ಆಡಮ್ ಈವ್

(ಆದಂ ಈವ್ ಇಂದ ಪುನರ್ನಿರ್ದೇಶಿತ)

ಆಡಮ್‌ ಈವ್ ಕ್ರೈಸ್ತಮತದ ಪ್ರಕಾರ ಆದಿ ಮಾತಾಪಿತೃಗಳು. ಹೀಬ್ರೂ ಭಾಷೆಯಲ್ಲಿ ಆಡಮ್‌ ಎಂದರೆ ಮಾನವ ಜನಾಂಗವೆಂದೂ ಈವ್ ಎಂದರೆ ಜೀವ ಎಂದೂ ಅರ್ಥ. ಈಬ್ರಾನಿಯಲ್ಲಿ ಆದಾಮಾ ಪದದ ಅರ್ಥ ಕೆಂಪು ಮಣ್ಣಿನಿಂದ ಮಾಡಿದ್ದು ಎಂದು. ಮಾನವನ ಶರೀರ ಮಣ್ಣಿನಿಂದ ಮಾಡಲ್ಪಟ್ಟಿದ್ದು ಕೊನೆಗೆ ಮಣ್ಣಿನಲ್ಲೇ ಲೀನವಾಗುತ್ತದೆ. ಇದರಿಂದ ಪ್ರಥಮ ಮಾನವನ ಹೆಸರೂ ಆಡಮ್‌ ಎಂದಾಗಿದೆ. ದೇವರ ತೋಟದಲ್ಲಿ ದೈವಾದೇಶದ ಪ್ರಕಾರ ಉದ್ಭವಿಸಿದ ಈ ಆದಿ ದಂಪತಿಗಳ ಬಗ್ಗೆ ಜೆನಿಸಿಸ್‍ನಲ್ಲಿ ವಿವರವಾಗಿ ಹೇಳಿದೆ. ಸೇಂಟ್ ಪೌಲನ ಪ್ರಕಾರ ಆಡಮ್‌ ಮಾನವನ ಪ್ರಾಪಂಚಿಕ ಭಾಗವನ್ನೂ ನಿರ್ದೇಶಿಸುವವ. ದೇವರ ತೋಟದಲ್ಲಿ ಬೆಳೆದಿದ್ದ ತಿನ್ನಬಾರದ ಹಣ್ಣೊಂದನ್ನು ಹೆಬ್ಬಾವೊಂದರ ಆದೇಶದಂತೆ ಈವ್ ತಿಂದಳು ಮತ್ತು ಆಡಮ್‌ನನ್ನೂ ತಿನ್ನಗೊಳಿಸಿದಳು. ಇದರಿಂದ ಅವರೀರ್ವರಿಗೂ ತೋಟ ಬಿಟ್ಟು ತೆರಳಬೇಕಾದ ಶಿಕ್ಷೆ ಒದಗಿತು. ಮಾನವಸೃಷ್ಟಿಗೆ ಸಂಬಂಧಿಸಿದ ಬ್ಯಾಬಿಲೋನಿಯನ್ನರ ಪುರಾಣಕಥೆಗಳನ್ನು ವಿಮರ್ಶಕರು ಆಡಮ್‌ನ ಕಥೆಗೆ ಹೋಲಿಸುತ್ತಾರೆ. ಆಡಮ್‌ನ ಸೃಷ್ಟಿ ಎಲ್ಲಿ ಹೇಗೆ ಆಯಿತೆಂದು ಬೈಬಲ್ಲಿನಲ್ಲಿ ಎಲ್ಲೂ ಖಚಿತವಾಗಿ ಹೇಳಿಲ್ಲ. ಅದರ ದೃಷ್ಟಿಕೋನ ಧಾರ್ಮಿಕ; ವೈಜ್ಞಾನಿಕವಲ್ಲ. ಮನುಷ್ಯ ಮತ್ತು ದೇವರಲ್ಲಿ ಪುನಃ ಸ್ನೇಹ ಸಂಪಾದಿಸಿದುದರಿಂದ ಬೈಬಲ್ಲಿನಲ್ಲಿ ಯೇಸುವಿಗೆ ಎರಡನೆಯ ಆಡಮ್‌ ಎಂದು ಹೇಳಲಾಗುತ್ತದೆ.

ಆಡಮ್‌ ಈವ್

ಉಲ್ಲೇಖಗಳು ಬದಲಾಯಿಸಿ

[೧][೨][೩]

 
ಆಡಮ್‌ ಈವ್
  1. www.dltk-bible.com/genesis/chapter2-cv.htm
  2. www.sacred-texts.com/bib/fbe/fbe005.htm
  3. http://www.myjewishlearning.com/article/adam-and-eve/
"https://kn.wikipedia.org/w/index.php?title=ಆಡಮ್_ಈವ್&oldid=889495" ಇಂದ ಪಡೆಯಲ್ಪಟ್ಟಿದೆ