ಕಪ್‍ಕೇಕ್ (ಫ಼ೇರಿ ಕೇಕ್, ಪ್ಯಾಟಿ ಕೇಕ್) ಒಬ್ಬ ವ್ಯಕ್ತಿಗೆ ಬಡಿಸಲು ವಿನ್ಯಾಸಗೊಳಿಸಲಾದ ಸಣ್ಣದಾದ ಕೇಕ್ ಆಗಿದೆ. ಇದನ್ನು ಸಣ್ಣದಾದ ತೆಳು ಕಾಗದದಲ್ಲಿ ಅಥವಾ ಅಲ್ಯುಮಿನಿಯಮ್ ಕಪ್‍ನಲ್ಲಿ ಬೇಕ್ ಮಾಡಬಹುದು. ಹೆಚ್ಚು ದೊಡ್ಡ ಕೇಕ್‍ಗಳಿಗೆ ಮಾಡುವಂತೆ, ಸಕ್ಕರೆ ಅಲಂಕಾರ ಮತ್ತು ಹಣ್ಣು ಹಾಗೂ ಕ್ಯಾಂಡಿಯಂತಹ ಇತರ ಕೇಕ್ ಅಲಂಕರಣಗಳನ್ನು ಮಾಡಬಹುದು.

ಒಂದು ಸಾಮಾನ್ಯ್ ಕಪ್‍ಕೇಕ್ ಸಾಧಾರಣ ಗಾತ್ರದ ಕೇಕ್‌ಗಳು ಬಳಸುವ ಮೂಲಭೂತ ಘಟಕಾಂಶಗಳನ್ನೇ ಬಳಸುತ್ತದೆ: ಬೆಣ್ಣೆ, ಸಕ್ಕರೆ, ಮೊಟ್ಟೆ ಮತ್ತು ಹಿಟ್ಟು. ಪದರ ಕೇಕ್‍ಗೆ ಸೂಕ್ತವಾದ ಹೆಚ್ಚು ಕಡಿಮೆ ಯಾವುದೇ ಪಾಕವಿಧಾನವನ್ನು ಕಪ್‍ಕೇಕ್‍ಗಳನ್ನು ಬೇಕ್ ಮಾಡಲು ಬಳಸಬಹುದು. ಕಪ್‍ಕೇಕ್‌ಗಳಿಗೆ ಬಳಸಲಾದ ಕೇಕ್ ಹಿಟ್ಟನ್ನು ರುಚಿಗೊಳಿಸಲಾಗಿರಬಹುದು ಅಥವಾ ಇತರ ಘಟಕಾಂಶಗಳನ್ನು ಕಲಸಲಾಗಿರಬಹುದು, ಉದಾ. ಒಣದ್ರಾಕ್ಷಿ, ಬೆರಿಗಳು, ನಟ್‍ಗಳು ಅಥವಾ ಚಾಕಲೇಟ್ ತುಣುಕುಗಳು.

ಅವುಗಳ ಸಣ್ಣ ಗಾತ್ರವು ಉಷ್ಣವಹನಕ್ಕೆ ಹೆಚ್ಚು ಸಮರ್ಥವಾಗಿರುವುದರಿಂದ, ಕಪ್‍ಕೇಕ್‍ಗಳು ಸಾಧಾರಣ ಪದರವುಳ್ಳ ಕೇಕ್‍ಗಿಂತ ಹೆಚ್ಚು ವೇಗವಾಗಿ ಬೇಕ್ ಆಗುತ್ತವೆ.[೧]

ಉಲ್ಲೇಖಗಳು ಬದಲಾಯಿಸಿ

  1. Sakin, Melike; Kaymak-Ertekin, Figen; Ilicali, Coskan (2007-12-01). "Simultaneous heat and mass transfer simulation applied to convective oven cup cake baking". Journal of Food Engineering. 83 (3): 463–474. doi:10.1016/j.jfoodeng.2007.04.007.

ಹೊರಗಿನ ಕೊಂಡಿಗಳು ಬದಲಾಯಿಸಿ