ಇಸ್ಪೀಕ್

(ಈಸ್ಪೀಕ್ ಇಂದ ಪುನರ್ನಿರ್ದೇಶಿತ)

ಈಸ್ಪೀಕ್ (English:eSpeak) ಇದು ಒಂದು ಮುಕ್ತ ಆಕರ ಟಿ.ಟಿ.ಎಸ್ (Text-to-speach) ತಂತ್ರಾಂಶ. ಇದು ಗಣಕದಲ್ಲಿರುವ ಪಠ್ಯವನ್ನು ಧ್ವನಿಗೆ ಪರಿವರ್ತಿಸಿ ಓದಿ ಹೇಳುತ್ತದೆ. ಇದು ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಲಭ್ಯವಿದೆ.

ಇಸ್ಪೀಕ್ ತಂತ್ರಾಂಶದ ಲೋಗೊ

ಇತಿಹಾಸ ಬದಲಾಯಿಸಿ

೧೯೯೫ ರಲ್ಲಿ ಇಂಗ್ಲೆಂಡ್ ದೇಶದ ಜೋನಾಥನ್ ಡಡ್ಡಿಂಗ್ಟನ್ (Jonathan Duddington) ಅವರು ಸ್ಪೀಕ್ (Speak) ಎಂಬ ಹೆಸರಿನಲ್ಲಿ ರಿಸ್ಕ್ ಓಎಸ್ ಗಣಕ ಕಾರ್ಯಾಚರಣೆಗೆ ಬ್ರಿಟೀಷ್ ಇಂಗ್ಲೀಷ್ ಭಾಷೆಯನ್ನು ಬೆಂಬಲಿಸಲು ಅಭಿವೃದ್ಧಿಪಡಿಸಿದರು. ೨೦೦೬ ರ ಫೆಬ್ರವರಿ ೧೭ ರಂದು ಸ್ಪೀಕ್ ೧.೦ ಆವ್ರುತ್ತಿಯನ್ನು ಲಿನಕ್ಸ್ ಕಾರ್ಯಾಚರಣೆ ವ್ಯವಸ್ಥೆಗೆ ಹಾಗೂ ೨೦೦೭ ಜನವರಿಯಲ್ಲಿ ವಿಂಡೋಸ್ ಜಿಪಿಎಲ್ವಿ ೨ ರ ಅಡಿಯಲ್ಲಿ ಬಿಡುಗಡೆ ಮಾಡಲಾಯಿತು. ಸ್ಪೀಕ್ ೧.೧೪ ಆವ್ರುತ್ತಿಯ ನಂತರ ಇದನ್ನು ಈಸ್ಪೀಕ್ ಎಂದು ಮರು ನಾಮಕರಣ ಮಾಡಲಾಯಿತು. ನಂತರ ಈಸ್ಪೀಕ್ ೧.೧೬ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.[೧], [೨] ೨೦೧೦ ರ ಜನವರಿ ೨೫ ರಂದು ರೀಸ್ ಡನ್ ಅವರು ಈಸ್ಪೀಕ್ ಎನ್ಜಿ (eSpeak-NG) ಎಂಬ ಕವಲನ್ನು (Fork) ಆರಂಭಿಸಿದರು.[೩]

ಗುಣ ಲಕ್ಷಣ ಬದಲಾಯಿಸಿ

ಇದು ಪಠ್ಯದಿಂದ ಧ್ವನಿಗೆ ಪರಿವರ್ತಿಸುತ್ತದೆ.

ಬೆಂಬಲಿತ ಭಾಷೆಗಳು ಬದಲಾಯಿಸಿ

ಈಸ್ಪೀಕ್ ಸುಮಾರು ೮೨ ಭಾಷೆಗಳನ್ನು ಬೆಂಬಲಿಸುತ್ತದೆ.

ಸಿಂಥಿಸಿಸ್ ವಿಧಾನ ಬದಲಾಯಿಸಿ

ಫಾರ್ಮೆಂಟ್ ವಿಧಾನವನ್ನು ಬಳಸಿ ಗಣಕವು ಧ್ವನಿಯನ್ನು ವಿದ್ಯುನ್ಮಾನವಾಗಿ ರಚಿಸುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. http://espeak.sourceforge.net/
  2. https://sourceforge.net/projects/espeak/files/espeak/
  3. https://github.com/rhdunn/espeak/commit/63daaecefccde34b700bd909d23c6dd2cac06e2
"https://kn.wikipedia.org/w/index.php?title=ಇಸ್ಪೀಕ್&oldid=1173630" ಇಂದ ಪಡೆಯಲ್ಪಟ್ಟಿದೆ