ಕುಂಬಿಕ್
Pistia | |
---|---|
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | Pistia |
ಪ್ರಜಾತಿ: | P. stratiotes
|
Binomial name | |
Pistia stratiotes | |
Range of the genus Pistia | |
Synonyms[೩] | |
|
ಕುಂಬಿಕ್ ಇದು ಸಾಧಾರಣವಾಗಿ ಕೊಳ, ಕುಂಟೆ, ಕೆರೆ ಮತ್ತು ನಿಧಾನವಾಗಿ ಹರಿಯುವ ನೀರಿನಲ್ಲಿ ಬೆಳೆಯುತ್ತದೆ. ಭಾರತದಾದ್ಯಂತ ಕಾಣಬರುತ್ತದೆ.
ವೈಜ್ಞಾನಿಕ ವರ್ಗೀಕರಣ
ಬದಲಾಯಿಸಿಏರೇಸೀ ಕುಟುಂಬಕ್ಕೆ ಸೇರಿದ ಜಲಸಸ್ಯ. ಪಿಸ್ಟಿಯ ಸ್ಟ್ರಾಟಿಯೋಟಿಸ್ ಇದರ ವೈಜ್ಞಾನಿಕ ನಾಮ. ಅಂತರಗಂಗೆ ಎಂದೂ ಕರೆಯುವುದುಂಟು. ಇಂಗ್ಲಿಷಿನಲ್ಲಿ ವಾಟರ್ ಲೆಟಿಸ್ ಎಂದು ಕರೆಯಲಾಗುತ್ತದೆ.
ಲಕ್ಷಣಗಳು
ಬದಲಾಯಿಸಿನೀರಿನಲ್ಲಿ ತೇಲುವ ಈ ಗಿಡ ಬಹಳ ಚಿಕ್ಕದು. ಮುಖ್ಯಕಾಂಡದಿಂದ ಎಲ್ಲ ದಿಕ್ಕಿಗೂ ಕೊಂಬೆಗಳು ಉತ್ಪತ್ತಿಯಾಗುತ್ತವೆ. ಕೊಂಬೆಗಳು ಒಂದು ಅಂತರಗೆಣ್ಣಿನಷ್ಟು ಮಾತ್ರ ಬೆಳೆಯುತ್ತವೆ. ಇವಕ್ಕೆ ಆಫ್‍ಸೆಟ್‍ಗಳೆಂದು ಹೆಸರು. ಆಗಾಗ್ಗೆ ಆಫ್‍ಸೆಟ್‍ಗಳು ಮುಖ್ಯಕಾಂಡದಿಂದ ಬೇರ್ಪಟ್ಟು ಹೊಸ ಗಿಡಗಳಾಗಿ ಬೆಳೆಯುತ್ತವೆ. ಇದರಿಂದ ಕುಂಬಿಕ್ ಗಿಡದ ಸಂತಾನ ವೃದ್ದಿಯಾಗುತ್ತದೆ. ಹೀಗೆ ಆಫ್‍ಸೆಟ್‍ಗಳು ಮುಖ್ಯಕಾಂಡದಿಂದ ಬೇರ್ಪಟ್ಟು ಹೊಸ ಗಿಡಗಳಾಗಿ ಬೆಳೆಯುತ್ತವೆ. ಇದರಿಂದ ಕುಂಬಿಕ್ ಗಿಡದ ಸಂತಾನ ವೃದ್ಧಿಯಾಗುತ್ತದೆ. ಹೀಗೆ ಆಫ್‍ಸೆಟ್‍ಗಳ ಅಬೀಜ ಸಂತಾನೋತ್ಪತ್ತಿಯ ಮುಖ್ಯ ಸಾಧನಗಳಾಗಿವೆ. ಇವುಗಳ ಸಹಾಯದಿಂದ ಸಂತಾನವೃದ್ದಿ ಅತ್ಯಂತ ಕ್ಷಿಪ್ರವಾಗಿ ನಡೆಯುವುದರಿಂದ ಅತ್ಯಲ್ಪ ಕಾಲದಲ್ಲಿಯೇ ಕುಂಬಿಕ್ ಗಿಡಗಳು ಕೊಳ, ನದಿಗಳ ಮೇಲೆಲ್ಲ ಹರಡಿ ನೀರೇ ಕಾಣದಂತಾಗುವುದುಂಟು. ಕೆಲವೇಳೆ ದೋಣಿಗಳ ಸಂಚಾರಕ್ಕೂ ಅಡ್ಡಿಯಾಗುವುದುಂಟು. ಕುಂಬಿಕ್‍ನ ಎಲೆಗಳು ಅಗಲ ಮತ್ತು ಚಪ್ಪಟೆಯಾಗಿವೆ. ಇವುಗಳ ಆಕಾರ ಹೃದಯದಂತೆ ಅಥವಾ ಬೆಣೆಯಂತೆ. ಎಲೆಗಳು ರೆಂಬೆಗಳ ತುದಿಯಲ್ಲಿ ಕಮಲದ ದಳಗಳಂತೆ ಸುತ್ತುಗಳಲ್ಲಿ ಜೋಡಣೆಯಾಗಿವೆ. ಇವುಗಳ ಮೇಲೆ ದಟ್ಟವಾಗಿ ಕೂದಲುಗಳು ಬೆಳೆದಿರುವುದುಂಟು. ಹೂಗೊಂಚಲು ತಾಳಗುಚ್ಚ ಮಾದರಿಯದು. ಇದು ಸುಮಾರು 1"-2" ಉದ್ದ ಇದೆ. ಹೂಗೊಂಚಲಿನ ಬುಡದಲ್ಲಿ ಕೊಳವೆಯಂತಿರುವ ಕವಚ (ಸ್ಪೇದ್) ಇದೆ. ಹೂಗಳು ಬಹಳ ಚಿಕ್ಕಗಾತ್ರದವು. ಇವುಗಳಲ್ಲಿ ಪುಷ್ಪ ಪತ್ರಗಳಾಗಲೀ ಇಲ್ಲ. ಹೂಗಳು ಏಕಲಿಂಗಿಗಳು, ಗಂದುಹೂಗಳು ಹೂಗೊಂಚಲಿನ ಮೇಲ್ಬಾಗದಲ್ಲಿಯೂ ಹೆಣ್ಣುಹೂಗಳು ತಳಭಾಗದಲ್ಲಿಯೂ ಇವೆ. ಪ್ರತಿ ಗಂಡುಹೂವಿನಲ್ಲಿ 2 ಕೇಸರಗಳಿದ್ದು ಅವು ಒಂದಕ್ಕೊಂದು ಅಂಟಿಕೊಂಡಿವೆ. ಹೆಣ್ಣುಹೂವಿನಲ್ಲಿ ಒಂದೇ ಕಾರ್ಪೆಲಿನಿಂದಾದ ಅಂಡಾಶಯವಿದೆ. ಸಂತಾನಾಭಿವೃದ್ದಿ ಆಫ್‍ಸೆಟ್ಟುಗಳ ಸಹಾಯದಿಂದ ಮಾತ್ರವಲ್ಲವೆ ಬೀಜಗಳಿಂದಲೂ ನಡೆಯುತ್ತದೆ.
