ಕೃಷ್ಣಸ್ವಾಮಿ ಕಸ್ತೂರಿರಂಗನ್

ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ (ಕನ್ನಡ:ಕೃಷ್ಣಸ್ವಾಮಿ ಕಸ್ತೂರಿರಂಗನ್) ಅವರು ಕರ್ನಾಟಕಬೆಂಗಳೂರಿನಲ್ಲಿ ನೆಲಸಿರುವ ಬಾಹ್ಯಾಕಾಶ ವಿಜ್ಞಾನಿಯಾಗಿದ್ದು, ಇವರು ೨೦೦೩ ರವರೆಗೆ ೯ ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ನೇತೃತ್ವ ವಹಿಸಿದ್ದರು. ಇವರು ಭಾರತೀಯ ಸಂಸತ್ತಿನ ಮೇಲ್ಮನೆ (ರಾಜ್ಯ ಸಭೆ,೨೦೦೩-೨೦೦೯ಯ) ಸದಸ್ಯರಾಗಿದ್ದರು. ಇವರು ಇದೀಗ ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿದ್ದಾರೆ[] [].ಹಾಗೆಯೇ ಇವರು ಏಪ್ರಿಲ್ ೨೦೦೪ ರಿಂದ ಬೆಂಗಳೂರಿನಲ್ಲಿರುವ ಸುಧಾರಿತ ಶಿಕ್ಷಣದ ರಾಷ್ಟ್ರೀಯ ಸಂಸ್ಥೆ. ಇವರು ಭಾರತ ಸರ್ಕಾರದಿಂದ ಮೂರು ನಾಗರಿಕ ಪ್ರಶಸ್ತಿಯ ಸ್ವೀಕೃತರಾಗಿದ್ದಾರೆ: ಪದ್ಮಶ್ರೀ (೧೯೮೨), ಪದ್ಮಭೂಷಣ (೧೯೯೨) ಮತ್ತು ಪದ್ಮ ವಿಭೂಷಣ (೨೦೦೦).

Dr. Krishnaswamy Kasturirangan
ಜನನ(೧೯೪೦-೧೦-೨೪)೨೪ ಅಕ್ಟೋಬರ್ ೧೯೪೦ Ernakulam, Kerala
ವಾಸ India
ರಾಷ್ಟ್ರೀಯತೆ Indian
ಕಾರ್ಯಕ್ಷೇತ್ರಗಳುAstronomy/Space Research including Science, Technology and Applicastions
ಸಂಸ್ಥೆಗಳುNational Institute of Advanced Studies; Indian Space Research Organisation
ಅಭ್ಯಸಿಸಿದ ಸಂಸ್ಥೆBachelor of Science with Honours, Master of Science degrees in Physics from Bombay University and Ph.D. (Astronomy & Astrophysics), ೧೯೭೧ from Physical Research Laboratory, Gujarat University
ಪ್ರಸಿದ್ಧಿಗೆ ಕಾರಣPioneering contributions to India’s space programme
ಗಮನಾರ್ಹ ಪ್ರಶಸ್ತಿಗಳುPadma Shri, Padma Bhushan and Padma Vibhushan

ಪ್ರಮುಖ ಕೊಡುಗೆಗಳು

ಬದಲಾಯಿಸಿ

ಡಾ. ಕಸ್ತೂರಿರಂಗನ್ ಅವರು ೨೦೦೩ ರ ಆಗಸ್ಟ್ ೨೭ ರಂದು ತಮ್ಮ ಅಧಿಕಾರ ಮುಕ್ತಾಯಗೊಳ್ಳುವ ಮುನ್ನ ೯ ವರ್ಷಗಳಿಗೂ ಹೆಚ್ಚು ಕಾಲ ಇಸ್ರೋ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ಭಾರತ ಸರ್ಕಾರಕ್ಕೆ ಕಾರ್ಯದರ್ಶಿಯಾಗಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ನಿರ್ದೇಶನಕ್ಕೆ ಜವಾಬ್ದಾರಿಯಾಗಿದ್ದರು. ಈ ಹಿಂದೆ ಅವರು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದರು ಮತ್ತು ಆಧುನಿಕ ಯುಗದ ಬಾಹ್ಯಾಕಾಶ ನೌಕೆ, ಭಾರತೀಯ ರಾಷ್ಟ್ರೀಯ ಉಪಗ್ರಹ (ಇನ್ಸಾಟ್-೨) ಮತ್ತು ಭಾರತೀಯ ದೂರ ಗ್ರಾಹಿಉಪಗ್ರಹಗಳು (ಐಆರ್ಎಸ್-೧ಎ ಮತ್ತು ೧ಬಿ) ಜೊತೆಗೆ ವೈಜ್ಞಾನಿಕ ಉಪಗ್ರಹಗಳ ಅಭಿವೃದ್ದಿಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಇವರು ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ-I ಮತ್ತು II ರ ಯೋಜನಾ ನಿರ್ದೇಶಕರಾಗಿದ್ದರು.

