತ ಮುಂಚೆಯೇ ಕೇರಳ ಕರಾವಳಿಯೊಂದಿಗೆ ನೇರ ವ್ಯಾಪಾರ ಸಂಪರ್ಕವನ್ನು ಹೊಂದಿದ್ದ ಅರೇಬಿಯನ್ ಪರ್ಯಾಯ ದ್ವೀಪ, ಇಸ್ಲಾಂ ಧರ್ಮದ ತೊಟ್ಟಿಲು. ಸ್ಥಳೀಯ ಮುಸ್ಲಿಂ ದಂತಕಥೆಗಳು ಮತ್ತು ಸಂಪ್ರದಾಯದಂತೆ, ಚೇರ ರಾಜನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದನು ಮತ್ತು ಮೆಕ್ಕಾಗೆ ಪ್ರಯಾಣ ಬೆಳೆಸಿದನು. ಮಲಿಕ್ ಇಬ್ನ್ ದಿನಾರ್ ಸೇರಿದಂತೆ ಅನೇಕ ಇಸ್ಲಾಮಿಕ್ ಧಾರ್ಮಿಕ ಮುಖಂಡರೊಂದಿಗೆ ಪ್ರವಾಸದಿಂದ ಹಿಂದಿರುಗುವಾಗ ಅವರು ಅನಾರೋಗ್ಯಕ್ಕೆ ಒಳಗಾದರು ಮತ್ತು ನಿಧನರಾದರು. ಆದರೆ ಸಂಗಡಿಗರಿಗೆ ಕೊಡುಂಗಲ್ಲೂರಿಗೆ ತೆರಳಲು ಪರಿಚಯ ಪತ್ರಗಳನ್ನು ನೀಡಿದ್ದರು. ಸಂದರ್ಶಕರು ಬಂದರಿಗೆ ಬಂದರು ಮತ್ತು ರಾಜನಿಗೆ ಪತ್ರವನ್ನು ಹಸ್ತಾಂತರಿಸಿದರು. ರಾಜನು ಅತಿಥಿಗಳನ್ನು ಎಲ್ಲಾ ಗೌರವದಿಂದ ಉಪಚರಿಸಿದನು ಮತ್ತು ಭೂಮಿಯಲ್ಲಿ ತಮ್ಮ ಮತವನ್ನು ಸ್ಥಾಪಿಸಲು ವಿಸ್ತೃತ ಸೌಲಭ್ಯಗಳನ್ನು ನೀಡಿದನು. ಕುಶಲಕರ್ಮಿಗಳು ಬಂದರಿನ ಬಳಿಯ ಕೊಡುಂಗಲ್ಲೂರಿನಲ್ಲಿ ಮೊದಲ ಮಸೀದಿಯನ್ನು ನಿರ್ಮಿಸಲು ರಾಜನು ವ್ಯವಸ್ಥೆ ಮಾಡಿದನು ಮತ್ತು ಅವರ ವಸಾಹತುಗಾಗಿ ಅದರ ಸುತ್ತಲಿನ ಪ್ರದೇಶವನ್ನು ಗುರುತಿಸಿದನು. ಮೂಲ ಮಸೀದಿಯು ವ್ಯಾಪಕವಾದ ದುರಸ್ತಿಗೆ ಒಳಗಾಯಿತು, ಆದರೆ ಮೂಲ ನಿರ್ಮಾಣದ ಕುರುಹುಗಳು ಹಿಂದೂ ದೇವಾಲಯಗಳ ಹಳೆಯ ಸಾಂಪ್ರದಾಯಿಕ ಶೈಲಿಯಲ್ಲಿರುವ ಸ್ತಂಭಗಳು ಮತ್ತು ಮೇಲ್ಛಾವಣಿಯಲ್ಲಿ ಕಂಡುಬರುತ್ತವೆ.

 
ಕೊಟ್ಟಾಯಂನ ತಜತಂಗಡಿಯಲ್ಲಿರುವ ಸಾಂಪ್ರದಾಯಿಕ ಕೇರಳ ಶೈಲಿಯ ಮಸೀದಿಯ ಉದಾಹರಣೆ

ನಿಸ್ಸಂದೇಹವಾಗಿ ಇಸ್ಲಾಂ ಧರ್ಮವು ಅರೇಬಿಯನ್ ಮುಹಮ್ಮದ್ ಅವರ ಕಾಲದವರೆಗೆ ಅಥವಾ ಅದಕ್ಕಿಂತ ಮುಂಚೆಯೇ ಕೇರಳ ಕರಾವಳಿಯೊಂದಿಗೆ ನೇರ ವ್ಯಾಪಾರ ಸಂಪರ್ಕವನ್ನು ಹೊಂದಿದ್ದ ಅರೇಬಿಯನ್ ಪರ್ಯಾಯ ದ್ವೀಪ, ಇಸ್ಲಾಂ ಧರ್ಮದ ತೊಟ್ಟಿಲು.ಪರ್ಯಾಯ ದ್ವೀಪದ ಹೊಸ ಗುಂಪುಗಳ ವಲಸೆಯ ಮೂಲಕ ಕೇರಳದಲ್ಲಿ ಹರಡಿತು ಮತ್ತು ಸ್ಥಳೀಯ ಜನಸಂಖ್ಯೆಯನ್ನು ಮತಾಂತರಿಸುವ ಮೂಲಕ ಭಾರತೀಯ ಸಾಂಸ್ಕೃತಿಕ ನೀತಿಗಳು ಮತ್ತು ಕೇರಳದ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಮೇಣ ಪರಿವರ್ತನೆಯಾಯಿತು. ಕ್ರಿ.ಶ. ಹನ್ನೆರಡನೆಯ ಶತಮಾನದ ವೇಳೆಗೆ, ದಕ್ಷಿಣದಲ್ಲಿ ಕೊಲ್ಲಂನಿಂದ ಉತ್ತರದ ಮಂಗಳೂರಿನವರೆಗೆ ಮುಸ್ಲಿಮರ ಕನಿಷ್ಠ ಹತ್ತು ಪ್ರಮುಖ ವಸಾಹತುಗಳು ಮಸೀದಿಯ ಮೇಲೆ ಕೇಂದ್ರೀಕೃತವಾಗಿದ್ದವು. ಕಣ್ಣೂರಿನ ಅರಕ್ಕಲ್‌ನಲ್ಲಿ ಆಳುವ ಸಾಮ್ರಾಜ್ಯದ ಒಂದು ಶಾಖೆಯನ್ನು ಇಸ್ಲಾಂಗೆ ಪರಿವರ್ತಿಸಲಾಯಿತು. ವ್ಯಾಪಾರದಲ್ಲಿನ ಪ್ರಾಧಾನ್ಯತೆ, ಮತದ ಹರಡುವಿಕೆ ಮತ್ತು ಸಮುದ್ರದ ಅನುಭವವು ಮುಸ್ಲಿಮರನ್ನು ಪ್ರಮುಖ ವರ್ಗವಾಗಿ ಮತ್ತು ಆಡಳಿತಗಾರರಿಗೆ, ವಿಶೇಷವಾಗಿ ಕೋಝಿಕ್ಕೋಡ್ ಝಮೋರಿನ್‌ಗಳಿಗೆ ಪ್ರಿಯರನ್ನಾಗಿ ಮಾಡಿತು. ಪರಿಣಾಮವಾಗಿ, ಹದಿನೈದನೆಯ ಶತಮಾನದ ವೇಳೆಗೆ ಮುಸ್ಲಿಮರ ನಿರ್ಮಾಣಗಳು ಗಣನೀಯ ಸಂಖ್ಯೆಯಲ್ಲಿ ಏರಿದವು.

 
ಕ್ಲಾಸಿಕ್ ಕೇರಳ ಶೈಲಿಯೊಂದಿಗೆ ಮುಚ್ಚುಂಡಿ ಮಸೀದಿ

ಕೇರಳದ ಮಸೀದಿ ವಾಸ್ತುಶಿಲ್ಪವು ಅರೇಬಿಕ್ ಶೈಲಿಯ ಯಾವುದೇ ಲಕ್ಷಣಗಳನ್ನು ಅಥವಾ ಉತ್ತರ ಭಾರತದ ಸಾಮ್ರಾಜ್ಯಶಾಹಿ ಅಥವಾ ಪ್ರಾಂತೀಯ ಶಾಲೆಯ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವನ್ನು ಪ್ರದರ್ಶಿಸುವುದಿಲ್ಲ. ಇದಕ್ಕೆ ಕಾರಣ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಲು ಬಯಸುವ ಮುಸ್ಲಿಂ ಧಾರ್ಮಿಕ ಮುಖ್ಯಸ್ಥರ ಸೂಚನೆಯ ಮೇರೆಗೆ ಸ್ಥಳೀಯ ಹಿಂದೂ ಕುಶಲಕರ್ಮಿಗಳು ಮಸೀದಿ ನಿರ್ಮಾಣದ ಕೆಲಸವನ್ನು ಮಾಡಿದರು. ಪೂಜಾ ಸ್ಥಳಗಳ ಮಾದರಿಗಳು ಕೇವಲ ಹಿಂದೂ ದೇವಾಲಯಗಳು ಅಥವಾ ಸಭಾಂಗಣಗಳು ("ಕೂತಂಬಲಂ") ಮತ್ತು ಈ ಮಾದರಿಗಳನ್ನು ಹೊಸ ಸನ್ನಿವೇಶಗಳಿಗೆ ಅಳವಡಿಸಿಕೊಳ್ಳಬೇಕು. ಕೇರಳದಲ್ಲಿನ ಆರಂಭಿಕ ಮಸೀದಿಗಳು ಈ ಪ್ರದೇಶದ ಸಾಂಪ್ರದಾಯಿಕ ಕಟ್ಟಡವನ್ನು ಹೋಲುತ್ತವೆ. ಹೈದರ್ ಅಲಿ ಮತ್ತು ನಂತರ ಹದಿನೆಂಟನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಆಕ್ರಮಣದ ಅವಧಿಯಲ್ಲಿ ಅರೇಬಿಕ್ ಶೈಲಿಯ ವಾಸ್ತುಶಿಲ್ಪವನ್ನು ಇಂದಿನ ಕೇರಳದ ಮಲಬಾರ್ ಪ್ರದೇಶಕ್ಕೆ ಪರಿಚಯಿಸಲಾಯಿತು. ಈ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ದೇವಾಲಯಗಳನ್ನು ಮಸೀದಿಗಳಾಗಿ ಪರಿವರ್ತಿಸಲಾಯಿತು. ಈ ರಚನೆಗಳ ಸಾಂಪ್ರದಾಯಿಕ ಕೇರಳ ಶೈಲಿ ಇದಕ್ಕೆ ಸಾಕ್ಷಿಯಾಗಿದೆ.

 
ಮಿಸ್ಕಾಲ್ ಮಸೀದಿಯು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ಮಿನಾರ್‌ಗಳಿಗೆ ಪರ್ಯಾಯವಾಗಿ ಕಿಟಕಿಗಳನ್ನು ಹೊಂದಿರುವ ಮೂರು ಅಂತಸ್ತಿನ ಮುಚ್ಚಿದ ಛಾವಣಿಗಳನ್ನು ಹೊಂದಿದೆ.

ಮಸೀದಿಯ ರಚನೆಯು ಪಶ್ಚಿಮ ಗೋಡೆಯ ಮೇಲೆ ಮಿಹ್ರಾಬ್‌ನೊಂದಿಗೆ ದೊಡ್ಡ ಪ್ರಾರ್ಥನಾ ಮಂದಿರವನ್ನು ಒಳಗೊಂಡಿದೆ ( ಮೆಕ್ಕಾ ಕೇರಳದಿಂದ ಪಶ್ಚಿಮದ ಕಡೆಗಿರುವುದರಿಂದ) ಮತ್ತು ಸುತ್ತಲೂ ಜಗಲಿಯನ್ನು ಒಳಗೊಂಡಿದೆ. ಸಾಮಾನ್ಯವಾಗಿ ಇದು ಬ್ರಾಹ್ಮಣ ದೇವಾಲಯದ ಅಧಿಷ್ಠಾನಕ್ಕೆ ಹೋಲುವ ಎತ್ತರದ ನೆಲಮಾಳಿಗೆಯನ್ನು ಹೊಂದಿದೆ ಮತ್ತು ಸಾಮಾನ್ಯವಾಗಿ ಸ್ತಂಭಗಳನ್ನು ಮಂಟಪ ಕಂಬಗಳಲ್ಲಿ ಚೌಕಾಕರದ ಮತ್ತು ಅಷ್ಟಭುಜಾಕೃತಿಯ ರಚನೆಗಳಿಂದ ಜೋಡಿಸಲ್ಪತ್ತಿದೆ. ಗೋಡೆಗಳನ್ನು ಕೆಂಪು ಕಲ್ಲಿನ ಇಟ್ಟಿಗೆ (ಲ್ಯಾಟರೈಟ್ ಬ್ಲಾಕ್‌) ಗಳಿಂದ ಮಾಡಲಾಗಿದೆ. ಒಂದು ಅಪರೂಪದ ಪ್ರಕರಣದಲ್ಲಿ ಕಮಾನು ರೂಪವು ಪೊನ್ನಾನಿಯಲ್ಲಿರುವ ಮಸೀದಿಯಲ್ಲಿ ಮಾತ್ರ ಕಂಡುಬರುತ್ತದೆ ಮತ್ತು ಭೂಮಿಯ ಮೊದಲ ಹತ್ತು ಮಸೀದಿಗಳಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ. ಮೇಲ್ಛಾವಣಿ ಮತ್ತು ಮೇಲ್ಛಾವಣಿಯ ನಿರ್ಮಾಣಕ್ಕಾಗಿ ಮೇಲ್ವಿನ್ಯಾಸದಲ್ಲಿ ಮರವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಅನೇಕ ಸಂದರ್ಭಗಳಲ್ಲಿ ಮೇಲ್ಛಾವಣಿಯನ್ನು ತಾಮ್ರದ ಹಾಳೆಗಳಿಂದ ಮುಚ್ಚಲಾಗುತಿತ್ತು, ಇದು ಸ್ತೂಪದೊಂದಿಗೆ ದೇವಾಲಯದ ಶಿಖರದ ರೂಪವನ್ನು ಪೂರ್ಣಗೊಳಿಸುತ್ತದೆ. ತಾನೂರಿನಲ್ಲಿ ಜಮಾ ಮಸೀದಿಯು ದೇವಾಲಯದ ಗೋಪುರದ ರೀತಿಯಲ್ಲಿ ತಾಮ್ರದ ಹಾಳೆಯಿಂದ ಮುಚ್ಚಲ್ಪಟ್ಟ ದ್ವಾರವನ್ನು ಸಹ ಹೊಂದಿದೆ. ಈ ಮಸೀದಿಯು ಮೂರು ಅಂತಸ್ತಿನ ಕಟ್ಟಡವಾಗಿದ್ದು, ಐದು ಅಂತಸ್ತಿನ ಮಾಡನ್ನು ಹೊಂದಿರುವ ಹೆಂಚಿನ ಛಾವಣಿಯನ್ನು ಹೊಂದಿದೆ.

 
ವಿಶ್ವದ ಎರಡನೇ ಮತ್ತು ಉಪಖಂಡದ ಮೊದಲ ಮಸೀದಿಯಾದ ಚೆರಮಾನ್ ಮಸೀದಿಯನ್ನು ಮೂಲತಃ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಅರೇಬಿಕ್ ಸ್ಪರ್ಶವನ್ನು ನೀಡಲು ಇತ್ತೀಚೆಗೆ ನವೀಕರಿಸಲಾಗಿದೆ.

ಮಸೀದಿಯಲ್ಲಿರುವ ಪ್ರವಚನಪೀಠವು ಕೇರಳದ ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಮರದ ಕೆತ್ತನೆಗಳ ಅತ್ಯುತ್ತಮ ಉದಾಹರಣೆಯಾಗಿದೆ. ಬೇಪೋರ್‌ನಲ್ಲಿರುವ ಜಾಮಾ ಮಸೀದಿ ಮತ್ತು ಕೋಝಿಕ್ಕೋಡ್‌ನ ಮಿತ್ಕಲ್ ಮಸೀದಿಯು ಅರಬ್ ಹಡಗುಗಳ ಯಜಮಾನರು ನಿರ್ಮಿಸಿದ ವೇದಿಕೆಯನ್ನು (ಮಿಂಬರ್) ಅನ್ನು ಹೊಂದಿದೆ.

 
ಕಣ್ಣೂರು ಮಸೀದಿಯು ಕೇರಳ ಶೈಲಿಯಿಂದ ಪರ್ಷಿಯನ್ ಶೈಲಿಗೆ ನಿಧಾನವಾದ ಪರಿವರ್ತನೆಯನ್ನು ಸಂಕೇತಿಸುತ್ತದೆ ಮತ್ತು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ಕಮಾನುಗಳು ಮತ್ತು ಇತರ ಶಾಸ್ತ್ರೀಯ ಪರ್ಷಿಯನ್ ವೈಶಿಷ್ಟ್ಯಗಳನ್ನು ಸೇರಿಸುತ್ತದೆ.

