(೨, ನವೆಂಬರ್ ೧೮೯೭-೧೫, ಆಗಸ್ಟ್, ೧೯೮೪)

ರಾಘವಾಚಾರ್ ದೇಶಿಕಾಚಾರ್
ಜನನನವೆಂಬರ್ ೨, ೧೮೯೭
ಬೆಂಗಳೂರಿನಲ್ಲಿ
ಮರಣಆಗಸ್ಟ್, ಫೆಬ್ರುವರಿ ೧೫, ೧೯೮೪
ಮುಂಬಯಿ
ಉದ್ಯೋಗಮೆಕ್ಯಾನಿಕಲ್ ಇಂಜಿನಿಯರ್, ಉದ್ಯಮಿ, ಸ್ಟಾಂಡರ್ಡ್ ಬ್ಯಾಟರೀಸ್', ಮತ್ತು 'ಫ್ಯೂಯೆಲ್ ಇಂಜೆಕ್ಷನ್ ಕಂಪೆನಿ'ಗಳ ಸಮೂಹದ ಸಂಸ್ಥಾಪಕರು. ಮುಂಬಯಿನಗರದಲ್ಲಿ ಸ್ಥಾಪಿಸಿದರು. ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದರು, ಅವುಗಳಲ್ಲಿ ಪ್ರಮುಖವಾದವುಗಳು : * ಮೈಸೂರ್ ಟೆಕ್ನಿಕಲ್ ಎಜುಕೇಶನ್ ಸೊ. ಬೆಂಗಳೂರು, * ನ್ಯಾಷನಲ್ ಕನ್ನಡ ಎಜುಕೇಶನ್ ಸೊ. ಮಾಟುಂಗಾ, ಮುಂಬಯಿ, * ಮೈಸೂರ್ ಹೌಸಿಂಗ್ ಕಾಲೋನಿ, ಚೆಂಬೂರ್, ಮುಂಬಯಿ, ನ ಸ್ಥಾಪಕ ಸದಸ್ಯ. ಸಮಾಜ ಸೇವಕರು, ಮುಂಬಯಿನ ಮೈಸೂರ್ ಅಸೋಸಿಯೇಷನ್ ಕಟ್ಟಡ ನಿರ್ಮಾಣದಲ್ಲಿ ಬಹಳ ಆಸಕ್ತಿವಹಿಸಿದ್ದರು.
ಜೀವನ ಸಂಗಾತಿವೈದೇಹಿ ಚಾರ್,
ಮಕ್ಕಳುಲೋಕನಾಥ ಅಯ್ಯಂಗಾರ್, ರಘುನಾಥ್ ಅಯ್ಯಂಗಾರ್, ವಿಜಯ್ ಡಿ.ಚಾರ್, ಸರೋಜ
ಪೋಷಕರುದೇಶಿಕಾಚಾರ್, ರುಕ್ಮಿಣಮ್ಮ,

ಆರ್.ಡಿ.ಚಾರ್,ಎಂದೇ ತಮ್ಮ ಸ್ನೇಹಿತರ ವಲಯದಲ್ಲಿ ಪ್ರಸಿದ್ಧರಾಗಿದ್ದ, ರಾಘವಾಚಾರ್ ದೇಶಿಕಾಚಾರ್, ಬೆಂಗಳೂರಿನ ಒಂದು ಸುಸಂಸ್ಕೃತ ವಿದ್ಯಾವಂತ ಪರಿವಾರದಿಂದ ಮುಂಬಯಿನಗರಕ್ಕೆ ಬಂದುನೆಲಸಿದವರಲ್ಲಿ ಪ್ರಮುಖರು. ಆ ಸಮಯದಲ್ಲಿ ಮುಂಬಯಿನಗರದಲ್ಲಿ ಆಟೋಮೋಬೈಲ್ ಗಳಿಗೆ ಬಳಸುವ 'ಬ್ಯಾಟರಿ'ಗಳನ್ನು ತಯಾರಿಸಿ ಧನವಂತರಾದರು. ಹಾಗೆ ಗಳಿಸಿದ ಹಣವನ್ನು ತಾವೂ ಬಳಸಿ, ತಮ್ಮ ಪರಿವಾರಕ್ಕೆ ಉತ್ತಮ ವಿದ್ಯಾಭ್ಯಾಸ, ಮೊದಲಾದ ಜೀವನ ಸೌಕರ್ಯಗಳನ್ನು ಒದಗಿಸುವ ಜೊತೆಗೆ, ಸಾರ್ವಜನಿಕ ಸಂಸ್ಥಗಳಿಗೆ ಧನಸಹಾಯ ಮಾಡುವ ಮೂಲಕ, ಸಂಗೀತ, ಸಾಹಿತ್ಯ, ಲಲಿತ ಕಲೆಗಳಿಗೆ ಪ್ರೋತ್ಸಾಹಕೊಟ್ಟರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಮುಂಬಯಿನಲ್ಲಿ ಮತ್ತು ಬೆಂಗಳೂರಿನಲ್ಲಿ ಸ್ಥಾಪಿಸಿ,ಅವುಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋದರು. ಅವರೊಬ್ಬ ಪ್ರತಿಭಾನ್ವಿತ,ಮತ್ತು 'ಯಶಸ್ವಿ-ಬಿಸಿನೆಸ್ ಮನ್' ಎಂಬ ಹೆಸರುಗಳಿಸಿದ್ದರು. ಸಾಧಾರಣ ಮಧ್ಯಮವರ್ಗದಲ್ಲಿ ಜನಿಸಿ ಉದ್ಯಮಗಳ ಜಾಡು ಅರಿಯದ ಚಾರ್, ತಮ್ಮಸ್ವಂತ ಪರಿಶ್ರಮ,ಬುದ್ಧಿಮತ್ತೆಯಿಂದ ಒಂದು ಹೊಸ ಅಧ್ಯಾಯಕ್ಕೆ ನಾಂದಿಹಾಕಿ ಅದರಲ್ಲಿ ಜಯಸಾಧಿಸಿದರು. ಹೊಸದಾಗಿ ಪದವಿಗಳಿಸಿದ ನಂತರ ನೌಕರಿಗಾಗಿ ಮುಂಬಯಿಗೆ ಬರುತ್ತಿದ ನೂರಾರು ಯುವ ಇಂಜಿನಿಯರ್ ಗಳಿಗೆ ತಮ್ಮ ಸಂಸ್ಥೆಯಲ್ಲಿ ನೌಕರಿಯನ್ನು ಕೊಟ್ಟು ಸರಿಯಾದ ಸಲಹೆ,ಮತ್ತು ಮಾರ್ಗದರ್ಶನ ಮಾಡಿ ಉಪಕರಿಸಿದ್ದರು. ಮಾರುಕಟ್ಟೆಯ ನೀತಿ, ಬೇಡಿಕೆಗಳನ್ನು ಅತ್ಯಂತ ತ್ವರಿತವಾಗಿ ಕಂಡುಹಿಡಿದು, ಗ್ರಾಹಕರಿಗೆ ಅವುಗಳನ್ನು ಸುಲಭದರದಲ್ಲಿ ಮುಟ್ಟಿಸುವ ಕೆಲಸ ಅವರಿಗೆ ಬಹಳ ಚೆನ್ನಾಗಿ ಗೊತ್ತಿತ್ತು. ಚಾರ್ ಹುಟ್ಟುಹಾಕಿದ ಬಿಸಿನೆಸ್ ಸಮುದಾಯದ ಹೆಸರು :

  • ಐ.ಎ.ಇ.ಸಿ,
  • ಸ್ಟಾಂಡರ್ಡ್ ಬ್ಯಾಟರೀಸ್
  • ಮೈಸೂರ್ ಎಲೆಕ್ಟ್ರಿಕ್ ಇಂಡಸ್ಟ್ರೀಸ್
  • ಫ್ಯೂಯೆಲ್ ಇಂಜೆಕ್ಷನ್ ಲಿಮಿಟೆಡ್