ಇವರ ನಾಯಕತ್ವದಲ್ಲಿ, ಭಾರತದ ಹೆಸರಾಂತ ಉಡಾವಣಾ ವಾಹನಗಳಾದ ಪೋಲಾರ್ ಉಪಗ್ರಹ ಉಡಾವಣಾ ವಾಹನ ಮತ್ತು ಜಿಯೋಸಿಂಕ್ರೋನಸ್ ಉಪಗ್ರಹ ಉಡಾವಣಾ ವಾಹನದ ಉಡಾವಣೆ ಮತ್ತು ಕಾರ್ಯನಿರ್ವಹಣೆಯನ್ನು ಒಳಗೊಂಡು ಹಲವು ಪ್ರಮುಖ ಸಾಧನೆಗಳನ್ನು ಕೈಗೊಳ್ಳಲಾಗಿದೆ. ಜಿಎಸ್ಎಲ್‌ವಿ, ಜಿಎಸ್ಎಲ್‌ವಿಎಂಕೆ-III ಯ ಸುಧಾರಿತ ಆವೃತ್ತಿಯ ಮತ್ತು ಅದರ ಸಂಪೂರ್ಣ ವಿನ್ಯಾಸಗಳ ವ್ಯಾಖ್ಯಾನಗಳ ಅಧ್ಯಯನಗಳು ಸಹ ಪೂರ್ಣಗೊಳಿಸಲಾಯಿತು. ಹೆಚ್ಚಿನದಾಗಿ, ಅವರು ವಿಶ್ವದ ಅತ್ಯನ್ನತ ನಾಗರಿಕ ದೂರ ಗ್ರಾಹಿ ಉಪಗ್ರಹಗಳಾದ ಐಆರ್ಎಸ್ -೧ಸಿ ಮತ್ತು ೧ಡಿ ಗಳ ಅಭಿವೃದ್ಧಿ ಮತ್ತು ಉಡಾವಣೆಯ ಮೇಲ್ವಿಚಾರಣೆ ವಹಿಸಿದ್ದಲ್ಲದೇ, ಹೊಸ ಯುಗದ ಇನ್ಸಾಟ್ ಸಂವಹನ ಉಪಗ್ರಹಗಳು ಜೊತೆಗೆ ಸಾಗರ ವೀಕ್ಷಣೆ ಉಪಗ್ರಹಗಳಾದ ಐಆರ್ಎಸ್ -ಪಿ೩/ಪಿ೪ ರ ಸಫಲವಾಗಿಸುವಿಕೆಯಲ್ಲೂ ಪ್ರಮುಖ ಪಾತ್ರ ವಹಿಸಿದರು. ಅವರು ಚಂದ್ರಾಯಣ-Iರ ಅರ್ಥನಿರೂಪಣೆಗೆ ಕಾರಣವಾದ ವಿಸ್ತ್ರೃತ ಅಧ್ಯಯನಗಳ ಮೂಲಕ ಭಾರತವು ಗ್ರಹಗಳ ಅನ್ವೇಷಣೆಯ ಯುಗಕ್ಕೆ ಪ್ರವೇಶಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪ್ರಯತ್ನಗಳು ಭಾರತವನ್ನು ಉತ್ಕೃಷ್ಟ ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆಯ ರಾಷ್ಟ್ರವಾಗಿ ಪ್ರಮುಖ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಂದಿರುವ ಕೇವಲ ೬ ರಾಷ್ಟ್ರಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತು. ಖಭೌತ ವಿಜ್ಞಾನಿಯಾಗಿ, ಡಾ. ಕಸ್ತೂರಿರಂಗನ್ ಅವರ ಆಸಕ್ತಿಯಲ್ಲಿ ಹೆಚ್ಚು ಸಾಮರ್ಥ್ಯದ ಎಕ್ಸ್-ರೇ ಮತ್ತು ಗಾಮಾ ಕಿರಣಗಳು ಮತ್ತು ಆಪ್ಟಿಕಲ್ ಖಗೋಳ ವಿಜ್ಞಾನದಲ್ಲಿನ ಸಂಶೋಧನೆಯೂ ಒಳಗೊಂಡಿದೆ. ಭಾರತದ ಹೆಚ್ಚು ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಆಧಾರಿತ ಅಧಿಕ ಸಾಮರ್ಥ್ಯದ ಖಗೋಳ ವಿಜ್ಞಾನ ವೀಕ್ಷಕ ಮತ್ತು ಸಂಬಂಧಿತ ಚಟುವಟಿಕೆಗಳ ಪ್ರಾರಂಭಿಸುವಿಕೆಯು ಕೂಡ ಅವರ ನಾಯಕತ್ವದಲ್ಲಿ ಪ್ರಮುಖ ಸಾಧನೆಗಳಾಗಿವೆ. ಅವರು ಕಾಸ್ಮಿಕ್ ಎಕ್ಸ್-ರೇ ಮತ್ತು ಗಾಮಾ ಕಿರಣದ ಮೂಲಗಳು ಮತ್ತು ಕೆಳಮಟ್ಟದ ವಾತಾವರಣದಲ್ಲಿ ಕಾಸ್ಮಿಕ್ ಎಕ್ಸ್-ರೇಗಳ ಪರಿಣಾಮಗಳ ಅಧ್ಯಯನಗಳಲ್ಲಿ ವಿಸ್ತ್ರೃತ ಮತ್ತು ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ.

ಶಿಕ್ಷಣ ಮತ್ತು ಸಂಶೋಧನೆ

ಬದಲಾಯಿಸಿ

ಡಾ. ಕಸ್ತೂರಿರಂಗನ್ ಅವರು ವಿಜ್ಞಾನದಲ್ಲಿ ವಿಶೇಷ ಪದವಿಯನ್ನು ಪಡೆದರು ಮತ್ತು ಬಾಂಬೆವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿಯನ್ನು ಪಡೆದರು. ಇವರು ಫಿಸಿಕಲ್ ರಿಸರ್ಜ್ ಲ್ಯಾಬೋರೇಟರಿ ಅಹಮದಾಬಾದ್ನಲ್ಲಿ ಕಾರ್ಯನಿರ್ವಹಿಸುತ್ತಾ ೧೯೭೧ ರಲ್ಲಿ ಎಕ್ಸ್‌ಪರಿಮೆಂಟಲ್ ಹೈ ಎನರ್ಜಿಯಲ್ಲಿ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದರು.

ಖಭೌತ ವಿಜ್ಞಾನಿಯಾಗಿ, ಡಾ. ಕಸ್ತೂರಿರಂಗನ್ ಅವರ ಸಂಶೋಧನ ಆಸಕ್ತಿಗಳಲ್ಲಿ ಹೆಚ್ಚು ಸಾಮರ್ಥ್ಯದ ಎಕ್ಸ್-ರೇ ಮತ್ತು ಗಾಮಾ ಕಿರಣಗಳ ಖಗೋಳ ವಿಜ್ಞಾನ ಹಾಗೂ ಆಪ್ಟಿಕಲ್ ಖಗೋಳ ವಿಜ್ಞಾನಗಳು ಸೇರಿದೆ. ಇವರು ಖಗೋಳ ವಿಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಅನ್ವಯಿಸುವಿಕೆಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ೨೨೪ ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ಡಾ. ಕಸ್ತೂರಿರಂಗನ್ ಅವರು ಭಾರತದೊಳಗೆ ಮತ್ತು ವಿದೇಶಗಳೆರಡರಲ್ಲೂ ಹಲವು ಪ್ರಮುಖ ವಿಜ್ಞಾನ ಅಕಾಡಮೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸದಸ್ಯರಾಗಿದ್ದಾರೆ.