ಹಿಂದೂ ದೇವಾಲಯಗಳು ಮತ್ತು ನಿವಾಸಗಳನ್ನು ನಿರ್ಮಿಸುತ್ತಿದ್ದ ಅದೇ ಸ್ಥಳೀಯ ಕುಶಲಕರ್ಮಿಗಳು ಇತರ ಎಲ್ಲಾ ನಿರ್ಮಾಣ ಕಾರ್ಯಗಳನ್ನು ಮಾಡಿದರು. ಸರಳತೆಯಿಂದ ಕೂಡಿದ ಅರೇಬಿಕ್ ರಚನಾ ಸಂಪ್ರದಾಯವು ಪ್ರಾಯಶಃ ತನ್ನನ್ನು ಸ್ಥಳೀಯ ನಿರ್ಮಾಣ ತಂತ್ರಗಳೊಂದಿಗೆ ಸಂಯೋಜಿಸಿ ಮಸೀದಿ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯನ್ನು ಹುಟ್ಟುಹಾಕಿದೆ. ಇದು ಪ್ರಪಂಚದಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ. ಇದಕ್ಕೆ ವಿರುದ್ಧವಾಗಿ ಇಂಡೋ-ಇಸ್ಲಾಮಿಕ್ ವಾಸ್ತುಶೈಲಿಯು ಟರ್ಕಿಯ ಮತ್ತು ಪರ್ಷಿಯಾದ ಸಂಪ್ರದಾಯಗಳಿಂದ ತನ್ನ ಸ್ಫೂರ್ತಿಯನ್ನು ಪಡೆದುಕೊಂಡಿತು ಮತ್ತು ಉತ್ತರ ಭಾರತದಲ್ಲಿ ಹೆಚ್ಚು ಅಲಂಕಾರಿಕ ಶೈಲಿಯನ್ನು ಸೃಷ್ಟಿಸಿತು. ಕೇರಳದ ವಿಶಿಷ್ಟ ಮಸೀದಿಗಳು ಕೊಲ್ಲಂ ಬಳಿ ಕೊಲ್ಲಂಪಲ್ಲಿ, ಕೊಯಿಲಾಂಡಿ ಬಳಿಯ ಪಂಥಾಲಯನಿ, ಕೋಯಿಕ್ಕೋಡ್, ತಾನೂರ್, ಪೊನ್ನಾನಿ ಮತ್ತು ಕಾಸರಗೋಡು ಮತ್ತು ಹೆಚ್ಚಿನ ಹಳೆಯ ಮುಸ್ಲಿಂ ವಸಾಹತುಗಳಲ್ಲಿ ಕಂಡುಬರುತ್ತವೆ. ಇತ್ತೀಚಿನ ದಿನಗಳಲ್ಲಿ ಹಳೆಯ ಮಸೀದಿಗಳ ಕಟ್ಟುನಿಟ್ಟಾದ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಇಸ್ಲಾಮಿಕ್ ವಾಸ್ತುಶಿಲ್ಪದಿಂದ ಬದಲಾಯಿಸುವ ಪ್ರಕ್ರಿಯೆ ನಡೆದಿದೆ. ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಸಾಮ್ರಾಜ್ಯಶಾಹಿ ಶಾಲೆಯ ಕಮಾನಿನ ರೂಪಗಳು, ಗುಮ್ಮಟಗಳು ಮತ್ತು ಮಿನಾರ್‌ಗಳ ಬಳಕೆಯನ್ನು ಇಸ್ಲಾಮಿಕ್ ಸಂಸ್ಕೃತಿಯ ಗೋಚರ ಸಂಕೇತಗಳಾಗಿ ಬಿಂಬಿಸಲಾಗುತ್ತಿದೆ . ತಿರುವನಂತಪುರಂನ ಪಾಲಯಂನಲ್ಲಿರುವ ಜಾಮಾ ಮಸೀದಿಯು ಈ ಹೊಸ ಪ್ರವೃತ್ತಿಗೆ ಉತ್ತಮ ಉದಾಹರಣೆಯಾಗಿದೆ. ಕಳೆದ ದಶಕಗಳಲ್ಲಿ ಹಳೆಯ ಮಸೀದಿಗಳ ಮಾರ್ಪಾಡುಗಳಲ್ಲಿ ಇದೇ ರೀತಿಯ ರಚನೆಗಳು ಕೇರಳದಾದ್ಯಂತ ಬರುತ್ತಿವೆ.

ಬಹುಶಃ ಅರೇಬಿಕ್ ಶೈಲಿಯ ಕೇರಳ ನಿರ್ಮಾಣದ ಪ್ರಭಾವವು ಮುಸ್ಲಿಮರ ಜಾತ್ಯತೀತ ವಾಸ್ತುಶಿಲ್ಪದಲ್ಲಿ ಸೂಕ್ಷ್ಮ ರೀತಿಯಲ್ಲಿ ಕಂಡುಬರುತ್ತದೆ. ಎರಡೂ ಬದಿಗಳಲ್ಲಿ ಕಟ್ಟಡಗಳಿಂದ ಸಾಲುಗಟ್ಟಿದ ಬಜಾರ್ ಬೀದಿಗಳು, ಬೀದಿಗಳಿಗೆ ಕಿಟಕಿಗಳನ್ನು ಹೊಂದಿರುವ ಮೇಲಿನ ಮಹಡಿಯ ವಾಸದ ಕೋಣೆಗಳು, ಜಗಲಿಗಳಲ್ಲಿ (ವಿಶೇಷವಾಗಿ ಮೇಲಿನ ಮಹಡಿಗಳಲ್ಲಿ) ಖಾಸಗಿತನ ಮತ್ತು ನೆರಳು ನೀಡಲು ಬಳಸುವ ಮರದ ಪರದೆಗಳು ಇತ್ಯಾದಿ. ಸಾಂಪ್ರದಾಯಿಕ ನಿರ್ಮಾಣ. ಈ ನಿರ್ಮಿತ ರೂಪಗಳು ಅರಬ್ ದೇಶಗಳಲ್ಲಿನ ( ಈಜಿಪ್ಟ್, ಬಸ್ರಾ (ಇಂದಿನ ಇರಾಕ್ ) ಮತ್ತು ಇರಾನ್ ) ಈ ಪ್ರದೇಶದೊಂದಿಗೆ ಸಂಪರ್ಕ ಹೊಂದಿರುವ ಮನೆಗಳ ಮಾದರಿಯಲ್ಲಿ ಮಾದರಿಯಾಗಿರುತ್ತಿತ್ತು. ಕೋಝಿಕ್ಕೋಡ್, ತಲಶ್ಶೇರಿ, ಕಾಸರಗೋಡು ಮುಂತಾದ ಮಾರುಕಟ್ಟೆ ಪಟ್ಟಣಗಳಲ್ಲಿ ಈ ಪ್ರವೃತ್ತಿಯು ಹೆಚ್ಚು ಎದ್ದುಕಾಣುತ್ತದೆ. ಆದರೆ ಮೂಲತಃ ಮುಸ್ಲಿಂ ದೇಶೀಯ ವಾಸ್ತುಶಿಲ್ಪಗಳು ಸಾಂಪ್ರದಾಯಿಕ ಹಿಂದೂ ಶೈಲಿಗಳನ್ನು ಅನುಸರಿಸುತ್ತವೆ. ಇದಕ್ಕಾಗಿ " ಏಕಸಾಲಗಳು " ಮತ್ತು "ನಾಲುಕೆಟ್ಟುಗಳು" ಎರಡನ್ನೂ ಅಳವಡಿಸಿಕೊಳ್ಳಲಾಗಿದೆ. ವ್ಯಾಪಕವಾದ ಹರಡಿಕೊಂಡಿರುವ ಮತ್ತು ವಿಶಾಲವಾದ ಜಗಲಿಗಳನ್ನು ಹೊಂದಿರುವ ಈ ಕಟ್ಟಡಗಳು ಸಾಮಾನ್ಯವಾಗಿ ಮುಸ್ಲಿಂ ವಸಾಹತುಗಳಲ್ಲಿನ ಮಸೀದಿಗಳ ಸುತ್ತಲೂ ಕಂಡುಬರುತ್ತವೆ.

ಇಗರ್ಜಿ (ಚರ್ಚ್) ವಾಸ್ತುಶಿಲ್ಪ

ಬದಲಾಯಿಸಿ
 
ಮುವಾಟ್ಟುಪುಳ ಬಳಿಯ ಕಡಮಟ್ಟಂ ಮಲಂಕರ ಸಿರಿಯನ್ ಚರ್ಚ್, ಕೇರಳದ ಅತ್ಯಂತ ಹಳೆಯ ಚರ್ಚ್‌ಗಳಲ್ಲಿ ಒಂದಾಗಿದೆ, ಇದನ್ನು ಶುದ್ಧ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಕೇರಳದ ಚರ್ಚ್ ವಾಸ್ತುಶಿಲ್ಪದ ವಿಕಾಸವು ಎರಡು ಮೂಲಗಳಿಂದ ಹುಟ್ಟಿಕೊಂಡಿದೆ - ಮೊದಲನೆಯದು ಧರ್ಮಪ್ರಚಾರಕ ಸೇಂಟ್ ಥಾಮಸ್ ಮತ್ತು ಸಿರಿಯನ್ ಕ್ರಿಶ್ಚಿಯನ್ನರ ಕೆಲಸದಿಂದ ಮತ್ತು ಎರಡನೆಯದು ಯುರೋಪಿಯನ್ ವಸಾಹತುಗಾರರ ಮಿಷನರಿ ಕೆಲಸದಿಂದ. ಕ್ರಿ.ಶ. ೫೨ ರಲ್ಲಿ ಮುಜಿರಿಸ್‌ಗೆ ಬಂದಿಳಿದ ಸೇಂಟ್ ಥಾಮಸ್ ಕೇರಳದಲ್ಲಿ ಕೊಡುಂಗಲ್ಲೂರ್, ಚಾಯಿಲ್, ಪಾಲೂರ್, ಪರವೂರ್-ಕೊಟ್ಟಕ್ಕಾವು, ಕೊಲ್ಲಂ, ನಿರನೋಮ್ ಮತ್ತು ಕೋತಮಂಗಲಂನಲ್ಲಿ ಏಳು ಚರ್ಚ್‌ಗಳನ್ನು ನಿರ್ಮಿಸಿದ್ದನೆಂದು ಪ್ರತೀತಿಯಿದೆ, ಆದರೆ ಈ ಸಿರಿಯನ್ ಚರ್ಚ್‌ಗಳಲ್ಲಿ ಯಾವುದೂ ಈಗ ಅಸ್ತಿತ್ವದಲ್ಲಿಲ್ಲ. ಸೇಂಟ್ ಥಾಮಸ್‌ನಿಂದ ಸಿರಿಯಾಕ್ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತನೆಗೊಂಡ ಜನರ ಸೇವೆಗಳಿಗಾಗಿ ಕೆಲವು ದೇವಾಲಯಗಳನ್ನು ಸಿರಿಯನ್ ಚರ್ಚ್‌ಗಳಾಗಿ ಅಳವಡಿಸಿಕೊಳ್ಳಲಾಗಿದೆ. ಉದಾಹರಣೆಗೆ, ಪ್ರಸ್ತುತ ಪಾಲೂರ್ ಸಿರಿಯನ್ ಚರ್ಚ್‌ ಅಭಿಷೇಕ ಪಾತ್ರ (ಸ್ವರದ ಅಕ್ಷರ) ಮತ್ತು ಕೆಲವು ಶೈವ ಚಿಹ್ನೆಗಳನ್ನು ಹಳೆಯ ಚರ್ಚ್‌ನ ಅವಶೇಷಗಳಾಗಿ ಸಂರಕ್ಷಿಸಿದೆ, ಇದು ಕ್ರಿಶ್ಚಿಯನ್ ಆರಾಧನೆಗೆ ಹೊಂದಿಕೊಂಡ ಹಿಂದೂ ದೇವಾಲಯವಾಗಿದೆ ಎಂದು ಹೇಳಲಾಗುತ್ತದೆ.

 
ಪೋರ್ಚುಗೀಸ್ ಮತ್ತು ಕೇರಳದ ವಾಸ್ತುಶಿಲ್ಪದ ಮಿಶ್ರಣವನ್ನು ಹೊಂದಿರುವ ಸೈರೋ-ಮಲಬಾರ್ ಚರ್ಚ್

ಪರ್ಷಿಯನ್ ಸಾಮ್ರಾಜ್ಯದಲ್ಲಿ ಸಿರಿಯನ್ ಕ್ರಿಶ್ಚಿಯನ್ನರ ಕಿರುಕುಳದಿಂದಾಗಿ ಕ್ರಿಸ್ತಶಕ ನಾಲ್ಕನೇ ಶತಮಾನದಲ್ಲಿ ಪರ್ಷಿಯಾದ ಎಡೆಸ್ಸಾದಿಂದ ಕ್ರಿಶ್ಚಿಯನ್ ಧರ್ಮದ ಮೊದಲ ಅಲೆಯು ಬಂದಿತು ಎಂದು ಐತಿಹಾಸಿಕ ಪುರಾವೆಗಳು ಸೂಚಿಸುತ್ತವೆ. ಬೈಜಾಂಟೈನ್ ಸನ್ಯಾಸಿ ಕಾಸ್ಮಾಸ್‌ನ ನಿರೂಪಣೆಯ ಪ್ರಕಾರ, ಕೇರಳವು ಕ್ರಿ. ಶ. ಆರನೇ ಶತಮಾನದಲ್ಲಿ ಅನೇಕ ಚರ್ಚ್‌ಗಳನ್ನು ಹೊಂದಿತ್ತು, ಒಂಬತ್ತನೇ ಶತಮಾನದ ಸ್ಟಾನು ರವಿಯ ಕಾಲದ ಶಾಸನದ ಪ್ರಕಾರ, ಸಿರಿಯನ್ ಕ್ರಿಶ್ಚಿಯನ್ ಸಮುದಾಯಗಳು ಅನೇಕ ಹಕ್ಕುಗಳು ಮತ್ತು ಸವಲತ್ತುಗಳನ್ನು ಅನುಭವಿಸಿದವು. ಅವರು ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಸಿರಿಯನ್ ಕ್ರಿಶ್ಚಿಯನ್ನರ ದೇಶೀಯ ಕಟ್ಟಡಗಳು ಸ್ಥಳೀಯ ವಾಸ್ತುಶಿಲ್ಪಕ್ಕೆ ಹೋಲುತ್ತವೆ.

 
ಸಿರಿಯನ್ ಕ್ರಿಶ್ಚಿಯನ್ನರು ತಮ್ಮ ಹೆಚ್ಚಿನ ಚರ್ಚ್‌ಗಳನ್ನು ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿ ನಿರ್ಮಿಸಿದ್ದಾರೆ, ಇದು ಕೇರಳದ ದೇವಾಲಯಗಳನ್ನು ಹೋಲುತ್ತದೆ. ಚೆಂಗನ್ನೂರಿನ ಓಲ್ಡ್ ಸಿರಿಯನ್ ಚರ್ಚ್ ಅನ್ನು ಕಲ್ಲಿನ ದೀಪಗಳಿಂದ ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇದು ಸ್ಥಳೀಯ ವಾಸ್ತುಶಿಲ್ಪದೊಂದಿಗೆ ಕೇರಳ ಕ್ರಿಶ್ಚಿಯನ್ ಧರ್ಮವನ್ನು ಸಂಯೋಜಿಸುವ ಸಾಕ್ಷಿಯಾಗಿದೆ.

ಆದಾಗ್ಯೂ, ಕೇರಳಕ್ಕೆ ವಲಸೆ ಬಂದ ಮೂಲ ಸಿರಿಯನ್ನರು ಚರ್ಚ್ ವಾಸ್ತುಶೈಲಿಯಲ್ಲಿ ಕೆಲವು ಪಶ್ಚಿಮ ಏಷ್ಯಾದ ಸಂಪ್ರದಾಯಗಳನ್ನು ತಮ್ಮೊಂದಿಗೆ ತಂದಿದ್ದರು. ಪರಿಣಾಮವಾಗಿ, ಧರ್ಮಗುರು(ಪಾದ್ರಿ) ಗಳಿಗಾಗಿ ಮತ್ತು ಭಕ್ತರಿಗಾಗಿ ಪ್ರತ್ಯೇಕ ಪ್ರದೇಶವನ್ನು ಹೊಂದಿರುವ ಚರ್ಚ್‌ಗಳನ್ನು ನಿರ್ಮಿಸಲು ಪ್ರಾರಂಭಿಸಲಾಯಿತು ಮತ್ತು ಇದು ಚರ್ಚ್ ವಾಸ್ತುಶಿಲ್ಪದ ವಿಶಿಷ್ಟ ಶೈಲಿಯನ್ನು ವಿಕಸನಗೊಳಿಸಿತು. ಈ ಶೈಲಿಯ ವಿಶಿಷ್ಟ ಲಕ್ಷಣವೆಂದರೆ ಭಕ್ತರು ಸೇರುವ ಪ್ರದೇಶ (ನೇವ್ )ದ ತುದಿಯಲ್ಲಿರುವ ಅಲಂಕಾರಿಕ ರಚನೆಯ ಮುಂಭಾಗದಲ್ಲಿ, ಶಿಲುಬೆಯಿಂದ ಆರೋಹಿಸಲಾಗಿದೆ. ನವರಂಗದ ಮುಂಭಾಗದಲ್ಲಿ ಪ್ರವೇಶ ದ್ವಾರ (ಶಾಲಾ) ಈ ಆರಂಭಿಕ ದೇವಾಲಯಗಳ ಮತ್ತೊಂದು ವೈಶಿಷ್ಟ್ಯವಾಗಿತ್ತು. ಜ್ಞಾನಸ್ನಾನ ದೀಕ್ಷೆ ಕೊಡುವ ಸ್ಥಳ ಪ್ರವೇಶದ್ವಾರದ ಬಳಿ ನೇವ್ ಒಳಗೆ ಒಂದು ಸಣ್ಣ ಕೋಣೆಯಾಗಿತ್ತು. ಗಂಟಾಗೋಪುರವನ್ನು ನೇವ್‌ನ ಒಂದು ಬದಿಯಲ್ಲಿ ನಿರ್ಮಿಸಲಾಗಿದೆ, ಆದರೆ ಚಿಕ್ಕ ಚರ್ಚುಗಳಲ್ಲಿ ಗಂಟೆಯನ್ನು ನೇವ್ ರಚನೆಯ ತೆರೆಯುವಿಕೆಯಲ್ಲಿ ನೇತುಹಾಕಲಾಯಿತು.

