ಸಯ್ಯದುನಾ ಆಲಾ ಹಜರತ ಇಮಾಮ ಅಹ್ಮದ ರಜಾ ಖಾನ ಕಾದರಿ ೧೪ನೇ ಶತಮಾನದ ಇಸ್ಲಾಂ ಧರ್ಮದ ನವಜೀವನದಾತಾ (ಮುಜದ್ದಿದ) ಇದ್ದರು. ಅವರಿಗೆ ಆ ಸಮಯದ ಪ್ರಸಿದ್ಧ ಅರಬ ವಿದ್ವಾಂಸರು ಈ ಉಪಾದಿಯನ್ನು ನೀಡಿ ಗೌರವಿಸಿದ್ದರು. ಅವರು ಭಾರತ ಉಪಖಾಂಡದ ಮುಸಲ್ಮಾನರ ಹೃದಯದಲ್ಲಿ ಅಲ್ಲಾಹ ಸುಬಹಾನಹು ತಆಲಾ ಹಾಗೂ ಮುಹಮ್ಮದ ರಸೂಲಲ್ಲಾಹ ಸಲ್ಲಲ್ಲಾಹು ತಆಲಾ ಅಲೈಹಿ ವಸಲ್ಲಮ ರ ಪ್ರತಿ ಪ್ರೇಮವನ್ನು ತುಂಬಿದರು ಮತ್ತು ಮುಹಮ್ಮದ ರಸೂಲಲ್ಲಾಹ ಸಲ್ಲಲ್ಲಾಹು ತಆಲಾ ಅಲೈಹಿ ವಸಲ್ಲಮ ರ ಸುನ್ನತಗಳನ್ನು ಜೀವಿತಗೊಳಿಸಿ ಇಸ್ಲಾಂ ಧರ್ಮವನ್ನು ಪುನರುಜ್ಜೀವಿತ ಗೊಳಿಸಿದರು. ಇಸ್ಲಾಮಿ ವಿಜ್ಞಾನದಲ್ಲಿ ಪರಿಣತಿಯನ್ನು ಹೊಂದುದಷ್ಟೇ ಅಲ್ಲ ಇತರೇ ವಿಜ್ಞಾನದಲ್ಲಿಯೂ ಪರಿಣತಿಯನ್ನು ಪಡೆದುಕೊಂಡಿದ್ದರು. ಆದುದರಿಂದಲೇ ಅವರನ್ನು ಅವರ ಸಮಯದ ಇಮಾಮ ಅಬೂ ಹನೀಫಾ ಎಂದೂ ಕರೆದರು. ಅವರು ಕೇವಲ ೧೩ ವರ್ಷದ ಚಿಕ್ಕ ವಯಸ್ಸಿನಲ್ಲಿ ಮುಫ್ತಿಯ ಶ್ರೇಣಿ ಗ್ರಹಿಸಿದರು. ಅವರು ೭೨ಕ್ಕಿಂತ ಹೆಚ್ಚು ವಿವಿಧ ವಿಷಯಗಳಲ್ಲಿ ೧೦೦೦ ಕ್ಕಿಂತ ಹೆಚ್ಚು ಪುಸ್ತಕಗಳನ್ನು ಬರೆದರು ಇವುಗಳಲ್ಲಿ ಕುರಾನಿನ ವಿವರಣೆ ಅಂದರೆ ತಫ್ಸೀರ, ಪೈಗಂಬರ ವಾಣಿ ಅಂದರೆ ಹದೀಸ, ಫಿಕಹ, ಗಣಿತ, ಭೂವಿಜ್ಞಾನ, ಖಗೋಳ ವಿಜ್ಞಾನ ಹಾಗೂ ಇತರೇ ವೈಜ್ಞಾನಿಕ ವಿಷಯಗಳು ಪ್ರಮುಖವಾಗಿವೆ. ಅವರ ಒಂದು ಪ್ರಮುಖ ಪುಸ್ತಕ ಅದ್ದೌಲತುಲ್ ಮಕ್ಕಿಯಾ ಇದೆ ಇದನ್ನು ಕೇವಲ ೮ ಗಂಟೆಗಳಲ್ಲಿ ಯಾವುದೇ ಸಂದರ್ಭ ಗ್ರಂಥಗಳ ಸಹಾಯವಿಲ್ಲದೆ ಹರಮ-ಎ-ಮಕ್ಕಾದಲ್ಲಿ ಬರೆದರು. ಅವರ ಒಂದು ಪ್ರಮುಖ ಗ್ರಂಥ ಫತಾವಾ ರಜ್ವಿಯಾ ಈ ಶತಮಾನದ ಇಸ್ಲಾಮಿ ಕಾನೂನಿನ ಒಂದು ಒಳ್ಳೆಯ ಉದಾಹರಣೆಯಾಗಿದ್ದು ೧೩ ದೊಡ್ಡ ವಿಭಾಗಗಳಲ್ಲಿ ರಚಿತವಾಗಿದೆ. ಕಂಜುಲ್ ಈಮಾನ ಫೀ ತರ್ಜಮತುಲ್ ಕುರಆನ ಉರ್ದು ಭಾಷೆಯ ಈವರೆಗಿನ ಅತೀ ಉನ್ನತ ತರ್ಜುಮೆಯಾಗಿದೆ. ಇಮಾಮ ಅಹ್ಮದ ರಜಾರ ಜೀವನ ಹಾಗೂ ಕಾರ್ಯಗಳ ಕುರಿತು ವಿವಿಧ ವಿಷಯಗಳಲ್ಲಿ ಅನುಸಂಧಾನಕ್ಕಾಗಿ ದೇಶ ವಿದೇಶಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಕೈಗೊಂಡಕ್ಕಾಗಿ ಬಹಳಷ್ಟು ಜನರಿಗೆ ಪಿ.ಎಚ್.ಡಿ. ಪದವಿಯನ್ನು ನೀಡಿದೆ. ಇವುಗಳಲ್ಲಿ ಮೈಸೂರು ವಿಶ್ವವಿದ್ಯಾಲಯ ಹಾಗೂ ಮಧ್ಯಕಾಲ ಹಾಗೂ ಆಧುನಿಕ ಕಾಲದ ಪ್ರಥಮ ವಿಶ್ವವಿದ್ಯಾಲಯವಾದ ಕಾಹಿರಾ ಈಜಿಪ್ತಿನ ಅಲ್-ಅಜ್ಹರ ವಿಶ್ವವಿದ್ಯಾಲಯ ಪ್ರಮುಖವಾಗಿದೆ.

೨೫೫px
ಇಮಾಮ ಅಹ್ಮದ ರಜಾ ಖಾನ ಕಾದರಿ
اعلیٰ حضرت امام احمد رضا خان قادری
ಜನನ1856
ಬರೇಲ್ವಿ ಶರೀಫ, ಉತ್ತರ ಪ್ರದೇಶ
ಮರಣ1921
ಬರೇಲ್ವಿ ಶರೀಫ
ಕಾವ್ಯನಾಮರಜಾ
ವೃತ್ತಿಮುಫ್ತಿ, ಲೇಖಕ,ಕವಿ, ಪ್ರಾಧ್ಯಾಪಕ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕುರಾನಿನ ವಿವರಣೆ ಅಂದರೆ ತಫ್ಸೀರ್, ಪೈಗಂಬರ ವಾಣಿ ಅಂದರೆ ಹದೀಸ್, ಫಿಕಹ್, ಗಣಿತ, ಭೂವಿಜ್ಞಾನ, ಖಗೋಳ ವಿಜ್ಞಾನ ಹಾಗೂ ಇತರೇ ವೈಜ್ಞಾನಿಕ ವಿಷಯಗಳು

ಪ್ರಭಾವಗಳು

ಪ್ರಭಾವಿತರು
  • ಭಾರತ ಉಪಮಹಾದ್ವೀಪದ ಕೋಟ್ಯಾಂತರ ಸುನ್ನಿ ಮುಸ್ಲಿಮರು

ಆಲಾ ಹಜರತ ಇಮಾಮ ಅಹ್ಮದ ರಜಾ ಖಾನ ಬರೇಲ್ವಿ (Arabic: اعلیٰ حضرت امام احمد رضا خان فاضل بریلوی) ಪಠಾನ ಮನೆತನ ಹನಫಿ ಪಂಗಡ ಕಾದರಿ ಪಂಥಕ್ಕೆ ಸೇರಿದ ಇವರು ಭಾರತದ ಉತ್ತರ ಪ್ರದೇಶ ರಾಜ್ಯದ ಬರೇಲಿ ಪಟ್ಟಣದಲ್ಲಿ ಹುಟ್ಟಿದರು. ತಂದೆ ನಕಿ ಅಲಿ ಖಾನ ಹಾಗೂ ಅಜ್ಜ ರಜಾ ಅಲಿ ಖಾನ ತಮ್ಮ ಸಮಯದ ಅತೀ ದೊಡ್ಡ ಇಸ್ಲಾಮಿ ವಿದ್ವಾಂಸರು ದೇವಪುರುಷರಲ್ಲಿ ಒಬ್ಬರಾಗಿದ್ದರು. ಸುಮಾರು ೫೦ ವಿಷಯಗಳಲ್ಲಿ ಪರಿಣತರಾದ ಇಮಾಮ ಅಹ್ಮದ ರಜಾರವರು ೧೦೦೦ ಕ್ಕಿಂತ ಹೆಚ್ಚು ಚಿಕ್ಕ ದೊಡ್ಡ ಗ್ರಂಥಗಳನ್ನು ಬರೆದರು. ಪವಿತ್ರ ಕುರಾನಿನ ಉರ್ದು ತರ್ಜುಮೆ ಕನ್ಜುಲ್ ಈಮಾನ ಫಿ ತರ್ಜಮತುಲ ಕುರಾನ್ ಫತಾವಾ ರಜ್ವಿಯಾ ಹಾಗೂ ಕವನ ಸಂಕಲನವಾದ ಹದಾಯಿಕೆ ಬಖ್ಷೀಷ ಪ್ರಮುಖ ಗ್ರಂಥಗಳು. ಒಂದೇ ಸಮಯದಲ್ಲಿ ವಿದ್ವಾಂಸರೂ, ಕವಿಯೂ, ದಾರ್ಶನಿಕರು, ಬುದ್ಧಿಜೀವಿಯೂ ಆದ ಇವರು ಮುಹಮ್ಮದ ಪೈಗಂಬರರ ಒಬ್ಬ ಅಪ್ಪಟ ಭಕ್ತರೂ ಪ್ರೇಮಿಯೂ ಆಗಿದ್ದರು. ಅವರಿಗೆ ಅಹ್ಲೆ ಸುನ್ನತ ವಲ್ ಜಮಾಅತ್ ಅಂದರೆ ಸುನ್ನಿ ಪಂಗಡದ ವಿದ್ವಾಂಸರು ಇಸ್ಲಾಮಿ ೧೪ ನೇ ಶತಮಾನದ ಮುಜದ್ದಿದ ಅಂದರೆ ಧರ್ಮ ಸುಧಾರಕ ಎಂದೂ ಕರೆದಿದ್ದಾರೆ. [][]

