'ಅ.ರಾ.ಸೇ' ಎಂದೇ ಖ್ಯಾತರಾಗಿರುವ ಶ್ರೀ.'ಅಣಜಿರಾಮಣ್ಣ ಸೇತೂರಾಮರಾವ್'ರವರು, ೧೯೩೧,ಜನೆವರಿ, ೨೬ರಂದು ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಜನಿಸಿದರು. 'ಕನ್ನಡ ಉಪನ್ಯಾಸಕ'ರಾಗಿ ಸೇವೆಸಲ್ಲಿಸಿದ್ದಾರೆ. ಅ.ರಾ.ಸೇ.ಯವರು ಕೊರವಂಜಿ ಬಳಗದ ಲೇಖಕರು.ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್ಸಿ ಮಾಡುವಾಗ 'ಪಂಚ್ ಪತ್ರಿಕೆ 'ಯಿಂದ ಪ್ರಭಾವಿತರಾಗಿ 'ಕೊರವಂಜಿ'ಗೆ ಬರೆದು ಖ್ಯಾತರಾದರು. ೧೯೬೭-೬೮ ರಲ್ಲಿದಾವಣಗೆರೆ ಸರ್ಕಾರಿ ಶಿಕ್ಷಣ ಕಾಲೇಜಿ ನಿಂದ ಬಿ.ಎಡ್,ಕವಿವಿ ಯಿಂದ ಕನ್ನಡ ಎಂ.ಎ ಪಡೆದಿದ್ದಾರೆ. 'ರಾಶಿ' ಯವರ ಮಗ 'ಶ್ರೀ ಶಿವಕುಮಾರ್' ಪ್ರಾರಂಭಿಸಿದ 'ಅಪರಂಜಿ ನಗೆ ಪತ್ರಿಕೆ'ಗೆ ಈಗಲು ಸಲಹೆ,ಸೂಚನೆ ,ಲೇಖನ ದಿಂದ ನೆರವಾಗಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳುಸಂಪಾದಿಸಿ

'ಅಣಜಿರಾಮಣ್ಣ ಸೇತೂರಾಮರಾವ್',ರವರ ಬರಹಗಳುಸಂಪಾದಿಸಿ

  • ಕುಮಾರವ್ಯಾಸ ಭಾರತದ ೮,೬೦೦ ಪದ್ಯಗಳಿಗೆ ತಾತ್ಪರ್ಯ ಬರೆದಿದ್ದಾರೆ, 'ಕಾಮಧೇನು ಪ್ರಕಾಶನದ ಶ್ರೀ ಶಾಮಸುಂದರ್','ಗಂಜೀಫಾ ಚಿತ್ರ'ಗಳೊಂದಿಗೆ ಅಚ್ಚುಕಟ್ಟಾಗಿ ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಉಪಕರಿಸಿದ್ದಾರೆ.' ಈಗ ಜೈಮಿನಿ ಭಾರತಕ್ಕೆ, ತಾತ್ಪರ್ಯ ಬರೆಯಲಾರಂಭಿಸಿದ್ದಾರೆ.
  • 'ನಗೆಮುಗಿಲು'- ಇವರ ಕವನಸಂಕಲನ.
  • 'ಸೊಗದಿರಳು ನಲ್ವಗಲು'-ಇವರ ಕಾದಂಬರಿ.
  • 'ಅನುಭವಾಮೃತ' ದ ತಾತ್ಪರ್ಯ, ಅದರ ಬಗ್ಗೆ ಆಳವಾದ ಅಧ್ಯಯನ ದೊಂದಿಗೆ ಮೂಲದೊಂದಿಗೆತಾತ್ಪರ್ಯ,
  • 'ಪರಮಾರ್ಥಪದಕೋಶ',
  • 'ದೇವಿಪುರಾಣ',
  • 'ಶ್ರೀ ಗುರುಕಥಾಮೃತ'(ಶ್ರೀ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರ ಜೀವನ ಚರಿತ್ರೆ),ಇವರ ಅಮೂಲ್ಯಕೃತಿಗಳು.
  • 'ಹಾಸ್ಯಲೇಖನ'ಗಳನ್ನಲ್ಲದೆ, ಇವರು 'ಕವನಸಂಗ್ರಹ', 'ಕಾದಂಬರಿ', 'ಗದ್ಯ ರೂಪಾಂತರ', 'ಪ್ರವಾಸ ಕಥನಗಳು, 'ಜೀವನ ಚರಿತ್ರೆ'ಗಳನ್ನೂ ಸಹ ಪ್ರಕಟಿಸಿದ್ದಾರೆ.

ವಾಸ ಸ್ಥಳಸಂಪಾದಿಸಿ

ಪ್ರಸ್ತುತ ಬೆಂಗಳೂರಿನ,'ತಾತಾ ಸಿಲ್ಕ್ ಫಾರ್ಮ್' ಹತ್ತಿರದಲ್ಲಿ ವಾಸವಾಗಿದ್ದಾರೆ.