ಅಪರ್ಣಾ ಸೇನ್
ಅಪರ್ಣಾ ಸೇನ್ (ಜನ್ಮನಾಮ ದಾಸ್ ಗುಪ್ತ) (ಬಂಗಾಳಿ:অপর্ণা সেন Ôporna Shen; ಜನನ 25 ಅಕ್ಟೋಬರ್ 1945) ಒಬ್ಬ ವಿಮರ್ಶಕರೂ ಒಪ್ಪಿರುವಂತಹ ಭಾರತದ ಚಿತ್ರನಿರ್ಮಾಪಕಿ, ಚಿತ್ರಕಥಾ ಲೇಖಕಿ, ಹಾಗೂ ನಟಿಯಾಗಿದ್ದಾರೆ. ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಎಂಟು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
Aparna Sen অপর্ণা সেন | |
---|---|
![]() Aparna Sen | |
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಕೊಲ್ಕತ್ತ, India | ೨೫ ಅಕ್ಟೋಬರ್ ೧೯೪೫
ವೃತ್ತಿ | actor, film director, screenwriter |
ಜೀವನ ಚರಿತ್ರೆಸಂಪಾದಿಸಿ
ಅಪರ್ಣಾ ಸೇನ್ ಕಲ್ಕತ್ತಾದಲ್ಲಿ ಒಂದು ಬೆಂಗಾಲಿ ಕುಟುಂಬದಲ್ಲಿ ಜನಿಸಿದರು; ಈ ಪ್ರಾಂತ್ಯವು ಮೂಲತಃ ಪಶ್ಚಿಮ ಬಂಗಾಳದಲ್ಲಿತ್ತು. ನುರಿತ ವಿಮರ್ಶಕ ಹಾಗೂ ಚಿತ್ರ ನಿರ್ಮಾಪಕರಾದ ಚಿದಾನಂದ ದಾಸ್ ಗುಪ್ತರು ಅವರ ತಂದೆ. ತಾಯಿ ಸುಪ್ರಿಯಾ ದಾಸ್ ಗುಪ್ತರು ಪ್ರಖ್ಯಾತ ಬಂಗಾಳಿ ಕವಿ ಜಿಬಾನಂದ ದಾಸ್ ರ ಸೋದರಸಂಬಂಧಿ. ಅವರು ತಮ್ಮ ಬಾಲ್ಯವನ್ನು ಹಝಾರಿಬಾಗ್ ಮತ್ತು ಕೋಲ್ಕತ್ತಾದಲ್ಲಿ ಕಳೆದರು ಹಾಗೂ ಅವರ ಪ್ರಾಥಮಿಕ ಶಿಕ್ಷಣವು ಸೌತ್ ಪಾಯಿಂಟ್ ನಲ್ಲಿ ಆರಂಭವಾಗಿ ನಂತರ ಬಹುತೇಕ ಕೋಲ್ಕತ್ತಾದ ಮಾಡ್ರನ್ ಹೈ ಸ್ಕೂಲ್ ಫಾರ್ ಗರ್ಲ್ಸ್ ನಲ್ಲಿ ನಡೆಯಿತು. ಅವರು ತಮ್ಮ ಇಂಗ್ಲಿಪ್ ಆನರ್ಸ್ ಐಚ್ಛಿಕವಾಗಿಸಿಕೊಂಡ ಬಿ.ಎ. ಪದವಿಯನ್ನು ಪ್ರೆಸಿಡೆನ್ಸಿ ಕಾಲೇಜ್ ನಲ್ಲಿ ಮುಗಿಸಿದರು..
ಮ್ಯಾಗ್ನಮ್ ಛಾಯಾಗ್ರಾಹಕ ಬ್ರಿಯಾನ್ ಬ್ರೇಕ್ ತಮ್ಮ ಮಾನ್ಸೂನ್ (ಮುಂಗಾರು) ಸರಣಿಯ ಛಾಯಾಚಿತ್ರಗಳನ್ನು ತೆಗೆಯಲೆಂದು ಭಾರತಕ್ಕೆ ಬಂದಾಗ ಅವರನ್ನು ಅಪರ್ಣಾ ಸೇನ್ 1961ರಲ್ಲಿ ಕೋಲ್ಕತ್ತಾದಲ್ಲಿ ಭೇಟಿಯಾದರು. ಬ್ರೇಕ್ ಕಾಲಾನುಕ್ರಮದಲ್ಲಿ ಆತನಿಗೆ ಖ್ಯಾತಿ ತಂದ ಹಲವು ಛಾಯಾಚಿತ್ರಗಳ ಪೈಕಿ ಒಂದು ಚಿತ್ರಕ್ಕೆ ಸೇನ್ ರನ್ನು ರೂಪದರ್ಶಿಯಾಗಿ ಬಳಸಿಕೊಂಡರು - ಒಬ್ಬ ಹುಡುಗಿಯು ಮುಂಗಾರು ಮಳೆಯ ಮೊದಲ ಹನಿಗಳಿಗೆ ಮುಖವೊಡ್ಡಿ ನಿಂತಿರುವ ಚಿತ್ರವದು. ಈ ಛಾಯಾಚಿತ್ರಣವನ್ನು ಕಲ್ಕತ್ತಾದ ಒಂದು ಮೇಲ್ಛಾವಣಿಯ ಮೇಲೆ, ಒಂದು ಏಣಿ ಹಾಗೂ ಒಂದು ನೀರಿನ ಕ್ಯಾನ್ ನೊಂದಿಗೆ ಕೈಗೊಳ್ಳಲಾಯಿತು. ಸೇನ್ ಈ ಛಾಯಾಗ್ರಹಣವಿಧಾನವನ್ನು ವರ್ಣಿಸಿದರು:
