Sir Edmund Hillary in the cockpit of the Trans-Antarctic Expedition's aeroplane.

ನ್ಯೂ ಜೀಲ್ಯಾಂಡ್ಸರ್ ಎಡ್ಮಂಡ್ ಹಿಲರಿ (೧೯೧೯ - ೨೦೦೮ )ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಹತ್ತಿದ ,ಪ್ರಪಂಚದ ಮೊದಲ ವ್ಯಕ್ತಿ.ಹೀಗಾಗಿ ಇವರ ಹೆಸರು ಜಗದ್ವಿಖ್ಯಾತ.ಇವರ ಈ ಸಾಹಸಕ್ಕೆ ಜೊತೆಯಾಗಿದ್ದವರು ಭಾರತತೇನ್‌‍‍ಸಿಂಗ್ .ಇವರಿಬ್ಬರೂ ಎವರೆಸ್ಟ್ ಹತ್ತಿ ದಾಖಲೆ ಸ್ಥಾಪಿಸಿದ್ದು ೧೯೫೩, ಮೇ ೨೯ರಂದು.

ಮೌಂಟ್ ಎವರೆಸ್ಟ್ಸಂಪಾದಿಸಿ

ಹಿಮಾಲಯದ ಪರ್ವತಶ್ರೇಣಿಯಲ್ಲಿರುವ ಮೌಂಟ್ ಎವರೆಸ್ಟ್ ೨೯,೦೦೦ ಅಡಿ ಎತ್ತರವಿದೆ.೧೯೫೩ರಲ್ಲಿ ತೇನ್‌ಸಿಂಗ್‌ರೊಂದಿಗೆ ಈ ಪರ್ವತವನ್ನು ಏರಿದ ಹಿಲರಿ ಅದುವರೆಗೂ ಮಾನವನಿಗೆ ಅಸಾಧ್ಯವೆನಿಸಿದ್ದ ಕಾರ್ಯವನ್ನು ಮಾಡಿ,ಹೊಸ ಇತಿಹಾಸವನ್ನು ಬರೆದರು.೫೦ ವರ್ಷಗಳ ನಂತರ ಇದೇ ಶಿಖರವನ್ನು ೨೦೦೩ರಲ್ಲಿ ಹಿಲರಿಯವರ ಮಕ್ಕಳಾದ ಪೀಟರ್ ಮತ್ತು ಚಾಮ್ಲಿಂಗ್ ಏರಿದ್ದು ಇನ್ನೊಂದು ಸಾಧನೆ.

ಪರ್ವತಾರೋಹಿಸಂಪಾದಿಸಿ

ಹಿಲರಿಯವರ ಎವರೆಸ್ಟ್ ಏರುವ ಮೊದಲ ಪ್ರಯತ್ನ ಭಗ್ನವಾಗಿ,ಕಾಲು ಮುರಿದು ಆಸ್ಪತ್ರೆ ಸೇರಿದ್ದರು.ಆಸ್ಪತ್ರೆಯ ಮಂಚದಲ್ಲಿ ಮಲಗಿಯೇ ಕಾಣುತ್ತಿದ್ದ ಕನಸು ಮುಂದೊಂದು ದಿನ ಎವರೆಸ್ಟ್ ಏರುವ ಮೂಲಕ ಸಾಕಾರವಾಯಿತು. ಎವರೆಸ್ಟ್ ಆರೋಹಣದ ಬಳಿಕ ವಿಶ್ರಾಂತರಾಗದ ಹಿಲರಿ,ವಿಶ್ವದ ಅತಿ ಕಠಿಣ ೧೦ ಪರ್ವತಗಳನ್ನು ಮುಂದಿನ ೧೦ ವರ್ಷಗಳಲ್ಲಿ ಏರಿದರು.ಸಾಹಸಿಗರನ್ನು,ಪರ್ವತಾರೋಹಿಗಳನ್ನು ಸದಾ ಪ್ರೋತ್ಸಾಹಿಸುತ

ಮಾನವತಾವಾದಿಸಂಪಾದಿಸಿ

ಮೌಂಟ್ ಎವರೆಸ್ಟ್ ಪರ್ವತಾರೋಹಣದಲ್ಲಿ ನೆರವಾಗಿದ್ದ ಶೆರ್ಪಾಗಳನ್ನು ಹಿಲರಿ ಎಂದೂ ಮರೆಯಲಿಲ್ಲ.ದುರ್ಗಮ ಪರ್ವತದ ತಪ್ಪಲುಗಳಲ್ಲಿ ನೆಲೆಸಿದ್ದ ಶೆರ್ಪಾಗಳ ಕಾಲೋನಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟರು.ಶಾಲೆ, ವಿದ್ಯಾರ್ಥಿ ನಿಲಯ,ಆಸ್ಪತ್ರೆ.. ಹೀಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿದರು.ಸಾಹಸಿಗಳ ಪಾಲಿಗೆ ಗುರುವಾಗಿದ್ದ ಇವರು,ಪರ್ವತಾರೋಹಿಗಳ ಪಾಲಿಗೆ ಮೆಚ್ಚಿನ 'ಡಾರ್ಲಿಂಗ್' ಆಗಿದ್ದರು.ಜನರ ಕಷ್ಟ ನಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದರು.ಹಿಮಾಲಯದಲ್ಲಿ ಮಾಲಿನ್ಯ ತಡೆಗಟ್ಟಲು ಸಾಕಷ್ಟು ಪ್ರಯತ್ನಿಸಿದ್ದರು.

ಸೇವೆ-ಪುರಸ್ಕಾರಸಂಪಾದಿಸಿ

ಹಿಲರಿ ಜನವರಿ ೧೧,೨೦೦೮ರಂದು ಹೃದಯಾಘಾತದಿಂದ ನಿಧನರಾದರು.