ಬಾಹ್ಯಾಕಾಶ ಕಾರ್ಯಕ್ರಮದ ವೃತ್ತಿಜೀವನದ ಮುಖ್ಯಾಂಶಗಳು

ಬದಲಾಯಿಸಿ
  • ೨೦೦೪ ರ ನಂತರ, ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ನಿರ್ದೇಶಕರು
  • ೨೦೦೩ ನಂತರ ಸಂಸತ್ ಸದಸ್ಯ (ರಾಜ್ಯ ಸಭೆ)
  • ೧೯೯೪ - ೨೦೦೩ ಅಧ್ಯಕ್ಷರು, ಬಾಹ್ಯಾಕಾಶ ಮಂಡಳಿ/ನಿರ್ದೇಶಕರು, ಬಾಹ್ಯಾಕಾಶ ಇಲಾಖೆ, ಭಾರತ ಸರ್ಕಾರ, ಬೆಂಗಳೂರು
  • ೧೯೯೦ - ೧೯೯೪ ನಿರ್ದೇಶಕರು, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು
  • ೧೯೮೬ - ೧೯೮೯ ಸಹಯೋಗಿ ನಿರ್ದೇಶಕರು, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು
  • ೧೯೮೪ - ೧೯೮೬ ಉಪ ನಿರ್ದೇಶಕರು, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು
  • ೧೯೮೦ - ೧೯೮೯ ಯೋಜನಾ ನಿರ್ದೇಶಕರು, ಐಆರ್ಎಸ್-೧ಎ ಉಪಗ್ರಹ, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು
  • ೧೯೭೯ - ೧೯೮೩ ಯೋಜನಾ ನಿರ್ದೇಶಕರು, ಭಾಸ್ಕರ-II ಉಪಗ್ರಹ, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು
  • ೧೯೭೬ - ೧೯೮೦ ಯೋಜನಾ ನಿರ್ದೇಶಕರು, ಭಾಸ್ಕರ-I ಉಪಗ್ರಹ, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು

ವಿಶೇಷ ಕಾರ್ಯಭಾರಗಳು

ಬದಲಾಯಿಸಿ
  • ೨೦೦೫-೨೦೦೬ ಅಧ್ಯಕ್ಷರು, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ (INAE)
  • ೨೦೦೪ ರ ನಂತರ, ಅಧ್ಯಕ್ಷರು, ಭಾರತೀಯ ವಿಜ್ಞಾನ ಸಂಸ್ಥೆಯ ಕೌನ್ಸಿಲ್ (IISc)
  • ೨೦೦೦-೨೦೦೫ ಅಧ್ಯಕ್ಷರು, ಗವರ್ನರ್‌ಗಳ ಮಂಡಳಿ, ಐಐಟಿ ಮದ್ರಾಸ್
  • ೨೦೦೦ ರ ನಂತರ, ಅಧ್ಯಕ್ಷರು, ಕೌನ್ಸಿಲ್ ಆಫ್ ರೋಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ (RRI)
  • ೨೦೦೧-೨೦೦೩ ಅಧ್ಯಕ್ಷರು, ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ, ಬೆಂಗಳೂರಿನ ಸಂಶೋಧನಾ ಕೌನ್ಸಿಲ್
  • ೨೦೦೧-೨೦೦೩ ಅಧ್ಯಕ್ಷರು, ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್
  • ೨೦೦೧-೨೦೦೩ ಸದಸ್ಯರು, ಐಐಟಿಯ ಗವರ್ನರ್‌ಗಳ ಮಂಡಳಿ, ರೂರ್ಕಿ
  • ೨೦೦೨-೨೦೦೩ ಸಾಮಾನ್ಯ ಅಧ್ಯಕ್ಷರು, ಇಂಡಿಯನ್ ಸೈನ್ಸ್ ಕಾಂಗ್ರೆಸ್ ೨೦೦೨-೦೩
  • ೧೯೯೫-೨೦೦೩ ಅಧ್ಯಕ್ಷರು, ಏಷ್ಯಾ ಫೆಸಿಫಿಕ್, ಭಾರತದಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣದ ವಿಶ್ವಸಂಸ್ಥೆಯ ಆಡಳಿತ ಮಂಡಳಿ.
  • ೨೦೦೪ ರ ನಂತರ, ಅಧ್ಯಕ್ಷರು, ಆಡಳಿತ ಮಂಡಳಿ, ಆರ್ಯಭಟ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಅಬ್ಸರ್ವೇಶನಲ್ ಸೈನ್ಸಸ್ (ಎಆರ್‌ಐಇಎಸ್), ನೈನಿತಾಲ್
  • ೨೦೦೪ ರ ನಂತರ, ಸದಸ್ಯರು, ರಾಜಸ್ತಾನ ಸರ್ಕಾರವು ನೇಮಿಸಿದ ಆರ್ಥಿಕ ನೀತಿ ಮತ್ತು ಪರಿಷ್ಕರಣೆ ಮಂಡಳಿ
  • ೨೦೦೪ ರ ನಂತರ, ಸದಸ್ಯರು, ಇಂಧನ ಸಮಿತಿ, ಭಾರತೀಯ ಸಂಸತ್ತು
  • ೨೦೦೭ ರ ನಂತರ, ಅಧ್ಯಕ್ಷರು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್, ಬೆಂಗಳೂರು
  • ೨೦೦೭-೨೦೧೧ ಸದಸ್ಯರು, ಸಾಮಾನ್ಯ ಸಭೆ, ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಸೈನ್ಸ್-ಪಿಳನಿ, ರಾಜಸ್ತಾನ
  • ೨೦೦೭ ರ ನಂತರ, ಸ್ವತಂತ್ರ್ಯ ನಿರ್ದೇಶಕ, ಬ್ರಿಗೇಡ್ ಸಮೂಹ, ಬೆಂಗಳೂರು
  • ೨೦೦೮ ರ ನಂತರ ಅಧ್ಯಕ್ಷರು, ಕರ್ನಾಟಕ ಜ್ಞಾನ ಮಂಡಳಿ, ಕರ್ನಾಟಕ
  • ೨೦೦೮ ರ ನಂತರ, ಸದಸ್ಯರು, ಕರ್ನಾಟಕ ೨೦೨೦ ಗುರಿ, ಕರ್ನಾಟಕ
  • ೨೦೦೮ ರ ನಂತರ, ಸದಸ್ಯರು, ಸಲಹಾ ಸಮಿತಿ, ಇಂಡಿಯ್ ಸೈನ್ಸ್ ನ್ಯೂಸ್ ಅಸೋಸಿಯೇಷನ್, ಕೊಲ್ಕತ್ತಾ
  • ೨೦೦೯ ರ ನಂತರ, ಸದಸ್ಯರು, ಯೋಜನಾ ಆಯೋಗ, ಭಾರತ ಸರ್ಕಾರ.