ಅವರು ನನ್ನನ್ನು ಮೇಲ್ಛಾವಣಿಗೆ ಕರೆದೊಯ್ದರು, ಹಳ್ಳಿ ಹುಡುಗಿಯರು ಉಡುವ ರೀತಿಯಲ್ಲಿ ಒಂದು ಕೆಂಪು ಸೀರೆಯನ್ನು ಉಡುವಂತೆ ಮಾಡಿದರು ಮತ್ತು ಮೂಗಿನಲ್ಲಿ ಒಂದು ಹಸಿರು ಮೂಗುಬೊಟ್ಟನ್ನು ಧರಿಸಲು ಹೇಳಿದರು. ಅವರಿಗೆ ಸಹಾಯ ಮಾಡಲೋಸುಗ, ನಾನು ಕೆಂಪು ಸೀರೆಗೆ ಹೊಂದುವಂತಹ ಕೆಂಪು ಮೂಗುಬೊಟ್ಟನ್ನೇ ಧರಿಸುತ್ತೇನೆಂದೆ, ಅವರು ಒಪ್ಪಲಿಲ್ಲ - ಅವರ ನಿರ್ಧಾರ ಅಚಲವಾಗಿತ್ತು, ಕೊಂಚ ಬಿರುಸೂ ಸಹ - ನನಗೆ ಹಸಿರೇ ಸರಿಯೆನ್ನಿಸುತ್ತದೆ ಎಂದರು. ನಾನು ಇನ್ನೂ ಮೂಗು ಚುಚ್ಚಿಸಿಕೊಂಡಿರಲಿಲ್ಲವಾದ್ದರಿಂದ ಆ ಮೂಗುಬೊಟ್ಟನ್ನು ನನ್ನ ಮೂಗಿಗೆ ಗೋಂದು ಹಾಕಿ ಅಂಟಿಸಲಾಯಿತು. ಯಾರೋ ನೀರಿನ ಕ್ಯಾನ್ ಹೊಂದಿದ್ದವರು ನನ್ನ ಮೇಲೆ ನೀರನ್ನು ಸುರಿದರು. ಅದು ನಿಜಕ್ಕೂ ಬಹಳ ಸರಳವಾದುದಾಗಿತ್ತು. ಇವೆಲ್ಲಾ ಪ್ರಾಯಶಃ ಅರ್ಧ ಗಂಟೆಯಲ್ಲಿ ಮುಗಿಯಿತು.[೧]
ನಟನಾ ವೃತ್ತಿ ಬದುಕುಸಂಪಾದಿಸಿ
ಸೇನ್ ತನ್ನ 16ನೆಯ ವಯಸ್ಸಿನಲ್ಲಿ, 1961ರ ತೀನ್ ಕನ್ಯಾ (ಮೂರು ಹೆಣ್ಣುಮಕ್ಕಳು ) ಚಿತ್ರದಲ್ಲಿನ ಸಮಾಪ್ತಿ ಭಾಗದಲ್ಲಿನ ಮೃಣ್ಮಯೀ ಪಾತ್ರದ ಮೂಲಕ ಚಲನಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರವನ್ನು ನಿರ್ದೇಶಿಸಿದವರು ಸತ್ಯಜಿತ್ ಗೇ (ಅವರು ಸೇನ್ ರ ತಂದೆಯ ಹಳೆಯ ಸ್ನೇಹಿತರಾಗಿದ್ದರು). ನಂತರ ಅವರು ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜ್ ನಲ್ಲಿ ವ್ಯಾಸಂಗ ಮುಂದುವರಿಸಿದರು. ನಂತರ, ತಮ್ಮ ಜೀವನದ ಹಾದಿಯಲ್ಲಿ ಅವರು ಸತ್ಯಜಿತ್ ರೇ ಯವರ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರು; ಚಿಕ್ಕ ಚಿತ್ರವಾದ ಪೀಕೂ (೧೯೮೧) ಸಹ ಅವುಗಳ ಪೈಕಿ ಒಂದಾಗಿದ್ದು ಅದರಲ್ಲಿ ಸೇನ್ ಅನೈತಿಕ ಸಂಬಂಧ ಹೊಂದಿದ ಹೆಂಡತಿ ಹಾಗೂ ತಾಯಿಯ ಪಾತ್ರದಲ್ಲಿ ಅಭಿನಯಿಸಿದರು. 1965ರಲ್ಲಿ ಸೇನ್ ತಮ್ಮ ಚಿತ್ರಜೀವನವನ್ನು ಮೃಣಾಲ್ ಸೇನ್ ರ ಆಕಾಶ್ ಕುಸುಮ್ ಮೂಲಕ ಮುಂದುವರಿಸಿದರು. ನಂತರ ಈ ಚಿತ್ರವು ಮಂಝಿಲ್ ಎಂಬ ಹೆಸರಿನಲ್ಲಿ ಹಿಂದಿಯಲ್ಲಿ ತಯಾರಾಗಿ, ಅದರಲ್ಲಿ ಅಮಿತಾಭ್ ಬಚ್ಚನ್ ಮತ್ತು ಮೌಶಮಿ ಚಟರ್ಜಿ ಅಭಿನಯಿಸಿದ್ದರು.