'ಆರ್.ಡಿ.ಚಾರ್ ರವರ-ಸ್ಟಾಂಡರ್ಡ್ ಬ್ಯಾಟರಿಗಳು' ಬದಲಾಯಿಸಿ

ವಿಶ್ವಯುದ್ಧದ ಸಮಯದಲ್ಲಿ ಆಟೋಮೊಬೈಲ್ ಬ್ಯಾಟರಿಗಳು ಅತಿ ಹೆಚ್ಚಿನ ಬೇಡಿಕೆಯಲ್ಲಿದ್ದವು 'ಡಿಫೆನ್ಸ್ ಗಾಡಿಗಳಿಗೆ' ಅವು ಅತಿಯಾಗಿ ಸರಬರಾಜಾಗುತ್ತಿದ್ದವು. ಆರ್.ಡಿ.ಚಾರ್ ಮುಂಬಯಿನ ಉಪನಗರಗಳಲ್ಲೊಂದಾದ ಸಾಂತಾಕ್ರೂಜ್ ಜಿಲ್ಲೆಯ ಹತ್ತಿರದಲ್ಲಿ ೨೦ ಸಾವಿರ ರೂಪಾಯಿ ಕೊಟ್ಟು ಒಂದು ತಬೆಲಾವನ್ನು (ಕೊಟ್ಟಿಗೆ) ಕೊಂಡರು.ತಾವು ಖರೀದಿಸಿದ ದನದ ಕೊಟ್ಟಿಗೆಯನ್ನು(ತಬೇಲಾ) ಶುಚಿಗೊಳಿಸಿ, ಅಲ್ಲಿ 'ಬ್ಯಾಟರಿ ಫಲಕ'ಗಳನ್ನು ತಯಾರಿಸಲು ಆರಂಭಿಸಿದರು. ಮಾರುಕಟ್ಟೆಯಿಂದ ಹಳೆಯ ಬ್ಯಾಟರಿಗಳನ್ನು ಖರೀದಿಸಿ, ಅವನ್ನು ದುರಸ್ತಿಪಡಿಸಿ ಅವಕ್ಕೆಹೊಸ 'ಲೇಬಲ್ ಫಿಕ್ಸ್ ಮಾಡುವ ಕೆಲಸ' ಭರದಿಂದ ಸಾಗಿತು. ಈ ತರಹದ ವಹಿವಾಟಿಗೆ ಅತಿ ಹೆಚ್ಚು ಬೇಡಿಕೆ ಇಲ್ಲದಿದ್ದರೂ ಸೋವಿ-ವಸ್ತುಗಳನ್ನು ಕೊಳ್ಳಲು ಆಸಕ್ತರಿಗೇನೂ ಕಡಿಮೆ ಇರಲಿಲ್ಲ. ಹೀಗಾಗಿ 'ಬ್ಯಾಟರಿ ಬಿಸಿನೆಸ್' ನಿಂದ ಅತಿಯಾಗಿ ಲಾಭ ಬರುತ್ತಿತ್ತು. ಸರಕಾರದ ಅನುಮತಿಯೂ ಇತ್ತು. ಈ ವಲಯದಲ್ಲಿ ಅತಿ-ಹೆಚ್ಛಿನ ತಿಳುವಳಿಕೆಗಾಗಿ, ಚಾರ್ ಅಮೆರಿಕಕ್ಕೆ ಹೋದರು. ಅಲ್ಲಿನ ಭಾರಿ-ಭಾರಿ ಫ್ಯಾಕ್ಟರಿಗಳನ್ನು ಸಂದರ್ಶಿಸಿ, ಬ್ಯಾಟರಿಗಳನ್ನು ತಯಾರುಮಾಡುವ ವಿಧಾನಗಳು, ಮತ್ತಿತರ ವಿಷಯಗಳನ್ನು ಚೆನ್ನಾಗಿ ಅಭ್ಯಾಸಮಾಡಿ, ತರಪೇತಿಗಳಿಸಿ ಸ್ವದೇಶಕ್ಕೆ ವಾಪಸ್ ಬಂದರು. ಬ್ಯಾಟರಿ ನಿರ್ಮಾಣದಲ್ಲಿ ಬೇಕಾದ ಪ್ರಮುಖ ಯಂತ್ರಗಳನ್ನೂ ಜೊತೆಯಲ್ಲಿ ತಂದರು. ತಾವೇ ಕೆಲವು ಕುಂದುಕೊರತೆಗಳನ್ನು ಪರಿಶೀಲಿಸಿ, ಹಲವಾರು ಹೊಸ ಪದ್ಧತಿಗಳನ್ನು ಅಳವಡಿಸಿದ್ದರಿಂದ ಭಾರತದಲ್ಲಿ ಚಾರ್ ಕಂಪೆನಿಯಲ್ಲಿ ತಯಾರಾದ 'ಸ್ಟಾಂಡರ್ಡ್ ಬ್ಯಾಟರಿ'ಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯಲ್ಲಿ ಮಾರಲ್ಪಡುತ್ತಿದ್ದವು. ಹೀಗೆ ಆರ್.ಡಿ.ಯವರು ಧನವಂತರಾದರು.

ಫ್ಯೂಯೆಲ್ ಇಂಜೆಕ್ಷನ್ ಕಂಪೆನಿ ಬದಲಾಯಿಸಿ

ಒಮ್ಮೆ ಇಂಗ್ಲೆಂಡ್ ನಗರಕ್ಕೆ ಬಿಜಿನೆಸ್ ನಿಮಿತ್ತ ಹೋದಾಗ, 'ಬ್ರೈಸ್ ಫುಯೆಲ್ ಇಂಜೆಕ್ಷನ್ ಕಂ'.ಯ ಭಾರತದ ಏಜೆಂಟ್ ಆಗುವ ಸಲಹೆಯನ್ನು ಕೊಟ್ಟಾಗ,ಅವರು ಸಂತೋಷದಿಂದ ಒಪ್ಪಿಕೊಂಡರು. ಐ.ಎ.ಇ.ಸಿ. ಕಂಪೆನಿಯ ಮೂಲಕ ಮಾರುವ ವ್ಯವಸ್ಥೆಯ ಜೊತೆ ಸರ್ವೀಸಿಂಗ್ ಜವಾಬ್ದಾರಿಯನ್ನೂ ಒಪ್ಪಿಕೊಂಡು ಸಮರ್ಥವಾಗಿ ನಿಭಾಯಿಸಿದರು. ಬ್ಯಾಟರಿಯನ್ನು 'ಕಿರ್ಲೊಸ್ಕರ್ ಆಯಿಲ್ ಇಂಜಿನ್ಸ್' ಗೆ ಅಳವಡಿಸಿಕೊಟ್ಟರು. ಹಾಗೆಯೇ ಮುಂದುವರೆದು,'ಬ್ರೈಸ್ ಫುಯೆಲ್ ಇಂಜೆಕ್ಷನ್ ಕಂ' ಜೊತೆ ಪಾಲುದಾರರಾಗಿ ಕೆಲಸಮಾಡಲು ಕೇಳಿದಾಗ, ಒಪ್ಪಿಗೆ ದೊರೆಯಲಿಲ್ಲ. ಆಗ ಅವರು, 'ಸ್ವಿಸ್ ಕಂಪೆನಿ'ಯೊಂದರ ಜೊತೆ ಮಾತಾಡಿ 'ಪ್ಹುಯೇಲ್ ಇಂಜೆಕ್ಷನ್ ಲಿಮಿಟೆಡ್' ಎಂಬ ಹೆಸರಿನ ಕಂಪೆನಿಯನ್ನು ಈಗಿನ 'ಶೆಡ್' ಬಳಿಯೇ ಸ್ಥಾಪಿಸಿದರು.

ತಂದೆಯವರ ಪರಿವಾರ ಬದಲಾಯಿಸಿ

ಚಾರ್ ವೃತ್ತಿಜೀವನದ ಆರಂಭ ಬದಲಾಯಿಸಿ

'ದೇಶಿಕಾಚಾರ್,' ಪೂನಾದ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಗಳಿಸಿ, ಬೆಂಗಳೂರಿನ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ ಶಾಖೆಯಲ್ಲಿ ಹಲವಾರು ಹುದ್ದೆಗಳಲ್ಲಿ ಕೆಲಸಮಾಡುತ್ತಿದ್ದರು. ಆ ಸಮಯದಲ್ಲಿ ರಾಜ್ಯದಾದ್ಯಂತ ಸಂಚರಿಸಿ ಹಲವು ಜನಪರ ಕೆಲಸಗಳನ್ನು ಶ್ರಧ್ಧೆ ಯಿಂದ ಮಾಡಿದ್ದರು. ಸ್ವಲ್ಪ ಸಮಯ ಮೈಸೂರು ಮಹಾರಾಜರ ಅರಮನೆಯ ಕಟ್ಟಡದ ಉಸ್ತುವಾರಿಯನ್ನೂ ನೋಡಿಕೊಂಡರು.ರೈಲ್ವೆ ಇಲಾಖೆ ಮೈಸೂರು ಸರಕಾರದ ಮೆಲ್ವಿಚಾರಣೆಯಲ್ಲಿದ್ದಾಗ, ಅಲ್ಲಿ ಉತ್ತಮ ಕೆಲಸಮಾಡಿ ಹೆಸರುಗಳಿಸಿದರು. ಚಾರ್ ರವರ ಪೂರ್ವಜರು ತುಮಕೂರಿನಿಂದ ಬಂದವರು. ಚಾರ್ ರವರು, 'ರುಕ್ಮಿಣಿ' ಎಂಬ ಕಾಫಿ ಪ್ಲಾಂಟರ್ ರವರ ಮಗಳನ್ನು ಮದುವೆಯಾದರು. ಕೊನೆಗೆ ೧೯೨೧ ರಲ್ಲಿ ಮೈಸೂರು ಸರಕಾರದ ಅಧಿಕಾರದಿಂದ ನಿವೃತ್ತರಾದರು. ನಿವೃತ್ತಿಯ ಬಳಿಕ ಅವರು ತಮ್ಮ ಪರಿವಾರದ ಜೊತೆ ಉತ್ತರ ಬೆಂಗಳೂರಿನ ಮಲ್ಲೇಶ್ವರಂ ಉಪನಗರದಲ್ಲಿ ನೆಲಸಿದರು.