ಫೆಲೋಶಿಪ್‌ಗಳು/ಸದಸ್ಯತ್ವಗಳು: ರಾಷ್ಟ್ರೀಯ

ಬದಲಾಯಿಸಿ
  • ಫೆಲೋ, ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ (FASc)
  • ಫೆಲೋ, ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ (ಎಫ್ಎನ್ಎ)
  • ಫೆಲೋ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಆಫ್ ಇಂಡಿಯಾ (FNASc)
  • ಫೆಲೋ, ಇಂಡಿಯನ್ ನ್ಯಾಷನಲ್ ಅಕಾಡೆಮಿ ಅಫ್ ಇಂಜಿನಿಯರಿಂಗ್ (ಎಫ್ಎನ್‌ಎಇ)
  • ಫೆಲೋ, ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ (ASI)
  • ಫೆಲೋ, ನ್ಯಾಷನಲ್ ಟೆಲೆಮ್ಯಾಟಿಕ್ಸ್ ಫೋರಂ (ಎನ್‌ಟಿಎಫ್)
  • ಫೆಲೋ, ನ್ಯಾಷನಲ್ ಮೆಟ್ರೋಲಾಜಿಕಲ್ ಸೊಸೈಟಿ (ಐಎಂಎಸ್)
  • ಸ್ಥಾಪಕ ಸದಸ್ಯ, ಆಸ್ಟ್ರೋನೋಮಿಕಲ್ ಸೊಸೈಟಿ ಆಫ್ ಇಂಡಿಯಾ (ಎಎಸ್ಐ)
  • ಗಣ್ಯ ಫೆಲೋ, ಇನ್‌ಸ್ಟಿಟ್ಯೂಶನಲ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಶನ್ ಎಂಜಿನೀಯರ್ಸ್ (ಐಇಟಿಇ)
  • ಗೌರವ ಫೆಲೋ, ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ (ಎಎಸ್ಐ)
  • ಗೌರವ ಫೆಲೋ, ಕೇರಳ ಅಕಾಡೆಮಿ ಆಫ್ ಸೈನ್ಸಸ್ (ಕೆಎಎಸ್)
  • ಗೌರವ ಫೆಲೋ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಎಂಜಿನೀಯರ್ಸ್ (ಐಐಸಿಇ)
  • ಆಜೀವ ಸದಸ್ಯರು, ಇಂಡಿಯನ್ ಫಿಸಿಕ್ಸ್ ಅಸೋಸಿಯೇಶನ್ (ಐಪಿಎ)
  • ಆಜೀವ ಸದಸ್ಯರು, ಇಂಡಿಯನ್ ಸೊಸೈಟಿ ಆಫ್ ರಿಮೋಟ್ ಸೆನ್ಸಿಂಗ್ (ಐಎಸ್ಆರ್ಎಸ್)
  • ಆಜೀವ ಸದಸ್ಯರು, ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಶನ್ (ಐಎಸ್‌ಸಿಎ)

ಫೆಲೋಶಿಪ್‌ಗಳು/ಸದಸ್ಯತ್ವಗಳು: ಅಂತರಾಷ್ಟ್ರೀಯ

ಬದಲಾಯಿಸಿ
  • ಸದಸ್ಯರು, ಇಂಟರ್‌ನ್ಯಾಷನಲ್ ಆಸ್ಟ್ರೋನೋಮಿಕಲ್ ಯೂನಿಯನ್ (೧೯೮೨ ರಿಂದ).
  • ಸದಸ್ಯರು, ಇಂಟರ್‌ನ್ಯಾಷನಲ್ ಅಕಾಡೆಮಿ ಆಫ್ ಆಸ್ಟ್ರೋನೋಮಿಕ್ಸ್ (೧೯೮೫ ರಿಂದ).
  • ಫೆಲೋ, ಥರ್ಡ್ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ (೧೯೯೬ ರಿಂದ).
  • ಗೌರವ ಫೆಲೋ, ಕಾರ್ಡಿಫ್ ಯೂನಿವರ್ಸಿಟಿ, ಯುಕೆ (೨೦೦೬ ರಿಂದ)
  • ಅಕಾಡೆಮಿಶನ್ ಆಫ್ ದಿ ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್, ವ್ಯಾಟಿಕನ್ ಸಿಟಿ (೨೦೦೬)
  • ಟ್ರಸ್ಟೀ, ನೆಹರು ಟ್ರಸ್ಟ್ ಫಾರ್ ಕೇಂಬ್ರಿಡ್ಜ್ ಯೂನಿವರ್ಸಿಟಿ (೨೦೦೭)
  • ಅಧ್ಯಕ್ಷರು, ಇಂಡಿಯಾ-ಸೈಪ್ರಸ್ ಪಾರ್ಲಿಮೆಂಟರಿ ಫ್ರೆಂಡ್‌ಶಿಪ್ ಗ್ರೂಪ್
  • ಸದಸ್ಯರು, ಇಂಡಿಯಾ-ಚೀನಾ ಎಮಿನೆಂಟ್ ಪರ್ಸನ್ಸ್ ಗ್ರೂಪ್, ಭಾರತೀಯ ಸಂಸತ್ತಿನಿಂದ ರಚಿತವಾದದ್ದು

