ಅಷ್ಟಭಾವ ಪುಷ್ಪಗಳು

ಅಷ್ಟಭಾವ ಪುಷ್ಪಗಳೆಂದರೆ ಭಾವನೆ, ಉದ್ವೇಗ ಮತ್ತು ಧೋರಣೆಗಳನ್ನು ಬಿಂಬಿಸುವ ಎಂಟು ಹೂಗಳು. ಶ್ರೀ ಮಧ್ವಾಚಾರ್ಯರ ಕಥೆಯಲ್ಲಿ ಬರುವಂತೆ ಅವರು ತಮ್ಮ ಹೃದಯಕಮಲದಲ್ಲಿ ಶ್ರೀಮನ್ನಾರಾಯಣನನ್ನು ಕುಳ್ಳಿರಿಸಿ, ಅಷ್ಟಭಾವ ಪುಷ್ಪಗಳನ್ನೇರಿಸಿ ಪೂಜಿಸುತ್ತಿದ್ದರಂತೆ. ಹಿಂದೆ ಮಹಾಭಾರತದ ಕಾಲದಲ್ಲಿ ಭೀಮಸೇನನು ಕೂಡ ತನ್ನೊಳಗೇ ಇದ್ದ ಭಗವಂತನಿಗೆ ಇದೇ ರೀತಿ ಅಷ್ಟಭಾವ ಪುಷ್ಪಗಳಿಂದ ಪೂಜಿಸುತ್ತಿದ್ದನೆಂದು ಹೇಳಲಾಗಿದೆ. ಭಗವಂತನ ಪೂಜೆಯೆಂದರೆ ದೇವರ ಕೋಣೆಯಲ್ಲಿ ಗಂಟೆಗಟ್ಟಳೇ ಕುಳಿತುಕೊಂಡಿರುವುದಲ್ಲ. ಪೂಜೆಯು ನಿರಂತರ ಸಹಜಕ್ರಿಯೆಯಾಗಿದ್ದು, ನಮ್ಮ ಜೀವನದ ಪ್ರತಿ ಕ್ಷಣವೂ ಸರಿಯಾದ ಮನೋಭಾವನೆಗಳು, ದೃಷ್ಟಿಕೋನ ಮತ್ತು ಧೋರಣೆಗಳನ್ನು ಅಳವಡಿಸಿಕೊಳ್ಳುವದೇ ಆಗಿದೆ. ಈ ಎಂಟು ಭಾವ ಪುಷ್ಪಗಳೆಂದರೆ:

೧. ಅಹಿಂಸೆ ಬದಲಾಯಿಸಿ

೨. ಇಂದ್ರಿಯನಿಗ್ರಹ ಬದಲಾಯಿಸಿ

೩. ದಯೆ ಬದಲಾಯಿಸಿ

೪. ಕ್ಷಮೆ ಬದಲಾಯಿಸಿ

೫. ಧ್ಯಾನ ಬದಲಾಯಿಸಿ

೬. ಜ್ಞಾನ ಬದಲಾಯಿಸಿ

೭. ತಪಸ್ಸು ಬದಲಾಯಿಸಿ

೮. ಸತ್ಯ ಬದಲಾಯಿಸಿ

ಪ್ರತಿಯೊಂದು ಗುಣಗಳು ಗಹನವಾಗಿದ್ದು, ಬೇಕಾದಷ್ಟು ಆಳವಾದ ವಿಚಾರಗಳನ್ನೊಳಗೊಂಡಿವೆ. ಆದರೆ, ನಮ್ಮ ಜೀವನವು ವೈಯಕ್ತಿಕವಾಗಿ ಮತ್ತು ಸಮಾಜದಲ್ಲಿ ಶಾಂತಿಯುತವಾಗಿ, ಸುಖಕರವಾಗಿರಲು ಇವು ಬೇಕೇ ಬೇಕು ಎಂಬ ಅಂಶವು ಇವುಗಳ ಮಹತ್ವ ತಿಳಿಸುತ್ತವೆ.