ಕೇರಳ ಚರ್ಚ್ ವಾಸ್ತುಶಿಲ್ಪದ ಅಂಶಗಳು
ಬದಲಾಯಿಸಿ
 
ಕೊಟ್ಟಕ್ಕಾವು ಮಾರ್ ಥೋಮಾ ಸಿರೋ-ಮಲಬಾರ್ ರೋಮನ್ ಕ್ಯಾಥೋಲಿಕ್ ಚರ್ಚ್, ಉತ್ತರ ಪರವೂರ್ ಪೋರ್ಚುಗೀಸ್, ಕೇರಳ ಮತ್ತು ಡಚ್ ವಾಸ್ತುಶಿಲ್ಪದ ಮಿಶ್ರಣವಾಗಿದೆ.
 
ಬಲಿಪೀಠ-ಕಂಜೂರ್ ಚರ್ಚ್

ಕೇರಳದ ದೇವಾಲಯಗಳಂತೆ, ಕೇರಳದ ಎಲ್ಲಾ ಚರ್ಚ್‌ಗಳಿಗೆ ಏಕರೂಪ ಅಥವಾ ಪ್ರಮಾಣಿತ ವಿನ್ಯಾಸವಿಲ್ಲ. ಬದಲಿಗೆ ಹೆಚ್ಚಿನ ಚರ್ಚುಗಳು ಹೊಸ ವಿನ್ಯಾಸಗಳ ಪ್ರಯೋಗದ ಹೊರತಾಗಿ ವಿವಿಧ ಪಂಗಡಗಳು ಮತ್ತು ಅವರ ಸಂಪ್ರದಾಯಗಳ ಪ್ರಕಾರ ವಾಸ್ತುಶಿಲ್ಪದಲ್ಲಿ ವಿಭಿನ್ನತೆಯನ್ನು ಹೊಂದಿವೆ. ಇನ್ನೂ ಹೆಚ್ಚಿನ ಚರ್ಚುಗಳು, ವಿಶೇಷವಾಗಿ ಕೇರಳದ ಸೇಂಟ್ ಥಾಮಸ್ ಕ್ರಿಶ್ಚಿಯನ್ ಚರ್ಚುಗಳು, ಹಲವಾರು ಸಾಮಾನ್ಯ ವೈಶಿಷ್ಟ್ಯಗಳನ್ನು ಹೊಂದಿವೆ.

ಚರ್ಚ್ ನ ಪಾದ್ರಿ ನಿಲ್ಲುವ ಜಾಗ ವಿಸ್ತರಿಸುವ ಮೇಲ್ಛಾವಣಿಯಂತಹ ರಚನೆಯನ್ನು ಹೊಂದಿತ್ತು, ಇದು ಚರ್ಚ್‌ನ ಅತ್ಯಂತ ಪವಿತ್ರ ಭಾಗವಾಗಿದೆ ಮತ್ತು ಅದರ ಪಕ್ಕದಲ್ಲಿ ಪೂಜಾ ಸಮಾಗ್ರಿಗಳನ್ನು ಇಡುವ ಜಾಗವಾಗಿತ್ತು. ಹಿಂದೂ ದೇವಾಲಯದಲ್ಲಿನ ಗರ್ಭಗೃಹದ ಮೇಲಿರುವ ಶಿಖರವನ್ನು ಹೋಲುವ ಮಂದಿರದ ಮೇಲಿರುವ ಗೋಪುರವು ನವರಂಗದ ಛಾವಣಿಗಿಂತ ಎತ್ತರಕ್ಕೆ ಎತ್ತರಿಸಲ್ಪಟ್ಟಿತ್ತು. ಪಾದ್ರಿಯ ನಿವಾಸ ಮತ್ತು ಪ್ರಾರ್ಥನ ಸಭಾಂಗಣ ಚರ್ಚ್‌ನ ಒಂದು ಬದಿಯಲ್ಲಿದ್ದರೆ ಮತ್ತು ಸ್ಮಶಾನವು ಇನ್ನೊಂದು ಬದಿಯಲ್ಲಿತ್ತು.

 
ಚಂಗಸ್ಸೆರಿಯಲ್ಲಿರುವ ಸಿರೋ-ಮಲಬಾರ್ ಆರ್ಚ್‌ಬಿಷಪ್ ಅರಮನೆಯನ್ನು ಕೇರಳದ ಸ್ಥಳೀಯ ಶೈಲಿಗಳೊಂದಿಗೆ ಡಚ್ ವಾಸ್ತುಶಿಲ್ಪವನ್ನು ಸಂಯೋಜಿಸಿ ನಿರ್ಮಿಸಲಾಗಿದೆ.

ತಮ್ಮ ಬಾಹ್ಯ ಲಕ್ಷಣದಲ್ಲಿ ಸಿರಿಯನ್ ಚರ್ಚುಗಳು ಹಿಂದೂ ಶೈಲಿಯ ಕೆಲವು ಸ್ಥಳೀಯ ಲಕ್ಷಣಗಳನ್ನು ಉಳಿಸಿಕೊಂಡಿವೆ. ಚರ್ಚ್ ಮತ್ತು ಪೂರಕ ಕಟ್ಟಡಗಳು ಬೃಹತ್ ಕೆಂಪು ಕಲ್ಲಿನ ( ಲ್ಯಾಟರೈಟ್) ಗೋಡೆಯಿಂದ ಸುತ್ತುವರಿದಿದ್ದವು.

ಬಲಿಕಲ್ಲು ಮಾದರಿಯಲ್ಲಿ ಬೆಣಚು ಕಲ್ಲಿನ (ಗ್ರಾನೈಟ್) ನೆಲಮಾಳಿಗೆಯಲ್ಲಿ ಮುಖ್ಯ ದ್ವಾರದ ಮುಂದೆ ತೆರೆದ ಶಿಲುಬೆ, ಬಲಿಪೀಠದ ಕಲ್ಲು ಇತ್ತು. ಒಂದು ಚರ್ಚ್ ಮುಂಭಾಗದಲ್ಲಿ ಧ್ವಜಸ್ತಂಭವನ್ನು (ದ್ವಜಸ್ತಂಭ) ಹೊಂದಿತ್ತು. ಚೆಂಗನ್ನೂರಿನಲ್ಲಿರುವ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನಲ್ಲಿ, ಪೀಟರ್ ಮತ್ತು ಪಾಲ್ ಹಿಂದೂ ದೇವಾಲಯದ ಕಾವಲು ದೇವತೆಗಳಾದ ದ್ವಾರಪಾಲರ ಸ್ಥಾನವನ್ನು ಅಲಂಕರಿಸಿದ್ದಾರೆ. ಕೆಲವೊಮ್ಮೆ ದೇವಸ್ಥಾನದ ಗೋಪುರದಂತಹ ಹೆಬ್ಬಾಗಿಲಿನ ಜೊತೆಗೆ ಕೋಟೆಯಂತಹ ಅಥವಾ ಮೇಲಿನ ಅಂತಸ್ತಿನಲ್ಲಿ ಸಂಗೀತ ಕೊಠಡಿಯನ್ನು ಸಹ ಒದಗಿಸಲಾಗಿದೆ. ಕ್ರಿ.ಶ. ೩೪೫ ರಲ್ಲಿ ಮೂಲತಃ ನಿರ್ಮಿಸಲಾದ ಕುರವಿಲಂಗಾಡ್‌ನಲ್ಲಿರುವ ಮಾರ್ತ್ ಮರಿಯಮ್ ಚರ್ಚ್ ಹಲವಾರು ಬಾರಿ ನವೀಕರಣಕ್ಕೆ ಒಳಗಾಯಿತು. ಚರ್ಚ್ ಕನ್ಯಾ ಮೇರಿಯ ಪ್ರತಿಮೆ ಮತ್ತು ಬೆಣಚುಕ (ಗ್ರಾನೈಟ್‌ )ನಲ್ಲಿ ಕೆತ್ತಿದ ಶಿಲುಬೆಯನ್ನು ಒಳಗೊಂಡಂತೆ ಹಳೆಯ ಅವಶೇಷಗಳ ಶ್ರೀಮಂತ ಸಂಗ್ರಹವನ್ನು ಹೊಂದಿದೆ. ಕಡುತುರುತಿಯ ಕಾನನಯ ವಲಿಯಪಲ್ಲಿ ಮತ್ತೊಂದು ಹಳೆಯ ಚರ್ಚ್ ಆಗಿದ್ದು, ಒಂದೇ ಗ್ರಾನೈಟ್ ತುಣುಕಿನಲ್ಲಿ ದೊಡ್ಡ ಶಿಲುಬೆಯನ್ನು ರಚಿಸಲಾಗಿದೆ. ಪಿರವೋಮ್‌ನ ವಲಿಯಪಲ್ಲಿ ಹಳೆಯ ಪರ್ಷಿಯನ್ ಬರಹಗಳನ್ನು ಹೊಂದಿರುವ ಮತ್ತೊಂದು ಹಳೆಯ ಚರ್ಚ್ ಆಗಿದೆ.

ಮರದ ಕೆತ್ತನೆ ಮತ್ತು ಭಿತ್ತಿಚಿತ್ರಗಳನ್ನು, ದೇವಾಲಯಗಳ ಎರಡು ಅಲಂಕಾರಿಕ ಮಾಧ್ಯಮಗಳಲ್ಲಿ ಪ್ರಾಚೀನ ಚರ್ಚ್‌ಗಳಲ್ಲಿಯೂ ಅಳವಡಿಸಿಕೊಳ್ಳಲಾಗಿದೆ. ಮರದ ಕೆತ್ತನೆಯ ಪ್ರಸಿದ್ಧ ತುಣುಕು ಮುಲಾಂತುರುತಿಯ ಸೇಂಟ್ ಥಾಮಸ್ ಚರ್ಚ್‌ನಲ್ಲಿ ಕೊನೆಯ ಭೋಜನವನ್ನು ಚಿತ್ರಿಸುವ ದೊಡ್ಡ ಫಲಕವಾಗಿದೆ. ಉದಯಂಪೇರೂರಿನಲ್ಲಿರುವ ಆಲ್ ಸೇಂಟ್ಸ್ ಚರ್ಚ್ ಆನೆಗಳು ಮತ್ತು ಘೇಂಡಾಮೃಗಗಳ ತಲೆಯಂತಹ ಮರದ ಅಚ್ಚುಗಳ ಮೇಲೆ ಸ್ತಂಭವನ್ನು ಹೊಂದಿದೆ. ಹೂವಿನ ಚಿತ್ರಗಳು, ದೇವತೆಗಳ ಮತ್ತು ಅಪೊಸ್ತಲರ ಭಿತ್ತಿಚಿತ್ರಗಳು ಸಾಮಾನ್ಯ ಲಕ್ಷಣಗಳಾಗಿವೆ. ಈ ರೀತಿಯ ಅಲಂಕಾರವು ನಂತರದ ಚರ್ಚ್‌ಗಳಲ್ಲಿಯೂ ಮುಂದುವರೆಯಿತು. ಕಂಜೂರಿನ ಸೇಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿರುವ ಭಿತ್ತಿಚಿತ್ರವು ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನರ ನಡುವಿನ ಹೋರಾಟವನ್ನು ಸಹ ಚಿತ್ರಿಸುತ್ತದೆ.

ಚರ್ಚ್ ವಾಸ್ತುಶೈಲಿಯಲ್ಲಿ ವಸಾಹತುಶಾಹಿ ಪ್ರಭಾವಗಳು
ಬದಲಾಯಿಸಿ
 
ಕೇರಳದ ವಾಸ್ತುಶಿಲ್ಪದ ಮಾದರಿಗಳಲ್ಲಿ ಡಚ್ ಶೈಲಿಯನ್ನು ಸಂಯೋಜಿಸಲಾಗಿದೆ

ಪೋರ್ಚುಗೀಸರು ಕೇರಳದ ಚರ್ಚ್ ವಾಸ್ತುಶಿಲ್ಪದಲ್ಲಿ ಯುರೋಪಿಯನ್ ಶೈಲಿಗಳನ್ನು ಮೊದಲು ಪರಿಚಯಿಸಿದರು, ನಂತರ ಡಚ್ ಮತ್ತು ಬ್ರಿಟಿಷರು. ಭಾರತದಲ್ಲಿ ಈ ರೀತಿಯ ಮೊದಲ ಚರ್ಚ್ ನ್ನು ಕ್ರಿ. ಶ. ೧೫೧೦ ರಲ್ಲಿ ಫೋರ್ಟ್ ಕೊಚ್ಚಿಯಲ್ಲಿ ಫ್ರಾನ್ಸಿಸ್ಕನ್ ಮಿಷನರಿಗಳು ನಿರ್ಮಿಸಿದರು. ಇದು ಮಧ್ಯಕಾಲೀನ ಸ್ಪ್ಯಾನಿಷ್ ಮಾದರಿಯ ಒಂದು ಸಣ್ಣ ಸರಳ ಕಟ್ಟಡವಾಗಿದೆ. ೧೫೨೪ ರಲ್ಲಿ ಕೊಚ್ಚಿಯಲ್ಲಿ ವಾಸ್ಕೋ ಡಿ ಗಾಮಾ ನಿಧನರಾದಾಗ ಅವರ ದೇಹವನ್ನು ಈ ಚರ್ಚ್‌ನಲ್ಲಿ ಹೂಳಲಾಯಿತು ಮತ್ತು ನಂತರ ೧೫೩೮ ರಲ್ಲಿ ಲಿಸ್ಬನ್‌ಗೆ ಕೊಂಡೊಯ್ಯಲಾಯಿತು. ಈ ಚರ್ಚ್ ಅನ್ನು ವಾಸ್ಕೋ ಡಿ ಗಾಮಾ ಚರ್ಚ್ ಎಂದು ಕರೆಯಲಾಯಿತು. ಅನಂತರ ಇದನ್ನು ಡಚ್ಚರು ವಶಪಡಿಸಿಕೊಂಡರು ಮತ್ತು ಸುಧಾರಿತ ಸೇವೆಗಳಿಗೆ ಬಳಸಲಾಯಿತು. ನಂತರ ಕೊಚ್ಚಿಯ ಮೇಲೆ ಬ್ರಿಟಿಷ್ ಆಕ್ರಮಣದೊಂದಿಗೆ ಇದು ಆಂಗ್ಲರ (ಆಂಗ್ಲಿಕನ್) ಚರ್ಚ್ ಆಗಿ ಮಾರ್ಪಟ್ಟಿತು ಮತ್ತು ಪ್ರಸ್ತುತ ಇದು ದಕ್ಷಿಣ ಭಾರತದ ಚರ್ಚ್‌ಗೆ ಸೇರಿದೆ.

ಪೋರ್ಚುಗೀಸರು ಕೇರಳದ ಚರ್ಚುಗಳಲ್ಲಿ ಅನೇಕ ಹೊಸತನಗಳನ್ನು ಪರಿಚಯಿಸಿದ್ದರು. ಮೊದಲ ಬಾರಿಗೆ, ದೇವಾಲಯದ ವಾಸ್ತುಶೈಲಿಯಿಂದ ರೂಪಾಂತರಗೊಂಡ ಬಲಿಪೀಠದ ಮೇಲಿರುವ ಪ್ರಬಲವಾದ ಗೋಪುರವನ್ನು ಕೈಬಿಡಲಾಯಿತು. ಚರ್ಚ್‌ನ ಒಳಭಾಗದಲ್ಲಿ, ಬೆಣಚು ಕಲ್ಲಿನಲ್ಲಿ ರಚಿಸಿದ ಚಿತ್ರಗಳು ಹಿಂದೂ ಕಲೆಯೊಂದಿಗಿನ ಸಂಬಂಧದ ಕಾರಣದಿಂದಾಗಿ ಅವರಿಗೆ ರುಚಿಸಲಿಲ್ಲ. ಅವುಗಳ ಬದಲಿಗೆ ಮರದಿಂದ ಮಾಡಿದ ಸಂತರ ಚಿತ್ರಗಳನ್ನು ಗೋಪುರವನ್ನು ಅಲಂಕರಿಸಲು ಬಳಸಲಾಯಿತು. ಎಲ್ಲಾ ಕಡೆಗಳಲ್ಲಿ ಪೀಠಗಳನ್ನು ನಿರ್ಮಿಸಲಾಯಿತು ಮತ್ತು ಬಲಿಪೀಠದ ತುಣುಕುಗಳನ್ನು ಆಕರ್ಷಕ ರೀತಿಯಲ್ಲಿ ಅಲಂಕರಿಸಲಾಗಿತ್ತು. ಯುರೋಪಿಯನ್ ಕಲಾಕಾರರ ಶೈಲಿಯಲ್ಲಿ ಮೇಲ್ಚಾವಣಿ ಮತ್ತು ಗೋಡೆಗಳಲ್ಲಿ ಧಾರ್ಮಿಕ ವಿಷಯಗಳ ಚಿತ್ರಗಳನ್ನು ಚಿತ್ರಿಸಲಾಗಿದೆ. ಮೊನಚಾದ ಮತ್ತು ದುಂಡಗಿನ ಕಮಾನುಗಳನ್ನು ಪರಿಚಯಿಸಲಾಯಿತು ಮತ್ತು ಬಣ್ಣದ ಗಾಜಿನ ಕಿಟಕಿಗಳನ್ನು ಸ್ಥಾಪಿಸಲಾಯಿತು.