ಉಪಯೋಗಗಳು
ಬದಲಾಯಿಸಿಕುಂಬಿಕ್ ತನ್ನ ಶೀಘ್ರ ಬೆಳೆವಣಿಗೆಯಿಂದ ಕೊಳವನ್ನೆಲ್ಲ ಆವರಿಸಿ ಅಲ್ಲಿ ಸೊಳ್ಳೆಗಳು ಹೆಚ್ಚುವಂತೆ ಮಾಡುತ್ತದೆ. ಇದರಿಂದ ಇದನ್ನು ಕೊಂಚ ಹಾನಿಕರ ಸಸ್ಯವೆಂದೇ ಹೇಳಬಹುದು. ಆದರೂ ಇದಕ್ಕೆ ಉಪಯುಕ್ತ ಗುಣಗಳು ಇಲ್ಲದೆ ಇಲ್ಲ. ಕ್ಷಾಮ ಕಾಲದಲ್ಲಿ ಈ ಗಿಡವನ್ನು ಆಹಾರವಾಗಿ ಉಪಯೋಗಿಸುವುದುಂಟು. ಮೀನುಗಳಿಗೆ ಇದು ಉತ್ತಮ ಆಹಾರವೆಂದು ತಿಳಿದುಬಂದಿದೆ. ಉಷ್ಟ್ರಪಕ್ಷಿಗಳಿಗೂ ಹಂದಿಗಳಿಗೂ ಮೇವಾಗಿ ಇದನ್ನು ಉಪಯೋಗಿಸುತ್ತಾರೆ. ಎಲೆಗಳಲ್ಲಿ ಸುಣ್ಣ, ರಂಜಕ, ಎ,ಬಿ,ಸಿ, ವಿಟಮಿನ್‍ಗಳು ಹೇರಳವಾಗಿವೆ. ಇದರ ಬೂದಿಯಿಂದ ಸಾಬೂನನ್ನು ತಯಾರಿಸುತ್ತಾರೆ. ಪೊಟ್ಯಾಷ್ ಅಂಶ ಹೆಚ್ಚಾಗಿರುವುದರಿಂದ ಇದನ್ನು ಉತ್ತಮ ಗೊಬ್ಬರವಾಗಿ ಬಳಸಬಹುದು. ಬೂದಿಯನ್ನು ಬಿಳಿತೊನ್ನು, ಹುಣ್ಣು, ಮೂಲವ್ಯಾಧಿ, ಇಸಬು ಮುಂತಾದ ರೋಗಗಳಿಗೆ ಔಷಧಿಯಾಗಿ ಉಪಯೋಗಿಸುವುದುಂಟು. ಕೊಳಗಳಲ್ಲಿ ನೀರಿನ ಮೇಲೆಲ್ಲ ಹರಡಿ ಕೊಳ ಮುಚ್ಚಿ ಹೋಗುವಂತೆ ಮಾಡಿ ಅಲ್ಲಿ ಇತರ ಗಿಡಗಳು ಬೆಳೆಯಲು ಈ ಗಿಡ ಅನುಕೂಲ ಮಾಡಿಕೊಡುತ್ತದೆ. ಈ ವಿಧವಾದ ನೈಸರ್ಗಿಕ ಸಸ್ಯಾಭಿವೃದ್ಧಿಗೆ ಸಸ್ಯ ಅನುಕ್ರಮ (ಪ್ಲಾಂಟ್ ಸಕ್ಸೆಷನ್) ಎಂದು ಹೆಸರು. ನೀರಿನಲ್ಲಿ ನಡೆಯುವ ಅನುಕ್ರಮ ವಿಧಾನಕ್ಕೆ ಈ ಗಿಡ ಬಹಳ ಸಹಾಯಕಾರಿ.
ಉಲ್ಲೇಖಗಳು
ಬದಲಾಯಿಸಿ- ↑ "Genus: Pistia L." Germplasm Resources Information Network. United States Department of Agriculture. 2006-02-23. Retrieved 2011-09-30.
- ↑ "Taxon: Pistia stratiotes L." Germplasm Resources Information Network. United States Department of Agriculture. 2011-05-09. Retrieved 2011-09-30.
- ↑ Kew World Checklist of Selected Plant Families[ಶಾಶ್ವತವಾಗಿ ಮಡಿದ ಕೊಂಡಿ]
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Centre for Aquatic and Invasive Plants Archived 2004-10-10 ವೇಬ್ಯಾಕ್ ಮೆಷಿನ್ ನಲ್ಲಿ.
- Pistia stratiotes information Archived 2011-04-25 ವೇಬ್ಯಾಕ್ ಮೆಷಿನ್ ನಲ್ಲಿ. from the Hawaiian Ecosystems at Risk project (HEAR) Archived 2021-02-21 ವೇಬ್ಯಾಕ್ ಮೆಷಿನ್ ನಲ್ಲಿ.
- Species Profile- Water Lettuce (Pistia stratiotes) Archived 2011-10-16 ವೇಬ್ಯಾಕ್ ಮೆಷಿನ್ ನಲ್ಲಿ., National Invasive Species Information Center, United States National Agricultural Library. Lists general information and resources for Water Lettuce.