ರಾಷ್ಟ್ರೀಯ ಪ್ರಶಸ್ತಿಗಳು

ಬದಲಾಯಿಸಿ
  • ಶ್ರೀ. ಹರಿ ಓಂ ಆಶ್ರಮ ಡಾ. ವಿಕ್ರಮ್ ಸಾರಾಭಾಮಿ ಪ್ರೇರಿತ್ ಪ್ರಶಸ್ತಿ (೧೯೮೧)
  • ಇಂಜಿನಿಯರಿಂಗ್ ವಿಜ್ಞಾನದಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (೧೯೮೩)
  • ಶ್ರೀ. ಓಂ ಪ್ರಕಾಶ್ ಭಾಸಿನ್ ಫೌಂಡೇಶನ್ ಪ್ರಶಸ್ತಿ (೧೯೮೮)
  • ಇಂಡಿಯನ್ ಜಿಯೋ-ಫಿಸಿಕಲ್ ಯೂನಿಯನ್ ನೀಡುವ ಕೆ.ಆರ್. ರಾಮನಾಥನ್ ಸ್ಮಾರಕ ಚಿನ್ನದ ಪದಕ ೧೯೯೫ ನೇ ಸಾಲಿಗಾಗಿ (೧೯೯೫)
  • ಎಫ್ಐಎಇ ಫೌಂಡೇಶನ್‌ನ ೧೯೯೫ ರ ರಾಷ್ಟ್ರೀಯ ಪ್ರಶಸ್ತಿ (೧೯೯೬) ಈಚಲಕಾರಂಜಿ
  • ಐಎಸ್‌ಸಿಎಯ ಜಿ.ಪಿ. ಚಟರ್ಜಿ ಸ್ಮಾರಕ ಪ್ರಶಸ್ತಿ (೧೯೯೭)
  • ಖಗೋಳ ವಿಜ್ಞಾನದಲ್ಲಿ ಎಂ.ಪಿ. ಬಿರ್ಲಾ ಸ್ಮಾರಕ ಪ್ರಶಸ್ತಿ (೧೯೯೭)
  • ಗೋಯಲ್ ಫೌಂಡೇಶನ್ ನೀಡುವ ಗೋಯಲ್ ಪ್ರಶಸ್ತಿ (೧೯೯೭)
  • ಇಂಡಿಯನ್ ಫಿಸಿಕಲ್ ಸೊಸೈಟಿಯ ಬಿರೇನ್ ರಾಯ್ ಸ್ಮಾರಕ ಉಪನ್ಯಾಸ ಪದಕ ಇಂಡಿಯನ್ ಫಿಸಿಕಲ್ ಸೊಸೈಟಿ, ಕಲ್ಕತ್ತಾ (೧೯೯೮)
  • ಸುಬ್ಬರಾಮ್ ಟ್ರಸ್ಟ್, ಬೆಂಗಳೂರು ಅವರ ವಿದ್ಯಾ ರತ್ನ ರಾಷ್ಟ್ರೀಯ ಪ್ರಶಸ್ತಿ (೧೯೯೯)
  • ಇಂಡಿಯನ್ ಫಿಸಿಕ್ಸ್ ಅಸೋಸಿಯೇಶನ್‌ನ ಅನ್ವಯಿಕ ಭೌತಶಾಸ್ತ್ರದಲ್ಲಿನ ಶ್ರೇಷ್ಠತೆಗಾಗಿ ಮುರಳಿ ಎಮ್.ಚುಗಣಿ ಸ್ಮಾರಕ ಪ್ರಶಸ್ತಿ (೧೯೯೯)
  • ಹೆಚ್.ಕೆ. ಫಿರೋಡಿಯಾ ಸ್ಮಾರಕ ಫೌಂಡೇಶನ್ ಅವರು ನೀಡುವ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಸಾಧನೆಗಾಗಿ ಹೆಚ್.ಕೆ. ಫಿರೋಡಿಯಾ ಪ್ರಶಸ್ತಿ (೧೯೯೯)
  • ಇಂಡಿಯನ್ ಜಿಯೋಫಿಸಿಕಲ್ ಯೂನಿಯನ್ ಅವರಿಂದ ಐಜಿಯು ಮಿಲೇನಿಯಂ ಪ್ರಶಸ್ತಿ (೧೯೯೯)
  • ೮೭ ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ನೀಡುವ ೧೯೯೯ -೨೦೦೦ ನೇ ಸಾಲಿನ ಎಮ್.ಎನ್. ಸಾಹಾ ಜನ್ಮ ಶತಮಾನೋತ್ಸವ ಪ್ರಶಸ್ತಿ (೨೦೦೦)
  • ಕಲ್ಕತ್ತಾದ ಇಂಡಿಯನ್ ನ್ಯಾಷನಲ್ ಸೈನ್ಸ್ ಕಾಂಗ್ರೆಸ್ ನೀಡುವ ‘ಆರ್ಯಭಟ ಪದಕ ಪ್ರಶಸ್ತಿ ೨೦೦೦’(೨೦೦೧)
  • ಸೌತ್ ಇಂಡಿಯಾ ಎಜುಕೇಶನ್ ಸೊಸೈಟಿ ಅವರು ಮುಂಬಯಿಯಲ್ಲಿ ೨೮ /೧೨ /೨೦೦೧ ರಂದು ನೀಡಿದ ‘೪ನೇ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿ’ (೨೦೦೧)
  • ವಿಶ್ವಭಾರತಿ ಶಾಂತಿನಿಕೇತನ ಅವರ ‘ರತೀಂದ್ರ ಪುರಸ್ಕಾರ’(೨೦೦೨)
  • ಸೆಂಟರ್ ಫಾರ್ ಆರ್ಗನೈಸೇಶನ್ ಡೆವಲೆಪ್‌ಮೆಂಟ್, ಹೈದರಾಬಾದ್ ಅವರು ನೀಡುವ ‘ಶ್ರೇಷ್ಠತೆಗಾಗಿ ವಿ.ಕೃಷ್ಣಮೂರ್ತಿ ಪ್ರಶಸ್ತಿ’(೨೦೦೨)
  • ಗುಜರಮಲ್ ಮೋದಿ ವಿಜ್ಞಾನ ಫೌಂಡೇಶನ್, ನವದೆಹಲಿ ಅವರು ನಾವಿನ್ಯ ವಿಜ್ಞಾನಕ್ಕಾಗಿನ ಉತ್ಕೃಷ್ಟ ಕೊಡುಗೆಗಾಗಿ ನೀಡುವ ‘ಜಿ.ಎಮ್.ಮೋದಿ ಪ್ರಶಸ್ತಿ’ (೨೦೦೨)
  • ಭೂವಿಜ್ಞಾನ ವಿಕಾಸ ಫೌಂಡೇಶನ್, ನವದೆಹಲಿ ಅವರು ನೀಡುವ ‘ಭೂವಿಜ್ಞಾನ ರತ್ನ ಪ್ರಶಸ್ತಿ’ (೨೦೦೨)
  • ಉತ್ಕೃಷ್ಚತೆಗಾಗಿ ಜೆಪ್ಪಿಯಾರ್ ಶೈಕ್ಷಣಿಕ ಸಂಸ್ಥೆ, ಚೆನ್ನೈಯವರು ನೀಡುವ ೮ನೇ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ (೨೦೦೩)
  • ರಾಮ್ ಮೋಹನ್ ಮಿಶನ್, ಕಲ್ಲತ್ತಾ ಅವರು ನೀಡುವ ‘೬ನೇ ರಾಮ್ ಮೋಹನ್ ಮಿಶನ್ ಪುರಸ್ಕಾರ ೨೦೦೩’(೨೦೦೩)
  • ಇಂಡಿಯನ್ ಸೈನ್ಸ್ ಕಾಂಗ್ರೆಸ್, ಚಂಡೀಘಡ ಅವರು ನೀಡುವ ‘ಆಶುತೋಶ್ ಮುಖರ್ಜಿ ಸ್ಮಾರಕ ಪ್ರಶಸ್ತಿ’ (೨೦೦೪)
  • ಸೆಂಟೆನೇರಿಯನ್ ಟ್ರಸ್ಟ್, ಚೆನ್ನೈನವರು ನೀಡುವ ‘ವರ್ಷದ ವ್ಯಕ್ತಿ’ ಪ್ರಶಸ್ತಿ (೨೦೦೪)
  • ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಆಫ್ ಇಂಡಿಯಾ, ಜೈಪುರದವರು ನೀಡುವ ‘ಪ್ರೊ. ಎಮ್.ಎನ್.ಸಹಾ ಸ್ಮಾರಕ ಉಪನ್ಯಾಸ ಪದಕ'(೨೦೦೪)
  • ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್, ದೆಹಲಿಯವರು ನೀಡುವ ೨೦೦೪ ನೇ ಸಾಲಿಗಾಗಿನ ‘ಇಂಜಿನಿಯರಿಂಗ್‌ನಲ್ಲಿ ಜೀವನ ಶ್ರೇಷ್ಠ ಕೊಡುಗೆಗಾಗಿನ ಪ್ರಶಸ್ತಿ’ (೨೦೦೪)
  • ಇಂಡಿಯನ್ ಪ್ಲಾನೆಟರಿ ಸೊಸೈಟಿ, ಮುಂಬಯಿಯವರು ಬಾಹ್ಯಾಕಾಶ ವಿಜ್ಞಾನದಲ್ಲಿ ಜೀವನ ಶ್ರೇಷ್ಠ ಸಾಧನೆಗಾಗಿ ನೀಡುವ ‘ಬಲವಂತಬಾಯಿ ಪಾರೇಖ್ ಚಿನ್ನದ ಪದಕ ೨೦೦೫’(೨೦೦೫)
  • ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದವರು ನೀಡುವ ‘ಆರ್ಯಭಟ ಪ್ರಶಸ್ತಿ ೨೦೦೩’(೨೦೦೫)
  • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಲಖ್ನೋದವರು ನೀಡುವ ‘ಲಕ್ಷ್ಮೀಪತ್ ಸಿಂಘಾನಿಯಾ – IIM ಲಖ್ನೋ ರಾಷ್ಟ್ರೀಯ ನಾಯಕತ್ವ ಪುರಸ್ಕಾರ ೨೦೦೬’ (೨೦೦೬)
  • ರುಯಾ ಕಾಲೇಜ್ ಹಳೆಯ ವಿದ್ಯಾರ್ಥಿಗಳ ಸಂಘ, ಶಿಕ್ಷಣ ಪ್ರಸಾರಕ ಮಂಡಳಿಯವರ ರಾಮನಾರಾಯಣ ರುಯಾ ಕಾಲೇಜು ಅವರು ನೀಡುವ ದಿ ಜುವೆಲ್ ಆಫ್ ರುಯಾ ಪ್ರಶಸ್ತಿ, ಡಿಸೆಂಬರ್. ೨೦೦೭
  • ಉದಯಪುರದಲ್ಲಿನ ಮೇವಾರದ ಮಹಾರಾಣಾ ಚಾರಿಟೇಬಲ್ ಫೌಂಡೇಶನ್ ನೀಡುವ ಮಹಾರಾಣಾ ಉದಯ ಸಿಂಗ್ ಪ್ರಶಸ್ತಿ, ಮಾರ್ಚ್ ೨, ೨೦೦೮
  • ರಾಜಯೋಗೀಂದ್ರ ಪ್ರಶಸ್ತಿ, ಮೈಸೂರಿನ ಮಹಾರಾಜ, ಮೈಸೂರು, ೧೮ ನೇ ಜುಲೈ ೨೦೦೮
  • ವಿಕ್ರಮ್ ಸಾರಾಭಾಯಿ ಸ್ಮಾರಕ ಚಿನ್ನದ ಪದಕ, ೯೬ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್, ದಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್, ೩ ನೇ ಜನವರಿ ೨೦೦೯, ಶಿಲ್ಲಾಂಗ್
  • ಪೂಜ್ಯ ಪಳಶಿ ರಾಜಾ ಚಾರಿಟೇಬಲ್ ಟ್ರಸ್ಟ್, ಕೇರಳ ಅವರು ನೀಡುವ ಶಾಸ್ತ್ರ ಭೂಷಣ ಪ್ರಶಸ್ತಿ, ೨೭ ಫೆಬ್ರವರಿ ೨೦೦೯
  • ಮೈಸೂರಿನ ಪ್ರೊ. ವೈ.ಟಿ. ತಾತಾಚಾರಿ ಮತ್ತು ಶ್ರೀಮತಿ ಮಾಧುರಿ ತಾತಾಚಾರಿ ಅವರ. ಪ್ರೊ. ವೈ.ಟಿ. ತಾತಾಚಾರಿ ಜೀವಮಾನ ಸಾಧನೆ ಪ್ರಶಸ್ತಿ, ೨೦೦೯ ರ ಮಾರ್ಚ್ ೧೪ ರಂದು