ನಂತರ ಸೇನ್ ರ ಮಹಾಪೃತಿಬಿ ಯಲ್ಲಿ ವಿಧವೆಯು ಅನಿಭವಿಸುವ ಹಲವಾರು ಭಾವಗಳನ್ನು ಪ್ರಭಾವಶಾಲಿಯಾಗಿ ವ್ಯಕ್ತಪಡಿಸಿದರು.ಅಂದಿನಿಂದ, 1970ರ ದಶಕದ ಅಂತ್ಯದವರೆಗೆ, ಅವರು ಬಂಗಾಳೀ ಚಿತ್ರರಂಗದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು ಆ ಕಾಲದ ಪ್ರಮುಖ ನಾಯಕನಟಿಯಾಗಿ ಮೆರೆದರು. 1977ರಲ್ಲಿ ಅಮಿತಾಭ್ ಬಚ್ಚನ್, ಶಶಿ ಕಪೂರ್, ಸಂಜೀವ್ ಕುಮಾರ್ ಹಾಗೂ ರೇಖಾ ರೊಡನೆ ನಟಿಸಿದ ಇಮಾನ್ ಧರಮ್ ಎಂಬ ಚಿತ್ರವನ್ನೂ ಒಳಗೊಂಡಂತೆ ಅವರು ಹಲವಾರು ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿದರು .ಅಪರ್ಣಾ ಸೇನ್ ಬಂಗಾಳಿ ಚಿತ್ರರಂಗದ ಮುಖ್ಯವಾಹಿನಿಯಲ್ಲೂ ಅಷ್ಟೇ ಯಶಸ್ವಿಯಾಗಿದ್ದರು. ಅವರು ಸೌಮಿತ್ರ ಚಟರ್ಜಿಯವರೊಡನೆ ಹೊಂದಿದ್ದ ತೆರೆಯಮೇಲಿನ ಜೋಡಿಯ ಅನುಬಂಧವು ಬಸಂತ್ ಬಿಲಾಪ್ , ಬಕ್ಸಾ ಬಾದಲ್, ಚುತಿರ್ ಫಾಂಡೆ ಚಿತ್ರಗಳಲ್ಲಿ ಹೊಮ್ಮಿ ಜನಾನುರಾಗ ಗಳಿಸಿದಂತೆಯೇ ಜಾಯ್ ಜಯಂತಿ, ಅಲೋರ್ ಠಿಕಾನಾ, ಮುಂತಾದ ಉತ್ತಮ್ ಕುಮಾರ್ ರೊಡನೆ ಅಭಿನಯಿಸಿದ ಚಿತ್ರಗಳೂ ಜನಮನ್ನಣೆ ಗಳಿಸಿದವು . 1969ರಲ್ಲಿ ಸೇನ್ ದ ಗುರು ಎಂಬ ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್ ರವರ ಆಂಗ್ಲಭಾಷಾ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಿದರು. ಅವರು ಮರ್ಚೆಂಟ್-ಐವರಿಯ ಮತ್ತೆರಡು ಚಿತ್ರಗಳಲ್ಲಿ ಅಭಿನಯಿಸಿದರು: ಬಾಂಬೆ ಟಾಕೀ (1970), ಮತ್ತು ಹುಲ್ಲಾಬಲ್ಲೂ ಓವರ್ ಜಾರ್ಜೀ ಎಂಡ್ ಬೋನೀಸ್ ಪಿಕ್ಷರ್ಸ್ (1978). 2009ರಲ್ಲಿ ಸೇನ್ ಶರ್ಮಿಳಾ ಟ್ಯಾಗೂರ್ ಮತ್ತು ರಾಹುಲ್ ಬೋಸ್ ರೊಡನೆ ಅನಿರುದ್ಧ್ ರಾಯ್ ಚೌಧರಿಯವರ ಬಂಗಾಳಿ ಚಿತ್ರ ಅಂತಹೀನ್ ನಲ್ಲಿ ನಟಿಸಿದರು. ಈ ಚಿತ್ರವು ನಾಲ್ಕು ರಾಷ್ಟ್ರೀಯ ಚಲಚಚಿತ್ರ ಪ್ರಶಸ್ತಿಗಳನ್ನು ಗೆದ್ದಿತು.[೨]
ನಿರ್ದೇಶಕಿಯಾಗಿ ಅಪರ್ಣಾಸಂಪಾದಿಸಿ
1981ರಲ್ಲಿ ಸೇನ್ 36 ಚೌರಂಗಿ ಲೇನ್ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟರು. ಅವರು ಆ ಚಿತ್ರದ ಚಿತ್ರಕಥೆಯನ್ನೂ ಬರೆದರು. ಕಲ್ಕತ್ತಾದಲ್ಲಿ ಜೀವಿಸುವ ಆಂಗ್ಲೋ-ಇಂಡಿಯನ್ ವೃಧ್ದ ಶಿಕ್ಷಕಿಯೊಬ್ಬಳನ್ನು ಕುರಿತ ಈ ಚಿತ್ರವು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ತಮ್ಮ ಮೊದಲ ಸಾಕ್ಷ್ಯಚಿತ್ರದ ನಿರ್ದೇಶನಕ್ಕಾಗಿ ಸೇನ್ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೇಷ್ಠ ನಿರ್ದೇಶಕಿ ಪ್ರಶಸ್ತಿಯನ್ನು ಪಡೆದರು. 36 ಚೌರಂಗಿ ಸಹ ಮನೀಲಾ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಗ್ರಾಂಡ್ ಪ್ರೀ (ದ ಗೋಲ್ಷನ್ ಈಗಲ್) ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತು ಈ ಆರಂಭಿಕ ಯಶದ ಹಿಂದೆ ಹಿಂದೆಯೇ ಅವರು ಹಲವಾರು ಚಿತ್ರಗಳನ್ನು ನಿರ್ದೇಶಿಸಿದರು - ಪರೋಮಾ (1984), ಸತಿ (1989) ಮತ್ತು ಯುಗಾಂತ್ (1995) ಇವುಗಳಲ್ಲಿ ಗಮನಾರ್ಹವಾದವು. ಈ ಚಿತ್ರಗಳು ಆಧುನಿಕ ಭಾರತದಲ್ಲಿ ಹೆಣ್ಣಿನ ಪರಿಸ್ಥಿತಿಯನ್ನು ವಿವಿಧ ಕೋನಗಳಿಂದ ಬಿಂಬಿಸಿದವು. ಅವರು ಉನೀಷೆ ಏಪ್ರಿಲ್ (1994), ಎಂಬ ಬಂಗಾಳಿ ಸಿನೆಮಾದ ರಿತುಪರ್ಣೋ ಘೋಷ್ ರ ಚಿತ್ರದಲ್ಲೂ ಅಭಿಜಯಿಸಿದರು. ಸೇನ್ ನಂತರ ನಿರ್ದೇಶಿಸಿದ ಪರೋಮಿತರ್ ಏಕ್ ದಿನ್ (2000) ವಿಮರ್ಶಕರ ಮೆಚ್ಚುಗೆ ಗಳಿಸಿ ತನ್ನ ಮೊದಲ ಚಿತ್ರದ ಯಶದ ಮೆಲುಕನ್ನು ತಂದಿತು. ಈ ಚಿತ್ರವು ರಿತುಪರ್ಣಾ ಸೇನ್ ಗುಪ್ತ ಎಂಬ ಒಬ್ಬ ವಿಚ್ಛೇದಿತ ಮಹಿಳೆ ತನ್ನ ಅತ್ತೆಯೊಂದಿಗೆ (ಅತ್ತೆಯ ಪಾತ್ರವನ್ನು ಸೇನ್ ಮಾಡಿದ್ದರು) ಹೊಂದಬಹುದಾದ ಸಂಬಂಧದ ರೀತಿ, ವ್ಯಾಪ್ತಿಗಳ ಬಗ್ಗೆ ವಿಶೇಷ ಹೊಳಹುಗಳನ್ನು ನೀಡಿತ್ತು. ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ವರ್ತುಲದಲ್ಲಿ ಈ ಚಿತ್ರವು ಹಲವಾರು ಪ್ರಶಸ್ತಿಗಳನ್ನು ಗೆದ್ದಿತು. ಮಿಸ್ಟರ್ & ಮಿಸೆಸ್ ಐಯರ್ (2002) ಭಾರತದ ಹಿಂದು-ಮುಸ್ಲಿಮ್ ಕೋಮುಗಲಭೆಯ ಕ್ರೂರ ಹಿನ್ನೆಲೆಯಲ್ಲಿ ನಡೆಯುವ ಪ್ರಣಯಕಥೆಯನ್ನು ಆಧರಿಸಿ ತೆಗೆದ ಚಿತ್ರ. ಈ ಚಿತ್ರವು ಸೇನ್ ರ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ, ಹಾಗೂ ಶ್ರೇಷ್ಠ ಅಭಿನಯಕ್ಕಾಗಿ ಕೊಂಕೊಣ್ ಸೇನ್ ಶರ್ಮರಿಗೂ ಪ್ರಶಸ್ತಿಗಳನ್ನು ತಂದುಕೊಟ್ಟಿತು; ಕೊಂಕೊಣ್ ಈ ನಿರ್ದೇಶಕಿಯ ಮಗಳು. ಈ ಚಿತ್ರವು ಲೋಕಾರ್ನೋ, ಹವಾಯೀ ಮತ್ತು ಮನೀಲಾ ಚಲನಚಿತ್ರೋತ್ಸವಗಳಲ್ಲಿ ಮತ್ತಷ್ಟು ಪ್ರಶಸ್ತಿಗಳನ್ನು ಗೆದ್ದಿತು. 