ಬ್ರಿಟಿಷರ ಅವಧಿಯಲ್ಲಿ ಚರ್ಚ್ ವಾಸ್ತುಶೈಲಿಯ ನಂತರದ ಬೆಳವಣಿಗೆಯು ಹೊಸ ಚರ್ಚ್ ವಿನ್ಯಾಸದ ಪರಿಚಯದ ಪರಿಚಯ ನೀಡಿತು. ಆಯತಾಕಾರದ ಸಭಾಭವನದ ರಚನೆಯ ಸ್ಥಳದಲ್ಲಿ ಅಡ್ಡ ಆಕಾರದ ರಚನೆಯು ವಿಶೇಷವಾಗಿ ದೊಡ್ಡ ಸಭೆಗೆ ಸ್ಥಳಾವಕಾಶ ಕಲ್ಪಿಸಬೇಕಾದ ಸ್ಥಳಗಳಲ್ಲಿ ಹೆಚ್ಚು ಜನಪ್ರಿಯವಾಯಿತು. ಶಿಲುಬೆಯ ಸ್ಪಷ್ಟ ಸಾಂಕೇತಿಕತೆಯ ಹೊರತಾಗಿ, ಚರ್ಚ್‌ನ ಎಲ್ಲಾ ಬಿಂದುಗಳಿಂದ ಬಲಿಪೀಠದ ಉತ್ತಮ ಗೋಚರತೆಗಾಗಿ ಈ ಯೋಜನೆಯು ಹೆಚ್ಚು ಸೂಕ್ತವಾಗಿದೆ. ಇದಲ್ಲದೆ, ಕ್ರಿಸ್‌ಮಸ್‌ನಂತಹ ಪ್ರಮುಖ ಸಂದರ್ಭಗಳಲ್ಲಿ ಹಲವಾರು ಪುರೋಹಿತರ ಸೇವೆಗಳಿಗಾಗಿ ಹೆಚ್ಚುವರಿ ಬಲಿಪೀಠಗಳಿಗೆ ಸಾಕಷ್ಟು ಸ್ಥಳಾವಕಾಶವು ಈಗ ಸಭಾಂಗಣದ ಲಂಬವಾಗಿರುವ ಸ್ಥಳದಲ್ಲಿ ಲಭ್ಯವಿದೆ.

ಬಾಹ್ಯ ವೈಶಿಷ್ಟ್ಯಗಳಲ್ಲಿ ಕೇಂದ್ರ ಗೋಪುರ ಅಥವಾ ರೋಮನ್ ಗುಮ್ಮಟವು ಈಗ ಯೂರೋಪಿಯನ್ ವಾಸ್ತುಶೈಲಿಯ ಶ್ರೇಷ್ಠ ರೂಪವನ್ನು ನೀಡುವ ಸಭಾಂಗಣದ ಲಂಬವಾಗಿರುವ ಸ್ಥಳದ ಮಧ್ಯಭಾಗದಲ್ಲಿದೆ. ಮುಂಭಾಗದಲ್ಲಿ ಮುಖ್ಯ ದ್ವಾರದ ಎರಡೂ ಬದಿಗಳಲ್ಲರುವ ಗೋಪುರಗಳನ್ನು, ಘಂಟಾಗೋಪುರವಾಗಿ ಮಾಡಲಾಯಿತು. ಚರ್ಚ್ ನ ಬಾಹ್ಯದಲ್ಲಿ ಯುರೋಪಿಯನ್ ಚರ್ಚ್ ವಾಸ್ತುಶಿಲ್ಪದ ವಿಶಿಷ್ಟ ಲಕ್ಷಣಗಳನ್ನು ಪರಿಚಯಿಸಲಾಯಿತು.ಗೋಥಿಕ್ ಶೈಲಿಯ ಕಮಾನುಗಳು, ಕಂಬಗಳು ಮತ್ತು ಆಧಾರಸ್ತಂಬಗಳು, ಹೊರಮುಖವಾದ ಕಿಂಡಿಗಳು, ವಿನೂತನ ಜೋಡಣೆಗಳು ಮತ್ತು ಬಣ್ಣದ ಗಾಜಿನ ಕಿಟಕಿಗಳು ಇಡೀ ಸಂಯೋಜನೆಯನ್ನು ಸ್ಥಳೀಯ ವಾಸ್ತುಶೈಲಿಯಿಂದ ಸಂಪೂರ್ಣವಾಗಿ ವಿಭಿನ್ನವಾಗಿಸುತ್ತದೆ. ನಿರ್ಮಾಣದ ಅವಧಿಗೆ ಅನುಗುಣವಾಗಿ, ತಿರುವನಂತಪುರಂನ ಪಾಳಯಂ ಚರ್ಚ್‌ನಲ್ಲಿರುವಂತೆ ಸರಳ ಗೋಥಿಕ್ ಶೈಲಿಯಲ್ಲಿ ಮಾಡಿದ ಚರ್ಚ್‌ ಮತ್ತು ತ್ರಿಶೂರ್ ನಲ್ಲಿರುವ ಅವರ್ ಲೇಡಿ ಆಫ್ ಡೊಲೊರಸ್ ಚರ್ಚ್‌ನಲ್ಲಿರುವಂತೆ ನವೋದಯ ಶೈಲಿಯ ಐಷಾರಾಮಿ ಚರ್ಚ್‌ಗಳ ನಡುವೆ ವ್ಯತ್ಯಾಸವನ್ನು ಗುರುತಿಸಬಹುದು.

ಚರ್ಚ್ ವಾಸ್ತುಶಿಲ್ಪದಲ್ಲಿ ಆಧುನಿಕ ಪ್ರವೃತ್ತಿಗಳು
ಬದಲಾಯಿಸಿ

ಸಾಮಾನ್ಯವಾಗಿ ಮಧ್ಯಕಾಲೀನ ಕಾಲದಲ್ಲಿ ವಿಕಸನಗೊಂಡ ರೂಪದೊಂದಿಗೆ ಚರ್ಚ್ನಲ್ಲಿ ವಾಸ್ತುಶೈಲಿಯ ಪಾತ್ರವನ್ನು ಗುರುತಿಸಲಾಗುತ್ತದೆ, ಹೊಸ ಯೋಜನಾ ಆಕಾರಗಳು ಮತ್ತು ರಚನಾತ್ಮಕ ರೂಪಗಳನ್ನು ಅಳವಡಿಸಿಕೊಳ್ಳುವ ಆಧುನಿಕ ಪ್ರವೃತ್ತಿಗಳು ಕೇರಳದಲ್ಲಿಯೂ ಗೋಚರಿಸುತ್ತವೆ. ಇರಿಂಜಲಕ್ಕುಡದ ಕ್ರೈಸ್ಟ್ ಕಾಲೇಜ್ ಚರ್ಚ್‌ನಲ್ಲಿ ಡೊಮಿಕಲ್ ಶೆಲ್ ರೂಫ್‌ನೊಂದಿಗೆ ಈ ವೃತ್ತಾಕಾರದ ಯೋಜನೆ ಆಕಾರವನ್ನು ಅಳವಡಿಸಿಕೊಳ್ಳಲಾಗಿದೆ. ಎರ್ನಾಕುಲಂನಲ್ಲಿರುವ ವರಪುಳದ ಆರ್ಚ್‌ಬಿಷಪ್‌ನ ಕ್ಯಾಥೆಡ್ರಲ್ ಚರ್ಚ್ ಬಲವರ್ಧಿತ ಕಾಂಕ್ರೀಟ್‌ನಲ್ಲಿ ಎತ್ತರದ ಆಗಿದ್ದು, ಎಲ್ಲಾ ಸಾಂಪ್ರದಾಯಿಕ ರೂಪಗಳೊಂದಿಗೆ ತೀವ್ರ ವ್ಯತಿರಿಕ್ತವಾಗಿ ಕಮಾನು ರೀತಿಯ ರಚನೆಗಳನ್ನು ಹೊಂದಿದೆ. ಪ್ರಾಯಶಃ ಧಾರ್ಮಿಕ ವಾಸ್ತುಶೈಲಿಯಲ್ಲಿನ ಪ್ರಯೋಗವು ದೇವಾಲಯಗಳು ಅಥವಾ ಮಸೀದಿಗಳಲ್ಲಿ ಹಳೆಯ ವಿಕಸನಗೊಂಡ ರೂಪಗಳಿಗೆ ಹೆಚ್ಚು ಕಡಿಮೆ ಬದ್ಧವಾಗಿರುವುದಕ್ಕೆ ಹೋಲಿಸಿದರೆ ಚರ್ಚ್ ವಾಸ್ತುಶೈಲಿಯಲ್ಲಿ ಹೆಚ್ಚಾಗಿ ಪ್ರಕಟವಾಗುತ್ತದೆ.

ಯಹೂದಿ ವಾಸ್ತುಶಿಲ್ಪ

ಬದಲಾಯಿಸಿ

ಕೇರಳದ ವಾಸ್ತುಶಿಲ್ಪದ ದೃಶ್ಯಗಳು ವಿದೇಶಿ ಭೂಮಿಯ ಅನೇಕ ಸಾಮಾಜಿಕ-ಸಾಂಸ್ಕೃತಿಕ ಗುಂಪುಗಳು ಮತ್ತು ಧಾರ್ಮಿಕ ಚಿಂತನೆಗಳಿಂದ ಪ್ರಭಾವಿತವಾಗಿದೆ. ಸಮುದ್ರ ವ್ಯಾಪಾರವನ್ನು ಅವಂಬಿಸಿರುವ ದೇಶಗಳಾದ ಇಸ್ರೇಲ್, ರೋಮ್, ಅರೇಬಿಯಾ ಮತ್ತು ಚೀನಾದಂತಹ ಕಡಲ ರಾಷ್ಟ್ರಗಳೊಂದಿಗೆ ಕ್ರಿಶ್ಚಿಯನ್ ಯುಗದ ಉದಯಕ್ಕೂ ಮುಂಚೆಯೇ ವ್ಯಾಪಾರ ಸಂಪರ್ಕಗಳನ್ನು ಉತ್ತೇಜಿಸಿತ್ತು. ವ್ಯಾಪಾರ ಸಂಪರ್ಕವು ಹಳೆಯ ಬಂದರು ಪಟ್ಟಣಗಳ ಬಳಿ ವಸಾಹತುಗಳನ್ನು ಸ್ಥಾಪಿಸಲು ಮತ್ತು ಕ್ರಮೇಣ ಒಳಭಾಗದಲ್ಲಿ ಹರಡಲು ದಾರಿ ಮಾಡಿಕೊಟ್ಟಿತು. ಎರಡನೇ ಚೇರ ಸಾಮ್ರಾಜ್ಯದ ಸಮಯದಲ್ಲಿ, ಹಳೆಯ ಬಂದರು ನಗರವಾದ ಮಾಕೋಟೈ (ಕೊಡುಂಗಲ್ಲೂರು) ಈ ಗುಂಪುಗಳಿಂದ ವಿವಿಧ ಭಾಗಗಳನ್ನು ಆಕ್ರಮಿಸಿಕೊಂಡಿತ್ತು. ಉದಾಹರಣೆಗೆ, ಕೇರಳದೊಂದಿಗಿನ ಯಹೂದಿಗಳ ಸಾಂಸ್ಕೃತಿಕ ಸಂಪರ್ಕವು ಸೊಲೊಮೆನ್ ಕಾಲಕ್ಕಿಂತ ಹಿಂದಿನದು ಮತ್ತು ಹದಿನೈದನೆಯ ಶತಮಾನದ ವೇಳೆಗೆ ಕೊಡುಂಗಲ್ಲೂರು, ಕೊಚ್ಚಿ ಮತ್ತು ಇತರ ಕರಾವಳಿ ಪಟ್ಟಣಗಳಲ್ಲಿ ಯಹೂದಿ ವಸಾಹತುಗಳು ಇದ್ದವು. ಮಟ್ಟಂಚೇರಿ ಅರಮನೆಯ ಸಮೀಪವಿರುವ ಕೊಚ್ಚಿಯಲ್ಲಿ ಪ್ರಮುಖ ಯಹೂದಿ ವಸಾಹತು ಕಂಡುಬರುತ್ತದೆ. ಅವರ ವಸತಿ ಕಟ್ಟಡಗಳು ತಮ್ಮ ಬಾಹ್ಯ ನೋಟದಲ್ಲಿ ಕೇರಳದ ಪ್ರಕಾರವನ್ನು ಹೋಲುತ್ತವೆ; ಆದಾಗ್ಯೂ ಅವರು ವಿಭಿನ್ನ ಯೋಜನೆ ಪರಿಕಲ್ಪನೆಯನ್ನು ಹೊಂದಿದ್ದಾರೆ. ನೆಲ ಅಂತಸ್ತಿನ ಕೊಠಡಿಗಳನ್ನು ಅಂಗಡಿಗಳು ಅಥವಾ ಗೋದಾಮುಗಳಾಗಿ ಬಳಸಲಾಗುತ್ತದೆ ಮತ್ತು ಮೊದಲ ಮಹಡಿಯಲ್ಲಿ ವಾಸಿಸುವ ಕೊಠಡಿಗಳನ್ನು ಯೋಜಿಸಲಾಗಿದೆ. ರಸ್ತೆಗಳು ಮತ್ತು ಬದಿಗಳ ಬಗ್ಗೆ ಕಟ್ಟಡದ ಮುಂಭಾಗವು ಸಾಲು ಮನೆಗಳ ಮಾದರಿಯಲ್ಲಿ ಪಕ್ಕದ ಕಟ್ಟಡಗಳೊಂದಿಗೆ ಜೋಡಿಸಿಕೊಂಡಿದೆ. ಯಹೂದಿ ಪಟ್ಟಣದ ಪ್ರಮುಖ ಐತಿಹಾಸಿಕ ಸ್ಮಾರಕವೆಂದರೆ ಸಿನಗಾಗ್. ಇದು ಇಳಿಜಾರಿನ ಹೆಂಚಿನ ಛಾವಣಿಯೊಂದಿಗೆ ಸರಳವಾದ ಎತ್ತರದ ರಚನೆಯಾಗಿದೆ.ಆದರೆ ಇಲ್ಲಿ ಕ್ಯಾಂಟನ್ ಪ್ರದೇಶ, ಚೀನಾ ಮತ್ತು ಯುರೋಪಿನ ಪ್ರಾಚೀನ ಚರ್ಚ್ ಗಳಿ ತಂದ ಕೈಯಿಂದ ಚಿತ್ರಿಸಿದ ಹಂಚುಗಳು ಒಳಾಂಗಣವನ್ನು ಶ್ರೀಮಂತಗೊಳಿಸಿದೆ. ಜುದಾಯಿಸಂ ಪ್ರಕಾರ ಆರಾಧನೆಗಾಗಿ ನಿರ್ಮಿಸಲಾದ ಈ ಧಾರ್ಮಿಕ ರಚನೆಯು ಹಿಂದೂಗಳ ದೇವಾಲಯಗಳ ರಚನೆಗೆ ವಿರುದ್ಧವಾಗಿದೆ. ಯಹೂದಿ ಸಮುದಾಯವು ಕೇರಳದ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಲಿಲ್ಲ.

ದೇಶೀಯ ವಾಸ್ತುಶಿಲ್ಪ

ಬದಲಾಯಿಸಿ
 
ಕೇರಳದ ವಾಸ್ತುಶಿಲ್ಪದಲ್ಲಿ ಸಂಕೀರ್ಣವಾದ ಮರದ ಕೆತ್ತನೆಗಳು ಮತ್ತು ಚುಟ್ಟು ಜಗುಲಿ
 
ಶ್ರೀ ಪದ್ಮನಾಭಪುರಂ ಅರಮನೆಯು ಅತ್ಯಂತ ಶ್ರೇಷ್ಠ ಕೇರಳದ ದೇಶೀಯ ವಾಸ್ತುಶಿಲ್ಪವನ್ನು ಪ್ರತಿನಿಧಿಸುತ್ತದೆ. ಇಳಿಜಾರು ಛಾವಣಿಗಳು, ಗ್ರಾನೈಟ್ ಮತ್ತು ಬೀಟೆ-ತೇಗದ ಮರದ ಕೆಲಸದ ಸಂಯೋಜನೆಯ ಮೇಲೆ ಮಾಡಿದ ವಿಶ್ವದ ಅತಿದೊಡ್ಡ ಮರದ ಅರಮನೆಯಾಗಿದೆ.