ಚಾರ್,ತುಮಕೂರಿನವರು ಬದಲಾಯಿಸಿ

ಮೂಲತಃ ಚಾರ್ ವಂಶಸ್ತರು ತುಮಕೂರಿನವರು.ಮಹಾ ಸಾಧ್ವಿ, 'ರುಕ್ಮಿಣಮ್ಮನವರು' ಅವರ ತಾಯಿ. 'ಕಾಫಿ ಪ್ಲಾಂಟರ್ ಮಗಳಾಗಿಯೂ ನಿಗರ್ವಿ' ಹಾಗೂ ಎಲ್ಲರನ್ನೂ ಪ್ರೀತಿ ಗೌರವಗಳಿಂದ ಕಾಣುತ್ತಿದ್ದರು. ಇದೇ ಸದ್ಗುಣಗಳು ಅವರ ಮಕ್ಕಳಲ್ಲೂ ಕಾಣಬರುತ್ತಿತ್ತು.ಮನೆಯಲ್ಲಿ ಆರ್.ಡಿ.ಯವರನ್ನೂ ಸೇರಿದಂತೆ ಅವರನ್ನು ಕಂಡರೆ ಎಲ್ಲರಿಗೂ ಅಪಾರ ಗೌರವ ಮತ್ತು ಪ್ರೀತಿ. ಹಿರಿಯ ಮಗ ಟಿ.ಆರ್.ಶ್ರೀನಿವಾಸ ಅಯ್ಯಂಗಾರ್: ವಕೀಲಿ ವೃತ್ತಿಯನ್ನು ಆರಿಸಿಕೊಂಡು ಮುಂದೆಬಂದರು. ಅಕ್ಕ ಚಂಪಕ, ಸಿ.ಆರ್.ಅಯ್ಯಂಗಾರ್ ರನ್ನು ವಿವಾಹವಾದರು : ಮುಂದೆ ಎಮ್.ಐ.ಎಸ್ ಸಂಸ್ಥೆಯನ್ನು ಕಟ್ಟುವ ಕಾರ್ಯದಲ್ಲಿ ಆರ್.ಡಿ.ಯವರಿಗೆ ನೆರವಾದರು. ಇಬ್ಬರು ಗಂಡು ಮಕ್ಕಳು ಮತ್ತು ೩ ಜನ ಹೆಣ್ಣು ಮಕ್ಕಳ ಸಂಸಾರದಲ್ಲಿ ಆರ್.ಡಿ.ಯವರು ಮೂರನೆಯವರು: ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಅವರು, 'ಸ್ಟಾಂಡರ್ಡ್ ಬ್ಯಾಟರೀಸ್', ಮತ್ತು 'ಫ್ಯೂಯೆಲ್ ಇಂಜೆಕ್ಷನ್ ಕಂಪೆನಿ'ಗಳನ್ನು ಮುಂಬಯಿನಗರದಲ್ಲಿ ಸ್ಥಾಪಿಸಿದರು. ಅವರು, 'ವೈದೇಹಿ'ಯವರನ್ನು ಮದುವೆಯಾದರು. ತಂಗಿ ಲೋಕಮಾತ: 'ಬೆಂಗಳೂರಿನ ಯೂನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್' ನಲ್ಲಿ 'ಮೆಕ್ಯಾನಿಕಲ್ ಇಂಜಿನಿಯರಿಂಗ್' ನಲ್ಲಿ ವಿದ್ಯಾಭ್ಯಾಸ ಮಾಡಿದ್ದ, ಕೆ.ಎಸ್.ಎಸ್.ಅಯ್ಯಂಗಾರ್ ರನ್ನು ವಿವಾಹವಾದರು. ಇವರೂ ಸಹಿತ ಆರ್.ಡಿ.ಚಾರ್ ಪ್ರಾರಂಭಿಸಿದ ಐ.ಎ.ಇ.ಸಿ.ಸಂಸ್ಥೆಯ ಜೊತೆ ಬಹಳ ಕಾಲ ದುಡಿದರು. ತಂಗಿ ಅನಸೂಯ, 'ಎಲೆಕ್ಟ್ರಿಕಲ್ ಇಂಜಿನಿಯರ್' ಆಗಿದ್ದ ಬಿ.ರಾಮದಾಸ್ ಎನ್ನುವ ಯುವಕನನ್ನು ಮದುವೆಯಾದರು.

ಜನನ, ವಿದ್ಯಾಭ್ಯಾಸ, ವೃತ್ತಿಜೀವನ ಬದಲಾಯಿಸಿ

'ರಾಘವಾಚಾರ್ ದೇಶಿಕಾ ಚಾರ್' ೨, ನವೆಂಬರ್ ೧೮೯೭ ರಂದು ಬೆಂಗಳೂರಿನಲ್ಲಿ ಜನಿಸಿದರು.ಬೆಂಗಳೂರಿನ ಯುನಿವರ್ಸಿಟಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್ ಗೆ ಸೇರಿ ಸನ್ ೧೯೨೧ ರಲ್ಲಿ ಪದವಿಯನ್ನು ಗಳಿಸಿದರು.ಎಮ್.ಹಯೆತ್ ಎ.ಕೆ.ಚಾರ್ ಮೊದಲಾದ ದಿಗ್ಗಜರು, ಚಾರ್ ಜೊತೆಯಲ್ಲಿ ಒದಿದವರು. ಬೆಂಗಳೂರಿನ ಇಲಾಖೆಯಲ್ಲಿ ಮೊದಲು ರ‍್ಯಾಂಕ್ ಬಂದ ಇಬ್ಬರು ವಿದ್ಯಾರ್ಥಿಗಳಿಗೆ ಕೆಲಸ ನಿಖರವಾಗಿ ದೊರೆಯುತ್ತಿತ್ತು. ಆದರೆ ಸರ್ಕಾರಿ ನೌಕರಿ ಮಾವನವರಿಗೆ ಸರಿತೊರಲಿಲ್ಲ. ಇನ್ನೂ ಕೊನೆಯ ವರ್ಷ ವ್ಯಾಸಂಗ ಮಾಡುತ್ತಿರುವಾಗಲೇ ಪುಣೆಯ ಫರ್ಗೂಸನ್ ಕಾಲೇಜಿನ ಪ್ರೊಫೆಸರ್ ಎನ್.ಎನ್ ಅಯ್ಯಂಗಾರ್ ರವರ ಮಗಳು, 'ವೈದೇಹಿ'ಯನ್ನು ಮದುವೆಯಾದರು. ವೈದೇಹಿಯವರು, ದಿವಾನ್ ಬಹದ್ದೂರ್ ಎನ್.ಎನ್.ಅಯ್ಯಂಗಾರ್,ಹಾಗೂ ಕಮಲಮ್ಮ ದಂಪತಿಗಳಿಗೆ ಮಗಳಾಗಿ ಸನ್.೧೯೦೮ ರಲ್ಲಿ ಜನಿಸಿದರು. ಆಗಿನ ಕಾಲದಲ್ಲಿ ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುವುದನ್ನು ಮನೆಯಲ್ಲೇ ಅವರ ಪೋಷಕರು ಪ್ರೊತ್ಸಾಹಿಸುತ್ತಿರಲಿಲ್ಲ. ಹೆಚ್ಚೇನೂ ಓದಿರದಿದ್ದರೂ ‘ಸಾಮಾನ್ಯಜ್ಞಾನ’ ಹಾಗು ‘ಸಮಯಪ್ರಜ್ಞೆಗೆ ಹೆಸರಾಗಿದ್ದರು.

