ಆಗಂತುಕ ಮೊಗ್ಗುಗಳ ಬೆಳವಣಿಗೆಸಂಪಾದಿಸಿ

ಸಹಜ ಉಗಮಸ್ಥಾನವಾದ ತುದಿಭಾಗ ಅಥವಾ ಕಕ್ಷಗಳಿಂದಲ್ಲದೆ ಇತರ ಸ್ಥಾನಗಳಿಂದ ಕುಡಿಯೊಡೆಯುವಂಥವು (ಅಡೈಂಟಿಷಸ್ ಬಡ್ಸ್). ಇವು ಕಕ್ಷೇತರ ಸ್ಥಾನಗಳಿಂದ ಬೇರುಗಳಿಂದ, ಎಲೆಗಳಿಂದ ಕುಡಿಯೊಡೆಯುವುದುಂಟು. ಕಕ್ಷೇತರ ಸ್ಥಾನಗಳಿಂದ ಮೂಡುವವನ್ನು ಸ್ತಂಭ-ಪತ್ರ ಮೊಗ್ಗುಗಳೆಂದೂ ಬೇರುಗಳಿಂದ ಮೂಡುವವನ್ನು ಮೂಲಾಂಕುರ ಮೊಗ್ಗುಗಳೆಂದೂ ಎಲೆಗಳಿಂದ ಕುಡಿಯೊಡೆಯುವವನ್ನು ಎಲೆಮೊಗ್ಗುಗಳೆಂದೂ ಕರೆಯುತ್ತಾರೆ.

ಪುನರುತ್ಪಾದನೆಸಂಪಾದಿಸಿ

ಗಿಡಮರಗಳ ಪ್ರಮುಖ ರೆಂಬೆಕೊಂಬೆಗಳನ್ನು ರೆಂಬೆ ಕಡಿದರೆ, ಅವುಗಳಿಂದ ಹೊರಸೂಸುವ ಜೀವದ್ರವ್ಯದಿಂದ ಅನೇಕ ಸುಪ್ತಾವಸ್ಥೆಯ ಮೊಗ್ಗುಗಳೂ ಹಾಗೂ ಸಂಪೂರ್ಣ ನವೀನವಾದ ಆಗುಂತುಕ ಮೊಗ್ಗುಗಳೂ ಕುಡಿಯೊಡುತ್ತವೆ. ಅನೇಕ ಗಿಡಗಳ ಬೇರುಗಳಿಂದ ಆಗುಂತುಕ ಮೊಗ್ಗುಗಳು ಸ್ವಾಭಾವಿಕವಾಗಿಯೇ ಕುಡಿಯೊಡೆಯುತ್ತವೆ. ಕೆಲವು ಮರಗಳನ್ನು ಬುಡಸಹಿತ ಕಡಿದರೆ ನೆಲದೊಳಗಿರುವ ಅವುಗಳ ಬೇರುಗಳಿಂದ ಮೂಲಾಂಕುರ ಆಗುಂತುಕ ಮೊಗ್ಗುಗಳು ಮೂಡುತ್ತವೆ. ಉದಾ: ಮರಸೇಬು, ಬಿಲ್ವಪತ್ರೆ, ವ್ಯಾವಸಾಯಿಕ ಬೆಳೆಗಳಾದ ಗೆಣಸು ಇತ್ಯಾದಿಗಳಲ್ಲಿ ಈ ಮೂಲಾಂಕುರ ಆಗುಂತುಕ ಮೊಗ್ಗುಗಳನ್ನು ಬೀಜಗಳಿಗೆ ಬದಲಾಗಿ ಉಪಯೋಗಿಸುತ್ತಾರೆ.

ಆಗಂತುಕ ಮೊಗ್ಗುಗಳನ್ನುಳ್ಳ ಗಿಡಗಳ ಉದಾಹರಣೆಸಂಪಾದಿಸಿ

ಬ್ರಾಯೋಫಿಲಂ, ಬೆಗೋನಿಯಾ, ಕೆಲಂಚೋ, ಜೆಸ್ನೆರಾ, ಗ್ಲಾಕ್ಸಿನೀಯಾ ಮೊದಲಾದುವುಗಳಲ್ಲಿ ಆಗುಂತುಕ ಎಲೆ ಮೊಗ್ಗುಗಳನ್ನು ಕಾಣಬಹುದು. ಬ್ರಾಯೋಫಿಲ್ಲಂ ಮತ್ತು ಕೆಳಂಚು ಎಲೆಗಳನ್ನು ನೀರಿನ ಪಸೆಯುಳ್ಳ ಮಣ್ಣಿನಲ್ಲಿ ಹಾಕಿದರೆ ಅವುಗಳಲ್ಲಿನ ಮೊನಚಾದ ಹಲ್ಲುಗಳಿಂದ ಎಳೆಯ ಆಗುಂತುಕ ಮೊಗ್ಗುಗಳು ಕುಡಿಯೊಡೆದು ಪುಟ್ಟ ಗಿಡವಾಗಿ ಬೆಳೆಯಬಹುದು. ಬೆಗೋನಿಯಾ ಎಲೆಗಳಲ್ಲಿ ಗಾಯಗಳನ್ನು ಮಾಡಿದರೆ ಈ ಗಾಯಗಳಿಂದ ಆಗುಂತುಕ ಮೊಗ್ಗುಗಳು ಉದ್ಭವಿಸಿ ಚಿಕ್ಕ ಸಸಿಗಳು ರೂಪುಗೊಳ್ಳುವುವು.