ಕೇರಳದ ದೇಶೀಯ ವಾಸ್ತುಶಿಲ್ಪದ ವಿಕಸನವು ದೇವಾಲಯದ ವಾಸ್ತುಶಿಲ್ಪದಲ್ಲಿನ ಬೆಳವಣಿಗೆಯ ಪ್ರವೃತ್ತಿಯನ್ನು ನಿಕಟವಾಗಿ ಅನುಸರಿಸಿತು. ಪುರಾತನ ಮಾದರಿಗಳು ಬಿದಿರಿನ ಚೌಕಟ್ಟಿನಿಂದ ಮಾಡಿದ ಗುಡಿಸಲುಗಳು, ವೃತ್ತಾಕಾರದ, ಚೌಕ ಅಥವಾ ಆಯತಾಕಾರದ ಸರಳ ಆಕಾರಗಳಲ್ಲಿ ಎಲೆಗಳಿಂದ ಹುಲ್ಲಿನಿಂದ ಮಾಡಲ್ಪಟ್ಟವು. ಎತ್ತರದ ಛಾವಣಿಯೊಂದಿಗೆ ಆಯತಾಕಾರದ ಆಕಾರವು ಅಂತಿಮವಾಗಿ ವಿಕಸನಗೊಂಡಂತೆ ಕಂಡುಬರುತ್ತದೆ. ರಚನಾತ್ಮಕವಾಗಿ ಛಾವಣಿಯ ಚೌಕಟ್ಟನ್ನು ಉಷ್ಣವಲಯದ ಹವಾಮಾನದಲ್ಲಿ ತೇವಾಂಶ ಮತ್ತು ಕೀಟಗಳ ವಿರುದ್ಧ ರಕ್ಷಣೆಗಾಗಿ ನೆಲದಿಂದ ಎತ್ತರಿಸಿದ ಸ್ತಂಭದ ಮೇಲೆ ನಿರ್ಮಿಸಲಾದ ಗೋಡೆಗಳ ಮೇಲಿನ ಕಂಬಗಳ ಮೇಲೆ ಬೆಂಬಲಿಸಲಾಯಿತು. ಆಗಾಗ್ಗೆ ಗೋಡೆಗಳು ಭೂಮಿಯಲ್ಲಿ ಹೇರಳವಾಗಿ ದೊರೆಯುವ ಮರಗಳಿಂದ ಕೂಡಿದ್ದವು. ಮೇಲ್ಛಾವಣಿಯ ಚೌಕಟ್ಟು ಆಧಾರದ ಕೆಳಗಿನ ತುದಿಗಳನ್ನು ಬೆಂಬಲಿಸುವ ಮರದ ದಿಮ್ಮಿಗಳು ಅಥವಾ ಗೋಡೆಯ ಫಲಕವನ್ನು ಒಳಗೊಂಡಿತ್ತು, ಮೇಲಿನ ತುದಿಗಳನ್ನು ಅಂಚಿನ ಮೂಲಕ ಸಂಪರ್ಕಿಸಲಾಗಿದೆ. ಅಂಚಿನ ತುಂಡನ್ನು ಬಿದಿರಿನಂತಹ ಹೊಂದಿಕೊಳ್ಳುವ ವಸ್ತುಗಳಿಂದ ಮಾಡಲ್ಪಟ್ಟಾಗ ಅಂಚಿನ ತೂಕ ಮತ್ತು ಛಾವಣಿಯ ಹೊದಿಕೆಯು ಗಮನಾರ್ಹವಾಗಿ ತಗ್ಗಿತು. ಛಾವಣಿಯ ಚೌಕಟ್ಟಿಗೆ ಬಲವಾದ ಮರವನ್ನು ಬಳಸಿದಾಗಲೂ ಈ ರೀತಿಯ ಛಾವಣಿಯ ನಿರ್ಮಾಣದ ಶಾಶ್ವತ ವಾಗಿ ಉಳಿಯಿತು. ಕೊಠಡಿಯ ಸ್ಥಳಗಳಿಗೆ ಮೇಲ್ಚಾವಣಿಯನ್ನು ಅಳವಡಿಸಿದಾಗ ಬೇಕಾದ ವಾತಾಯನವನ್ನು ಒದಗಿಸಲು ಎರಡು ತುದಿಗಳಲ್ಲಿ ಮತ್ತಷ್ಟು ನವೀನ ಮಾದರಿಯಲ್ಲಿ ಕಿಟಕಿಗಳನ್ನು ವಿಕಸನಗೊಳಿಸಲಾಯಿತು. ಇದು ಛಾವಣಿಯ ಗಾಳಿಯ ಪ್ರಸರಣ ಮತ್ತು ಉಷ್ಣ ನಿಯಂತ್ರಣವನ್ನು ಖಾತ್ರಿಪಡಿಸಿತು. ಆಧಾರದ ಕೆಳಗಿನ ತುದಿಗಳು ಗೋಡೆಗಳ ಆಚೆಗೆ ವಿಸ್ತರಿಸಲ್ಪಟ್ಟು ಗೋಡೆಗಳನ್ನು ಸೂರ್ಯನಿಂದ ಮತ್ತು ಮಳೆಯಿಂದ ರಕ್ಷಿಸುತ್ತವೆ.

ಕೇರಳದ ಮನೆಗಳ ಮುಚ್ಚಿದ ರೂಪವು ತಾಂತ್ರಿಕ ಕಾರಣಳಿಂದ ಕ್ರಮೇಣವಾಗಿ ವಿಕಸನಗೊಂಡಿತು. ದೇವಾಲಯದ ರಚನೆಯೊಂದಿಗೆ ಈ ರೂಪದ ಗಮನಾರ್ಹ ಹೋಲಿಕೆಯನ್ನು ಒಬ್ಬರು ನೋಡಬಹುದು. ಸರಳವಾದ ಅಥವಾ ಕಡಿಮೆ ಅಲಂಕೃತವಾದ ತಳಭಾಗದ ಕೆಳಭಾಗವನ್ನು ಇನ್ನೂ ಆದಿಸ್ಥಾನ ಎಂದು ಕರೆಯಲಾಗುತ್ತದೆ. ಸ್ತಂಭಗಳು ಅಥವಾ ಕಂಬಗಳು ಮತ್ತು ವೀಥಿಗಳು ಅಥವಾ ಗೋಡೆಗಳು ಮತ್ತೆ ಯಾವುದೇ ಪ್ರಕ್ಷೇಪಣಳಿಲ್ಲದೆ ಸರಳವಾದ ಆಕಾರವನ್ನು ಹೊಂದಿವೆ. ಮುಖ್ಯ ಬಾಗಿಲು ಒಂದು ನಿರ್ದಿಸ್ಟ ದಿಕ್ಕಿಗೆ ಮಾತ್ರ ಮುಖಮಾಡುತ್ತದೆ ಮತ್ತು ಕಿಟಕಿಗಳು ಚಿಕ್ಕದಾಗಿದೆ ಮತ್ತು ಮರದ ಚುಚ್ಚಿದ ಪರದೆಯಂತೆ ಮಾಡಲ್ಪಟ್ಟಿದೆ. ಆಯತಾಕಾರದ ಯೋಜನೆಯನ್ನು ಸಾಮಾನ್ಯವಾಗಿ ಮುಂಭಾಗದ ಹಾದಿಯಿಂದ ಪ್ರವೇಶದೊಂದಿಗೆ ಎರಡು ಅಥವಾ ಮೂರು ಚಟುವಟಿಕೆ ಕೊಠಡಿಗಳಾಗಿ ವಿಂಗಡಿಸಲಾಗಿದೆ. ಪ್ರಕ್ಷೇಪಿತ ಬಾಗಿದ ಆಕಾರಗಳು ಸುತ್ತಲೂ ಜಗುಲಿಯನ್ನು ಆವರಿಸುತ್ತವೆ. ಹತ್ತನೇ ಶತಮಾನದ ವೇಳೆಗೆ, ದೇಶೀಯ ವಾಸ್ತುಶಿಲ್ಪದ ಸಿದ್ಧಾಂತ ಮತ್ತು ಅಭ್ಯಾಸವನ್ನು ಮನುಷ್ಯಾಲಯ ಚಂದ್ರಿಕಾ ಮತ್ತು ವಾಸ್ತು ವಿದ್ಯಾ ಮುಂತಾದ ಪುಸ್ತಕಗಳಲ್ಲಿ ಕ್ರೋಡೀಕರಿಸಲಾಯಿತು. ಈ ಪ್ರಯತ್ನವು ವಿವಿಧ ಸಾಮಾಜಿಕ-ಆರ್ಥಿಕ ಗುಂಪುಗಳಿಗೆ ಸೂಕ್ತವಾದ ಮನೆ ನಿರ್ಮಾಣವನ್ನು ಮಾಡಲು ಅನುಕೂಲವಾಯಿತು ಮತ್ತು ಕುಶಲಕರ್ಮಿಗಳಲ್ಲಿ ನಿರ್ಮಾಣ ಸಂಪ್ರದಾಯವನ್ನು ಬಲಪಡಿಸಿತು. ಸಾಂಪ್ರದಾಯಿಕ ಕುಶಲಕರ್ಮಿಗಳು, ವಿಶೇಷವಾಗಿ ಬಡಗಿಗಳು, ವಿವಿಧ ಅಂಶಗಳ ಅನುಪಾತದ ಅಂಗೀಕೃತ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಜ್ಞಾನವನ್ನು ಸಂರಕ್ಷಿಸಿದ್ದಾರೆ ಮತ್ತು ಇಂದಿಗೂ ನಿರ್ಮಾಣ ವಿವರಗಳನ್ನು ಹೊಂದಿದ್ದಾರೆ.

 
ಕೇರಳದ ಅರಮನೆಗಳಲ್ಲಿ ಮಾಡಿನ ಸಾಂಪ್ರದಾಯಿಕ ಅಲಂಕಾರಗಳು

ಮೂಲತಃ ಕೇರಳದ ದೇಶೀಯ ವಾಸ್ತುಶಿಲ್ಪವು ಬೇರ್ಪಟ್ಟ ಕಟ್ಟಡದ ಶೈಲಿಯನ್ನು ಅನುಸರಿಸುತ್ತದೆ; ಭಾರತದ ಇತರ ಭಾಗಗಳಲ್ಲಿ ಕಂಡುಬರುವ ಸಾಲು ಮನೆಗಳನ್ನು ತಮಿಳು ಅಥವಾ ಕೊಂಕಣಿ ಬ್ರಾಹ್ಮಣರು ಆಕ್ರಮಿಸಿಕೊಂಡಿರುವ ವಸಾಹತುಗಳಲ್ಲಿ (ಸಂಕೇತಂ) ಹೊರತುಪಡಿಸಿ ಕೇರಳ ಪಠ್ಯಗಳಲ್ಲಿ ಉಲ್ಲೇಖಿಸಲಾಗಿಲ್ಲ ಅಥವಾ ಆಚರಣೆಯಲ್ಲಿ ಇರಿಸಲಾಗಿಲ್ಲ. ಅದರ ಅತ್ಯಂತ ಅಭಿವೃದ್ಧಿ ಹೊಂದಿದ ರೂಪದಲ್ಲಿ ವಿಶಿಷ್ಟವಾದ ಕೇರಳದ ಮನೆಯು ಅಂಗಳದ ಪ್ರಕಾರವಾಗಿದೆ - ನಾಲುಕೆಟ್ಟು. ಕೇಂದ್ರ ಪ್ರಾಂಗಣವು ಹೊರಾಂಗಣ ವಾಸಸ್ಥಳವಾಗಿದ್ದು, ತುಳಸಿ ಅಥವಾ ಮಲ್ಲಿಗೆ (ಮುಲ್ಲತಾರಾ) ಗಾಗಿ ಎತ್ತರದ ಹಾಸಿಗೆಯಂತಹ ಆರಾಧನೆಯ ಕೆಲವು ವಸ್ತುಗಳನ್ನು ಇರಿಸಬಹುದು. ದೇವಾಲಯದ ನಾಲಂಬಲಕ್ಕೆ ಸಮಾನವಾದ ಪ್ರಾಂಗಣವನ್ನು ಸುತ್ತುವರಿದ ನಾಲ್ಕು ಸಭಾಂಗಣಗಳನ್ನು ಅಡುಗೆ, ಊಟ, ಮಲಗುವುದು, ಅಧ್ಯಯನ, ಧಾನ್ಯಗಳ ಸಂಗ್ರಹ ಮುಂತಾದ ವಿವಿಧ ಚಟುವಟಿಕೆಗಳಿಗಾಗಿ ಹಲವಾರು ಕೋಣೆಗಳಾಗಿ ವಿಂಗಡಿಸಬಹುದು. ಮನೆಯ ಗಾತ್ರ ಮತ್ತು ಪ್ರಾಮುಖ್ಯತೆಯ ಆಧಾರದ ಮೇಲೆ ಕಟ್ಟಡವು ಒಂದು ಅಥವಾ ಎರಡು ಮೇಲಿನ ಅಂತಸ್ತಿನ (ಮಾಲಿಕಾ) ಅಥವಾ ಮತ್ತಷ್ಟು ಸುತ್ತುವರಿದ ಅಂಗಳವನ್ನು ಪುನರಾವರ್ತನೆ ಮಾಡುವ ಮೂಲಕ ನಾಲ್ಕುಕೆಟ್ಟುಗಳನ್ನು (ಎಂಟು ಸಭಾಂಗಣದ ಕಟ್ಟಡ) ಅಥವಾ ಅಂತಹ ಅಂಗಳಗಳ ಸಮೂಹವನ್ನು ರೂಪಿಸಬಹುದು.

ನಾಲುಕೆಟ್ಟು

ಬದಲಾಯಿಸಿ
 
ಕೇರಳ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಕೇರಳದ ಶ್ರೇಷ್ಠ ನಾಲುಕೆಟ್ಟು

ನಾಲುಕೆಟ್ಟು ತರವಾಡುವಿನ ಸಾಂಪ್ರದಾಯಿಕ ನೆಲೆಯಾಗಿದ್ದು, ಮಾತೃವಂಶದ ಕುಟುಂಬದ ಹಲವು ತಲೆಮಾರುಗಳು ವಾಸಿಸುತ್ತಿದ್ದವು. ಈ ರೀತಿಯ ಕಟ್ಟಡಗಳು ಸಾಮಾನ್ಯವಾಗಿ ಭಾರತದ ಕೇರಳ ರಾಜ್ಯದಲ್ಲಿ ಕಂಡುಬರುತ್ತವೆ. ಸಾಂಪ್ರದಾಯಿಕ ವಾಸ್ತುಶೈಲಿಯು ವಿಶಿಷ್ಟವಾಗಿ ಒಂದು ಆಯತಾಕಾರದ ರಚನೆಯಾಗಿದ್ದು, ಇಲ್ಲಿ ನಾಲ್ಕು ವಿಭಾಗಗಳು ಆಕಾಶಕ್ಕೆ ತೆರೆದಿರುವ ಕೇಂದ್ರ ಪ್ರಾಂಗಣದೊಂದಿಗೆ ಒಟ್ಟಿಗೆ ಸೇರಿಕೊಳ್ಳುತ್ತವೆ. ಬದಿಯಲ್ಲಿರುವ ನಾಲ್ಕು ಸಭಾಂಗಣಗಳಿಗೆ ವಡಕ್ಕಿಣಿ (ಉತ್ತರ ಬ್ಲಾಕ್), ಪಡಿಂಜತ್ತಿನಿ (ಪಶ್ಚಿಮ ಬ್ಲಾಕ್), ಕಿಜಕ್ಕಿಣಿ (ಪೂರ್ವ ಬ್ಲಾಕ್) ಮತ್ತು ತೆಕ್ಕಿಣಿ (ದಕ್ಷಿಣ ಬ್ಲಾಕ್) ಎಂದು ಹೆಸರಿಸಲಾಗಿದೆ. ಸಾಂಪ್ರದಾಯಿಕ ತರವಾಡುವಿನ ದೊಡ್ಡ ಕುಟುಂಬಗಳಿಗೆ, ಒಂದೇ ಸೂರಿನಡಿ ವಾಸಿಸಲು ಮತ್ತು ಸಾಮಾನ್ಯ ಸ್ವಾಮ್ಯದ ಸೌಲಭ್ಯಗಳನ್ನು ಆನಂದಿಸಲು ಮಾತೃವಂಶದ ಮನೆಯಲ್ಲಿ ಈ ವಾಸ್ತುಶಿಲ್ಪವನ್ನು ವಿಶೇಷವಾಗಿ ಒದಗಿಸಲಾಗಿದೆ. []

ನಾಲುಕೆಟ್ಟುವಿನ ಅಂಶಗಳು
ಬದಲಾಯಿಸಿ
  • ಪಡಿಪ್ಪುರ

ಇದು ಮನೆಯ ಕಾಂಪೌಂಡ್ ಗೋಡೆಯ ಭಾಗವನ್ನು ರೂಪಿಸುವ ಬಾಗಿಲನ್ನು ಹೊಂದಿರುವ ರಚನೆಯಾಗಿದ್ದು, ಮೇಲ್ಭಾಗದಲ್ಲಿ ಹೆಂಚಿನ ಛಾವಣಿಯಿದೆ. ಇದು ಮನೆಯೊಂದಿಗೆ ಕಾಂಪೌಂಡ್‌ಗೆ ಔಪಚಾರಿಕ ಪ್ರವೇಶವಾಗಿದೆ. ಪ್ರಸ್ತುತ ಕಾರು ಪ್ರವೇಶದ ಮೂಲಕ ಮನೆಯೊಳಗೆ ಪ್ರವೇಶಿಸಬೇಕಾಗಿರುವುದರಿಂದ ಇವಕ್ಕೆ ಬಾಗಿಲು ಇಲ್ಲ. ಇನ್ನೂ ಹಂಚಿನ ಮೇಲ್ಛಾವಣಿಯನ್ನು, ಮೇಲ್ಛಾವಣಿಯ ಕೆಳಗೆ ಸಾಂಪ್ರದಾಯಿಕ ವಿಧದ ದೀಪದೊಂದಿಗೆ ಆದ್ಯತೆ ನೀಡಲಾಗುತ್ತದೆ. ಪ್ರವೇಶದ ಬಾಗಿಲಿನ ಬದಲಾಗಿ, ನಾವು ಈಗ ಕಬ್ಬಿಣದ ದ್ವಾರ ಹೊಂದಿದ್ದೇವೆ.

  • ಪೂಮುಖಂ

ಮನೆಗೆ ಹೆಜ್ಜೆ ಹಾಕಿದ ಕೂಡಲೇ ಇದು ಪ್ರಧಾನ ಹೊರಂಗಣ . ಸಾಂಪ್ರದಾಯಿಕವಾಗಿ ಇದು ಇಳಿಜಾರಿನ ಹೆಂಚುಗಳ ಮೇಲ್ಛಾವಣಿಯನ್ನು ಹೊಂದಿದ್ದು, ಮೇಲ್ಛಾವಣಿಯನ್ನು ಬೆಂಬಲಿಸುವ ಕಂಬಗಳನ್ನು ಹೊಂದಿದೆ. ಬದಿಗಳು ತೆರೆದಿರುತ್ತವೆ. ಹಿಂದಿನ ದಿನಗಳಲ್ಲಿ, ಕರಣವರ್ ಎಂಬ ಕುಟುಂಬದ ಮುಖ್ಯಸ್ಥರು ಇಲ್ಲಿ ಕುರ್ಚಿಯ ಪಕ್ಕದಲ್ಲಿ ಪೀಕುದಾನಿಯ (ಸ್ಪಿಟ್ಟೂನ್) ಜೊತೆ ಒರಗುವ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಈ ಕುರ್ಚಿಯು ಎರಡೂ ಬದಿಗಳಲ್ಲಿ ಉದ್ದವಾದ ತೋಳಾಶ್ರಯಗಳನ್ನು ಹೊಂದಿರುತ್ತದೆ, ಅಲ್ಲಿ ಕರಣವರ್ ಆರಾಮದಾಯಕ ವಿಶ್ರಾಂತಿಗಾಗಿ ತನ್ನ ಕಾಲುಗಳನ್ನು ಮೇಲಕ್ಕೆತ್ತಿ ಇಡುತ್ತಾನೆ

  • ಚುಟ್ಟು ವರಾಂಡ
 
ಕೃಷ್ಣಾಪುರಂ ಅರಮನೆಯ ಮರದ ವಿಶಿಷ್ಟ ಕಿಟಕಿಗಳು

ಪೂಮುಖದಿಂದ, ಚುಟ್ಟು ವೆರಾಂಡಾ ಎಂಬ ತೆರೆದ ಹಾದಿಯ ಮೂಲಕ ಮನೆಯ ಮುಂದೆ ಎರಡೂ ಬದಿಗೆ ಒಂದು ಜಗುಲಿ. ಚುಟ್ಟು ವರಾಂಡವು ಅದರ ಇಳಿಜಾರಿನ ಛಾವಣಿಯಿಂದ ಸಮಾನ ಅಂತರದಲ್ಲಿ ನೇತಾಡುವ ದೀಪಗಳನ್ನು ಹೊಂದಿರುತ್ತದೆ.

  • ಚಾರುಪಾದಿ
 
ಕೇರಳದ ವಿಶಿಷ್ಟವಾದ ಮರದ ಕಿಟಕಿಗಳು ಮತ್ತು ಚಾರುಪಾದಿ

ಚುಟ್ಟು ಜಗುಲಿ ಮತ್ತು ಪೂಮುಖಂನ ಬದಿಯಲ್ಲಿ, ಬೆನ್ನಿನ ವಿಶ್ರಾಂತಿಗಾಗಿ ಕೆತ್ತಿದ ಅಲಂಕಾರಿಕ ವಿಶ್ರಾಂತಿ ಮರದ ತುಂಡುಗಳೊಂದಿಗೆ ಮರದ ಬೆಂಚುಗಳನ್ನು ಒದಗಿಸಲಾಗಿದೆ. ಇದನ್ನು ಚಾರುಪಾದಿ ಎನ್ನುತ್ತಾರೆ. ಸಾಂಪ್ರದಾಯಿಕವಾಗಿ ಕುಟುಂಬದ ಸದಸ್ಯರು ಅಥವಾ ಸಂದರ್ಶಕರು ಮಾತನಾಡಲು ಈ ಚಾರುಪಾದಿಯ ಮೇಲೆ ಕುಳಿತುಕೊಳ್ಳುತ್ತಿದ್ದರು

  • ಅಂಬಲ್ ಕುಲಂ (ಕೊಳ)
 
ಪ್ರತಿಯೊಂದು ನಲುಕೆಟ್ಟು ತನ್ನ ಸದಸ್ಯರ ಸ್ನಾನಕ್ಕಾಗಿ ತನ್ನದೇ ಆದ ಕೊಳವನ್ನು ಹೊಂದಿದೆ.

ಚುಟ್ಟು ವರಾಂಡದ ಕೊನೆಯಲ್ಲಿ ಕಮಲ ಅಥವಾ ಅಂಬಲವನ್ನು ನೆಡುವ ಬದಿಗಳಲ್ಲಿ ಕಲ್ಲುಮಣ್ಣುಗಳಿಂದ ನಿರ್ಮಿಸಲಾದ ಸಣ್ಣ ಕೊಳವಿತ್ತು. ಒಳಗೆ ಸಂಶ್ಲೇಷಿತ ಶಕ್ತಿಯ ಹರಿವಿಗೆ ಜಲಮೂಲಗಳನ್ನು ನಿರ್ವಹಿಸಲಾಗುತ್ತದೆ.

  • ನಡುಮುಟ್ಟಂ
 
ಕೇರಳದ ನಾಲುಕೆಟ್ಟು ವಿಶಿಷ್ಟವಾದ ನಡುಮುಟ್ಟಂ

ಸಾಂಪ್ರದಾಯಿಕವಾಗಿ ನಡುಮುಟ್ಟಂ ಅಥವಾ ಮಧ್ಯದ ತೆರೆದ ಅಂಗಳವು ನಾಲುಕೆಟ್ಟು ಪ್ರಧಾನ ಕೇಂದ್ರವಾಗಿದೆ. ಮನೆಯನ್ನು ಅದರ ನಾಲ್ಕು ಬದಿಗಳಲ್ಲಿ ವಿಭಜಿಸುವ ಮನೆಯ ನಿಖರವಾದ ಮಧ್ಯದಲ್ಲಿ ಸಾಮಾನ್ಯವಾಗಿ ಚೌಕಾಕಾರದ ತೆರೆದ ಪ್ರದೇಶವಿದೆ. ಇದರಿಂದಾಗಿ ನಡುಮುಟ್ಟನ್ನು ಹೊಂದುವ ಮೂಲಕ ಮನೆಯ ನಾಲ್ಕು ಕಡೆ ವಿಭಾಗ. ಅದೇ ರೀತಿ ಎಟ್ಟು ಕೆಟ್ತ್ತು ಮತ್ತು ಪತ್ತಿನಾರು ಕೆಟ್ತ್ತುಗಳು ಕ್ರಮವಾಗಿ ಎರಡು ಮತ್ತು ನಾಲ್ಕು ನಡುಮುಟ್ಟಮ್ ಗಳೊಂದಿಗೆ ಸಾಕಷ್ಟು ಅಪರೂಪವಾಗಿವೆ.

 
ಅದರ ಮಧ್ಯದಲ್ಲಿ ಪವಿತ್ರ ತುಳಸಿಯೊಂದಿಗೆ ಸಾಂಪ್ರದಯಿಕಾ ನಡುಮುಟ್ಟಂ

ನಡುಮುಟ್ಟಂ ಸಾಮಾನ್ಯವಾಗಿ ಆಕಾಶಕ್ಕೆ ತೆರೆದುಕೊಳ್ಳುತ್ತದೆ, ಬಿಸಿಲು ಮತ್ತು ಮಳೆ ಸುರಿಯಲು ಅನುವು ಮಾಡಿಕೊಡುತ್ತದೆ. ಇದು ನೈಸರ್ಗಿಕ ಶಕ್ತಿಗಳನ್ನು ಮನೆಯೊಳಗೆ ಪರಿಚಲನೆ ಮಾಡಲು ಮತ್ತು ಧನಾತ್ಮಕ ಕಂಪನವನ್ನು ಅನುಮತಿಸುತ್ತದೆ. ತುಳಸಿ ಅಥವಾ ಮರವನ್ನು ಸಾಮಾನ್ಯವಾಗಿ ನಡುಮುಟ್ಟಂನ ಮಧ್ಯದಲ್ಲಿ ನೆಡಲಾಗುತ್ತದೆ, ಇದನ್ನು ಪೂಜಿಸಲು ಬಳಸಲಾಗುತ್ತದೆ. ವಾಸ್ತುಶಾಸ್ತ್ರದ ತರ್ಕವು ಮರವು ನೈಸರ್ಗಿಕ ಗಾಳಿ ಶುದ್ಧಿಕಾರಕವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

  • ಪೂಜಾ ಕೊಠಡಿ

ಪೂಜಾ ಕೋಣೆ ಮನೆಯ ಈಶಾನ್ಯ ಮೂಲೆಯಲ್ಲಿರಬೇಕು. ವಿಗ್ರಹಗಳನ್ನು ಪೂರ್ವ ಅಥವಾ ಪಶ್ಚಿಮಕ್ಕೆ ಎದುರಾಗಿ ಇರಿಸಬಹುದು ಮತ್ತು ಪ್ರಾರ್ಥನೆ ಮಾಡುವ ವ್ಯಕ್ತಿಯು ಕ್ರಮವಾಗಿ ಪಶ್ಚಿಮ ಅಥವಾ ಪೂರ್ವಕ್ಕೆ ಮುಖ ಮಾಡಬಹುದು. ಪ್ರಸ್ತುತ, ಪೂಜಾ ಕೋಣೆಯ ಗೋಡೆಗಳ ಮೇಲೆ ಮರದ ಫಲಕಗಳನ್ನು ಮಾಡಲಾಗುತ್ತದೆ ಮತ್ತು ಸಾಂಪ್ರದಾಯಿಕ ಪೂಜಾ ಕೊಠಡಿಯನ್ನು ಹೊಂದಲು ಆಸಕ್ತಿ ಹೊಂದಿರುವ ಗ್ರಾಹಕರಿಗೆ ನೀಡಬಹುದಾದ ಪೂಜಾ ಕೋಣೆಗೆ ಪ್ರಮಾಣಿತ ವಿನ್ಯಾಸವಿದೆ.

ಪ್ರಮುಖ ಲಕ್ಷಣಗಳು
ಬದಲಾಯಿಸಿ
 
ಕನಕಕ್ಕುನ್ನು ಅರಮನೆಯ ಹೊರಭಾಗವನ್ನು ಕೇರಳ ಶೈಲಿಯಲ್ಲಿ ಡಚ್ಚರ ಪ್ರಭಾವದಿಂದ ನಿರ್ಮಿಸಲಾಗಿದೆ

ಸಂಪೂರ್ಣ ಆವರಣ ಗೋಡೆ ಅಥವಾ ಬೇಲಿಯಿಂದ ರಕ್ಷಿಸಲಾಗಿದೆ. ದೇವಾಲಯದ ಗೋಪುರದಂತೆ ಪ್ರವೇಶ ರಚನೆಯನ್ನು (ಪಡಿಪ್ಪುರ) ಕೂಡ ನಿರ್ಮಿಸಬಹುದು. ಮುಖ್ಯ ಮನೆಯಲ್ಲಿ ಅತಿಥಿಗಳು ಅಥವಾ ಸಾಂದರ್ಭಿಕ ಸಂದರ್ಶಕರಿಗೆ ಇದು ಒಂದು ಅಥವಾ ಎರಡು ಕೊಠಡಿಗಳನ್ನು ಹೊಂದಿರಬಹುದು. ಕಾಂಪೌಂಡ್ ಗೋಡೆಯೊಳಗಿನ ಮರಗಳು ಮತ್ತು ಮಾರ್ಗಗಳ ಸ್ಥಳ ಸೇರಿದಂತೆ ವಿವಿಧ ಕಟ್ಟಡಗಳ ಸ್ಥಾನ ಮತ್ತು ಗಾತ್ರಗಳನ್ನು ಸಾಂಪ್ರದಾಯಿಕ ಪಠ್ಯಗಳಲ್ಲಿ ನಿರ್ಧರಿಸಿದಂತೆ ವಾಸ್ತು ವಿಶ್ಲೇಷಣೆಯಿಂದ ನಿರ್ಧರಿಸಲಾಗುತ್ತದೆ. ಈ ವಿಶ್ಲೇಷಣೆಯು ವಾಸ್ತುಪುರುಷ ಮಂಡಲದ ಪರಿಕಲ್ಪನೆಯನ್ನು ಒಳಗೊಂಡಿತ್ತು, ಇದರಲ್ಲಿ ಸ್ಥಳ (ವಾಸ್ತು) ಅನ್ನು ವಿವಿಧ ದೇವತೆಗಳು (ದೇವತೆ) ನೆಲೆಸಿರುವ ಹಲವಾರು ಭಾಗಗಳಾಗಿ (ಪದಂ) ವಿಂಗಡಿಸಲಾಗಿದೆ ಮತ್ತು ಅನುಮಾನಾಸ್ಪದ ರಚನೆಗಳನ್ನು ಇರಿಸಲು ಸೂಕ್ತವಾದ ಭಾಗಗಳನ್ನು ಆಯ್ಕೆ ಮಾಡಲಾಗಿದೆ. ಜ್ಯೋತಿಷ್ಯ ಮತ್ತು ಅತೀಂದ್ರಿಯ ವಿಜ್ಞಾನಗಳೊಂದಿಗೆ ತಾಂತ್ರಿಕ ವಿಷಯಗಳನ್ನು ಸಂಯೋಜಿಸಿ ಕಲಿತ ವಿಶ್ವಕರ್ಮ ಸ್ಥಪತಿಗಳು (ಮಾಸ್ಟರ್ ಬಿಲ್ಡರ್ಸ್) ಸ್ಥಳ (ವಾಸ್ತು) ಯೋಜನೆ ಮತ್ತು ಕಟ್ಟಡ ವಿನ್ಯಾಸವನ್ನು ಮಾಡಿದರು.

ಕೇರಳದ ವಿವಿಧ ಭಾಗಗಳಲ್ಲಿ ನಾಲುಕೆಟ್ಟು ಮಾದರಿಯ ಹಲವಾರು ಕಟ್ಟಡಗಳಿವೆ, ಆದರೆ ಅವುಗಳಲ್ಲಿ ಹಲವು ಕಳಪೆ ನಿರ್ವಹಣೆಯಲ್ಲಿವೆ. ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ದೊಡ್ಡ ನಾಲುಕೆಟ್ಟು ಕೇಂದ್ರೀಕೃತವಾದ ಅವಿಭಕ್ತ-ಕುಟುಂಬ ವ್ಯವಸ್ಥೆಯನ್ನು ವಿಭಜಿಸಿವೆ. ಆರ್ಯ ವೈದ್ಯಶಾಲಾಗೆ ಸೇರಿದ ಕೊಟ್ಟಕ್ಕಲ್‌ನಲ್ಲಿರುವ ಕೈಲಾಸ ಮಂದಿರವು ಮೂರು ಅಂತಸ್ತಿನ ನಾಲುಕೆಟ್ಟು ಸಂಕೀರ್ಣಕ್ಕೆ ಒಂದು ನಿಂತಿರುವ ಉದಾಹರಣೆಯಾಗಿದೆ. ಈ ಪ್ರಕಾರದ ಅತ್ಯುತ್ತಮ ಸಂರಕ್ಷಿತ ಉದಾಹರಣೆಗಳೆಂದರೆ ಕೊಚ್ಚಿಯಲ್ಲಿರುವ ಮಟ್ಟಂಚೇರಿ ಅರಮನೆ ಮತ್ತು ಕನ್ಯಾಕುಮಾರಿ ಬಳಿಯ ಪದ್ಮನಾಭಪುರಂ ಅರಮನೆಯ ತೈಕೊಟ್ಟಾರಂ.

ನಾಲುಕೆಟ್ಟು ಮಾದರಿಯ ಕಟ್ಟಡಗಳು ಅನೇಕ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಕಂಡುಬರುತ್ತವೆ, ಪ್ರಮುಖ ವ್ಯಕ್ತಿಗಳು ಇಲ್ಲಿ ನೆಲಸಿ ದ್ದಾರೆ. ಸಾಮಾನ್ಯ ಜನಸಂಖ್ಯೆಯ ಕಟ್ಟಡಗಳು ಚಿಕ್ಕದಾಗಿರುತ್ತವೆ ಮತ್ತು ರೂಪದಲ್ಲಿ ಸರಳವಾಗಿರುತ್ತವೆ ಆದರೆ ಅವನ್ನು ಮೂಲತಃ ನಾಲುಕೆಟ್ಟುಗಳಿಂದ ಪಡೆಯಲಾಗಿದೆ. ನಾಲುಕೆಟ್ಟು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಸಭಾಂಗಣಗಳ ಸಂಯೋಜನೆಯಾಗಿದ್ದು, ಅಂಗಣ ಅಥವಾ ಅಂಗನವನ್ನು ಕೇಂದ್ರೀಕರಿಸಿ ನಾಲ್ಕು ಸಭಾಂಗಣಗಳಲ್ಲಿ ಯಾವುದಾದರೂ ಒಂದನ್ನು (ಏಕಸಲ), ಎರಡು (ದ್ವಿಶಾಲ) ಅಥವಾ ಮೂರು (ತ್ರಿಸಲ) ಸಂಕೀರ್ಣವನ್ನು ಅಗತ್ಯಗಳಿಗೆ ಅನುಗುಣವಾಗಿ ನಿರ್ಮಿಸಬಹುದು. . ಕೇರಳದಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಕಾರವೆಂದರೆ ಪೂರ್ವ ಅಥವಾ ಉತ್ತರಕ್ಕೆ ಎದುರಾಗಿರುವ ಏಕಸಲ. ಅಂಗನದ ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ನೆಲೆಗೊಂಡಿರುವುದರಿಂದ ಅವುಗಳನ್ನು ಕ್ರಮವಾಗಿ ಪಶ್ಚಿಮ ಸಭಾಂಗಣ (ಪಡಿಂಜಟ್ಟಿನಿ) ಮತ್ತು ದಕ್ಷಿಣ ಸಭಾಂಗಣ (ತೆಕ್ಕಿಣಿ) ಎಂದು ಕರೆಯಲಾಗುತ್ತದೆ.