ಅಂತರಾಷ್ಟ್ರೀಯ ಪ್ರಶಸ್ತಿಗಳು

ಬದಲಾಯಿಸಿ
  • ಸೋವಿಯತ್ ಅಕಾಡೆಮಿ ಆಫ್ ಸೈನ್ಸಸ್‌ನ ಇಂಟರ್‌ಕೋಸ್ಮೋಸ್ ಕೌನ್ಸಿಲ್ ಪ್ರಶಸ್ತಿ (೧೯೮೧)
    • ಏರ್ ಬ್ರೀತಿಂಗ್ ಇಂಜಿನ್ಸ್ (ಐಎಸ್ಓಎಬಿಇ) ಗಾಗಿನ ಅಂತರಾಷ್ಟ್ರೀಯ ಸೊಸೈಟಿ, ಬೆಂಗಳೂರು ಅವರು ನೀಡುವ ಅಂತರಾಷ್ಟ್ರೀಯ ಸಹಯೋಗ ಸಾಧನೆ ಪ್ರಶಸ್ತಿ (೨೦೦೧)
  • ಐಎಸ್‌ಪಿಆರ್ಎಸ್ ಮತ್ತು ಎಎಸ್‌ಪಿಆರ್ಎಸ್, ಇಸ್ತಾಂಬುಲ್, ಟರ್ಕಿ ಅವರು ಜಂಟಿಯಾಗಿ ಸ್ಥಾಪಿಸಿದ ‘ಐಎಸ್‌ಪಿಆರ್ಎಸ್ ಬ್ರೂಕ್ ಪದಕ’(೨೦೦೪)
  • ಅಂತರಾಷ್ಟ್ರೀಯ ಆಸ್ಟ್ರೋನಾಮಿಕಲ್ ಫೆಡರೇಶನ್ (ಐಎಎಫ್), ವಾಂಕೋವರ್, ಕೆನಡಾ (೨೦೦೪) ಅವರ ಅಲ್ಲಾನ್ ಡಿ ಎಮಿಲ್ ಸ್ಮಾರಕ ಪ್ರಶಸ್ತಿ
  • ಏಷ್ಯಾ ಫೆಸಿಫಿಕ್ ಸೆಟಲೈಟ್ ಕಮ್ಯುನಿಕೇಶನ್ ಕೌನ್ಸಿಲ್, ಸಿಂಗಾಪುರ ಇವರು ನೀಡುವ ‘ಜೀವಮಾನ ಸಾಧನೆ ಪ್ರಶಸ್ತಿ’ (೨೦೦೫)
  • ಇಂಟರ್‌ನ್ಯಾಷನಲ್ ಅಕಾಡೆಮಿ ಆಫ್ ಆಸ್ಟ್ರೋನಾಟಿಕ್ಸ್(ಐಎಎ), ಫ್ರಾನ್ಸ್ ಅವರು ನೀಡುವ ಥಿಯೋಡೋರ್ ವೋನ್ ಕರ್ಮಮ್ ಪ್ರಶಸ್ತಿ (೨೦೦೭)
  • ವಾರ್ಷಿಕ ಇಎಸ್ಆರ್ಐ ಅಂತರಾಷ್ಟ್ರೀಯ ಯೂಸರ್ ಸಮ್ಮೇಳನ, ಸ್ಯಾನ್ ಡೀಗೋ, ಯುಎಸ್ಎನಲ್ಲಿ ಮೇಕಿಂಗ್ ಎ ಡಿಫೆರೆನ್ಸ್ ಪ್ರಶಸ್ತಿ (೨೦೦೯)[]

