ಕೆ. ಆನಂದ ರಾವ್ ರವರು ಭಾರತೀಯ ಗಣಿತಜ್ಞ ಮತ್ತು ಶ್ರೀನಿವಾಸ ರಾಮಾನುಜನ್ ಅವರ ಸಮಕಾಲೀನರಾಗಿದ್ದರು. ಆನಂದರವರು ರಾಮಾನುಜನ್ ರವರಿಗಿಂತ ಆರು ವರ್ಷ ಕಿರಿಯವರಾಗಿದ್ದರೂ ಕೂಡ ಅವರಿಗಿಂತ ಮೊದಲು ಗಣಿತಶಾಸ್ತ್ರವನ್ನು ವೃತ್ತಿಜೀವನವನ್ನಾಗಿ ಮುಂದುವರೆಸಲು ನಿರ್ಧರಿಸಿದ್ದರು.

ಕೆ. ಆನಂದ ರಾವ್
ಜನನ21-09-1893
ಮದ್ರಾಸ್
ಮರಣ22 January 1966(1966-01-22) (aged 72)
ಮುಂಬೈ, ಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಗಣಿತಶಾಸ್ತ್ರ
ಸಂಸ್ಥೆಗಳುಪ್ರೆಸಿಡೆನ್ಸಿ ಕಾಲೇಜು, ಮದ್ರಾಸ್
ಅಭ್ಯಸಿಸಿದ ವಿದ್ಯಾಪೀಠಪ್ರೆಸಿಡೆನ್ಸಿ ಕಾಲೇಜು, ಮದ್ರಾಸ್
ಡಾಕ್ಟರೇಟ್ ಸಲಹೆಗಾರರುಜಿ.ಎಚ್. ಹಾರ್ಡಿ
ಪ್ರಸಿದ್ಧಿಗೆ ಕಾರಣಸರಣಿಯ ಸಾರಾಂಶ, ಸಂಕೀರ್ಣ ವ್ಯತ್ಯಯಗಳ ಕಾರ್ಯಗಳ ಸಿದ್ಧಾಂತ ಮತ್ತು ಹೆಚ್ಚಿನ ಸಂಖ್ಯೆಯ ಚೌಕಗಳ ಮೊತ್ತ

ಜನನ ಬದಲಾಯಿಸಿ

ಆನಂದರವರು ೧೮೯೩ರ ಸೆಪ್ಟೆಂಬರ್ ೨೧ರಂದು ಮದ್ರಾಸ್ ನಲ್ಲಿ ಜನಿಸಿದರು.

ವಿದ್ಯಾಭ್ಯಾಸ ಬದಲಾಯಿಸಿ

ಇವರು ಮದ್ರಾಸ್ ನ ಟ್ರಿಪ್ಲಿಕೇನ್‌ನಲ್ಲಿರುವ ಹಿಂದೂ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ನಂತರದ ವಿದ್ಯಾಭ್ಯಾಸವನ್ನು ಮದ್ರಾಸ್ ವಿಶ್ವವಿದ್ಯಾಲಯದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿದರು.[೧] ಇವರು ಉತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದರು. ರಾಮಾನುಜನ್ ರವರು ಇಂಗ್ಲೆಂಡ್ ಗೆ ಪ್ರಯಾಣ ಮಾಡಿದ ಕೆಲವೆ ತಿಂಗಳುಗಳ ನಂತರ ಆನಂದರವರು ಕೂಡ ಇಂಗ್ಲೆಂಡ್ ಗೆ ಅಂದರೆ ೧೯೧೪ರಲ್ಲಿ ಪ್ರಯಾಣ ಮಾಡಿದರು.೧೯೧೬ರಲ್ಲಿ ಕೇಂಬ್ರಿಡ್ಜ್‌ನ ಕಿಂಗ್ಸ್ ಕಾಲೇಜಿನಿಂದ ಗಣಿತದ ಟ್ರಿಪೋಸ್ ಮುಗಿಸಿದ ನಂತರ ಪ್ರೆಸಿಡೆನ್ಸಿ ಕಾಲೇಜಿನ ಜಿ.ಎಚ್ ಹಾರ್ಡಿಯವರ ಪ್ರಭಾವಕ್ಕೆ ಒಳಗಾದರು. ಹಾರ್ಡಿ ಯವರು ಆನಂದರವರಿಗೆ ಸಕ್ರಿಯ ಸಂಶೋಧನೆಗೆ ಮಾರ್ಗದರ್ಶನವನ್ನು ನೀಡಿದರು.[೨] ಕೇಂಬ್ರಿಡ್ಜ್‌ನಲ್ಲಿ ಆನಂದರವರು ಮತ್ತು ರಾಮಾನುಜನ್ ರವರು ಉತ್ತಮ ಸ್ನೇಹಿತರಾದರು. ಜೊತೆಗೆ ಜಿಲ್ಲಾಧಿಕಾರಿಯಾಗಿದ್ದ ರಾಮಾನುಜನ್ ಅವರ ಸ್ನೇಹಿತರಾದ ಆರ್.ರಾಮಚಂದ್ರ ರಾವ್ ರವರು ಆನಂದರವರ ಸಂಬಂಧಿಯಾಗಿದ್ದರು.ರಾಮಚಂದ್ರ ರಾವ್, ರಾಮಾನುಜನ್ ಅವರ ಸಂಶೋಧನೆಯಲ್ಲಿನ ಆಸಕ್ತಿ ನೋಡಿ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ಹಣಕಾಸಿನ ನೆರವು ನೀಡಿದರು. ಅವರ ದೈನಂದಿನ ಅಗತ್ಯಗಳನ್ನು ನೋಡಿಕೊಂಡರು ಮತ್ತು ಅವರಿಗೆ ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಗುಮಾಸ್ತರ ಕೆಲಸವು ಸಿಕ್ಕಿತು. ರಾಮಚಂದ್ರ ರಾವ್ ರವರ ಸಂಬಂಧದಿಂದಾಗಿ ಆನಂದರವರಿಗೆ ರಾಮಾನುಜನ್ ರವರ ಪರಿಚಯವಾಯಿತು.

೧೯೧೯ರಲ್ಲಿ ಆನಂದರವರು ಮರಳಿ ಭಾರತಕ್ಕೆ ಬಂದರು. ಇವರು ತಮ್ಮ ೨೬ನೇ ವಯಸ್ಸಿನಲ್ಲಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡರು. ನಂತರದ ದಿನಗಳಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು ಜೊತೆಗೆ ೧೯೪೮ರಲ್ಲಿ ನಿವೃತ್ತರಾದರು.

ಅವರ ಜೀವನವು ದುರಂತಗಳಿಂದ ಕೂಡಿತ್ತು, ಏಕೆಂದರೆ ಇವರ ಪತ್ನಿ ೧೯೨೮ ರಲ್ಲಿ ಚಿಕ್ಕ ವಯಸ್ಸಿನಲ್ಲಿ ನಿಧನಹೊಂದಿದರು. ಇವರ ಮಗಳು ೧೯೪೦ರಲ್ಲಿ ನಿಧನರಾದರು. ಇವರು ನಂತರದ ವರ್ಷಗಳಲ್ಲಿ ಒಂದು ಕಣ್ಣಿನಲ್ಲಿ ಕುರುಡುತನವನ್ನು ಅನುಭವಿಸಿದರು. ಜೊತೆಗೆ ವಿವಿಧ ವಿಕಲಾಂಗತೆಗಳನ್ನು ಅನುಭವಿಸಿದರು.

ಶೈಕ್ಷಣಿಕ ಕೆಲಸ ಬದಲಾಯಿಸಿ

ವಿದ್ಯಾರ್ಥಿಯಾಗಿ, ಆನಂದರವರು ಹಾರ್ಡಿಯ ಮಾರ್ಗದರ್ಶನದಲ್ಲಿ ಒಂದು ಪ್ರಬಂಧವನ್ನು ಬರೆದರು. ಅದು ಅವರಿಗೆ ೧೯೧೭ರಲ್ಲಿ ಸ್ಮಿತ್ ಪ್ರಶಸ್ತಿಯನ್ನು ತಂದುಕೊಟ್ಟಿತು, ನಂತರ ಇವರು ಕಿಂಗ್ಸ್ ಕಾಲೇಜಿನ ಸಹವರ್ತಿಯಾಗಿ ಆಯ್ಕೆಯಾದರು.[೩] ಆನಂದರವರು ಹಾರ್ಡಿರವರೊಂದಿಗೆ "ಸಮ್ಮಿಬಿಲಿಟಿ" ಮತ್ತು ಶ್ರೇಢಿಗಳ ಒಮ್ಮುಖ ಗುಣಲಕ್ಷಣಗಳ ಬಗ್ಗೆ ಸಾಕಷ್ಟು ಕೆಲಸ ಮಾಡಿದರು. ವಾಸ್ತವವಾಗಿ, ಹಾರ್ಡಿಯ ಪುಸ್ತಕದಲ್ಲಿ ಆನಂದರವರ ಹೆಸರಿನ ಪ್ರಮೇಯವು ಇದೆ. ಆನಂದರವರು ಹಲವಾರು ಪತ್ರಿಕೆಗಳನ್ನು ಪ್ರಕಟಿಸಿದರು. ಮುಖ್ಯವಾಗಿ ಮೂರು ಕ್ಷೇತ್ರಗಳಲ್ಲಿ ಅವುಗಳೆಂದರೆ, ಸರಣಿಯ ಸಾರಾಂಶ, ಸಂಕೀರ್ಣ ವ್ಯತ್ಯಯಗಳ ಕಾರ್ಯಗಳ ಸಿದ್ಧಾಂತ ಮತ್ತು ಹೆಚ್ಚಿನ ಸಂಖ್ಯೆಯ ಚೌಕಗಳ ಮೊತ್ತವನ್ನು ಪ್ರಕಟಿಸಿದರು.[೪] ಭಾರತಕ್ಕೆ ಹಿಂದಿರುಗಿದ ನಂತರ ಇವರು ಪ್ರಕಟಿಸಿದ ಮೊದಲ ಸಂಶೋಧನಾ ಪ್ರಬಂಧದಲ್ಲಿ ರೀಮನ್ ಜೀಟಾ ಕ್ರಿಯೆಯ ವಿಷಯವಿತ್ತು. ಆನಂದರವರು ರೂಪಿಸಿದ ತಂತ್ರವು ಸಂಖ್ಯೆ ಸಿದ್ಧಾಂತದ ಇತರ ಸಮಸ್ಯೆಗಳಲ್ಲಿ ವ್ಯಾಪಕವಾದ ಅನ್ವಯಿಕತೆಯನ್ನು ಹೊಂದಿರುವುದು ಕಂಡುಬಂದಿದೆ.

ಪ್ರಭಾವೀ ಬೋಧನೆ ಬದಲಾಯಿಸಿ

ಆನಂದರವರು ಹಲವಾರು ಪ್ರಸಿದ್ಧ ಗಣಿತಜ್ಞರಿಗೆ ಬೋಧನೆಯನ್ನು ಮಾಡಿದ್ದಾರೆ. ಅವರಲ್ಲಿ ಸುಬ್ರಹ್ಮಣ್ಯನ್ ಚಂದ್ರಶೇಖರ್, ಕೆ.ಎಸ್.ಚಂದ್ರಶೇಖರ್, ಸುಬ್ರಹ್ಮಣ್ಯ ಮಿನಕ್ಷಿಸುಂದರಂ, ಕದಂಬತೂರ್ ತಿರುವೆಂಕಟಾಚಾರ್ಲು ರಾಜಗೋಪಾಲ್, ಸಿ.ಎಸ್.ವೆಂಕಟರಮಣ ಮತ್ತು ಮಥುಕುಮಲ್ಲಿ ವಿ.ಸುಬ್ಬರಾವ್ ಪ್ರಮುಖರು. ಗಣಿತಶಾಸ್ತ್ರವನ್ನು ಅಭ್ಯಯಿಸುವವರಿಗೆ ಗಣಿತಶಾಸ್ತ್ರದಲ್ಲಿ ಸಂಪೂರ್ಣ ಜ್ಞಾನವನ್ನು ಪಡೆಯಲು ಆಸಕ್ತಿ ಇರಬೇಕು ಜೊತೆಗೆ ತಮ್ಮನ್ನು ತಾವು ಸಮರ್ಪಿಸಿ ಕೊಳ್ಳಬೇಕೆಂದು ಹೇಳಿದರು.ರಾಮಾನುಜನ್ ರವರಿಗೂ ಮೀರಿದ ಭಾರತೀಯ ಗಣಿತದ ಕಥೆ ಆನಂದರರಿಂದ ಪ್ರಾರಂಭವಾಗುತ್ತದೆ. ಆನಂದರ ವಿದ್ಯಾರ್ಥಿಗಳು ಮಭಾರತೀಯ ಸಂಖ್ಯೆಯ ಶಾಲಾ ಸಿದ್ಧಾಂತವನ್ನು ರಚಿಸಿದ್ದಾರೆ. ಅವರ ವಿದ್ಯಾರ್ಥಿಗಳು ಅವರನ್ನು ಸ್ಪೂರ್ತಿದಾಯಕ ಶಿಕ್ಷಕ ಎಂದು ಕರೆಯುತ್ತಿದ್ದರು.

ಮರಣ ಬದಲಾಯಿಸಿ

ಆನಂದ ರಾವ್ ರವರು ೨೨ನೇ ಜನವರಿ ೧೯೬೬ರಂದು ಕೊನೆಯುಸಿರೆಳೆದರು.

ಉಲ್ಲೇಖಗಳು ಬದಲಾಯಿಸಿ

  1. https://academic.oup.com/jlms/article-abstract/s1-44/1/1/839948?redirectedFrom=fulltext
  2. https://www.genealogy.math.ndsu.nodak.edu/id.php?id=91314&fChrono=1
  3. https://books.google.co.in/books?id=TT1T8A94xNcC&pg=PA4&lpg=PA4&dq=K.+Ananda+Rau&source=bl&ots=ulzFxg4ejw&sig=ACfU3U0RBA5m2oLiw6hkVCTFfhyUYuDqTw&hl=en&sa=X&ved=2ahUKEwjmgdHU98bqAhWC8XMBHQiQA84Q6AEwCHoECBMQAQ#v=onepage&q=K.%20Ananda%20Rau&f=false
  4. "ಆರ್ಕೈವ್ ನಕಲು". Archived from the original on 2020-07-12. Retrieved 2020-07-19.