ಮುಂಬಯಿ ನಗರಕ್ಕೆ ಬದಲಾಯಿಸಿ

ಚಾರ್, ಬೆಂಗಳೂರಿನಿಂದ ಪೂನಕ್ಕೆ ಹೋದರು. ೧೯೨೩ ರಲ್ಲೇ ಮುಂಬಯಿ ಮಹಾಪಟ್ಟಣಕ್ಕೆ ನೌಕರಿಗಾಗಿ ಬಂದರು. ಇಂಜಿನಿಯರಿಂಗ್ ಸರ್ಟಿಫಿಕೇಟ್ ಬಿಟ್ಟು ಬೇರೆ ಏನು ಗೊತ್ತಿರಲಿಲ್ಲ. ಅವರ ಮನೆಯವರು ಯಾವ ಕಾರ್ಖಾನೆಯನ್ನು ನಡೆಸುತ್ತಿರಲಿಲ್ಲ. ಅಂತಹ ಉದ್ಯಮಿ-ಗೆಳೆಯರು ಅವರಿಗೆ ಇರಲಿಲ್ಲ. ತಮ್ಮ ಸ್ವಂತ ಬುದ್ಧಿಮತ್ತೆ ಹಾಗು ಕಠಿಣ ಪರಿಶ್ರಮದಿಂದ ಅವರು ಮುಂದೆ ಏರುತ್ತಾ ಸಾಗಿದರು.ಮೊದಲ ಕೆಲಸ ಮುಂಬಯಿನ ಉಪನಗರವೊಂದಾಗಿದ್ದ 'ಪರೇಲ್ ನ ರೈಲ್ವೆ ವರ್ಕ್ ಶಾಪ್' ನಲ್ಲಿ ೫೨ ರೂಗಳ ಸಂಬಳದ ‘ಅಸಿಸ್ಟಂಟ್ ಮೆಶಿನ್ ಮ್ಯಾನ್’ ಎಂಬ ಕೆಲಸ ಸಿಕ್ಕಿತು. ಒಂದು ವರ್ಷದ ಬಳಿಕ, ಚಾರ್ ವರ್ಕ್ ಶಾಪ್ ನ ಹಿರಿಯ ಅಧಿಕಾರಿಯೊಬ್ಬರನ್ನು ಸಂಧಿಸಿ, ತಮ್ಮ ಭವಿಷ್ಯದ ಬಗ್ಗೆ ಸಮಾಲೊಚಿಸಿದರು. 'ರೈಲ್ವೆವರ್ಕ್ಸ್ ಶಾಪ್' ನ ಕೆಲಸ ಕೇವಲ 'ಆಂಗ್ಲೋ ಇಂಡಿಯನ್ಸ್' ಗಳಿಗೆ ಮಾತ್ರ ಮೀಸಲಾಗಿತ್ತು, ಎನ್ನುವ ವಿಷಯ ಗೊತ್ತಾದಾಗ, ಚಾರ್,'ರೈಲ್ವೆ ವರ್ಕ್ಸ್ ಶಾಪ್' ಗೆ ರಾಜಿನಾಮೆ ಸಲ್ಲಿಸಿ, ಖಾಸಗಿ ವಲಯದಲ್ಲಿ ತಮ್ಮ ದಾರಿಯನ್ನು ಕಂಡುಕೊಂಡರು. ಒಂದು ವರ್ಷದ ಬಳಿಕ ಕೆಲಸಕ್ಕೆ ರಾಜೀನಾಮೆ ಕೊಟ್ಟರು.ಇಟಾಲಿಯನ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಅರ್ಜಿ ಹಾಕಿದರು. ಆಗಿನ ಸಮಯದಲ್ಲಿ ಜರ್ಮನ್ ಕಂಪೆನಿಗಳು ಉತ್ಪಾದಿಸುತ್ತಿದ್ದ ಯಂತ್ರಗಳು ಗುಣಮಟ್ಟದಲ್ಲಿ ಅತ್ಯುತ್ತಮವಾಗಿದ್ದರೂ ಅವರು, ನೇರವಾಗಿ ತಮ್ಮ ಯಂತ್ರ ಸಾಮಗ್ರಿಗಳನ್ನು ಭಾರತಕ್ಕೆ ಮಾರುವಂತಿರಲಿಲ್ಲ. ಪ್ರತಿಯೊಂದಕ್ಕೂ ಬ್ರಿಟಿಷ್ ಸರಕಾರದ ಅನುಮತಿ ಪಡೆಯಬೇಕಾಗಿತ್ತು. ಇಟಲಿಯ ಶಾಖೆಯೊಂದು ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿತ್ತು. ಎನೂ ಅನುಭವವೇ ಇಲ್ಲದ ಆರ್.ಡಿ.ಚಾರ್ ಗೆ ಇದು ಒಂದು ದೊಡ್ಡ ಸವಾಲಾಗಿತ್ತು. ತಮಗೆ ೩೦೦ ರೂ ಗಳ ವೇತನದ ಅಪೇಕ್ಷೆ ಇರುವುದಾಗಿ ನೇರವಾಗಿ ಮ್ಯಾನೇಜರ್ ಹತ್ತಿರ ಹೇಳಿಕೊಂಡರು. ಗುಜರಾತಿನ 'ವಾಂಕನರ್' ಎಂಬ ಊರಿನಲ್ಲಿ 'ಐಸ್ ಪ್ಲಾಂಟ್ ಸ್ಥಾಪಿಸುವ ಕೆಲಸ'ವಾಗಿತ್ತು. ಇದು ಕಾಥೆಯವಾಡದ ಮಹಾರಾಜರಿಗೆ ಸೇರಿದ ಉದ್ಯಮವಾಗಿತ್ತು. ಈ ಉದ್ಯಮಕ್ಕೆ ಬೇಕಾದ ಇಂಜಿನಿಯರ್ಸ್ ಮತ್ತು ಮೆಶಿನ್ ಗಳನ್ನು ಇಟ್ಯಾಲಿಯನ್ ಕಂಪೆನಿ ಒದಗಿಸುತ್ತಿತ್ತು.

ಐಸ್ ಪ್ಲಾಂಟ್ ಸ್ಥಾಪಿಸುವ ಕೆಲಸ ಬದಲಾಯಿಸಿ

ವಿದ್ಯಾರ್ಹತೆಬಿಟ್ಟರೆ ಕೆಲಸಮಾಡುವ ಅನುಭವವಿಲ್ಲದ ವಿಚಾರ ತಿಳಿದು,ಒಪ್ಪಿಗೆಯಾದರೆ ಮಾತ್ರ ೩೦೦ ರುಪಾಯಿ ವೇತನ ಕೊಡುವ ವಿಚಾರ ತಿಳಿಯಿತು. ಆದರೂ ಅವರು ಧರ್ಯಗೆಡದೆ ಮುಂಬಯಿಗೆ ಬಂದು ಒಂದೆರಡು ಅಂತಹ ಐಸ್ ತಯಾರಿಕೆಯ ಪ್ಲಾಂಟ್ ಗಳನ್ನು ಸಂದರ್ಶಿಸಿ, ಅಲ್ಲಿನ ಕಾರ್ಯಪದ್ಧತಿಗಳನ್ನು ಅರಿತರು. ಪುಸ್ತಕ ಭಂಡಾರದಿಂದ ಹಲವು ಟೆಕ್ನಿಕಲ್ ಪುಸ್ತಕಗಳನ್ನು ಮನೆಗೆ ತಂದು, ಆಳವಾಗಿ ಅಭ್ಯಾಸ ಮಾಡಿದರು. ಮತ್ತೆ 'ವಾಂಕನಾರ್' ಗೆ ಹೋಗಿ, ಅಲ್ಲಿ 'ಐಸ್ ಪ್ಲಾಂಟ್' ನ್ನು ಶುರುಮಾಡಿದರು. ಚೆನ್ನಾಗಿ ಕೆಲಸ ಮಾಡುತ್ತಿದ್ದ ಐಸ್ ಪ್ಲಾಂಟನ್ನು ಕಂಡು ಮಹಾರಾಜರು ಸಂತೋಷಗೊಂಡು, ಅದೇ ತರಹದ ಮತ್ತೊಂದು ಘಟಕವನ್ನು ಸ್ಥಾಪಿಸಲು ಚಾರ್ ರವರಿಗೆ ಆದೇಶಿಸಿದರು. ಚಾರ್ ಮೊದಲೇ ಬೇಡಿಕೆ ಸಲ್ಲಿಸಿದ ೩೦೦ ರೂಗಳ ವೇತನವನ್ನು ಮಂಜೂರ್ ಮಾಡಿದರು. ಹೀಗೆ ಚಾರ್ ಆ ಐಸ್ ತಯಾರಿಕೆಯ ಫ್ಯಾಕ್ಟರಿಯಲ್ಲಿ ಬಂದ ಅಡಚಣೆಗಳನ್ನು ಸುಧಾರಿಸುತ್ತಾ, ತಮ್ಮದೇ ಪದ್ಧತಿಯನ್ನು ಅಳವಡಿಸುತ್ತಾ ಕಳೆದ ೪ ವರ್ಷಗಳ ಕಾಲ ಅವರ ಜೀವನದಲ್ಲಿ ಬಹಳ ಮಹತ್ವದ್ದಾಗಿತ್ತು. ಇಷ್ಟಾದರೂ ಹೊಸಹೊಸ ವಸ್ತುಗಳ ತಯಾರಿಕೆಯಲ್ಲಿ ಹೆಚ್ಚು ಹೆಚ್ಚು ಪ್ರಾಕ್ಟಿಕಲ್ ಅನುಭವಗಳನ್ನು ಗಳಿಸುವುದು ಬಹಳ ಅನಿವಾರ್ಯವೆನ್ನುವ ಸತ್ಯ ಅವರಿಗೆ ಗೋಚರವಾಗುತ್ತಾ ಹೋಯಿತು. ಅವೆಲ್ಲಾ ವಿದೇಶಗಳಲ್ಲಿ ಲಭ್ಯವಾಗುತ್ತಿತ್ತು. ಇಟಾಲಿಯನ್ ಕಂಪೆನಿಗೆ ರಾಜೀನಾಮೆ ಸಲ್ಲಿಸಿ, ಯೂರೊಪ್ ಗೆ ಹೊರಟರು. ಮುಂಬಯಿನಿಂದ ಇಟಲಿಯ ಮಿಲಾನ್ ನಗರವನ್ನು ತಲುಪಲು ಹಡಗಿನಲ್ಲಿ ೧೫ ದಿನಗಳ ಅವಧಿ ಬೇಕಿತ್ತು. ತಮ್ಮ ಜೊತೆಯಲ್ಲಿ ಇಟಲಿಯ ಗೆಳೆಯರ ಶಿಫಾರಸ್ ಪತ್ರಗಳ ಜೊತೆಗೆ ಕೆಲವು ನಿಘಂಟುಗಳನ್ನೂ ಒಯ್ದರು.'ಬುಡಾಪೇಸ್ಟ್ ನ ಗ್ಯಾಂಜ್ ಎಲೆಕ್ಟ್ರಿಕ್ ಕಂಪೆನಿ'ಯಲ್ಲಿ ೯ ತಿಂಗಳು 'ಅಪ್ರೆಂಟಿಸ್' ಆಗಿ ದುಡಿದು ಕೆಲಸ ಕಲಿತರು. 'ಲ್ಯೂಡೆಸ್ ಡ್ರಾಫ್','ವಿಯೆನ್ನಾ' ನಗರಗಳಲ್ಲಿ ಕಲಿತದ್ದು ಅಪಾರ.

'ಆರ್.ಡಿ.ಚಾರ್ ರವರ, ವ್ಯಕ್ತಿತ್ವ ಬದಲಾಯಿಸಿ

'ರಾಘವಾಚಾರ್ ದೇಶಿಕಾಚಾರ್' ಒಳ್ಳೆ ಎತ್ತರದ ಅಜಾನುಬಾಹು ಆಳಾಗಿದ್ದರು. ಮುಖದಲ್ಲಿ ಯಾವಾಗಲೂ ತೃಪ್ತಿಯ ಮುಗುಳ್ನಗೆ, ತೇಜಸ್ಸು, ಎಲ್ಲಕ್ಕಿಂತ ಮಿಗಿಲಾಗಿ ಅಪಾರ ಆತ್ಮವಿಶ್ವಾಸ, ಮತ್ತು ಕಣ್ಣಿನಲ್ಲಿ ಕಾಂತಿ ಕಾಣಿಸುತ್ತಿತ್ತು. ತೂಕದ ಮಾತು. ಅವರು ಯಾವಾಗಲೂ ಸೂಟ್ ಬೂಟ್ ಧರಿಸುತ್ತಿದ್ದ ಆಕರ್ಷಕ ದಿಟ್ಟ ವ್ಯಕ್ತಿತ್ವದ ಚಾರ್, ತಮ್ಮ ನಿಲುವಿಗೆ ಹೆಸರಾಗಿದ್ದರು..

ಐ.ಎ.ಇ.ಸಿ(IAEC) ಪ್ರಾರಂಭ ಬದಲಾಯಿಸಿ

ಮಾವನವರ ಸಲಹೆಯಂತೆ ಸನ್. ೧೯೨೮ ರಲ್ಲಿ ಹೊಸದಾಗಿ ಸ್ಥಾಪಿಸಿದ ಕಂಪೆನಿಯ ಹೆಸರನ್ನು ಐ.ಎ.ಇ.ಸಿ. ಎಂದು ಇಡಲಾಯಿತು. ಪ್ರಾರಂಭದ ಹಂತದಲ್ಲಿ ಇದು 'ಎಜೆನ್ಸಿ ಬಿಸಿನೆಸ್' ಆಗಿತ್ತು. ಇದಕ್ಕೆ ತಗುಲಿಸಿದ ಬಂಡವಾಳ ೩ ಸಾವಿರರೂಗಳು. ತಂದೆಯವರು ನಿವೃತ್ತರಾಗುವ ಮೊದಲೇ ಸಿಗುವ ಹಣವನ್ನು ಮಗನಿಗೆ ಕಳಿಸಿ ಬಿಸಿನೆಸ್ ನಲ್ಲಿ ಮುಂದುವರೆಯಲು ಆಶೀರ್ವದಿಸಿದರು. ಆ ಸಮಯದಲ್ಲಿ ಮುಂಬಯಿನ ಸುಮಾರು ೬೦ ಕ್ಕೂ ಹೆಚ್ಚಿನ ಹಲವಾರು 'ಟೆಕ್ಸ್ ಟೈಲ್ಸ್ ಮಿಲ್ಸ್' ನಲ್ಲಿ ಅಮೇರಿಕಾದ 'ಕ್ಯಾರಿಯರ್' ಕಂಪೆನಿಯವರು ಹಚ್ಚಿಕೊಂಡ 'ವೆಂಟಿಲೆಶನ್ ಮತ್ತು ಹ್ಯುಮಿಡಿಫಿಕೇಶನ್' (Ventilation & Humidification) ಕೆಲಸ ಭರದಿಂದ ಸಾಗುತ್ತಿತ್ತು. ಹತ್ತಿಯನ್ನು ಯಂತ್ರದಲ್ಲಿ ಹಾಕಿ ಶುದ್ಧಿಮಾಡುವ ಮತ್ತು ದಾರ,ಹಾಗೂ ಬಟ್ಟೆ ತಯಾರಿಸುವ ಗತಿವಿಧಿಗಳಲ್ಲಿ 'ಹ್ಯುಮಿಡಿ ಫಿಕೆಶನ್' ಮಹತ್ವದ ಪಾತ್ರ ವಹಿಸಿತ್ತು. ಮೇಲಾಗಿ ಕಾರ್ಖಾನೆಯಲ್ಲಿ ಕೆಲಸಮಾಡುವ ಕಾರ್ಮಿಕರ ಸ್ವಾಸ್ಥ್ಯಕ್ಕೂ ಅನುಕೂಲವಾಗಿತ್ತು. ಹೀಗೆ, ಇದು 'ಬಹಳ ಲಾಭದ ಬಿಸಿನೆಸ್' ಎನ್ನುವುದನ್ನು ಆರ್.ಡಿ.ಚಾರ್ ಬಹು ಬೇಗ ಪತ್ತೆ ಮಾಡಿದರು. ಅವರು ಸೇರಲು ಇಷ್ಟಪಟ್ಟ ಕಂಪೆನಿಯಲ್ಲಿ ಇದ್ದವರು, ಲೆಕ್ಖಪತ್ರಾಧಿಕಾರಿ, ಮತ್ತೊಬ್ಬ ಮೆಚಿನ್ ಇಂಜಿನಿಯರ್, ಮಾತ್ರ. ೩ ತಿಂಗಳು ಹೀಗೆ ಕೆಲಸ ನಿರ್ವಹಿಸಿದಮೇಲೆ, ತಮ್ಮ ಖರ್ಚಿನಲ್ಲೇ ಯುರೋಪ್ ದೇಶಕ್ಕೆ ಹೆಚ್ಚಿನ ವಿಶಯಗಳನ್ನು ಕಲಿಯಲು ಹೊದರು. ಹಡಗಿನಲ್ಲಿ ಮುಂಬಯಿನಿಂದ ಮಿಲಾನ್ ನಗರಕ್ಕೆ ಹೋಗಲು ೧೫ ದಿನ ಹಿಡಿಯಿತು. ಅಲ್ಲಿ,'ಕಂಪ್ರೆಸರ್ ತಯಾರಿಕೆಯ ಘಟಕ'ಗಳಲ್ಲಿ ಕೆಲಸಮಾಡಿ ಅನುಭವಗಳಿಸಿದರು. ಬುಡಾಪೆಸ್ಟ್ ನಲ್ಲ್ಲಿ ೯ ತಿಂಗಳು 'ಗ್ಯಾಂಜ್ ಎಲೆಕ್ಟ್ರಿಕ್ ಕಂ,ಯಲ್ಲಿ, ಅಪ್ರೆಂಟಿಸ್ ಆಗಿ ಕೆಲಸ. ನಂತರ, ಲುಡಸ್ ಡ್ರಾಫ್, ವಿಯೆನ್ನಾ ಮತ್ತು ಗಮ್ಮೀಸ್ ಗಳಲ್ಲಿ, ಓಡಾಟ. ಒಟ್ಟಾರೆ, ಸುಮಾರು ಒಂದೂವರೆ ವರ್ಷಗಳ ಕಾಲ ವಿದೇಶ ಪ್ರವಾಸಮಾಡಿ ಜ್ಞಾನ ಸಂಪಾದಿಸಿ ಸ್ವದೇಶಕ್ಕೆ ವಾಪಸ್ಸಾದರು.

ಆರ್ಡರ್ ಕೊಟ್ಟ ಯಂತ್ರ ದೊರಕದಿದ್ದಾಗ ಬದಲಾಯಿಸಿ

ಮುಂಬಯಿನ ಬಟ್ಟೆಗಿರಣಿಯೊಂದು ತನಗೆ ಅಗತ್ಯವಾಗಿದ್ದ ಒಂದು ಯಂತ್ರವನ್ನು ಕೊಳ್ಳಲು ಬ್ರಿಟನ್ನಿನ ಹೆಸರಾಂತ ಕಂಪೆನಿಗೆ ಬೇಡಿಕೆ ಸಲ್ಲಿಸಿದ್ದರು. ಹೀಗೆ ಆರ್ಡರ್ ಪಡೆದ ಕಂಪೆನಿ ದಿಡೀರನೆ ದಿವಾಳಿಯಾಯಿತು. ಮುಂಬಯಿನ ಗಿರಣಿಗೆ ಯಂತ್ರವನ್ನು ರವಾನಿಸಲು ಅಸಾಧ್ಯವಾಯಿತು. ಐ.ಎ.ಇ.ಸಿ. ಕಂಪೆನಿಯ ರುವಾರಿಯಾಗಿದ್ದ ಆರ್.ಡಿ.ಚಾರ್ ಜೊತೆ ಇದರ ಪ್ರಸ್ತಾಪವಾದಾಗ, ಚಾರ್ ಈ ವಿವಾದವನ್ನು ಬಗೆಹರಿಸುವುದಾಗಿ ಮಾತುಕೊಟ್ಟು ಇಂಗ್ಲೆಂಡಿಗೆ ತೆರಳಿದರು. ಆ ಕಂಪೆನಿಯ ಮಾಲೀಕರ ಜೊತೆ ಮಾತಾಡಿ,'ಯಂತ್ರದ ನೀಲನಕ್ಷೆ'ಯನ್ನು ದೊರಕಿಸಿಕೊಂಡರು. ಮುಂಬಯಿಗೆ ಬಂದವರೆ ತಮ್ಮ ಕಾರ್ಖಾನೆಯಲ್ಲಿ ಯಂತ್ರವನ್ನು ನಿರ್ಮಿಸಿದರು.ಇದಾದ ಬಳಿಕ ತಾವು ಒಪ್ಪಂದ ಮಾಡಿಕೊಂಡಿದ್ದ ಫ್ಯಾಕ್ಟರಿಯನ್ನು ಮಾರಿದರು. ಹೀಗೆ ಸಮಸ್ಯೆಯನ್ನು ಸುಲಭವಾಗಿ,ಬೇಗ ಅರ್ಥಮಾಡಿಕೊಂಡು ಅದಕ್ಕೆ ತಕ್ಕ ಪರಿಹಾರ ಹುಡುಕುವುದರಲ್ಲಿ 'ಚಾರ್' ನಿಷ್ಣಾತರಾಗಿದ್ದರು.