ಜನನ ಹಾಗೂ ಮನೆತನ

ಬದಲಾಯಿಸಿ

ಆಲಾ ಹಜರತರ ಜನನ ಉತ್ತರ ಪ್ರದೇಶದ ಬರೇಲಿ ನಗರದ ಜಸೌಲಿಯಲ್ಲಿ ಶನಿವಾರ ೧೦ ನೇ ಶವ್ವಾಲ ೧೨೭೬ ಹಿಜರಿ ಅಂದರೆ ೧೪ ನೇ ಜೂನ 1857 ರಂದು ಮದ್ಯಾಹ್ನ ಮೌಲಾನಾ ರಜಾ ಅಲಿ ಖಾನರ ಮನೆಯಲ್ಲಿ ಮೌಲಾನಾ ನಕಿ ಅಲಿ ಖಾನ ರ ಮೊದಲ ಪುತ್ರನಾಗಿ ಜನಿಸಿದರು. ಜನನದ ಹಿಜರಿ ಸನ್ ಅಬ್ಜದ ಪ್ರಕಾರ ಹೆಸರು “ಅಲ್-ಮುಖ್ತಾರ” (೧೨೭೨ ಹಿಜರಿ), ಮತ್ತು ಕುರಾನಿನ ಪ್ರಕಾರ “اولآٰک کتب فی قلوبھم الایمان وایدھم بروح منہ” ಪಾ:೨೮-೪, ತರ್ಜುಮೆ : ಆ ಜನ ಯಾರ ಹೃದಯಗಳ ಮೇಲೆ ಅಲ್ಲಾಹನು ಈಮಾನ ಮುದ್ರಿಸಿದನು ಮತ್ತು ತನ್ನ ಕಡೆಯಿಂದ ಆತ್ಮದ ದೆಸೆಯಿಂದ ಇವರ ಸಹಾಯ ಮಾಡಿದನು. ಹೆಸರನ್ನು ಮುಹಮ್ಮದ ಎಂದು ಇಡಲಾಯಿತು. ಅಜ್ಜ ಮೌಲಾನಾ ರಜಾ ಅಲಿ ಖಾನರು “ ಅಹ್ಮದ ರಜಾ” (ಪದೇ ಪದೇ ಸ್ಥುತಿಸಲ್ಪಟ್ಟವನ ಅನುವು) ಎಂದು ಇಟ್ಟರು, ಇದೇ ಬಹಳ ಪ್ರಸಿದ್ಧವಾಯಿತು. ನಂತರದ ದಿನಗಳಲ್ಲಿ ಅಹ್ಮದ ರಜಾರು ತಮ್ಮ ಹೆಸರಿನೊಂದಿಗೆ “ಅಬ್ದುಲ್ ಮುಸ್ತಫಾ” (ಪೈಗಂಬರ್ ಮುಹಮ್ಮದ ಮುಸ್ತಫಾರ ಗುಲಾಮ) ಎಂದು ಹೆಚ್ಚಿಸಿಕೊಂಡರು. []

ಬಾಲ್ಯದ ಒಂದು ವೃತ್ತಾಂತ

ಬದಲಾಯಿಸಿ

ಜನಾಬ ಅಯ್ಯೂಬ ಅಲಿ ಸಾಹೇಬರು ವಿವರಿಸುವ ಪ್ರಕಾರ,

ಬಾಲ್ಯದಲ್ಲಿ ಇಮಾಮ ಅಹ್ಮದ ರಜಾ ರನ್ನು ಮನೆಯಲ್ಲಿಯೇ ಒಬ್ಬ ಮೌಲ್ವಿ ಸಾಹೇಬರು ಪಾಠ ಕಲಿಸಲು ಬರುತ್ತಿದ್ದರು. ಒಮ್ಮೆ ಆ ಮೌಲ್ವಿ ಸಾಹೇಬರು ಕುರಾನಿನ ಒಂದು ಆಯತ್ (ವಾಕ್ಯ) ವನ್ನು ಪದೇ ಪದೇ ಹೇಳುತ್ತಿದ್ದರು, ಆದರೆ ಇಮಾಮ ಅಹ್ಮದ ರಜಾರ ಬಾಯಿಂದ ಆ ವಾಕ್ಯ ಉಚ್ಛರಿಸಲಾಗುತ್ತಿರಲಿಲ್ಲ. ಅವರು ಜಬರ (ಅಕಾರ) ಹೇಳುತ್ತಿದ್ದರು ಇಮಾಮ ಅಹ್ಮದ ರಜಾರು ಜೇರ (ಈಕಾರ) ಹೇಳುತ್ತಿದ್ದರು. ಈ ಸುದ್ದಿ ಅವರ ಅಜ್ಜ ಮೌಲಾನಾ ರಜಾ ಅಲಿ ಖಾನರಿಗೆ ತಲುಪಿತು. ಕುರಾನ್ ತರೆಸು ಆ ವಾಕ್ಯವನ್ನು ತಾಳೆ ಮಾಡಿದಾಗ ಕಾತಿಬ ಅಂದರೆ ಕುರಾನ್ ಬರಹಗಾರ ತಪ್ಪಾಗಿ ಜೇರ ಬದಲು ಜಬರ ಬರೆದಿದ್ದನು. ಅಂದರೆ ಇಮಾಮ ಅಹ್ಮದ ರಜಾರ ಬಾಯಿಂದ ಬಂದ ವಾಣಿ ಸರಿಯಾಗಿತ್ತು. ಅಜ್ಜನು ಈ ಕುರಿತು, ಮೌಲ್ವಿ ಸಾಹೇಬರು ಹೇಳಿದ ಹಾಗೇ ನೀನೇಕೆ ಓದುತ್ತಿರಲಿಲ್ಲ ವೆಂದು ಕೇಳಿದಾಗ, ನಾನು ಮನದಲ್ಲಿ ಇರಾದೆ ಮಾಡುತ್ತಿದ್ದೆ ಆದರೆ ನನ್ನ ನಾಲಿಗೆಯ ಮೇಲೆ ಹಿಡಿತವಿಡಲು ಆಗುತ್ತಿರಲಿಲ್ಲ. ಈ ತರಹದ ಘಟನೆಗಳು ಮೌಲ್ವಿ ಸಾಹೇಬರೊಂದಿಗೆ ಬಹಳಷ್ಟು ಸಲವಾದಾಗ, ಇಮಾಮ ಅಹ್ಮದ ರಜಾರನ್ನುದ್ದೇಶಿಸಿ, ಸತ್ಯಹೇಳು, ನೀನು ಮನುಷ್ಯನೇ ಇರುವೆಯೋ ಅಥವಾ ಜಿನ್ನ (ಯಕ್ಷ) ಇರುವೆ ಎಂದು ಕೇಳಿದಾಗ ಅಲ್ಲಾಹನ ಕೃಪೆಯಿಂದ ನಾನು ಮನುಷ್ಯನೇ ಇದ್ದೇನೆ, ಆದರೆ ನನ್ನ ಮೇಲೆ ಅಲ್ಲಾಹನ ಅಸಾಧಾರಣ ಅನುಗ್ರಹ ಮತ್ತು ಕರುಣೆ ಕೂಡಿದೆ.

[][]

