ಕಡೆಯುವಿಕೆ
ಕಡೆಯುವುದು ಎಂದರೆ ಬೆಣ್ಣೆ ತಯಾರಿಸಲು ಕೆನೆ ಅಥವಾ ಪೂರ್ಣ ಹಾಲನ್ನು ಕಲಕುವ ಪ್ರಕ್ರಿಯೆ. ಇದನ್ನು ಮಾಡಲು ಸಾಮಾನ್ಯವಾಗಿ ಕಡೆಗೋಲನ್ನು ಬಳಸಲಾಗುತ್ತದೆ. ಯೂರೋಪ್‍ನಲ್ಲಿ ಮಧ್ಯಯುಗದಿಂದ ಕೈಗಾರಿಕಾ ಕ್ರಾಂತಿಯವರೆಗೆ, ಸಾಮಾನ್ಯವಾಗಿ ಕಡೆಗೋಲನ್ನು ಸರಳವಾಗಿ ಒಳಗೆ ಪ್ಲಂಜರ್‌ನ್ನು ಹೊಂದಿರುವ ಪೀಪಾಯಲ್ಲಿ ಹಾಕಿ ಕೈಯಿಂದ ಕಲಕಲಾಗುತ್ತಿತ್ತು. ಈಗ ಇವುಗಳ ಬದಲು ಬಹುತೇಕವಾಗಿ ಯಾಂತ್ರಿಕ ಕಡೆಗೋಲುಗಳನ್ನು ಬಳಸಲಾಗುತ್ತಿದೆ.
ಬೆಣ್ಣೆಯು ಮೂಲಭೂತವಾಗಿ ಹಾಲಿನ ಕೊಬ್ಬಾಗಿರುತ್ತದೆ. ಇದನ್ನು ಸಾಮಾನ್ಯವಾಗಿ ಸಿಹಿ ಕೆನೆಯಿಂದ ತಯಾರಿಸಲಾಗುತ್ತದೆ. ಆದರೆ, ಇದನ್ನು ಆಮ್ಲೀಕೃತ ಅಥವಾ ಬ್ಯಾಕ್ಟೀರಿಯಾದಿಂದ ಹುಳಿಯಾಗಿಸಿದ ಕೆನೆಯಿಂದ ಕೂಡ ತಯಾರಿಸಬಹುದು. ೧೯ನೇ ಶತಮಾನದ ದೀರ್ಘ ಭಾಗದವರೆಗೆ ಬೆಣ್ಣೆಯನ್ನು ಆಗಲೂ ಹಾಗೆ ಇರಲು ಬಿಟ್ಟು ನೈಸರ್ಗಿಕವಾಗಿ ಹುಳಿಯಾದ ಕೆನೆಯಿಂದ ತಯಾರಿಸಲಾಗುತ್ತಿತ್ತು. ನಂತರ ಕೆನೆಯನ್ನು ಹಾಲಿನ ಮೇಲಿನಿಂದ ತೆಗೆದು ಕಟ್ಟಿಗೆಯ ಪೀಪಾಯಿಯಲ್ಲಿ ಸುರಿಯಲಾಗುತ್ತಿತ್ತು.