ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ

ಅಸೋಸಿಯೆಷನ್ ಅಫ್ ಸೌತ್ ಈಸ್ಟ್ ಏಷ್ಯನ್ ನೇಷನ್ಸ್ (ASEAN) (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಆಗ್ನೇಯ ಏಷ್ಯಾದಲ್ಲಿರುವ ೧೦ ರಾಷ್ಟ್ರಗಳ ಒಕ್ಕೂಟ. ಈ ಓಕ್ಕೂಟ ರಾಜಕೀಯ ಹಾಗು ಆರ್ಥಿಕ ಕಾರಣಗಳಿಗಾಗಿ ಸ್ಥಾಪಿಸಲ್ಪಟ್ಟಿದೆ. ಈ ಒಕ್ಕೂಟವನ್ನು ೮ನೇ ಆಗಸ್ಟ್ ೧೯೬೭ ರಂದು ಇಂಡೋನೇಷ್ಯಾ, ಮಲೇಶಿಯ,ಫಿಲಿಪ್ಪೀನ್ಸ್ (ಫಿಲಿಫೈನ್ಸ್), ಸಿಂಗಾಪುರ್ ಹಾಗೂ ಥೈಲ್ಯಾಂಡ್ ಗಳು ಸೇರಿ ಸ್ಥ್ಹಾಪಿಸಿದವು. ತದನಂತರ ಬ್ರುನೈ, ಬರ್ಮಾ, ಕಾಂಬೋಡಿಯಾ, ಲಾವೋಸ್ ಹಾಗೂ ವಿಯೆಟ್ನಾಂ ರಾಷ್ಟ್ರಗಳು ಸದಸ್ಯ ರಾಷ್ಟ್ರಗಳಾಗಿ ಸೇರ್ಪಡೆಗೊಂಡವು. ಈ ಒಕ್ಕೂಟದ ಉದ್ದೇಶ ಆರ್ಥಿಕ ಪ್ರಗತಿ, ಸಾಮಾಜಿಕ ಸುಧಾರಣೆ, ಸ್ಥಳೀಯವಾಗಿ ಶಾಂತಿಯನ್ನು ಕಾಪಾಡುವುದು ಹಾಗೂ ಸದಸ್ಯ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಾಮರಸ್ಯವನ್ನು ಬೆಳೆಸುವುದು.

ಆಗ್ನೇಯ ಏಷ್ಯಾ ರಾಷ್ಟ್ರ ಸಂಘಗಳ ನಕ್ಷೆ
ಎಷ್ಯಾ ಪ್ರದೇಶಗಳಲ್ಲಿರುವ ವಿವಿಧ ಸಂಘಟನೆಗಳ ಅಂತರ್ ಸಂಬಂಧಗಳನ್ನು ಸೂಚಿಸುವ ಚಿತ್ರ

ಈ ಓಕ್ಕೂಟದ ಸದಸ್ಯ ರಾಷ್ಟ್ರಗಳು ಒಟ್ಟು ೪.೪೬ ಚ ಕಿ ಮೀ ಯಷ್ಟು ಭೂಮಿಯನ್ನು ಆಕ್ರಮಿಸಿದೆ. ಇದು ಓಟ್ಟು ಭೂಮಿಯ ಶೇ೩ ರಷ್ಟು ಭಾಗ. ಈ ಓಕ್ಕೂಟದ ಓಟ್ಟು ಜನಸಂಖ್ಯೆ ಸುಮಾರು ೬೦ ಕೋಟಿ. ಇದು ಪ್ರಪಂಚದ ಒಟ್ಟು ಜನಸಂಖ್ಯೆಯ ಶೇ ೮ ರಷ್ಟು. ಈ ರಾಷ್ಟ್ರಗಳ ನಡುವೆ ಇರುವ ಸಮುದ್ರ ಭಾಗ ಈ ರಾಷ್ಟ್ರಗಳು ಆಕ್ರಮಿಸಿರುವ ಭೂಬಾಗದ ಮೂರರಷ್ಟಿದೆ. ೨೦೧೧ ರಲ್ಲಿ ಈ ರಾಷ್ಟ್ರಗಳ ಒಟ್ಟು ರಾಷ್ಟ್ರೀಯ ಉತ್ಪನ್ನ ಸುಮಾರು ೨೦೦ ಶತ ಕೋಟಿ ಅಮೇರಿಕನ್ ಡಾಲರ್.

ಏಷಿಯಾನ್ ದೇಶಗಳ ಪತಾಕೆಗಳು ಜಕಾರ್ತ.

ಉಲ್ಲೇಖಗಳುಸಂಪಾದಿಸಿ