ವಿದ್ಯಾಭ್ಯಾಸ

ಬದಲಾಯಿಸಿ

ಬಿಸ್ಮಿಲ್ಲಾ ಖ್ವಾನಿಯ ನಂತರ ಆಲಾ ಹಜರತ ಇಮಾಮ ಅಹ್ಮದ ರಜಾರ ವಿದ್ಯಾಭ್ಯಾಸ ಪ್ರಾರಂಭವಾಯಿತು. ತಮ್ಮ ೪ನೇ ವರ್ಷದಲ್ಲಿ, ಬಹುತೇಕ ಮಕ್ಕಳು ತಮ್ಮ ಅಸ್ತಿತ್ವದಿಂದಲೇ ಪರಿಚಿತರಿರದ ಈ ಸಮಯದಲ್ಲಿ, ಪ್ರಾಥಮಿಕ ಕುರಾನ್ ಮಜೀದ ಪಠನ ಪೂರ್ಣಗೊಳಿಸಿದರು. ೬ನೇ ವರ್ಷ ವಯಸ್ಸಿನಲ್ಲಿ ಇಸ್ಲಾಮಿ ತಿಂಗಳು ರಬಿಉಲ್ ಅವ್ವಲ ತಿಂಗಳಲ್ಲಿ ಮಸೀದಿಯ ವೇದಿಕೆಯ ಮೇಲೆ ನಿಂತು ತುಂಬಿದ ಜನಸಮೂಹದ ಮುಂದೆ ಮೀಲಾದ ಶರೀಫ ಓದಿದರು. ಉರ್ದು ಮತ್ತು ಫಾರ್ಸಿ ಭಾಷೆಯ ಗ್ರಂಥಗಳ ವ್ಯಾಸಂಗದ ನಂತರ ಮಿರ್ಜಾ ಗುಲಾಮ ಕಾದಿರ ಬೇಗರ ಸಾನಿಧ್ಯದಲ್ಲಿ “ಮೀಜಾನ ಮನ್ಶಅಬ” ಹಾಗೂ ಇತರೇ ಪುಸ್ತಕಗಳನ್ನು ಓದಿದರು. ನಂತರ ತಮ್ಮ ತಂದೆಯ ಸಾನಿಧ್ಯದಲ್ಲಿ ಕೆಳಗಿನ ವಿದ್ಯೆಯನ್ನು ಗಳಿಸಿದರು. [] ಇಲ್ಮೆ ಕುರಾನ್ (ಕುರಾನ್ ವಿದ್ಯೆ), ಇಲ್ಮೆ ತಫ್ಸೀರ (ಕುರಾನ್ ವ್ಯಾಖ್ಯಾನದ ವಿದ್ಯೆ), ಇಲ್ಮೆ ಹದೀಸ (ಪೈಗಂಬರ ಮುಹಮ್ಮದರ ವಾಣಿ ಹಾಗೂ ಕಾರ್ಯಗಳ ಕುರಿತಾದ ವಿದ್ಯೆ), ಉಸೂಲೆ ಹದೀಸ (ಹದೀಸ ಸಂಬಂಧಿಸಿದ ನಿಯಮ ಹಾಗೂ ಕಾನೂನು), ಕುತುಬ ಫಿಕಹ್ ಹನಫಿ, ಶಾಫಿಇ, ಮಾಲಿಕಿ ಮತ್ತು ಹಂಬಲಿ (ಇಸ್ಲಾಮ ಧರ್ಮದ ನಾಲ್ಕು ಶಾಲೆಗಳಾದ ಹನಫಿ, ಶಾಫಿಇ, ಮಾಲಿಕಿ ಮತ್ತು ಹಂಬಲಿ ಗಳ ಕಾನೂನುಗಳ ವಿದ್ಯಾಗ್ರಂಥಗಳು), ಜದುಲ ಮಹಜಬ, ಇಲ್ಮುಲ್ ಅಕಾಇದ ವ ಕಲಾಮ, ಜ್ಯೋತಿಷ್ಯ, ನಕ್ಷತ್ರ ಹಾಗೂ ಗ್ರಹಗಳ ಕುರಿತ ವಿದ್ಯೆ, ಲೆಕ್ಕಶಾಸ್ತ್ರ, ತತ್ವಶಾಸ್ತ್ರ, ಭಾಷಣ, ಮಾತನಾಡುವ, ವಾದಿಸುವ ವಿದ್ಯೆ, ತರ್ಕಶಾಸ್ತ್ರ, ತತ್ವಶಾಸ್ತ್ರ ಮೇಲಾಗಿ ಹತ್ತಾರು ವಿದ್ಯೇಯಲ್ಲಿ ಪಾರಂಗತರಾದರು. [] ೧೩ ವರ್ಷ ೧೦ ತಿಂಗಳು ೫ ದಿನದ ವಯಸ್ಸಿನಲ್ಲಿ ೧೪ನೇ ಶಾಬಾನ ಹಿ೧೨೮೬, (೧೯ ನವ್ಹಂಬರ್ ೧೮೬೯) ಎಲ್ಲ ವಿದ್ಯೇಯಲ್ಲಿ ಪರಿಣತಿಹೊಂದಿ ದಸ್ತಾರೆ ಫಜೀಲತ್ (ಫಜೀಲತ್ ಪದವಿ)ಯಿಂದ ಪುರಸ್ಕೃತಗೊಂಡರು. ಅಂದೇ ರಝಾಅತ (ಹಾಲು ಕುಡಿಸಿದ ತಾಯಿಗೆ ಸಂಬಂಧಿಸಿದ) ಕುರಿತ ಒಂದು ಫತವಾ (ಧಾರ್ಮಿಕ ಪ್ರಶ್ನೆ) ದ ಉತ್ತರವನ್ನು ಬರೆದು ತಂದೆ ಸಾನಿಧ್ಯದಲ್ಲಿ ಇಟ್ಟರು. ಉತ್ತರ ಸರಿಯಾಗಿತ್ತು. ಈ ದಿಟ್ಟ, ನೇರ ಹಾಗೂ ಉತ್ತರವನ್ನು ಓದಿ ಇವರಿಗೆ ಫತವಾ ನೀಡುವ ಕೆಲಸ ನೀಡಿದರು. ಈ ಕೆಲಸ ತಮ್ಮ ಜೀವನ ಪರ್ಯಂತ ಅತ್ಯಂತ ನಿಷ್ಟೆಯಿಂದ ಮಾಡಿದರು. []

ಆಧ್ಯಾತ್ಮಿಕ ಜೀವನ

ಬದಲಾಯಿಸಿ

ಆಲಾ ಹಜರತ ಇಮಾಮ ಅಹ್ಮದ ರಜಾ ತಮ್ಮ ಆಧ್ಯಾತ್ಮಿಕ ಜೀವನದ ಪ್ರಾರಂಭವನ್ನು ಮಾರಹ್ರಾದ (ಜಿಲ್ಲೆ:ಇಟಾ, ರಾಜ್ಯ: ಉತ್ತರ ಪ್ರದೇಶ) ಪ್ರಸಿದ್ಧ ಸೂಫಿ ಸಂತ ಹಜರತ ಮುರ್ಶಿದೆ ಬರ್ಹಕ್ ಉಸ್ತಾದುಲ್ ಆರಿಫೀನ ಮೌಲಾನಾ ಸಯ್ಯದ ಆಲೆ ರಸೂಲ ಮಾರಹರವಿಯ ಸಾನಿಧ್ಯದಲ್ಲಿ ಮಾಡಿದರು. ಅವರಿಂದ ಕಾದರಿ ಸಿಲ್ಸಿಲಾದಲ್ಲಿ ಮುರೀದ (ಆಧ್ಯಾತ್ಮಿಕ ಶಿಷ್ಯತ್ವ) ಆದರು, ಮತ್ತು ಹಲವಾರು ಸಿಲ್ಸಿಲಾಗಳಲ್ಲಿ ಖಿಲಾಫತ್ (ಉತ್ತರಾಧಿಕಾರತ್ವ) ಪಡೆದರು. ಹಜರತ ಆಲೇ ರಸೂಲರ ಕುರಿತು ಬಹಳಷ್ಟು ಸಲ ಮನ್ಕಬತ (ಕವನ) ಕೂಡ ಬರೆದಿರುತ್ತಾರೆ. ತಮ್ಮ ಆಧ್ಯಾತ್ಮಿಕ ಗುರುಗಳ ದೈವಾಧೀನದ ನಂತರ ಅವರ ಮಗನಾದ ಹಜರತ ಮೌಲಾನಾ ಸಯ್ಯದ ಅಬುಲ್ ಹುಸೈನ ಅಹ್ಮದ ನೂರಿಯವರಿಂದ ಇತರೇ ಆಧ್ಯಾತ್ಮಿಕ ವಿದ್ಯೇಯನ್ನು ಕಲಿತರು. ಅವರಿಂದಲೂ ವಿವಿಧ ತರೀಕತ್ (ಪಥ) ಗಳಲ್ಲಿ ಖಿಲಾಫತ್ ಪಡೆದರು. [] ಇಮಾಮ ಅಹ್ಮದ ರಜಾರಿಗೆ ಯಾವ ಕೆಳಕಂಡ ಸಿಲ್ಸಿಲಾಗಳಲ್ಲಿ ಖಿಳಾಫತ ಮತ್ತು ಇಜಾಜತ (ಪರವಾನಿಗೆ) ಇತ್ತು. ಈ ಕುರಿತು ಇಮಾಮ ಅಹ್ಮದ ರಜಾರು ಹೀಗೆ ಬರೆದಿದ್ದಾರೆ. ಕಾದರಿಯಾ ಬರಕಾತೀಯ ಜದೀದಿಯಾ, ಕಾದರಿಯಾ ಆಬಾಯಿಯಾ ಕದೀಮಿಯಾ, ಕಾದರಿಯಾ ರಜಾಕಿಯಾ, ಕಾದರಿಯಾ ಮುನವ್ವರಿಯಾ, ಚಿಶ್ತಿಯಾ ನಿಜಾಮಿಯಾ ಕದೀಮಿಯಾ, ಕಾದರಿಯಾ ಅಹದಲಿಯಾ, ಚಿಶ್ತಿಯಾ ಮಹಬೂಬಿಯಾ ಜದೀದಿಯಾ, ಸುಹರ್ವದಿಯಾ ಫಜೀಲಿಯಾ, ನಕ್ಷಬಂದಿಯಾ ಅಲಾಇಯಾ ಸಿದ್ದೀಕಿಯಾ, ನಕ್ಷಬಂದಿಯಾ ಅಲಾಇಯಾ ಅಲವಿಯಾ, ಬದಿಯಾ, ಅಲವಿಯಾ ಮನಾಮಿಯಾ ಹಾಗೂ ಇತರೆ. [] ಕೆಳಕಂಡ ಸಿಲ್ಸಿಲಾಗಳಲ್ಲಿ ಇಜಾಜತ್ ದೊಂದಿಗೆ ಮಸಾಹಿಫಾತೇ ಅರಬಾರ ಪ್ರಮಾಣಗಳೂ ದೊರೆತಿವೆ. ಅವುಗಳ ವಿವರಗಳನ್ನು ಆಲಾ ಹಜರತ ಇಮಾಮ ಅಹ್ಮದ ರಜಾ ಹೀಗೆ ಹೇಳಿದ್ದಾರೆ. ಮಸಾಹಿಫತುಲ ಹಸನಿಯಾ, ಮಸಾಹಿಫತುಲ ಅಮರಿಯಾ, ಮಸಾಹಿಫತುಲ ಖಿಜರಿಯಾ, ಮಸಾಹಿಫತುಲ ಮನ್ನಾನಿಯಾ. ಈ ಮಸಾಹಿಫಾಗಳ ಹೊರತು ಪಡಿಸಿ ಬಹಳಷ್ಟು ಪಠಣಗಳಲ್ಲಿ ಸನದು ಹಾಗೂ ಅನುಮತಿಗಳನ್ನು ಪಡೆದಿದ್ದರು. []

ಇಮಾಮ ಅಹ್ಮದ ರಜಾರ ಗುರುಗಳು

ಬದಲಾಯಿಸಿ
  1. ಮಿರ್ಜಾ ಗುಲಾಮ ಕಾದಿರ ಬೇಗ ಬರೇಲ್ವಿ (ಮ.೧೩೦೧ಹಿ, 1883 ಇ)
  2. ತಂದೆ ಮೌಲಾನಾ ಮುಹಮ್ಮದ ನಕಿ ಅಲಿ ಖಾನ ಬರೇಲ್ವಿ (ಮ:೧೨೯೭ಹಿ, 1880ಇ)
  3. ಮೌಲಾನಾ ಅಬ್ದುಲ್ ಅಲಿ ಖಾನ ರಾಮಪುರಿ (ಮ:೧೩೦೩ಹಿ, 1885ಇ) ಇವರು ಸ್ವಾತಂತ್ರ ಯೋಧ ಮೌಲಾನಾ ಫಜ್ಲೆ ಹಕ್ ಖೈರಾಬಾದಿಯವರ ಶಿಷ್ಯರು.
  4. ಶಾಹ ಅಬುಲ್ ಹುಸೈನ ಅಹ್ಮದ ನೂರಿ ಮಾರಹ್ರವಿ (ಮ:೧೩೨೪ಹಿ, 1904ಇ) ಇವರು ಸೂಫಿ ಸಂತ ನೂರ ಅಹ್ಮದ ಬದಾಯುನಿಯವರ ಶಿಷ್ಯರು.
  5. ಶಾಹ್ ಆಲೆ ರಸೂಲ ಅಹ್ಮದ ಮಾರಹ್ರವಿ (ಮ:೧೨೯೭ಹಿ, 1879ಇ) ಇವರು ದೆಹಲಿಯ ಪ್ರಸಿದ್ಧ ಸೂಫಿ ಸಂತ ೧೩ನೇ ಹಿಜರಿ ಶತಮಾನದ ಮುಜದ್ದಿದ ಶಾಹ್ ಅಬ್ದುಲ್ ಅಜೀಜ ಮುಹದ್ದಿಸ ದೆಹಲ್ವಿಯವರ ಶಿಷ್ಯರು.
  6. ಶಾಫಯಿ ಶಾಲೆಯ ಶೇಖ ಹುಸೇನ ಸಾಲೆಹ್ (ಮ:೧೩೦೬ಹಿ, 1884ಇ)
  7. ಹನಫಿ ಶಾಲೆಯ ಮುಫ್ತಿ ಶೇಖ ಅಬ್ದುರ್ರಹ್ಮಾನ ಸಿರಾಜ (ಮ:೧೩೦೧ಹಿ, 1883ಇ)
  8. ಶಾಫಯಿ ಶಾಲೆಯ ಮುಫ್ತಿ ಶೇಖ ಅಹ್ಮದ ಬಿನ್ ಜೈನ್ ವಹಲಾನ (ಮ:೧೨೯೯ಹಿ, 1881ಇ) ಇವರು ಹರಮ್ ಅಂದರೆ ಮಕ್ಕಾ ಮತ್ತು ದ ಪ್ರಧಾನ ಕಾಜಿಯಾಗಿದ್ದರು. []

ಇಮಾಮ ಅಹ್ಮದ ರಜಾ ಒಬ್ಬ ಗಣಿತಜ್ಞರು

ಬದಲಾಯಿಸಿ

ಅಲ್ಲಾಹನು ತಮಗೆ ಅಪ್ಪಟ ವಿದ್ಯೆಯನ್ನು ನೀಡಿದ್ದನು. ಸುಮಾರು ೫೦ ವಿವಿಧ ವಿಷಯಗಳಲ್ಲಿ ಚಿಕ್ಕ ದೊಡ್ಡ ಗ್ರಂಥಗಳನ್ನು ಬರೆದಿದ್ದಾರೆ. ಇಮಾಮ ಅಹ್ಮದ ರಜಾ ಎಲ್ಲ ವಿಷಯಗಳಲ್ಲಿ ಪರಿಣತಿಯನ್ನು ಹೊಂದಿದ್ದರು. ಖಗೋಳ ವಿಜ್ಞಾನದಲ್ಲಿ ಇವರ ವಿದ್ಯೆಯು ಎಷ್ಟರ ಮಟ್ಟಿಗೆ ಇತ್ತೆಂದರೆ, ದಿನದಲ್ಲಿ ಸೂರ್ಯನ ಪಥ ಹಾಗೂ ರಾತ್ರಿಯಲ್ಲಿ ಚಂದ್ರ ಹಾಗೂ ನಕ್ಷತ್ರಗಳ ಪಥವನ್ನು ನೋಡಿ ಗಡಿಯಾರದ ಮುಳ್ಳನ್ನು ಸಮೀಕರಿಸುತ್ತಿದ್ದರು ಮತ್ತು ಎಂದು ಇದರಲ್ಲಿ ಒಂದು ನಿಮಿಷದ ವ್ಯತ್ಯಾಸವೂ ಕಂಡು ಬಂದಿಲ್ಲ. ಇದೇ ತರಹ ಗಣಿತದಲ್ಲಿಯೂ ಪರಿಣತಿಯನ್ನೂ ಹೊಂದಿದ್ದರು. ಒಮ್ಮೆ ಅಲಿಗಢ ವಿಶ್ವವಿದ್ಯಾಲಯದ ಕುಲಪತಿ ಡಾಕ್ಟರ್ ಝಿಯಾಉದ್ದೀನ ಒಮ್ಮೆ ತಮ್ಮ ಗಣಿತದ ಸಮಸ್ಯೆಯನ್ನು ತಂದಿದ್ದರು. ಈ ಕುಲಪತಿಯವರು ಗಣಿತದಲ್ಲಿ ಬಹಳಷ್ಟು ಅಂತಾರಾಷ್ಟ್ರೀಯ ಪುರಸ್ಕಾರ, ಪ್ರಮಾಣ ಪತ್ರ, ಬಿರುದುಗಳು ಹಾಗೂ ಪದಕಗಳನ್ನು ಹೊಂದಿದ್ದರು. ಇಮಾಮ ಅಹ್ಮದ ರಾಜಾ ಪ್ರಶ್ನೆ ಕೇಳಿ ಎಂದರು, ಕುಲಪತಿಯವರು, ಈ ಪ್ರಶ್ನೆ ಸುಮ್ಮನೇ ಹೇಳುವಷ್ಟು ಸರಳವಾಗಿಲ್ಲ ಎಂದರು. ಆದರೂ ಕೇಳಿ ಎಂದಾಗ, ತಮ್ಮ ಪ್ರಶ್ನೆಯನ್ನು ಮುಂದಿಟ್ಟರು. ಪ್ರಶ್ನೆಯನ್ನು ನೋಡಿ ಆ ಕ್ಷಣದಲ್ಲಿಯೇ ಅದರ ಉತ್ತರವನ್ನು ಹೇಳಿಬಿಟ್ಟರು. ಕುಲಪತಿಯವರು, ಈ ಉತ್ತರ ಕೇಳಿ ಆಶ್ಚರ್ಯಚಕಿತರಾಗಿ, ಈ ಸಮಸ್ಯೆಯ ನಿವಾರಣೆಗಾಗಿ ನಾನು ಜರ್ಮನಿಗೆ ಹೋಗಲಿಚ್ಛಿಸಿದ್ದೆ, ಆಕಸ್ಮಿಕವಾಗಿ ನಮ್ಮ ವಿಶ್ವವಿದ್ಯಾಲಯದ ಧಾರ್ಮಿಕ ವಿಷಯದ ಮುಖ್ಯಸ್ತ ಮೌಲಾನಾ ಪ್ರೊಫೆಸರ್ ಸಯ್ಯದ ಸುಲೇಮಾನ ಅಶ್ರಫ ಸಾಹೇಬರು ನನ್ನ ದಾರಿದೀಪವಾಗಿ ನಿಮ್ಮ ಹತ್ತಿರ ಕಳುಹಿಸಿದರು. ಕುಲಪತಿಯವರು ಇಮಾಮ ಅಹ್ಮದ ರಜಾ ಸಾಹೇಬರಿಂದ ಪ್ರಭಾವಿತರಾಗಿ ದಾಢಿ ಇಟ್ಟುಕೊಂಡರು ಮತ್ತು ನಮಾಜ ಹಾಗೂ ಇತರೇ ಆಚರಣೆಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಲು ಪ್ರಾರಂಭಿಸಿದರು. []

ಅಭೂತಪೂರ್ವ ಬುದ್ಧಿ ಮಟ್ಟ

ಬದಲಾಯಿಸಿ

ಹಜರತ ಅಬೂ ಹಾಮಿದ ಸಯ್ಯದ ಮುಹಮ್ಮದ ಮುಹದ್ದಿಸ ಕಿಛೌಛವಿ ಯವರ ಹೇಳಿಕೆಯ ಪ್ರಕಾರ, “ಇಸ್ಲಾಮಿ ಕಾನೂನು ಹಾಗೂ ಇತರೇ ಧಾರ್ಮಿಕ ವಿಷಯಗಳಲ್ಲಿ ಉತ್ತರಗಳನ್ನು ಹಾಗೂ ಪರಿಹಾರಗಳನ್ನು ಹುಡುಕಿ ಸೋತವರು ಇಮಾಮ ಅಹ್ಮದ ರಜಾ ರ ಸಾನಿಧ್ಯದಲ್ಲಿ ಬಂದು ತಮ್ಮ ಸಮಸ್ಯೆಯನ್ನು ಕೇಳುತ್ತಿದ್ದರು. ಇಮಾಮ ಅಹ್ಮದ ರಜಾರವರು, ರದ್ದುಲ್ ಮುಖ್ತಾರ ಗ್ರಂಥದ ಈ ಪುಠಸಂಖ್ಯೆಯ ಈ ಕಂಡಿಕೆಯಲ್ಲಿ ಈರೀತಿ ಇದರ ಉತ್ತರವಿದೆ ಎಂದು ಹೇಳುತ್ತಿದ್ದರು. ನೋಡಿದಾಗಿ ಅದೇ ಗ್ರಂಥದ ಅದೇ ಪುಟ ಸಂಖ್ಯೆಯ ಅದೇ ಕಂಡಿಕೆಯಲ್ಲಿ ಇಮಾಮ ಅಹ್ಮದ ರಜಾ ಹೇಳಿದ ಹಾಗೇಯೇ ಉತ್ತರವಿರುತ್ತಿತ್ತು. ಹೀಗೆ ಅನೇಕ ಗ್ರಂಥಗಳ ಉಲ್ಲೇಖವನ್ನು ಇದೇ ತರನಾಗಿ ಹೇಳುತ್ತಿದ್ದರು. ಈ ಬುದ್ದಿ ಮಟ್ಟವನ್ನು ಕಂಡು, ಇದು ಅಲ್ಲಾಹನ ಅನುಗ್ರಹವೇ ಸರಿ ಇಲ್ಲದಿದ್ದರೆ ೧೪೦೦ ವರ್ಷಗಳ ಗ್ರಂಥಗಳು ಕಂಠಸ್ತವಾಗುವದು ಅಸಾಧ್ಯ”. [][]