ಆರ್.ಡಿ.ಚಾರ್ ಪರಿವಾರ ಬದಲಾಯಿಸಿ

ಹಿರಿಯ ಮಗ ಲೋಕನಾಥ ಅಯ್ಯಂಗಾರ್ : ಬೆಂಗಳೂರಿನಲ್ಲಿ ಪ್ರಾಥಮಿಕ ಮಾಧ್ಯಮಿಕ ವಿದ್ಯಾಭ್ಯಾಸ ಮತ್ತು ಬಿ.ಎಸ್ಸಿ.ಪದವಿಯನ್ನು ಬೆಂಗಳೂರಿನಲ್ಲೇಗಳಿಸಿ ಅಮೆರಿಕಕ್ಕೆ ಹೋಗಿ, ಅಲ್ಲಿ ಇಂಜಿನಿಯರಿಂಗ್ ಪದವಿ ಗಳಿಸಿದರು. ಅಲ್ಲಿನ ಫ್ಯಾಕ್ಟರಿಗಳಲ್ಲಿ ಅಪ್ರೆಂಟಿಸ್ ಆಗಿ ಕೆಲಸಮಾಡಿ ವಸ್ತುಗಳ ತಯಾರಿಕೆ ಮತ್ತು ಮ್ಯಾನೆಜ್ಮೆಂಟ್ ವಿಷಯಗಳನ್ನು ಕಲಿತರು. ಬೆಂಗಳೂರಿಗೆ ವಾಪಸ್ ಬಂದಮೇಲೂ ತಂದೆಯವರ ಕಂಪೆನಿಯಲ್ಲಿ ಹಲವು ಪ್ರಭಾಗಗಳಲ್ಲಿ ಸನ್.೧೯೮೧ ರಲ್ಲಿ ಅಕಾಲ ಮೃತ್ಯುವನ್ನು ಹೊಂದುವರೆಗೂ ದುಡಿದರು. ಸ್ಟಾಂಡರ್ಡ್ ಬ್ಯಾಟರಿಯನ್ನು (Standard Batteries) 'ಸಬ್ಮೆರಿನ್' ನ ಇಂಜಿನ್ ಗಳಿಗೆ ಅಳವಡಿಸುವ ಬಗ್ಗೆ ಪ್ರಯತ್ನಿಸಿ ಜಯಶೀಲರಾದರು. ಇದನ್ನು ಬ್ರಿಟಿಷ್ ಸರಕಾರದ ಡಿಫೆನ್ಸ್ ಶಾಖೆ ಮೆಚ್ಚಿ, ಬ್ಯಾಟರಿಗಳಿಗೆ ಬೇಡಿಕೆ ಸಲ್ಲಿಸಿತು. ರಘುನಾಥ್ ಅಯ್ಯಂಗಾರ್ ಆರ್.ಡಿ.ಚಾರ್ ರವರ, ಎರಡನೆಯ ಮಗ. ಅವರಿಗೆ ಮೆಡಿಕಲ್ ಶಿಕ್ಷಣ ಬಹಳ ಪ್ರಿಯವಾಯಿತು. ಅವರು ಬಾಂಬೆಯಲ್ಲಿ ಎಮ್.ಬಿ. ಬಿ.ಎಸ್ ಪದವಿಯ ಬಳಿಕ ಉನ್ನತ ವಿದ್ಯಾಭ್ಯಾಸಕ್ಕಾಗಿ ಬ್ರಿಟನ್ ಗೆ ಹೋಗಿ, ಅಲ್ಲಿ ಎಫ಼್.ಆರ್.ಎಸ್.ಎಸ್ ಪದವಿಯನ್ನುಗಳಿಸಿ ಭಾರತಕ್ಕೆ ವಾಪಸ್ ಬಂದರು.ಸನ್. ೧೯೬೨ ರಲ್ಲಿ 'ಆರ್ಮಿ ಮೆಡಿಕಲ್ ಕಾಪ್ಸ್' ಗೆ ಸೇರಿದರು. ಸನ್. ೧೯೬೫ ರಲ್ಲಿ ಅವರ ಅನುಪಮ ಸೇವೆಗೆ ‘ವಿಶಿಷ್ಠ ಸೇವಾ ಪದಕ’ ದೊರೆಯಿತು. ಅವರು, ಸನ್.೧೯೯೧ ರಲ್ಲಿ ಸೆವಾನಿವೃತ್ತರಾದರು. ಮೂರನೆಯ ಮಗ ವಿಜಯ್ ಡಿ.ಚಾರ್ : ವಿಜಯ್ ಡಿ.ಚಾರ್, ತನ್ನ ವಿದ್ಯಾಭ್ಯಾಸವನ್ನು ಮುಂಬಯಿನಲ್ಲಿ ಮಾಡಿ ಪದವಿಗಳಿಸಿದ ಮೇಲೆ, ಯುಕೆಯಲ್ಲಿ 'ಫ್ಯುಯೆಲ್ ಇಂಜೆಕ್ಷನ ನಲ್ಲಿ ವಿಶೇಷ ಪರಿಣತಿ ಗಳಿಸಿ ಮುಂಬಯಿಗೆ ವಾಪಸ್ ಬಂದು, ತಮ್ಮ ತಂದೆಯವರು ಸ್ಥಾಪಿಸಿದ ಫ್ಯುಯೆಲ್ ಇಂಜೆಕ್ಷನ್ ಲಿಮಿಟೆಡ್ (Fuel Injections LTD) ನಲ್ಲಿ ಸೇರಿಕೊಂಡು ಅಲ್ಲಿ ತಾವು ಸೇವಾನಿವೃತ್ತರಾಗುವ ತನಕ ತಮ್ಮ ಸೇವೆಸಲ್ಲಿಸಿದರು. ಮಗಳು,ಸರೋಜ: ಸರೋಜ ಬಾಂಬೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಪಡೆದು, ಇತಿಹಾಸದಲ್ಲಿ ಎಮ್.ಎ.ಪದವಿಗಳಿಸಿ ತಂದೆಯ ಕಂಪೆನಿಯಲ್ಲಿ ಪಿ.ಆರ್.ಓ ಆಗಿ ಸೇರಿಕೊಂಡರು. 'ಕಂಪೆನಿಯ ಜರ್ನಲ್ ನ ಸಂಪಾದಕಿ'ಯಾಗಿ ಕೆಲಸ ನಿರ್ವಹಿಸಿದ್ಸರು. ಸನ್. ೧೯೮೯ ರಕ್ಕೂ ನಿವೃತ್ತರಾದರು.ಸೆತಲ್ವಾಡ್ ಎಂಬುವರ ಜೊತೆ ಮದುವೆಯಾದರು. ಸೆತಲ್ವಾಡ್ ಐ.ಎ.ಇ.ಸಿ. ಯಲ್ಲಿ ಕೆಲಸ ಮಾಡುತ್ತಿದ್ದರು. ನ್ಯಾಷನಲ್ ಡ್ರಾಮ ಥಿಯೇಟರ್ ಮೊದಲಾದ ಅಮೆಚೂರ್ ಥಿಯೇಟರ್ ಗಳಲ್ಲಿ ಬೆಳಕು ಸಂಯೋಜನೆ, ಸ್ಟೇಜ್ ನಿರ್ಮಿತಿ, ಸೆಟಿಂಗ್ಸ್, ನೇಪಥ್ಯದ ವ್ಯವಸ್ಥೆಗಳನ್ನು ಮಾಡುವುದರಲ್ಲಿ ಅವರಿಗೆ ಅತೀವ ಆಸಕ್ತಿ ಇತ್ತು. ಸೇಂಟ್ ಜೇವಿಯರ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್ ಶಾಖೆಯಲ್ಲಿ ಪ್ರೊಫೆಸರ್ ಆಗಿ ವಿದ್ಯಾರ್ಥಿಗಳನ್ನು ತರಪೇತುಗೊಳಿಸುತ್ತಿದ್ದರು.ಇದರ ಜೊತೆಗೆ, ತಂದೆಯವರು ಸ್ಥಾಪಿಸಿದ ಎಮ್.ಟಿ.ಸಿ.ಸಂಸ್ಥಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಮೈಸೂರ್ ಅಸೋಸಿಯೇಷನ್ ಜೊತೆ ಒಡನಾಟ ಬದಲಾಯಿಸಿ

ಕನ್ನಡ ಭಾಷೆಯ ಮೇಲೆ ಅಪಾರ ಪ್ರೇಮ ಹಾಗೂ ಅಭಿಮಾನವಿತ್ತು. ಹಾಗೆಯೇ ಕಲೆ,ಸಂಗೀತ ನೃತ್ಯ,ನಾಟಕ, ಮೊದಲಾದ ಮಾಧ್ಯಮಗಳು ಅವರಿಗೆ ಬಲು ಪ್ರಿಯ.ಸನ್.೧೯೩೨ ರಲ್ಲಿ ಅಸೋಸಿಯೇಷನ್ ಕಟ್ಟಡ ಕಟ್ಟುವ ಸಮಯದಲ್ಲಿ ಹಣ ಕಡಿಮೆಬಂದಾಗ ೫ ಸಾವಿರ ರೂಪಾಯಿಗಳನ್ನು ಅವರೇ ಭರಿಸಿದರು. ತಮ್ಮ ಮನೆಯಲ್ಲಿದ್ದ ಕನ್ನಡದ ಬಹುಮೂಲ್ಯ ಪುಸ್ತಕಗಳನ್ನು ಟೀಕ್ ವುಡ್ ಕಪಾಟುಗಳ ತುಂಬಾ ತುಂಬಿ ಮೈಸೂರು ಅಸೋಸಿಯೇಷನ್ ಲೈಬ್ರರಿಗೆ ದಾನಮಾಡಿದರು. ಅವರ ಪೂಜ್ಯ ಮಾವ,ಎನ್.ಎನ್.ಐಯ್ಯಂಗಾರ್ ಸ್ಮರಣೆಗಾಗಿ ಈ ಕಾರ್ಯಮಾಡಲು ಅವರಿಗೆ ಬಹಳ ಸಂತೋಷವಾಗಿತ್ತು. ಅಸೋಸಿಯೇಷನ್ ನಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿ ಸಕ್ರಿಯರಾಗಿದ್ದ ಅವರು ಮೈಸೂರ್ ಅಸೋಸಿಯೇಶನ್ ನಲ್ಲಿ ಅಧ್ಯಕ್ಷರಾಗಲು ಒಪ್ಪಲಿಲ್ಲ. ಕೇವಲ ಕಾರ್ಯದರ್ಶಿಯಾಗಿಯೇ ಕಾರ್ಯನಿರ್ವಹಿಸಿ, ಎಲ್ಲರ ಗೌರವ ಪ್ರೀತ್ಯಾದರಗಳಿಗೆ ಪಾತ್ರರಾಗಿದ್ದರು.

