ಕಡಲುಗಳ್ಳತನ

(ಕಡಲುಗಳ್ಳ ಇಂದ ಪುನರ್ನಿರ್ದೇಶಿತ)

ಕಡಲುಗಳ್ಳತನವು ಹಡಗು ಅಥವಾ ದೋಣಿ ಮೇಲಿರುವ ಆಕ್ರಮಣಕಾರರು ಮತ್ತೊಂದು ಹಡಗು ಅಥವಾ ಕರಾವಳಿ ಪ್ರದೇಶದ ಮೇಲೆ ನಡೆಸುವ ದರೋಡೆ ಅಥವಾ ಆಪರಾಧಿಕ ಹಿಂಸಾಚಾರದ ಕ್ರಿಯೆ. ಸರಕು ಮತ್ತು ಇತರ ಬೆಲೆಬಾಳುವ ವಸ್ತುಗಳು ಅಥವಾ ಆಸ್ತಿಗಳನ್ನು ಕದಿಯುವುದು ಸಾಮಾನ್ಯವಾಗಿ ಇವರ ಗುರಿಯಾಗಿರುತ್ತದೆ. ಕಡಲುಗಳ್ಳತನದ ಕ್ರಿಯೆಯಲ್ಲಿ ತೊಡಗುವವರನ್ನು ಕಡಲುಗಳ್ಳರು ಎಂದು ಕರೆಯಲಾಗುತ್ತದೆ. ಕಡಲುಗಳ್ಳತನದ ಅತ್ಯಂತ ಮುಂಚಿನ ದಾಖಲಿತ ಉದಾಹರಣೆಗಳು ಕ್ರಿ.ಪೂ. ೧೪ನೇ ಶತಮಾನದ್ದಾಗಿವೆ. ಆಗ ಸೀ ಪೀಪಲ್ಸ್ ಎಂಬ ಸಾಗರ ಆಕ್ರಮಣಕಾರರ ಗುಂಪು ಈಜಿಯನ್ ಮತ್ತು ಮೆಡಿಟರೇನಿಯನ್ ನಾಗರಿಕತೆಗಳ ಹಡಗುಗಳ ಮೇಲೆ ಆಕ್ರಮಣ ಮಾಡಿದರು. ಹಡಗುಗಳನ್ನು ಊಹಿಸಬಹುದಾದ ಮಾರ್ಗಗಳಲ್ಲಿ ಸಾಗುವಂತೆ ಮಾಡುವ ಕಿರಿದಾದ ಸಂಪರ್ಕದಾರಿಗಳು ಬಹಳ ಕಾಲದಿಂದ ಕಡಲುಗಳ್ಳತನಕ್ಕೆ, ಜೊತೆಗೆ ಖಾಸಗಿ ಶಸ್ತ್ರಸಜ್ಜಿತ ನೌಕಾಯಾನ ಮತ್ತು ವಾಣಿಜ್ಯ ದಾಳಿಗೆ ಅವಕಾಶಗಳನ್ನು ಸೃಷ್ಟಿಸಿವೆ. ಐತಿಹಾಸಿಕ ಉದಾಹರಣೆಗಳಲ್ಲಿ ಜಿಬ್ರಾಲ್ಟರ್ ಜಲಪ್ರದೇಶ, ಮಲಕಾ, ಮ್ಯಾಡಗ್ಯಾಸ್ಕರ್ ಜಲಸಂಧಿ, ಏಡನ್ ಕೊಲ್ಲಿ ಮತ್ತು ಇಂಗ್ಲಿಷ್ ಕಾಲುವೆ ಸೇರಿವೆ. ಇವುಗಳ ಭೌಗೋಳಿಕ ರಚನೆಗಳು ಕಡಲುಗಳ್ಳರ ದಾಳಿಗಳನ್ನು ಸುಗಮವಾಗಿಸಿದವು. ಇದರ ಭೂ ಆಧಾರಿತ ಹೋಲಿಕೆಯೆಂದರೆ ಡಕಾಯಿತರು ಮತ್ತು ದರೋಡೆಕೋರರು ಹೆದ್ದಾರಿಗಳು ಮತ್ತು ಪರ್ವತ ಮಾರ್ಗಗಳಲ್ಲಿ ಪ್ರಯಾಣಿಕರ ಮೇಲೆ ಹಠಾತ್ತನೆ ದಾಳಿ ನಡೆಸುವುದು. ಖಾಸಗಿ ಶಸ್ತ್ರಸಜ್ಜಿತ ನೌಕಾದಾಳಿಯು ಕಡಲುಗಳ್ಳತನಕ್ಕೆ ಹೋಲುವ ವಿಧಾನಗಳನ್ನು ಬಳಸುತ್ತವೆ, ಆದರೆ ಮುಖ್ಯಾಧಿಕಾರಿಯು ರಾಜ್ಯದ ಆದೇಶಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಾನೆ. ರಾಜ್ಯವು ಶತ್ರು ರಾಷ್ಟ್ರಕ್ಕೆ ಸೇರಿದ ವಾಣಿಜ್ಯ ಹಡಗುಗಳ ಸೆರೆಹಿಡಿಯುವಿಕೆಗೆ ಅಧಿಕಾರ ನೀಡುತ್ತದೆ. ಹಾಗಾಗಿ ಇದು ದೇಶಕ್ಕೆ ಸೇರದ ಕಾರ್ಯಭಾಗಿಗಳಿಂದ ನಡೆಯುವ ಯುದ್ಧದಂಥ ಚಟುವಟಿಕೆಯ ಕಾನೂನುಬದ್ಧ ರೂಪವಾಗಿದೆ.[]

ಕಡಳುಗಳ್ಳರ ಸಾಮಾನ್ಯವಾದ ಧ್ವಜಚಿಹ್ನೆ

ಕಡಲುಗಳ್ಳತನವು ಸಾಮಾನ್ಯವಾಗಿ ಅಪರಾಧಿಯದೇ ನೌಕೆಯ ಮೇಲೆ ಪ್ರಯಾಣಿಸುವ ಜನರ ವಿರುದ್ಧ ಎಸಗಲಾದ ಅಪರಾಧಗಳನ್ನು ಒಳಗೊಳ್ಳುವುದಿಲ್ಲ (ಉದಾ. ಒಬ್ಬ ಪ್ರಯಾಣಿಕನು ಅದೇ ನೌಕೆಯ ಮೇಲಿನ ಇತರರಿಂದ ಕದಿಯುವವನು). ೨೧ನೇ ಶತಮಾನದ ಆರಂಭದಲ್ಲಿ, ಸಾಗಣೆ ನೌಕೆಗಳ ವಿರುದ್ಧ ಸಮುದ್ರದಲ್ಲಿ ನಡೆಯುವ ದರೋಡೆಯು ಗಮನಾರ್ಹ ಸಮಸ್ಯೆಯಾಗಿ ಉಳಿದಿದೆ (ವಿಶ್ವದಾದ್ಯಂತದ ನಷ್ಟಗಳು ವರ್ಷಕ್ಕೆ ೧೬ ಬಿಲಿಯ ಡಾಲರ್‌ಗಳಷ್ಟು ಎಂದು ೨೦೦೭ರಲ್ಲಿ ಅಂದಾಜಿಸಲಾಗಿದೆ). ಇಂದು ಕಡಲುಗಳ್ಳತನವು ವಿಶೇಷವಾಗಿ ಕೆಂಪು ಸಮುದ್ರ ಮತ್ತು ಹಿಂದೂ ಮಹಾಸಾಗರದ ನಡುವಿನ ಜಲಪ್ರದೇಶದಲ್ಲಿ, ಸೊಮಾಲಿ ಕರಾವಳಿಯ ಆಚೆಗೆ, ಮತ್ತು ಮಲಾಕಾ ಹಾಗೂ ಸಿಂಗಾಪುರ ಜಲಸಂಧಿಯಲ್ಲಿಯೂ ನಡೆಯುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "TEDx Talk: What is Piracy?". Retrieved October 23, 2014.