ಎಸ್. ಅನಂತನಾರಾಯಣ - (ನವೆಂಬರ್ ೩೦,೧೯೨೫- ಆಗಸ್ಟ್ ೨೫,೧೯೯೨) ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರೆನಿಸಿದ್ದಾರೆ.

ಎಸ್. ಅನಂತನಾರಾಯಣ
ಜನನನವೆಂಬರ್ ೩೦, ೧೯೨೫
ಮೈಸೂರು
ಮರಣಆಗಸ್ಟ್ ೨೫, ೧೯೯೨
ವೃತ್ತಿಪ್ರಾಧ್ಯಾಪಕರು, ಸಾಹಿತಿ

ಪ್ರೊ. ಅನಂತ ನಾರಾಯಣ ಅವರು ನವೆಂಬರ್ ೩೦, ೧೯೨೫ರ ವರ್ಷದಲ್ಲಿ ಮೈಸೂರಿನಲ್ಲಿ ಜನಿಸಿದರು. ಅವರ ತಂದೆ ಆರ್. ಸದಾಶಿವಯ್ಯನವರು ಮತ್ತು ತಾಯಿ ರಂಗಮ್ಮನವರು. ಅನಂತನಾರಾಯಣರ ಶಿಕ್ಷಣವೆಲ್ಲ ಮೈಸೂರಿನಲ್ಲೆ ನೆರವೇರಿತು. ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕಗಳೊಂದಿಗೆ ಗಳಿಸಿದರು. ಅವರು ಮೈಸೂರು ವಿಶ್ವವಿದ್ಯಾನಿಲಯದ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಂಗೀತ, ನಾಟಕ ಕಾಲೇಜಿನಲ್ಲಿ ಮೂರು ವರ್ಷ ನಾಟಕ ಶಾಸ್ತ್ರದ ಬೋಧಕರಾಗಿ, ನಾಟಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ತಮ್ಮ ಶಿಷ್ಯವೃಂದಕ್ಕೆ ಪ್ರೀತಿಪಾತ್ರರಾಗಿದ್ದರು.

ಸೆರೆಮನೆವಾಸ

ಬದಲಾಯಿಸಿ

ನವೋದಯ ಕಾಲದ ಬರಹಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು ಸಹಜ ಕ್ರಿಯೆ. ಅನಂತನಾರಾಯಣರೂ ಸಹಾ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿ ಸೆರೆಮನೆವಾಸ ಕಂಡರು. ಸೆರೆಮನೆಯೊಳಗಿದ್ದಾಗಲೇ ಕವಿತೆಗಳ ರಚನೆಗಾರಂಭಿಸಿದ ಅನಂತನಾರಾಯಣರು ೧೯೪೨೨ರಲ್ಲಿ ‘ಬಾಡದ ಹೂ’ ಎಂಬ ನೀಳ್ಗವಿತೆಗೆ ಬಿ.ಎಂ.ಶ್ರೀ.ಯವರಿಂದ ರಜತ ಮಹೋತ್ಸವದ ಸುವರ್ಣ ಪದಕ ಸ್ವೀಕರಿಸಿದರು.

ಸಾಹಿತ್ಯ

ಬದಲಾಯಿಸಿ

ಹೀಗೆ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ಅನಂತನಾರಾಯಣರು ಹಲವಾರು ಕಥೆ, ಕಾದಂಬರಿ, ಸಾಹಿತ್ಯ ವಿಮರ್ಶೆಗಳ ಜೊತೆಗೆ ಜೀವನ ಚರಿತ್ರೆಯನ್ನೂ ಪ್ರಕಟಿಸಿದರು.

ಕೃತಿಗಳು

ಬದಲಾಯಿಸಿ

ಕಾದಂಬರಿಗಳು

ಬದಲಾಯಿಸಿ
  • ಅತ್ತಿಗೆ
  • ಆಲದ ಹೂ
  • ತೀರದ ಬಯಕೆ
  • ಪಯಣದ ಹಾದಿಯಲ್ಲಿ
  • ಮುರುಕು ಮಂಟಪ
  • ಸಪ್ತಸಮಾಲೋಕ

ಸಂಪಾದಿತ ಕೃತಿಗಳು

ಬದಲಾಯಿಸಿ
  • ಚಿಂತನ ಬಿಂದು
  • ಮೆಲಕು
  • ವಿಚಾರ ನಿಮಿಷ

ಪ್ರಬಂಧಗಳು

ಬದಲಾಯಿಸಿ
  1. ಅರಣ್ಯ ಪರ್ವ
  2. ಹರಿಶ್ಚಂದ್ರ ಕಾವ್ಯ ಸಾಂಗತ್ಯ

ನಾಟಕಗಳು

ಬದಲಾಯಿಸಿ
  • ಪ್ರೇಮಬಲಿ
  • ಮಂಗಳಾರತಿ
  • ವಿಪರೀತಕ್ಬಂತೆ ವಿವಾಹ
  • ಸ್ವಪ್ನವಾಸವದತ್ತ
  • ಪ್ರತಿಜ್ಞಾ ಯೌಗಂಧರಾಯಣ
  • ಪೂರ್ಣಾಹುತಿ.
  • ಬಾಡದ ಹೂ,
  • ಉಷಾ ಸ್ವಪ್ನ,
  • ಬಣ್ಣಗಳು ಆಡಿದುವು;

ಅನುವಾದಿತ ಕೃತಿಗಳು

ಬದಲಾಯಿಸಿ

ಅಮೆರಿಕದಲ್ಲಿ ಮನೆಮಾತಾಗಿರುವ ಜನಪ್ರಿಯ ಲೇಖಕಿ ಲಾರ ಇಂಗಾಲ್ಸ್ ವೈಲ್ಡರ್‌ರವರ ಜೀವನಾನುಭವವನ್ನು ಕುರಿತ ೮ ಕೃತಿಗಳ (ಅನಂತನಾರಾಯಣರವರ ಅಕಾಲಮರಣದಿಂದ ೯ ಭಾಗಗಳಲ್ಲಿ ೮ ಕೃತಿಗಳ ಅನುವಾದ ಮಾತ್ರ ಅವರಿಂದ ಆಗಿದೆ) ಅನುವಾದ ಈ ಕೆಳಕಂಡಂತಿವೆ:

  • ದೊಡ್ಡ ಕಾಡಿನಲ್ಲಿ ಪುಟ್ಟಮನೆ
  • ಹುಲ್ಲುಗಾವಲಿನಲ್ಲಿ ಪುಟ್ಟಮನೆ
  • ರೈತರ ಹುಡುಗ
  • ಪ್ಲಮ್ ನದಿಯ ತೀರದಲ್ಲಿ
  • ಸಿಲ್ವರ್‍‌ಲೇಕ್ ದಡದಲ್ಲಿ
  • ಚಳಿಯ ಸುಳಿಯಲ್ಲಿ
  • ಹುಲ್ಲುಗಾವಲಿನಲ್ಲಿ ಪುಟ್ಟ ಪಟ್ಟಣ
  • ಆ ಸೊಗಸಿನ ಬಂಗಾರದ ದಿನಗಳು
  • ಡೇಗೆ ಹಕ್ಕಿ : ಇಟಲಿ - ಆಸ್ಟ್ರಿಯಾ ಕಥೆಗಳು

ಸಂಸ್ಕೃತದಿಂದ ಅನುವಾದಗಳು

ಬದಲಾಯಿಸಿ
  • ಅಭಿಜ್ಞಾನ ಶಾಕುಂತಲ,
  • ಕನ್ನಡ ಉತ್ತರ ರಾಮಚರಿತೆ
  • ಕನ್ನಡ ನಾಗಾನಂದ, ಭಾಸನ ಎರಡು ನಾಟಕಗಳು, ಸಂಗ್ರಹ ಭಾಗವತ, ಸಂಗ್ರಹ ಮಹಾಭಾರತ.
  • ಎಲಿಯಟ್ಟನ ಮೂರು ಉಪನ್ಯಾಸಗಳು
  • ಕಲೆ ಎಂದರೇನು ? ಪಾಶ್ಚಾತ್ಯ ಕಾವ್ಯ ಚಿಂತನ,
  • ಮಹತ್‌ಕಾವ್ಯ ಕಲ್ಪನೆ,
  • ಸಾಹಿತ್ಯ ಪ್ರವೇಶ, ಸಾಹಿತ್ಯ ಮತ್ತು ಮನೋವಿಜ್ಞಾನ, ಸಾಹಿತ್ಯ ವಿಮರ್ಶೆಯ ತತ್ತ್ವಗಳು. ಸಾಹಿತ್ಯ ಮನನ.
  • ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ - ಅವರ ಪಿಹೆಚ್‌ಡಿ ಪ್ರಬಂಧ.

ಪ್ರಶಸ್ತಿ ಪುರಸ್ಕಾರ

ಬದಲಾಯಿಸಿ
  • ಪುರಂದರ ಕಂಡ ಶ್ರೀರಾಮ ಸಂಗೀತ ರೂಪಕಕ್ಕೆ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
  • ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ಬಿ.ಎಂ.ಶ್ರೀ - ರಜತ ಪದಕ

ಅನಂತನಾರಾಯಣರು ಆಗಸ್ಟ್ ೨೫, ೧೯೯೨ರ ವರ್ಷದಲ್ಲಿ ನಿಧನರಾದರು. ಅವರ ಪ್ರೀತಿಪಾತ್ರ ವಿದ್ಯಾರ್ಥಿಗಳಿಗೆ ಅವರು ಸದಾ ನೆನಪಿನಲ್ಲುಳಿದವರು.

ಆಕರಗಳು

ಬದಲಾಯಿಸಿ
  1. ಕಣಜ Archived 2016-03-06 ವೇಬ್ಯಾಕ್ ಮೆಷಿನ್ ನಲ್ಲಿ.
  2. ಪುಸ್ತಕ ಜಗತ್ತು
  3. ಪ್ರಗಾಥ: ಪ್ರಜಾವಾಣಿ