ಏಕಸಲದ ಪ್ರಮುಖ ಘಟಕವು ಸಾಮಾನ್ಯವಾಗಿ ಮುಂಭಾಗದ ಮಾರ್ಗಕ್ಕೆ ಸಂಪರ್ಕ ಹೊಂದಿದ ಮೂರು ಕೋಣೆಗಳನ್ನು ಒಳಗೊಂಡಿದೆ. ಮಧ್ಯದ ಕೋಣೆಯನ್ನು ಪ್ರಾರ್ಥನಾ ಕೊಠಡಿ ಮತ್ತು ಧಾನ್ಯದ ಅಂಗಡಿಯಾಗಿ ಬಳಸಲಾಗುತ್ತದೆ ಮತ್ತು ಎರಡು ಬದಿಯ ಕೋಣೆಗಳನ್ನು ವಾಸಿಸುವ ಕೋಣೆಗಳಾಗಿ ಬಳಸಲಾಗುತ್ತದೆ. ಪ್ರಮುಖ ಘಟಕವನ್ನು ಮುಂಭಾಗದ ಹಾದಿಯಲ್ಲಿರುವ ಕಡಿದಾದ ಮೆಟ್ಟಿಲುಗಳೊಂದಿಗೆ ಮೇಲಿನ ಮಹಡಿಗೆ ಏರಿಸಬಹುದು. ಅಡುಗೆ, ಊಟ, ಹೆಚ್ಚುವರಿ ಮಲಗುವ ಕೋಣೆಗಳು ಮತ್ತು ಅತಿಥಿಗಳನ್ನು ಸ್ವೀಕರಿಸಲು ಮುಂಭಾಗದ ಸಭಾಂಗಣ. ಇತರ ಚಟುವಟಿಕೆಗಳಿಗಾಗಿ ಪಕ್ಕದ ಕೋಣೆಗಳನ್ನು ಸೇರಿಸುವ ಮೂಲಕ ಕಟ್ಟಡವನ್ನು ಎಲ್ಲಾ ನಾಲ್ಕು ಬದಿಗಳಲ್ಲಿಯೂ ಅಡ್ಡಲಾಗಿ ವಿಸ್ತರಿಸಬಹುದು. ಚಿರಕ್ಕಡವುನಲ್ಲಿರುವ ಚಪ್ಪಮಟ್ಟಂ ತರವಾಡು ವಿಸ್ತೃತ ಏಕಸಲದ ಶಾಸ್ತ್ರೀಯ ಉದಾಹರಣೆಯಾಗಿದೆ. ಅಗತ್ಯವಿದ್ದಲ್ಲಿ ದನಗಳ ಸಾಕಾಣಿಕೆಗೆ ಪೂರಕ ಕಟ್ಟಡಗಳು, ಕೊಟ್ಟಿಗೆ, ತೊಟ್ಟಿಗಳ ಬಳಿ ಸ್ನಾನದ ಕೋಣೆಗಳು, ಅತಿಥಿಗಳಿಗಾಗಿ ಸಣ್ಣ ಹೊರಕೋಣೆ, ಗುಡಿಸಲುಗಳು ಇತ್ಯಾದಿಗಳನ್ನು ಏಕಸಾಲಾ ಒದಗಿಸಬಹುದು. ಅಂತಹ ವಿಸ್ತರಣೆಯಿಂದ ಕಟ್ಟಡವು ಜಾಗದಲ್ಲಿ ನಾಲುಕೆಟ್ಟುಗಿಂತ ದೊಡ್ಡದಾಗಬಹುದು, ಆದರೆ ಅದರ ಮೂಲ ಘಟಕವನ್ನು ಉಲ್ಲೇಖಿಸಿ ಅದನ್ನು ಇನ್ನೂ ಏಕಸಲ ಎಂದು ವರ್ಗೀಕರಿಸಲಾಗಿದೆ.

ವಾಸ್ತುವಿದ್ಯಾ ಪಠ್ಯಗಳು ವಿವಿಧ ವರ್ಗಗಳಿಗೆ ಸೂಕ್ತವಾದ ವಿವಿಧ ಮನೆಗಳ ಆಯಾಮಗಳನ್ನು ಸೂಚಿಸುತ್ತವೆ. ಅವರು ಕಟ್ಟಡದ ವಿವಿಧ ಭಾಗಗಳಿಗೆ ಮಾಪನಗಳ ಅನುಪಾತದ ವ್ಯವಸ್ಥೆಯನ್ನು ಮೂಲ ಘಟಕದ ಪರಿಧಿಯ (ಚುಟ್ಟು) ಆಧಾರದ ಮೇಲೆ ನೀಡುತ್ತಾರೆ. ಈ ಆಯಾಮದ ವ್ಯವಸ್ಥೆಯ ವೈಜ್ಞಾನಿಕ ಆಧಾರವನ್ನು ಆಧುನಿಕ ಅಧ್ಯಯನಗಳು ಇನ್ನೂ ತಿಳಿಯಬೇಕಾಗಿದೆ; ಆದಾಗ್ಯೂ ವ್ಯವಸ್ಥೆಯು ಸಾಂಪ್ರದಾಯಿಕ ಲೆಕಾಚಾರದ ವಿಧಾನಗಳ ಮೇಲೆ ಉತ್ತಮವಾಗಿ ಸ್ಥಾಪಿತವಾಗಿದೆ ಮತ್ತು ಎಲ್ಲಾ ಗಾತ್ರದ ಕಟ್ಟಡಗಳಿಗೆ ಕಟ್ಟುನಿಟ್ಟಾಗಿ ಒಪ್ಪುತ್ತದೆ. ಕೇರಳದಾದ್ಯಂತ ಮತ್ತು ವಿಶೇಷವಾಗಿ ಸಾಂಪ್ರದಾಯಿಕ ಸ್ತಪಥಿಗಳ ನಿಯಂತ್ರಣದಲ್ಲಿ ಕಟ್ಟಡ ಚಟುವಟಿಕೆಗಳನ್ನು ನಡೆಸುತ್ತಿರುವ ಹಳ್ಳಿಗಳಲ್ಲಿ, ಈ ವ್ಯವಸ್ಥೆಯು ಇನ್ನೂ ಜೀವಂತ ಅಭ್ಯಾಸವಾಗಿದೆ, ಆದರೂ ಅದು 'ಆಧುನಿಕ ವಾಸ್ತುಶಿಲ್ಪ'ದ ಪ್ರಭಾವದಿಂದ ಕಣ್ಮರೆಯಾಗಲು ಪ್ರಾರಂಭಿಸಿದೆ.

ನಾಲುಕೆಟ್ಟು ವಿಧಗಳು
ಬದಲಾಯಿಸಿ

ನಲುಕೆಟ್ಟುಗಳನ್ನು ರಚನೆಯ ಪ್ರಕಾರ ಮತ್ತು ಅದರ ನಿವಾಸಿಗಳ ಜಾತಿಯ ಆಧಾರದ ಮೇಲೆ ಪ್ರತ್ಯೇಕಿಸಬಹುದು.

ರಚನೆಯ ಆಧಾರದ ಮೇಲೆ
ಬದಲಾಯಿಸಿ
 
ಮಟ್ಟನೂರಿನಲ್ಲಿರುವ ಎಟ್ಟುಕೆಟ್ಟು ವಾಸ್ತುಶಿಲ್ಪವನ್ನು ನೋಡುತ್ತಿರುವ ಕೊರಿಯನ್ ಪ್ರವಾಸಿಗರು

ನಾಲುಕೆಟ್ಟುಗಳನ್ನು ಪ್ರಾಥಮಿಕವಾಗಿ ಅವುಗಳ ರಚನೆಯ ಆಧಾರದ ಮೇಲೆ ಪ್ರತ್ಯೇಕಿಸಲಾಗಿದೆ. ಸಾಂಪ್ರದಾಯಿಕವಾಗಿ ನಲುಕೆಟ್ಟು ಒಂದು ಪ್ರಾಂಗಣವನ್ನು ಹೊಂದಿದ್ದು ಅದರ ಸುತ್ತಲೂ ನಿರ್ದಿಷ್ಟ ದಿಕ್ಕುಗಳಲ್ಲಿ ೪ ಬ್ಲಾಕ್‌ಗಳು/ಹಾಲ್‌ಗಳನ್ನು ನಿರ್ಮಿಸಲಾಗಿದೆ. ಆದಾಗ್ಯೂ ಕೆಲವು ನಲುಕೆಟ್ಟುಗಳು ೨ ಅಂಗಳಗಳನ್ನು ಹೊಂದಿವೆ, ಇವುಗಳನ್ನು ಎಂಟುಕೆಟ್ಟು (೮ ನಿರ್ಬಂಧಿಸಿದ ರಚನೆ) ಎಂದು ಕರೆಯಲಾಗುತ್ತದೆ ಏಕೆಂದರೆ ಅವುಗಳು ಅಷ್ಟ ದಿಕ್ಕುಗಳಲ್ಲಿ ಒಟ್ಟು ೮ ಬ್ಲಾಕ್ಗಳನ್ನು ಹೊಂದಿವೆ. ಕೆಲವು ಸೂಪರ್ ರಚನೆಗಳು ೪ ಅಂಗಳಗಳನ್ನು ಹೊಂದಿದ್ದು, ಅದನ್ನು ನಂತರ ಪತಿನಾರುಕೆಟ್ಟು (೧೬ ನಿರ್ಬಂಧಿಸಿದ ರಚನೆ) ಎಂದು ಕರೆಯಲಾಗುತ್ತದೆ.

ನಾಲುಕೆಟ್ಟುಗಳು ಮತ್ತು ಎಂಟುಕೆಟ್ಟುಗಳು ಹೆಚ್ಚು ಸಾಮಾನ್ಯವಾಗಿದ್ದರೆ, ಪತ್ತಿನಾರುಕೆಟ್ಟುಗಳು ಅದರ ಅಗಾಧ ಗಾತ್ರದ ಕಾರಣದಿಂದಾಗಿ ಅತ್ಯಂತ ಅಪರೂಪ.

ಅಂತೆಯೇ ನಾಲುಕೆಟ್ಟುಗಳನ್ನು ಅವುಗಳ ಎತ್ತರ ಮತ್ತು ಮಹಡಿಗಳ ಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕಿಸಬಹುದು. ಕೆಲವು ನಾಲುಕೆಟ್ಟುಗಳು ಒಂದೇ ಅಂತಸ್ತಿನ ಮತ್ತು ಸಂಪೂರ್ಣವಾಗಿ ಮರದಿಂದ ಮಾಡಲ್ಪಟ್ಟಿದೆ. ಇತರ ನಾಲುಕೆಟ್ಟುಗಳು ಎರಡು ಅಂತಸ್ತಿನ ಅಥವಾ ಕೆಲವೊಮ್ಮೆ ಮೂರು ಅಂತಸ್ತಿನ ಮತ್ತು ಕೆಂಪುಕಲ್ಲು (ಲ್ಯಾಟರೈಟ್) ಮತ್ತು ಮಣ್ಣಿನ ಮಿಶ್ರಣವನ್ನು ಗೋಡೆಗಳಾಗಿ ಹೊಂದಿರುತ್ತವೆ.

ಜಾತಿ ಆಧಾರಿತ
ಬದಲಾಯಿಸಿ

ನಾಲುಕೆಟ್ಟುಗಳಿಗೆ ಬಳಸುವ ನಿಜವಾದ ಪದಗಳು ಅದರ ನಿವಾಸಿಗಳ ಜಾತಿ ಮತ್ತು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಭಿನ್ನವಾಗಿರುತ್ತವೆ.

  • ನಂಬೂದಿರಿ ಸಮುದಾಯಗಳಿಗೆ, ಅವರ ನಿವಾಸಗಳನ್ನು ಇಲ್ಲಮ್ ಎಂದು ಕರೆಯಲಾಗುತ್ತದೆ
  • ನಾಯರ್‌ಗಳು ಮತ್ತು ಇತರ ಸಾಮಂತರಿಗೆ, ಹೆಚ್ಚಿನ ನಲುಕೆಟ್ಟುಗಳನ್ನು ತರವಾಡು ಎಂದು ಕರೆಯಲಾಗುತ್ತದೆ.
  • ಸಾಮಂತ ಕ್ಷತ್ರಿಯರಿಗೆ, ಅವರ ನಿವಾಸಗಳನ್ನು ಕೋವಿಲಕೋಮ್‌ಗಳು ಮತ್ತು ಕೊಟ್ಟಾರಂಗಳು ಎಂದು ಉಲ್ಲೇಖಿಸಲಾಗುತ್ತದೆ
  • ಸಿರಿಯನ್ ಕ್ರಿಶ್ಚಿಯನ್ನರಿಗೆ, ಅವರ ನಿವಾಸಗಳನ್ನು ಮೇಡಸ್ ಮತ್ತು ವೀಡುಸ್ ಎಂದು ಕರೆಯಲಾಗುತ್ತದೆ

ಸಾರ್ವಜನಿಕ ರಚನೆಗಳ ವಾಸ್ತುಶಿಲ್ಪ

ಬದಲಾಯಿಸಿ
 
ಕವನ್ನಯಿಲ್ ತರವಾಡು ತೇಲಕ್ಕಾಡ್. ಪೆರಿಂತಲ್ಮನ್ನಾ, ಮಲಪ್ಪುರಂ ಜಿಲ್ಲೆ, ಕೇರಳ, ಭಾರತ

ಭಾರತದ ಇತರ ಭಾಗಗಳಿಗಿಂತ ಭಿನ್ನವಾಗಿ ಮತ್ತು ಹೊರಗಿನ ರಾಜಪ್ರಭುತ್ವದ ದಿನಗಳಲ್ಲಿ ಹೆಚ್ಚಿನ ಆಡಳಿತಾತ್ಮಕ ಕಾರ್ಯಗಳನ್ನು ಅರಮನೆ ಸಂಕೀರ್ಣಗಳ ಆವರಣದಲ್ಲಿ ನಡೆಸಲಾಯಿತು. ಆದ್ದರಿಂದ ಸ್ವತಂತ್ರ ಜಾತ್ಯತೀತ ಸಾರ್ವಜನಿಕ ರಚನೆಗಳ ಪರಿಕಲ್ಪನೆ ಮತ್ತು ಅದರ ವಾಸ್ತುಶಿಲ್ಪವು ೧೭ ನೇ ಶತಮಾನದ ನಂತರದ ಭಾಗದಲ್ಲಿ ವಿಕಸನಗೊಂಡಿತು, ವಿಶೇಷವಾಗಿ ಕೇರಳದಲ್ಲಿ ವಸಾಹತುಶಾಹಿ ಶಕ್ತಿಗಳು ನೀಡಿದ ಕೊಡುಗೆಗಳಿಂದಾಗಿ.

ಮನೆ ವಸತಿ ಯಿಂದ ದೂರವಿರುವ ಸ್ವತಂತ್ರ ಕಚೇರಿ ಸಂಕೀರ್ಣಗಳನ್ನು ಮೊದಲು ಪರಿಚಯಿಸಿದವರು ಪೋರ್ಚುಗೀಸರು. ಸುರಕ್ಷತಾ ಮುನ್ನೆಚ್ಚರಿಕೆಗಳಾಗಿ ಗೋದಾಮುಗಳು ಮತ್ತು ಅದರ ಸಂಬಂಧಿತ ಕಚೇರಿಗಳನ್ನು ವಸತಿಯಿಂದ ದೂರವಿಡುವ ಅಗತ್ಯತೆಯಿಂದಾಗಿ ಇದು ಸಂಭವಿಸಿದೆ. ಹದಿನೇಳರಿಂದ ಹತ್ತೊಂಬತ್ತನೇ ಶತಮಾನದ ಅವಧಿಯಲ್ಲಿ ಕೇರಳದ ಸಾರ್ವಜನಿಕ ವಾಸ್ತುಶಿಲ್ಪದ ಬೆಳವಣಿಗೆಯು ಯುರೋಪಿಯನ್ ಶೈಲಿಯಿಂದ ಹೆಚ್ಚು ಪ್ರಭಾವಿತವಾಗಿತ್ತು. ಆರಂಭಿಕ ಹಂತಗಳಲ್ಲಿ ಪೋರ್ಚುಗೀಸ್ ಮತ್ತು ಡಚ್ಚರ ಪ್ರಭಾವವು ಹೆಚ್ಚು ಪ್ರಧಾನವಾಗಿತ್ತು. ಪೋರ್ಚುಗೀಸ್ ವಾಸ್ತುಶಿಲ್ಪಿ ಥಾಮಸ್ ಫೆರ್ನಾಂಡಿಸ್ ಕೊಚ್ಚಿ, ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಕೋಟೆಗಳು, ಗೋದಾಮುಗಳು ಮತ್ತು ಬಂಗಲೆಗಳನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ವಿಸ್ತರಿಸಿದ ಮಹಡಿಗಳು, ಗೋಥಿಕ್ ಕಮಾನುಗಳು ಮತ್ತು ಎರಕಹೊಯ್ದ-ಕಬ್ಬಿಣದ ಕಿಟಕಿ ಸರಳುಗಳ ಕೆಲಸಗಳು ಪೋರ್ಚುಗೀಸ್ ನಿರ್ಮಾಣದಿಂದ ಕೇರಳದ ವಾಸ್ತುಶಿಲ್ಪಕ್ಕೆ ವರ್ಗಾಯಿಸಲ್ಪಟ್ಟ ಕೆಲವು ವೈಶಿಷ್ಟ್ಯಗಳಾಗಿವೆ. ಹಲವಾರು ಯುರೋಪಿಯನ್ ಶೈಲಿಯ ಕೋಟೆಗಳು ಮತ್ತು ಖಾಸಗಿ ವಸತಿ ವಿಲ್ಲಾಗಳನ್ನು ಹೊರತುಪಡಿಸಿ ಪೋರ್ಚುಗೀಸರು ಫೋರ್ಟ್ ಕೊಚ್ಚಿನ್ ಪ್ರದೇಶದಲ್ಲಿ ೨೦೦೦ ಕ್ಕೂ ಹೆಚ್ಚು ಕಚೇರಿ ಮತ್ತು ಗೋದಾಮಿನ ಸಂಕೀರ್ಣಗಳನ್ನು ನಿಯೋಜಿಸಿದ್ದಾರೆ.