ಎರಡನೆಯ ಹಜ್ ಯಾತ್ರೆ

ಬದಲಾಯಿಸಿ

೧೩೨೩ಹಿ ೧೯೦೪ ಇ ಯಲ್ಲಿ ಇಮಾಮ ಅಹ್ಮದ ರಜಾರು ತಮ್ಮ ಎರಡನೆಯ ಹಜ ಯಾತ್ರೆ ಕೈಗೊಂಡರು. ಈ ಯಾತ್ರೆಯ ಪರಿಣಾಮವಾಗಿ ಹಿಜಾಜ ಅಂದರೆ ಮಕ್ಕಾ ಮತ್ತು ಮದೀನಾದಲ್ಲಿ ವಾಸವಾದ ಬಹುತೇಕ ವಿದ್ವಾಂಸರು ಇಮಾಮ ಅಹ್ಮದ ರಜಾರ ಕುರಿತು ಕೊಂಡಾಡಿದ್ದಾರೆ, ಇದರ ಪರಿಚಯವಾಗುವದು ಹುಸಾಮುಲ್ ಹರಮೈನ, ಅದ್ದೌಲತುಲ್ ಮಕ್ಕಿಯಾ ಹಾಗೂ ಕಿಫ್ಲುಲ್ ಫಿಕಹ್ನಂತಹ ಪ್ರಮಾಣಗಳನ್ನೊಳಗೊಂಡ ಗ್ರಂಥಗಳಿಂದ. ಪವಿತ್ರ ನಗರಿ ಮಕ್ಕಾ ಮುಕರ್ರಮಾದ ವಿದ್ವಾಂಸರು ಕೊಂಡಾಡಿದ ಬಗೆಯನ್ನು ಶೇಖ ಇಸ್ಮಾಈಲ ಈ ರೀತಿ ವಿವರಿಸುತ್ತಾರೆ:

ಮಕ್ಕಾ ನಿವಾಸಿಗಳು ಗುಂಪು ಗುಂಪಾಗಿ ತಮ್ಮ ಮುಂದೆ ಹಾಜರಾಗಲು ಪ್ರಾರಂಭಿಸಿದರು. ಬಹಳಷ್ಟು ವಿದ್ವಾಂಸರು, ತಮಗೆ ವಿವಿಧ ಸಿಲ್ಸಿಲಾ ಹಾಗೂ ವಿದ್ಯೆಗಳಲ್ಲಿ ಪ್ರಮಾಣ ಹಾಗೂ ಅನುಮತಿ ಪತ್ರಗಳನ್ನು ನೀಡಬೇಕಾಗಿ ಕೇಳಿಕೊಂಡರು. ಆ ವಿದ್ವಾಂಸರ ಕೋರಿಕೆಯ ಮೇರೆಗೆ ಪ್ರಮಾಣ ಹಾಗೂ ಅನುಮತಿ ಪತ್ರಗಳನ್ನು ನೀಡಲಾರಂಭಿಸಿದರು. ಈ ಹಜ್ ಯಾತ್ರೆಯಲ್ಲಿ ಇಮಾಮ ಅಹ್ಮದ ರಜಾರ ಹಿರಿಯ ಸುಪುತ್ರರಾದ ಮೌಲಾನಾ ಹಾಮಿದ ರಜಾ ಕೂಡ ಜೊತೆಗಿದ್ದರು, ಅವರು ಈ ಪ್ರಮಾಣ ಹಾಗೂ ಅನುಮತಿ ಪತ್ರದ ಕುರಿತು ವಿವರಗಳನ್ನು ತಮ್ಮ ಪುಸ್ತಕ “ಅಲ್-ಇಜಾಜತ ಅಲ್-ಮತೀನಃ” ದ ಮುನ್ನುಡಿಯಲ್ಲಿ ಹೀಗೆ ವಿವರಿಸಿದ್ದಾರೆ, “ಅನುಮತಿ ಕೋರಲು ಮೊಟ್ಟಮೊದಲು ಮೌಲಾನಾ ಸಯ್ಯದ ಅಬ್ದುಲ ಹಯಿ ಮಕ್ಕಿ (ಮ:1332ಹಿ, 1912ಇ) ಬಂದುರು, ಅವರೊಂದಿಗೆ ಒಬ್ಬ ತರುಣ ಶೇಖ ಹುಸೇನ ಜಮಾಲ ಬಿನ್ ಅಬ್ದುಲ್ ರಹೀಮ ಬಂದಿದ್ದರು, ಇವರಿಬ್ಬರನ್ನೂ ಪ್ರಮಾಣ ಹಾಗೂ ಅನುಮತಿ ಪತ್ರಗಳನ್ನು ನೀಡಲಾಯಿತು. ನಂತರ ಮೌಲಾನಾ ಶೇಖ ಸಾಲೆಹ ಕಮಾಲ (ಮ:1325ಹಿ, 1907ಇ) ಮತ್ತು ಇತರರನ್ನು ಪ್ರಮಾಣ ಹಾಗೂ ಅನುಮತಿ ಪತ್ರ ನೀಡಲಾಯಿತು. ಇದೇ ರೀತಿ ಮೌಲಾನಾ ಸಯ್ಯದ ಇಸ್ಮಾಈಲ ಖಲೀಲ, ಅವರ ಸಹೋದರ ಸಯ್ಯದ ಮುಸ್ತಫಾ ಖಲೀಲ, ಶೇಖ ಅಹ್ಮದ ಖದರಾವಿ, ಶೇಖ ಅಬ್ದುಲ ಕಾದಿರ ಕರದಿ ಹಾಗೂ ಅವರ ಸುಪುತ್ರರಾದ ಶೇಖ ಫರಿದ ಹಾಗೂ ಸಯ್ಯದ ಮುಹಮ್ಮದ ಉಮರ ಹಾಗೂ ಅನೇಕರನ್ನು ನೀಡಲಾಯಿತು. ಉಳಿದವರನ್ನು ತಾಯ್ನಾಡಿಗೆ ಮರಳಿದ ನಂತರ ನೀಡಲಾಯಿತು

. []

ಮಕ್ಕಾ ಪ್ರವಾಸದ ನಂತರ ಇನ್ನೊಂದು ಪವಿತ್ರ ನಗರವಾದ ಮದೀನಾ ಮುನವ್ವರಾಗೆ ಅಲ್ಲಾಹನ ಪ್ರಿಯಕರ, ಜಗದೊದ್ದಾರಕ, ಸಾರ್ವಭೌಮ, ಅಲ್ಲಾಹನ ಪೈಗಂಬರ ಹಜರತ ಮುಹಮ್ಮದ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವ ಸಲ್ಲಮ್ ರ ದರ್ಶನಕ್ಕೆ ಹೊರಟರು. ಈ ಪವಿತ್ರ ನಗರದಲ್ಲಿ ಅವರಿಗೆ ಗೌರವಿಸಿದ ಬಗೆಯನ್ನು ಅಲ್ಲಿಯವರೇ ಆದ ಮೌಲಾನಾ ಅಬ್ದುಲ ಕರೀಮ ಮುಹಾಜಿರ ಮಕ್ಕಿ ಈರೀತಿ ವಿವರಿಸಿದ್ದಾರೆ,

ನಾನು ಬಹಳ ವರ್ಷಗಳಿಂದ ಮದೀನದಲ್ಲಿ ವಾಸವಾಗಿದ್ದೇನೆ, ಭಾರತದಿಂದ ಬಹಳಷ್ಟು ಜನ ವಿದ್ವಾಂಸರು, ಸೂಫಿಗಳು ಬರುತ್ತಾರೆ. ಮದೀನಾದ ಬೀದಿ ಬೀದಿಗಳಲ್ಲಿ ಅಲೆದಾಡುತ್ತಾರೆ, ಅವರನ್ನು ಕೇಳುವವರಾರು ಇರುವದಿಲ್ಲ, ಆದರೆ ಇಮಾಮ ಅಹ್ಮದ ರಜಾರ ಮಾತೆ ಬೇರೆ ಇದೆ, ಇವರ ದರ್ಶನಕ್ಕೆ ನಗರದ ಪ್ರಸಿದ್ಧ ವಿದ್ವಾಂಸರು ಬುದ್ಧಿ ಜೀವಿಗಳು ಸೂಫಿಗಳು ತಂಡ ತಂಡಗಳಲ್ಲಿ ಬರುತ್ತಿದ್ದಾರೆ, ತಮ್ಮ ಅನಿಸಿದ ಮಟ್ಟಿಗೆ ಗೌರವ ಹಾಗೂ ಸನ್ಮಾನ ಮಾಡುತ್ತಿದ್ದಾರೆ, ಇದು ಅಲ್ಲಾಹನ ವಿಶೇಷ ಕೃಪೆಯಾಗಿದೆ, ತನ್ನ ಇಚ್ಛೆಯಂತೆಯೇ ದಯಪಾಲಿಸುತ್ತಾನೆ

[]

ಪವಿತ್ರ ಮದೀನದಲ್ಲಿದ್ದಾಗಲೂ ಬಹಳಷ್ಟು ವಿದ್ವಂಸರುಗಳಿಗೆ ಪ್ರಮಾಣ ಹಾಗೂ ಅನುಮತಿ ಪತ್ರಗಳನ್ನು ದಯಪಾಲಿಸಿದರು ಕೆಲವರಿಗೆ ಮೌಖಿಕವಾಗಿಯೂ ಅನುಮತಿಸಿದರು. ಕೆಲವರಿಗೆ ತಮ್ಮ ಮಾತೃಭೂಮಿಗೆ ಮರಳಿದ ನಂತರ ಪ್ರಮಾಣ ಪತ್ರಗಳನ್ನು ಕಳುಹಿಸುವದಾಗಿ ಹೇಳಿದರು, ಅವರಲ್ಲಿ ಪ್ರಮುಖರಾದವರು ಸಯ್ಯದ ಮಾಮೂನ ಅಲ್ಬರ್ರಿ, ಶೇಖುದ್ದಲಾಯಿಲ ಶೇಖ ಮುಹಮ್ಮದ ಹಾಗೂ ಇತರರಿದ್ದಾರೆ. []

