ಉದ್ಘರ್ಷ (ಚಲನಚಿತ್ರ)
ಉದ್ಘರ್ಷ 2019 ರ ಕನ್ನಡ ಭಾಷೆಯ ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಚಲನಚಿತ್ರ, ಸುನಿಲ್ ಕುಮಾರ್ ದೇಸಾಯಿ ಈ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. [೧] ಈ ಚಿತ್ರವನ್ನು ತೆಲುಗು ಮತ್ತು ಮಲಯಾಳಂಗೆ ಅದೇ ಶೀರ್ಷಿಕೆಯೊಂದಿಗೆ ಮತ್ತು ತಮಿಳು ಭಾಷೆಯಲ್ಲಿ ಉಚಕತ್ತಂ ಎಂದು ಡಬ್ ಮಾಡಲಾಯಿತು . [೨] ಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದೇವರಾಜ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. [೩] ಈ ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್, ಸಾಯಿ ಧನ್ಸಿಕಾ, [೪] ಹರ್ಷಿಕಾ ಪೂನಚ್ಚ, ಕಿಶೋರ್, ಡಾ. ಕಿಂಗ್‌ಮೂಹನ್, ತಾನ್ಯಾ ಹೋಪ್, [೫] ಕಬೀರ್ ದುಹಾನ್ ಸಿಂಗ್, [೬] ಪ್ರಭಾಕರ್, [೭] ಮತ್ತು ಶ್ರದ್ಧಾ ದಾಸ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. [೮]
ಉದ್ಘರ್ಷ | |
---|---|
ನಿರ್ದೇಶನ | ಸುನೀಲ್ ಕುಮಾರ್ ದೇಸಾಯಿ |
ನಿರ್ಮಾಪಕ | ದೇವರಾಜ್ ಡಿ |
ಲೇಖಕ | ಸುನೀಲ್ ಕುಮಾರ್ ದೇಸಾಯಿ |
ಚಿತ್ರಕಥೆ | ಸುನೀಲ್ ಕುಮಾರ್ ದೇಸಾಯಿ |
ಕಥೆ | ಸುನೀಲ್ ಕುಮಾರ್ ದೇಸಾಯಿ |
ಪಾತ್ರವರ್ಗ | ಠಾಕೂರ್ ಅನೂಪ್ ಸಿಂಗ್ ಸಾಯಿ ಧನ್ಸಿಕಾ ತಾನ್ಯಾ ಹೋಪ್ ಹರ್ಷಿಕಾ ಪೂನಚ್ಚ ಕಿಶೋರ್ |
ಸಂಗೀತ | ಸಂಜೋಯ್ ಚೌಧರಿ |
ಸ್ಟುಡಿಯೋ | ಡಿ ಕ್ರೀಯೇಷನ್ಸ್ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ಕನ್ನಡ |
ಪಾತ್ರವರ್ಗ
ಬದಲಾಯಿಸಿ- ಆದಿತ್ಯ ಪಾತ್ರದಲ್ಲಿ ಠಾಕೂರ್ ಅನೂಪ್ ಸಿಂಗ್
- ರಶ್ಮಿ ಪಾತ್ರದಲ್ಲಿ ಸಾಯಿ ಧನ್ಸಿಕಾ
- ಕರೀಶ್ಮಾ ಪಾತ್ರದಲ್ಲಿ ತಾನ್ಯಾ ಹೋಪ್
- ಹರ್ಷಿಕಾ ಪೂನಚ್ಚ
- ಕಬೀರ್ ದುಹಾನ್ ಸಿಂಗ್
- ಪ್ರಭಾಕರ್
- ಶ್ರದ್ಧಾ ದಾಸ್
- ಮೆನನ್ ಪಾತ್ರದಲ್ಲಿ ಕಿಶೋರ್
- ಶ್ರವಣ್ ರಾಘವೇಂದ್ರ
- ವಂಶಿ ಕೃಷ್ಣ
ನಿರ್ಮಾಣ
ಬದಲಾಯಿಸಿನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, ನಿರ್ದೇಶಕರು "ಈ ಚಿತ್ರವು ಕೇವಲ 20 ನಿಮಿಷಗಳ ಸಂಭಾಷಣೆಯನ್ನು ಹೊಂದಿದ್ದು ಚಿತ್ರದ ಉಳಿದ ಭಾಗವು ದೃಶ್ಯಗಳು, ಸಂಗೀತ ಮತ್ತು ಪರಿಣಾಮಗಳನ್ನು ಒಳಗೊಂಡಿರುವ ಕಾರಣದಿಂದ ಉದ್ಘರ್ಷ ವಿಶಿಷ್ಟವಾಗಿದೆ" ಎಂದು ಹೇಳಿದರು. [೯] ಹಿನ್ನೆಲೆ ಸಂಗೀತದಲ್ಲಿ ಪರಿಣಿತರೆಂದು ಪರಿಗಣಿಸಲ್ಪಟ್ಟಿರುವ ಬಾಲಿವುಡ್ ಸಂಗೀತ ನಿರ್ದೇಶಕ ಸಂಜೋಯ್ ಚೌಧರಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಫಸ್ಟ್‌ಲುಕ್ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದ್ದು, ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ. [೧೦] ಚಿತ್ರದ ಬಹುಪಾಲು ಚಿತ್ರೀಕರಣ ಕೊಡಗು ಚಿತ್ರದಲ್ಲಿದೆ. [೩]
ಉಲ್ಲೇಖಗಳು
ಬದಲಾಯಿಸಿ- ↑ "Sunil Kumar Desai's Next Film Udgharsha Launched". 9 May 2017.
- ↑ "Sunil Kumar Desai aims to evoke intrigue with first look of Udgharsha – Times of India".
- ↑ ೩.೦ ೩.೧ "I am back: Sunil Kumar Desai".
- ↑ "Dhansika looking forward to Sandalwood debut with 'Udgharsha' by director Sunil Kumar Desai". 22 June 2017.
- ↑ "Tanya Hope bags Darshan's 51st film".
- ↑ "Kabir Duhan Singh's next, a bilingual". 10 April 2017.
- ↑ "ಕುತೂಹಲ ಮೂಡಿಸಿದೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಉದ್ಘರ್ಷ' ಚಿತ್ರದ ಪೋಸ್ಟರ್!". The New Indian Express. Archived from the original on 2018-08-29. Retrieved 2020-01-14.
- ↑ "Baddie turns hero". 9 May 2017.
- ↑ "Udgharsha poster is designed to grab eyeballs, says director Sunil Kumar Desai". New India Times.
- ↑ Karnataka, Vijaya (27 August 2018). "ರಕ್ತಸಿಕ್ತ ಕಾಲುಗಳ ಉದ್ಘರ್ಷ ಫಸ್ಟ್ ಲುಕ್; ಯಾರದು ಆ ಕಾಲುಗಳು? - Vijaykarnataka". Vijaya Karnataka. Indiatimes.com.