ಕಾಲಿ ಬಾಡಿ ಮಂದಿರವು ಶಿಮ್ಲಾದ ಬ್ಯಾಂಟನಿ ಬೆಟ್ಟದ ಮೇಲೆ ಸ್ಥಿತವಾಗಿರುವ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಶ್ಯಾಮಲಾ ಎಂದು ಕರೆಯಲ್ಪಡುವ ಕಾಳಿ ದೇವಿಯ ಭಯಂಕರ ಪುನರವತಾರಕ್ಕೆ ಸಮರ್ಪಿತವಾಗಿದೆ. ಇದರಿಂದಲೇ ಶಿಮ್ಲಾ ನಗರಕ್ಕೆ ಆ ಹೆಸರು ಬಂದಿದೆ. ಈ ದೇವಿಯು ಜಾಖೂ ಬಳಿ ಅಸ್ತಿತ್ವದಲ್ಲಿತ್ತು ಎಂದು ನಂಬಲಾಗಿದೆ.[೧]

ಇತಿಹಾಸ ಬದಲಾಯಿಸಿ

ಕಾಳಿ ಬಾಡಿ ದೇವಾಲಯವನ್ನು ಮೂಲತಃ 1845 ರಲ್ಲಿ ಒಬ್ಬ ಬಂಗಾಳಿ ಬ್ರಾಹ್ಮಣ ರಾಮ್ ಚರಣ್ ಬ್ರಹ್ಮಚಾರಿ ಜಾಖೂ ಬೆಟ್ಟದ ಮೇಲಿನ ರಾಥ್ನಿ ಕೋಟೆಮನೆಯ ಸಮೀಪದಲ್ಲಿ ನಿರ್ಮಿಸಿದನು. ಅದಕ್ಕಾಗಿಯೇ ಇದು ಕೋಲ್ಕತ್ತಾದ ದಕ್ಷಿಣೇಶ್ವರ ಕಾಳಿ ದೇವಾಲಯವನ್ನು ಹೋಲುತ್ತದೆ.[೨] ಇದು ನಗರದ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಕಾಳಿ ದೇವಿಯ ನೀಲಿ ಬಣ್ಣದ ಮರದ ವಿಗ್ರಹದೊಂದಿಗೆ ವಿಶಿಷ್ಟವಾದ ಹಿಂದೂ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ನಂತರ, ಬ್ರಿಟೀಷರು ದೇವಾಲಯದ ಸ್ಥಳವನ್ನು ಬ್ಯಾಂಟನಿ ಗುಡ್ಡಕ್ಕೆ ಸ್ಥಳಾಂತರಿಸಿದರು. 1902 ರಲ್ಲಿ ರೂಪುಗೊಂಡ ಕಾಲಿ ಬಾಡಿ ದೇವಾಲಯ ಟ್ರಸ್ಟ್ ಮುಖ್ಯವಾಗಿ ಬಂಗಾಳಿ ಸದಸ್ಯರನ್ನು ಒಳಗೊಂಡಿದೆ.[೩]

ಉಲ್ಲೇಖಗಳು ಬದಲಾಯಿಸಿ

  1. "Shimmying in umbrella land: A weekend in Shimla". hindustantimes.com (in ಇಂಗ್ಲಿಷ್). Retrieved 2020-06-08.
  2. "कालीबाड़ी मंदिर हॉल में महिलाओं ने खेली सिंदूर की होली". Amar Ujala (in ಹಿಂದಿ). Retrieved 2020-06-09.
  3. "Shimla Kali Bari temple all set for 'Durga Puja'". The Statesman (in ಅಮೆರಿಕನ್ ಇಂಗ್ಲಿಷ್). 2018-10-15. Retrieved 2020-06-08.