ಪೈಗಂಬರ್ ಮುಹ್ಮದರೊಂಡನೆ ಇರುವ ಆಧ್ಯಾತ್ಮಿಕ ಪ್ರೇಮ

ಬದಲಾಯಿಸಿ

ಇಮಾಮ ಅಹ್ಮದ ರಜಾ ಸಂಪೂರ್ಣವಾಗಿ ಪೈಗಂಬರ್ ಮುಹಮ್ಮದ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವ ಸಲ್ಲಮ ರ ಆಧ್ಯಾತ್ಮಿಕ ಪ್ರೇಮದ ಒಂದು ಒಳ್ಳೆಯ ಮಾದರಿಯಾಗಿದ್ದರು. ಇವರ “ಹದಾಯಿಕೆ ಬಕ್ಷೀಷ” ಹೆಸರಿನ ಕಾವ್ಯ ಸಂಕಲನ ಪೈಗಂಬರ್ ಮುಹಮ್ಮದ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವ ಸಲ್ಲಮ ರ ಸ್ತುತಿಯ ಸಾಕ್ಷಿಯಾಗಿದೆ. ಈ ದಿಸೆಯಲ್ಲಿ ಅವರ ಲೆಕ್ಕಣಿಕೆಯಿಂದ ಮೂಡಿದ ಪ್ರತಿಯೊಂದು ಶಬ್ದವು ಆಧ್ಯಾತ್ಮಿಕ ಪ್ರೇಮದ ಜೀವಂತ ನಿದರ್ಶನವಾಗಿದೆ. ಇವರ ಮತ್ತೊಂದು ವಿಶೆಷತೆ ಏನೆಂದರೆ ಇವರು ಎಂದೂ ಲೌಕಿಕ ನಾಯಕರ ಹೊಗಳುವಲ್ಲಿ ಪದ್ಯಬರೆದಿಲ್ಲ ಏಕೆಂದರೆ ಇವರ ತಮ್ಮ ಸರ್ವಸ್ವವನ್ನು ಪೈಗಂಬರ್ ಮುಹಮ್ಮದ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವ ಸಲ್ಲಮರಿಗೆ ಅರ್ಪಿಸಿ ಅವರನ್ನೆ ತಮ್ಮ ನಾಯಕನನ್ನಾಗಿ ಸ್ವೀಕರಿಸಿದ್ದರು. ಇದರ ಖುಲಾಸೆ ಇವರ ಬಹಳಷ್ಟು ಕಾವ್ಯ ಸಂಕಲನದಲ್ಲಿ ಕಂಡು ಬರುತ್ತದೆ.[]

ರಚನೆಗಳು

ಬದಲಾಯಿಸಿ

ಇಮಾಮ ಅಹ್ಮದ ರಜಾ ಕಾದರಿಯವರು ಸುಮಾರು ೭೨ ಕ್ಕಿಂತ ಹೆಚ್ಚು ವಿಷಯಗಳಲ್ಲಿ ೧೦೦೦ ಕ್ಕಿಂತ ಹೆಚ್ಚು ಚಿಕ್ಕ-ದೊಡ್ಡ ಗ್ರಂಥಗಳನ್ನು ರಚಿಸಿದರು. ಅವುಗಳಲ್ಲಿ ಪ್ರಮುಖವಾದುವು ಕೆಳಕಂಡಂತಿವೆ. []

  1. ಅದ್ದೌಲತುಲ ಮಕ್ಕಿಯಾ
  2. ಅಲ್-ಅತಾಯಾ ನಬವಿಯಾ ಫಿ ಫತಾವಾ ರಜವಿಯಾ : ಸದ್ಯ ಇದರ ಸುಮಾರು ೩೦ ವಿಭಾಗಗಳಿಗೆ. ಒಟ್ಟು ೨೧೬೫೬ ಪುಟಗಳಲ್ಲಿರುವ ಈ ಗ್ರಂಥ ಸುಮಾರು ೬೮೪೭ ಪ್ರಶ್ನೊತ್ತರಗಳನ್ನು, ೨೦೬ ಚಿಕ್ಕ ಪುಸ್ತಕಗಳನ್ನು, ಮತ್ತು ಪ್ರತೀ ಫತಾವಾದಲ್ಲಿ ಸಂದರ್ಭಗ್ರಂಥಗಳ ಅಪಾರ ಪುರಾವೆಗಳು ಇವೆ.
  3. ಹುಸಾಮುಲ್ ಹರಮೈನ
  4. ತಮ್ಹೀದುಲ ಈಮಾನ
  5. ಅಹಕಾಮೆ ಶರೀಯತ
  6. ಫೌಜೆ ಮುಬೀನ
  7. ಮೊಯಿನೇ ಮುಬೀನ
  8. ಫತಾವಾ ಹರಮೈನ
  9. ಫತಾವಾ ಅಪ್ರೀಕಾ
  10. ಸುಬ್ಹಾನುಸ್ಸುಬ್ಬೂಹ್
  11. ಅಲ್-ಅಮನೊ-ವಒಲ
  12. ದವಾಮುಲ್ ಐಷ್
  13. ಅಲ ಮೊಹಜ್ಜತುಲ ಮೊತಮನಹ
  14. ಕಿಫ್ಲುಲ್ ಫಕೀಹಿಲ್ ಫಹೀಮ
  15. ಅಲ್-ಸಮ್ಸಾಮ
  16. ಸಮ್ಸಮುಲ್ ಹೈದರಿ
  17. ಸೈಫುಲ್ ಮುಸ್ತಫಾ
  18. ಮಕಾಲೆ ಉರಫಾ
  19. ಬದ್ರುಲ್ ಅನ್ವರ
  20. ಅಲ್ ಕಲಿಮತುಲ್ ಮುಲ್ಹಮಾ
  21. ಅಲ್ ಆಲಮುಲ್ ಆಲಮ
  22. ತದ್ಬೀರ ಫಲಾಹೊ ನಜಾತೆಒಇಸ್ಲಾಹ
  23. ಮುನಬ್ಬೆಹುಲ್ ಮುನಿಯಾ
  24. ಸಲ್ತನತೆ ಮುಸ್ತಫಾ
  25. ನುತ್ಕೇ ಹಿಲಾಲ
  26. ನಾಫಿಉಲ್ ಫಾಯಿ
  27. ಅಲ್ ಮುಬೀನ ಖಾತಮುಲ್ ಮುಬಿನ
  28. ರದ್ದುಲ್ ರಫ್ಜಾ
  29. ಕೈಫರೆ ಕುಫ್ರೆ ಆರ್ಯಾ
  30. ಕಶ್ಫುಲ್ ಇಲ್ಲಾ
  31. ರಿಸಾಲಾ ದರ ಇಲ್ಮಿ ಮುತುಲ್ಲತ
  32. ರಿಸಾಲಾ ದರ ಇಲಮಿ ತಕಸೀರ
  33. ರಿಸಾಲಾ ಜಬ್ರೋ ಮುಕಾಬಿಲಾ
  34. ರಿಸಾಲಾ ಫಿ ಇಲ್ಮಿಲ್ ಜಫರ
  35. ತಾಜೇ ತೌಕೀತ
  36. ಅಲ್ ನಹಿಯುಲ್ ನಮೀರ
  37. ಹಾಶಿಯಾ ಉಸೂಲೆ ತಬಯಿ
  38. ಅಲ್ ಮತರುಸ್ಸಯೀದ
  39. ಖಾಲಿಸುಲ ಇತಕಾದ
  40. ಮುನೀರುಲ್ ಐನ
  41. ಇಸ್ತಿಮದಾದ
  42. ಖತ್ಮುಲ್ ನಬುವಹ
  43. ಜಿಬ್ಬುಲ್ ಮುಮತರ

ಕಾವ್ಯ ಸಂಕಲನ

ಬದಲಾಯಿಸಿ

ಇಮಾಮ ಅಹ್ಮದ ರಜಾ ಕಾದರಿಯವರು ರಚಿಸಿದ ಕಾವ್ಯಸಂಕಲನವನ್ನು ಹದಾಯಿಕೆ ಭಕ್ಷೀಶ ಎಂದು ಹೆಸರಿಡಲಾಗಿದೆ. ಇದು ಉರ್ದು, ಫಾರ್ಸಿ, ಅರಬಿ ಹಾಗೂ ಕೆಲವೊಂದರಲ್ಲಿ ಹಿಂದಿಯನ್ನೂ ಸಹ ಪ್ರಯೋಗಿಸಲಾಗಿದೆ. ಇವರು ರಚಿಸಿದ ಮುಸ್ತಫಾ ಜಾನೆ ರಹಮತ್ ಪೇ ಲಾಖೊಂ ಸಲಾಮ ಹಾಗೂ ಕಾಬೆ ಕೆ ಬದರೊ ದುಜಾ ತುಮ್ ಪೆ ಕರೊಡೊಂ ದರೂದ ಮುಸ್ಲಿಮರಲ್ಲಿ ಬಹಳ ಲೋಕ ಪ್ರೀಯವಾಗಿವೆ. ಲಮ್ ಯಾತಿ ನಜೀರುಕ ಫೀ ನಜರಿನ್ ಈ ಕಾವ್ಯ ಸಂಕಲನದಲ್ಲಿ ನಾಲ್ಕು ಭಾಷೆಗಳ ಪ್ರಯೋಗ ಮಾಡಲಾಗಿದೆ. ಇದು ಚತುಷ್ಪದಿಯಾಗಿದ್ದು ಮೊದಲನೆಯ ಸಾಲಿನಲ್ಲಿ ಅರಬಿ, ಎರಡನೆಯದರಲ್ಲಿ ಫಾರ್ಸಿ, ಮೂರನೆಯದರಲ್ಲಿ ಉರ್ದು ಹಾಗೂ ನಾಲ್ಕನೆಯದರಲ್ಲಿ ಹಿಂದಿ ಭಾಷೆಯನ್ನು ಉಪಯೋಗಿಸಲಾಗಿದೆ. []

ಕುರಆನ ಅನುವಾದ

ಬದಲಾಯಿಸಿ

ಇಮಾಮ ಅಹ್ಮದ ರಜಾ ಕಾದರಿಯವರು ತರ್ಜುಮೆ ಮಾಡಿದ ಕುರಆನವನ್ನು ಕನ್ಜುಲ ಈಮಾನ ಫಿ ತರ್ಜಮತುಲ್ ಕುರಾನ್ ಎಂದು ಹೇಳುತ್ತಾರೆ. ಇದು ಉರ್ದು ಭಾಷೆಯ ಈವರೆಗಿನ ಅತೀ ಉತ್ತಮ ಅನುವಾದವಾಗಿದೆ. ಇದರ ತುಲನೆಯಲ್ಲಿ ಹಲವಾರು ತರ್ಜುಮೆಗಳ ಬಂದರೂ ಇದರ ಹಾಗೆ ಪ್ರಖ್ಯಾತಿಯನ್ನು ಈವರವಿಗೂ ಹೊಂದಿಲ್ಲ. []

ವಹಾಬಿ ಸಲಫಿಗಳ ಖಂಡನೆ

ಬದಲಾಯಿಸಿ

ಇದು ಬ್ರಿಟೀಷರಾಳುತ್ತಿರುವ ಸಮಯವಾಗಿತ್ತು. ಭಾರತವಷ್ಟೇ ಅಲ್ಲ ಏಷಿಯಾ ಖಂಡ ಬಹುತೇಕ ರಾಷ್ಟ್ರಗಳ ಮೇಲೆ ಇವರ ದಬ್ಬಾಳಿಕೆ ಇತ್ತು. Divide and Rule ಮುರಿಯಿರಿ ಮತ್ತು ಆಳಿರಿ ಎಂಬ ಸಿದ್ಧಾಂತದ ಮೇಲೆ ಬ್ರಿಟೀಷರು ಕಾರ್ಯನಿರತರಾಗಿದ್ದರು. ಈ ಸಿದ್ಧಾಂತವನ್ನು ಎಲ್ಲ ಮೈದಾನಗಳಲ್ಲಿಯೂ ಅಳವಡಿಸಿದ್ದರು. ಇದೇ ರೀತಿ ಮುಸ್ಲಿಮರಲ್ಲಿ ಒಡಕು ಹುಟ್ಟಿಸಿ 1850 ಕ್ಕಿಂತ ಮೊದಲು ವಹಾಬಿ ಎಂಬ ಮೂಲಭೂತವಾದಿ ಫಿರ್ಕಾ ಅಥವಾ ಪಕ್ಷವನ್ನು ಹುಟ್ಟಿಸಿದರು. ನಂತರದ ದಿನಗಳಲ್ಲಿ ಅರೇಬಿಯಾದಲ್ಲಿ ಸೌದಿಗಳ ಸಹಾಯದಿಂದ ಲೆಫ್ತಿನೆಂಟ್ ಕರ್ನಲ್ ಲಾರೆನ್ಸ ಪ್ರಭಾವಷಾಲಿಯಾದ. ಈ ಪಕ್ಷದ ಕೆಲವು ಅನುಯಾಯಿಗಳು ಭಾರತವನ್ನೂ ಪ್ರವೇಶಿಸಿ ಇಲ್ಲಿನ ಸಂಪ್ರದಾಯ ಹಾಗೂ ಒಡಂಬಡಿಕೆಯಲ್ಲಿ ಬೆರೆತು ಹೋದ ಮುಸ್ಲಿಮರ ಮಧ್ಯೆಯೂ ಒಡಕನ್ನು ಹುಟ್ಟಿಸಿದರು. ಭಾರತದಲ್ಲಿ ವಹಾಬೀಗಳು ಹೊಸದಾದ ಅಹಲೆ ಹದೀಸ, ನೇಚುರಿ, ದೇವಬಂದಿ, ತಬ್ಲೀಗೀ, ಕಾದಿಯಾನಿ ಹೀಗೆ ಹಲವಾರು ಪಕ್ಷಗಳನ್ನು ಹುಟ್ಟಿಸುವಲ್ಲಿ ನಾಂದಿ ಹಾಡಿದರು. ಇಮಾಮ ಅಹ್ಮದ ರಜಾ ಕಾದರಿಯವರು ಈ ಎಲ್ಲ ಹೊಸ ಒಡಕು ಹುಟ್ಟು ಹಾಕುವ ಪಕ್ಷಗಳ ವಿರುದ್ಧ ತಮ್ಮ ಲೆಕ್ಕಣಿಕೆಯಿಂದ ಮತ್ತು ಬೋಧನೆಯಿಂದ ಸಮರ ಸಾರಿದರು. ಮತ್ತು ಇವರ ದುಷ್ಕೃತ್ಯವನ್ನು ಜನರ ಮುಂದೆ ತೆರೆದಿಟ್ಟರು. ಅವರ ಈ ಸಾಧನೆಗೋಸ್ಕರ ಈವರೆವಿಗೂ ಸುನ್ನಿ ಮುಸ್ಲಿಮರು ಭಾರತದಲ್ಲಿಯಷ್ಟೇ ಅಲ್ಲ ಸಮಗ್ರ ವಿಷ್ವದಲ್ಲಿ ತಮ್ಮ ಅಸ್ವಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಈ ವಹಾಬಿಗಳ ಆಮಿಷಕ್ಕೆ ಶರಣಾಗಿ ಕೆಲವು ಸಾಂಪ್ರದಾಯಿಕ ಹಾಗೂ ತಲೆತಲಾಂತರದಿಂದ ಸುನ್ನಿ ಧರ್ಮವನ್ನು ಅನುಸರಿಸುತ್ತ ಬಂದಿರುವ ವಿದ್ವಂಸರೂ ತಮ್ಮ ದಾರಿತಪ್ಪಿದ್ದರು. ಇವರ ಶ್ರಮದ ಫಲವಾಗಿ ಬಹುತೇಕ ಮುಸ್ಲಿಂ ವಿದ್ವಾಂಸರು ತಮ್ಮ ಹಳೆಯ ಪಥದತ್ತ ಮರಳಿದರು. ವಹಾಬಿಗಳು ತಮ್ಮ ಪುಸ್ತಕಗಳಲ್ಲಿ ಪ್ರವಾದಿ ಮುಹಮ್ಮದರ ಪ್ರತಿಷ್ಟೆ ಹಾಗೂ ಗೌರವದಲ್ಲಿ ಕುಮ್ಮಕ್ಕು ನೀಡಲು ಪ್ರಾರಂಭಿಸಿದಾಗ ಅವರ ವಿರುದ್ಧ ಪುಸ್ತಕ ಹಾಗೂ ಫತಾವಾ ಬರೆದು ಒಂದು ಶಕ್ತಿಶಾಲಿ ಪರ್ವತದ ಹಾಗೆ ನಿಂತು ಸೆಣಸಿ ಇಸ್ಲಾಂ ಧರ್ಮದ ಕೀರ್ತಿ ಪತಾಕಿಯನ್ನು ಹಾರಿಸಿದರು. []

೨೫ನೇ ಸಫರುಲ್ ಮುಜಫ್ಫರ ೧೩೪೦ ಹಿಜರಿ ಅಂದರೆ 1921 ಇಸವಿಯಲ್ಲಿ ಶುಕ್ರವಾರ ಮದ್ಯಾಹ್ನ ೨:೩೮ ಗಂಟೆಗೆ ಜುಮಾ ಅಜಾನ್ ವೇಳೆಗೆ ಉತ್ತರ ಪ್ರದೇಶದ ಬರೇಲಿ ನಗರದ ಸೌದಾಗರಾನದಲ್ಲಿರುವ ತಮ್ಮ ಪೂರ್ವಜರ ಮನೆಯಲ್ಲಿ ಇಮಾಮ ಅಹ್ಮದ ರಜಾ ಕಾದರಿಯವರ ಆತ್ಮವು ಪರಮಾತ್ಮನಲ್ಲಿ ಲೀನವಾಯಿತು. انا ﷲ وانا الیہ راجعون ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ. [][೧೦]

ದರ್ಗಾ ಶರೀಫ

ಬದಲಾಯಿಸಿ

ಇಮಾಮ ಅಹ್ಮದ ರಜಾ ಕಾದರಿಯವರ ದರ್ಗಾ ಅಥವಾ ಸಮಾಧಿಯನ್ನು ಅವರು ನಿಧನರಾದ ಸ್ಥಳದಲ್ಲಿಯೇ ಅಂದರೆ ಉತ್ತರ ಪ್ರದೇಶದ ಬರೇಲಿ ನಗರದ ಸೌದಾಗರಾನದಲ್ಲಿ ಅತೀ ಸುಂದರವಾಗಿ ನಿರ್ಮಿಸಲಾಗಿದೆ. ಈ ದರ್ಗಾದ ಮೇಲಿರುವ ಕಪ್ಪು ಬಿಳುಪು ಪಟ್ಟಿಯ ಆಕರವು ಇಂದು ಸುನ್ನಿ ಮುಸ್ಲಿಮರ ಪರಿಚಯದ ಪ್ರತೀಕವಾಗಿಯೂ ಉಪಯೊಗಿಸಲ್ಪಡುತ್ತದೆ. []

ಇಮಾಮ ಅಹ್ಮದ ರಜಾರ ಮಕ್ಕಳು

ಬದಲಾಯಿಸಿ
  1. ಹುಜ್ಜತುಲ್ ಇಸ್ಲಾಮ ಹಜರತ ಅಲ್ಲಾಮಾ ಹಾಮಿದ ರಜಾ ಖಾನ ಕಾದರಿ.
  2. ಮುಫ್ತಿಯೇ ಆಜಮೆ ಹಿಂದ ಹಜರತ ಅಲ್ಲಾಮಾ ಮುಸ್ತಫಾ ರಜಾ ಖಾನ ಕಾದರಿ.

ಇಮಾಮ ಅಹ್ಮದ ರಜಾರ ಪ್ರಮುಖ ಶಿಷ್ಯಂದಿರು

ಬದಲಾಯಿಸಿ
  1. ಹಜರತ ಸಯ್ಯದ ನಯೀಮುದ್ದಿನ ಮುರಾದಾಬಾದಿ
  2. ಹಜರತ ಅಮಜದ ಅಲಿ ಆಜಮಿ
  3. ಹುಜ್ಜತುಲ್ ಇಸ್ಲಾಮ ಹಜರತ ಅಲ್ಲಾಮಾ ಹಾಮಿದ ರಜಾ ಖಾನ ಕಾದರಿ.
  4. ಮುಫ್ತಿಯೇ ಆಜಮೆ ಹಿಂದ ಹಜರತ ಅಲ್ಲಾಮಾ ಮುಸ್ತಫಾ ರಜಾ ಖಾನ ಕಾದರಿ.
  5. ಹಜರತ ಅಬ್ದುಲ ಅಲೀಮ ಮೇರಠಿ ಸಿದ್ದೀಕಿ
  6. ಹಜರತ ಜಿಯಾಉಲ್ಲಾ ಮುಹಾಜಿರ ಮದನಿ
  7. ಹಜರತ ಜಫರುದ್ದೀನ ಬಿಹಾರಿ
  8. ಪ್ರೊಫೆಸರ್ ಸಯ್ಯದ ಸುಲೇಮಾನ ಆಶ್ರಫ

ಇಮಾಮ ಅಹ್ಮದ ರಜಾ ಕಾದರಿಯವರ ಕುರಿತು ಪಿ.ಎಚ್.ಡಿ.