ಪ್ರಶಸ್ತಿಗಳು

ಬದಲಾಯಿಸಿ

ಡಾ. ಕಸ್ತೂರಿ ರಂಗನ್ ಅವರು ಕೆಳಗೆ ನೀಡಿರುವ ೧೬ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಿದ್ದಾರೆ:

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ (೧೯೯೪), ಆಂಧ್ರ ವಿಶ್ವವಿದ್ಯಾನಿಲಯ (೧೯೯೫), ಎಸ್.ವಿ.ವಿಶ್ವವಿದ್ಯಾನಿಲಯ, ತಿರುಪತಿ (೧೯೯೬), ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯ, ಅನಂತಪುರ (೧೯೯೮), ಅಣ್ಣಾ ವಿಶ್ವವಿದ್ಯಾನಿಲಯ, ಚೆನ್ನೈ (೧೯೯೮), ರೂರ್ಕಿ ವಿಶ್ವವಿದ್ಯಾನಿಲಯ, ರೂರ್ಕಿ (೧೯೯೯), ಐಐಟಿ, ಬಾಂಬೆ (೨೦೦೦), ಛತ್ರಪತಿ ಸಾಹೂ ಜೀ ಮಹಾರಾಜ್ ವಿಶ್ವವಿದ್ಯಾನಿಲಯ, ಕಾನ್‌ಪುರ (೨೦೦೦), ಗುರುನಾನಕ್ ದೇವ್ ವಿಶ್ವವಿದ್ಯಾನಿಲಯ, ಅಮೃತಸರ (೨೦೦೧), ಕಲ್ಕತ್ತಾ ವಿಶ್ವವಿದ್ಯಾನಿಲಯ, ಕಲ್ಕತ್ತಾ (೨೦೦೨), ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ (ಐಜಿಎನ್‌ಓಯೂ), ನವದೆಹಲಿ (೨೦೦೩), ಪಂಜಾಬ್ ವಿಶ್ವವಿದ್ಯಾನಿಲಯ, ಚಂಡೀಗಢ (೨೦೦೩), ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ಬೆಳಗಾವಿ (೨೦೦೪), ಅಳಗಪ್ಪ ವಿಶ್ವವಿದ್ಯಾನಿಲಯ, ಕಾರೈಕುಡಿ (೨೦೦೬), ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು (೨೦೦೭); ಎಸ್ಆರ್ಎಮ್ ವಿಶ್ವವಿದ್ಯಾನಿಲಯ , ಚೆನ್ನೈ (೨೦೦೮)

ರಾಷ್ಟ್ರೀಯ ಮಾನ್ಯತೆಗಳು

ಬದಲಾಯಿಸಿ
  • ಪದ್ಮಶ್ರೀ : ೧೯೮೨
  • ಪದ್ಮ ಭೂಷಣ (೧೯೯೨)
  • ಪದ್ಮ ವಿಭೂಷಣ (೨೦೦೦)

ಅಂತರಾಷ್ಟ್ರೀಯ ಮಾನ್ಯತೆಗಳು

ಬದಲಾಯಿಸಿ
  • ಫ್ರಾನ್ಸ್‌ನ ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಿಂದ ‘ಆಫೀಸರ್ ಆಫ್ ದಿ ಲೀಜನ್ ದಿ’ಹಾನರ್’ (೨೦೦೨) ಪ್ರಶಸ್ತಿ

ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರಗಳು

ಬದಲಾಯಿಸಿ
  • ಉಪಾಧ್ಯಕ್ಷಱು (ವೈಜ್ಞಾನಿಕ ಸಂಗತಿಗಳು), ಅಂತರಾಷ್ಟ್ರೀಯ ಬಾಹ್ಯಾಕಾಶ ಯಾನಿಗಳ ಅಕಾಡೆಮಿ (೨೦೦೩-೨೦೦೫)
  • ಸದಸ್ಯರು, ಮಂಗಳ ಗ್ರಹದ ಅನ್ವೇಷಣೆಯ ಬಾಹ್ಯಾಕಾಶ ಯಾನಿಗಳ ಉಪ-ಸಮಿತಿಯ ಅಂತರಾಷ್ಟ್ರೀಯ ಅಕಾಡೆಮಿ (೧೯೯೨-೯೩)
  • ಭಾರತೀಯ ಪ್ರತಿನಿಧಿ, ಐಇಇಇ ಬಾಹ್ಯಾಕಾಶ ಸಮಿತಿ (೧೯೯೨)
  • ಅಧ್ಯಕ್ಷರು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಾಹ್ಯಾಕಾಶ ಸಂಶೋಧನೆಯ ಸಿಓಎಸ್‌ಪಿಎಆರ್ ಸಮಿತಿ (೧೯೯೪-೨೦೦೦)
  • ಸದಸ್ಯರು, ಸಿಓಎಸ್‌ಪಿಎಆರ್ ಬ್ಯೂರೋ (೧೯೯೪-೨೦೦೨)
  • ಅಧ್ಯಕ್ಷರು, ಭೂ ವೀಕ್ಷಣೆಯ ಉಪಗ್ರಹಗಳ ಕುರಿತಾದ ಅಂತರಾಷ್ಟ್ರೀಯ ಸಮಿತಿ (ಸಿಇಓಎಸ್) (೧೯೯೭-೯೮).
  • ಅಧ್ಯಕ್ಷರು, ದೆಹಲಿ ಘೋಷಣೆಗೆ ಕಾರಣವಾದ ಯುಎನ್-ಇಎಸ್‌ಸಿಎಪಿ ಸಭೆಯ ಹಿರಿಯ ಅಧಿಕಾರಿಗಳ ಸಮಿತಿ (೧೯೯೯-೨೦೦೦).
  • ಸದಸ್ಯರು, ಬಾಹ್ಯಾಕಾಶ ಯಾನಿಗಳ ಅಂತರಾಷ್ಟ್ರೀಯ ಅಕಾಡೆಮಿಯ ಆಡಳಿತ ಮಂಡಳಿ ಟ್ರಸ್ಟೀಗಳು, ಪ್ಯಾರಿಸ್ (೨೦೦೧-)
  • ಸದಸ್ಯರು, ಅಂತರಾಷ್ಟ್ರೀಯ ಬಾಹ್ಯಾಕಾಶ ವಿಶ್ವವಿದ್ಯಾನಿಲಯ (ಐೆಸ್‌ಯು)ದ ಸಲಹಾ ಮಂಡಳಿ, ಸ್ಟ್ರಾಸ್‌ಬರ್ಗ್, ಫ್ರಾನ್ಸ್
  • ಸಹ-ಅಧ್ಯಕ್ಷರು, “ಶಾಂತಿಗಾಗಿ ಬಾಹ್ಯಾಕಾಶ” ದ ಕುರಿತಾಗಿನ ಬಾಹ್ಯಾಕಾಶ ಯಾನಿಗಳ ಅಧ್ಯಯನ ಸಮಿತಿಯ ಅಂತರಾಷ್ಟ್ರೀಯ ಅಕಾಡೆಮಿ (೨೦೦೨-೨೦೦೩)
  • ಸಂದರ್ಶಕ ಪ್ರೊಫೆಸರ್, ಕಿಂಗ್ಸ್ ಕಾಲೇಜು, ಲಂಡನ್ (೨೦೦೯ ರ ನಂತರ)

