ಅಣಿಗೆ ಕಲಸಿದ ಕಾಂಕ್ರೀಟನ್ನು ಕಟ್ಟಡದ ನಾನಾ ಭಾಗಗಳಿಗೆ ಉಪಯೋಗಿಸುವಾಗ ಅದು ಪ್ರಥಮ ಸ್ಥಿರತೆಯನ್ನು ಪಡೆಯುವವರೆಗೂ ಕಾಂಕ್ರೀಟ್‍ನ ತಳಕ್ಕೆ ಮತ್ತು ಸುತ್ತಲೂ ಕೊಡುವ ಆಧಾರಕ್ಕೆ ಈ ಹೆಸರಿದೆ. ಸಾಮಾನ್ಯವಾಗಿ ಅಣಿಗೆಗಳನ್ನು (ಫಾರಂ ವರ್ಕ್) ಸುಲಭ ಬೆಲೆಯ ಮರದ ಹಲಗೆಗಳಿಂದ ತಯಾರಿಸುತ್ತಾರೆ. ಮರದ ಹಲಗೆಗಳು ಪೂರ್ತಾ ಹಸಿಯಾಗಿರಬಾರದು ಅಥವಾ ಒಣಗಿರಬಾರದು. ಇಂಥ ಹಲಗೆಗಳನ್ನು ತೆಗೆದುಕೊಂಡು ಕಟ್ಟುವ ಕಟ್ಟಡದ ರೂಪವನ್ನು ಅನುಸರಿಸಿ ಅಣಿಗೆಗಳನ್ನು ತಯಾರಿಸುತ್ತಾರೆ. ಹಲಗೆಯ ದಪ್ಪ ಹಸಿ ಕಾಂಕ್ರೀಟ್‍ನ ಒತ್ತಡವನ್ನು ತಡೆಯುವಂತಿರಬೇಕು. ಸಾಮಾನ್ಯವಾಗಿ ಇದರ ದಪ್ಪ 1"-11/2" ವರೆಗೂ ಇರುತ್ತದೆ. ಅಣಿಗೆಯ ಒಳಭಾಗವನ್ನು ನುಣುಪಾಗಿಸಲು, ಒಳಗಡೆ ಸುತ್ತಲೂ ತಗಡಿನ ಪಟ್ಟಿಯನ್ನು ಹೊಡೆದಿರುತ್ತಾರೆ. ಮರದ ಅಣಿಗೆಗಳು ನಾಲ್ಕು ಸಾರಿ ಉಪಯೋಗಕ್ಕೆ ಬರುತ್ತವೆ.

Model of centring for a ribbed dome structure at Albrechtsburg.

ಆಧುನೀಕರಣಸಂಪಾದಿಸಿ

ಈಚೆಗೆ ಅಣಿಗೆಗಳನ್ನು ಕಬ್ಬಿಣದ ತಗಡಿನಿಂದ ತಯಾರಿಸುತ್ತಾರೆ. ಇಂಥ ಅಣಿಗೆಗಳಿಂದ ಕರಾರುವಾಕ್ಕಾದ ತೂಕ, ಗಾತ್ರದ ಕಾಂಕ್ರೀಟ್ ಭಾಗಗಳನ್ನು ಪಡೆಯಬಹುದು. ಅದೂ ಅಲ್ಲದೆ ಇವುಗಳನ್ನು ಬಹಳ ಸಾರಿ ಉಪಯೋಗಿಸಬಹುದು. ಅಣಿಗೆಗಳನ್ನು ತಳಪಾಯ, ತೊಲೆ, ಗೋಡೆಗಳು, ಕಂಬಿಗಳು, ಮೇಲ್ಛಾವಣಿಗಳು ಮತ್ತು ಅಂತಸ್ಥಿನ ಕಟ್ಟಡಗಳಲ್ಲಿ ಕಾಂಕ್ರೀಟನ್ನು ಹಾಕುವಾಗ ಉಪಯೋಗಿಸುತ್ತಾರೆ. ಕಾಂಕ್ರೀಟ್ ಪೂರ್ಣ ಸ್ಥಿರತೆಯನ್ನು 21 ದಿನಗಳ ಕಾಲಾವಧಿಯ ಅನಂತರ ಪಡೆದಾಗ ಅಣಿಗೆಗಳನ್ನು ತೆಗೆದು ಬೇರೆ ಕಡೆಗಳಲ್ಲಿ ಉಪಯೋಗಿಸುತ್ತಾರೆ.

ಛಾಯಾಂಕಣಸಂಪಾದಿಸಿ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಣಿಗೆ&oldid=825844" ಇಂದ ಪಡೆಯಲ್ಪಟ್ಟಿದೆ