ಹದಿನೆಂಟನೇ ಶತಮಾನದ ವೇಳೆಗೆ ಬ್ರಿಟಿಷ್ ಶೈಲಿಯು, ಒಂದು ಕಡೆ ಬ್ರಿಟಿಷ್ ಆಡಳಿತಗಾರರು ನೇರವಾಗಿ ನಡೆಸಿದ ಆಧುನಿಕ ನಿರ್ಮಾಣಗಳ ಪರಿಣಾಮವಾಗಿ ಕೇರಳದಲ್ಲಿ ಜನಪ್ರಿಯವಾಯಿತು ಮತ್ತು ರಾಜಪ್ರಭುತ್ವದ ವರ್ಗ ಮತ್ತು ಶ್ರೀಮಂತರು ಮತ್ತೊಂದೆಡೆ ಪಾಶ್ಚಿಮಾತ್ಯ ವಸ್ತುಗಳ ಫ್ಯಾಷನ್. ವಾಸ್ತುಶಿಲ್ಪದ ಕೆಲಸವನ್ನು ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳು ಮಾರ್ಗದರ್ಶನ ಮಾಡಿದರು, ಅವರ ವಾಸ್ತುಶಿಲ್ಪ ಶೈಲಿಯ ಜ್ಞಾನವು ಮೂಲಭೂತವಾಗಿ ನವೋದಯ ವಾಸ್ತುಶಿಲ್ಪಿಗಳ ಮೇಲಿನ ಸಾಂಪ್ರದಯಿಕ ಪುಸ್ತಕಗಳಾದ ವಿಟ್ರುವಿಯಸ್, ಆಲ್ಬರ್ಟಿ ಮತ್ತು ಪಲ್ಲಾಡಿಯೊಗೆ ಸೀಮಿತವಾಗಿದೆ ಮತ್ತು ಸಾಂಪ್ರದಾಯಿಕ ಮೇಸ್ತ್ರಿಗಳು ಮತ್ತು ಬಡಗಿಗಳ ಸ್ಥಳೀಯ ಜ್ಞಾನದಿಂದ ಕಾರ್ಯಗತಗೊಳಿಸಲಾಗಿದೆ. ಒಂದರ್ಥದಲ್ಲಿ ಇದು ಪುರಾತನ ಕರಕುಶಲ ಮತ್ತು ನವ-ಶಾಸ್ತ್ರೀಯ ನಿರ್ಮಾಣ ಅಗತ್ಯಗಳ ರಾಜಿಯಾಗಿತ್ತು.

ಭಾರತದಲ್ಲಿನ ಆರಂಭಿಕ ಯುರೋಪಿಯನ್ ಕೆಲಸದ ಗಮನಾರ್ಹ ಲಕ್ಷಣವೆಂದರೆ ಪಶ್ಚಿಮದ ಮಿಲಿಟರಿ, ರಾಜಕೀಯ ಮತ್ತು ಸಾಂಸ್ಕೃತಿಕ ಶ್ರೇಷ್ಠತೆಯನ್ನು ಪ್ರದರ್ಶಿಸುವ ಪ್ರವೃತ್ತಿ. ಗ್ರೀಕ್ ಮತ್ತು ರೋಮನ್ ಪ್ರಾಚೀನತೆಯನ್ನು ಪಶ್ಚಿಮದ ಶ್ರೀಮಂತ ಪರಂಪರೆ ಎಂದು ಪರಿಗಣಿಸಲಾಗಿದೆ ಮತ್ತು ಸಾರ್ವಜನಿಕ ಕಟ್ಟಡಗಳು, ನಗರದ ಸಭಾಂಗಣಗಳು, ಆಸ್ಪತ್ರೆಗಳು, ರೈಲು ನಿಲ್ದಾಣಗಳು, ಕಾಲೇಜುಗಳು ಇತ್ಯಾದಿಗಳಿಗೆ ತ್ರಿಕೋನ ಕಮಾನುಗಳು ಮತ್ತು ಗುಮ್ಮಟಗಳನ್ನು ಹೊಂದಿರುವ ಕಂಬಗಳ ಶ್ರೇಷ್ಠ ರಚನೆಗಳನ್ನು ಇಲ್ಲಿ ನೋಡಬಹುದಾಗಿದೆ. . ದೊಡ್ಡ ಆಯಾಮದ ನೆಲ ಅಂತಸ್ತು ಮತ್ತು ಮಹಡಿಗಳ ಪ್ರಾಬಲ್ಯದ ಅಭಿವ್ಯಕ್ತಿ ಕಾಣಬರುತ್ತಿತ್ತು. ಅದೇ ಸಮಯದಲ್ಲಿ ಸಾಂಪ್ರದಯಿಕ ಪಾಶ್ಚಾತ್ಯ ಶೈಲಿಯ ಶುದ್ಧತೆಯು ಎಲ್ಲಾ ರೀತಿಯ ಕಟ್ಟಡಗಳಲ್ಲಿ ವಿವಿಧ ರೀತಿಯ ಕಂಬಗಳನ್ನು ಮಿಶ್ರಣ ಮಾಡುವ ಮೂಲಕ ಶೈಲಿಯ ಪರಿಣಾಮಕ್ಕೆ ದಾರಿ ಮಾಡಿಕೊಟ್ಟಿತು. ಉದಾಹರಣೆಗೆ, ಕೊನೆಯ ಅಂತಸ್ತನ್ನು ಸಾರ್ವಜನಿಕ ಕಟ್ಟಡಗಳು ಮತ್ತು ನಿವಾಸಗಳಲ್ಲಿ ನೆಲ ಅಂತಸ್ತು ಕ್ರಮದೊಂದಿಗೆ ಬೆರೆಸಿ ಬಳಸಲಾಗುತ್ತಿತ್ತು.

ಆದಾಗ್ಯೂ, ವಸ್ತುಗಳು ಮತ್ತು ಹವಾಮಾನದ ಮಿತಿಗಳಿಂದಾಗಿ ಕೇರಳದಲ್ಲಿ ಈ ಪ್ರವೃತ್ತಿಯು ತುಂಬಾ ನಿಧಾನವಾಗಿದೆ.

ಕಲ್ಲಿನ ಕೆಲಸಕ್ಕಾಗಿ ಇಂಡೋ-ಯುರೋಪಿಯನ್ ಕೆಲಸದ ಮಾಧ್ಯಮವು ಲ್ಯಾಟರೈಟ್ ಮತ್ತು ಸುಣ್ಣದ ಸಾರಣೆಯಾಗಿ ಉಳಿಯಿತು. ರೈಲ್ವೆ ವಸತಿಸಮುಚ್ಚಯದಿಂದ ಸರ್ಕಾರಿ ಕಚೇರಿಗಳವರೆಗೆ (ಉದಾಹರಣೆಗೆ ಹಳೆಯ ಹುಜೂರ್ ಕಛೇರಿ - ಕಲೆಕ್ಟರೇಟ್, ಕೋಝಿಕ್ಕೋಡ್) ಅನೇಕ ಸಂದರ್ಭಗಳಲ್ಲಿ ತೆರೆದ ಲ್ಯಾಟರೈಟ್‌ನ ಬಳಕೆಯ ಸಂಭಾವ್ಯತೆಯನ್ನು ಮಾಡಲಾಗಿದೆ. ಅಮೃತಶಿಲೆಯ ಅಚ್ಚ ಬಿಳಿ ಕಟ್ಟಡಗಳನ್ನು ರಚಿಸಲು ಸುಣ್ಣದ ಸಾರಣೆ ಮತ್ತು ಪೂರ್ಣಗೊಳಿಸುವಿಕೆಯನ್ನು ಸ್ಥಳಗಳ ಆಂತರಿಕ ಗೋಡೆಗಳಿಂದ ಕಟ್ಟಡಗಳ ಹೊರಭಾಗಕ್ಕೆ ವರ್ಗಾಯಿಸಲಾಯಿತು. ಹಳೆಯ ಪ್ರಕಾರದ ಹಂಚನ್ನು ಮಂಗಳೂರು ಮಾದರಿಯ ಹಂಚಿಗೆ ಮತ್ತು ದಪ್ಪ ಹಂಚಿನ ಮೂಲಕ ಬದಲಾಯಿಸಲಾಯಿತು. ಸಾಂಪ್ರದಾಯಿಕ ಪ್ರಕಾರದ ಛಾವಣಿಯ ಚೌಕಟ್ಟನ್ನು ವಿಭಿನ್ನ ರೀತಿಯಲ್ಲಿ ಬದಲಾಯಿಸಲಾಯಿತು. ಇದು ದೊಡ್ಡ ಪ್ರದೇಶಗಳನ್ನು ವ್ಯಾಪಿಸಲು ಸಾಧ್ಯವಾಗುವಂತೆ ಮಾಡಿತು.

ಬಹುಶಃ ಹವಾಮಾನದ ಅಗತ್ಯಗಳಿಗೆ ಯುರೋಪಿಯನ್ ಶೈಲಿಯ ರೂಪಾಂತರಗಳು ಮತ್ತು ಸಾಂಪ್ರದಾಯಿಕ ಶೈಲಿಯೊಂದಿಗೆ ಸಂಶ್ಲೇಷಣೆಯು ಬಂಗಲೆಯ ವಾಸ್ತುಶಿಲ್ಪದಲ್ಲಿ ಉತ್ತಮವಾಗಿ ಕಂಡುಬರುತ್ತದೆ. ಬಿಸಿಯಾದ ಆರ್ದ್ರ ವಾತಾವರಣದಲ್ಲಿನ ಸೌಕರ್ಯದ ಅವಶ್ಯಕತೆಯು ಯುರೋಪಿಯನ್ ವಸಾಹತುಗಾರರನ್ನು ಸುತ್ತಲೂ ಜಗಲಿಯೊದಿಗೆ ಎತ್ತರದ ಮೇಲ್ಚಾವಣಿ ಹೊಂದಿರುವ ದೊಡ್ಡ ಕೋಣೆಗಳನ್ನು ಹೊಂದಿರುವ ಕಟ್ಟಡಗಳಿಗೆ ಹೋಗಲು ಪ್ರೇರೇಪಿಸಿತು. ಮೇಲಿನ ಮಹಡಿಯ ಕೋಣೆಗಳಿಗೆ ಬಾಲ್ಕನಿಗಳು ಪೋರ್ಚುಗೀಸ್ ನಿರ್ಮಾಣದಿಂದ ಹುಟ್ಟಿಕೊಂಡ ಅಗತ್ಯ ಲಕ್ಷಣವಾಗಿ ಅಳವಡಿಸಿಕೊಂಡಿವೆ. ಹೊರಾಂಗಣ, ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಸಾಗಲು ನೆರಳಿನ ಸ್ಥಳವನ್ನು ಸೇರಿಸಲಾಯಿತು. ಬಾಗಿಲುಗಳು ಮತ್ತು ಕಿಟಕಿಗಳ ಘನ ಮರದ ಬದಲಿಗೆ ಜಾರುವ ಬಾಗಿಲುಗಳಾಗಿ ಬದಲಾವಣೆಗೆ ಒಳಗಾಯಿತು - ಚಲನೆಯಲ್ಲಿರುವ ಪಂಕಗಳು - ಗಾಳಿಯ ಪ್ರಸರಣವನ್ನು ಹೆಚ್ಚಿಸುತ್ತದೆ ಮತ್ತು ಏಕಕಾಲದಲ್ಲಿ ಗೌಪ್ಯತೆಯನ್ನು ಒದಗಿಸುತ್ತದೆ. ೧೮೦೦ ರ ಹೊತ್ತಿಗೆ ಮೆರುಗುಗೊಳಿಸಲಾದ ಫಲಕಗಳು ವಿವಿಧ ಆಕಾರದಲ್ಲಿ ಬಂದವು ಮತ್ತು ಬಾಗಿಲುಗಳು ಮತ್ತು ಕಿಟಕಿಗಳ ಮೇಲೆ ಅರ್ಧವೃತ್ತಾಕಾರದ ಪಂಕಗಳು, ಮತ್ತು ಬೆಳಕು ದೇಶೀಯ ಕಟ್ಟಡಗಳ ಸೌಂದರ್ಯದ ಲಕ್ಷಣವಾಯಿತು. ಇಟ್ಟಿಗೆ ಕಮಾನುಗಳು, ಆವೆ ಮಣ್ಣಿನ ತುಂಡುಗಳು ಮತ್ತು ವಿವಿಧ ಬಂಧದ ಮಾದರಿಗಳಲ್ಲಿ ತೆರೆದ ಇಟ್ಟಿಗೆ ಕೆಲಸವು ಜನಪ್ರಿಯವಾಯಿತು. ಕಿಟಕಿಗಳ ದೊಡ್ಡ ಸಂಖ್ಯೆ ಮತ್ತು ದೊಡ್ಡ ಗಾತ್ರದೊಂದಿಗೆ, ಅಲಂಕಾರಿಕ ಆವರಣಗಳಿಂದ ಬೆಂಬಲಿತವಾದ ವಿಸ್ತರಣೆಗಳು ಮತ್ತು ಕಿಟಕಿ ತೆರೆಯುವಿಕೆಯನ್ನು ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ಕಂಬದ ಮಾದರಿಯ ಅಲಂಕಾರವನ್ನು ಸಹ ಪರಿಚಯಿಸಲಾಯಿತು. ಬಂಗಲೆಯ ವಾಸ್ತುಶಿಲ್ಪವನ್ನು ಪೂರ್ಣಗೊಳಿಸಲು ಎರಕಹೊಯ್ದ ಕಬ್ಬಿಣದ ಬೇಲಿಗಳು, ಮೆಟ್ಟಿಲುಗಳು ಮತ್ತು ಇಂಗ್ಲೆಂಡಿನಲ್ಲಿ ತಯಾರಿಸಲಾದ ಕಬ್ಬಿಣದ ಸಳುಗಳನ್ನು ಬಳಸಲಾಯಿತು.

ಈ ಸಂಶ್ಲೇಷಣೆಯ ಅತ್ಯುತ್ತಮ ಉದಾಹರಣೆಗಳನ್ನು ತಿರುವನಂತಪುರಂನಲ್ಲಿರುವ ನೇಪಿಯರ್ ವಸ್ತುಸಂಗ್ರಹಾಲಯದಲ್ಲಿ ಮತ್ತು ಅನೇಕ ಸರ್ಕಾರಿ ಬಂಗಲೆಗಳಲ್ಲಿ ಕಾಣಬಹುದು. ವಾಸ್ತವವಾಗಿ ಈ ಹಲವು ವೈಶಿಷ್ಟ್ಯಗಳನ್ನು ಸ್ಥಳೀಯ ಕಟ್ಟಡ ನಿರ್ಮಾಪಕರು ಸರಾಗವಾಗಿ ಅಳವಡಿಸಿಕೊಂಡರು, ಹೆಚ್ಚಿನವರು ಅವುಗಳನ್ನು ಸಾಂಪ್ರದಾಯಿಕ ಅಂಶಗಳೆಂದು ಪರಿಗಣಿಸುತ್ತಾರೆ. ಲೋಕೋಪಯೋಗಿ ಇಲಾಖೆಗಳ ಕಾರ್ಯಗಳು ಈ ರೀತಿಯ ನಿರ್ಮಾಣವನ್ನು ಕೇರಳದಾದ್ಯಂತ ಹರಡಲು ಸಹಾಯ ಮಾಡಿದೆ. ನಿರ್ಮಾಣದ ಪಾಶ್ಚಿಮಾತ್ಯ ಅಭ್ಯಾಸಕ್ಕೆ ಒತ್ತು ನೀಡುವುದರೊಂದಿಗೆ ಎಂಜಿನಿಯರಿಂಗ್ ಶಿಕ್ಷಣದ ಪರಿಚಯವು ಸಾಂಪ್ರದಾಯಿಕ ವಿನ್ಯಾಸ ವಿಧಾನಗಳನ್ನು ಪ್ರಾಯೋಗಿಕವಾಗಿ ಸ್ಥಳಾಂತರಿಸುವ ಈ ಪ್ರವೃತ್ತಿಯನ್ನು ಉತ್ತೇಜಿಸಿದೆ.

ಉಲ್ಲೇಖಗಳು

ಬದಲಾಯಿಸಿ
  1. Philip, Boney. "Traditional Kerala Architecture". {{cite journal}}: Cite journal requires |journal= (help)
  2. "15th-century Jain temple in Kerala to be reopened". The Times of India. 12 May 2013. Archived from the original on 15 June 2013. Retrieved 20 July 2013.
  3. B.S. Baliga. (1995) Madras District Gazetteers: Kanniyakumari District. Superintendent, Govt. Press.
  4. "Archived copy". Archived from the original on 2011-07-21. Retrieved 2011-05-28.{{cite web}}: CS1 maint: archived copy as title (link)
  5. "Archived copy". Archived from the original on 13 October 2011. Retrieved 28 May 2011.{{cite web}}: CS1 maint: archived copy as title (link)