ಗೀತಾಪ್ರವಚನ ಬದಲಾಯಿಸಿ

ಶ್ರೀ ಗೋಪಾಲಾಚಾರ್ಯರು ತಮ್ಮ 'ಗೀತಾ ಪ್ರವಚನ'ವನ್ನು 'ಮೈಸೂರ್ ಅಸೋಸಿಯೇಶನ್ ಅಂಗಳ'ದಲ್ಲಿ ೮ ವರ್ಷ ನಡೆಸಿಕೊಂಡು ಹೋದರು. ಟಿ ಪಿ.ಕೈಲಾಸಂ, ಮಾಸ್ತಿ, ಡಿ ವಿ.ಜಿ. ಮೊದಲಾದ ದಿಗ್ಗಜರು ಮುಂಬಯಿಗೆ ಬಂದಾಗ ಅವರ ವಸತಿ,ಅತಿಥಿ ಸತ್ಕಾರದ ಮತ್ತಿತರ ಖರ್ಚುಗಳನ್ನು ಅವರೇ ವಹಿಸಿಕೊಳ್ಳುತ್ತಿದ್ದರು.ಚೆಂಬೂರಿನಲ್ಲಿ ನಿರ್ಮಿಸಿದ ಮೈ.ಕೋ.ಹೌ.ಸೊ.ಗೆ,ಅವರ ಗೆಳೆಯರು 'ದೇಶಿಕೋದ್ಯಾನ' ಎಂಬ ಹೆಸರು ಕೊಟ್ಟರು.

'ಮುಂಬಯಿಕನ್ನಡಸಂಘ'ದ ಸ್ಥಾಪನೆ ಬದಲಾಯಿಸಿ

'ಆಧುನಿಕ ಮೈಸೂರಿನ ಶಿಲ್ಪಿ, ಡಾ.ಸರ್.ಎಂ.ವಿಶ್ವೇಶ್ವರಯ್ಯನವರ ಆದೇಶದಂತೆ, ಮುಂಬಯಿನಲ್ಲಿ ಆಗಿನ ಮುಂಬಯಿನ ಕನ್ನಡಿಗರ ಮುಖ್ಯಸ್ಥರಾಗಿದ್ದ ಉದ್ಯೋಗಪತಿ, ಆರ್.ಡಿ.ಚಾರ್, ಆರ್.ವಿ.ಮೂರ್ತಿ,ವಿದ್ವಾನ್ ಗೋಪಾಲಾಚಾರ್, ಎಮ್.ಆರ್.ವರದರಾಜನ್,ಬಿ.ನಾರಾಯಣಸ್ವಾಮಿ, ಮೊದಲಾದ ಹಿರಿಯ ನಾಯಕರ ನೇತೃತ್ವದಲ್ಲಿ ಸನ್.೧೯೩೯ ರಲ್ಲಿ,'ಮುಂಬಯಿ ಕನ್ನಡ ಸಂಘ, ಮುಂಬಯಿ' ಸ್ಥಾಪನೆಗೊಂಡಿತು. ಎನ್.ಕೆ.ಇ.ಎಸ್.ಸ್ಥಾಪಿಸಲು ಅವರೆಲ್ಲಾ ಆಗಿನ ಪ್ರಮುಖ ಮುಂಬಯಿ ಕನ್ನಡಿಗರ ಜೊತೆ, ನಗರದ 'ಗ್ರೀನ್ಸ್ ಹೋಟೆಲ್' ನಲ್ಲಿ ಸಭೆಸೇರಿ,'ಪ್ರತ್ಯೇಕ ಶೈಕ್ಷಣಿಕ ಸೊಸೈಟಿ'ಯನ್ನು ಸ್ಥಾಪಿಸುವ ಬೇಡಿಕೆಯನ್ನು ಮಂಡಿಸಿದರು. 'ಕನ್ನಡ ಎಜುಕೇಶನ್ ಸೊಸೈಟಿ'ಯ ಮೂಲಕ ನಿರ್ಮಿಸಿದ್ದ 'ಕನ್ನಡ ಹೈಸ್ಕೂಲ್' ನಿರ್ವಹಣೆಗೆ ಧನಸಹಾಯದ ಅಗತ್ಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆ ಸಭೆಯಲ್ಲಿದ್ದ ನೆರೆದಿದ್ದ ಗಣ್ಯ ಕನ್ನಡಿಗರಲ್ಲಿ, ಆರ್.ಡಿ.ಚಾರ್ ತಮ್ಮ ವೈಯಕ್ತಿಕ ದೇಣಿಗೆ ೫೦ ಸಾವಿರ ರುಪಾಯಿಗಳನ್ನು ನೀಡುವುದಾಗಿ ಘೋಶಿಸಿದರು. 'ಶಾಲಾಕಟ್ಟಡ ನಿರ್ಮಾಣ'ದ ಸಮಯದಲ್ಲಿ ಮಾತಿನಂತೆ ಹಣ ಸಂದಾಯಮಾಡಿದರು. ಮುಂಬಯಿನಲ್ಲಿ ಹಲವಾರು ಪ್ರತಿಷ್ಥಿತ ಕಟ್ಟಡಗಳನ್ನು ಕಟ್ಟಿ ಹೆಸರುವಾಸಿಯಾಗಿದ್ದ 'ಬಿ.ವಿ.ಎಸ್.ಅಯ್ಯಂಗಾರ್ ಅಂಡ್ ಕಂಪೆನಿ'ಗೆ 'ಕನ್ನಡಶಾಲೆ' ಕಟ್ಟಲು ಕೆಲಸವನ್ನು ಒಪ್ಪಿಸಿದರು. ಅದು ಗೋಪುರವನ್ನುಹೊಂದಿದ್ದು ಒಂದು ವಿದ್ಯಾಮಂದಿರದ ಸಂಕೇತವಾಗಿರಬೇಕೆಂಬುದು ಅವರ ಆಶೆಯಾಗಿತ್ತು. 'ಕಾಸ್ಮೊಪಾಲಿಟನ್' ನಗರವಾದ ಮುಂಬಯಿನಲ್ಲಿ ೪೦ ರ ದಶಕದಲ್ಲಿ ಯಾವುದೇ ಸಾರ್ವಜನಿಕ ಸೇವೆಗಳಿಗೆ ಚಂದಾ ಹಣ ಎತ್ತುವ ಕಾರ್ಯ ಅಷ್ಟೇನೂ ಸುಲಭವಾಗಿರಲಿಲ್ಲ. ಮಧ್ಯಮವರ್ಗದ ಜನರ ಕೈಲಿ ಹೆಚ್ಚು ಹಣ ಎಲ್ಲಿ ಬರಬೇಕು. ಆಗ ಹಲವಾರು ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಯಿತು. ದೇಶದಾದ್ಯಂತ,ಜಾಹಿರಾತುಗಳನ್ನು ಹಾಕಲು ಸಾರ್ವಜನಿಕರಿಗೆ ಕರೆನೀಡಿ ಅದರಲ್ಲಿ ಬಂದ ಹಣವನ್ನು 'ಕಟ್ಟಡ ನಿಧಿ'ಗೆ ಕೊಡಲಾಯಿತು.

ವೈದೇಹಿಚಾರ್ ರವರ ಕೊಡುಗೆ ಬದಲಾಯಿಸಿ

'ವೈದೇಹಿ ಚಾರ್' ತಮ್ಮದೇ ಆದ ರೀತಿಯಲ್ಲಿ ಯೋಗದಾನ ಮಾಡಿದರು. ತಮ್ಮ ಆಪ್ತ ಗೆಳೆಯರು,ಸಂಬಂಧಿಕರು,ಮತ್ತು ಗುರುತುಕಂಡ ವ್ಯಕ್ತಿಗಳನ್ನುಮೊದಲಾದ ಜನರನ್ನು ಸಂಧಿಸಿ, ಅವರುಗಳಿಂದ ಹಣ ಸಂಗ್ರಹಿಸಿದರು. ಮನೆ ಮನೆಗಳಿಗೂ ಭೆಟ್ಟಿಕೊಟ್ಟು, 'ಹಳೆ ಪೇಪರ್' ಗಳನ್ನು ಜಮಾಯಿಸಿ ಅವನ್ನು ಮಾರಿ ಬಂದ ೧೦ ಸಾವಿರ ರೂಗಳನ್ನು 'ಕನ್ನಡ ಶಿಕ್ಷಣ ಶಾಲೆಯ ಕಟ್ಟಡ ನಿಧಿ'ಗೆ ಸಮರ್ಪಿಸಿದರು. ಆರ್.ಡಿ.ಚಾರ್ ಕೆಳಗೆ ನಮೂದಿಸಿದ ಕಂಪೆನಿಗಳು ಹಾಗೂ ಸಾರ್ವಜನಿಕ ಸಂಸ್ಥೆಗಳ ಜೊತೆ ಸಂಬಂಧ ಹೊಂದಿದ್ದರು.