ಬದಲಾಯಿಸಿ
  1. ಡಾಕ್ಟರ್ ಹಸನ ರಜಾ ಖಾನ, ಪಟನಾ ವಿಶ್ವವಿದ್ಯಾಲಯ, ೧೯೭೯, ವಿಷಯ: ಫಿಕಹೆ ಇಸ್ಲಾಮ
  2. ಡಾಕ್ಟರ್ ಮಿಸೆಜ್ ಊಷಾ ಸಾನ್ಯಾಲ, ಕೊಲಂಬಿಯಾ ವಿಶ್ವವಿದ್ಯಾಲಯ, ೧೯೯೦, ವಿಷಯ: Devotional Islam and Politics in British India (Ahmad Raza Khan Barelivi and his Movement ೧೮೭೦-೧೯೨೦)
  3. ಡಾಕ್ಟರ್ ಸಯ್ಯದ ಜಮಾಲುದ್ದೀನ, ಡಾಕ್ಟರ್ ಹರಿ ಸಿಂಗ್ ಗೌರ ವಿಶ್ವವಿದ್ಯಾಲಯ, ಸಾಗರ, ಮಧ್ಯಪ್ರದೇಶ, ೧೯೯೨, ವಿಷಯ: ಆಲಾ ಹಜರತ ಇಮಾಮ ಅಹ್ಮದ ರಜಾ ಹಾಗೂ ಅವರ ನಾತ ಪಠಣ.
  4. ಡಾಕ್ಟರ್ ಮುಹಮ್ಮದ ಇಮಾದುದ್ದೀನ ಜೋಹರ ಶಫಿಆಬಾದಿ, ಬಿಹಾರ ಯುನಿವರ್ಸಿಟಿ, ಮುಜಫ್ಫರಪುರ, ೧೯೯೨, ವಿಷಯ: ಹಜರತ ರಜಾ ಬರೇಲ್ವಿ ಬಹೈಸಿಯತ್ ಶಾಇರೆ ನಾತ.
  5. ಡಾಕ್ಟರ್ ತಯ್ಯಬ ರಜಾ, ಹಿಂದು ವಿಶ್ವವಿದ್ಯಾಲಯ, ವಾರಾಣಾಸಿ, ೧೯೯೩, ವಿಷಯ: ಇಮಾಮ ಅಹ್ಮದ ರಜಾ ಜೀವನ ಹಾಗೂ ಕಾರ್ಯಗಳು.
  6. ಡಾಕ್ಟರ್ ಮಜೀದುಲ್ಲಾ ಕಾದರಿ, ಜಾಮಿಯಾ ಕರಾಚಿ, ೧೯೯೩, ವಿಷಯ: ಕಂಜುಲ್ ಈಮಾನ ಹಾಗು ಇತರೇ ಕುರಾನ್ ಅನುವಾದಗಳ ವಿಸ್ರೃತ ಸಮೀಕ್ಷೆ.
  7. ಡಾಕ್ಟರ್ ಹಾಫಿಜ ಅಲಬಾರಿ ಸಿದ್ದೀಕಿ, ಸಿಂಧ ವಿಶ್ವವಿದ್ಯಾಲಯ, ೧೯೯೩, ವಿಷಯ: ಸಿಂಧಿ ಭಾಷೆಯಲ್ಲಿ ಇಮಾಮ ಅಹ್ಮದ ರಜಾ ಬರೇಲ್ವಿ ಯವರ ಜೀವನ ಹಾಗೂ ಕಾರ್ಯಗಳು.
  8. ಡಾಕ್ಟರ್ ಅಬ್ದುನ್ನಯೀಮ ಅಜೀಜಿ, ರುಹೇಲಖಂಡ ವಿಶ್ವವಿದ್ಯಾಲಯ, ೧೯೯೪, ವಿಷಯ: ಉರ್ದು ನಾತಗೊಯಿ ಔರ ಫಾಜಿಲೆ ಬರೇಲ್ವಿ.
  9. ಡಾಕ್ಟರ್ ಸಿರಾಜ ಅಹ್ಮದ ಬಸ್ತವಿ, ಕಾನಪುರ ವಿಶ್ವವಿದ್ಯಾಲಯ, ೧೯೯೫, ವಿಷಯ: ಇಮಾಮ ಅಹ್ಮದ ರಜಾ ಬರೇಲ್ವಿ ಕಿ ನಾತಿಯಾ ಶಾಯರಿ.
  10. ಡಾಕ್ಟರ್ ಮೌಲಾನಾ ಅಮಜದ ರಜಾ ಕಾದರಿ, ವೀರ ಕುವರ ಸಿಂಗ ವಿಶ್ವವಿದ್ಯಾಲಯ, ಆರಾ, ಬಿಹಾರ, ೧೯೯೮, ವಿಷಯ: ಇಮಾಮ ಅಹ್ಮದ ರಜಾ ಕಿ ಫಿಕರಿ ತನಕೀದೆಂ.
  11. ಪ್ರೊಫೆಸರ್ ಡಾಕ್ಟರ್ ಮುಹಮ್ಮದ ಅನವರ ಖಾನ, ಸಿಂಧ ವಿಶ್ವವಿದ್ಯಾಲಯ, ೧೯೯೮, ವಿಷಯ: ಮೌಲಾನಾ ಅಹ್ಮದ ರಜಾ ಬರೇಲ್ವಿಕಿ ಫಿಕಹಿ ಖಿದಮಾತ.
  12. ಡಾಕ್ಟರ್ ಗುಲಾಮ ಮುಸ್ತಫಾ ನಜಮುಲ್ ಕಾದರಿ, ಮೈಸೂರು ವಿಶ್ವವಿದ್ಯಾಲಯ, ೨೦೦೨, ವಿಷಯ: ಇಮಾಮ ಅಹ್ಮದ ರಜಾ ಕಾ ತಸವ್ವುರ ಇಶ್ಕ.
  13. ಡಾಕ್ಟರ್ ರಜಾಉರ್ರಹಮಾನ ಹಾಕಿಫ ಸಂಭಲಿ, ರುಹೇಲಖಂಡ ವಿಶ್ವವಿದ್ಯಾಲಯ, ೨೦೦೩, ವಿಷಯ: ರುಹೇಲ ಖಂಡ ಕೆ ನಸರಿ ಇರತಿಕಾ ಮೆಂ ಮೌಲಾನಾ ಇಮಾಮ ಅಹ್ಮದ ರಜಾ ಖಾನ ಕಾ ಹಿಸ್ಸಾ.
  14. ಡಾಕ್ಟರ್ ಗುಲಾಮ ಗೌಸ ಕಾದರಿ, ರಾಂಚಿ ವಿಶ್ವವಿದ್ಯಾಲಯ, ೨೦೦೩, ವಿಷಯ: ಇಮಾಮ ಅಹ್ಮದ ರಜಾ ಕಿ ಅನಶಾ ಪರದಾಜಿ.
  15. ಮಿಸೆಜ್ ಡಾಕ್ಟರ್ ತನ್ಜೀಮುಲ್ ಫಿರದೌಸಿ, ಜಾಮಿಯಾ ಕರಾಚಿ, ೨೦೦೪, ವಿಷಯ: ಮೌಲಾನಾ ಅಹಮದ ರಜಾ ಕಿ ನಾತಿಯಾ ಶಾಯರಿ ಕಾ ತಾರೀಖೀ ಔರ ಅದಬಿ ಜಾಯೆಜಾ.
  16. ಡಾಕ್ಟರ ಸಯ್ಯದ ಶಾಹಿದ ಅಲಿ ನೂರಾನಿ, ಪಂಜಾಬ ವಿಶ್ವವಿದ್ಯಾಲಯ, ೨೦೦೪, ವಿಷಯ: ಅರಬಿ ಭಾಷೆಯಲ್ಲಿ ಅಶ್ಶೈಖ ಅಹ್ಮದ ರಜಾ ಶಾಇರ ಅಲಬಿಯಾ ಮಯ ತದವೀನೆ ದೀವಾನ.
  17. ಡಾಕ್ಟರ್ ಗುಲಾಮ ಜಾಬಿರ ಶಮ್ಸ ಮಿಸ್ಬಾಹಿ, ಬಿ.ಆರ್.ಅಂಬೇಡ್ಕರ ವಿಶ್ವವಿದ್ಯಾಲಯ, ೨೦೦೪, ವಿಷಯ: ಇಮಾಮ ಅಹ್ಮದ ರಜಾ ಹಾಗೂ ಅವರ ಪ್ರಕಟಣೆಗಳು.

ಸಂದರ್ಭ ಗ್ರಂಥಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ ಹಯಾತೆ ಆಲಾ ಹಜರತ
  2. ತಜಕಿರಾ ಇಮಾಮ ಅಹ್ಮದ ರಜಾ
  3. ೩.೦ ೩.೧ ೩.೨ ೩.೩ ೩.೪ ೩.೫ ೩.೬ ಸವಾನೆಹ ಆಲಾ ಹಜರತ ಇಮಾಮ ಅಹ್ಮದ ರಜಾ
  4. ತಜಕಿರಾ ಇಮಾಮ ಅಹ್ಮದ ರಜಾ
  5. ೫.೦ ೫.೧ ೫.೨ ೫.೩ ೫.೪ ಅಲಮಲಫೂಜ
  6. ತಜಕಿರಾ ಇಮಾಮ ಅಹ್ಮದ ರಜಾ
  7. ತಜಕಿರಾ ಇಮಾಮ ಅಹ್ಮದ ರಜಾ
  8. ತಜಕಿರಾ ಇಮಾಮ ಅಹ್ಮದ ರಜಾ
  9. ತಜಕಿರಾ ಇಮಾಮ ಅಹ್ಮದ ರಜಾ
  10. ತಜಕಿರಾ ಇಮಾಮ ಅಹ್ಮದ ರಜಾ
  1. ಅಲಮಲಫೂಜ
  2. ಹಯಾತೆ ಆಲಾ ಹಜರತ
  3. ಸವಾನೆಹ ಆಲಾ ಹಜರತ ಇಮಾಮ ಅಹ್ಮದ ರಜಾ
  4. ತಜಕಿರಾ ಇಮಾಮ ಅಹ್ಮದ ರಜಾ
  • Baraka, A - A Saviour in a Dark World (Article) The Islamic Times, March ೨೦೦೩ Stockport, UK

Haroon, M The World of Importance of Imam Ahmad Raza Kazi Publications, Lahore ೧೯೭೪