ಪ್ರತಿನಿತ್ಯವೂ ನಿಯಮಿತಕಾಲಗಳಲ್ಲಿ ಮಾಡಬೇಕೆಂದು ಶಾಸ್ತ್ರಗಳಲ್ಲಿ ವಿಧಿಸಲ್ಪಟ್ಟಿರುವ ದೈನಂದಿನ ಕಾರ್ಯ.

ವಿವರಗಳುಸಂಪಾದಿಸಿ

ಸೂರ್ಯೋದಯಕ್ಕೆ 1 1/2 ಗಂಟೆಗಳ ಕಾಲ ಮೊದಲು ಬ್ರಾಹ್ಮೀ ಮುಹೂರ್ತ ಪ್ರಾರಂಭವಾಗುತ್ತದೆ. ಈ ಕಾಲಕ್ಕೆ ಸರಿಯಾಗಿ ಭಗವಂತನನ್ನು ಸ್ಮರಿಸುತ್ತ ಹಾಸಿಗೆಯಿಂದೆದ್ದು ಮುಖ ಕೈಕಾಲುಗಳನ್ನು ತೊಳೆದುಕೊಂಡು ಆಚಮನ ಮಾಡಿ ಭೂಮಿಯನ್ನು ಮುಟ್ಟಿಕೊಂಡು ಪಾದಸ್ಪರ್ಶ ದೋಷವನ್ನು ಮನ್ನಿಸು ಎಂದು ಪ್ರಾರ್ಥಿಸಿ ಮೂತ್ರ ಪುರೀಷೋತ್ಸರ್ಜನಾನಂತರದಲ್ಲಿ ಮೃತ್ತಿಕಾಶೌಚವನ್ನು ಮುಗಿಸಿ ಆಚಮನ ಮಾಡಿ ದಂತಧಾವನ, ಪ್ರಾತಃಸ್ನಾನ, ತಿಲಕಧಾರಣ, ಸಂಧ್ಯಾವಂದನೆಗಳನ್ನು ಮಾಡಬೇಕು. ಇವು ಪ್ರಥಮ ಯಾಮಾರ್ಧದಲ್ಲಿ ಮಾಡುವ ಕಾರ್ಯಗಳು.

ದ್ವಿತೀಯ ಯಾಮಾರ್ಧದಲ್ಲಿ ವೇದ ಮತ್ತು ಶಾಸ್ತ್ರಗಳ ಅಭ್ಯಾಸ, ಸಮಿತ್ತು ಪುಷ್ಪಾದಿಗಳ ಸಂಗ್ರಹಣಗಳನ್ನು ಮಾಡಬೇಕು.

3ನೆಯ ಯಾಮಾರ್ಧದಲ್ಲಿ ಮಧ್ಯಾಹ್ನ ಸ್ನಾನಮಾಡಿ 8ನೆಯ ಮುಹೂರ್ತದಲ್ಲಿ (ಸೂರ್ಯೋದಯಾನಂತರ 5 ಗಂಟೆ, 36 ನಿಮಿಷಗಳ ಮೇಲೆ 48 ಮಿನಿಟುಗಳು) ಮಾಧ್ಯಾಹ್ನಿಕವನ್ನು ಮಾಡಿ ಬ್ರಹ್ಮಯಜ್ಞ, ದೇವರ ಪೂಜೆಗಳನ್ನು ಮುಗಿಸಿ ಐದನೆಯ ಯಾಮಾರ್ಧದಲ್ಲಿ ವೈಶ್ವದೇವವನ್ನು ಮಾಡಿ ಭೋಜನಾನಂತರ 6-7ನೆಯ ಯಾಮಾರ್ಧದಲ್ಲಿ ಇತಿಹಾಸ ಪುರಾಣಗಳನ್ನು ಪಠಿಸಿ 8ನೆಯ ಯಾಮಾರ್ಧದಲ್ಲಿ ಲೌಕಿಕವಿಷಯ ಚಿಂತನಾನಂತರ ಸಾಯಂಸಂಧ್ಯಾವಂದನೆಯನ್ನು ಮಾಡಿ ದೇವತಾಸ್ತುತಿಯನ್ನು ಪಠಿಸಬೇಕು. ರಾತ್ರಿ ಭೋಜನಾ ನಂತರ ಶುಚಿ ಪ್ರದೇಶದಲ್ಲಿ ಮಂಚದ ಮೇಲೆ ಹಾಸಿಗೆಯನ್ನು ಹಾಸಿ ತಲೆಯ ಪಾರ್ಶ್ವದಲ್ಲಿ ಪೂರ್ಣಕುಂಭವನ್ನಿಟ್ಟು ರಾತ್ರಿಯ ಬಟ್ಟೆಗಳನ್ನು ಧರಿಸಿ ಕೈಕಾಲುಗಳನ್ನು ತೊಳೆದುಕೊಂಡು ಎರಡು ಆಚಮನಗಳನ್ನು ಮಾಡಿ ಪೂರ್ವ ಅಥವಾ ದಕ್ಷಿಣ ದಿಕ್ಕಿಗೆ ತಲೆಯನ್ನಿಟ್ಟುಕೊಂಡು ಭಗವಂತನನ್ನು ಸ್ಮರಿಸುತ್ತ ಮಲಗಬೇಕು.

ಇವುಗಳನ್ನೂ ನೋಡಿಸಂಪಾದಿಸಿ

ಸಂಧ್ಯಾವಂದನೆ

"https://kn.wikipedia.org/w/index.php?title=ಆಹ್ನಿಕ&oldid=814778" ಇಂದ ಪಡೆಯಲ್ಪಟ್ಟಿದೆ