  • ಇಂಡಿಯನ್ ಮರ್ಚೆಂಟ್ ಚೇಂಬರ್ ಆಫ್ ಕಾಮರ್ಸ್ ಸದಸ್ಯ
  • ಆಲ್ ಇಂಡಿಯ ಮ್ಯಾನ್ಯು ಫ್ಯಾಕ್ಚರರ್ಸ್ ಅಸೋ.ಸದಸ್ಯ
  • ಮೈಸೂರ್ ಅಸೋಸಿಯೇಶನ್ ಸ್ಥಾಪಕ ಸದಸ್ಯ
  • ಖಾರ್ ಜಮಖಾನ ಸ್ಥಾಪಕ ಸದಸ್ಯ ಅಜೀವ ಸದಸ್ಯ
  • ಕ್ರಿಕೆಟ್ ಕ್ಲಬ್ ಆಫ್ ಇಂಡಿಯ, ಸದಸ್ಯ
  • ಎಮ್.ಇ.ಇ.ಪಾಲಿಟೆಕ್ನಿಕ್ ಬೆಂಗಳೂರು ಸ್ಥಾಪಕ ಸದಸ್ಯ
  • ಮೈಸೂರ್ ಕಾಲೋನಿ, ಚೆಂಬೂರ್, ಸ್ಥಾಪಕ ಸದಸ್ಯ
  • ತತ್ವಶಾಸ್ತ್ರ,ಸಂಗೀತ, ನೃತ್ಯ ಮೊದಲಾದ ಫೈನ್ ಆರ್ಟ್ಸ್ ಗಳಿಗೆ ಸದಾ ಪ್ರೋತ್ಸಾಹಕಾರ,
  • ವಿದ್ಯಾಪ್ರಸಾರದ ಬಗ್ಗೆ ಅಪಾರ ಆಸಕ್ತಿ ಮತ್ತು ಕಾಳಜಿ ಇತ್ತು.
  • ಬಾಂಬೆ ಸಬರ್ಬನ್ ಎಜುಕೇಶನ್ ಸೊಸೈಟಿ
  • ಮೈಸೂರ್ ಟೆಕ್ನಿಕಲ್ ಎಜುಕೇಶನ್ ಸೊ.
  • ನ್ಯಾಷನಲ್ ಕನ್ನಡ ಎಜುಕೇಶನ್ ಸೊ.
  • ಅವರು ಕಲಿತ ತಮ್ಮ ಪ್ರೀತಿಯ 'ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜ್ ನ ಬಂಗಾರದ ಹಬ್ಬದ ಸ್ಮರಣೆ'ಗಾಗಿ 'ಐ.ಎ.ಎ.ಸಿ ಎಂಡೋಮೆಂಟ್ ಉಪನ್ಯಾಸ ಮಾಲೆ'ಯನ್ನು ಸ್ಥಾಪಿಸಿದರು. ಈ ದತ್ತಿ ಉಪನ್ಯಾಸದ ಮೂಲಕ,ರಾಜ್ಯದ ಪ್ರತಿಷ್ಟಿತ ವಿಜ್ಞಾನಿಗಳಿಗೆ ಪ್ರಶಸ್ತಿಗಳನ್ನು ಪ್ರದಾನಮಾಡುವ ಏರ್ಪಾಡು ಮಾಡಿದರು.

ವೈದೇಹಿ ಚಾರ್ ಬದಲಾಯಿಸಿ

ಚಾರ್ ಅವರ ಪತ್ನಿ,'ವೈದೇಹಿ ಚಾರ್,' ಮಹಿಳಾ ಸಂಘಟನೆಗಳನ್ನು ಬಹಳವಾಗಿ ಹಚ್ಚಿಕೊಂಡಿದ್ದರು. ಮಹಿಳೆಯರ ಸ್ವಾತಂತ್ರ್ಯ, ಅವರ ಶಿಕ್ಷಣ, ಮೊದಲಾದ ವಲಯಗಳಲ್ಲಿ ಸುಧಾರಣೆಗಳನ್ನು ತರಲು, ಅತಿ ಶ್ರಮವಹಿಸಿ ದುಡಿಯುತ್ತಿದ್ದರು.

  • ಸನ್.೧೯೪೯ ರಲ್ಲಿ ಮುಂಬಯಿ ಮಹಾನಗರದ ಹಲವು ಪ್ರತಿಷ್ಟಿತ ವ್ಯಕ್ತಿಗಳ, ಹಾಗೂ ಸಂಸ್ಥೆಗಳ ಜೊತೆಗೂಡಿ, 'ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯ' ಸಂಸ್ಥೆಯ ಅಡಿಯಲ್ಲಿ, ದೇಶದ ಮಹಿಳೆಯರ ಜೀವನಮಟ್ಟವನ್ನು ಸುಧಾರಿಸುವ ಬಗ್ಗೆ ದುಡಿದರು.
  • 'ಅಲ್ ಇಂಡಿಯ ವಿಮನ್ಸ್ ಕಾನ್ಫರೆನ್ಸ್ ನ (AIWC)ಸದಸ್ಯೆ'ಯಾಗಿದ್ದರು.
  • 'ಬಾಂಬೆ ಕನ್ನಡ ಎಜುಕೇಶನ್ ಸೊಸೈಟಿ'ಯ (KES)ಜೊತೆ ಸಂಪರ್ಕಹೊಂದಿದ್ದರು.
  • ಮುಂಬಯಿನ ಖಾರ್ ಇಲಾಖೆಯಲ್ಲಿ, 'ವೈದೇಹಿ ಶಿಶು ವಿಹಾರ' ಎಂಬ ಕೆಜ಼ಿ.(Vaidehi Shishu vihar, KG)ಶಾಲೆಯನ್ನು ಸ್ಥಾಪಿಸಿದರು. ಈ ಶಾಲೆಯನ್ನು ದಿವಂಗತ ಮೈಸೂರು ಮಹಾರಾಜರು ಶಂಕುಸ್ಥಾಪನೆ ಮಾಡಿದ್ದರು.
  • 'ಬೆಂಗಳೂರಿನಲ್ಲಿ ವಿಕಲಾಂಗ ಮಕ್ಕಳ ಶಾಲೆ'ಯನ್ನು ಸ್ಥಾಪಿಸಿದರು.
  • ಹಲವು ಸಂಸ್ಥೆಗಳಿಗೆ ಸಹಾಯಧನ ಶೇಖರಿಸಿ ಸಹಾಯ ಮಾಡಿದರು.
  • ಪತಿಯ ಜೊತೆ ವಿಶ್ವದಾದ್ಯಂತ ಪರ್ಯಟನೆ ಮಾಡಿದಾಗಲೆಲ್ಲಾ ಅವರ ಪ್ರೀತಿಯ ಹಲವು ಬೊಂಬೆಗಳನ್ನು ಸಂಗ್ರಹಿಸಿ, ಭಾರತಕ್ಕೆ ತಂದರು. ಅವನ್ನು ‘ಬೆಂಗಳೂರಿನ ಬೊಂಬೆ ಸಂಗ್ರಹಾಲಯ'ವೊಂದಕ್ಕೆ ದಾನ ಮಾಡಿದರು.

ನಿಧನ ಬದಲಾಯಿಸಿ

ಉದ್ಯೋಗಪತಿ, ೮೭ ವರ್ಷ ಪ್ರಾಯದ ಶ್ರೀ.ಆರ್.ಡಿ.ಚಾರ್,ರವರು, ಸನ್. ೧೯೮೪ ರ ಆಗಸ್ಟ್,೧೫ ರಂದು ನಿಧನರಾದರು. ಅಪಾರ ಪರಿಶ್ರಮ, ನಿಷ್ಠೆ,ಹಾಗೂ ಮುಂದಾಲೋಚನೆಯಿಂದ ಸ್ಥಾಪಿಸಿದ ಹಲವಾರು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು, ಇಂದಿಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.

  • ಕೃಪೆ: ೨೦೦೮ ರ ನವೆಂಬರ್, ತಿಂಗಳ 'ಮೈಸೂರ್ ಅಸೋಸಿಯೇಷನ್, ಮುಂಬಯಿ'ನ, 'ನೇಸರು ಪತ್ರಿಕೆಯ ವಿಶೇಷಸಂಚಿಕೆ'ಯಿಂದ ಆಯ್ದ ಭಾಗಗಳು. ಸನ್. ೧೯೮೪ ರ ನೇಸರು ಸಂಚಿಕೆಯಲ್ಲಿ 'ಆರ್.ಡಿ.ಚಾರ್' ನಿಧನರಾದ ಸಮಯದಲ್ಲಿ, ಮತ್ತೊಬ್ಬ ಮುಂಬಯಿನ ಜನಪ್ರಿಯ ಕನ್ನಡಿಗ, 'ಶ್ರೀ.ಆರ್.ವಿ.ಮೂರ್ತಿ'ಯವರು ಬರೆದ 'ಶ್ರದ್ಧಾಂಜಲಿ'ಯಲ್ಲಿ 'ಚಾರ್' ರವರ ವ್ಯಕ್ತಿತ್ವಮತ್ತು ಜೀವನದ ಕಿರು ಪರಿಚಯವನ್ನು ಓದಬಹುದು.
  • 'ಬೆಂಗಳೂರಿನ ಮೈಸೂರ್ ಟೆಕ್ನಿಕಲ್ ಎಜುಕೇಶನ್ ಸೊಸೈಟಿಯ(MTES) ಹಸ್ತಪತ್ರಿಕೆ'ಯ ಆಧಾರ.