ಕಾಡು ಬಿಕ್ಕೆ ಗಿಡ (ಡಿಕ್ಕಾಮಲಿ) ಬದಲಾಯಿಸಿ

ಸಂ: ನಡಿಹಿಂಗು

ಹಿಂ: ಡಿಕಾಮಿಲಿ

ಮ: ಡಿಕಾಮಿಲಿ

ಗು: ಡಿಕಾಮಿಲಿ

ತೆ: ಕರಿಂಗ, ಕಂಬಿಲ್

ತ: ಮಂಜಿಬಿಕ್ಕಿ

ವರ್ಣನೆ ಬದಲಾಯಿಸಿ

ಸಣ್ಣ ಪೊದೆ ಬಲವಾದ ಶಾಖೆಗಳಿರುವುವು. ತಿರುಳು ನುಣುಪು ಮತ್ತು ಹಸಿರು-ಹಳದಿ ಮಿಶ್ರಿತ ವರ್ಣದ್ದು. ಹಸಿರು ಒರಟಾದ ಎಲೆಗಳು ಮತ್ತು ಎಲೆಗಳ ಕೆಳಗಡೆ ನಯವಾದ ರೋಮಗಳಿರುತ್ತವೆ. ಕಾಯಿಗಳು ಹಸಿರಾಗಿದ್ದು ಗಿಡ್ಡದಾಗಿರುವುವು. ಹಣ್ಣಾದಾಗ ಹಸಿರು-ಹಳದಿ ವರ್ಣದಲ್ಲಿರುವುದು. ಒಳಗಡೆ ಗಟ್ಟಿಯಾದ ಬೀಜಗಳು ಮತ್ತು ಸಿಹಿಯಾದ ತಿರುಳಿರುವುದು.ಈ ಹಣ್ಣನ್ನು ತಿನ್ನುತ್ತಾರೆ ಮತ್ತು ಹಳ್ಳಿಯವರು ಕುಕ್ಕೆಗಳಲ್ಲಿ ತಂದು ಮಾರುತ್ತಾರೆ.ಈ ಗಿಡದಿಂದ ಸುರಿಯುವ ಹಾಲಿಗೆ ಅಹಿತಕರ ವಾಸನೆಯಿರುತ್ತದೆ.ಇದಕ್ಕೆ ಬಿಕ್ಕೆಬಂಕೆಯೆನ್ನುತ್ತಾರೆ.ಇದರಲ್ಲಿ ಗಾರ್ಡಿಸಿನ್ ಮತ್ತು ಡಿಕಾನೆಲಿ ಎಂಬ ಎರಡು ಬಗೆಯ ಅಂಟಿರುವುದು.

ಸರಳ ಚಿಕಿತ್ಸೆಗಳು ಬದಲಾಯಿಸಿ

ಜಂತು ಹುಳಕ್ಕೆ ಬದಲಾಯಿಸಿ

ಬಿಕ್ಕೆಗಿಡದ ಬಂಕೆಯನ್ನು ನೀರಿನಲ್ಲಿ ಕರಗಿಸಿ ಇದರಲ್ಲಿ ಶುಭ್ರವಾದ ಅರಳೆಯ ಬತ್ತಿಯನ್ನು ತೋಯಿಸಿ, ಮಲದ್ವಾರದಲ್ಲಿ ಧರಿಸುವುದು. ಜಂತು ಹುಳಗಳು ಸಾಯುವುವು ಮತ್ತು ಮಲದೊಡನೆ ಬಿದ್ದು ಹೋಗುವುವು.

ವಾಸಿಯಾಗದೆ ಉಳಿದ ಹಳೇ ಹುಣ್ಣುಗಳಿಗೆ ಬದಲಾಯಿಸಿ

ಬಹುಕಾಲದಿಂದ ವಾಸಿಯಾಗದೆ ಇರುವ ಹುಣ್ಣುಗಳಿಗೆ ಇದು ದಿವ್ಯಔಷಧಿ. ಈ ಗಿಡದ ಬಂಕೆಯ ಮುಲಾಮು ಮಾಡಿಗಾಯದ ಮೇಲೆ ಹಚ್ಚುವುದು.ಕೆಡುಕಿಲ್ಲದ ಉತ್ತಮವಾದ ಔಷಧಿ. ಶೀಘ್ರವಾಗಿ ಹಳೇ ಹುಣ್ಣುಗಳು ವಾಸಿಯಾಗುವುವು.

