ಕೆರೂರು ವಾಸುದೇವಾಚಾರ್ಯ
ಕೆರೂರು ವಾಸುದೇವಾಚಾರ್ಯರು ೧೮೬೬ರಲ್ಲಿ ವಿಜಯಪುರ ಜಿಲ್ಲೆಯ ಬಾಗಲಕೋಟೆಯಲ್ಲಿ ಜನಿಸಿದರು. ಇವರ ತಂದೆ ಶ್ರೀನಿವಾಸಾಚಾರ್ಯ. ತಾಯಿ ಪದ್ಮಾವತಿ.
ಕನ್ನಡದ ನವೋದಯದ ಮೊದಮೊದಲ ಸಾಹಿತಿಗಳಲ್ಲಿ ಇವರೊಬ್ಬರು. ಕಾದಂಬರಿ ಅಲ್ಲದೆ ನಾಟಕಗಳನ್ನೂ ಸಹ ಅನುವಾದಿಸಿ, ಬರೆದು, ರಂಗದ ಮೇಲೆ ಆಡಿಸಿದ್ದಾರೆ.
ಕೃತಿಗಳು ಸಂಪಾದಿಸಿ
ಕಾದಂಬರಿಗಳು ಸಂಪಾದಿಸಿ
- ಇಂದಿರಾ - (೧೯೦೮) - ಈ ಕಾದಂಬರಿಯು ಬಾಲ್ಯ ವಿವಾಹ, ವಿಧವಾ ವಿವಾಹದ ಕಥಾವಸ್ತುವನ್ನು ಹೊಂದಿದೆ.
- ಯದುಮಹಾರಾಜ
- ಭ್ರಾತೃಘಾತಕ ಔರಂಗಜೇಬ
- ವಾಲ್ಮೀಕಿ ವಿಜಯ
- ಯವನ ಸೈರಂಧ್ರಿ
ನಾಟಕಗಳು ಸಂಪಾದಿಸಿ
- ನಳದಮಯಂತಿ
- ರುಕ್ಮಿಣಿ ಹರಣ
- ರಮೇಶ-ಲಲಿತ
- ಸುರತನಗರದ ಶ್ರೇಷ್ಠಿ (ಮೂಲ : ಷೇಕ್ಸ್ ಪಿಯರನ “ಮರ್ಚಂಟ್ ಆಫ್ ವೆನಿಸ್')
- ವಸಂತಯಾಮಿನಿ ಸ್ವಪ್ನಚಮತ್ಕಾರ (ಮೂಲ : ಷೇಕ್ಸ್ ಪಿಯರನ “ ಮಿಡ್ ಸಮರ್ ನೈಟ್ಸ್ ಡ್ರೀಮ್")
- ಪತಿ ವಶೀಕರಣ (ಆಲಿವರ್ ಗೋಲ್ಡ್ಸ್ ಸ್ಮಿತ್‍ನ "ಷಿ ಸ್ಟೂಪ್ಸ್ ಟು ಕಾಂಕರ್" ನಾಟಕವೊಂದರ ಅನುವಾದ)
ಕಥಾ ಸಂಕಲನ ಸಂಪಾದಿಸಿ
- ತೊಳೆದ ಮುತ್ತು
- ಪ್ರೇಮ ವಿಜಯ
- ಬೆಳಗಿದ ದೀಪಗಳು
- ಬೆಳ್ಳೀ ಚಿಕ್ಕೆ
ಪತ್ರಿಕೋದ್ಯಮ ಸಂಪಾದಿಸಿ
ಕೆರೂರು ವಾಸುದೇವಾಚಾರ್ಯರು “ಶುಭೋದಯ” ಹಾಗು “ಸಚಿತ್ರ ಭಾರತ” ಎನ್ನುವ ಎರಡು ಪತ್ರಿಕೆಗಳನ್ನು ಪ್ರಾರಂಭಿಸಿದರು.
ಇತರ ವಿಷಯಗಳು ಸಂಪಾದಿಸಿ
ಬಾಗಲಕೋಟೆಯ ವಾಸುದೇವ ವಿನೋದಿನಿ ನಾಟ್ಯ ಸಂಘವು ೧೯೬೪ ರಲ್ಲಿ ವಾಸುದೇವ ಪ್ರಶಸ್ತಿ ಎಂಬ ಸ್ಮಾರಕ ಸಂಪುಟವನ್ನು ಪ್ರಕಟಿಸಿತು.
ನಿಧನ ಸಂಪಾದಿಸಿ
ಕೆರೂರು ವಾಸುದೇವಾಚಾರ್ಯರು ೧೯೨೧ರಲ್ಲಿ ನಿಧನರಾದರು.