15, ಪಾರ್ಕ್ ಅವಿನ್ಯೂ (2005) ಸೇನ್ ರ ಮಗಳು ಮತ್ತು ಶಬನಾ ಅಝ್ಮಿ, ಧೃತಮ್ ಚಟರ್ಜಿ, ವಹೀದಾ ರೆಹ್ಮಾನ್, ರಾಹುಲ್ ಬೋಸ್ ಮತ್ತು ಸೌಮಿತ್ರ ಚಟರ್ಜಿ ಅಭಿನಯಿಸಿದ ಚಿತ್ರ. ಈ ಚಿತ್ರವು ಮಾನಸಿಕವಾಗಿ ಅಸ್ವಸ್ಥವಾದ ಹುಡುಗಿ(ಕೊಂಕೊಣ ಸೇನ್ ಶರ್ಮ) ತನ್ನ ಮಲಅಕ್ಕ ಶಬನಾ ಅಝ್ಮಿಯೊಡನೆ ಹೊಂದಿರುವ ಸಂಬಂಧದ ರೀತಿಯನ್ನು ಕುರಿತದ್ದಾಗಿದೆ. ಸೇನ್ ರ ಮುಂದಿನ ಚಿತ್ರ ದ ಜಾಪನೀಸ್ ವೈಫ್ (2010), ಇದರಲ್ಲಿ ನಟಿಸಿದವರು ರಾಜ್ಮಾ ಸೇನ್, ರಾಹುಲ್ ಬೋಸ್ ಮತ್ತು ಚುಗೂಸಾ ಟಕಾಕು. ಈ ಚಿತ್ರವು ಇಬ್ಬರು ಮಹಿಳೆಯರ ಮೇಲೆ ಕೇಂದ್ರಿತವಾಗಿದ್ದು, ಇದು ಬಂಗಾಳಿ ಬರಹಗಾರ ಕುನಾಲ್ ಬಸುರವರ ಸಣ್ಣಕಥೆಯನ್ನು ಆಧರಿಸಿದ್ದಾಗಿತ್ತು. ಅಪರ್ಣಾ ಸೇನ್ ಕೇವಲ ಆಯ್ದ ಚಿತ್ರಗಳನ್ನು ಮಾತ್ರ ನಿರ್ದೇಶಿಸುತ್ತಿದ್ದರಾದ್ದರಿಂದ ಕಳೆದ 28 ವರ್ಷಗಳಲ್ಲಿ ಕೇವಲ ಏಳು ಚಿತ್ರಗಳನ್ನು ಮಾತ್ರ ತಯಾರಿಸಿದ್ದಾರೆ. 2009ರಲ್ಲಿ ಸೇನ್ ತಮ್ಮ ಮುಂದಿನ ಬಂಗಾಳಿ ಚಿತ್ರ ಇತಿ ಮೃಣಾಲಿನಿ ಯನ್ನು ಕೈಗೆತ್ತಿಕೊಂಡಿರುವುದಾಗಿ ಘೋಷಿಸಿದರು; ಅದರ ಪ್ರಮುಖ ಪಾತ್ರಧಾರಿಗಳೆಂದರೆ ಕೊಂಕೊಣ ಸೇನ್ ಶರ್ಮ, ಅಪರ್ಣಾ ಸೇನ್, ರಜತ್ ಕಪೂರ್, ಕೌಶಿಕ್ ಸೇನ್, ಮತ್ತು ಪ್ರಿಯಾಂಶು ಚಟರ್ಜಿ. ಸೇನ್ ರ ಇದರ ಮುಂಚಿನ ಬಂಗಾಳಿ ಚಿತ್ರವೆಂದರೆ ಪರೋಮಿತರ್ ಏಕ್ ದಿನ್ (2000). ಚಿತ್ರಕಥೆಯನ್ನು ಮೊದಲ ಬಾರಿಗೆ ಬರೆಯುತ್ತಿರುವ ರಂಜನ್ ಘೋಷ್[೩] ಇತಿ ಮೃಣಾಲಿನಿ ಯ ಸಹಚಿತ್ರಕಥಾ-ಲೇಖಕರಾಗಿದ್ದಾರೆ. ವಾಸ್ತವವಾಗಿ ಅಪರ್ಣಾ ಸೇನ್ ಇತರ ಚಿತ್ರಕಥೆ ಬರೆಯುವವರೊಂದಿಗೆ ಸೇರಿದ್ದು ಇದೇ ಮೊದಲ ಬಾರಿ; ಫಿಲ್ಮ್ ಇನ್ಸ್ ಟಿಟ್ಯೂಟ್ ನ ಪರಿವಿಡಿಯನ್ನು ಹಿಡಿದದ್ದೂ ಇದೇ ಮೊದಲು. ಇತಿ ಮೃಣಾಲಿನಿ ಯ ಚಿತ್ರಕಥೆಯು ಮುಂಬಯಿ ಮೂಲದ ಫಿಲ್ಮ್ ಶಾಲೆ ವಿಷಲಿಂಗ್ ವುಡ್ಸ್ ಇಂಟರ್ನ್ಯಾಷನಲ್ ತಮ್ಮ ವಿದ್ಯಾರ್ಥಿಗಳಿಗೆ ಪಠ್ಯವಿಷಯದ ಚಟುವಟಿಕೆಯಾಗಿ ನೀಡಿದ ಸ್ಕ್ರೀನ್ ರೈಟಿಂಗ್ ವಿಷಯವಾಗಿತ್ತು.[೪] ಯಾವುದೇ ಭಾರತೀಯ ಚಲಚಚಿತ್ರ ಇಂಸ್ಟಿಟ್ಯೂಟ್ ನ ಪಠ್ಯವಿಷಯವಾಗಿ ನೀಡಿದ ಚಿತ್ರಕಥೆಯನ್ನು ಚಲನಚಿತ್ರಕ್ಕಾಗಿ ಬಳಸಿಕೊಳ್ಳುತ್ತಿರುವುದು ಭಾರತೀಯ ಸ್ಕ್ರೀನ್ ಬರವಣಿಗೆಯ ಇತಿಹಾಸದಲ್ಲಿ ಇದೇ ಮೊದಲು.[೫] ಈ ಚಲನಚಿತ್ರವು ಮುmid 2010.
ವೈಯಕ್ತಿಕ ಜೀವನಸಂಪಾದಿಸಿ
ಸೇನ್ ಮೂರು ಬಾರಿ ವಿವಾಹವಾಗಿದ್ದಾರೆ. ಅವರ ಮೊದಲ ಮದುವೆ, ಸಂಜಯ್ ಸೇನ್ ರೊಂದಿಗೆ, ಅವರು ಇನ್ನೂ ಬಹಳ ಚಿಕ್ಕವರಾಗಿದ್ದಾಗಲೇ ಜರುಗಿತು. ಅವರ ಎರಡನೆಯ ಪತಿ ವೈಜ್ಞಾನಿಕ ಲೇಖಕ ಹಾಗೂ ಪತ್ರಕರ್ತರಾದ ಮುಕುಲ್ ಶರ್ಮ. ಅವರು ನಂತರ ಪರಸ್ಪರ ಒಪ್ಪಿ ವಿಚ್ಛೇದಿತರಾದರು. ಸೇನ್ ನ ಮೂರನೆಯ ಹಾಗೂ ಪ್ರಸ್ತುತ ಪತಿಯಾದ ಕಲ್ಯಾಣ್ ರೇ ಒಬ್ಬ ಲೇಖಕ ಮತ್ತು ಪ್ರಾಧ್ಯಾಪಕರಾಗಿದ್ದು ಇಂಗ್ಲಿಷ್ ಭಾಷೆಯನ್ನು ಯುನೈಟೆಡ್ ಸ್ಟೇಟ್ಸ್ ನ ನ್ಯೂ ಜರ್ಸಿಯ ರಾಂಡಾಲ್ಫ್ ನಲ್ಲಿನ ಕಂಟ್ರಿ ಕಾಲೇಜ್ ಆಫ್ ಮಾರಿಸ್ ನಲ್ಲಿ ಉದ್ಯೋಗಿಯಾಗಿದ್ದಾರೆ. ಅವರಿಗೆ ಎರಡು ಹೆಣ್ಣು ಮಕ್ಕಳು, ಕಮಲಿನಿ ಮತ್ತು ಕೊಂಕೊಣ—ಅವರೂ ಸಹ ಅಭಿನೇತ್ರಿಯೇ—ಮತ್ತು ಇಬ್ಬರು ಮೊಮ್ಮಕಳಿದ್ದಾರೆ.
ಇತರ ಸಾಧನೆಗಳುಸಂಪಾದಿಸಿ
2008ರಲ್ಲಿ ಸೇನ್ ರನ್ನು ಏಷ್ಯಾ ಪೆಸಿಫಿಕ್ ಸ್ಕ್ರೀನ್ ಅವಾರ್ಡ್ಸ್ ನ ಅಂತರರಾಷ್ಟ್ರೀಯ ತೀರ್ಪುಗಾರರ ಮಂಡಳಿಯ ಸದಸ್ಯರಾಗಿ ಚುನಾಯಿತರಾದರು. ಈ ಉತ್ಕ್ರಷ್ಟ ಮಂಡಳಿಯು ಅಂತರರಾಷ್ಟ್ರೀಯ ಮಟ್ಟದ ಅಧ್ಯಕ್ಷರ ಅಧೀನದಲ್ಲಿದ್ದು, ಪ್ರತಿ ವರ್ಗದಲ್ಲಿ ಪ್ರಶಸ್ತಿಗೆ ಅರ್ಹರೆಂದು ಸೂಚಿತವಾದ ವ್ಯಕ್ತಿಗಳಲ್ಲಿ ವಿಜೇತರು ಯಾರೆಂಬುದನ್ನು ನಿರ್ಣಯಿಸುತ್ತದೆ. 1986ರಿಂದ 2005ರ ವರೆಗೆ ಸೇನ್ ಬಂಗಾಳಿ ಮಹಿಳಾ ಮ್ಯಾಗಝೀನ್ (ಪಾಕ್ಷಿಕ)ಸಾನಂದ (ಪ್ರಕಾಶಕರು ಆನಂದ ಬಝಾರ್ ಪತ್ರಿಕಾ ತಂಡ)ದ ಸಂಪಾದಕಿಯಾಗಿದ್ದರು; ಈ ಪಾಕ್ಷಿಕವು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ್ ಗಳಲ್ಲಿ ಏಕರೀತಿಯ ಜನಪ್ರಿಯತೆ ಗಳಿಸಿದೆ. ನವೆಂಬರ್ 2005ರಿಂದ ಡಿಸೆಂಬರ್ 2006ರ ವರೆಗೆ ಅವರು ಬಂಗಾಳಿ 24x7 ಇಂಫೋಟೈನ್ಮೆಂಟ್ ವಾಹಿನಿ ಕೋಲ್ಕತ್ತಾ TV ಯಲ್ಲಿ ಕ್ರಯೇಟಿವ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದರು. 1986ರಲ್ಲಿ ಆಗಿನ ಭಾರತದ ರಾಷ್ಟ್ರಪತಿಯವರು ಸೇನ್ ಭಾರತೀಯ ಸಿನೆಮಾಕ್ಕೆ ಗೈದಿರುವ ಸೇವೆಯನ್ನು ಗುರುತಿಸಿರುವುದರ ದ್ಯೋತಕವಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅಂದಿನಿಂದ ಅವರು ಹಲವಾರು ಲೈಫ್ ಟೈಮ್ ಅಚೀವ್ ಮೆಂಟ್ ಪ್ರಶಸ್ತಿಗಳನ್ನು ಪಡೆದಿದ್ದಾರೆ ಹಾಗೂ ಜಗದಾದ್ಯಂತ ಚಲನಚಿತ್ರೋತ್ಸವಗಳ ಕಾನೂನುಮಂಡಳಿ (ತೀರ್ಪುಗಾರರ ಮಂಡಳಿ)ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಚಲನಚಿತ್ರಗಳ ಪಟ್ಟಿಸಂಪಾದಿಸಿ
ನಟಸಂಪಾದಿಸಿ
ವರ್ಷ | ಚಿತ್ರ | ಪಾತ್ರ | ಇತರ ಟಿಪ್ಪಣಿಗಳು |
---|---|---|---|
1955 | ಮೆಜೋ ಬಾವ್ | ||
1961 | ತೀನ್ ಕನ್ಯಾ | ಮೃಣ್ಮಯೀ | "ಸಮಾಪ್ತಿ" ವಿಭಾಗ. |
1965 | ಆಕಾಶ್ ಕುಸುಮ್ | ಮೋನಿಕಾ | |
1968 | ಹಂಗ್ಸಾ-ಮಿಥುನ್ | ||
1969 | ವಿಶ್ವಾಸ್ | ||
ದ ಗುರು | ಘಝಲ | ||
ಅಪರಾಚಿತ | ಸುನಿತಾ | ||
1970 | ಬಕ್ಸಾ ಬಾದಲ್ | ಮೀನೂ | |
ಅರನ್ಯೆರ್ ದಿನ್ ರಾತ್ರಿ | ಹರಿಯ ಮಾಜಿ ಪ್ರೇಯಸಿ | ||
ಕಲಂಕಿತ ನಾಯಕ್ | |||
ಬಾಂಬೆ ಟಾಕೀಸ್ | ಮಾಲಾ | ||
1971 | ಕುಂಜೈ ಬೇರೈ | ರಾಜಾ | |
1973 | ಸೋನರ್ ಕಾಂಚ | ||
ಕಾಯಾ ಹಿನೆರ್ ಕಾಹಿನಿ | |||
ಬಸಂತ ಬಿಲಾಪ್ | |||
ರೇಟರ್ ರಜನೀಗಂದ್ರ | |||
1974 | ಜಾದೂ ಬನ್ಷಾ | ||
ಅಸತಿ | |||
ಅಲೋರ್ ಠಿಕಾನಾ | |||
ಸಗೀನಾ | ಕಾರ್ಯದರ್ಶಿನಿ ವಿಶಾಖಾದೇವಿ | ||
1975 | ಛುತಿರ್ ಫಂದೆ | ||
ರಾಗ್ ಅನುರಾಗ್ | |||
ನಿಶಿಮೃಗಯಾ | |||
1976 | ಜನ ಅರಣ್ಯ್ | ಸೋಮನಾಥನ ಮಾಜಿ ಗೆಳತಿ | |
ಅಜಸ್ರಾ ಧನ್ಯಬಾದ್ | |||
ನಿಧಿರಮ್ ಸರ್ದಾರ್ | |||
1977 | ಇಮ್ಮಾನ್ ಧರಮ್ | ಶ್ಯಾಮ್ಲೀ | |
ಕೊತ್ವಾಲ್ ಸಾಬ್ | |||
ಪ್ರಾಕ್ಸಿ | |||
1979 | ನೌಕಾಡುಬಿ | ಕಮಲಾ | |
1981 | ತೀ ತಮಿಳು ಚಿತ್ರ; ಪಾತ್ರವರ್ಗದಲ್ಲಿ ರಜನೀಕಾಂತ್ ಮತ್ತು ಸುಮನ್. ಇದು ದೀವಾರ್ ಚಿತ್ರದ ಅವತರಣಿಕೆ | ಅನಿತಾ | |
1982 | ಅಮೃತಾ ಕುಂಭರ್ ಸಂಧಾನೆ | ||
1983 | ಬಿಶಬೃಕ್ಷ | ಸೂರ್ಯಮುಖಿ | |
ಅಭಿನಯ್ ನೇಯ್ | |||
ಅರ್ಪಿತಾ | |||
ಇಂದಿರಾ | |||
1984 | ಪರೋಮ | ||
1985 | ನೀಲ್ ಕಂಠ | ||
1986 | ಶ್ಯಾಮ್ ಸಾಹೇಬ್ | ||
1987 | ದೇಬಿಕಾ | ||
1989 | ಕರೀ ದಿಯೇ ಕಿನ್ಲಾಮ್ | ||
ಏಕ್ ದಿನ್ ಅಚಾನಕ್ | ಪ್ರೊಫೆಸರ್ ರ ವಿದ್ಯಾರ್ಥಿನಿ | ||
ಜಾರ್ ಜೇ ಪ್ರಿಯೋ | |||
1992 | ಶೇಟ್ ಪಥರೇರ್ ಥಲಾ | ಬಂದನಾ | |
ಮಹಾಪೃಥ್ವೀ | ಸೊಸೆ | ||
1994 | ಉನೀಶೆ ಏಪ್ರಿಲ್ | ಸರೋಜಿನಿ | |
ಆಮೋದಿನಿ | |||
2000 | ಪರೋಮಿತರ್ ಏಕ್ ದಿನ್ | ಸನಕಾ | |
ಘಾತ್ | ಸುಮನ್ ಪಾಂಡೆ | ||
2002 | ತಿತ್ಲೀ | ಊರ್ಮಿಳಾ | |
2009 | ಅಂತಹೀನ್ | ಪರೋಮಿತಾ | |
2010 | ಇತಿ ಮೃಣಾಲಿನಿ | ವೃದ್ಧೆ ಮೃಣಾಲಿನಿ |
ಲೇಖಕಿ, ನಿರ್ದೇಶಕಿಸಂಪಾದಿಸಿ
ವರ್ಷ | ಚಿತ್ರ | ಟಿಪ್ಪಣಿಗಳು |
---|---|---|
1981 | 36 ಚೌರಂಗೀ ಲೇನ್ | ಗೆದ್ದದ್ದು , ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದದ್ದು , ರಾಷ್ಟ್ರಮಟ್ಟದ ಅತ್ಯುತ್ಮ ಹಿಂದಿ ಸಾಕ್ಷ್ಯಚಿತ್ರ ಎಂಬ ಹೆಗ್ಗಳಿಕೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ |
1984 | ಪರೋಮ | |
1989 | ಸತಿ | |
(1995). | ಯುಗಾಂತ್ | ಗೆದ್ದದ್ದು , ಬಂಗಾಳಿಯ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ |
2000 | ಪರೋಮಿತರ್ ಏಕ್ ದಿನ್ | ಗೆದ್ದದ್ದು , ಬಂಗಾಳಿಯ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ |
2001 | ಮಿಸ್ಟರ್ & ಮಿಸೆಸ್ ಅಯ್ಯರ್ | ಗೆದ್ದದ್ದು , ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದದ್ದು , ರಾಷ್ಟ್ರೀಯ ಭಾವೈಕ್ಯತೆಯನ್ನು ಬಿಂಬಿಸುವ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ನರ್ಗಿಸ್ ದತ್ ಪ್ರಶಸ್ತಿ ಗೆದ್ದದ್ದು , ಅತ್ಯುತ್ತಮ ಚಿತ್ರಕಥೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ |
2005 | 15 ಪಾರ್ಕ್ ಅವಿನ್ಯೂ | ಗೆದ್ದದ್ದು , ಆಂಗ್ಲದ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ |
2010 | ದ ಜಾಪನೀಸ್ ವೈಫ್ | 9 ಏಪ್ರಿಲ್ 2010ರಂದು ಬಿಡುಗಡೆಯಾಗಲಿದೆ[೬] |
ಇತಿ ಮೃಣಾಲಿನಿ | ಅನಿರ್ದಿಷ್ಟವಾಗಿ ವಿಳಂಬಿತವಾಗಿದೆ |
ಹೆಚ್ಚಿನ ಓದಿಗಾಗಿಸಂಪಾದಿಸಿ
- ಪರಮ ಎಂಡ್ ಅದರ್ ಔಟ್ ಸೈಡರ್ಸ್: ದ ಸಿನೆಮಾ ಆಫ್ ಅಪರ್ಣಾ ಸೇನ್ , ಲೇಖಕರು ಶೋಮಾ ಎ. ಚಟರ್ಜಿ. ಪರುಮಿತ ಪಬ್ಲಿಕೇಷನ್ಸ್, 2002. ISBN 0688168949
- ಅಪರ್ಣಾ ಸೇನ್ ಕಾಲ್ಸ್ ದ ಶಾಟ್ಸ್ (ವಿಮೆನ್ ಇನ್ ಇಂಡಿಯನ್ ಫಿಲ್ಮ್), ಲೇಖಕಿ ರಾಜಶ್ರೀ ದಾಸ್ ಗುಪ್ತ ಜುಬಾನ್, 2009.
ಉಲ್ಲೇಖಗಳುಸಂಪಾದಿಸಿ
- ↑ ಮಾನ್ಸೂನ್ ಗರ್ಲ್ಸ್ ಡಾಟರ್ ಟೇಕ್ಸ್ ಔಟ್ ಟಾಪ್ ಮೂವಿ ಆನರ್
- ↑ "Bollywood wins big at National Film Awards". Reuters India. 23 January 2010. Retrieved 2 February 2010.
- ↑ "Ranjan Ghosh". IMDb. Retrieved 2010-02-06. Italic or bold markup not allowed in:
|publisher=
(help) - ↑ "There's no luck without hard work". dnaindia. Retrieved 2010-05-31. Italic or bold markup not allowed in:
|publisher=
(help) - ↑ "Iti Mrinalini". Facebook. Retrieved 2009-12-11. Italic or bold markup not allowed in:
|publisher=
(help) - ↑ "Aparna Sen's 'The Japanese Wife' to be released on April 9". Outlook India. 24 February 2010. Retrieved 25 February 2010.