ವ್ರಣಗಳಲ್ಲಿ ಹುಳುಗಳು ಬದಲಾಯಿಸಿ

ಕೆಲವು ಹಳೇ ಮತ್ತು ಬಹುಕಾಲದಿಂದ ವಾಸಿಯಾಗದ ವ್ರಣಗಳಲ್ಲಿ ಹುಳುಗಳು ಬೀಳುತ್ತವೆ. ಈ ಗಿಡದ ಬಂಕೆಯಲ್ಲಿ ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಹಚ್ಚುವುದು. ಹುಳುಗಳು ಸಾಯುತ್ತವೆ. ಮತ್ತು ವ್ರಣಗಳು ವಾಸಿಯಾಗುತ್ತವೆ. ಇದರಿಂದ ವ್ರಣಗಳ ಮೇಲೆ ನೊಣಗಳು ಸೇರುವುದಿಲ್ಲ. ಹಾಗಾಗಿ ವಿಷ ಕ್ರಿಮಿಗಳಿಂದ ವ್ರಣ ಕೊಳೆಯದಂತೆ ರಕ್ಷಿಸುವುದು.

ಹೊಟ್ಟೆಯಲ್ಲಿ ಹುಳುಗಳು ಬದಲಾಯಿಸಿ

1 ಗ್ರಾಂ ಈ ಗಿಡದಗೋಂದನ್ನು ಹರಳೆಣ್ಣೆಯಲ್ಲಿ ಬೆರೆಸಿ ಸೇವಿಸುವುದು.ಆಥವಾ ಈ ವನಮೂಲಿಯ 5 ಗ್ರಾಂ ಸೊಪ್ಪನ್ನು ನೀರಿನಲ್ಲಿ ಹಾಕಿ ಕಾಯಿಸಿ ಕಷಾಯ ಮಾಡಿಕುಡಿಸುವುದು.

ಒಣ ಕೆಮ್ಮು ಬದಲಾಯಿಸಿ

ಬಿಕ್ಕೆಗಿಡದ ಸೊಪ್ಪು ಮತ್ತು ಬನ್ಸ್‍ಗಿಡದ ಎಲೆಗಳ ಅಷ್ಟಾಂಷ ಕಷಾಯ ಮಾಡಿ ದಿನಕ್ಕೆ ಎರಡು ವೇಳೆ ಕುಡಿಸುವುದು.

ಮೂಲವ್ಯಾಧಿಗೆ ಬದಲಾಯಿಸಿ

ಈ ಗಿಡದ ಬಂಕೆಯನ್ನುಕೊಬ್ಬರಿಎಣ್ಣೆಯಲ್ಲಿ ಕಲಸಿ ಮೂಲದ ಮೂಳೆಗಳಿಗೆ ಲೇಪಿಸುವುದು.ಸುವರ್ಣಗೆಡ್ಡೆ ಸಾರು, ಪಲ್ಯ ಸೇವಿಸುವುದು. ಈ ಮೂಲಿಕೆಯ ಕ್ರಿಮಿನಾಶಕ ಗುಣದ ಬಗ್ಗೆ ಸಂಶೋಧನೆ ನಡೆಯುತ್ತಿದೆ.

ಸದಾಚಾರ ಬದಲಾಯಿಸಿ

ರಾತ್ರಿ ಪ್ರಥಮ ಜಾವದೊಳಗೆ ಭೋಜನವನ್ನು ಮಾಡತಕ್ಕದ್ದು; ಸ್ವಲ್ಪ ಕಡಿಮೆಯಾಗಿ ಉಣ್ಣಬೇಕು; ಮತ್ತು ಜೀರ್ಣಕ್ಕೆ ಕಷ್ಟವಾದ ಪದಾರ್ಥವನ್ನು ವರ್ಣಿಸಬೇಕು.

ಉಲ್ಲೇಖ ಬದಲಾಯಿಸಿ

ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್ ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು