ಅಂತರ್ಜೀವಿಗಳು ಸೂಕ್ಷ್ಮಜೀವಿಗಳ ಒಂದು ಎಂಡೋಸಿಂಬಯಾಟಿಕ್ ಗುಂಪಾಗಿದೆ. ಇದು ಯಾವುದೇ ಸೂಕ್ಷ್ಮಜೀವಿಯ ಅಥವಾ ಸಸ್ಯ ಬೆಳವಣಿಗೆಯ ಮಾಧ್ಯಮದಿಂದ ಪ್ರತ್ಯೇಕವಾಗಿ ಪ್ರತ್ಯೇಕಿಸಬಹುದಾದ ಸಸ್ಯಗಳು ಮತ್ತು ಸೂಕ್ಷ್ಮಜೀವಿಗಳಲ್ಲಿ ವಸಾಹತುವನ್ನಾಗಿ ಮಾಡುತ್ತದೆ. ಅಂತರ್ಜೀವಿಗಳು ಜೀವಿಗಳಲ್ಲಿ ವಾಸಿಸುವ ಜೀವಿಗಳಿಗೆ ಈ ಹೆಸರಿದೆ (ಎಂಡೋಫೈಟ್ಸ್) ಅಂತರ್ಜೀವಿಗಳು ಸಾಮಾನ್ಯವಾಗಿ ಬೇರೆ ಜೀವಿಗಳಲ್ಲಿ ವಾಸವಾಗಿದ್ದರೂ ಪರಾವಲಂಬಿಗಳಾಗಿರುವುದಿಲ್ಲ. ಕೆಲವೊಮ್ಮೆ ಸಹಜೀವನವನ್ನೂ ತೋರ್ಪಡಿಸಬಹುದು.[][][][][]ಅಂತರ್ಜೀವಿಗಳಲ್ಲಿ ಕೆಲವು, ಅಪ್ಪು ಗಿಡಗಳಂತೆ ಆಶ್ರಯದಾತನಿಗೆ ತೊಂದರೆಯನ್ನೀಯದೆ ಸ್ವತಂತ್ರವಾಗಿ ಜೀವಿಸಿದರೆ ಮತ್ತೆ ಕೆಲವು ಸಸ್ಯದ ಬೆಳೆವಣಿಗೆಯನ್ನು ಕುಂಠಿತಗೊಳಿಸುತ್ತವೆ.

ಟ್ರಾನ್ಸ್ಮಿಷನ್ ಎಲೆಕ್ಟ್ರಾನ್ ಸೂಕ್ಷ್ಮದರ್ಶಕ ಚಿತ್ರ.

ಇತಿಹಾಸ

ಬದಲಾಯಿಸಿ

ಅಂತರ್ಜೀವಿ ಅಥವಾ ಎಂಡೋಫೈಟ್ಗಳನ್ನು ಮೊದಲ ಬಾರಿಗೆ ಜರ್ಮನ್ ಸಸ್ಯಶಾಸ್ತ್ರಜ್ಞ ಜೋಹಾನ್ ಹೆನ್ರಿಕ್ ಫ್ರೆಡ್ರಿಕ್ ಲಿಂಕ್ ೧೮೦೯ ರಲ್ಲಿ ವಿವರಿಸಿದರು. ಅವರು ಅಂತರ್ಜೀವಿಗಳನ್ನು ಸಸ್ಯ ಪರಾವಲಂಬಿ ಶಿಲೀಂಧ್ರಗಳೆಂದು ಭಾವಿಸಿದ್ದರು ನಂತರ ಫ್ರೆಂಚ್ ವಿಜ್ಞಾನಿ ಬೆಚಾಂಪ್ "ಸೂಕ್ಷ್ಮಜೀವಿ" ಎಂದು ಅನ್ವೇಷಿಸಿದರು. ನಿಮ್ನವರ್ಗದ ಸಸ್ಯಗಳಾದ ಆಲ್ಗೆಗಳಲ್ಲಿ ಅದರಲ್ಲಿಯೂ ಅನೆಬೆನ, ರಿವ್ಯುಲೇರಿಯಾ, ಸೈಟೋನಿಮಾ, ನಾಸ್ಟಾಕ್, ಪ್ರೋಟೊಕಾಕಸ್ ಇತ್ಯಾದಿಗಳು ಅಧಿಕವಾಗಿ ಉಚ್ಚವರ್ಗದ ಸಸ್ಯವರ್ಗದಲ್ಲಿ ಜೀವಿಸುವುದನ್ನು ಕಾಣಬಹುದು. ಅಂತರ್ಜೀವಿಗಳನ್ನು ಬುಷ್ಟು ಜಾತಿಗೆ (ಫಂಗೈ) ಸೇರಿದ ಶಿಲಾ ವಲ್ಕಗಳಲ್ಲಿಯೂ ಸೈಕಾಸ್ ಮತ್ತಿತರ ಅನಾವೃತ ಬೀಜಸಸ್ಯದ ಬೇರುಗಳಲ್ಲೂ ಕಾಣಬಹುದು. ಆವೃತಬೀಜಸಸ್ಯಗಳಾದ ಲೆಗ್ಯೂಮಿನೇಸಿ ಕುಟುಂಬದ ಸಸ್ಯಗಳಲ್ಲೂ ಕೆಲವು ಉಪಯುಕ್ತ ಬ್ಯಾಕ್ಟೀರಿಯಾಗಳು ಅಂತರ್ಜೀವಿಗಳಾಗಿ ಜೀವಿಸುತ್ತವೆ. ಕೆಲವೇ ಬಗೆಯ ಸಸ್ಯಗಳಲ್ಲಿ ಅಂತರ್ಜೀವಿಗಳಿರುವ ಔಚಿತ್ಯದ ಬಗ್ಗೆ ಸಂಶೋಧನೆಗಳು ನಡೆಯಬೇಕಾಗಿದೆ.[][]

ಬೆಳವಣಿಗೆ

ಬದಲಾಯಿಸಿ

ಎಂಡೋಫೈಟ್ಗಳು ಲಂಬವಾಗಿ ಅಥವಾ ಅಡ್ಡಲಾಗಿ ಹರಡಬಹುದು. ಲಂಬವಾಗಿ ಹರಡುವ ಶಿಲೀಂಧ್ರಗಳ ಎಂಡೋಫೈಟ್ಗಳನ್ನು ವಿಶಿಷ್ಟವಾಗಿ ಕ್ಲೋನಲ್ ಎಂದು ಪರಿಗಣಿಸಲಾಗುತ್ತದೆ. ಶಿಲೀಂಧ್ರ ಹೈಫೆಯು ಭ್ರೂಣವನ್ನು ಆತಿಥೇಯ ಬೀಜಗಳೊಳಗೆ ಭೇದಿಸುವುದರಿಂದ, ಶಿಲೀಂಧ್ರಗಳ ಪುನರುತ್ಪಾದನೆಯು ಅಲೈಂಗಿಕ ಕೋನಿಡಿಯಾ ಅಥವಾ ಲೈಂಗಿಕ ಬೀಜಕಗಳ ಮೂಲಕ ಸಮತಲ ಪ್ರಸರಣಕ್ಕೆ ಕಾರಣವಾಗುತ್ತದೆ. ಅಲ್ಲಿ ಎಂಡೋಫೈಟ್ಗಳು ಸಮುದಾಯದ ಸಸ್ಯಗಳ ನಡುವೆ ಹರಡಬಹುದು

ಉಲ್ಲೇಖಗಳು

ಬದಲಾಯಿಸಿ
  1. Puri, Akshit; Padda, Kiran Preet; Chanway, Chris P (October 2015). "Can a diazotrophic endophyte originally isolated from lodgepole pine colonize an agricultural crop (corn) and promote its growth?". Soil Biology and Biochemistry. 89: 210–216. doi:10.1016/j.soilbio.2015.07.012. {{cite journal}}: External link in |last1= and |last3= (help)
  2. Puri, Akshit; Padda, Kiran Preet; Chanway, Chris P (August 25, 2015). "Evidence of nitrogen fixation and growth promotion in canola (Brassica napus L.) by an endophytic diazotroph Paenibacillus polymyxa P2b-2R". Biology and Fertility of Soils. doi:10.1007/s00374-015-1051-y. {{cite journal}}: External link in |last1= and |last3= (help)
  3. Clay K, Schardl C (October 2002). "Evolutionary origins and ecological consequences of endophyte symbiosis with grasses". The American Naturalist. 160 (Suppl 4): S99–S127. doi:10.1086/342161. PMID 18707456.
  4. Carroll, G. C. (1986). "The biology of endophytism in plants with particular reference to woody perennials". In Fokkema, N. J.; Van den Heuvel, J. (eds.). Microbiology of the phyllosphere. Cambridge: Cambridge University Press. pp. 205–22. ISBN 978-0-521-32344-4.
  5. Stone, J.; Bacon, C; White, J. (1999). Bacon, C and White, J. (ed.). An overview of endophytic microbes: endophytism defined. Marcell-Dekker. pp. 29–33. ISBN 0-8247-8831-1. {{cite book}}: |work= ignored (help)CS1 maint: multiple names: authors list (link)
  6. Clay, Keith; Schardl, Christopher (2002-10-01). "Evolutionary Origins and Ecological Consequences of Endophyte Symbiosis with Grasses". The American Naturalist. 160 (S4): S99–S127. doi:10.1086/342161. PMID 18707456.
  7. Hardoim, Pablo R.; Overbeek, Leonard S. van; Berg, Gabriele; Pirttilä, Anna Maria; Compant, Stéphane; Campisano, Andrea; Döring, Matthias; Sessitsch, Angela (2015-09-01). "The Hidden World within Plants: Ecological and Evolutionary Considerations for Defining Functioning of Microbial Endophytes". Microbiology and Molecular Biology Reviews (in ಇಂಗ್ಲಿಷ್). 79 (3): 293–320. doi:10.1128/MMBR.00050-14. ISSN 1092-2172. PMC 4488371. PMID 26136581.


ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: