ಜರ್ಮನಿಯ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಎಜುರ್ಡ್ ಬುಕ್ನರ್ರವರು ೧೮೬೦ರ ಮೇ ೨೦ರಂದು ಮ್ಯುನಿಚ್‌ನಲ್ಲಿ ಜನಿಸಿದರು. ೧೮೮೭ರ ಸುಮಾರಿಗೆ ಬುಕ್ನರ್ರವರು ತಮ್ಮ ಹಿರಿಯ ಸಹೋದರನ ಜೊತೆ ಸಕ್ಕರೆಯನ್ನು ಕಿಣ್ವನ ಪ್ರಕ್ರಿಯೆಗೆ (fermentation) ಒಳಪಡಿಸಿದರು. ಸ್ವಾರಸ್ಯ ಸಂಗತಿಯೆಂದರೆ ಕಿಣ್ವನ ಪ್ರಕ್ರಿಯೆಗೆ ಒಳಗಾದ ಸಕ್ಕರೆ, ಕಾರ್ಬನ್ ಡೈ ಆಕ್ಸೈಡ್ ಮತ್ತು ಅಲ್ಕೋಹಾಲ್‌ಗಳಾಗಿ ಪರಿವರ್ತಿತವಾಯಿತು. ಈ ಪ್ರಕ್ರಿಯೆ ಬುಕ್ನರ್ರವರಿಗೆ ಅಚ್ಚರಿ ಬರಿಸಿತು. ಆ ಕಿಣ್ವವನ್ನು (ಎನ್‌ಝೈಮ್‌ನನ್ನು) ಅವರು ‘ಝೈಮೇಸ್’ (zymase) ಎಂದು ಕರೆದರು. ಗಮನಾರ್ಹ ಸಂಗತಿಯೆಂದರೆ ಝೈಮೇಸ್ ಅನೇಕ ಕಿಣ್ವಗಳ ಮಿಶ್ರಣವಾಗಿದೆ. ೧೮೮೫ ಮತ್ತು ೧೯೦೫ರ ನಡುವೆ ಪೈರಾಝೋಲ್ (pyrazole) ಸೇರಿದಂತೆ ಅನೇಕ ನೈಟ್ರೋಜನೀಕೃತ ಸಂಯುಕ್ತಗಳ (nitrogenous compounds) ವಿಶ್ಲೇಷಣಾ ಪ್ರಕ್ರಿಯೆಗಳ ಮೇಲೆ ಸುಮಾರು ೪೮ಲೇಖನಗಳನ್ನು ಬುಕ್ನರ್ ಪ್ರಕಟಿಸಿದರು. ಹಾಗೆಯೇ ಸೈಕ್ಲೋಹೆಪ್ಟೇನ್ ಸಂಯುಕ್ತಗಳ ಸಂಶ್ಲೇಷಣೆಯನ್ನೂ ಅವರು ನಡೆಸಿದರು. ಬುಕ್ನರ್ರವರ ಸಂಶೋಧನೆಗಳಿಗೆ ೧೯೦೭ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.[೧] ಜರ್ಮನಿಯ ಸೈನ್ಯದಲ್ಲಿ ಮೇಜರ್ ಆಗಿದ್ದ ಬುಕ್ನರ್ರವರು ೧೯೧೭ರ ಆಗಸ್ಟ್ ೧೫ರಂದು ರುಮೇನಿಯಾದ ಗಡಿ ಪ್ರದೇಶದಲ್ಲಿ ನಡೆದ ಗ್ರೆನೇಡ್ ಧಾಳಿಯಲ್ಲಿ ಕೊಲ್ಲಲ್ಪಟ್ಟರು.

ಎಜುರ್ಡ್ ಬುಕ್ನರ್
Eduardbuchner.jpg
ಎಜುರ್ಡ್ ಬುಕ್ನರ್
Born
ಎಜುರ್ಡ್ ಬುಕ್ನರ್

೧೮೬೦ ಮೇ ೨೦
ಜರ್ಮನಿ
Nationalityಜರ್ಮನಿ

ಉಲೇಖಗಳುಸಂಪಾದಿಸಿ