ಸಾಮಾನ್ಯ ಮಾಹಿತಿ

ಬದಲಾಯಿಸಿ

ಇವರು ಖಗೋಳ ವಿಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಅದರ ಅನ್ವಯಗಳ ಕ್ಷೇತ್ರಗಳಲ್ಲಿ ೨೪೪ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ರಾಷ್ಟ್ರದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ೬೦ ಘಟಿಕೋತ್ಸವ ಭಾಷಣಗಳನ್ನು ಮಾಡಿದ್ದಾರೆ ಮತ್ತು ೧೬ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ್ದಾರೆ.

ಇವರು ಸುಮಾರು ೩೦೯ ಸಾರ್ವಜನಿಕ ಮತ್ತು ಸ್ಮಾರಕ ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಇತ್ತೀಚಿನ ಉಪನ್ಯಾಸಗಳಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ ನಲ್ಲಿ ಎಂ.ಎನ್.ಸಾಹಾ ಸ್ಮಾರಕ ಉಪನ್ಯಾಸ; ರಾಯಲ್ ಸೊಸೈಟಿ ಆಫ್ ಲಂಡನ್ನಲ್ಲಿ ಜೆ.ಸಿ.ಬೋಸ್ ಸ್ಮಾರಕ ಉಪನ್ಯಾಸ; ಮೂರನೇ ದರ್ಬಾರಿ ಸೇತ್ ಸ್ಮಾರಕ ಉಪನ್ಯಾಸ, ನವದೆಹಲಿ; ಆಸ್ಟ್ರೇಲಿಯನ್ ರಾಷ್ಟ್ರೀಯ ವಿಶ್ವವಿದ್ಯಾನಿಲಯ, ಕ್ಯಾನ್‌ಬೆರಾದಲ್ಲಿ ಕೆ.ಆರ್.ನಾರಾಯಣನ್ ಉಪನ್ಯಾಸ; ೨೮ ನೇ ವಿಕ್ರಮ್ ಸಾರಾಭಾಯಿ ಸ್ಮಾರಕ ಉಪನ್ಯಾಸ, ಅಹಮದಾಬಾದ್ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್, ಅಹಮದಾಬಾದ್; ದೆಹಲಿ ವಿಶ್ವವಿದ್ಯಾನಿಲಯದ, ದೆಹಲಿಯಲ್ಲಿ ಪ್ರೊ. ಡಿ.ಎಸ್. ಕೊಥಾರಿ ಸ್ಮಾರಕ ಉಪನ್ಯಾಸ; ಕರ್ನಾಟಕ ರಾಜ್ಯೋತ್ಸವ ವಿಸ್ತರಣೆ ಉಪನ್ಯಾಸ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಾಗಿನ ಸಂಸ್ಥೆ, ಬೆಂಗಳೂರು; ಶ್ರೀ ಆರ್ಥರ್ ಸಿ ಕ್ಲಾರ್ಕ್ ಅವರ ಮೊದಲ ಸ್ಮಾರಕ ಉಪನ್ಯಾಸ, ಎಸಿಸಿಐಎಮ್‌ಟಿ, ಕೊಲಂಬೋ ಇವುಗಳು ಸೇರಿವೆ. ಅತೀ ಇತ್ತೀಚೆಗೆ, ಇವರು ಇಂಟರ್‌ನ್ಯಾಷನಲ್ ಆಸ್ಟ್ರೋನಾಟಿಕಲ್ ಫೆಡರೇಶನ್ ಮತ್ತು ಯುನೆಸ್ಕೋ ಇವುಗಳು ಸ್ಪುಟ್ನಿಕ್ ಉಡಾವಣೆಯ ೫೦ ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪ್ಯಾರಿಸ್ನ ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ‘ಮನುಕುಲದ ಸೇವೆಗಾಗಿ ಬಾಹ್ಯಾಕಾಶ ತಂತ್ರಜ್ಞಾನದ ಸಂಭಾವ್ಯತೆ: ಮುಂದಿನ ೫೦ ವರ್ಷಗಳು’ ಎಂಬ ಕುರಿತಾಗಿನ ಪ್ರಮುಖ ಭಾಷಣವನ್ನು ಮಾಡಿದ ಏಕೈಕ ಏಷ್ಯಾದ ವ್ಯಕ್ತಿ ಮತ್ತು ನಾಲ್ಕು ಜಾಗತಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.

ಗ್ರಂಥಸೂಚಿ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ
Government offices
Preceded by ISRO Chairman
1994 - 2003
Succeeded by

ಉಲ್ಲೇಖಗಳು

ಬದಲಾಯಿಸಿ
  1. <https://www.isro.gov.in/about-isro/dr-krishnaswamy-kasturirangan-1994-2003 Archived 2018-10-20 ವೇಬ್ಯಾಕ್ ಮೆಷಿನ್ ನಲ್ಲಿ.>
  2. "Planning Commission Organisation". Shivap. Retrieved 2009-12-03.
  3. "ESRI Lauds Dr. Krishnaswamy Kasturirangan for Making a Difference". GISuser. Archived from the original on 1998-12-05. Retrieved 2009-07-31.